• Follow NativePlanet
Share
Menu
» »ಈ ಗ್ರಾಮದ ಪ್ರವೇಶ ಮಾಡಿದರೆ ನಿಮಗೆ ಮೊದಲು ಸ್ವಾಗತಿಸುವುದೇ ಹಾವುಗಳು

ಈ ಗ್ರಾಮದ ಪ್ರವೇಶ ಮಾಡಿದರೆ ನಿಮಗೆ ಮೊದಲು ಸ್ವಾಗತಿಸುವುದೇ ಹಾವುಗಳು

Written By:

ಈ ಭೂಮಿಯಲ್ಲಿ ಅತಿ ವಿಷ ಪೂರಿತವಾದ ಜಂತುಗಳಲ್ಲಿ ಹಾವುಗಳು ಅದ್ವಿತೀಯ ಸ್ಥಾನದಲ್ಲಿವೆ. ಮಾನವರಿಗೆ ಹಾವುಗಳ ಹೆಸರು ಹೇಳಿದರೆ ಸಾಕು ಹೆದರುತ್ತಾರೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು. ಹಾವುಗಳ ಕಚ್ಚುವಿಕೆಯು ಪ್ರತಿ ವರ್ಷವೂ ಸುಮಾರು 94,000 ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಂತಹ ವಿಷಪೂರಿತವಾದ ಹಾವುಗಳು ಬೀದಿಗಳಿಗೆ ಬಂದರೆ ಹೆದರಿ ಓಡಿ ಹೋಗುತ್ತೇವೆ. ಕೆಲವರು ಅದನ್ನು ಕೊಲ್ಲುತ್ತಾರೆ.

ಆದರೆ ಗ್ರಾಮದಲ್ಲಿ ಕೆಲವು ಹಾವುಗಳು ಇವೆ ಎಂದರೆ ಆ ದಾರಿಯನ್ನೇ ಬಿಟ್ಟು ಬೇರೆ ದಾರಿಗೆ ಹೋಗುತ್ತಾರೆ. ಆದರೆ ಭಾರತದ ಒಂದು ಆಶ್ಚರ್ಯಕರವಾದ ಗ್ರಾಮದಲ್ಲಿ ತಮ್ಮ ಪ್ರಾಣಗಳು ಹೋದರು ಕೂಡ ಆ ಗ್ರಾಮವನ್ನು ಮಾತ್ರ ಬಿಡುವುದಿಲ್ಲ ಎಂದು ದೃಢವಾಗಿ ಕುಳಿತ್ತಿದ್ದಾರೆ. ಆ ಗ್ರಾಮ ಎಲ್ಲಿದೆ? ಆ ಹಾವುಗಳು ಮನುಷ್ಯರಿಗೆ ಸಾಯಿಸಲು ಕಾರಣವಾದರು ಏನು? ಎಂಬ ಹಲವಾರು ಪ್ರಶ್ನೆಗಳಿಗೆ ಪ್ರಸ್ತುತ ಲೇಖನದ ಮೂಲಕ ಉತ್ತರ ತಿಳಿಯಿರಿ.

ಎಲ್ಲಿದೆ?

ಎಲ್ಲಿದೆ?

ಛತ್ತೀಸ್ ಘಡ್ ರಾಜ್ಯದ ತಪ್‍ಕರ ಎಂಬ ಸಣ್ಣದಾದ ಒಂದು ಗ್ರಾಮದಲ್ಲಿ. ಅತ್ಯಂತ ಭಯಂಕರವಾದ ಹಾವುಗಳ ವಾಸಸ್ಥಾನ ಈ ಗ್ರಾಮವಾಗಿದೆ.

PC:YOUTUBE

ಹಾವುಗಳು

ಹಾವುಗಳು

ಈ ಛತ್ತೀಸ್ ಘಡ್ ರಾಜ್ಯದ ತಪ್‍ಕರ ಎಂಬ ಸಣ್ಣದಾದ ಒಂದು ಗ್ರಾಮದಲ್ಲಿ ನೀವು ಮೊದಲು ಕಾಲಿಡುತ್ತಿದ್ದಂತೆ ಮೊದಲು ಸ್ವಾಗತಿಸುವುದು ಹಾವುಗಳು. ಅಂದರೆ ನೀವೇ ಊಹಿಸಿ ಇನ್ನಷ್ಟು ಹಾವುಗಳು ಆ ಗ್ರಾಮದಲ್ಲಿರಬಹುದು ಎಂದು.


PC:YOUTUBE

ವಾತಾವರಣ

ವಾತಾವರಣ

ಈ ಗ್ರಾಮದ ಸುತ್ತ ಮುತ್ತ ಅತ್ಯಂತ ರಮಣೀಯವಾದ ಹಾಗೂ ಸೌಂದರ್ಯದಿಂದ ಕೂಡಿದ ಗಿರಿ ಪರ್ವತಗಳು ಇವೆ. ಹಾವು ಕಾಣಿಸಿತು ಎಂದು ಕೂಗುವ ಕೂಗಿನಿಂದ ಬೆಳಗಿನ ಜಾವದಂದು ಸ್ಥಳೀಯರು ಏಳುತ್ತಾರೆ.


PC:YOUTUBE

ಹಾವು ಕಡಿತ

ಹಾವು ಕಡಿತ

ಇನ್ನೂ ಕೆಲವರು ನಿದ್ರೆಯ ಸಮಯದಲ್ಲಿಯೇ ಹಾವು ಕಡಿತದಿಂದ ತಮ್ಮ ಪ್ರಾಣವನ್ನು ಬಿಡುತ್ತಾರೆ.


PC:YOUTUBE

ಮಳೆಗಾಲ

ಮಳೆಗಾಲ

ಮಳೆಗಾಲದ ಸಮಯದಲ್ಲಿ ಹಾವಿನ ಹಾವಳಿ ಇನ್ನಷ್ಟು ಹೆಚ್ಚಾಗುತ್ತದೆ. ಹಾಗೆಯೇ ಸಾಯುವವರ ಸಂಖ್ಯೆಯು ಕೂಡ ಅಧಿಕವಾಗುತ್ತಾ ಹೋಗುತ್ತದೆ.

PC:YOUTUBE

ಹಾವುಗಳು

ಹಾವುಗಳು

ಅಲ್ಲಿನ ಸ್ಥಳೀಯ ಪ್ರಜೆಗಳು ಕೂಡ ಹಾವುಗಳನ್ನು ಅತ್ಯಂತ ದಾರುಣವಾಗಿ ಕೊಲ್ಲುತ್ತಾರೆ.

PC:YOUTUBE

ಛತ್ತೀಸ್ ಘಡ್ ಸರ್ಕಾರ

ಛತ್ತೀಸ್ ಘಡ್ ಸರ್ಕಾರ

ಈ ಗ್ರಾಮದಲ್ಲಿನ ಹಾವುಗಳ ಹಾವಳಿಯನ್ನು ಗುರುತಿಸಿದ ಛತ್ತಿಸ್ ಘಡ್ ಸರ್ಕಾರವು ಸ್ವಚ್ಛಂಧ ಪರಿಸರ ಹಾಗೂ ಹಾವುಗಳ ಬಗ್ಗೆ ಅವಗಹನೆಯನ್ನು ಕಲ್ಪಿಸುತ್ತಿದ್ದಾರೆ.


PC:YOUTUBE

ಚಿಕಿತ್ಸೆ

ಚಿಕಿತ್ಸೆ

ಈ ಗ್ರಾಮದಲ್ಲಿ ಹಾವುಕಡಿತಕ್ಕೆ ಒಳಗಾದವರು ಗಿಡ ಮೂಲಿಕೆಗಳ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಇದರಿಂದಾಗಿ ಸುಮಾರು 100 ರಿಂದ 200 ಜನರು ಪ್ರತಿ ವರ್ಷವು ಮರಣ ಹೊಂದುತ್ತಿದ್ದರು.


PC:YOUTUBE

ಗಿಡ ಮೂಲಿಕೆ

ಗಿಡ ಮೂಲಿಕೆ

ಆದರೆ 500 ರಿಂದ 600 ಜನರು ಗಿಡ ಮೂಲಿಕೆಯಿಂದ ಗುಣಪಡಿಸಿಕೊಳ್ಳುತ್ತಿದ್ದರು.


PC:YOUTUBE

ಸರ್ಕಾರ

ಸರ್ಕಾರ

ಈ ಪರಿಸ್ಥತಿಯನ್ನು ಗಮನಿಸಿದ ಛತ್ತೀಸ್ ಘಡ್ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಿ ಎಲ್ಲಾ ರೀತಿಯ ಕಾಯಿಲೆಗಳಿಗೂ ಔಷಧಗಳನ್ನು ಪೂರೈಸುತ್ತಿದೆ.

PC:YOUTUBE

ಮಳೆಗಾಲ

ಮಳೆಗಾಲ

ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ಮನೆಗಳ ಒಳಗೆ ಕೂಡ ವಿಷಪೂರಿತ ಹಾವುಗಳು ಪ್ರವೇಶ ಮಾಡುತ್ತವೆ.


PC:YOUTUBE

ಮಂಚ

ಮಂಚ

ಮನೆಯೊಳಗೆ ನುಗ್ಗುತ್ತಿದ್ದ ಹಾವುಗಳು ನೆಲದ ಮೇಲೆ ಮಲಗಿರುವವರನ್ನು ಕಚ್ಚುತ್ತಿತ್ತು. ಹಾಗಾಗಿ ಸರ್ಕಾರ ಹಾಗೂ ಕೆಲವು ಸ್ವಚ್ಛಂಧ ಸಂಸ್ಥೆಗಳು ಮಂಚದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.


PC:YOUTUBE

ಶಿಕ್ಷಣ ತರಗತಿ

ಶಿಕ್ಷಣ ತರಗತಿ

ಮನೆಗಳಿಗೆ ಹಾವುಗಳು ಬಂದಾಗ ಹೇಗೆ ಮುಂಜಾಗ್ರತೆ ವಹಿಸಬೇಕು. ಯಾರಿಗೆ ಮೊದಲು ವಿಷಯವನ್ನು ತಿಳಿಸಬೇಕು ಎಂಬ ಹಲವಾರು ಮಾಹಿತಿಗಳ ಬಗ್ಗೆ ಕೆಲವು ಸಂಸ್ಥೆಗಳು ಗ್ರಾಮಸ್ಥರಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ.


PC:YOUTUBE

2015 ರಲ್ಲಿ

2015 ರಲ್ಲಿ

2015 ರಲ್ಲಿ ಸರ್ಕಾರದ ಲೆಕ್ಕದ ಪ್ರಕಾರ 40 ಮಂದಿ ಜನರು ಹಾವುಗಳಿಂದ ಮೃತಪಟ್ಟರೆ, ಇನ್ನೂ ಕೆಲವು 120 ಮಂದಿ ಜನರು ಹಾವುಗಳ ಕಡಿತಕ್ಕೆ ಒಳಗಾಗಿದ್ದಾರೆ ಎಂದು ಪ್ರಕಟಿಸಲಾಗಿದೆ.

PC:YOUTUBE

ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ಈ ಗ್ರಾಮದ ಸುತ್ತ ಮುತ್ತ ಹಲವಾರು ಪ್ರವಾಸಿತಾಣಗಳಿವೆ. ಅವುಗಳೆಂದರೆ ಜಷ್‍ಪುರ್, ಸಿಂದೇಗ, ಗುಮ್ಲಾ, ರೌರಕೇಲಾ, ಅಂಬೀಕಾ ಪುರ್ ಇನ್ನೂ ಹಲವಾರು.

PC:YOUTUBE

ವಿಮಾನ ನಿಲ್ದಾಣ

ವಿಮಾನ ನಿಲ್ದಾಣ

ನೀವು ಹಾವು ಪ್ರೇಮಿಗಳಾಗಿದ್ದರೆ ಈ ಗ್ರಾಮಕ್ಕೆ ತಲುಪಲು ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ರಾಂಚಿ ವಿಮಾನ ನಿಲ್ದಾಣ ಇಲ್ಲಿಂದ ತಪಕಾರ್ ಹಳ್ಳಿಗೆ ಸುಮಾರು 187 ಕಿ,ಮೀ ದೂರದಲ್ಲಿದೆ.


PC:YOUTUBE

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ