Search
  • Follow NativePlanet
Share
» »ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು

ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು

By Divya Pandit

ದೆಹಲಿ ನಮ್ಮ ರಾಷ್ಟ್ರದ ರಾಜಧಾನಿಯಷ್ಟೇ ಅಲ್ಲ. ರಾಜಕೀಯ, ಐತಿಹಾಸಿಕ, ಪ್ರವಾಸ, ಉದ್ಯೋಗ ಹಾಗೂ ವ್ಯಾಪಾರದ ವಿಚಾರದಲ್ಲಿ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಅದರಲ್ಲೂ ದೇಶದ ಇತಿಹಾಸದ ಗತವೈಭವವನ್ನು ನೆನಪಿಸುವಂತಹ ಕಟ್ಟಡಗಳು ಅಜರಾಮರ. ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಈ ಸ್ಥಳಗಳು ಚಲನ ಚಿತ್ರಕಾರರಿಗೂ ಒಂದು ವರದಾನ. ಅನೇಕ ಚಿತ್ರಗಳಲ್ಲಿ ತಮ್ಮ ಚಲನಚಿತ್ರದ ಹಿಂದಿನ ದೃಶ್ಯಗಳಿಗಾಗಿ ಬಳಸಿಕೊಂಡಿದ್ದಾರೆ. ಹಾಗಾಗಿ ದೇಶದ ಮೂಲೆ ಮೂಲೆಯಲ್ಲಿರುವ ಜನರಿಗೂ ಇದರ ಕೊಂಚ ಪರಿಚಯವಿದೆ. ಮತ್ತೇಕೆ ತಡ? ಬನ್ನಿ ಆ ಸ್ಥಳಗಳು ಯಾವುದೆಂದು ತಿಳಿದುಕೊಂಡು, ನಾವೂ ಒಮ್ಮೆ ಅಲ್ಲಿಗೆ ಹೋಗಿ ಬರೋಣ...

ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು

ಕುತುಬ್ ಮಿನಾರ್
ಇದು ದೆಹಲಿಯ ಪ್ರಮುಖ ಆಕರ್ಷಕ ಸ್ಥಳದಲ್ಲೊಂದು. ಗುಲಾಮ ಸಂತತಿಯ ಮೊದಲ ಸುಲ್ತಾನ ನಿರ್ಮಾಣಕ್ಕೆ ಮುಂದಾದ. ನಂತರ ಬಂದ ಸುಲ್ತಾನರು ಬೆಳೆಸಿಕೊಂಡು ಬಂದರು. ವಿಶ್ವ ಪರಂಪರೆಯ ಈ ತಾಣದಲ್ಲಿ ಹಿಂದಿಯ ಫನಾ, ಜನ್ನತ್2, ಬ್ಲ್ಯಾಕ್ ಅಂಡ್ ವೈಟ್ ಚಿತ್ರಗಳಲ್ಲಿ ಮೂಡಿಬಂದಿದೆ.

ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು

ಜಾಮಾ ಮಸೀದಿ ಕಾಂಪ್ಲೆಕ್ಸ್
ದೆಹಲಿಯಲ್ಲಿರುವ ಪುರಾತನ ಮಸೀದಿ ಎಂದು ಪ್ರಸಿದ್ಧಿ ಪಡೆದ ಇದು ಮೊಘಲರ ಅಧೀನದಲ್ಲಿತ್ತು ಎಂದು ಹೇಳಲಾಗುತ್ತದೆ. ಇದರ ಮುಂದಿರುವ ಮೆಟ್ಟಿಲುಗಳ ಸಾಲು ಪ್ರವಾಸಿಗರ ಹಾಗೂ ಚಲನ ಚಿತ್ರಕಾರರನ್ನು ಆಕರ್ಷಿಸಿದ್ದುದರಿಂದ ಕುರ್ಬಾನ್, ಸುಲ್ತಾನ್ ಎನ್ನುವ ಚಿತ್ರಗಳಲ್ಲಿ ಬಳಸಿಕೊಳ್ಳಲಾಗಿದೆ.

ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು

ಹುಮಾಯುನ್ ಸಮಾದಿ
ವಿನ್ಯಾಸದಲ್ಲಿ ತಾಜಮಹಲ್‍ಅನ್ನು ಹೋಲುವ ಈ ಸಮಾಧಿ ಮೊಘಲ್ ಸಾಮ್ರಾಟರ ಕಾಲದದ್ದು. ಇಲ್ಲಿ ಸಾಮ್ರಾಟ ಹುಮಾಯೂನ್ ಸೇರಿದಂತೆ ಹಲವಾರು ಮೊಘಲ್ ಪ್ರತಿಷ್ಠಿತ ವ್ಯಕ್ತಿಗಳ ಸಮಾಧಿಯನ್ನು ಮಾಡಲಾಗಿದೆ. ಇಲ್ಲಿ ಮೇರೆ ಬ್ರದರ್ ಕಿ ದುಲ್‍ಹನ್, ಕುರ್ಬಾನ್, ಬಜರಂಗಿ ಭಾಯಿಜಾನ್, ಫಿತೂರ್ ಸೇರಿದಂತೆ ಅನೇಕ ಚಿತ್ರಗಳ ಚಿತ್ರೀಕರಣ ನಡೆದಿದೆ.

ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು

PC: Wasted Time R

ಚಾಂಧನಿ ಚೌಕ್
ದೆಹಲಿಯ ಪ್ರವಾಸದಲ್ಲಿ ನೋಡಲೇ ಬೇಕಾದ ಒಂದು ವಿಶೇಷ ಸ್ಥಳ ಚಾಂಧನಿ ಚೌಕ್. ದೆಹಲಿಯ ಅತ್ಯಂತ ಹಳೆಯ ಮಾರ್ಕೇಟ್ ಗಲ್ಲಿ ಇದು. ಇಲ್ಲಿ ವಸ್ತುಗಳನ್ನು ಖರೀದಿಸುವುದೇ ಒಂದು ಖುಷಿ. ಹಿಂದಿ ಚಿತ್ರಗಳಾದ ಫಕ್ರೀ, ಬ್ಯಾಂಡ್ ಬಾಜಾ, ಡೆಲ್ಲಿ ಬೆಲ್ಲಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಬಳಸಿಕೊಳ್ಳಲಾಗಿದೆ.

ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು

ಅಗ್ರಸೇನ್ ಕಿ ಬೌಲಿ
ಬಹಳ ಪುರಾತನ ಹಾಗೂ ಪ್ರಸಿದ್ಧಿ ಪಡೆದ ಈ ಸ್ಥಳದಲ್ಲಿ 108 ಮೆಟ್ಟಿಲುಗಳಿವೆ. ಒಂದೊಂದು ಮೆಟ್ಟಿಲೂ ಸಹ 600 ಮೀ. ಉದ್ದ ಹಾಗೂ 15 ಮೀ. ಅಗಲವನ್ನು ಹೊಂದಿದೆ. ಸುಂದರ ವಿನ್ಯಾಸದಲ್ಲಿ ನಿರ್ಮಿಸಲಾದ ಈ ಬೌಲಿ ಪ್ರಪಂಚದೆಲ್ಲೆಡೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದನ್ನು ಪಿಕೆ, ಜೂಮ್ ಬರಾಬರ್ ಜೂಮ್ ಚಿತ್ರಗಳಲ್ಲಿ ಬಳಸಿಕೊಳ್ಳಲಾಗಿದೆ.

ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು

ಹಜರತ್ ನಿಜಾಮುದ್ದೀನ್ ದರ್ಗಾ
ಸೂಫಿ ಸಂತ ಹಜರತ್ ನಿಜಾಮುದ್ದೀನ ಪ್ರಮುಖ ದರ್ಗಾವಾದ ಇದು ಬಹಳ ಪುರಾತನ ಕಾಲದ್ದು. ಇಲ್ಲಿ ರಾಕ್ ಸ್ಟಾರ್, ಬಜರಂಗಿ ಭಾಯಿಜಾನ್, ಮುಂತಾದ ಚಿತ್ರಗಳನ್ನು ಮಾಡಿದ್ದಾರೆ.

ಇಂಡಿಯಾ ಗೇಟ್
ದೆಹಲಿಯ ಮುಖ್ಯ ಆಕರ್ಷಣೆ ಇಂಡಿಯಾ ಗೇಟ್. ಇದು ಭಾರತ ಸೇನೆಯ ಅಜ್ಞಾತ ಯೋಧನ ಸಮಾಧಿಯ ತಾಣ. ಇದನ್ನು ಅಮರ್ ಜ್ಯೋತಿ ಎಂದು ಕರೆಯುತ್ತಾರೆ. ಇಲ್ಲಿ ರಂಗದೇ ಬಸಂತಿ, ಚಕ್ ದೇ ಇಂಡಿಯಾ ಚಿತ್ರದ ಚಿತ್ರೀಕರಣ ಮಾಡಲಾಗಿದೆ.

ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು

PC: Ronakshah1990

ರೆಡ್ ಫೋರ್ಟ್
ಮೊಘಲರ ಅರಸು ಸಹಜಾನ್ ಕಟ್ಟಿಸಿರುವ ಈ ಕಟ್ಟಡ ಇಂದು ಅನೇಕ ಪ್ರಾವಾಸಿಗರನ್ನು ಆಕರ್ಷಸುತ್ತಿದೆ. ಇಲ್ಲಿ ಡೆಲ್ಲಿ6, ಬಜರಂಗಿ ಬಾಯಿಜಾನ್ ಚಿತ್ರದ ಚಿತ್ರೀಕರಣ ನಡೆದಿದೆ.

Read more about: delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X