Search
  • Follow NativePlanet
Share
» »ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ನಮ್ಮ ದೇಶದಲ್ಲಿ ಪುರಾತನವಾದ ದೇವಾಲಯಗಳು ಹಲವಾರಿವೆ. ಆ ಕಾಲದ ರಾಜರು ತಾವು ನಿರ್ಮಾಣ ಮಾಡುತ್ತಿದ್ದ ಪ್ರತಿಯೊಂದು ಕಟ್ಟಡ, ದೇವಾಲಯಗಳೆಲ್ಲಾ ವಿಶೇಷತೆಯಿಂದ ಕೂಡಿರಬೇಕು ಎಂದು ನಿರ್ಮಾಣ ಮಾಡಿಸುತ್ತಿದ್ದರು. ಹಾಗಾಗಿಯೇ ಆ ದೇವಾಲಯಗಳು ಇಂದಿಗೂ ಪ್ರಮುಖ್ಯತೆಯನ್ನು ಗಳಿಸಿದೆ. ಅವುಗಳಲ್ಲಿ ಬೃಹದೀಶ್ವರ ದೇವಾಲಯ, ಲೇಪಾಕ್ಷಿ ದೇವಾಲಯ, ಹಂಪಿ ದೇವಾಲಯ ಇನ್ನೂ ಹಲವಾರು. ಅವುಗಳಲ್ಲಿ ಹೊಯ್ಸಳೇಶ್ವರ ದೇವಾಲಯವು ಒಂದು.

ಈ ದೇವಾಲಯದಲ್ಲಿ ಶಿಲ್ಪಗಳು ಅತ್ಯಂತ ಅದ್ಭುತವಾಗಿದೆ. ಆ ಶಿಲ್ಪಗಳನ್ನು ಕಾಣುತ್ತಾ ಪ್ರವಾಸಿಗರು ಮೈಮರೆಯುತ್ತಾರೆ. ಈ ದೇವಾಲಯದ ಒಂದು ಶಿಲ್ಪಗಳಲ್ಲಿ
ಈಜಿಫ್ಟ್ ಮಾನವನ ಒಂದು ಕಲಾಕೃತಿಗಳನ್ನು ಇಲ್ಲಿ ಕಾಣಬಹುದು. ಇದೆನಪ್ಪಾ ಆಶ್ಚರ್ಯ ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನವರಿಗೆ ಸಂಬಂಧಿಸಿದಂತೆ ಆನೇಕ ಕಲಾಕೃತಿಗಳು ಇವೆಯೇ? ಎಂದು ಆಶ್ಚರ್ಯ ಪಡುತ್ತಿದ್ದೀರಾ?. ಹಾಗಾದರೆ ಬನ್ನಿ ಆ ಕುರಿತು ಚಿತ್ರಗಳ ಮೂಲಕ ನಮ್ಮ ಕರ್ನಾಟಕ ರಾಜ್ಯದ ಕಲಾ ಪರಂಪರೆಯನ್ನು ಲೇಖನದ ಮೂಲಕ ತಿಳಿಯಿರಿ.

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳ ರಾಜ ವಂಶಿಕರು ಸುಮಾರು ಕ್ರಿ.ಶ. 1000 ರಿಂದ ಕ್ರಿ.ಶ 1346 ರವರೆಗೆ ಭಾರತದ ಕೆಲವು ಭಾಗಗಳನ್ನು ಆಳ್ವಿಕೆ ಮಾಡಿದ್ದಾರೆ. ಒಂದು ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಳೇಬೀಡುವಿನಲ್ಲಿ ಹಲವಾರು ದೇವಾಲಯಗಳಿರುವುದು ಸಾಮಾನ್ಯವಾಗಿ ತಿಳಿದಿರುವ ಸಂಗತಿಯೇ ಆಗಿದೆ. ಈ ಅದ್ಭುತವಾದ ಸ್ಥಳವು ಹಾಸನ ಜಿಲ್ಲೆಯಲ್ಲಿದೆ. ಹಳೇಬೀಡನ್ನು ಮೊದಲು ದೋರಸಮುದ್ರ ಎಂದು ಕರೆಯುತ್ತಿದ್ದರು.

PC:Karthikbs23

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹಳೇಬೀಡು ಎಂದು ಹೆಸರು ಇದ್ದರು ಕೂಡ ಇಲ್ಲಿನ ಶಿಲ್ಪಕಲೆಗಳು ಮಾತ್ರ ನವನವೀನ ಎಂದೇ ಹೇಳಬಹುದು. ಇಲ್ಲಿ ಅತ್ಯಂತ ಸುಂದರವಾದ ದೇವಾಲಯಗಳು ಕೂಡ ಇವೆಯಾದರೂ, ಅಲ್ಲಾವುದ್ದೀನ್, ಮಲ್ಲಿಕಾಫೂರ್ ಇನ್ನು ಹಲವಾರು ಮುಸ್ಲಿಂ ದಾಳಿಕಾರರಿಂದ ಉಳಿದಿರುವುದು ಮಾತ್ರ ಹೊಯ್ಸಳೇಶ್ವರ ದೇವಾಲಯ ಮಾತ್ರ. ಇಲ್ಲಿನ ಶಿಲ್ಪಗಳು ಅಮೋಘವಾದುದು.

PC:Calvinkrishy

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಇಲ್ಲಿ ಒಂದು ಶಿವಾಲಯವಿದೆ. ಈ ಭವ್ಯವಾದ ದೇವಾಲಯವನ್ನು ವಿಷ್ಣು ವರ್ಧನ ಅಥವಾ ದಂಡನಾಯಕ ಕೇತಮಲ್ಲ 1121 ರಲ್ಲಿ ಕಟ್ಟಿಸಿರಬಹುದು ಎಂದು ಕೆಲವು ಶಾಸನವನ್ನು ಆಧರಿಸಿ ಹೇಳಲಾಗಿದೆ. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧವಾದ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದಳೆಂದು ಹೆಸರುವಾಸಿಯಾಗಿದ್ದಾಳೆ.

PC:Bikashrd

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯು ಅತ್ಯುನ್ನತ ಮಟ್ಟಕ್ಕೆ ತಲುಪಿತು ಎಂದು ಹೇಳಬಹುದು. ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ನಿರ್ಮಾಣ ಕಾರ್ಯವು ಸುಲಿತವಾಗಿ ಸಾಗಿದ್ದು, ವಿಷ್ಣುವರ್ಧನನ ಅಂತ್ಯಕಾಲದಲ್ಲಿ. ವಿಷ್ಣು ವರ್ಧನನ ಅಂತ್ಯಕಾಲದಲ್ಲಿ ಆರಂಭವಾದ ದೇವಾಲಯದ ನಿರ್ಮಾಣ ಕಾರ್ಯವು ಹೊಯ್ಸಳರ ಕಡೆಯ ಅರಸ ವಿಶ್ವನಾಥ ಬಲ್ಲಾಳನ ಕಾಲದವರೆವಿಗೂ ಮುಂದುವರೆದಿತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ.

PC:Anks.manuja

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಈ ದೇವಾಲಯದವನ್ನು ಬಳಪದ ಕಲ್ಲುಗಳ ಬಳಕೆಯಿಂದ ನಿರ್ಮಾಣ ಮಾಡಲಾಗಿದೆ. ಇದನ್ನು ಸೋಪಸ್ಟೋನ್ ಅಥವಾ ಸ್ಟಿಯೋಟೈಟ್ಸ್ ಎಂದು ಕರೆಯುತ್ತಾರೆ. ಕಲ್ಲಿನ ಈ ವಿಶೇಷ ಗುಣದಿಂದಲೇ ಹೊಯ್ಸಳರ ದೇವಾಲಯಗಳಲ್ಲಿ ಸೂಕ್ಷ್ಮ ಕಸೂರಿ ಕೆತ್ತನೆಗಳನ್ನು ಕಾಣಲು ಸಾಧ್ಯವಾಗಿದೆ. ಹೊಯ್ಸಳ ರಾಜವಂಶದ ಬಗೆಗೆ ಜನರಲ್ಲಿದ್ದ ಗೌರವ ಭಾವನೆಗಳೇ ಈ ದೇವಾಲಯದ ನಿರ್ಮಾಣಕ್ಕೆ ಕಾರಣ ಎನ್ನಲಾಗಿದೆ.

PC:Anks.manuja

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳ ವಂಶದ ಹೆಸರು ಅಜರಾಮರವಾಗಿ ಉಳಿಯಬೇಕು ಎಂಬ ಉದ್ದೇಶದಿಂದಲೇ ದೊಡ್ಡದಾದ ದೇವಾಲಯವನ್ನು ನಿರ್ಮಾಣ ಮಾಡಿ ಶಿವನ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿ, ಹೊಯ್ಸಳ ವಂಶದ ಹೆಸರನ್ನೇ ಇಡಲಾಗಿದೆ. ಹೊಯ್ಸಳರ ಪ್ರಭುವೇ ಹೋಯ್ಸಳೇಶ್ವರ.

PC:Ms Sarah Welch

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಈ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಸುಮಾರು 20,000 ಕ್ಕಿಂತಲೂ ಹೆಚ್ಚು ಶಿಲ್ಪಿಗಳು ಕೆಲಸಮಾಡಿದ್ದಾರೆ. ಹೊಯ್ಸಳರ ಶಿಲ್ಪಕಲೆಗಿದ್ದ ಅದಮ್ಯ ಪ್ರೋತ್ಸಾಹವೇ ಹಳೇಬೀಡಿನಲ್ಲಿನ ಅದ್ಭುತವಾದ ದೇವಾಲಯಗಳನ್ನು ನಿರ್ಮಾಣವಾಗಲು ಕಾರಣ ಎನ್ನಬಹುದು. ದಂತಕಥೆಯ ಪ್ರಕಾರ ಜಕ್ಕಣಾಚಾರ್ಯ ಮತ್ತು ಡಕ್ಕಣಾಚಾರ್ಯ ಎಂಬುವ ಶಿಲ್ಪಿಗಳು ಇದ್ದರು ಎಂದು ಹೇಳಲಾಗಿದೆ.

PC:Ms Sarah Welch

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳ ಶಿಲ್ಪಕಲೆಯು ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರಲ್ಲೂ ನಿರ್ಮಾಣ ಮಾಡಿರುವುದು ಕಾಣಬಹುದು. ಈ ಶೈಲಿಯನ್ನು ವೇಸರ ಅಥವಾ ಹೊಯ್ಸಳ ಶೈಲಿ ಎಂದೂ ಕರೆಯುತ್ತಾರೆ. ಇವರು ನಿರ್ಮಾಣ ಮಾಡುವ ಎಲ್ಲಾ ದೇವಾಲಯಗಳು ನಕ್ಷತ್ರಾಕಾರದ ಜಗಲಿಯ ಮೇಲೆ ಇರುವುದು ವಿಶೇಷ. ಇವರು ನಿರ್ಮಾಣ ಮಾಡುವ ದೇವಾಲಯಗಳು ನಾಲ್ಕು ಭಾಗಗಳನ್ನು ಒಳಗೊಂಡಿರುತ್ತದೆ.

PC:Ms Sarah Welch

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಅವುಗಳು ಯಾವುವೆಂದರೆ ಮೂಲ ದೇವರ ಮೂರ್ತಿ ಇರುವ ಗರ್ಭಗುಡಿ, ಶುಕನಾಸಿ, ನವರಂಗಗಳನ್ನು ಇಲ್ಲಿ ಕಾಣಬಹುದು. ಆಶ್ಚರ್ಯ ಏನಪ್ಪ ಎಂದರೆ ಆಗಿನ ಶಿಲ್ಪಿಗಳು ಈಜಿಫ್ಟ್‍ನ ಮಾನವನ ಆಕೃತಿಯನ್ನು ಕೆತ್ತಿದ್ದಾರೆಯೇ ಎಂಬ ಅನುಮಾನ ಬರುವುದು ಸಾಮಾನ್ಯ. ಹೌದು ಇದು ನಿಜ. ಇಲ್ಲಿ ಪ್ರಾಚೀನ ಈಜಿಫ್ಟ್‍ನ ಮಾನವಾಕೃತಿಯನ್ನು ಕಾಣಬಹುದು.

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಈ ಅದ್ಭುತವಾದ ದೇವಾಲಯದಲ್ಲಿ ಆನೇಕ ಶಿಲ್ಪಕಲೆಗಳನ್ನು ಕಂಡಿದ್ದೀರಾ. ಅಲ್ಲಿನ ಶಿಲ್ಪಕಲೆಗಳಿಗೆ ವಸ್ತ್ರಗಳು ಇಲ್ಲದಿರುವುದು, ಆಭರಣಗಳು, ಸೌಂದರ್ಯತ್ಮಾಕವಾದ ಭಂಗಿಯನ್ನು ಹೊಂದಿರುವ ಶಿಲ್ಪಗಳನ್ನು ಹಾಗು ದೇವಿ-ದೇವತೆಗಳ ಶಿಲ್ಪಕಲೆಗಳನ್ನು ಇಲ್ಲಿ ಕಾಣಬಹುದು. ಅನೇಕ ಇತಿಹಾಸಕಾರರು ಇಲ್ಲಿರುವ ಕೆಲವು ಶಿಲ್ಪಗಳು ಪ್ರಾಚೀನ ಈಜಿಫ್ಟ್‍ನ ಮಾನವಾಕೃತಿಯನ್ನು ಹೋಲುತ್ತದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಹೇಳುತ್ತಿದ್ದಾರೆ.

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಈ ಹೊಯ್ಸಳೇಶ್ವರ ದೇವಾಲಯದಲ್ಲಿನ ಈ ವಿಭಿನ್ನವಾದ ಶಿಲ್ಪವು ಒಂದು ದೊಡ್ಡ ಕೋಟ್ ಅನ್ನು ಧರಿಸಿದೆ. ಆದರೆ ಯಾವುದೇ ಅಭರಣಗಳನ್ನು ಧರಿಸಿಲ್ಲ. ಭಾರತೀಯ ಶಿಲ್ಪಾಕೃತಿಗಳು ತಮ್ಮ ಕಾಲುಗಳಿಗೆ ಪಾದರಕ್ಷೆಗಳನ್ನು ಧರಿಸಿದ್ದಾರೆ. ಆದರೆ ಈ ವಿಭಿನ್ನವಾದ ಶಿಲ್ಪಕ್ಕೆ ಮಾತ್ರ ಯಾವುದೇ ಪಾದರಕ್ಷೆ ಧರಿಸಿಲ್ಲ. ಇದು ಪ್ರಾಚೀನ ಈಜಿಫ್ಟ್‍ರಂತೆ ವೇಷ-ಭೂಷಣವನ್ನು ಧರಿಸಿದೆ.

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಪ್ರಾಚೀನ ಈಜಿಫ್ಟ್‍ರಂತೆ ಇಲ್ಲಿನ ಶಿಲ್ಪವೂ ಕೂಡ ತಲೆಗೆ ಒಂದು ರೀತಿಯ ಬಟ್ಟೆಯನ್ನು ತನ್ನ ಹೆಗಲ ಮೇಲಿನ ತನಕ ಇಳಿ ಬಿಟ್ಟಿದೆ. ಇತಿಹಾಸದ ಪ್ರಕಾರ ಭಾರತೀಯ ಶಿಲ್ಪಕಲೆಯ ರಚನೆಗೂ ಈಜಿಫ್ಟ್‍ನ ಶಿಲ್ಪಕಲೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಇದೇ ಅಲ್ಲದೇ ಬೃಹದೀಶ್ವರ ದೇವಾಲಯದಲ್ಲಿಯೂ ಕೂಡ ಯುರೋಪಿಯನ್ನರ ಕಲಾಕೃತಿಗಳನ್ನು ಕಾಣಬಹುದು.

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಸಾಮಾನ್ಯವಾಗಿ ನಮ್ಮಲ್ಲಿ ಮೂಡುವ ಪ್ರೆಶ್ನೆ ಏನೆಂದರೆ ಈಜಿಫ್ಟ್‍ರು ನಮ್ಮ ದೇಶಕ್ಕೆ ಏಕೆ ಬಂದಿದ್ದರು? ಅವರ ಬಂದ ಕಾರಣವಾದರೂ ಏನು? ಅವರನ್ನು ಹೋಲುವ ಶಿಲ್ಪಕಲೆಗಳು ನಮ್ಮ ಕರ್ನಾಟಕ ರಾಜ್ಯದಲ್ಲಿ ಹೇಗೆ ಬಂತು? ಎಂಬ ಹಲವಾರು ಪ್ರೆಶ್ನೆಗಳಿಗೆ ಉತ್ತರವನ್ನು ಇತಿಹಾಸಕಾರರೇ ನೀಡಬೇಕಾಗುತ್ತದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಬೆಂಗಳೂರಿನಿಂದ ಹೊಯ್ಸಳೇಶ್ವರ ದೇವಾಲಯಕ್ಕೆ ಸುಮಾರು 221 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ತಲುಪಲು 3 ಗಂಟೆ 45 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. ಈ ಸ್ಥಳಕ್ಕೆ ತೆರಳಲು ಅನೇಕ ಸರ್ಕಾರಿ ಹಾಗು ಖಾಸಗಿ ಬಸ್ಸುಗಳ ವ್ಯವಸ್ಥೆಗಳಿವೆ. ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಹಾಸನ ರೈಲ್ವೆ ನಿಲ್ದಾಣ. ಇಲ್ಲಿಂದ 30 ಕಿ.ಮೀ ದೂರದಲ್ಲಿ ಹೊಯ್ಸಳೇಶ್ವರ ದೇವಾಲಯವಿದೆ.

ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮಂಗಳೂರು ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 190 ಕಿ.ಮೀ ದೂರದಲ್ಲಿದೆ. ಕ್ಯಾಬ್ ಅಥವಾ ಬಸ್ಸುಗಳ ಮೂಲಕ ಸುಲಭವಾಗಿ ಈ ಸ್ಥಳಕ್ಕೆ ತಲುಪಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more