Search
  • Follow NativePlanet
Share
» »ಹೊಗೆನಕಲ್ ಜಲಪಾತವು ತನ್ನ ಅದ್ಭುತ ಸೊಬಗಿನಿಂದ ಮಂತ್ರ ಮುಗ್ಧರನ್ನಾಗಿದೇ ಬಿಡದು...

ಹೊಗೆನಕಲ್ ಜಲಪಾತವು ತನ್ನ ಅದ್ಭುತ ಸೊಬಗಿನಿಂದ ಮಂತ್ರ ಮುಗ್ಧರನ್ನಾಗಿದೇ ಬಿಡದು...

ಹೊಗೆನಕಲ್ ಜಲಪಾತವು ದಕ್ಷಿಣ ಭಾರತ ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯಲ್ಲಿದೆ. ಈ ಸುಂದರವಾದ ಜಲಪಾತವು ಬೆಂಗಳೂರಿನಿಂದ ಸುಮಾರು 180 ಕಿ,ಮೀ ಮತ್ತು ಧರ್ಮಪುರಿನಿಂದ ಸುಮಾರು 46 ಕಿ,ಮೀ ದೂರದಲ್ಲಿದೆ. ಈ ಜಲಪಾತವು "ಭಾರತದ ನಯಾಗಾರಾ ಜಲಪಾತ" ಎಂ

ಹೊಗೆನಕಲ್ ಜಲಪಾತವು ದಕ್ಷಿಣ ಭಾರತ ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯಲ್ಲಿದೆ. ಈ ಸುಂದರವಾದ ಜಲಪಾತವು ಬೆಂಗಳೂರಿನಿಂದ ಸುಮಾರು 180 ಕಿ,ಮೀ ಮತ್ತು ಧರ್ಮಪುರಿನಿಂದ ಸುಮಾರು 46 ಕಿ,ಮೀ ದೂರದಲ್ಲಿದೆ. ಈ ಜಲಪಾತವು "ಭಾರತದ ನಯಾಗಾರಾ ಜಲಪಾತ" ಎಂದು ಸಹ ಕರೆಯುತ್ತಾರೆ. ಈ ಜಲಪಾತವು ಔಷಧಿಗಳನ್ನು ಹಾಗೂ ಹಲವಾರು ಗಿಡಮೂಲಿಕೆಗಳನ್ನು ಹೊಂದಿರುವ ಜೀವ ಸಂರಕ್ಷಕವಾದ ಜಲಪಾತವೆಂದೇ ಹೇಳಬಹುದಾಗಿದೆ.

ಈ ಜಲಪಾತದಲ್ಲಿ ಸ್ನಾನ ಮಾಡುವುದೆಂದರೆಯೇ ಅದು ಸುಂಗಧಯುಕ್ತವಾದ ಔಷಧಿಯಲ್ಲಿ ಸ್ನಾನ ಮಾಡಿದಂತೆ ಹಾಗೂ ದೋಣಿ ಸವಾರಿ ಮಾಡುವುದಕ್ಕೆ ಅದ್ಭುತ ಜಲಪಾತವೆಂದೇ ಹೇಳಬಹುದಾಗಿದೆ. ಇಲ್ಲಿನ ಕಲ್ಲು ಏಷ್ಯಾದಲ್ಲಿಯೇ ಅತ್ಯಂತ ಹಳೆಯಾದಾದುದು ಎಂದು ಎಂದು ಪರಿಗಣಿಸಲ್ಪಟ್ಟಿದೆ.

ಇಂತಹ ಸೊಬಗನ್ನು ಹೊಂದಿರುವ ಜಲಪಾತವನ್ನು ತಮಿಳುನಾಡಿನ ಜನರು "ಮರಿಕೊಟ್ಟಾಯಂ" ಎಂದು ಕೂಡ ಕರೆಯುತ್ತಾರೆ. ಪ್ರಸ್ತುತ ಲೇಖನದಲ್ಲಿ ಹೊಗೆನಕಲ್ ಜಲಪಾತದ ಬಗ್ಗೆ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

ಹೊಗೆನಕಲ್ ಜಲಪಾತದ ಪ್ರಕೃತಿಯ ದೃಶ್ಯ

ಹೊಗೆನಕಲ್ ಜಲಪಾತದ ಪ್ರಕೃತಿಯ ದೃಶ್ಯ

ಹೊಗೆನಕಲ್ ಜಲಪಾತವು ದಕ್ಷಿಣ ಭಾರತದ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಾವೇರಿ ನದಿ ಮೇಲಿರುವ ಜಲಪಾತವಾಗಿದೆ. ಜಲಪಾತದ ಸೌಂದರ್ಯವು ಮನಮೋಹಕವಾಗಿದ್ದು, ಶಕ್ತಿಯುತವಾದ ಔಷಧಿಯ ಚಿಕಿತ್ಸೆ, ಚಾರಣ ಮಾರ್ಗಗಳು ದೋಣಿ ಸವಾರಿಯನ್ನು ಕೂಡ ಇಲ್ಲಿ ಇವೆ.

ಇಲ್ಲಿನ ಅದ್ಭುತ ಅನುಭವ ಪಡೆಯಲು ಸಾವಿರಾರು ಪ್ರವಾಸಿಗರು ಈ ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಜಲಪಾತವು ನೀರಿನಿಂದ ತುಂಬಿ ತುಳುವ ದೃಶ್ಯ ಎಂಥವರನ್ನು ರೋಮಾಂಚನಗೊಳಿಸದೇ ಇರದು.

ಹೊಗೆನಕಲ್ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಗಡಿಯಲ್ಲಿ ನೆಲೆಸಿದ್ದು, ಕರ್ನಾಟಕದ ಜೀವ ನದಿ ಎಂದೆ ಗುರುತಿಸಲ್ಪಟ್ಟಿದೆ.

PC:Mithun Kundu

ಪ್ರವಾಸಿಗರು

ಪ್ರವಾಸಿಗರು

ಇಲ್ಲಿಗೆ ಬರುವ ಹಲವಾರು ಪ್ರವಾಸಿಗರು ಈ ಜಲಪಾತದ ಸೌಂದರ್ಯವನ್ನು ಕಾಣುತ್ತಾ ಮೈಮರೆಯುತ್ತಾರೆ. ಶಾಂತಿಯುತವಾದ ವಾತಾವರಣ, ತಂಪಾದ ಗಾಳಿ, ಪಕ್ಷಿಗಳ ಇಂಪುನಾದ ಜಲಪಾತವು ರ್ಭೋಗರೆಯುವ ಶಬ್ದ ಇವೆಲ್ಲಾವು ಎಂಥವರನ್ನು ಮಂತ್ರ ಮುಗ್ಧಗೊಳಿಸದೇ ಇರಲಾರದು.

ದಿವ್ಯವಾದ ಔಷಧಿ ಗುಣಗಳನ್ನು ಹೊಂದಿರುವ ಈ ನೀರನ್ನು ವಿಷೇಶವಾದ ಶಕ್ತಿಯು ಅಡಗಿದೆ ಎಂದು ಸ್ಥಳೀಯರ ನಂಬುತ್ತಾರೆ. ದೋಣಿಯಲ್ಲಿ ಪ್ರಯಾಣ ಮಾಡುವಾಗ ಜೀವನದಲ್ಲಿ ಎಂದೂ ಮರೆಯಲಾಗದ ಅನುಭೂತಿಯನ್ನು ಉಂಟುಮಾಡುತ್ತದೆ ಈ ಹೊಗೆನಕಲ್ ಜಲಪಾತ.

PC:Ashwin Kumar

ಹೊನೆಗಲ್ ಜಲಪಾತ ತೆರಳಲು ಸೂಕ್ತವಾದ ಸಮಯ

ಹೊನೆಗಲ್ ಜಲಪಾತ ತೆರಳಲು ಸೂಕ್ತವಾದ ಸಮಯ

ಈ ಸುಂದರವಾದ ಜಲಪಾತಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅದು ಮಳೆಗಾಲದ ನಂತರದ ದಿನಗಳಲ್ಲಿ. ಆಗ ಅತ್ಯಂತ ಸುಂದರವಾದ ಪ್ರಕೃತಿಯ ಸೊಬಗು ಹಾಗೂ ಅತಿಹೆಚ್ಚು ನೀರಿನಿಂದ ತುಂಬಿತುಳ್ಳುಕ್ಕುತ್ತಿರುತ್ತದೆ. ವರ್ಷದ ಎಲ್ಲಾ ಕಾಲದಲ್ಲೂ ಕೂಡ ಈ ಜಲಪಾತಕ್ಕೆ ಭೇಟಿ ನೀಡಬಹುದಾಗಿದೆ.


PC:Ashwin Kumar

ಹೊನೆಗಲ್ ಜಲಪಾತಕ್ಕೆ ತಲುಪುವ ಬಗೆ?

ಹೊನೆಗಲ್ ಜಲಪಾತಕ್ಕೆ ತಲುಪುವ ಬಗೆ?

ಹೊನೆಗಲ್ ಜಲಪಾತಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಬೆಂಗಳೂರು. ಇಲ್ಲಿಂದ ಸುಮಾರು 130 ಕಿ,ಮೀ ದೂರದಲ್ಲಿ ಈ ಜಲಪಾತವನ್ನು ಕಂಡು ಆನಂದಿಸಬಹುದಾಗಿದೆ.

ಹಾಗೆಯೇ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ತಮಿಳುನಾಡು ರಾಜ್ಯದ ಧರ್ಮಪುರಿ. ಇಲ್ಲಿಂದ ಸುಮಾರು 46 ಕಿ,ಮೀ ದೂರದಲ್ಲಿದೆ.

ಹೊಗೆನಕಲ್‍ಗೆ ನೇರ ಬಸ್ ಸಂಚಾರ ವ್ಯವಸ್ಥೆ ಸಂಪರ್ಕವಿದ್ದು, ಸುಮಾರು 1. ಕಿ.ಮೀ ದೂರದಲ್ಲಿ ಸುಲಭವಾಗಿ ತಲುಪಬಹುದಾಗಿದೆ.


PC:Ezhuttukari



ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ಹೊಗೆನಕಲ್ ಸಮೀಪದಲ್ಲಿ ಹಲವಾರು ಪ್ರವಾಸಿತಾಣಗಳಿವೆ ಅವುಗಳಿಗೂ ಕೂಡ ಒಮ್ಮೆ ಭೇಟಿ ನೀಡಬಹುದಾಗಿದೆ. ಅವುಗಳು ಯಾವುವೆಂದರೆ ಮೇಳಗಿರಿ ಫಾಲ್ಸ್, ಮೆಟ್ಟೂರು ಡ್ಯಾಂ ಹೊನೆಗಲ್ ಜಲಪಾತದಿಂದ ಸುಮಾರು 20 ಕಿ,ಮೀ ದೂರದಲ್ಲಿದೆ. ಪೆನ್ನರ್ ಗ್ರಾಮ, ಹೊನೆಗಲ್‍ಯಿಂದ ಪೆನ್ನರ್ ಗ್ರಾಮಕ್ಕೆ ಸುಮಾರು 20 ಕಿ,ಮೀ ದೂರದಲ್ಲಿದೆ. ಪರಮೇಶ್ವರಿ ದೇವಾಲಯ, ಹೊನೆಗಲ್ ಜಲಪಾತದಿಂದ ಪರಮೇಶ್ವರಿ ದೇವಾಲಯಕ್ಕೆ ಸುಮಾರು 20 ಕಿ,ಮೀ ದೂರದಲ್ಲಿದೆ.


PC:jeet_sen

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X