Search
  • Follow NativePlanet
Share
» »ಬಿಹಾರಿನಲ್ಲಿರುವ ಸೀತಾ ಕುಂಡಗೆ ಎಂದಾದರೂ ಭೇಟಿ ಕೊಟ್ಟು ಅದರ ಮಹತ್ವದ ಬಗ್ಗೆ ತಿಳಿದಿರುವಿರಾ?

ಬಿಹಾರಿನಲ್ಲಿರುವ ಸೀತಾ ಕುಂಡಗೆ ಎಂದಾದರೂ ಭೇಟಿ ಕೊಟ್ಟು ಅದರ ಮಹತ್ವದ ಬಗ್ಗೆ ತಿಳಿದಿರುವಿರಾ?

By Manjula Balaraj Tantry

ಜಗತ್ತಿನ ಅತ್ಯಂತ ಪ್ರಾಚೀನ ಸ್ಥಳವೆನಿಸಿರುವ ಹಾಗೂ ಪ್ರವಾಸಿಗರಿಗೆ ಒಂದು ಸೂಕ್ತವಾದ ಸ್ಥಳವೆನಿಸಿರುವ ಸೀತಾಕುಂಡ ಐತಿಹಾಸಿಕ ಹಾಗೂ ಪ್ರಾಚೀನ ಸ್ಥಳಗಳಲ್ಲಿ ಸಮಯ ಕಳೆಯಲು ಬಯಸುವವರಿಗಾಗಿ ಅತ್ಯಂತ ಪರಿಪೂರ್ಣವೆನಿಸಿರುವ ತಾಣವಾಗಿದೆ. ಇದು ಜೈನ ಹಾಗೂ ಬೌದ್ದ ಧರ್ಮಗಳು ಏಳಿಗೆ ಹೊಂದಿದ ಭೂಮಿಯಾಗಿದೆ. ಈ ಭೂಮಿಯು ಅನೇಕ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ನೋಡಿರುವಂತಹ ಸ್ಥಳವಾಗಿದೆ.

ಈ ಐತಿಹಾಸಿಕ ಸ್ಥಳಗಳು ಅನೇಕ ಸಮಯದಿಂದಲೂ ಯಾತ್ರೀ ಸ್ಥಳವಾಗಿದೆ. ಆದುದರಿಂದ ಇಂದು ಇಲ್ಲಿಗೆ ಸಾವಿರಾರು ಯಾತ್ರಾರ್ಥಿಗಳು ಭೇಟಿ ಕೊಡುತ್ತಾರೆ. ಅಂತಹ ಸ್ಥಳಗಳಲ್ಲಿ ಬಿಹಾರಿನ ಒಂದಾಗಿರುವ ಸೀತಾ ಕುಂಡ ಸೀತಾಮರ್ಹಿ ಜಿಲ್ಲೆಯಲ್ಲಿದೆ. ಮತ್ತು ಭಾರತದ ಅತ್ಯಂತ ಪವಿತ್ರವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ.

ತನ್ನ ಇರುವಿಕೆಯನ್ನು ಸಾವಿರಾರು ವರ್ಷಗಳ ಹಿಂದೆಯೇ ಸಾರಿರುವ ಈ ಅದ್ಬುತವಾದ ಸ್ಥಳಕ್ಕೆ ಎಂದಾದರೂ ಭೇಟಿ ನೀಡಿರುವಿರ? ಬಿಹಾರಿನ ಸೀತಾ ಕುಂಡ ನ ಬಗ್ಗೆ ಓದಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ ಮತ್ತು ಹಿಂದು ಯಾತ್ರಿಗಳಲ್ಲಿ ಇದು ಏಕೆ ವಿಶೇಷವಾದುದು ಎಂಬುದನ್ನು ತಿಳಿಯಿರಿ.

1. ಸೀತಾ ಕುಂಡ ಗೆ ಭೇಟಿ ಕೊಡಲು ಉತ್ತಮವಾದ ಸಮಯ

1. ಸೀತಾ ಕುಂಡ ಗೆ ಭೇಟಿ ಕೊಡಲು ಉತ್ತಮವಾದ ಸಮಯ

Ram Wilson

ಸೀತಾಮರ್ಹಿ ತೀವ್ರ ಪ್ರಮಾಣದ ತಾಪಮಾನವನ್ನು ಹೊಂದಿರುತ್ತದೆ ಆದುದರಿಂದ ಇಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇಸಿಗೆಯು ಅತ್ಯಂತ ಬಿಸಿಯಾಗಿರುತ್ತದೆ. ಆದರೂ ಸೀತಾಕುಂಡ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿರುವ ಸ್ಥಳವಾದುದರಿಂದ ಸೀತಾಮರ್ಹಿಯಲ್ಲಿರುವ ಸೀತಾ ಕುಂಡ ಹವಾಗುಣ ಮತ್ತು ಹವಾಮಾನದ ಪರಿಸ್ಥಿತಿಯ ಹೊರತಾಗಿಯೂ ವರ್ಷವಿಡೀ ಅನೇಕ ಪ್ರಯಾಣಿಕರು ಮತ್ತು ಹಿಂದು ಯಾತ್ರಿಗಳು ಭೇಟಿ ಕೊಡುತ್ತಾರೆ.

ಆದುದರಿಂದ ನೀವು ಸೀತಾ ಕುಂಡ ಗೆ ಭೇಟಿ ಕೊಡಲು ಯೋಚಿಸುತ್ತಿದ್ದಲ್ಲಿ ಇದರ ಇತಿಹಾಸದ ಬಗ್ಗೆ ಓದಿ ಮತ್ತು ಸೀತಾ ದೇವಿಯ ಕುರಿತಾದ ದಂತಕಥೆಗಳನ್ನು ಕೇಳಿ ತಿಳಿಯಿರಿ. ಮತ್ತು ನೀವು ವರ್ಷದ ಯಾವುದೇ ಸಮಯದಲ್ಲಿಯೂ ಇಲ್ಲಿಗೆ ಭೇಟಿ ಕೊಡಬಹುದಾಗಿದೆ . ನೀವು ಬಿಸಿಲಿನ ಬೇಗೆಯಿರುವ ಸಮಯದಲ್ಲಿ ಭೇಟಿ ಕೊಡಲು ಇಚ್ಚಿಸದಿದ್ದಲ್ಲಿ, ಸಿತಾಮರ್ಹಿ ಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಕೊನೆಯವರೆಗೆ.

2. ಇದರ ಇತಿಹಾಸ ಮತ್ತು ಇದರ ರಚನೆಯ ಕುರಿತಾದ ಸಣ್ಣ ಮಾಹಿತಿ

2. ಇದರ ಇತಿಹಾಸ ಮತ್ತು ಇದರ ರಚನೆಯ ಕುರಿತಾದ ಸಣ್ಣ ಮಾಹಿತಿ

Mala chaubey

ಸೀತಾಮರ್ಹಿ ಜಿಲ್ಲೆಯಲ್ಲಿರುವ ಸೀತಾ ಕುಂಡ ಹೆಚ್ಚಾಗಿ ಭೇಟಿ ಕೊಡಲ್ಪಡುವ ಧಾರ್ಮಿಕ ಸ್ಥಳಗಳಲ್ಲೊಂದಾಗಿದೆ ಮತ್ತು ಇದು ಸೀತಾ ದೇವಿಯ ಜನ್ಮಸ್ಥಳವೆಂದು ನಂಬಲಾಗುತ್ತದೆ. ಜಾನಕೀ ಮಂದಿರವು ಇದಕ್ಕೆ ಹತ್ತಿರದಲ್ಲಿಯೇ ಇದ್ದು ಇದು ಇಲ್ಲಿಯ ನಿಜವಾದ ಪೂಜೆ ಮಾಡುವ ಸ್ಥಳವಾಗಿದೆ.ಇಲ್ಲಿ ನೀವು ನೂರಾರು ಹಿಂದೂ ಭಕ್ತರು ಪ್ರತೀ ದಿನ ಬಂದು ದೇವಿಗೆ ಅನೇಕ ಪೂಜೆಯನ್ನು ಸಲ್ಲಿಸುವುದನ್ನು ಕಾಣಬಹುದು.

ಇದರ ಇತಿಹಾಸ ಮತ್ತು ಇದರ ರಚನೆಯ ಕುರಿತಾದ ಸಣ್ಣ ಮಾಹಿತಿ

ಇದರ ಇತಿಹಾಸ ಮತ್ತು ಇದರ ರಚನೆಯ ಕುರಿತಾದ ಸಣ್ಣ ಮಾಹಿತಿ

PC: Mala chaubey

ಜಗತ್ತಿನ ಅತ್ಯಂತ ಪ್ರಾಚೀನ ಸ್ಥಳವೆನಿಸಿರುವ ಹಾಗೂ ಪ್ರವಾಸಿಗರಿಗೆ ಒಂದು ಸೂಕ್ತವಾದ ಸ್ಥಳವೆನಿಸಿರುವ ಸೀತಾಕುಂಡ ಐತಿಹಾಸಿಕ ಹಾಗೂ ಪ್ರಾಚೀನ ಸ್ಥಳಗಳಲ್ಲಿ ಸಮಯ ಕಳೆಯಲು ಬಯಸುವವರಿಗಾಗಿ ಅತ್ಯಂತ ಪರಿಪೂರ್ಣವೆನಿಸಿರುವ ತಾಣವಾಗಿದೆ. ಇದು ಜೈನ ಹಾಗೂ ಬೌದ್ದ ಧರ್ಮಗಳು ಏಳಿಗೆ ಹೊಂದಿದ ಭೂಮಿಯಾಗಿದೆ. ಈ ಭೂಮಿಯು ಅನೇಕ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ನೋಡಿರುವಂತಹ ಸ್ಥಳವಾಗಿದೆ.

3. ದಂತಕಥೆ

3. ದಂತಕಥೆ

PC: Mala chaubey

ಸ್ಥಳೀಯ ದಂತಕಥೆಗಳ ಪ್ರಕಾರ, ಈ ದೇವಾಲಯವು ಜಗತ್ತಿನ ಅತ್ಯಂತ ಹಳೇಯ ದೇವಾಲಯಗಳಲ್ಲೊಂದಾಗಿದೆ ಮತ್ತು ಇದನ್ನು ಒಂದೇ ರಾತ್ರಿಯಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಈಗಿರುವ ದೇವಾಲಯದ ಕಟ್ಟಡವು ಕೆಲವು ವರ್ಷಗಳ ಹಿಂದೆ ನಿರ್ಮಿತವಾಗಿದ್ದರೂ ಕೂಡಾ ನೀವು ಸೀತಾ ಕುಂಡ ನ ಪರಿಸರಕ್ಕೆ ಪ್ರವೇಶಿಸಿದ ಕೂಡಲೇ ಇಲ್ಲಿಯ ಆಧ್ಯಾತ್ಮಿಕ ಪರಿಸರದಲ್ಲಿ ನಿಮ್ಮನ್ನು ನೀವು ಕಳೆದುಕೊಳ್ಳುವಿರಿ. ವರ್ಷವಿಡೀ ಈ ಸ್ಥಳವು ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಆದರೂ ನೀವು ಇಲ್ಲಿ ಸಮಾಧಾನವನ್ನು ಕಂಡುಕೊಳ್ಳುವಿರಿ. ಹೀಗಿದೆ ಜಾನಕಿ ದೇವಾಲಯ ಮತ್ತು ಸೀತಾ ಕುಂಡ ನ ಭಕ್ತಿಯುತ ಸೆಳವು.

4. ಸೀತಾಕುಂಡ ನ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ವಿಶೇಷತೆ

4. ಸೀತಾಕುಂಡ ನ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ವಿಶೇಷತೆ

PC: Saisumanth Javvaji

ಸೀತಾಕುಂಡ ನ ಸೌಂದರ್ಯತೆಯು ಅದರ ಸುತ್ತಮುತ್ತಲಿನ ಸುಂದರವಾದ ಪ್ರದೇಶಗಳ ಪರಿಸರದಲ್ಲಿದೆ ಮತ್ತು ಈ ಪರಿಸರವು ಧನಾತ್ಮಕ ಕಂಪನ ಮತ್ತು ಸೌಮ್ಯವಾದ ಧೂಪದ್ರವ್ಯದ ಸುವಾಸನೆಗಳು ಎಲ್ಲೆಲ್ಲೂ ಹರಡಿ ತಮ್ಮ ಕಂಪನ್ನು ಹರಡಿದನ್ನು ಅನುಭವಿಸಬಹುದಾಗಿದೆ.

ನೀವು ಈ ಆಧ್ಯಾತ್ಮಿಕ ಪರಿಸರದಲ್ಲಿ ಕಳೆದು ಹೋಗಿ ಇಲ್ಲಿಯ ಅದ್ಬುತವಾದ ಅನುಭವವನ್ನು ಪ್ರೀತಿಸದೇ ಇರಲು ಸಾಧ್ಯವೆ? ಸೀತಾಮರ್ಹಿಯ ಭೂಮಿಗೆ ನೀವು ಪ್ರವೇಶಿಸುತ್ತಿದ್ದಂತೆಯೇ ನೀವು ಸೀತಾಕುಂಡ ಮತ್ತು ಇನ್ನಿತರ ಧಾರ್ಮಿಕ ಸ್ಥಳಗಳ ಪ್ರಾಮುಖ್ಯತೆಯನ್ನು ಇಲ್ಲಿ ಅನುಭವಿಸಬಹುದಾಗಿದೆ ಈ ಅನುಭವವು ಇಲ್ಲಿಗೆ ಭೇಟಿ ಕೊಡುವವರಿಗೆ ಆಹ್ಲಾದಕರವಾದ ವಾತಾವರಣವನ್ನು ಒದಗಿಸಿಕೊಡುತ್ತದೆ. ಆದುದರಿಂದ ಸೀತಾಮರ್ಹಿಗೆ ಪ್ರವಾಸ ಮಾಡಲು ಈಗ ಯೋಜನೆ ಹಾಕಿ ಮತ್ತು ಇಲ್ಲಿಯ ಸುಂದರವಾದ ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಂಡರೆ ಹೇಗಿರಬಹುದು?

5. ಸೀತಾಕುಂಡ ನ ಹತ್ತಿರದಲ್ಲಿರುವ ಇನ್ನಿತರ ಆಸಕ್ತಿದಾಯಕ ಸ್ಥಳಗಳು

5. ಸೀತಾಕುಂಡ ನ ಹತ್ತಿರದಲ್ಲಿರುವ ಇನ್ನಿತರ ಆಸಕ್ತಿದಾಯಕ ಸ್ಥಳಗಳು

Mala chaubey

ಸೀತಾಕುಂಡ ಮತ್ತು ಅದರ ಹತ್ತಿರದಲ್ಲಿರುವ ಜಾನಕೀ ಮಂದಿರದ ಹೊರತಾಗಿಯೂ ಸೀತಾಮರ್ಹಿ ಜಿಲ್ಲೆಯಲ್ಲಿ ಅನ್ವೇಷಿಸ ಬಹುದಾದ ಅನೇಕ ಸ್ಥಳಗಳಿದ್ದು ಇದಕ್ಕೆ ಭೇಟಿ ಕೊಡಲೇ ಬೇಕಾದುದಾಗಿದೆ. ಈ ಐತಿಹಾಸಿಕ ಸ್ಥಳಗಳಲ್ಲಿ ವಿದೇಹ ರಾಜನಿಂದ ಸ್ಥಾಪಿಸಲಾದ ಪ್ರಾಚೀನ ಹಾಲೇಶ್ವರ್ ಸ್ಥಾನ್ ದೇವಾಲಯ, ಪಂತ್-ಪಕರ್, ಒಂದು ಪ್ರಾಚೀನ ಸ್ಥಳ ಮತ್ತು ಆಲದ ಮರವನ್ನು ಹೊಂದಿರುವ ಪ್ರಾಚೀನ ಸ್ಥಳವಾಗಿದ್ದು ಸೀತಾ ದೇವಿಯು ಮದುವೆಯ ನಂತರ ಅಯೋಧ್ಯೆಗೆ ಹೋಗುವಾಗ ಇದರ ಅಡಿಯಲ್ಲಿ ಅಡಿಯಲ್ಲಿ ವಿಶ್ರಾಂತಿ ಪಡೆದ ಸ್ಥಳವೆಂದು ನಂಬಲಾಗುತ್ತದೆ.

ಬಾಗಹಿ ಮಠ, ಯಜ್ಞಗಳು ಮತ್ತು ಇತರ ಆಚರಣೆಗಳನ್ನು ನಿರ್ವಹಿಸಲು 108 ಕೊಠಡಿಗಳನ್ನು ಹೊಂದಿರುವ ಹಿಂದೂ ಮಠವಾಗಿದೆ ಮತ್ತು ಗೊರಾಲ್ ಶರೀಫ್, ಇದು ಮುಸಲ್ಮಾನರ ಪವಿತ್ರವಾದ ಸ್ಥಳವಾಗಿದೆ. ಇವೆಲ್ಲವನ್ನು ತನ್ನಲ್ಲಿ ಹೊಂದಿರುವ ಸಿತಾಮರ್ಹಿ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ ವುಳ್ಳ ಸ್ಥಳಗಳನ್ನು ಅನ್ವೇಶಿಸಲು ಇಚ್ಚೆಉಳ್ಳವರು ಪ್ರೀತಿಸುವಂತಹ ಸ್ಥಳವಲ್ಲವೆ? ಸೀತಾಮರ್ಹಿಯ ಗಡಿಯ ಹೊರಭಾಗದಲ್ಲಿಯೂ ಕೆಲವು ಸ್ಥಳಗಳ ಅನ್ವೇಷಣೆ ಮಾಡಬಹುದಾಗಿದೆ ಮತ್ತು ಮುಜಾಫ಼ರ್ ಪುರ್ ಮತ್ತು ಶಿಯೋಹರ್ ನಂತಹ ಸ್ಥಳಗಳಿಗೂ ಭೇಟಿ ಕೊಡಿ.

6. ಸೀತಾಮರ್ಹಿ ಯಲ್ಲಿರುವ ಸೀತಾಕುಂಡ ಅನ್ನು ತಲುಪುವುದು ಹೇಗೆ ?

6. ಸೀತಾಮರ್ಹಿ ಯಲ್ಲಿರುವ ಸೀತಾಕುಂಡ ಅನ್ನು ತಲುಪುವುದು ಹೇಗೆ ?

map

ವಾಯುಮಾರ್ಗದ ಮೂಲಕ: ಸೀತಾಮರ್ಹಿಯಲ್ಲಿರುವ ಸೀತಾಕುಂಡ ಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಅದು ಪಾಟ್ನಾದಲ್ಲಿರುವ ವಿಮಾನ ನಿಲ್ದಾಣವಾಗಿದ್ದು ಇದು ಸುಮಾರು 135ಕಿ.ಮೀ ಅಂತರದಲ್ಲಿದೆ. ಇಲ್ಲಿಂದ ನೀವು ಬಸ್ಸು ಅಥವಾ ಬಾಡಿಗೆ ವಾಹನಗಳ ಮೂಲಕ ಸೀತಾಮರ್ಹಿಗೆ ಪ್ರಯಾಣ ಮಾಡಬಹುದಾಗಿದೆ.

ರೈಲು ಮೂಲಕ : ಹತ್ತಿರದ ನಗರಗಳು ಮತ್ತು ಪಟ್ಟಣಗಳಿಂದ ಸಿತಮಾರ್ಹಿ ಜಂಕ್ಷನ್ಗೆ ನೇರ ರೈಲುಗಳು ಲಭ್ಯವಿದೆ. ರೈಲ್ವೇ ನಿಲ್ದಾಣದಿಂದ ನೀವು ಆಟೋ ರಿಕ್ಷಾದ ಮೂಲಕ ಸೀತಾಕುಂಡ ಗೆ ಪ್ರಯಾಣ ಮಾಡಬಹುದಾಗಿದೆ.

ರಸ್ತೆ ಮೂಲಕ : ಸೀತಾಮರ್ಹಿಯ ಸೀತಾಕುಂಡ ನ ಸುತ್ತಲಿರುವ ಪ್ರದೇಶಗಳಿಗೆ ರಸ್ತೆ ಮೂಲಕ ಉತ್ತಮವಾಗಿ ತಲುಪಲು ಸಂಪರ್ಕ ಸೌಲಭ್ಯಗಳಿವೆ. ಆದುದರಿಂದ ನೀವು ನಿಮ್ಮ ಗಮ್ಯಸ್ಥಾನವನ್ನು ರಸ್ತೆ ಮೂಲಕ ಆರಾಮವಾಗಿ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X