Search
  • Follow NativePlanet
Share
» »ಭಾರತದಲ್ಲಿನ ಆದಿ ಮಾನವರ ಬಗ್ಗೆ ಅಮೆರಿಕಾ ವಿಶ್ವವಿದ್ಯಾಲಯ ಎಲ್ಲಿ ಸಂಶೋದನೆ ನಡೆಸಿತು ಗೊತ್ತ? ಕೇಳಿದರೆ ಆಶ್ಚರ್ಯ

ಭಾರತದಲ್ಲಿನ ಆದಿ ಮಾನವರ ಬಗ್ಗೆ ಅಮೆರಿಕಾ ವಿಶ್ವವಿದ್ಯಾಲಯ ಎಲ್ಲಿ ಸಂಶೋದನೆ ನಡೆಸಿತು ಗೊತ್ತ? ಕೇಳಿದರೆ ಆಶ್ಚರ್ಯ

ಆದಿ ಮಾನವರನ್ನು ನಾವು ಪುಸ್ತಕಗಳಲ್ಲೇ ನೋಡಿದ್ದೇವೆ. ನಿಜವಾಗಿಯೂ ಆದಿ ಮಾನವರಿಗೆ ಸಂಬಂಧಿಸಿದಂತೆ ಹಲವಾರು ಪ್ರದೇಶಗಳಲ್ಲಿ ಕಟ್ಟಡಗಳಿವೆ ಅವುಗಳನ್ನು ಈಗ ಕಾಣಬಹುದಾಗಿದೆ ಅಂತಹದೊಂದು ಸ್ಥಳ ತೆಲಂಗಾಣದ ಖಮ್ಮಂ ನಗರದಲ್ಲಿ. ಖಮ್ಮಂ ಭೂಪಾಲಹಳ್ಳಿಯ ದಟ್ಟ

ಆದಿ ಮಾನವರನ್ನು ನಾವು ಪುಸ್ತಕಗಳಲ್ಲೇ ನೋಡಿದ್ದೇವೆ. ನಿಜವಾಗಿಯೂ ಆದಿ ಮಾನವರಿಗೆ ಸಂಬಂಧಿಸಿದಂತೆ ಹಲವಾರು ಪ್ರದೇಶಗಳಲ್ಲಿ ಕಟ್ಟಡಗಳಿವೆ ಅವುಗಳನ್ನು ಈಗ ಕಾಣಬಹುದಾಗಿದೆ ಅಂತಹದೊಂದು ಸ್ಥಳ ತೆಲಂಗಾಣದ ಖಮ್ಮಂ ನಗರದಲ್ಲಿ. ಎಷ್ಟೋ ವರ್ಷಗಳಿಂದ ನಿಗೂಢವಾಗಿದ್ದ ಆದಿ ಮಾನವರ ಬಗ್ಗೆ ಈಗ ತಿಳಿಯುವ ಸಮಯ ಬಂದಿದೆ. ಖಮ್ಮಂ ಭೂಪಾಲಹಳ್ಳಿಯ ದಟ್ಟ ಅಡವಿಯಲ್ಲಿ ಸಾವಿರಾರು ಸಮಾಧಿಗಳು ಮತ್ತು ಗೂಹೆಗಳಿವೆ. ಈ ಪ್ರದೇಶದ ಸುತ್ತಲು ಮಾನವಾಕೃತಿಯನ್ನು ಹೋಲುವ ಅದೆಷ್ಟೋ ದೊಡ್ಡದಾದ ಶಿಲೆಗಳಿವೆ.

ಈ ಶಿಲೆಗಳು ಕೇವಲ ಒಂದು, ಎರಡು ಶಿಲೆಗಳಲ್ಲ ಬದಲಾಗಿ ಸಾವಿರಾರು ಶಿಲೆಗಳು ಇವೆ. ಇಂತಹ ದಟ್ಟ ಅಡವಿಯಲ್ಲಿ ಸೌಂರ್ದಯದಿಂದ ಕಂಗೋಳಿಸುತ್ತಿರುವ ಇಂತಹ ಶಿಲೆಗಳನ್ನು ಯಾವಾಗ? ಯಾರು ನಿರ್ಮಿಸಿದರು? ಎಂಬ ಅನುಮಾನ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುವಂತಹದು. ಹತ್ತು ಅಡಿ ಎತ್ತರ ಹಾಗೂ ಹತ್ತು ಅಡಿ ಅಗಲವಿರುವ ಗೋಡೆಯ ಮೇಲೆ ಹಾಗೂ ಹದಿನೈದರಿಂದ ಇಪ್ಪತ್ತು ಅಡಿ ವಿಸ್ತಾರವಾದ ಸಮೆಕಲ್ಲಿನ ಮೇಲೆ ಕೆತ್ತಿರುವ ಆಕೃತಿಗಳಿವೆ. ಈ ಎಲ್ಲಾ ರಹಸ್ಯವನ್ನು ಭೇಧಿಸಲು ಅಮೇರಿಕ ದೇಶ ಸಂಶೋಧನೆ ಮಾಡಲು ಮುಂದಾಗಿದೆ.

ಪ್ರಸ್ತುತ ಲೇಖನದಲ್ಲಿ ಆದಿ ಮಾನವರ ರಹಸ್ಯ ಮಯವಾದ ತಾಣಗಳ ಬಗ್ಗೆ ತಿಳಿಯೋಣ.

1.ಗೋದಾವರಿ ತೀರದಲ್ಲಿ ಆದಿ ಮಾನವರ ಸ್ಥಳಗಳು?

1.ಗೋದಾವರಿ ತೀರದಲ್ಲಿ ಆದಿ ಮಾನವರ ಸ್ಥಳಗಳು?

ಗೋರಿಯ ಸಮೀಪದ ತುಟ್ಟಿಯಲ್ಲಿ ಇದ್ದ ಮೂಳೆಗಳ ಪ್ರಕಾರ ಇವುಗಳು ಅದಿಮಾನವರ ಕಾಲಾದ್ದು ಎಂದೂ ಸುಮಾರು ವರ್ಷಗಳ ಹಿಂದೆಯೇ ಕಂಡುಹಿಡಿದರು. ಆದರೆ ಅವುಗಳು ಪ್ರತ್ಯೇಕವಾಗಿ ನಿರ್ಮಾಣ ಮಾಡಿರುವ ಮನವಾಕೃತಿಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಹಾಗಾಗಿ ಅಮೆರಿಕಾದ ಕ್ಯಾಲಿರ್ಫೋನಿಯಾ ಶಾನ್ ಡಿಯಾಗ್ ವಿಶ್ವ ವಿದ್ಯಾಲಯವು ಭಾರತದಲ್ಲಿನ ಗೋದಾವರಿ ತೀರದಲ್ಲಿದ್ದ ಆದಿ ಮಾನವರ ಕುರಿತು ಸಂಶೋಧನೆ ಮಾಡಲು ಮುಂದಾದರು.
PC:YOUTUBE

ಭಾರತ ಸರ್ಕಾರದ ಜೊತೆ ಒಪ್ಪಂದ

ಭಾರತ ಸರ್ಕಾರದ ಜೊತೆ ಒಪ್ಪಂದ

ಈ ಸ್ಥಳದ ಮೇಲೆ ಸಂಶೋಧನೆ ಮಾಡಲು ಅಮೆರಿಕಾ ವಿಶ್ವ ವಿದ್ಯಾಲಯವು ಮುಂದೆ ಬಂದಿತು. ಭಾರತ ರಾಷ್ಟ್ರದ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿತು. ಆಶ್ಚರ್ಯ ಏನೆಂದರೆ ಆ ನಿರ್ಮಾಣ ಎಲ್ಲಿದೆ ಗೊತ್ತ? ಅದು ತೆಲಂಗಾಣ ರಾಜ್ಯದ ಭೂಪಾಲಪಲ್ಲಿ, ಖಮ್ಮಂ ಜಿಲ್ಲೆಯ ಸಮೀಪದ ಗೋದಾವರಿ ತೀರದ ಬಳಿ ಇದೆ.
PC:YOUTUBE

ಆದಿ ಮಾನವರಿದ್ದ ಸ್ಥಳಗಳು

ಆದಿ ಮಾನವರಿದ್ದ ಸ್ಥಳಗಳು

ಆದಿ ಮಾನವರ ಸಾವಿರಾರು ಸಮಾಧಿಗಳನ್ನು ಗೋದಾವರಿ ತೀರದ ಸಮೀಪ ಬೋಪನಪಲ್ಲಿಯಲ್ಲಿನ ತದಿವಾಯಿ, ಜಾನ ಪೇಟ, ತಂಗಾಲವು, ಸಿಂಗಗಾರಂ, ಗಂಗಾರಂ, ಕಾಚನಪಲ್ಲಿ, ಗುಲ್‍ಬಲ, ಗುಂಡಾಲ ಯಲ್ಲಿ ಆದಿ ಮಾನವರಿಗೆ ಸಂಬಂಧಿಸಿದಂತೆ ಹಲವಾರು ಗುಹೆಗಳು, ಸಮಾಧಿಗಳನ್ನು ಕಾಣಬಹುದಾಗಿದೆ.
PC:YOUTUBE

ಮಾನವಾಕೃತಿ

ಮಾನವಾಕೃತಿ

ಮಾನವಾಕೃತಿ ಹೋಲುವ ಹಲವು ಶಿಲ್ಪಗಳನ್ನು ಯಾರು ನಿರ್ಮಿಸಿದರು ಎಂಬುದು ಒಂದು ದೊಡ್ಡ ನಿಗೂಢವಾಗಿಯೇ ಉಳಿದಿದೆ. ಸಿ,ಸಿ,ಎಮ್,ಬಿ ಯ ಪ್ರಾಥಮಿಕ ಅಧ್ಯಯನದ ಪ್ರಕಾರ ಅವರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಮಾಡಿ ಜೀವನ ಸಾಗಿಸುತ್ತಿದ್ದರಂತೆ.
PC:YOUTUBE

ಕೆ.ಪಿ ರಾವ್ ಆಧ್ಯಾಯನದ ಪ್ರಕಾರ

ಕೆ.ಪಿ ರಾವ್ ಆಧ್ಯಾಯನದ ಪ್ರಕಾರ

ಹೈದ್ರಾಬಾದ್‍ನ ಸೆಂಟ್ರಲ್ ಯುನಿವರ್ ಸಿಟಿ ಪ್ರಾಧ್ಯಾಪಕರ ಕೆ.ಪಿ ರಾವ್‍ರವರು ಸಿ,ಬಿ,ಎಮ್,ಬಿಯ ಸಮೀಕ್ಷೆ ಮಾಡುವಾಗ ಅಲ್ಲಿ ದೊರೆತ ಮೂಳೆಗಳನ್ನು ಡಿ,ಎನ್,ಎ ಪರೀಕ್ಷೆಗೆ ಒಳಪಡಿಸಿದರು.
PC:YOUTUBE

ಮೂಳೆಗಳು

ಮೂಳೆಗಳು

ಡಿ,ಎನ್,ಎ ಪರೀಕ್ಷೆಯ ನಂತರ ಈ ಮೂಳೆಗಳು ಆದಿ ಮಾನವವರದೇ ಎಂದು ಖಚಿತವಾಯಿತು. ಆದಿ ಮಾನವರು ವಲಸೆಯನ್ನು ಅನುಸರಿಸುತ್ತಿದ್ದರಿಂದ ಅವರಿದ್ದ ಪ್ರದೇಶದಲ್ಲಿಯೇ ಅವರ ವಾಸಸ್ಥನವಾಗಿತ್ತು. ಇವರು ವಿಶೇಷವಾಗಿ ಮರದ ಪುಟರೆಗಳಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
PC:YOUTUBE

ಹೈದ್ರಾಬಾದ್ ವಿಶ್ವ ವಿದ್ಯಾಲಯ

ಹೈದ್ರಾಬಾದ್ ವಿಶ್ವ ವಿದ್ಯಾಲಯ

ಈ ರಹಸ್ಯವಾದ ವಿಚಾರವನ್ನು ತಿಳಿದ ಹೈದ್ರಾಬಾದ್ ವಿಶ್ವ ವಿದ್ಯಾಲಯ, ಅದಿ ಮಾನವರು ಇದ್ದ ಇನ್ನೂ ಹಲವಾರು ಪ್ರದೇಶಗಳನ್ನು ಕಂಡು ಹಿಡಿಯಲು ಚಿಂತನೆ ನಡೆಸಿದರು. ಆದರೆ ಅಮೆರಿಕಾದ ಕ್ಯಾಲಿರ್ಫೋನಿಯಾದ ಶಾನ್ ಡಿಯಾಗ್ ವಿಶ್ವವಿದ್ಯಾಲಯವು ಈ ನಿಗೂಢವನ್ನು ಭೇಧಿಸಲು ಮುಂದಾಯಿತು.
PC:YOUTUBE

ಅಭಿಪ್ರಾಯ

ಅಭಿಪ್ರಾಯ

ಪ್ರಪಂಚದಲ್ಲಿಯೇ ಇಂತಹ ಭಿನ್ನವಾದ ಆಕೃತಿಗಳು ಇಲ್ಲವೆಂದು, ಮಾನವ ಆಕೃತಿಗೆ ಹೋಲುವ ಈ ಆಕೃತಿಯ ಹಿಂದೆ ಒಂದು ದೃಡವಾದ ಚರಿತ್ರೆ ಇದ್ದೆ ಇರುತ್ತದೆ ಎಂದು ಅಭಿಪ್ರಾಯಕ್ಕೆ ಬಂದರು.
PC:YOUTUBE

ತೆಲಂಗಾಣ ಪುರಾತತ್ವ ಶಾಖೆ

ತೆಲಂಗಾಣ ಪುರಾತತ್ವ ಶಾಖೆ

ಈ ಎಲ್ಲಾ ಬೆಳವಣಿಗೆ ಬಗ್ಗೆ ತೆಲಂಗಾಣದಲ್ಲಿರುವ ಪುರಾತತ್ವ ಇಲಾಖೆಯಗೆ ಪ್ರಾಧ್ಯಾಪಾಕ ಥಾಮಸ್ ಪ್ರತಿಪಾದನೆ ಮಾಡಿದರು.
PC:YOUTUBE

ಜನರು

ಜನರು

ಸಮಾದಿಯೆಂದು ತಿಳಿಯದ ಜನರು ಅದರ ಮೇಲಿರುವ ಕಲ್ಲು ಚಪ್ಪಡಿಗಳನ್ನು ತಂದು ಅವರವರ ಮನೆಗೆ ಉಪಯೋಗಿಸಲು ತೆಗೆದುಕೊಂಡು ಹೋಗಿದ್ದರಂತೆ. ಆದಿ ಮಾನವರ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಇರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಕೆಲವರ ವಾದವಾಗಿದೆ.
PC:YOUTUBE

ಸಮಾಧಿ

ಸಮಾಧಿ

ಸಾಮಾನ್ಯವಾಗಿ ಸಮಾಧಿ ಭೂಮಿಯ ಒಳಗೆ ನಿಕ್ಷೇಪಗಳು ಇರುತ್ತವೆ. ಅವುಗಳನ್ನು ಗುರುತಿಸಲು ಸಮಾಧಿಯ ಮೇಲೆ ಶಿಲೆಗಳನ್ನು ವೃತ್ತಾಕಾರವಾಗಿ ಹೂಳುವುದು ಅವರ ಆದಿ ಮಾನವರ ಆಭ್ಯಾಸವಾಗಿತ್ತು.
PC:YOUTUBE

ಅಸ್ಪಷ್ಟವಾಗಿ ಗೋಚಾರ

ಅಸ್ಪಷ್ಟವಾಗಿ ಗೋಚಾರ

ಆದರೆ ಇಲ್ಲಿ ಸ್ವಲ್ಪ ಭಿನ್ನವಾಗಿ ಕಲ್ಲು ಫಲಕಗಳ ಮೇಲೆ ವೃತ್ತಾಕಾರದ ನಿರ್ಮಾಣವಿದೆ. ಸಮಾಧಿಯ ಮುಂದೆ ಅಸ್ಪಷ್ಟವಾಗಿ ಗೋಚಾರವಾಗುವ ಮಾನವಾಕೃತಿಗಳಿವೆ.
PC:YOUTUBE

ಸೆಂಟ್ರಲ್ ಯೂನಿವರ್ ಸಿಟಿ

ಸೆಂಟ್ರಲ್ ಯೂನಿವರ್ ಸಿಟಿ

ಗಂಡು ಆಕಾರದ ಆಕೃತಿಗಳಿರುವ ಕಲ್ಲುಗಳು ಕ್ರೈಸ್ತ ಶಿಲೆಯ ಆಕಾರವನ್ನು ಹೋಲುವಂತಿತ್ತು. ಆದರೆ ಈ ಶಿಲೆಗಳು ಕ್ರೈಸ್ತಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸೆಂಟ್ರಲ್ ಯೂನೆವರ್ ಸಿಟಿಯ ಫೋಫೆಸರ್ ಪುಲ್ಲಾರಾವ್‍ರವರ ವಾದವಾಗಿದೆ.
PC:YOUTUBE

ಮಹಿಳಾ ರೂಪ

ಮಹಿಳಾ ರೂಪ

ಮಹಿಳಾ ರೂಪದಲ್ಲಿರುವ ಆಕೃತಿಯಲ್ಲಿ ಸ್ತನದ ಭಾಗವಿದೆ. ಇಂತಹ ಆಕೃತಿ ಕೂಡ ಸಾವಿರ ಸಂಖ್ಯೆಗಳಲ್ಲಿ ಕಾಣಬಹುದಾಗಿದೆ.
PC:YOUTUBE

1986 ಪರಿಶೋಧನ

1986 ಪರಿಶೋಧನ

ಪೂರ್ವದಲ್ಲಿ ಹಲವಾರು ಪರಿಶೋಧನೆಗಳು ನಡೆದಿದೆ. ಸುಮಾರು 1982ರಲ್ಲಿ ಪುರಾತತ್ವ ಶಾಖೆ ಅಧಿಕಾರಿ ರಾಮಕೃಷ್ಣ ಇವುಗಳನ್ನು ಪರಿಶೀಲಿಸಿ ರಿರ್ಪೋಟ್ ನೀಡಿದ್ದಾರೆ.
PC:YOUTUBE

1991 ಅಧ್ಯಯನ

1991 ಅಧ್ಯಯನ

1991ರಲ್ಲಿ ಪುರಾವಸ್ತು ಅಧಿಕಾರಿಗಳು ರಂಗಾಚಾರಿ, ಗೋವಿಂದ ರಡ್ಡಿ ಪರಿಶೀಲಿಸಿ ಬಹಿರಂಗ ಮಾಡಿದರು. ಸ್ವಾತಂತ್ರ್ಯಾನಂತರದ ಮೊದಲ ಅಧ್ಯಯನ ಇದಾಗಿತ್ತು.
PC:YOUTUBE

ಡಿ,ಎನ್,ಎ ಪರೀಕ್ಷೆಗಳು

ಡಿ,ಎನ್,ಎ ಪರೀಕ್ಷೆಗಳು

2000 ಇಸವಿಯಲ್ಲಿ ಪ್ರೋಫೆಸರ್ ಪುಲ್ಲಾರಾವು ಹಾಗೂ ಸಂಗಡಿಗರೊಂದಿಗೆ ನಡೆಸಿದ ಸಂಶೋಧನೆಯಿಂದಾಗಿ ಪ್ರಂಪಚಕ್ಕೆ ತಿಳಿಯುವಂತೆ ಮಾಡಿದರು. ಇವರ ಅಸ್ತಿತ್ವದಲ್ಲೇ ಡಿ,ಎನ್,ಎ ಪರೀಕ್ಷೆ ಕೂಡ ನಡೆಯಿತು.
PC:YOUTUBE

ಯುನೆಸ್ಕು ಆಧ್ಯಾಯನ

ಯುನೆಸ್ಕು ಆಧ್ಯಾಯನ

ಈ ರೋಚಕ ಆಧ್ಯಾಯನದ ಉತ್ತರವಾಗಿ ಸಮಾಧಿಗಳು ಅತ್ಯಂತ ಅದ್ಭುತವಾದುದು, ಸುಂದರವಾದುದು ಎಂದು ತಿಳಿಸಿದರಲ್ಲದೇ ಇಂತಹ ವಿಷಯದ ಬಗ್ಗೆ ಪರಿಶೋಧನೆ ಮಾಡಲು ಪ್ರಣಾಳಿಕೆಗಳನ್ನು ರಚಿಸುತ್ತಿದ್ದಾರೆ.
PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X