• Follow NativePlanet
Share
Menu
» »ಈ ಮಹಲ್ ಬಗ್ಗೆ ತಿಳಿದುಕೊಂಡರೆ ನೀವು ಭಯಗೊಳ್ಳುವುದು ಖಚಿತ!

ಈ ಮಹಲ್ ಬಗ್ಗೆ ತಿಳಿದುಕೊಂಡರೆ ನೀವು ಭಯಗೊಳ್ಳುವುದು ಖಚಿತ!

Written By:

ಭಾರತ ದೇಶದ ಪ್ರವಾಸ ಜೀವನದಲ್ಲಿ ನಾವು ಎಂದೂ ಮರೆಯಲಾಗದಂತಹ ಅನುಭವವನ್ನು ನೀಡುತ್ತದೆ. ಭಾರತ ದೇಶದ ರಾಜಧಾನಿಯಾದ ದೆಹಲಿ ಪ್ರವಾಸಿಗರಿಗೆ ಮತ್ತಷ್ಟು ಅದ್ಭುತವನ್ನು ನೀಡುತ್ತದೆ. ದೆಹಲಿಯಂತಹ ಸುಂದರವಾದ ನಗರದಲ್ಲಿ ಕೇವಲ ಆಧುನಿಕಗಿಯೇ ಅಲ್ಲದೇ ಐತಿಹಾಸಿಕ, ಸಂಪ್ರದಾಯದ ಪ್ರತೀಕವಾಗಿ ನೆಲೆಸಿದೆ. ಇಲ್ಲಿ ಮಧುರವಾದ ಅನುಭೂತಿಯನ್ನು ಪಡೆಯುವ ಸಲುವಾಗಿ ಹಲವಾರು ಪ್ರವಾಸಿಗರು ದೆಹಲಿಯ ಪ್ರವಾಸಕ್ಕೆ ಭೇಟಿ ನೀಡುತ್ತಾರೆ.

ಸಾಮಾನ್ಯವಾಗಿ ದೆಹಲಿಯಲ್ಲಿ ಕೇವಲ ಅದರ ಆಧುನಿಕತೆಯೇ ಅಲ್ಲದೇ ಭಯಾನಕತೆ ಕೂಡ ಅಡಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಹಳ್ಳಿಯಾಗಲೀ, ಡೆಲ್ಲಿಯಾಗಲೀ ಕೆಲವು ಸುಂದರವಾದ ಪ್ರದೇಶಗಳ ಜೊತೆ ಜೊತೆಗೆ ಭಯನಕವಾದ ಪ್ರದೇಶವನ್ನು ಸಹ ಕಾಣಬಹುದು. ಇದಕ್ಕೆ ಸಣ್ಣ ಉದಾಹರಣೆ ದೆಹಲಿಯಲ್ಲಿನ ಒಂದು "ಥಿ ಮಹಲ್". ಆ ಮಹಲ್‍ನ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ.

ಪ್ರಸ್ತುತ ಲೇಖನದಲ್ಲಿ ಆ ಭಯಾನಕವಾದ ಮಹಲ್‍ನ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಭಯಾನಕ ಮಹಲ್

ಭಯಾನಕ ಮಹಲ್

ದೆಹಲಿ ಹೆಸರನ್ನು ಹಿಂದಿಯಲ್ಲಿ "ದಿಲ್ಲಿ" ಎಂದು ಕೂಡ ಕರೆಯುತ್ತಾರೆ. ಈ ನಗರವು ದೇಶದ ರಾಜಧಾನಿ ಆಗಿದೆ. ಇಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದ್ದು, ಎರಡನೇ ಸ್ಥಾನದಲ್ಲಿ ಮುಂಬೈ ಇದೆ. ಪುರಾತನವಾದ ದೆಹಲಿ ಮತ್ತು ನವ ದೆಹಲಿ ಎಂಬ ಹೆಸರಿನಿಂದ ದೆಹಲಿಯಲ್ಲಿನ 2 ಪ್ರದೇಶಗಳು ಅದರದರ ಚಾರಿತ್ರೆ, ಸಂಸ್ಕøತಿ ಇನ್ನು ಆನೇಕ ಅದ್ಭುತ ಪ್ರದೇಶಗಳನ್ನು ಹೊಂದಿದೆ.

ಭಯಾನಕ ಮಹಲ್

ಭಯಾನಕ ಮಹಲ್

ಅಷ್ಟೇ ಅಲ್ಲ, ದೇಶ ರಾಜಧಾನಿ ಆದ ಕಾರಣವಾಗಿ, ದೇಶದಲ್ಲಿ ನಡೆಯುವ ಪ್ರತಿಯೊಂದು ರಾಜಕೀಯ ಕಾರ್ಯಕಲಾಪಗಳ ಕೇಂದ್ರ ಬಿಂದುವಾಗಿ ಕಾರ್ಯ ನಿರ್ವಹಿಸುತ್ತದೆ. ನಮ್ಮ ದೇಶದ ರಾಜಧಾನಿ ಅತ್ಯಂತ ಆಧುನಿಕ ಸೌಕರ್ಯದಿಂದ ಸ್ಮಾರ್ಟ್ ಸಿಟಿ ಎಂದು ಹೆಸರುವಾಗಿಯಾಗಿದೆ. ಹಾಗೆಯೇ ಯಾರಿಗೂ ತಿಳಿಯದ ಥಿ ಮಹಲ್ ಎಂಬ ಮಹಲ್ ಕೂಡ ದೆಹಲಿಯಲ್ಲಿದೆ.

ಭಯಾನಕ ಮಹಲ್

ಭಯಾನಕ ಮಹಲ್

ಈ ಮಹಲ್‍ನ ಬಗ್ಗೆ ತಿಳಿದುಕೊಂಡರೆ ಭಯಾನಕತೆ ಆವರಿಸುವುದೆ ಅಲ್ಲದೇ ಆಶ್ಚರ್ಯ ಕೂಡ ಆಗುತ್ತದೆ. ಏಕೆಂದರೆ ಒಮ್ಮೆ ಈ ಮಹಲ್‍ನ ಪ್ರವೇಶ ದ್ವಾರ ನೋಡಿದರೆ ಹಾರರ್ ಸಿನಿಮ ನೆನಪಿಗೆ ಬರುತ್ತದೆ. ಇಲ್ಲಿನ ಭಯಾನಕವಾದ ಘಟನೆಯು ನಂಬಲು ಅಸಾಧ್ಯವಾದುದು.

ಭಯಾನಕ ಮಹಲ್

ಭಯಾನಕ ಮಹಲ್

ಈ ಮಹಲ್ 600 ವರ್ಷಕ್ಕಿಂತ ಪುರಾತನವಾದುದು. ಒಂದು ಕಾಲದಲಿ ಈ ಮಹಲ್ ಅತ್ಯಂತ ಸಿರಿವಂತಿಕೆಯಿಂದ ಬಾಳಿದ್ದ ಸ್ಥಳವಾಗಿತ್ತು. ಆದರೆ ಇಂದು ಮಾತ್ರ ಇದೊಂದು ದೆವ್ವಗಳ ವಾಸಸ್ಥಾನವಾಗಿ ಮಾರ್ಪಾಟಾಗಿದೆ. ಈ ಆಧುನಿಕ ಜೀವನದಲ್ಲಿ ಒಂದು ನಿಮಿಷ ಕರೆಂಟ್ ಇಲ್ಲದೆ ಇದ್ದರೆ ಜೀವಿಸಲು ಆಗುವುದಿಲ್ಲ.

ಭಯಾನಕ ಮಹಲ್

ಭಯಾನಕ ಮಹಲ್

ಆದರೆ ಕರೆಂಟ್ ಇಲ್ಲದೇ, ಕನಿಷ್ಟ ಅವಶ್ಯಕತೆ ಇಲ್ಲದೆ ಈ ಮಹಲ್‍ನಲ್ಲಿ ಮನುಷ್ಯರು ಜೀವಿಸುತ್ತಿದ್ದಾರೆ ಎಂದರೆ ಭಯವಲ್ಲದೇ ಇನ್ನೆನೂ? 14 ನೇ ಶತಮಾನದಲ್ಲಿ ಫಿರೋಜಾ ಅರಣ್ಯ ಪ್ರದೇಶದಲ್ಲಿ ಭೇಟೆಗಾಗಿ ಈ ಕೋಟೆಯನ್ನು ಅಂದರೆ ಈ ಮಹಲ್ ಅನ್ನು ನಿರ್ಮಾಣ ಮಾಡಿದರು.

ಭಯಾನಕ ಮಹಲ್

ಭಯಾನಕ ಮಹಲ್

ಈ ಮಹಲ್‍ನ ಒಳಭಾಗದಲ್ಲಿ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಮನುಷ್ಯರನ್ನು ಕೊಲ್ಲುವ ದೆವ್ವಗಳು ಕೂಡ ಇಲ್ಲಿವೆ ಎಂದು ಹೇಳಲಾಗುತ್ತಿದೆ. ಯಾರಾದರೂ ಒಳಗೆ ಪ್ರವೇಶ ಮಾಡಿದರೆ ಅವರು ಹಿಂದಿರುಗುವ ಯಾವ ಸೂಚನೆ ಕೂಡ ಇರುವುದಿಲ್ಲ. ಈ ಭಯಾನಕವಾದ ಸ್ಥಳವನ್ನು ಭಾರತದಲ್ಲಿಯೇ ಟಾಪ್ ಮೋಸ್ಟ್ ಹಂಟೆಡ್ ಪ್ಲೆಸ್ ಎಂದು ಹೇಳುತ್ತಾರೆ. ಇಲ್ಲಿ ದೆವ್ವಗಳು ಇದೆ ಎಂದೂ ಹಾಗೆಯೇ ಆನೇಕ ಕಥೆಗಳು ಕೂಡ ಹೇಳುತ್ತಾರೆ.

ಭಯಾನಕ ಮಹಲ್

ಭಯಾನಕ ಮಹಲ್

ಆದರೆ ಈ ಮಹಲ್‍ನಲ್ಲಿ ಇಬ್ಬರು ಮಾತ್ರವೇ ಇರುತ್ತಾರೆ ಎಂದು ಗುರುತಿಸಲಾಗಿದೆ. ಅವರು ಯಾರೆಂದರೆ ಸಕಿನಾ ಮತ್ತು ಪ್ರಿನ್ಸ್ ರಿಯಾಸ್ ಎಂಬುವವರು. ಇವರು ಬಾಹ್ಯ ಪ್ರಪಂಚಕ್ಕೆ ಯಾವುದೇ ಸಂಬಂಧವಿಲ್ಲದೇ ಜೀವನ ಸಾಗಿಸುತ್ತಿದ್ದಾರಂತೆ. ಒಂದು ಕಾಲದಲ್ಲಿ ಸ್ವಾತಂತ್ಯ್ರದ ನಂತರ ಈ ಮಹಲ್ ಅನ್ನು ತನಗೆ ಒಪ್ಪಿಸಬೇಕು ಎಂದು ಹಾಗು ಆ ಮಹಲ್‍ಗಾಗಿ ಬೇಗಂ ಬಲಿಯತ್ ಎಂಬುವವಳು ಕೋರ್ಟಿನಲ್ಲಿ ಹೋರಾಟ ಮಾಡಿದಳು.

ಭಯಾನಕ ಮಹಲ್

ಭಯಾನಕ ಮಹಲ್

ಹಾಗಾಗಿಯೇ ಆಕೆ ಕೆಲವು ದಿನಗಳ ಕಾಲ ರೈಲ್ವೆ ಸ್ಟೇಷನ್‍ನಲ್ಲಿಯೇ ಕಾಲ ಕಳೆದಳು. ತದನಂತರ ಸರ್ಕಾರ 1985 ರಲ್ಲಿ ಆ ಮಹಲ್ ಅನ್ನು ಅವರಿಗೆ ನೀಡಿದರು. ಆದರೆ ಆ ಮಹಲ್‍ನಲ್ಲಿ ಕನಿಷ್ಟವಾದ ಸೌಕರ್ಯವಿಲ್ಲದೇ ನೂರಾರು ವರ್ಷಗಳ ಕಾಲ ಧೂಳಿನಿಂದ ಹಾಗು ಹಾವುಗಳ ವಾಸಸ್ಥಾನವಾಯಿತು. ಆದರಿಂದ ಮಾನಸಿಕವಾಗಿ ನೊಂದು ಬೇಗಂ ಮರಣ ಹೊಂದಿದಳು. ಕೆಲವು ಆಕೆಯು ವಿಷವನ್ನು ಕುಡಿದು ಮರಣ ಹೊಂದಿದಳು ಎಂದು ಹೇಳುತ್ತಾರೆ.

ಭಯಾನಕ ಮಹಲ್

ಭಯಾನಕ ಮಹಲ್

ಆಕೆ ಮರಣಿಸಿದ ನಂತರ ಆಕೆಯ ಶರೀರವನ್ನು ಮಹಲ್‍ನ ಟೇಬಲ್ ಮೇಲೆ ಇರಿಸಿದರು ಎಂದೂ, ಆ ಶವದ ಜೊತೆ 10 ದಿನಗಳ ಕಾಲ ಕುಟುಂಬ ಸಭ್ಯರು ಕಾಲ ಕಳೆದರು ಎಂದು ಹೇಳುತ್ತಾರೆ. ತದನಂತರ ಆ ಮಹಲ್‍ನಲ್ಲಿನ ಒಂದು ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಿದರಂತೆ. ಆದರೆ ಕೆಲವರ ಪ್ರಕಾರ ಹಣ ಹಾಗು ವಜ್ರದ ಆಸೆಗೆ ಆಕೆಯನ್ನು ಕೊಂದಿರಬಹುದು ಎಂದು ಅನುಮಾನ ವ್ಯಕ್ತ ಪಡಿಸುತ್ತಾರೆ.

ಭಯಾನಕ ಮಹಲ್

ಭಯಾನಕ ಮಹಲ್

ತದನಂತರ ಮಹಲ್‍ನಲ್ಲಿ ಆನೇಕ ಮಂದಿ ಹಲವಾರು ಬಾರಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಆಕೆಯ ಶರೀರವನ್ನು ದಹನ ಸಂಸ್ಕಾರ ಮಾಡಿದ್ದಾರೆ ಎಂದು ಕೂಡ ಹೇಳಲಾಗುತ್ತದೆ. ಆ ಸಂಘಟನೆಯ ನಂತರ ಸರ್ಕಾರವು ಭದ್ರತೆಯನ್ನು ರೂಪಿಸಲು ಯೋಜನೆ ಹಾಕಿದರಂತೆ. ಪ್ರಸ್ತುತ 27 ನಾಯಿಗಳನ್ನು ಹಾಗು ಮನೆಯ ಸುತ್ತೆಲ್ಲಾ ಭ್ರದತೆಯನ್ನು ಏರ್ಪಾಟು ಮಾಡಿದರಂತೆ. ಅವುಗಳಲ್ಲಿ 9 ನಾಯಿಗಳು ಮಾತ್ರವೇ ಉಳಿದಿದೆ ಎಂತೆ.

ಭಯಾನಕ ಮಹಲ್

ಭಯಾನಕ ಮಹಲ್

ಆದರೆ ಪ್ರಸ್ತುತ ಆ ಮಹಲ್‍ನಲ್ಲಿ ಯಾರಿದ್ದಾರೆ? ಏನಾಗುತ್ತಿದೆ? ಎಂಬುದು ಪ್ರಪಂಚಕ್ಕೆ ಕೂಡ ತಿಳಿದಿಲ್ಲವಂತೆ. ಆನೇಕ ಮಂದಿ ಈ ರಹಸ್ಯವನ್ನು ಭೇದಿಸಲು ಹೋರಟವರಿಗೆ ಇದುವರೆವಿಗೂ ಹಿಂದಿರುಗಿಲ್ಲವೆಂದು ಆನೇಕ ಕಥೆಗಳು ಪ್ರಚಾರದಲ್ಲಿದೆ. ಅಷ್ಟೇ ಅಲ್ಲದೇ 20 ಮೀಟರ್ ಸಮೀಪದಲ್ಲಿರುವ ಗಾಡ್ರ್ಸ್ ಸಮೂಹವಿದ್ದರು ಕೂಡ ಆ ಸ್ಥಳದಲ್ಲಿ ಏನಾಗುತ್ತಿದೆ ಎಂಬದನ್ನು ಕಾಣಲು ಯಾರಿಗೂ ಧೈರ್ಯವಿಲ್ಲ ಎಂದೇ ಹೇಳುತ್ತಿದ್ದಾರೆ. ಆದರೆ ಆ ಮಹಲ್‍ನಲ್ಲಿರುವ ಇಬ್ಬರು ಮಾತ್ರ ಏಕೆ ಈ ವಿಧವಾಗಿ ಜೀವನ ಮಾಡುತ್ತಿದ್ದಾರೆ ಎಂಬ ರಹಸ್ಯವು ರಹಸ್ಯವಾಗಿಯೇ ಉಳಿದುಬಿಟ್ಟಿದೆ.

ಭಯಾನಕ ಮಹಲ್

ಭಯಾನಕ ಮಹಲ್

ಆ ಕೋಟೆಯಲ್ಲಿ ಪ್ರಸ್ತುತ ಪ್ರಿನ್ಸ್ ರಿಯಾಜ್ ಮತ್ತು ಸಕಿನಾ ಇರುವುದಾಗಿ ಭಾವಿಸಲಾಗುತ್ತಿದೆ. ಆದರೆ ಪ್ರಿನ್ಸ್ ರಿಯಾಜ್ ತನ್ನ ಅತ್ಯಂತ ಹಳೆಯದಾದ ಸೈಕಲ್ ಅನ್ನು ಏರಿ 3 ಅಥವಾ 4 ತಿಂಗಳಿಗೆ ಒಮ್ಮೆ ಹೊರಗಡೆ ಬಂದು ಅವರಿಗೆ ಬೇಕಾದ ಹಾಗು ನಾಯಿಗಳಿಗೆ ಬೇಕಾದ ನಿತ್ಯ ಆಹಾರಗಳನ್ನು, ವಸ್ತುಗಳು, ಮಾಂಸವನ್ನು ತೆಗೆದುಕೊಂಡು ಹೋಗುತ್ತಾನೆ ಎಂದು ನೋಡಿದವರು ಹೇಳುತ್ತಾರೆ.

ಭಯಾನಕ ಮಹಲ್

ಭಯಾನಕ ಮಹಲ್

ಆದರೆ 1990 ರಲ್ಲಿ ನೀಡಿದ ಇಂಟರ್‍ವ್ಯೂವ್‍ನಲ್ಲಿ ಒಂದುವೇಳೆ ರಿಯಾಜ್ ಏನಾದರೂ ತನಗಿಂತ ಮುಂದೆ ಮರಣ ಹೊಂದಿದರೆ ವಜ್ರವನ್ನು ಪುಡಿಮಾಡಿ ನುಂಗಿ ಮರಣ ಹೊಂದುವುದಾಗಿ ಸಕಿನಾ ಹೇಳಿದ್ದಳಂತೆ. ರಿಯಾಜ್ ಮಾತ್ರವೇ ಅದರ ಕುರಿತು ಇನ್ನು ಅಲೋಚನೆ ಮಾಡಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಭಯಾನಕ ಮಹಲ್

ಭಯಾನಕ ಮಹಲ್

ಆದರೆ ಇಷ್ಟು ವರ್ಷಗಳಿಂದ ಒಮ್ಮೆಯಾದರೂ ಸಕಿನಾ ಕಾಣಿಸಲಿಲ್ಲವಾದ್ದರಿಂದ ಆಕೆ ಮರಣಿಸಿರಬಹುದು ಎಂದು ಅನುಮಾನಿಸಲಾಗುತ್ತಿದೆ. ಅವರು ಸುಮಾರು 50 ರಿಂದ 55 ವರ್ಷಗಳ ಮಧ್ಯ ವಯಸ್ಸಿನಲ್ಲಿ ಇರಬಹುದೆಂದು, ಕನಿಷ್ಟ ಅವಶ್ಯಕತೆ ಇಲ್ಲದೇ ಹೇಗೆ ಜೀವಿಸುತ್ತಿದ್ದಾರೆ ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ.

ಭಯಾನಕ ಮಹಲ್

ಭಯಾನಕ ಮಹಲ್

ಆದರೆ ಕೆಲವರು ಮಾತ್ರ ಸರ್ಕಾರ ಅವರಿಗೆ ಸರಿಯಾದ ಕೌನ್ಸಿಲಿಂಗ್ ನೀಡಿ ಜನಜೀವನದಲ್ಲಿ ಸೇರುವಂತೆ ಮಾಡಬೇಕು ಎಂದು ಆಶಿಸುತ್ತಿದ್ದಾರೆ. ನಿಜವಾಗಿಯೂ ಅ ಮಹಲ್‍ನಲ್ಲಿ ಏನು ನಡೆಯುತ್ತಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ.

ಸಫ್ದರ್ ಜಂಗ್ ಸಮಾಧಿ, ದೆಹಲಿ

ಸಫ್ದರ್ ಜಂಗ್ ಸಮಾಧಿ, ದೆಹಲಿ

ದೆಹಲಿಯಲ್ಲಿನ ಸಫ್ದರ್ ಜಂಗ್ ಸಮಾಧಿಯನ್ನು 1753 ರಲ್ಲಿ ನವಾಬ್ ಆಫ್ ಅವಧ ಮತ್ತು ಷೀಯಾ ಉದ್ ದುಲಾನು ತನ್ನ ತಂದೆಯಾದ ಸಫ್ದರ್ ಜಂಗ್ ನೆನಪಿಗಾಗಿ ನಿರ್ಮಾಣ ಮಾಡಿದರು. ಮೊಗಲರ ಶಿಲ್ಪಕಲೆಯ ಕೊನೆಯ ನಿರ್ಮಾಣ ಇದಾಗಿತ್ತು. 300 ಚ.ಕಿ.ಮೀ ವಿಸ್ತೀರ್ಣದಲ್ಲಿ ಈ ಚಾರಿತ್ರಿಕವಾದ ಸ್ಮಾರಕವನ್ನು ನಿರ್ಮಾಣ ಮಾಡಿದರು. ಸ್ಮಾರಕದ ಪ್ರವೇಶವನ್ನು ಕೆಂಪು ಬಣ್ಣದ ಕಲ್ಲಿನಿಂದ ನಿರ್ಮಾಣ ಮಾಡಿದ್ದು, ಅತ್ಯಂತ ಆಕರ್ಷಣೆಯುತವಾಗಿದೆ.

ಟಾಯ್ ಲೇಟ್ ಮ್ಯೂಸಿಯಂನ ಬಗ್ಗೆ ಕೇಳಿದ್ದೀರಾ?

ಟಾಯ್ ಲೇಟ್ ಮ್ಯೂಸಿಯಂನ ಬಗ್ಗೆ ಕೇಳಿದ್ದೀರಾ?

ಆಶ್ಚರ್ಯ ಪಡಬೇಡಿ ಇದು ಭಾರತದಲ್ಲಿನ ಏಕೈಕ ಟಾಯ್ ಲೇಟ್ ಮ್ಯೂಸಿಯಂ ಇದೇ. ಈ ಮ್ಯೂಸಿಯಂ ಅನ್ನು ಸುಲಭ್ ಇಂಟರ್ ನ್ಯಾಷನಲ್ ಅವರು ನಿರ್ವಹಿಸುತ್ತಿದ್ದಾರೆ. ಇದರ ಮುಖ್ಯವಾದ ಉದ್ದೇಶ ಟಾಯ್ ಲೇಟ್‍ನ ಅವಶ್ಯಕತೆ, ಚರಿತ್ರೆಯನ್ನು ಜನರಿಗೆ ತಿಳಿಸುವುದೇ ಆಗಿದೆ. ಸುಮಾರು ಕ್ರಿ.ಪೂ 2500 ವರ್ಷಗಳಿಂದ ಇಂದಿನ ಆಧುನಿಕ ಟಾಯ್ ಲೇಟ್‍ಗಳವರೆವಿಗೂ ಈ ಮ್ಯೂಸಿಯಂನಲ್ಲಿ ಕಾಣಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲು ಮಾರ್ಗವಾಗಿ
ರೈಲು ಮಾರ್ಗವಾಗಿ ಪ್ರಯಾಣ ಮಾಡುವುದು ಉತ್ತಮ. ದೇಶದ ವಿವಿಧ ಮುಖ್ಯವಾದ ರಾಜ್ಯಗಳಿಂದ ದೆಹಲಿಗೆ ಆನೇಕ ರೈಲುಗಳು ಇರುವುದರಿಂದ ಸುಲಭವಾಗಿ ರಾಜಧಾನಿ ದೆಹಲಿಗೆ ಸೇರಿಕೊಳ್ಳಬಹುದಾಗಿದೆ. ಇಲ್ಲಿ ದೆಹಲಿಯ ಮೆಟ್ರೂ ಸ್ಟೇಷನ್‍ನ ಅನುಕೂಲ ಕೂಡ ಇದೆ. ದೆಹಲಿಯ ಮುಖ್ಯವಾದ ರೈಲ್ವೆ ನಿಲ್ದಾಣವೆಂದರೆ ಅದು ದೆಹಲಿ, ನ್ಯೂಡೆಲ್ಲಿ, ನಿಜಾಮುದ್ದೀನ್ ರೈಲ್ವೆ ಸ್ಟೇಷನ್, ಆನಂದ ವಿಹಾರ ರೈಲ್ವೆ ಸ್ಟೇಷನ್ ಮತ್ತು ಓಲ್ಡ್ ದೆಹಲಿ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಲಕ
ದೆಹಲಿಗೆ ಆನೇಕ ಪ್ರದೇಶಗಳಿಂದ ನೇರವಾಗಿ ವಿಮಾನ ಸಂಪರ್ಕವಿರುವುದನ್ನು ಕಾಣಬಹುದು. ಬೆಂಗಳೂರು, ಪುಣೆ, ಮುಂಬೈ ಇನ್ನು ಆನೇಕ ನಗರಗಳಿಂದ ವಿಮಾನದ ಮೂಲಕ ತೆರಳಬಹುದು.

ಈ ರಹಸ್ಯಗಳು ಎಂದೂ ಭೇದಿಸಲಾಗದು!!!

ಈ ಮಸೀದಿಯಲ್ಲಿದೆ ಅಗೋಚರ ಶಕ್ತಿಗಳ ಸಂಚಾರ


ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ