Search
  • Follow NativePlanet
Share
» »ಕಣ್ಣಿಗೆ ಕಟ್ಟುವ ಕಪ್ಪು ಬಿಳುಪಿನ ಕರ್ನಾಟಕ

ಕಣ್ಣಿಗೆ ಕಟ್ಟುವ ಕಪ್ಪು ಬಿಳುಪಿನ ಕರ್ನಾಟಕ

By Vijay

ಇಂದು ನಾವು ಟಿವಿ ಪರದೆಯ ಮೇಲಾಗಲಿ ಅಥವಾ ಮೊಬೈಲ್ ಫೋನ್ ಪರದೆಯ ಮೇಲಿರಲಿ ಪ್ರತಿ ಚಿತ್ರಗಳನ್ನು ಅವುಗಳ ನೈಜ ಬಣ್ಣದಲ್ಲಿಯೆ ನಿರಾಯಾಸವಾಗಿ ನೋಡಿ ಬಿಡುತ್ತೇವೆ. ಕಪ್ಪು ಬಿಳುಪಿನ ಚಿತ್ರಗಳಂತೂ ಒಂದು ರೀತಿಯ ವಿಶೇಷ ಚಿತ್ರಗಳಂತೆಯೆ ಇಂದು ಕಂಡುಬರುತ್ತವೆ.

ಆದರೆ ಹಲವು ದಶಕಗಳ ಹಿಂದೆ ಕ್ಯಾಮೆರಾಗಳು ಅವಿಷ್ಕರಿಸಲ್ಪಟ್ಟಾಗ ಅದೊಂದು ಅದ್ಭುತವೆ ಆಗಿತ್ತು. ನಿಜವಾಗಲೂ ಕ್ಯಾಮೆರಾ ಆವಿಷ್ಕರಿಸಿದವರಿಗೆ ನಾವು ಇಂದು ಮನಃಪೂರ್ವಕ ಧನ್ಯವಾದಗಳನ್ನು ಹೇಳಲೇಬೇಕು. ಏಕೆಂದರೆ ಇಂದು ನಾವು ಭಾರತದ ಅನೇಕ ಪ್ರವಾಸಿ ಸ್ಥಳಗಳ ಕಳೆಯನ್ನು, ಸ್ಥಿತಿಗತಿಯನ್ನು ಎಷ್ಟೊ ವರ್ಷಗಳ ಹಿಂದೆ ಹೇಗಿತ್ತೆಂಬುದನ್ನು ಅರಿಯಬಹುದು.

ನಿಮಗಿಷ್ಟವಾಗಬಹುದಾದ : ಬೆಂಗಳೂರಿನ ವೈಭವ ಸಾರುವ ಕಪ್ಪು ಬಿಳುಪು ಚಿತ್ರಗಳು

ಹದಿನೆಂಟನೇಯ ಶತಮಾನದ ಅಂತ್ಯ ಹಾಗೂ ಹತ್ತೊಂಬತ್ತನೇಯ ಶತಮಾನದ ಆರಂಭದ ಸಮಯದಲ್ಲಿ ಸಾಕಷ್ಟು ಆಂಗ್ಲ ಛಾಯಾಗ್ರಾಹಕರು ಭಾರತದ ಪ್ರಸಿದ್ಧ ಸ್ಥಳಗಳೆಲ್ಲ ಪ್ರವಾಸ ಮಾಡಿ ಅಂದಿನ ಸಮಯದಲ್ಲಿ ಆ ಸ್ಥಳಗಳ ದೃಶ್ಯಾವಳಿಗಳನ್ನು ತಮ್ಮ ತಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದು ಇಂದಿಗೂ ಆ ಚಿತ್ರಗಳನ್ನು ನೋಡುವುದೆಂದರೆ ಹಲವರಿಗೆ ಕುತೂಹಲ ಕೆರಳಿಸುತ್ತವೆ.

ಪ್ರಸ್ತುತ ಲೇಖನದ ಮೂಲಕ ಕರ್ನಾಟಕದ ಕೆಲವು ಪ್ರಮುಖ ಪ್ರವಾಸಿ ಸ್ಥಳಗಳ ಐತಿಹಾಸಿಕ ಚಿತ್ರಗಳ ಪ್ರವಾಸ ಮಾಡಿ. ಈ ಸ್ಥಳಗಳನ್ನು ಬಹುತೇಕರು ನೋಡಿರಬಹುದು. ಅಂಥವರಿಗೆ ಇದೊಂದು ಕುತೂಹಲಭರಿತ ಚಟುವಟಿಕೆಯಾದರೆ ಇನ್ನೂ ಹಲವರಿಗೆ ಆ ಸ್ಥಳಗಳ ಕಪ್ಪು ಬಿಳುಪಿನ ಮುಗ್ಧತೆ ತಮ್ಮತ್ತ ಬರುವಲ್ಲಿ ಆಕರ್ಷಿಸಬಹುದು.

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಈ ಚಿತ್ರ ನೋಡಿ, ಇದು ಯಾವ ಸ್ಥಳವಎಂದು ಊಹಿಸಬಲ್ಲಿರಾ? ಹೌದು, ಕಲ್ಲು ಬಂಡೆಗಳ ಎಳು ಸುತ್ತಿನ ಕೋಟೆಯಿಂದ ಸುತ್ತುವರೆದಿರುವ ಚಿತ್ರದುರ್ಗ. ಚಾಮುಂಡಿ ದೇವಿಯ ದೇವಾಲಯವನ್ನೂ ಸಹ ಕಾಣಬಹುದು. 1857 ರ ಸಮಯದಲ್ಲಿ ಸೆರೆ ಹಿಡಿಯಲಾದ ಚಿತ್ರ.

ಚಿತ್ರಕೃಪೆ: Pigou, William Henry

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಚಿತ್ರದುರ್ಗದಲ್ಲಿರುವ ಹೊಂಡ. ಕಾಲ 1855.

ಚಿತ್ರಕೃಪೆ: Pigou, William Henry

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಬೆಂಗಳೂರಿನ ಪ್ರಖ್ಯಾತ ಕಬ್ಬನ್ ಉದ್ಯಾನ. 1870 ರ ಸಮಯದಲ್ಲಿ.

ಚಿತ್ರಕೃಪೆ: Hansmuller

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಇದು ಯಾವ ಕೋಟೆ ಗೊತ್ತೆ? ಬೆಂಗಳೂರಿನ ಹೃದಯ ಭಾಗದಲ್ಲಿ ನೆಲೆಸಿರುವ ಕೃ.ರಾ ಮಾರುಕಟ್ಟೆಯಲ್ಲಿರುವ ಬೆಂಗಳೂರು ಕೋಟೆ, 1855 ರ ಸಂದರ್ಭದಲ್ಲಿ.

ಚಿತ್ರಕೃಪೆ: wikimedia

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಇಂದು ಬೆಂಗಳೂರಿನ ಬಹುತೇಕ ಕುಟುಂಬ ಜನರ ವಾರಾಂತ್ಯದ ರಜೆ ಕಳೆಯಲು ನೆಚ್ಚಿನ ತಾಣವಾಗಿರುವ ಪ್ರಸಿದ್ಧ ಲಾಲ್ ಬಾಗ್ ಉದ್ಯಾನ 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: Nicholas Bros

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಪ್ರತಿಷ್ಠಿತ ಬೆಂಗಳೂರು ಅರಮನೆ 1890 ರ ಸಂದರ್ಭದಲ್ಲಿ.

ಚಿತ್ರಕೃಪೆ: wikimedia

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಇದು ಯಾವ ದೇವಸ್ಥಾನ ಎಂದು ಗುರುತಿಸಬಲ್ಲಿರಾ? ಬಾದಾಮಿಯಲ್ಲಿರುವ ಭೂತನಾಥ ದೇವಾಲಯ ಸಂಕೀರ್ಣ. 1880 ರ ಸಂದರ್ಭದಲ್ಲಿ.

ಚಿತ್ರಕೃಪೆ: wikimedia

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಹಿಂದಿನ ಬಿಜಾಪುರ ಹಾಗೂ ಇಂದಿನ ವಿಜಯಪುರದಲ್ಲಿರುವ ವಿಶ್ವವಿಖ್ಯಾತ ಗೋಲಗುಮ್ಮಟ. 1890 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ವಿಜಯಪುರದ ಮತ್ತೊಂದು ಐತಿಹಾಸಿಕ ಪ್ರವಾಸಿ ಸ್ಥಳ ಅಸರ್ ಮಹಲ್. 1875 ರ ಸಂದರ್ಭದಲ್ಲಿ.

ಚಿತ್ರಕೃಪೆ: wikimedia

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಇಂದಿನ ಗುಲಬರಗಾ ನಗರ ಹಿಂದೆ 1880 ರ ಸಮಯದಲ್ಲಿ ಕಂಡುಬರುತ್ತಿದ್ದ ರೀತಿ.

ಚಿತ್ರಕೃಪೆ: Aavindraa

https://commons.wikimedia.org/wiki/File:Asuf_Gunj,_Gulbarga..jpg

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಶಿಲೆಯಲ್ಲಿ ಕೆತ್ತಲಾದ ಅದ್ಭುತ ಕಲ್ಲಿನ ರಥ. ಗೊತ್ತಾಯಿತೆ? ಹೌದು ಬಳ್ಳಾರಿ ಜಿಲ್ಲೆಯ ವಿಶ್ವ ವಿಖ್ಯಾತ ಪ್ರವಾಸಿ ತಾಣ ಹಂಪಿ 1868 ರ ಸಂದರ್ಭದಲ್ಲಿ.

ಚಿತ್ರಕೃಪೆ: Shyamal

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಹಂಪಿಯ ವಿರೂಪಾಕ್ಷ ದೇವಾಲಯದ ಗೋಪುರ 1923 ರ ಸಮಯದಲ್ಲಿ.

ಚಿತ್ರಕೃಪೆ: wikimedia

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಸಂತ ಅಲೋನಿಸಿಯಸ್ ಕಾಲೇಜು ಮಂಗಳೂರು 1913 ರ ಸಮಯದಲ್ಲಿ.

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ವಿಂಧ್ಯಗಿರಿ ಪರ್ವತ ಹಾಗೂ ದೂರದಿಂದ ಕಾಣುತ್ತಿರುವ ಗೊಮ್ಮಟ ಮೂರ್ತಿ, ಹಾಸನ ಜಿಲ್ಲೆಯ ಶ್ರವಣಬೆಳಗೋಳ.

ಚಿತ್ರಕೃಪೆ: Shyamal

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಮೈಸೂರು ಅರಮನೆ 1897 ಮತ್ತು 1899 ರ ಮಧ್ಯದಲ್ಲಿ.

ಚಿತ್ರಕೃಪೆ: Shyamal

ಮೋಡಿ ಮಾಡುವ ಕಪ್ಪು-ಬಿಳುಪು:

ಮೋಡಿ ಮಾಡುವ ಕಪ್ಪು-ಬಿಳುಪು:

ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ನಂದಿ. 1870 ರ ಸಂದರ್ಭದಲ್ಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X