Search
  • Follow NativePlanet
Share
» »ಹಟ್ಕೋಟಿ ದುರ್ಗಾ ದೇವಾಲಯವನ್ನೊಮ್ಮೆ ಭೇಟಿ ನೀಡಿ

ಹಟ್ಕೋಟಿ ದುರ್ಗಾ ದೇವಾಲಯವನ್ನೊಮ್ಮೆ ಭೇಟಿ ನೀಡಿ

ಹಿಮಾಚಲ ಪ್ರದೇಶದಲ್ಲಿರುವ ಹಟ್ಕೋಟಿ ಮಂದಿರದ ಬಗ್ಗೆ ಕೇಳಿದ್ದೀರಾ? ಈ ದೇವಾಲಯವು ಮಹೀಷಮರ್ದಿನಿಗೆ ಸೇರಿದ್ದು. ಈ ದೇವಿಯ ಮೂರ್ತಿಯನ್ನು 8 ಬೆಲೆಬಾಳುವ ಲೋಹಗಳಿಂದ ಮಾಡಲಾಗಿದೆ. ಇಂದು ನಾವು ಈ ವಿಶೇಷ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC: Facebook
ಶಿಮ್ಲಾದಿಂದ 97 ಕಿ.ಮೀ ದೂರದಲ್ಲಿರುವ ಹಟ್ಕೋಟಿ ದುರ್ಗಾ ದೇವಾಲಯ ಜುಬ್ಬಲ್‌ನ ಹತ್ಕೋಟಿ ಗ್ರಾಮದಲ್ಲಿವೆ. ಹತ್ಕೋಟಿ ದೇವಾಲಯಗಳು ಜಬ್ಬರ್ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಹಟ್ಕೋಟಿ ಹಿಮಾಚಲ ಪ್ರದೇಶದ ಜನಪ್ರಿಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

ಹೊಸ ವರ್ಷದ ಪಾರ್ಟಿ ಮಾಡೋಕೆ, ನೈಟ್ ಕ್ಯಾಂಪಿಂಗ್ ಮಾಡೋಕೆ ಬೆಸ್ಟ್ ಸೊಮಾಸಿಲ ದ್ವೀಪಹೊಸ ವರ್ಷದ ಪಾರ್ಟಿ ಮಾಡೋಕೆ, ನೈಟ್ ಕ್ಯಾಂಪಿಂಗ್ ಮಾಡೋಕೆ ಬೆಸ್ಟ್ ಸೊಮಾಸಿಲ ದ್ವೀಪ

ರೋಹ್ರು ಬಳಿ ಇದೆ

ರೋಹ್ರು ಬಳಿ ಇದೆ

PC: Facebook
ಹಟ್ಕೋಟಿ ದೇವಸ್ಥಾನವು ಜಬ್ಬಲ್ ತೆಹ್ಸಿಲ್ನ ಭಾಗವಾಗಿದೆ ಮತ್ತು ರೋಹ್ರು ಬಳಿ ಕಣಿವೆಯಲ್ಲಿದೆ. ರೋಹ್ರುಗೆ ಬರುವ ಪ್ರವಾಸಿಗರು ಹತ್ಕೋಟಿಯ ಈ ಕಲ್ಲಿನ ದೇವಸ್ಥಾನಕ್ಕೆ ಹೋಗುತ್ತಾರೆ.

ಮಹೀಷಮರ್ದಿನಿಯ ಹತ್ಕೋಟಿ ದೇವಸ್ಥಾನ

ಮಹೀಷಮರ್ದಿನಿಯ ಹತ್ಕೋಟಿ ದೇವಸ್ಥಾನ

PC: Facebook

ದುರ್ಗಾ ದೇವಿಯ ಅವತಾರವಾದ ಮಹೀಷಮರ್ದಿನಿಯ ಹತ್ಕೋಟಿ ದೇವಸ್ಥಾನ ಇದಾಗಿದೆ. ದೇವಿಯ ಪ್ರತಿಮೆಯು 1.2 m ಎತ್ತರದಲ್ಲಿದೆ ಮತ್ತು ಎಂಟು ಬೆಲೆಬಾಳುವ ಲೋಹಗಳಿಂದ ಮಾಡಲ್ಪಟ್ಟಿದೆ.

ಇಲ್ಲಿ ಪ್ರತಿದಿನ ದೇವರ ಪ್ರಸಾದ ತಿನ್ನಲು ಬರುತ್ತವೆ ತೋಳಗಳು<br /> ಇಲ್ಲಿ ಪ್ರತಿದಿನ ದೇವರ ಪ್ರಸಾದ ತಿನ್ನಲು ಬರುತ್ತವೆ ತೋಳಗಳು

ಸಿಂಹದ ಮೇಲೆ ಸವಾರಿ

ಸಿಂಹದ ಮೇಲೆ ಸವಾರಿ

PC: Facebook
ಈ ವಿಗ್ರಹವು ಹತ್ತು ಕೈಗಳನ್ನು ಹೊಂದಿದ್ದು, ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಸಿಂಹದ ಮೇಲೆ ಸವಾರಿ ಮಾಡುವ ರೀತಿಯಲ್ಲಿದೆ. ವಿಗ್ರಹದ ಎರಡೂ ಬದಿಗಳಲ್ಲಿ ಒಂದು ಶಾಸನವಿದೆ, ಯಾರೂ ಅದನ್ನು ಈ ವರೆಗೂ ಡಿಕೋಡ್ ಮಾಡಲು ಸಾಧ್ಯವಾಗಲಿಲ್ಲ.

ಶಿವನ ಮಂದಿರ

ಶಿವನ ಮಂದಿರ

PC: Facebook
ಇದೇ ಆವರಣದಲ್ಲಿ ಶಿವನಿಗೆ ಸಮರ್ಪಿತವಾದ ಒಂದು ಗುಡಿ ಇದೆ. ಇಲ್ಲಿ ಐದು ಮೂರ್ತಿಗಳು ಇವೆ. ಅವುಗಳು ಮಹಾಭಾರತದ ಪಂಚಪಾಂಡವರಿಗೆ ಸಂಬಂಧಿಸಿದ್ದು.

13 ದ್ವೀಪಗಳನ್ನು ಹೊಂದಿರುವ ಈ ಸುಂದರ ಸರೋವರವನ್ನು ನೋಡಿದ್ದೀರಾ?13 ದ್ವೀಪಗಳನ್ನು ಹೊಂದಿರುವ ಈ ಸುಂದರ ಸರೋವರವನ್ನು ನೋಡಿದ್ದೀರಾ?

ಗುಪ್ತರ ಕಾಲಕ್ಕೆ ಸೇರಿದ್ದು

ಗುಪ್ತರ ಕಾಲಕ್ಕೆ ಸೇರಿದ್ದು

PC: Facebook
ಇತಿಹಾಸದ ಪ್ರಕಾರ ಈ ದೇವಾಲಯವು ೬ ರಿಂದ ೯ ನೇ ಶತಮಾನದಲ್ಲಿ ಗುಪ್ತರ ಕಾಲಕ್ಕೆ ಸೇರಿದ್ದು. ಗುಪ್ತರ ಕಾಲಕ್ಕೆ ಸಂಬಂಧಿಸಿದಂತಹ ಸುಂದರ ಶಿಲ್ಪಕಲಾಕೃತಿಗಳನ್ನು ಇಲ್ಲಿ ಕಾಣಬಹುದು. ದೇವಸ್ಥಾನವು ಗೋಪುರದ ಶೈಲಿಯಲ್ಲಿದೆ. ಇಲ್ಲಿನ ಗೋಡೆಗಳಲ್ಲಿ ಆಗಿನ ಕಾಲದ ಇತಿಹಾಸವನ್ನು ಕಲಾಕೃತಿಗಳಲ್ಲಿ ಕಾಣಬಹದು.

ವಾರ್ಷಿಕ ಉತ್ಸವ

ವಾರ್ಷಿಕ ಉತ್ಸವ

PC: Facebook
ಪ್ರತಿವರ್ಷ ಎಪ್ರಿಲ್ ತಿಂಗಳಲ್ಲಿ ಈ ದೇವಾಲಯದ ವಾರ್ಷಿಕ ಉತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಭಕ್ತರು ದೇವರಿಗೆ ಅಕ್ಕಿ ಹಾಗೂ ಮನೆಯಲ್ಲಿ ಬೆಳೆದ ವಾಲ್‌ನಟ್‌ನ್ನು ಅರ್ಪಿಸುತ್ತಾರೆ. ಈ ದೇವಾಲಯದಲ್ಲಿ ಎಪ್ರಿಲ್‌ನಿಂದ ಅಕ್ಟೋಬರ್ ಮಧ್ಯದಲ್ಲಿ ಭೇಟಿ ನೀಡುವುದು ಸೂಕ್ತ.

ಬರೀ ಎರಡು ದಿನಗಳಲ್ಲಿ ಸುತ್ತಾಡಬಹುದಾದ ಬೆಂಗಳೂರಿನ ಸಮೀಪದ ಪ್ರವಾಸಿ ತಾಣಗಳುಬರೀ ಎರಡು ದಿನಗಳಲ್ಲಿ ಸುತ್ತಾಡಬಹುದಾದ ಬೆಂಗಳೂರಿನ ಸಮೀಪದ ಪ್ರವಾಸಿ ತಾಣಗಳು

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC: Facebook
ಖರಾ ಪಥರ್ ಮುಂಬರುವ ಸ್ಕೀಯಿಂಗ್ ಹಾಟ್ಸ್ಪಾಟ್ ಆಗಿದೆ, ಇದು ಶಿಮ್ಲಾದ ಹ್ಯಾಟ್ಕೋಟಿಗೆ ಹೋಗುವ ಮಾರ್ಗದಲ್ಲಿದೆ. ನೀವು ತೀರ್ಥಯಾತ್ರಾ ಮನೋಭಾವದಲ್ಲಿದ್ದರೆ ಖರಾ ಪಥರ್‌ನಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಗಿರಿ ಗಂಗಾವನ್ನು ಭೇಟಿ ಮಾಡಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Facebook

ಚಕ್ರತಾ, ದಿಯೋಬನ್, ಟಿಯುನಿ ಮತ್ತು ಅರಕೋಟ್ ಮೂಲಕ ಹಾದುಹೋಗುವ ಹಟ್ಕೋಟಿ ಮಾರ್ಗಕ್ಕೆ ಶಿಮ್ಲಾ-ಥಿಯೋಗ್-ಕೋಟ್ಖೈ-ಖಾರ ಪಥರ್-ಹಟ್ಕೋಟಿ-ರೋಹ್ರು ಮೋಟರ್ ರಸ್ತೆ ಅಥವಾ ಡೆಹ್ರಾಡೂನ್ ಮಾರ್ಗವನ್ನು ತೆಗೆದುಕೊಳ್ಳಬಹುದು. ಹಟ್ಕೋಟಿ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಿಂದ 105 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X