Search
  • Follow NativePlanet
Share
» »ಸತ್ತ ನಂತರ ಮೊತ್ತಮೊದಲು ಈ ಮಂದಿರವನ್ನು ತಲುಪುತ್ತದಂತೆ ಆತ್ಮ !

ಸತ್ತ ನಂತರ ಮೊತ್ತಮೊದಲು ಈ ಮಂದಿರವನ್ನು ತಲುಪುತ್ತದಂತೆ ಆತ್ಮ !

ಯಮರಾಜನ ಒಂದು ವಿಶೇಷ ಮಂದಿರ ಹಿಮಾಚಲದ ಚಂಬಾ ಜಿಲ್ಲೆಯಲ್ಲಿ ಬರ್ಮೋರ್ ಪ್ರದೇಶದಲ್ಲಿದೆ. ಈ ಮಂದಿರ ಮನೆಯ ರೀತಿ ಕಾಣುತ್ತದೆ. ಗ್ರಂಥಗಳ ಅನುಸಾರ ಮನುಷ್ಯರ ಕರ್ಮದ ಫಲವನ್ನು ದೇವರು ಬರೆಯುತ್ತಾನೆ. ಮನುಷ್ಯನ ಮರಣದ ನಂತರ ಯಮದೂತರು ಮನುಷ್ಯನ ಆತ್ಮವನ್ನು ಎಳೆದುಕೊಂಡು ಹೋಗುತ್ತಾರೆ. ಯಮರಾಜ ದಂಢವನ್ನು ನೀಡುತ್ತಾನೆ,

ಧರ್ಮೇಶ್ವರ ಮಹಾದೇವ ದೇವಾಲಯ

ಧರ್ಮೇಶ್ವರ ಮಹಾದೇವ ದೇವಾಲಯ

PC : Varun Shiv Kapur

ಯಮರಾಜನ ಈ ದೇವಾಲಯವನ್ನು ಧರ್ಮೇಶ್ವರ ಮಹದೇವ ದೇವಾಲಯ ಎನ್ನುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ಸಾವನ್ನಪ್ಪಿದ ನಂತರ ಆತ್ಮ ದೇಹದವನ್ನು ಬಿಡುವಾಗ ಅದು ನೇರವಾಗಿ ಧರ್ಮೇಶ್ವರ ಮಹಾದೇವ ದೇವಾಲಯಕ್ಕೆ ಬರುವುದು ಎನ್ನಲಾಗುತ್ತದೆ.

ಖಾಲಿ ಕೋಣೆಯಲ್ಲಿ ಕುಳಿತಿದ್ದಾನೆ ಯಮರಾಜ

ಖಾಲಿ ಕೋಣೆಯಲ್ಲಿ ಕುಳಿತಿದ್ದಾನೆ ಯಮರಾಜ

PC : Varun Shiv Kapur

ಇದೇ ಸ್ಥಳದಲ್ಲಿ ಯಮನು ವ್ಯಕ್ತಿಯ ಕರ್ಮದ ನಿರ್ಧಾರ ಮಾಡುತ್ತಾನೆ. ನೋಡಲು ಒಂದು ಮನೆಯಂತೆ ಕಾಣುತ್ತದೆ. ಇಲ್ಲೊಂದು ಖಾಲಿ ಕೋಣೆ ಇದೆ. ಈ ಕೋಣೆಯಲ್ಲೇ ಯಮರಾಜ ಆಸೀನನಾಗಿರುತ್ತಾನೆ ಎನ್ನಲಾಗುತ್ತದೆ.

ಇಲ್ಲಿ ಇನ್ನೊಂದು ಕೋಣೆ ಇದೆ ಅದನ್ನು ಚಿತ್ರಗುಪ್ತನ ಕೋಣೆ ಎನ್ನಲಾಗುತ್ತದೆ.

ಯಮರಾಜನ ನಿರ್ಧಾರ

ಯಮರಾಜನ ನಿರ್ಧಾರ

PC : Varun Shiv Kapur

ಯಾವುದೇ ವ್ಯಕ್ತಿ ಅಥವಾ ಪ್ರಾಣಿಯ ಮೃತ್ಯುವಾಗುತ್ತದೆಯೋ ಆಗ ಯಮರಾಜರ ಧೂತರು ಆ ವ್ಯಕ್ತಿಯ ಆತ್ಮವನ್ನು ಮೊದಲು ತೆಗೆದುಕೊಂಡು ಈ ದೇವಾಲಯಕ್ಕೆ ಬರುತ್ತಾರಂತೆ. ಮೊದಲಿಗೆ ಚಿತ್ರಗುಪ್ತ ಆ ವ್ಯಕ್ತಿಯ ಎಲ್ಲಾ ಪಾಪಗಳನ್ನು ಓದುತ್ತಾನಂತೆ. ನಂತರ ಮುಂದಿನ ಕೋಣೆಗೆ ಕರೆದುಕೊಂಡು ಹೋಗುತ್ತಾನೆ. ಆ ಕೋಣೆಯನ್ನು ಯಮರಾಜನ ಕಚೇರಿ ಎನ್ನಲಾಗುತ್ತದೆ. ಅಲ್ಲಿ ಯಮರಾಜನು ಆ ವ್ಯಕ್ತಿಯ ಪಾಪಗಳಿಗನುಗುಣವಾಗಿ ಶಿಕ್ಷೆಯನ್ನು ಘೋಷಿಸುತ್ತಾನೆ.

ಈ ಮಂದಿರದಲ್ಲಿದೆ ನಾಲ್ಕು ಅದೃಶ್ಯ ಬಾಗಿಲು

ಈ ಮಂದಿರದಲ್ಲಿದೆ ನಾಲ್ಕು ಅದೃಶ್ಯ ಬಾಗಿಲು

PC : Varun Shiv Kapur

ಈ ಮಂದಿರದಲ್ಲಿ ನಾಲ್ಕು ಅದೃಶ್ಯ ಬಾಗಿಲು ಇದೆ ಎನ್ನಲಾಗಿದೆ. ಅದು ಚಿನ್ನ, ಬೆಳ್ಳಿ, ತಾಮ್ರ ಹಾಗೂ ಕಂಚಿನಿಂದ ಕೂಡಿದ್ದಾಗಿದೆ. ಯಮರಾಜನ ತೀರ್ಪು ಬಂದ ನಂತರ ಆ ವ್ಯಕ್ತಿಯನ್ನು ಅವರ ಕರ್ಮಗಳಿಗೆ ಅನುಸಾರ ಸ್ವರ್ಗ ಅಥವಾ ನರಕಕ್ಕೆ ಇದೇ ಬಾಗಿಲುಗಳ ಮೂಲಕ ಕಳುಹಿಸಲಾಗುವುದು. ಗರುಡಪುರಾಣದಲ್ಲೂ ಯಮರಾಜನ ಆಸ್ಥಾನದ ಬಗ್ಗೆ ನಾಲ್ಕು ದಿಕ್ಕುಗಳ ಉಲ್ಲೇಖ ಮಾಡಲಾಗಿದೆ.

Read more about: himachal temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X