Search
  • Follow NativePlanet
Share
» »ಹೈದರಾಬಾದ್ ಕರ್ನಾಟಕದಲ್ಲೊಂದು ಸುತ್ತು

ಹೈದರಾಬಾದ್ ಕರ್ನಾಟಕದಲ್ಲೊಂದು ಸುತ್ತು

By Vijay

ಪರಿಚ್ಛೇದ 371(J) ಹಿಂದೆ ಸಾಕಷ್ಟು ಬಿಸಿ ಬಿಸಿ ಚರ್ಚೆಯಲ್ಲಿತ್ತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದು ಯಾವುದಕ್ಕೆ ಸಂಬಂಧಿಸಿದ್ದು ಎಂಬುದು ಬಹುಶಃ ಬಹುತೇಕರಿಗೆ ಇನ್ನೂ ಗೊತ್ತಿರಲಿಕ್ಕಿಲ್ಲ. ಈ ನಿರ್ದಿಷ್ಟ ಪರಿಚ್ಛೇದವು ಹೈದರಾಬಾದ್-ಕರ್ನಾಟಕದ ಭಾಗಕ್ಕೆ ಅಥವಾ ಹಿಂದುಳಿದೆ ಜಿಲ್ಲೆಗಳಿಗೆ ವಿಶೇಷವಾದ ಸ್ಥಾನಮಾನಗಳನ್ನು ಕಲ್ಪಿಸುತ್ತದೆ.

ಉಚಿತ ಕೂಪನ್ : ಥಾಮಸ್ ಕುಕ್ ವತಿಯಿಂದ ಹಾಲಿಡೆ ಬುಕ್ಕಿಂಗ್ ಮೇಲೆ ರೂ. 3000 ಕಡಿತ

ಹಿಂದೆ ಹೈದರಾಬಾದ್ ಪ್ರದೇಶದಲ್ಲಿ ನಿಜಾಮರಾಳುತ್ತಿದ್ದ ಕಾಲದಲ್ಲಿ ಕನ್ನಡ ಮಾತನಾಡುವ, ಪ್ರಸ್ತುತ ಕರ್ನಾಟಕದ ಕೆಲ ಭಾಗವು ಅವರ ಆಡಳಿತದಲ್ಲಿತ್ತು. ನಂತರ ಅಖಂಡ ಭಾರತ ರೂಪಗೊಂಡಾಗ, ರಾಜ್ಯಗಳ ಪುನರ್ವಿಂಗಡನೆಯಿಂದ ನಿಜಾಮರ ವಶದಲ್ಲಿದ್ದ ಆ ಭಾಗವು ನ್ಯಾಯಯುತವಾಗಿ ಕರ್ನಾಟಕಕ್ಕೆ ಸೇರ್ಪಡೆಗೊಂಡು ಹೈದರಾಬಾದ್ - ಕರ್ನಾಟಕ ಎಂದೆ ಜನಮನ್ನಣೆಗಳಿಸಿತು.

ವಿಶೇಷ ಲೇಖನ : ಗತ ವೈಭವದ ಕಥೆ ಹೇಳುವ ಹಂಪಿ

ಕನ್ನಡ ಚಳುವಳಿಗಾರರಾದ ಡಾ. ಚಿದಾನಂದ ಮೂರ್ತಿಯವರು ಈ ಭಾಗವನ್ನು ಹೈದರಾಬಾದ್-ಕರ್ನಾಟಕ ಎನ್ನುವುದಕ್ಕಿಂತಲೂ ಕಲ್ಯಾಣ ಕರ್ನಾಟಕ ಎಂದು ಕರೆಯುವುದು ಸೂಕ್ತ ಎಂದಿದ್ದಾರೆ. ಹೈ.ಕ ಭಾಗವು ದೇಶದಲ್ಲೆ ಎರಡನೇಯ ಶುಷ್ಕ (ಬಂಜರು) ವಾತಾವರಣ ಹೊಂದಿರುವ ಪ್ರದೇಶವಾಗಿದ್ದು, ಕೊಟ್ಟಿರುವ ವಿಶೇಷ ಸ್ಥಾನಮಾನವು ಇಲ್ಲಿ ಆಗಬೇಕಾಗಿರುವ ಅಭಿವೃದ್ಧಿಯಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತದೆಂದರೂ ತಪ್ಪಾಗಲಾರದು.

ವಿಶೇಷ ಲೇಖನ : ರಾಷ್ಟ್ರೀಯ ಮಹತ್ವ ಪಡೆದ ಕರ್ನಾಟಕದ ಸ್ಮಾರಕಗಳು

ಹೈ.ಕರ್ನಾಟಕದಲ್ಲಿ ಬರುವ ಜಿಲ್ಲೆಗಳೆಂದರೆ ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ಯಾದಗಿರಿ. ಹೌದು, ಈ ಆರು ಜಿಲ್ಲೆಗಳು ಸುಡು ಬಿಸಿಲಿನ ಒಣ ಹವೆಯ ವಾತಾವರಣ ಹೊಂದಿದ್ದು ಕರ್ನಾಟಕದ ಇತರೆ ಜಿಲ್ಲೆಗಳಂತೆ ಅಷ್ಟೊಂದು ಹೆಚ್ಚಾದ ಅಭಿವೃದ್ಧಿ ಹೊಂದಿಲ್ಲ. ನೀರಿನ ಕೊರತೆ ಹಾಗೂ ಹಸಿರು ಸಂಪತ್ತಿನ ಅನುಪಸ್ಥಿತಿಯೂ ಸಹ ಇದಕ್ಕೆ ಒಂದು ಮುಖ್ಯ ಕಾರಣವಾಗಿದೆ.

ವಿಶೇಷ ಲೇಖನ : ಉತ್ತರ ಕರ್ನಾಟಕದಲ್ಲೊಂದು ಅದ್ಭುತ ಪ್ರವಾಸ

ಆದರೆ ಐತಿಹಾಸಿಕವಾಗಿ ಶ್ರೀಮಂತವಾಗಿರುವ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿಗೆ ಹೈ.ಕರ್ನಾಟಕ ಭಾಗವು ತವರಾಗಿರುವುದು ಬಲು ಹೆಮ್ಮೆಯ ವಿಚಾರ. ಕೊಪ್ಪಳದ ಐತಿಹಾಸಿಕ ದೇವಸ್ಥಾನಗಳಾಗಲಿ, ಬೀದರಿನ ಬಹಮನಿ ಸುಲ್ತಾನರ ಭವ್ಯ ಕೋಟೆಗಳಾಗಲಿ ಅಥವಾ ಕರ್ನಾಟಕ ಬಲು ಹೆಮ್ಮೆಯ ಅತ್ಯದ್ಭುತ ಪ್ರವಾಸಿ ಆಕರ್ಷಣೆಯಾದ ಹಂಪಿ ನಗರವಾಗಲಿ ಎಲ್ಲವೂ ಇರುವುದು ಹೈ.ಕರ್ನಾಟಕ ಭಾಗದಲ್ಲೆ.

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈ.ಕರ್ನಾಟಕದ ಪ್ರವಾಸವನ್ನು ಮೊದಲಿಗೆ ಬೀದರಿನಿಂದ ಪ್ರಾರಂಭಿಸೋಣ. ಬೀದರ್ ನಗರಕ್ಕೆ ಕರೆದೊಯ್ಯುವ ದಾರಿ.

ಚಿತ್ರಕೃಪೆ: Amit Chattopadhyay

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈ.ಕರ್ನಾಟಕದ ಒಂದು ಜಿಲ್ಲೆಯಾಗಿರುವ ಬೀದರ್ ಒಂದು ಐತಿಹಾಸಿಕ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿದೆ. ಬಹಮನಿ ಸುಲ್ತಾನರು ಅಮೂಲ್ಯವಾದ ಕೊಡುಗೆಗಳನ್ನು ಕೋಟೆ ಸ್ಮಾರಕಗಳ ರೂಪದಲ್ಲಿ ಈ ಜಿಲ್ಲೆಗೆ ನೀಡಿದ್ದಾರೆಂದು ಹೇಳಬಹುದು. ಬೀದರ್ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳು ಈ ಜಿಲ್ಲೆಯಲ್ಲಿವೆ.

ಚಿತ್ರಕೃಪೆ: Santosh3397

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಪ್ರಸ್ಥ ಭೂಮಿಯ ಒಂದು ಕೊನೆಯಲ್ಲಿ ನಿರ್ಮಾಣಗೊಂಡ ಬೀದರ್ ಕೋಟೆಯು ಸ್ಪಷ್ಟವಾಗಿರದ ಚತುರ್ಭುಜಾಕೃತಿಯಲ್ಲಿದೆ. ಕೋಟೆ ಸಂಕೀರ್ಣವು 1.20 ಕಿ.ಮೀ ಉದ್ದ ಹೊಂದಿದ್ದರೆ ಅಗಲವು ಸುಮಾರು 0.80 ಕಿ.ಮೀ ಗಳಷ್ಟಿದೆ. ಈ ವಿಶಾಲವಾದ ಬೀದರ್ ಕೋಟೆಯಲ್ಲಿ ಕೆಲವು ಮಹತ್ತರ ಅಂಗಗಳನ್ನು ಕಾಣಬಹುದಾಗಿದೆ. ಇಂದು ಇವೆಲ್ಲವೂ ಪ್ರವಾಸಿ ಆಕರ್ಷಣೆಗಳಾಗಿ ಅಂದಿನ ಕಾಲದ ವಾಸ್ತುಶಿಲ್ಪ, ಸಂಸ್ಕೃತಿ ಹಾಗೂ ಧರ್ಮಾಚರಣೆಯ ಕುರಿತು ಸೂಕ್ಷ್ಮವಾಗಿ ವಿವರಿಸುತ್ತವೆ.

ಚಿತ್ರಕೃಪೆ: Vamsi Rimmalapudi

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಬೀದರ್ ಕೋಟೆಯಲ್ಲದೆ ಇನ್ನೂ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಬೀದರ್ ನಲ್ಲಿ ನೋಡಬಹುದಾಗಿದೆ. ಅವುಗಳಲ್ಲಿ ಝರಣಿ ನರಸಿಂಹಸ್ವಾಮಿ ದೇವಸ್ಥಾನ ಹಾಗೂ ಗುರುದ್ವಾರ ಪ್ರಮುಖವಾದವುಗಳು. ನರಸಿಂಹಸ್ವಾಮಿ ದೇವಸ್ಥಾನವು ಒಂದು ಸುರಂಗ ಮಾರ್ಗ ಹೊಂದಿದ್ದು ನೀರಿನಿಂದ ಕೂಡಿದೆ. ಒಂದೆ ಸಮಯದಲ್ಲಿ ಕೆಲವು ನಿರ್ದಿಷ್ಟ ಸಂಖ್ಯೆಯಲ್ಲಿ ಭಕ್ತರು ಸುರಂಗ ಮಾರ್ಗದ ನೀರಿನಲ್ಲೆ ನಡೆಯುತ್ತ ದರುಶನ ಪಡೆದು ಮರಳಬೇಕು. ಇನ್ನುಳಿದಂತೆ ಸಿಖ್ಖರಿಗೆ ಪವಿತ್ರವಾದ ಗುರುದ್ವಾರವೂ (ಗುರುನಾನಕ ಝೀರಾ) ಸಹ ಬೀದರಿನಲ್ಲಿದೆ. ಯಾವ ಧರ್ಮದವರೆ ಆಗಲಿ ಇದಕ್ಕೆ ಭೇಟಿ ನೀಡಬಹುದು. ಒಳ ಪ್ರವೇಶಿಸಿದಾಗಎಲ್ಲರೂ ಕಡ್ಡಾಯವಾಗಿ ತಲೆಯನ್ನು ಬಟ್ಟೆಯಿಂದ ಇಲ್ಲವೆ ವಸ್ತ್ರದಿಂದ ಮುಚ್ಚಿಕೊಂಡಿರಬೇಕು.

ಚಿತ್ರಕೃಪೆ: Hari Singh

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿರುವ ಶಿವನ ದೇವಸ್ಥಾನವು ಒಂದು ಪ್ರಸಿದ್ಧ ಐತಿಹಾಸಿಕ ಪ್ರವಾಸಿ ಕ್ಷೇತ್ರವಾಗಿದೆ. ಇದು ಮುಖ್ಯವಾಗಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ 12 ನೆ ಶತಮಾನದ ದೇಗುಲಕ್ಕೆ ಹೆಸರುವಾಸಿಯಾಗಿದೆ. ಅಲ್ಲದೆ ಈ ಗ್ರಾಮದಲ್ಲಿ ಪುರಾತನ ವಿದ್ಯಾಕೇಂದ್ರಗಳ ಪೈಕಿ ಒಂದಾದ ಪ್ರತಿಷ್ಠಿತ ಜವಾಹರ ನವೋದಯ ವಿದ್ಯಾಲಯವೂ ಇದೆ.

ಚಿತ್ರಕೃಪೆ: r deangelo

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಕಲಬುರಗಿ ಹೈ.ಕರ್ನಾಟಕದ ಒಂದು ಪ್ರಮುಖ ಜಿಲ್ಲೆ. ಕಲಬುರಗಿ ನಗರದ ಹಿ೦ದಿನ ಹೆಸರು ಕಲ್ಬುರ್ಗಿ. ಕಲಬುರಗಿಯ ಚರಿತ್ರೆಯನ್ನು ರಾಷ್ಟ್ರಕೂಟ ಅರಸರ ಕಾಲದ ವರೆಗೆ ಗುರುತಿಸಬಹುದು. ಇಲ್ಲಿಯೂ ಸಹ ಸಾಕಷ್ಟು ಧಾರ್ಮಿಕ ಹಾಗೂ ಐತಿಹಾಸಿಕ ಪ್ರವಾಸಿ ಆಕರ್ಷಣೆಗಳನ್ನು ನೋಡಬಹುದು. ಅವುಗಳಲ್ಲಿ ಪ್ರಮುಖವಾದುದು ಕಲಬರಗಿ ಅಥವಾ ಗುಲ್ಬರ್ಗಾ ಕೋಟೆ. ಕರ್ನಾಟಕದಲ್ಲಿ ಕಂಡುಬರುವ ಪ್ರಾಚೀನ ಇಸ್ಲಾಮಿಕ್ ವಾಸ್ತುಶಿಲ್ಪಗಳ ಪೈಕಿ ಈ ಕೋಟೆಯು ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು.

ಚಿತ್ರಕೃಪೆ: Naidugari Jayanna

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಕಲಬುರಗಿ (ಗುಲಬರ್ಗಾ) ಪಟ್ಟಣದಲ್ಲಿರುವ ಕೋರಂಟಿ ಆಂಜನೇಯನ ದೇವಸ್ಥಾನವು ನಗರದ ಪ್ರಮುಖ ದೇವಸ್ಥಾನವಾಗಿದೆ. 1957 ರಲ್ಲಿ ಚಿಕ್ಕದಾಗಿ ನಿರ್ಮಾಣವಾದ ಈ ದೇಗುಲವು ಕಾಲಕಳೆದಂತೆ ಅಪಾರ ಜನಪ್ರೀಯತೆಗಳಿಸಿ ಇಂದು ದೊಡ್ಡದಾದ ದೇವಸ್ಥಾನವಾಗಿದೆ. ಇದನ್ನು ಕೋರಂಟಿ ಗ್ಯಾರಂಟಿ ಹನುಮಾನ ದೇವಸ್ಥಾನ ಎಂದೂ ಸಹ ಕರೆಯಲಾಗುತ್ತದೆ ಕಾರಣ ಭಕ್ತರ ನಿವೇದಿಸಿಕೊಂಡ ಆಸೆಗಳು ಗ್ಯಾರಂಟಿ (ಖಂಡಿತವಾಗಿ) ಯಾಗಿ ಈಡೇರುತ್ತವೆ ಎಂದು ನಂಬಲಾಗಿದೆ. ನಗರದ ಪುಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಕಾಲೇಜಿನ ಬಳಿ ಈ ದೇವಸ್ಥಾನ ಸ್ಥಿತವಿದೆ. ಇನ್ನುಳಿದಂತೆ ಇನ್ನೂ ಹಲವು ಪ್ರವಾಸಿ ಆಕರ್ಷಣೆಗಳನ್ನು ಈ ಜಿಲ್ಲೆಯಲ್ಲಿ ನೋಡಬಹುದಾಗಿದೆ.

ಚಿತ್ರಕೃಪೆ: SridharSaraf

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಕೊಪ್ಪಳ ಜಿಲ್ಲೆ 1-4-1998 ರಂದು ಆರಂಭವಾದ ಕರ್ನಾಟಕ ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದ್ದು, ಹೈ.ಕರ್ನಾಟಕದ ಒಂದು ಐತಿಹಾಸಿಕ ಪ್ರವಾಸಿ ಜಿಲ್ಲೆಯಾಗಿದೆ. ಕವಿರಾಜ ಮಾರ್ಗದಲ್ಲಿ "ವಿದಿತ ಮಹಾ ಕೋಪಣ ನಗರ" ವೆಂದು ಕೊಪ್ಪಳದ ಬಗ್ಗೆ ಉಲ್ಲೇಖವಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Ravibhalli

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಅಶೋಕನ ಶಿಲಾಶಾಸನ: ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿರುವ ಒಂದು ಬೆಟ್ಟದ ತುದಿಯಲ್ಲಿ ಚಕ್ರವರ್ತಿ ಅಶೋಕನು ಬರಿಸಿದ್ದೆನ್ನಲಾದ ಶಿಲಾ ಶಾಸನಗಳು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ಈ ತಾಣವನ್ನು ಗವಿನಾಥ ಹಾಗೂ ಪಾಲ್ಕಿಗುಂಡು ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Ravibhalli

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಕುಕ್ನೂರು ಕೊಪ್ಪಳ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಪ್ರಸಿದ್ಧ ಪಟ್ಟಣ. ಇಲ್ಲಿ 9 ನೆಯ ಶತಮಾನದಲ್ಲಿ ರಾಷ್ಟ್ರಕೂಟರಿಂದ ನಿರ್ಮಿಸಲಾದ ನವಲಿಂಗ ದೇವಸ್ಥಾನವನ್ನು ಕಾಣಬಹುದು.

ಚಿತ್ರಕೃಪೆ: Dineshkannambadi

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಅಲ್ಲದೆ ಈ ದೇವಸ್ಥಾನದಲ್ಲಿ ಶಿಲಾ ಶಾಸನಗಳು ದೊರೆತಿದ್ದು ಅವುಗಳ ಮೇಲೆ ಕನ್ನಡದಲ್ಲಿ ಬರೆದಿದ್ದನ್ನು ಕಾಣಬಹುದು. ಕನ್ನಡದಲ್ಲಿ ಬರೆಯಲಾದ ಶಿಲಾ ಶಾಸನ.

ಚಿತ್ರಕೃಪೆ: Dineshkannambadi

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಕುಕ್ನೂರು ಬಳಿಯಿರುವ ಇಟಗಿಯೂ ಸಹ ಒಂದು ಐತಿಹಾಸಿಕ ಆಕರ್ಷಣೆಯಾಗಿದೆ. ಮಹದೇವ ದೇವಸ್ಥಾನಕ್ಕೆ ಇಟಗಿಯು ಜನಪ್ರಿಯ. ಇದನ್ನು ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸ್ಥಳೀಯ ನಂಬಿಕೆಯ ಪ್ರಕಾರ ಮಹದೇವ ದೇವಸ್ಥಾನದ ತೀರ್ಥವು ಪವಿತ್ರವಾದದ್ದು. ಇಲ್ಲಿರುವ ಕನ್ನಡ ಶಿಲಾಶಾಸನಗಳು ಚಾಲುಕ್ಯ ರಾಜರ ಬಗ್ಗೆ ತಿಳಿಸುತ್ತವೆ. ಮಹದೇವ ದೇವಸ್ಥಾನದಲ್ಲಿ ಶಿವನಿಗೆ ಅರ್ಪಿಸಲಾದ ಲಿಂಗದ ಜೊತೆಗೆ ಸುಮಾರು 13 ಮೂರ್ತಿಗಳಿವೆ. ಈ ದೇವಸ್ಥಾನವನ್ನು ಸುಮಾರು 1112ರಲ್ಲಿ ಚಾಲುಕ್ಯರಿಂದ ನಿರ್ಮಿಸಲಾಗಿದೆ.

ಚಿತ್ರಕೃಪೆ: Dineshkannambadi

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈ.ಕರ್ನಾಟಕದ ಜಿಲ್ಲೆಗಳ ಪೈಕಿ ಒಂದಾಗಿರುವ ರಾಯಚೂರು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಪ್ರಮುಖ ಜಿಲ್ಲೆಯೂ ಹೌದು. ರಾಯಚೂರು ಜಿಲ್ಲೆಯಲ್ಲಿ ಐದು ತಾಲೂಕುಗಳಿದ್ದು ಅವುಗಳೆಂದರೆ ರಾಯಚೂರು, ದೇವದುರ್ಗ, ಸಿಂಧನೂರು, ಮಾನವಿ ಮತ್ತು ಲಿಂಗಸೂಗೂರು. ಭಾರತದ ಸ್ವಾತಂತ್ರ ಹೋರಾಟ ಮತ್ತು ನಂತರದ ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಈ ಜಿಲ್ಲೆಯ ಜನತೆಯ ಪಾತ್ರ ಪ್ರಮುಖವಾದುದು. ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಇರುವ ಶಾಖೋತ್ಪನ್ನ ವಿದ್ಯುತ್‌ಸ್ಥಾವರ ಕರ್ನಾಟಕದಲ್ಲಿ ಬಳಸಲ್ಪಡುವ ವಿದ್ಯುಚ್ಛಕ್ತಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Amit Rawat

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ರಾಯಚೂರು ಕೋಟೆ ರಾಯಚೂರು ನಗರದ ಚಾರಿತ್ರಿಕ ಆಕರ್ಷಣೆಗಳಲ್ಲಿ ಒಂದು. ಕಾಕತೀಯ ದೊರೆ ರುದ್ರನಿಂದ 12 ನೆಯ ಶತಮಾನದಲ್ಲಿ ಈ ಕೋಟೆಯ ನಿರ್ಮಾಣವಾಗಿದೆ.

ಚಿತ್ರಕೃಪೆ: Tanzeelahad

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ರಾಯಚೂರು ನಗರದಲ್ಲಿರುವ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆ ಎಂದರೆ ಆಮ್ ತಲಾಬ್ ಅಥವಾ ಮಾವಿನ ಕೆರೆ. ಇದೊಂದು ಜನಪ್ರೀಯ ಪಿಕ್ನಿಕ್ ತಾಣವಾಗಿದ್ದು ವಾರಾಂತ್ಯದ ರಜೆಗೆಂದು ಸುತ್ತ ಮುತ್ತಲಿನ ಪ್ರದೇಶಗಳ ಜನರು ಇಲ್ಲಿಗೆ ಬರುತ್ತಿರುತ್ತಾರೆ. ವಿಶೇಷವಾಗಿ ಸಂಜೆ ಸಮಯದ ವಾಯು ವಿಹಾರಕ್ಕೆ ಇದು ಪ್ರಶಸ್ತ ಸ್ಥಳವಾಗಿದೆ. ಅಲ್ಲದೆ ದಂಡೆಯಗುಂಟ ಉದ್ದವಾಗಿ ಕಟ್ಟೆಯನ್ನು ನಿರ್ಮಿಸಲಾಗಿದ್ದು ಅಲ್ಲಲ್ಲಿ ಕುಳಿತುಕೊಳ್ಳಲು ಬೆಂಚುಗಳನ್ನೂ ಸಹ ಹಾಕಲಾಗಿದೆ. ಇನ್ನೂ ಹಾಯಾಗಿ ಕೆರೆಯ ನೋಟ ನೋಡುತ್ತ, ಹರಟಿಸುತ್ತ ಬಾಯಿ ಚಪ್ಪರಿಸಲು ಕುರುಕಲು ತಿಂಡಿಗಳು ದೊರೆಯುತ್ತವೆ. ಈ ಕೆರೆಯು ಮಾವಿನ ಕಾಯಿಯ ಆಕಾರದಲ್ಲಿ ರಚಿತವಾಗಿರುವುದರಿಂದ ಇದಕ್ಕೆ ಮಾವಿನ ಕೆರೆ ಅಥವ ಆಮ್ ತಾಲಾಬ್ ಎಂದು ಕರೆಯುತ್ತಾರೆ.

ಚಿತ್ರಕೃಪೆ: Tanzeelahad

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕದ ಕೊನೆಯ ಎರಡು ಜಿಲ್ಲೆಗಳೆಂದರೆ ಯಾದಗಿರಿ ಹಾಗೂ ಬಳ್ಳಾರಿ. ಬಳ್ಳಾರಿಯು ಐತಿಹಾಸಿಕವಾಗಿ ಬಹು ಪ್ರಮುಖವಾದ ಜಿಲ್ಲೆಯಾಗಿದೆ. ಐತಿಹಾಸಿಕ ಅದ್ಭುತ ಶಿಲ್ಪ ಕಲೆಯಿಂದ ಜಗತ್ತೆ ತಿರುಗಿ ನೋಡುವಂತೆ ಮಾಡಿದ ಪ್ರಖ್ಯಾತ ಪ್ರವಾಸಿ ಸ್ಥಳವಾದ ಹಂಪಿಯು ಇರುವುದು ಬಳ್ಳಾರಿ ಜಿಲ್ಲೆಯಲ್ಲೆ. ಅಲ್ಲದೆ ಬಳ್ಳಾರಿ ಪಟ್ಟಣವೂ ಸಹ ಸಾಕಷ್ಟು ಆಕರ್ಷಣೆಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Pradeep Javedar

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಬಳ್ಳಾರಿ ನಗರದಲ್ಲಿರುವ ಬಳ್ಳಾರಿ ಕೋಟೆಯು ಒಂದು ಐತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿದೆ. ಕೆಲ ನಿರ್ದಿಷ್ಟ ದಿನಗಳಂದು ಅಥವಾ ರಾಷ್ಟ್ರೀಯ ಮಹತ್ವವುಳ್ಳ ದಿನಗಳಂದು ಈ ಕೋಟೆಯನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಆ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸ್ಥಳೀಯರು ಹಾಗೂ ಈ ಭಾಗದ ಸುತ್ತಮುತ್ತಲಿನ ಜನರು ಈ ಕೋಟೆಗೆ ಭೇಟಿ ನೀಡುತ್ತಾರೆ. ಕೋಟೆಯ ಆವರಣದಲ್ಲಿ ಕೆಲ ದೇಗುಲಗಳನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: Nvvchar

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ದಾರೋಜಿ ಕಪ್ಪು ಕರಡಿ ಧಾಮ, ಒಂದು ಅಪರೂಪದ, ಕಪ್ಪು ಕರಡಿಗಳ ಅಭಯಧಾಮವಾಗಿದೆ. ಇದು ಬಳ್ಳಾರಿ ಪಟ್ಟಣದಿಂದ 50 ಕಿ.ಮೀ ಗಳಷ್ಟು ದೂರದಲ್ಲಿದ್ದು ಪ್ರಖ್ಯಾತ ಹಂಪಿ ತಾಣದಿಂದ ಕೇವಲ 15 ಕಿ.ಮೀ ಗಳಷ್ಟು ದೂರದಲ್ಲಿದೆ. ಮತ್ತೊಂದು ವಿಷಯವೆಂದರೆ ಉತರ ಕರ್ನಾಟಕದ ಏಕೈಕ ಕಪ್ಪುಕರಡಿಗಳ ಧಾಮ ಇದಾಗಿದೆ.

ಚಿತ್ರಕೃಪೆ: L. Shyamal

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ವಾರದ ಎಲ್ಲ ದಿನಗಳೂ ಪ್ರವಾಸಿಗರಿಗೆಂದು ಅಭಯಧಾಮವು ಬೆಳಿಗ್ಗೆ ಆರರಿಂದ ಸಂಜೆ ಆರು ಘಂಟೆಯವರೆಗೆ ತೆರೆದಿರುತ್ತದೆ ಹಾಗೂ ಇಲ್ಲಿ ಒಂದು ವೀಕ್ಷಣಾ ಗೋಪುರವನ್ನೂ ಸಹ ಕಾಣಬಹುದಾಗಿದೆ. ದಾರೋಜಿಯಲ್ಲಿ ಕಂಡುಬರುವ ಮುಂಗುಸಿ.

ಚಿತ್ರಕೃಪೆ: L. Shyamal

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ತುಂಗಭದ್ರಾ ಜಲಾಶಯ ಬಳ್ಳಾರಿ ಜಿಲ್ಲೆಯಲ್ಲಿರುವ ಮತ್ತೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆ. ಈ ಆಣೆಕಟ್ಟನ್ನು ತುಂಗಭದ್ರಾ ನದಿಗೆ ಅಡ್ಡಲಾಗಿ ಬಳ್ಳಾರಿಯ ಹೊಸಪೇಟೆ ಪಟ್ಟಣದ ಬಳಿ ನಿರ್ಮಿಸಲಗಿದೆ. ವಿವಿಧೋದ್ದೇಶದ ಜಲಾಶಯವಾದರೂ ನೀರಾವರಿ ಉದ್ದೇಶಕ್ಕೆಂದು ಪ್ರಮುಖವಾಗಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ.

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಬಳ್ಳಾರಿ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಯೋಗಿನಿ ಕೋಲ್ಹಾಪುರಿ ಮಹಾ ಲಕ್ಷ್ಮಿ ದೇವಾಲಯವು ನಗರದ ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿದೆ. ಶುಕ್ರವಾರಗಳಂದು ಸಾಕಷ್ಟು ಜನ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Venubannigol

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ದುರ್ಗಾ ದೇವಿಗೆ ಮುಡಿಪಾದ ದುರ್ಗಮ್ಮಾ ದೇವಾಲಯ, ಬಳ್ಳಾರಿಯ ಜನಪ್ರೀಯ ದೇವಾಲಯವಾಗಿದೆ. ದೇವಸ್ಥಾನದ ಬಳಿಯಿರುವ ದುರ್ಗೆಯ ಸುಂದರವಾದ ಪ್ರತಿಮೆ.

ಚಿತ್ರಕೃಪೆ: Venubannigol

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಇನ್ನೂ ಬಳ್ಳಾರಿ ಜಿಲ್ಲೆಯ ಹಂಪಿ ಸಾಕಷ್ಟು ಕುತೂಹಲ ಕೆರಳಿಸುವ ಅದ್ಭುತ ಪ್ರವಾಸಿ ತಾಣವಾಗಿದೆ. ಸರ್ವೆಗಳ ಪ್ರಕಾರ ಒಂದೊಮ್ಮೆ ಗೂಗಲ್ ಸರ್ಚ್ ಎಂಜಿನ್ ನಲ್ಲಿ ಹಂಪಿಯು ಕರ್ನಾಟಕದಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ಸ್ಥಳವಾಗಿದೆ. ಇದರಿಂದಲೆ ಈ ತಾಣಕ್ಕಿರುವ ಮಹತ್ವವನ್ನು ಅರಿಯ ಬಹುದು. ಇಲ್ಲಿ ಸಾಕಷ್ಟು ಆಕರ್ಷಣೆಗಳಿದ್ದರೂ ಕೆಲ ಗುರುತರವಾದ ಮುಖ್ಯ ಆಕರ್ಷಣೆಗಳ ಕುರಿತು ಮುಂದಿನ ಸ್ಲೈಡುಗಳಲ್ಲಿ ತಿಳಿಯಿರಿ. ಅಂದರೆ ನೀವು ಹಂಪಿಗೆ ಭೇಟಿ ನೀಡಿದಾಗ ಈ ಆಕರ್ಷಣೆಗಳನ್ನು ನೋಡಲೇಬೇಕೆಂದರ್ಥ.

ಚಿತ್ರಕೃಪೆ: Arian Zwegers

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ವಿರೂಪಾಕ್ಷ ದೇವಾಲಯ: ಹಂಪಿಯ ತುಂಗಭದ್ರಾ ನದಿ ದಂಡೆಯ ಬಳಿ ಈ ದೇವಾಲಯವಿದೆ. ಶಿವನ ಮತ್ತೊಂದು ರೂಪವಾದ ವಿರೂಪಾಕ್ಷನಿಗೆ ಈ ದೇವಾಲಯವು ಸಮರ್ಪಿತವಾಗಿದೆ. ಭಾರತದಲ್ಲಿ ಏಳನೆಯ ಶತಮಾನದಿಂದಲೂ ಚಲಾವಣೆಯಲ್ಲಿರುವ ಪುರಾತನ ದೇವಾಲಯಗಳ ಪೈಕಿ ಈ ದೇವಸ್ಥಾನವು ಒಂದು ಎಂದು ನಂಬಲಾಗಿದೆ. ಈ ದೇವಾಲಯವು ಕೂಡ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಹಲವು ಹಿಂದು ಧಾರ್ಮಿಕ ಆಚರಣೆಗಳನ್ನು ವೀಕ್ಷಿಸಲು ಇದೊಂದು ಉತ್ತಮ ತಾಣವಾಗಿದೆ.

ಚಿತ್ರಕೃಪೆ: Anil Kusugal

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹಂಪಿ ಬಜಾರ್: ಹಂಪಿಯ ವಿರೂಪಾಕ್ಷ ದೇವಸ್ಥಾನದ ಎದುರಿನಲ್ಲೆ ಈ ಮಾರುಕಟ್ಟೆಯಿದ್ದು ಇದಕ್ಕೆ ವಿರೂಪಾಕ್ಷ ಬಜಾರ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಒಂದು ಕಿ.ಮೀ ಉದ್ದದ ಈ ಬೀದಿಯು ಎರಡು ಬದಿಗಳಲ್ಲಿ ಹಲವಾರು ರಚನೆಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವು ಎರಡು ಅಂತಸ್ತುಗಳ ರಚನೆಯೂ ಆಗಿವೆ. ಹಿಂದೆ ಪಟ್ಟಣದ ವೈಭವಯುತ ವ್ಯಾಪಾರಿ ಬೀದಿಯಾಗಿ ಇದು ಕಾರ್ಯನಿರ್ವಹಿಸುತ್ತಿತ್ತು.

ಚಿತ್ರಕೃಪೆ: Harish Aluru

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೇಮಕೂಟ ಬೆಟ್ಟ: ರೋಚಕ ಸ್ಥಳಪುರಾಣವನ್ನು ಹೊಂದಿರುವ ಹಂಪಿಯ ಹೇಮಕೂಟ ಬೆಟ್ಟವು ಅನೇಕ ಶಿಲಾ ರಚನೆಗಳು ಹಾಗು ದೇವಾಲಯಗಳನ್ನು ಒಳಗೊಂಡಿದೆ. ಸಾಧಾರಣ ಎತ್ತರದ ಈ ಬೆಟ್ಟವು ಹತ್ತಲು ಕೇವಲ 20 ನಿಮಿಷಗಳಷ್ಟು ಕಾಲವನ್ನು ತೆಗೆದುಕೊಳ್ಳುತ್ತದೆ ಹಾಗು ಸುಂದರವಾದ ಸೂರ್ಯೋದಯ ಹಾಗು ಸೂರ್ಯಾಸ್ತಗಳನ್ನು ಈ ಬೆಟ್ಟದ ಮೇಲಿಂದ ವೀಕ್ಷಿಸಬಹುದು. ಸ್ಥಳ ಪುರಾಣದ ಪ್ರಕಾರ, ಹಿಂದೆ ಇಲ್ಲಿಯೆ ಶಿವನು ತಪಸ್ಸುಗೈಯ್ಯುತ್ತಿರುವಾಗ ಪಂಪಾ ಎಂಬ ಹೆಸರಿನ ಕನ್ಯೆಯು ಭಕ್ತಿ ಭಾವದಿಂದ ಅರ್ಪಿಸಿದ ಸೇವೆಯಿಂದ ಪ್ರಸನ್ನನಾಗಿ ಆಕೆಯನ್ನು ವರಿಸಿದ್ದನಂತೆ. ಹೀಗಾಗುತ್ತಿದ್ದಂತೆ ಎಲ್ಲೆಲ್ಲೂ ಬಂಗಾರದ ಮಳೆಯಾಗಿ ಈ ಬೆಟ್ಟಕ್ಕೆ ಹೇಮಕೂಟ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಸಂಸ್ಕೃತ ಶಬ್ದವಾದ ಹೇಮ ಎಂದರೆ ಕನ್ನಡದಲ್ಲಿ ಸ್ವರ್ಣ ಅಥವಾ ಬಂಗಾರ ಎಂದಾಗುತ್ತದೆ.

ಚಿತ್ರಕೃಪೆ: Sujith Pillai

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಕಡಲೆಕಾಳು ಗಣೇಶ: ಹೇಮಕೂಟ ಬೆಟ್ಟದ ಇಳಿಜಾರಿನ ಜಾಗದ ಕಲ್ಲಿನಲ್ಲಿ 14 ಅಡಿಗಳಷ್ಟು ಎತ್ತರದ ಈ ಗಣೇಶನ ವಿಗ್ರಹವನ್ನು ಕೆತ್ತಲಾಗಿದೆ. ಸಹಜ ಶಿಲೆಯಲ್ಲೆ ಮೂರ್ತಿಯನ್ನು ಕಡಿಯುವ ಅಂದಿನ ಶಿಲ್ಪಿಗಳ ಕೌಶಲ್ಯಕ್ಕೆ ಉತ್ತಮ ಸಾಕ್ಷಿಯಾಗಿದೆ ಈ ವಿಗ್ರಹ. ಈ ವಿಗ್ರಹವನ್ನು ಸ್ವಲ್ಪ ದೂರದಿಂದ ಗಮನಿಸಿದಾಗ ಕಡಲೆಕಾಯಿಯಂತೆ ಗೋಚರಿಸುವುದರಿಂದ ಇದಕ್ಕೆ ಕಡಲೆಕಾಳು ಗಣೇಶ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಚಿತ್ರಕೃಪೆ: Keshvi2209

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಸಾಸಿವೆಕಾಳು ಗಣೇಶ: ತೆರೆದ ಮಂಟಪದಲ್ಲಿ ಈ ಬೃಹತ್ ನಾಲ್ಕು ಕೈಗಳುಳ್ಳ ಗಣೇಶನ ವಿಗ್ರಹವನ್ನು ನಿರ್ಮಿಸಲಾಗಿದೆ. ವಿಜಯನಗರ ಶಿಲ್ಪಕಲೆಗೆ ಮತ್ತೊಂದು ಗಮನಾರ್ಹ ಉದಾಹರಣೆಯಾಗಿದೆ ಈ ವಿಗ್ರಹ. ಈ ಗಣೆಶನ ಹೊಟ್ಟೆಯು ಸಾಸಿವೆಕಾಳಿನ ಆಕಾರವನ್ನು ಹೋಲುವುದರಿಂದ ಇದನ್ನು ಸಾಸಿವೆಕಾಳು ಗಣೇಶ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Ssenthilkumaran

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಲಕ್ಷ್ಮಿ ನರಸಿಂಹ/ಉಗ್ರನರಸಿಂಹ ಇದೊಂದು ಹಂಪಿಯಲ್ಲಿ ಕಾಣಸಿಗುವ ದೊಡ್ಡ ಏಕಶಿಲಾ ವಿಗ್ರಹವಾಗಿದೆ. ಈ ಸಿಂಹ ಮುಖಿ ವಿಗ್ರಹವು ವಿಷ್ಣುವಿನ ಉಗ್ರಾವತಾರವಾದ ನರಸಿಂಹನದ್ದಾಗಿದೆ. ಕುಳಿತ ಭಂಗಿಯಲ್ಲಿರುವ ಈ ವಿಗ್ರಹವು ಒಂದೊಮ್ಮೆ ತನ್ನ ತೊಡೆಯ ಮೇಲೆ ಲಕ್ಷ್ಮಿಯ ವಿಗ್ರಹವನ್ನು ಹೊಂದಿತ್ತು. ಪ್ರದೇಶವು ಶತ್ರುಗಳ ಆಕ್ರಮಣಕ್ಕೊಳಗಾಗಿ ಲಕ್ಷ್ಮಿ ದೇವಿಯ ವಿಗ್ರಹವು ನಶಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Srikar.agnihotram

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಲೋಟಸ್ ಮಹಲ್/ ಕಮಲದ ಅರಮನೆ: ಕಮಲದ ದಳಗಳಂತೆ ಕಾಣುವ ಈ ರಚನೆಯು ಕಮಾನುಗಳಲ್ಲಿ ಇಸ್ಲಾಮಿಕ್ ವಾಸ್ತುಶೈಲಿಯನ್ನೂ, ಛಾವಣಿ ಹಾಗು ಅಡಿಯಲ್ಲಿ ಹಿಂದು ವಾಸ್ತು ಶೈಲಿಯನ್ನು ಹೊಂದಿದೆ. ಬಹುಶಃ ಇದು ಸೇನಾ ಮುಖ್ಯಸ್ಥ ಇಲ್ಲವೆ ರಾಣಿಯರು ಸಂತೋಷದಿಂದ ಸಮಯವನ್ನು ಕಳೆಯಲು ಬಳಸಲ್ಪಡುತ್ತಿತ್ತು ಎಂದು ಹೇಳಲಾಗಿದೆ.

ಚಿತ್ರಕೃಪೆ: Mansoor Ali

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹಜಾರರಾಮನ ದೇವಾಲಯ: ಇದು ರಾಜನ ಖಾಸಗಿ ದೇವಾಲಯವಾಗಿತ್ತು. ಈ ದೇವಾಲಯದ ಹೊರಗೋಡೆಗಳಲ್ಲಿ ಅತ್ಯಂತ ಆಕರ್ಷಕವಾದ ಕೆತ್ತನೆಗಳನ್ನು ಕಾಣಬಹುದು. ದೇಗುಲದ ಎಲ್ಲ ಗೋಡೆಗಳಲ್ಲೂ ರಾಮಾಯಣದ ಕಥೆಯನ್ನು ಕಾಮಿಕ್ ಚಿತ್ರಗಳಂತೆ ಕೆತ್ತನೆ ಮಾಡಲಾಗಿದೆ.

ಚಿತ್ರಕೃಪೆ: Alende devasia

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಗಜಶಾಲೆ: ರಾಜಾಶ್ರಯದ ಆನೆಗಳ ವಿಶ್ರಾಂತಿ ತಾಣ ಇದಾಗಿತ್ತು. ಸಾಲು ಸಾಲಾಗಿ ಕೊಠಡಿಗಳನ್ನು ಹೊಂದಿರುವ ಈ ರಚನೆಯು ಗುಮ್ಮಟಾಕಾರದ ಛಾವಣಿಗಳನ್ನು ಹೊಂದಿದೆ. ಪ್ರತಿಯೊಂದು ಕೊಠಡಿಯು ಎರಡು ಆನೆಗಳು ಇರಬಹುದಾದಷ್ಟು ವಿಶಾಲವಾಗಿವೆ.

ಚಿತ್ರಕೃಪೆ: Richard Randall

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಅಚ್ಯುತರಾಯನ ದೇವಾಲಯ: ಹಂಪಿಯಲ್ಲಿ ಕಾಣಬಹುದಾದ ದೇವಾಲಯಗಳ ಪೈಕಿ ಈ ದೇವಾಲಯವು ಸುಧಾರಿತ ದೇವಾಲಯವಾಗಿದೆ. ಅಚ್ಯುತರಾಯನ ಆಡಳಿತದಲ್ಲಿ ಈ ದೇವಸ್ಥಾನ ನಿರ್ಮಾಣಗೊಂಡಿರುವ ಕಾರಣ ಇದಕ್ಕೆ ಅಚ್ಯುತರಾಯನ ದೇವಾಲಯ ಎಂದು ಕರೆಯಲಾಗುತ್ತದೆ. ಮೂಲತಃ ಈ ದೇವಾಲಯವು ವಿಷ್ಣುವಿನ ಮತ್ತೊಂದು ರೂಪವಾದ ತಿರುವೆಂಗಳನಾಥನಿಗೆ ಮುಡಿಪಾಗಿದೆ.

ಚಿತ್ರಕೃಪೆ: Jayalakshmi Iyangar

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ವಿಠ್ಠಲ ದೇವಾಲಯ: ವಿಷ್ಣು ದೇವರ ಮತ್ತೊಂದು ರೂಪವಾದ ವಿಠ್ಠಲನಿಗೆ ಸಮರ್ಪಿತವಾದ ದೇವಾಲಯ ಸಂಕೀರ್ಣ ಇದಾಗಿದ್ದು, ಶಿಲ್ಪಕಲೆಯ ದೃಷ್ಟಿಯಿಂದ ಅತಿ ಮಹತ್ವವನ್ನು ಪಡೆದಿದೆ. ಹಲವು ಆಕರ್ಷಕ ಸ್ಮಾರಕಗಳನ್ನು ಈ ಸಂಕೀರ್ಣದಲ್ಲಿ ಕಾಣಬಹುದು.

ಚಿತ್ರಕೃಪೆ: Dineshkannambadi

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಸಂಗೀತ ಸ್ವರ ಚಿಮ್ಮಿಸುವ ಖಂಬಗಳು: "ಮ್ಯೂಸಿಕಲ್ ಪಿಲ್ಲರ್ಸ್" ಅಥವಾ ಸ್ವರ ಚಿಮ್ಮಿಸುವ ಖಂಬಗಳನ್ನು ವಿಟ್ಠಲ ದೇವಾಲಯ ಸಂಕೀರ್ಣದಲ್ಲಿ ಕಾಣಬಹುದು. ಕಲಾತ್ಮಕತೆಯ ಅಗಾಧತೆಯನ್ನು ತೋರಿಸುವ ಈ ಖಂಬಗಳನ್ನು ಜಡ ವಸ್ತುವಿನಿಂದ ಮೀಟಿದಾಗ ಸಂಗೀತ ಸ್ವರಗಳು ಕೇಳಿ ಬರುತ್ತವೆ.

ಚಿತ್ರಕೃಪೆ: Nvamsi76

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಹೈದರಾಬಾದ ಕರ್ನಾಟಕ ಆಕರ್ಷಣೆಗಳು:

ಕಲ್ಲಿನ ರಥ: ವಿಠ್ಠಲ ದೇವಸ್ಥಾನದ ಎದುರಾಭಿಮುಖವಾಗಿ ಆ ಸಂಕೀರ್ಣದಲ್ಲಿ ವೈಭವಯುತವಾಗಿ ನಿಂತಿದೆ ಈ ಕಲ್ಲಿನ ರಥ. ಕಲ್ಲಿನಲ್ಲೆ ಸೂಕ್ಷ್ಮವಾಗಿ ಕೆತ್ತಲಾದ ಈ ಕಲ್ಲಿನ ರಥ ನೋಡಲು ಆಕರ್ಷಕವಾಗಿದ್ದು ಆ ಕಾಲದ ಕುಶಲಕರ್ಮಿಗಳ ಕಲಾ ನೈಪುಣ್ಯ್ತೆಯನ್ನು ಎತ್ತಿ ತೋರಿಸುತ್ತದೆ.

ಚಿತ್ರಕೃಪೆ: Dr Murali Mohan Gurram

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+