Search
  • Follow NativePlanet
Share
» »ಹಿಮದ ಮಡಿಲಲ್ಲಿ ಗೋಪಾಲಸ್ವಾಮಿಯ ಆರಾಧನೆ

ಹಿಮದ ಮಡಿಲಲ್ಲಿ ಗೋಪಾಲಸ್ವಾಮಿಯ ಆರಾಧನೆ

ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವತ್ ಗೋಪಾಲಸ್ವಾಮಿ ಬೆಟ್ಟವು ಒಂದು ನಯನಮನೋಹರ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತದೆ

By Divya Pandit

ಬೆಳಗ್ಗೆ ಹೀಗೆ ಹೋಗಿ ಸಂಜೆ ಹಾಗೆ ಮನೆಗೆ ಬರಬೇಕು. ಅಂತಹ ಜಾಗ ಇದ್ರೆ ರವಿವಾರದ ರಜೆ ಸಾರ್ಥಕ ಅಂತ ಹೇಳೋರು ಇಲ್ಲಿಗೆ ಬರಬಹುದು. ಬೆಟ್ಟದ ತುದಿಯಲ್ಲಿ ಇರುವ ಈ ದೇಗುಲದ ಪರಿಸರ ಪ್ರವಾಸಿಗರ ಮನಸ್ಸು ಗೆಲ್ಲದೆ ಇರೊಲ್ಲ.

ಹಿಮವತ್ ಗೋಪಾಲಸ್ವಾಮಿ ದೇಗುಲ

ಗುಂಡ್ಲುಪೇಟೆ ತಾಲೂಕಿನ ಆವೃತ್ತಿಯಲ್ಲಿ ಈ ಹಿಮವತ್ ಗೋಪಾಲಸ್ವಾಮಿ ದೇಗುಲ ಬರುತ್ತದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರ ಇರುವ ಈ ದೇಗುಲ ಸುತ್ತಲೂ ಹಸಿರು ವನದಿಂದ ಕೂಡಿದೆ. ಹೆಸರೇ ಹೇಳುವಂತೆ ಎಂದಿಗೂ ಮಂಜಿನ ಹೊಗೆಯಿಂದ ಆವೃತ್ತವಾಗಿರುತ್ತದೆ.

ಹಿನ್ನೆಲೆ

ಚೋಳರ ಅರಸ ಬಳ್ಳಾಳನ ಕಾಲದ ಈ ದೇವಾಲಯದಲ್ಲಿ ಕೃಷ್ಣನನ್ನು ಆರಧಿಸಲಾಗುತ್ತದೆ. ಚೋಳರ ನಂತರ ಮೈಸೂರು ಒಡೆಯರು ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ.

ದೇಗುಲದ ವಿಚಾರ

ಹೆಸರೇ ಹೇಳುವಂತೆ ಎಲ್ಲಾ ಕಾಲದಲ್ಲೂ ಹಿಮ ಬಿದ್ದಂತೆ ತೋರುವ ಮಂಜಿನ ಹೊಗೆ ಕವಿದಿರುತ್ತದೆ. ಪುರಾತನ ಕಾಲದ ಕೆತ್ತನೆಯನ್ನು ಹೊಂದಿರುವ ಈ ದೇಗುಲದಲ್ಲಿ ಶ್ರೀಕೃಷ್ಣ ನಿಂತಿರುವ ರಚನೆಯಲ್ಲಿದ್ದಾನೆ.

ಹಿಮದ ಮಡಿಲಲ್ಲಿ ಗೋಪಾಲಸ್ವಾಮಿಯ ಆರಾಧನೆ

ಚಿತ್ರಕೃಪೆ: Kannanz

ಸೂಕ್ತ ಜಾಗ

ಸೂರ್ಯೋದಯಕ್ಕೂ ಮುಂಚೆ ಈ ಕ್ಷೇತ್ರಕ್ಕೆ ಬಂದರೆ ಸೂರ್ಯೋದಯದ ಸೌಂದರ್ಯ, ಮಂಜಿನ ತಂಪು, ಹಸಿರು ವನದ ಕಂಪನ್ನು ಸವಿಯಬಹುದು. ಸ್ನೇಹಿತರೊಂದಿಗೆ/ಕುಟುಂಬದವರೊಂದಿಗೆ ಕುಳಿತು ಹರಟೆ ಹೊಡೆಯಬಹುದು. ದೇವರ ದರ್ಶನ ಪಡೆದು ಸಂಜೆಯ ಸೂರ್ಯಾಸ್ತ ನೋಡಿಕೊಂಡೇ ಹೋಗುವಂತಹ ಜಾಗ ಇದು.

ಹಿಮದ ಮಡಿಲಲ್ಲಿ ಗೋಪಾಲಸ್ವಾಮಿಯ ಆರಾಧನೆ

ಚಿತ್ರಕೃಪೆ: Hari Prasad Nadig

ಬೆಟ್ಟದೊಳಗೆ

ಬಂಡೀಪುರ ಉದ್ಯಾನವನ ಇಲ್ಲೇ ಹತ್ತಿರದಲ್ಲಿರುವುದರಿಂದ ಈ ಕಾಡಿನಲ್ಲಿ ಆನೆ, ಜಿಂಕೆಗಳ ಸಂಖ್ಯೆ ಹೆಚ್ಚಾಗಿಯೇ ಇವೆ. ಆಯುರ್ವೇದಕ್ಕೆ ಸಂಬಂಧಿಸಿದ ಮರಗಿಡಗಳು ಇದರೊಳಗಿರುವುದರಿಂದ ಇಲ್ಲಿಂದ ಬೀಸುವ ಗಾಳಿಯೂ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ.

ಹಿಮದ ಮಡಿಲಲ್ಲಿ ಗೋಪಾಲಸ್ವಾಮಿಯ ಆರಾಧನೆ

ಚಿತ್ರಕೃಪೆ: Yathin S Krishnappa

ದೂರದ ವಿಚಾರ

ಬೆಂಗಳೂರಿನಿಂದ 220 ಕಿ.ಮೀ. ದೂರದಲ್ಲಿದ್ದರೆ, ಮೈಸೂರಿನಿಂದ ಹೋಗುವುದಾದರೆ 75 ಕಿ.ಮೀ. ಊಟಿಗೆ ಹೋಗುವ ರಸ್ತೆ ಮಾರ್ಗದಲ್ಲಿಯೇ ಈ ದೇಗುಲ ಸಿಗುತ್ತದೆ.

ಹೀಗೆ ಮಾಡುವಂತಿಲ್ಲ

ಅಲ್ಲಿ ಯಾವುದೇ ಕಾರಣಕ್ಕೂ ಟ್ರೆಕ್ಕಿಂಗ್, ಕಾಡಿನ ಮಧ್ಯೆ ನುಸುಳುವುದು, ಕುಡಿಯುವುದು, ಕಿರುಚಾಡುವುದು, ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದು ನಿಷೇಧ.

ಹಿಮದ ಮಡಿಲಲ್ಲಿ ಗೋಪಾಲಸ್ವಾಮಿಯ ಆರಾಧನೆ

ಚಿತ್ರಕೃಪೆ: Antcbe

ಅವಕಾಶವಿಲ್ಲ

ಬೆಟ್ಟದ ತುದಿಗೆ ಹೋಗಬೇಕೆಂದರೆ ಯಾವುದೇ ಖಾಸಗಿ ವಾಹನಗಳನ್ನು ಬಳಸುವಂತಿಲ್ಲ. ಅಲ್ಲಿ ಇರುವ ವಾಹನ ವ್ಯವಸ್ಥೆಯನ್ನೇ ಬಳಸ ಬೇಕು. ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಟ್ಟದ ತುದಿಗೆ ಹೋಗಬೇಕೆಂದರೆ ಒಬ್ಬರಿಗೆ 20 ರೂ. ಟಿಕೆಟ್ ಪಡೆದರಾಯಿತು. ಬರುವಾಗಲೂ ಅಷ್ಟೆ.

ಎಚ್ಚರಿಕೆ

* ಅಲ್ಲಿರುವ ನಿಯಮವನ್ನು ಯಾವುದನ್ನು ಅಲ್ಲಗಳೆಯಬೇಡಿ.
* ಬೆಳಗ್ಗೆ ಬೇಗ ಹೋದರೆ ಸಿಟಿಯ ಟ್ರಾಫಿಕ್ ನಿಂದ ಮುಕ್ತರಾಗಿ ಹೋಗಬಹುದು. ಜೊತೆಗೆ ಸೂರ್ಯೋದಯದ ಸೊಬಗನ್ನು ನೋಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X