ತಿರುಮಲ ತಿರುಪತಿ ದೇವಾಲಯವು ಅತ್ಯಂತ ಅದ್ಭುತವಾದ ದೇವಾಲಯ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ಪ್ರಪಂಚದಾದ್ಯಂತ ಭಕ್ತರು ಭೇಟಿ ನೀಡುತ್ತಾರೆ. ತಿರುಮಲದಲ್ಲಿನ ಆ ಸ್ವಾಮಿಯ ವಿಶೇಷ ಒಂದಲ್ಲ, ಎರಡಲ್ಲ ಆನೇಕ. ಆದರೆ ಕೆಲವು ಬೆಳಕಿಗೆ ಬಂದರೆ ಮತ್ತೆ ಕೆಲವು ರಹಸ್ಯವಾಗಿಯೇ ಉಳಿದಿದೆ. ಆ ಸ್ವಾಮಿ ನೆಲೆಸಿರುವ ಪ್ರತಿಯೊಂದು ಹೆಜ್ಜೆ ಹೆಜ್ಜೆಯು ಅತ್ಯಂತ ಪವಿತ್ರವಾದುದು. ಹಾಗಾಗಿ ಸ್ವಾಮಿಯನ್ನು ಕಾಣಲು ದಿನನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಲೇ ಇರುತ್ತಾರೆ. ಒಂದು ಲೇಖನದಲ್ಲಿ ತಿರುಮಲದಲ್ಲಿ ಒಂದು ಬಂಗಾರ ಬಾವಿಯ ಬಗ್ಗೆ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆದಿರುವಿರಿ.
ಹಾಗಾದರೆ ಬನ್ನಿ ಈ ಲೇಖನದಲ್ಲಿ ತಿರುಮಲದಲ್ಲಿ ಇನ್ನು ಅದ್ಭುತವಾದ ವಿಷಯದ ಬಗ್ಗೆ ಮಾಹಿತಿಯನ್ನು ಪಡೆಯೋಣ. ಅದೆನೂ ಎಂದು ಕೇಳುತ್ತಿದ್ದೀರಾ? ಹಾಗಾದರೆ ಕೇಳಿ. ತಿರುಮಲದಲ್ಲಿ ಒಂದು ಅದ್ಭುತವಾದ ಅಂದರೆ ದಿವ್ಯವಾದ ಔಷಧಿಯನ್ನು ಹೊಂದಿರುವ ಎಲೆಯಿದೆ. ಈ ಎಲೆಯನ್ನು ತಿಂದರೆ ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ. ವಿಶೇಷ ಏನೆಂದರೆ ಈ ಎಲೆಯ ಬಗ್ಗೆ ಒಂದು ಅದ್ಭುತವಾದ ಘಟನೆ ಕೂಡ ಸಂಭವಿಸಿದೆ.
ಆ ಘಟನೆ ಯಾವುದು? ಆ ಎಲೆ ಯಾವುದು? ಆ ಎಲೆಯಲ್ಲಿ ದೈವಿಕ ಶಕ್ತಿ ಹೊಂದಿದೆ ಎಂದು ಏಕೆ ಗುರುತಿಸಲಾಗಿದೆ? ಎಂಬ ಹಲವಾರು ಮಾಹಿತಿಯನ್ನು ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

ತಿರುಮಲದಲ್ಲಿದೆ ಮಹಿಮಾನ್ವಿತವಾದ ಎಲೆ...
ಹತಿರಾಮ ಜೀ ಕ್ರಿ.ಶದಲ್ಲಿ ಉತ್ತರಭಾರತದಿಂದ ತಿರುಮಲಕ್ಕೆ ಬಂದ ಮಹಾನ್ ಭಕ್ತನಾಗಿದ್ದನು. ಈತನು ಸ್ವಾಮಿಯ ಜೊತೆ ದಯಾಂಕಟ್ಟಿ ಆಡುವಷ್ಟು ಸಲಿಗೆಯನ್ನು ಹೊಂದಿದ್ದವರು ಎಂದೇ ಹೇಳಬಹುದು. ಈ ದಯಾಂಕಟ್ಟಿ ಆಡುವ ಸಮಯದಲ್ಲಿ ಸ್ವಾಮಿಯು ಹತಿರಾಮನೊಂದಿಗೆ ಸೋಲನ್ನು ಅನುಭವಿಸಿದನು ಎಂದು ಹೇಳಲಾಗುತ್ತದೆ.

ತಿರುಮಲದಲ್ಲಿದೆ ಮಹಿಮಾನ್ವಿತವಾದ ಎಲೆ...
ಹಾಗಾಗಿಯೇ ಹತಿರಾಮ ದೇವಾಲಯವು ತಿರುಮಲದಲ್ಲಿ ಪ್ರಧಾನವಾದ ಮಠಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಕಥೆಯ ಪ್ರಕಾರ ಈತನ ವಿರುದ್ಧ ಅರ್ಚಕರು ರಾಜರಿಗೆ ಅರೋಪವನ್ನು ಮಾಡಿದರು. ಆತನನ್ನು ಶಿಕ್ಷಿಸುವ ಸಲುವಾಗಿ ಮೊದಲು ರಾಜನು ಒಂದು ಪರೀಕ್ಷೆಯನ್ನು ಇಟ್ಟನು. ಅದೆನೆಂದರೆ ಒಂದು ಬಂಡಿಯಷ್ಟು ಕಬ್ಬುಗಳನ್ನು ಒಂದು ಕೊಠಡಿಯಲ್ಲಿ ಹಾಕಿ ಆತನನ್ನು ಅಲ್ಲಿಯೇ ಇರಿಸಿ ಬೀಗವನ್ನು ಹಾಕಿಸಿದನು.

ತಿರುಮಲದಲ್ಲಿದೆ ಮಹಿಮಾನ್ವಿತವಾದ ಎಲೆ...
ಆ ಕಬ್ಬುಗಳನ್ನು ಒಂದೇ ರಾತ್ರಿಯಲ್ಲಿ ತಿಂದರೆ ವೆಂಕಟೇಶ್ವರನ ಸನ್ನಿಹಿತ ಎಂದು ಅಂಗೀಕಾರ ಮಾಡುತ್ತೇವೆ ಎಂದು ರಾಜ ಹೇಳುತ್ತಾನೆ. ಸ್ವಾಮಿಯು ಆನೆಯ ರೂಪದಲ್ಲಿ ಬಂದು ಎಲ್ಲಾ ಕಬ್ಬುಗಳೆಲ್ಲಾವನ್ನು ತಿಂದು ಹಾಕುತ್ತದೆ. ಅಂದಿನಿಂದ ಬಾಬಾ ಜಿಯನ್ನು ಹತಿರಾಮ ಬಾಲಾಜಿ ಎಂದು ಕರೆಯುತ್ತಾರೆ. ಹತಿರಾಮನಿಂದ ದಯಾಂಕಟ್ಟಿ ಆಡಿ ಸ್ವಾಮಿ ತಿರುಮಲದಲ್ಲಿ ತನ್ನ ಆಸ್ತಿ ಎಲ್ಲಾವೂ ಪಂದ್ಯವಾಗಿ ಇಟ್ಟು ಅಂದಿನಿಂದ ತಿರುಮಲವನ್ನು ಆತನ ವರಾಸತ್ವಕ್ಕೆ ಹೋಯಿತು ಎಂದು ಹೇಳಲಾಗುತ್ತದೆ.

ತಿರುಮಲದಲ್ಲಿದೆ ಮಹಿಮಾನ್ವಿತವಾದ ಎಲೆ...
ಈಸ್ಟ್ ಇಂಡಿಯಾ ಕಂಪನಿಯವರು ದೇವಾಲಯವನ್ನು ನಿರ್ವಹಣೆಯನ್ನು ಕಟಾಚಾರಕ್ಕೆ ನಿರ್ವಹಣೆ ಮಾಡಬಾರದು ಎಂದು ನಿರ್ಣಯಿಸಿದ ನಂತರ, ಆರ್ಕಾಡ್ ಜಿಲ್ಲಾ ಕಲೆಕ್ಟರ್ ತಿರುಮಲದ ನಿರ್ವಹಣೆಯನ್ನು ಹತಿರಾಮಜೀ ಮಠದ ಅಧಿಪತಿಗೆ ನೀಡಿದರು. 1932 ರಲ್ಲಿ ತಿರುಮಲದ ಕಾನೂನು ಅಸ್ತಿತ್ವಕ್ಕೆ ಬಂತು. ಅದಕ್ಕಿಂತ ಮುಂದೆ ಮಂಹತಿಗಳ ಅಧೀನದಲ್ಲಿತ್ತು. ಹತಿರಾಮಜೀ ಮಠಕ್ಕೆ ದೊಡ್ಡ ಸಂಖ್ಯೆಯಲ್ಲಿ ಲಂಬಾಣಿಗಳು ದರ್ಶನ ಮಾಡಿಕೊಳ್ಳಲು ಬರುತ್ತಿದ್ದರು.

ತಿರುಮಲದಲ್ಲಿದೆ ಮಹಿಮಾನ್ವಿತವಾದ ಎಲೆ...
ಹತಿರಾಮ ಜೀ ಲಂಬಾಣಿಗಳು ತಮ್ಮ ಜಾತಿಗೆ ಸೇರಿದವರು ಎಂದು ಹೇಳಿಕೊಳ್ಳುತ್ತಾರೆ. ಹಾಗಾಗಿ ತಿರುಮಲದಲ್ಲಿ ದರ್ಶನವಾದ ತಕ್ಷಣ ಹತಿರಾಮ ಜೀ ಆಶೀರ್ವಾದವನ್ನು ಪಡೆಯಲು ಮಠಕ್ಕೆ ಬರುತ್ತಾರೆ. ಮಠದಲ್ಲಿ ಉಚಿತವಾಗಿ ಲಂಬಾಣಿಗಳಿಗೆ ಉಚಿತ ವ್ಯವಸ್ಥೆ ಮಾಡಿಕೊಡುತ್ತಾರೆ. ಹತಿರಾಮ್ ಜೀಯವರು ಲಡ್ಡುವನ್ನು ಆಹಾರವಾಗಿ ಬಳಸುತ್ತಿದ್ದರು.

ತಿರುಮಲದಲ್ಲಿದೆ ಮಹಿಮಾನ್ವಿತವಾದ ಎಲೆ...
ದಿನನಿತ್ಯವು ಪ್ರಸಾದವಾಗಿ ಲಡ್ಡುವನ್ನು ಪಡೆಯುತ್ತಿದ್ದನಂತೆ. ಒಮ್ಮೆ ಹೀಗೆ ಉಚಿತವಾಗಿ ಪಡೆಯುತ್ತಿರುವುದಕ್ಕೆ ಹತಿರಾಮಜೀಗೆ ಬಾಧೆಯಾಯಿತಂತೆ. ಸಮಯವೆಲ್ಲಾ ಏಕೆ ತಿನ್ನುವ ಕೆಲಸಕ್ಕೆ ವ್ಯರ್ಥ ಮಾಡುತ್ತಿದ್ದೇನೆ ಎಂದು ಅಂದುಕೊಂಡನಂತೆ. ತಿಂಡಿ ತೀರ್ಥವನ್ನು ತ್ಯಜಿಸಿ ತಪಸ್ಸು ಮಾಡಬೇಕು ಎಂದು ವೆಂಕಟೇಶ್ವರ ಸ್ವಾಮಿ ದೇವಾಲಯದಿಂದ ದೂರಕ್ಕೆ ಅಂದರೆ ಪಾಪವಿನಾಶ ಅರಣ್ಯಕ್ಕೆ ತೆರಳಿದನು.

ತಿರುಮಲದಲ್ಲಿದೆ ಮಹಿಮಾನ್ವಿತವಾದ ಎಲೆ...
ಅತ್ಯಂತ ಸಮೀಪದಲ್ಲಿನ ಅರಣ್ಯ ಪ್ರದೇಶದಲ್ಲಿ ಹತಿರಾಮ್ ಬಾಲಾಜಿಯು ತಪಸ್ಸಿಗೆ ಕೂತನು. ಆ ಸಮಯದಲ್ಲಿ ಆತನಿಗೆ ಹೆಚ್ಚು ಹಸಿವಾಯಿತು. ಹಸಿವನ್ನು ತಡೆದುಕೊಳ್ಳಲಾಗದೇ ಎದುರಿಗೆ ಇರುವ ಚಿಕ್ಕ ಮರದ ಎಲೆಗಳನ್ನು ತಿಂದನು. ಆ ಎಲೆಗಳು ಅತ್ಯಂತ ಸಿಹಿಯಾದ್ದರಿಂದ ಹಲವಾರು ಎಲೆಗಳ ಮೂಲಕ ತನ್ನ ಹಸಿವನ್ನು ತೀರಿಸಿಕೊಂಡನಂತೆ.

ತಿರುಮಲದಲ್ಲಿದೆ ಮಹಿಮಾನ್ವಿತವಾದ ಎಲೆ...
ಪಕ್ಕದಲ್ಲಿಯೇ ಇದ್ದ ತೀರ್ಥಕ್ಕೆ ಭೇಟಿ ನೀಡಿ ತನ್ನ ಧಣಿವನ್ನು ತೀರಿಸಿಕೊಂಡನು. ಹಸಿವು ಕಡಿಮೆಯಾದ ನಂತರ ಹತಿರಾಮ್ ಬಾಬಾಗೆ ಭಯವಾಯಿತಂತೆ. ಆ ಎಲೆಗಳಿಂದ ಏನಾದರೂ ಅಪಾಯ ಸಂಭವಿಸಬಹುದೆಂದು ಗಾಬರಿಗೆ ಒಳಗಾದನು. ಆದರೆ ಬಾಬಾ ಜೀಗೆ ಏನೂ ಆಗಲಿಲ್ಲ. ಹೀಗೆ 12 ವರ್ಷಗಳ ಕಾಲ ಬಾಬಾ ಜೀ ತಪಸ್ಸನ್ನು ಆಚರಿಸಿದನಂತೆ. ಹಸಿವಿಗೆ ಆ ಎಲೆಗಳನ್ನೇ ತಿನ್ನುತ್ತಾ ಬಂದನಂತೆ.

ತಿರುಮಲದಲ್ಲಿದೆ ಮಹಿಮಾನ್ವಿತವಾದ ಎಲೆ...
ಅಸಲಿಗೆ ಆ ಎಲೆ ಯಾವುದೆಂದರೆ ಅದನ್ನು " ರಾಮಪತ್ರಿ ಎಲೆ " ಅಥವಾ " ರಾಮಭಂದ್ರಂ ಎಲೆ" ಎಂದು ಕರೆಯುತ್ತಾರೆ. ಆ ಕಾಲದಲ್ಲಿ ಹಲವಾರು ಮರಗಳು ಇದ್ದರೂ ಕೂಡ ಬಾಬಾ ಜೀ ಮಾತ್ರ ಈ ಎಲೆಗಳನ್ನು ತಿನ್ನುವುದಕ್ಕೆ ಆಶ್ಚರ್ಯಕರವಾಗಿದೆ ಅಲ್ಲವೇ? ಇದೆಲ್ಲಾ ಶ್ರೀ ವೆಂಕಟೇಶ್ವರನ ಮಹಿಮೆಯೇ ಆಗಿದೆ ಎಂದು ಪುರಾಣಗಳು ಹೇಳುತ್ತವೆ.

ತಿರುಮಲದಲ್ಲಿದೆ ಮಹಿಮಾನ್ವಿತವಾದ ಎಲೆ...
ಈ ಎಲೆಗಳು ಮುಖ್ಯವಾಗಿ ಭಧ್ರಾಚಲ ಅರಣ್ಯದಲ್ಲಿ ಮಾತ್ರ ವಿರಳವಾಗಿ ಬೆಳೆಯುತ್ತವೆ. ಮತ್ತೇ ಇನ್ನು ಎಲ್ಲಿಯೂ ಕಾಣಿಸುವುದಿಲ್ಲವಂತೆ. ಪಾಪವಿನಾಶದಲ್ಲಿನ ವೇಣುಗೋಪಾಲ ಸ್ವಾಮಿ ದೇವಾಲಯದ ಸಮೀಪದಲ್ಲಿ ಹತಿರಾಮ ಬಾಬಾ ಜೀಯ ಮಠವಿದೆ. ಅಲ್ಲಿಯೇ ಆತನು ತಪಸ್ಸು ಮಾಡಿದನು. ಅಲ್ಲಿ ಆ ಪವಿತ್ರವಾದ ಎಲೆಗಳನ್ನು ನೀಡುತ್ತಾರಂತೆ. ಆ ಎಲೆಗಳು ವಿಶೇಷವಾಗಿ ತುಂಬ ಸಿಹಿಯಾಗಿರುತ್ತದೆ. ಇದನ್ನು ಎಷ್ಟು ಬೇಕಾದರೂ ತಿನ್ನಬಹುದಂತೆ. ಇದು ತಿನ್ನವುದರಿಂದ ಆರೋಗ್ಯದಲ್ಲಿನ ಸಮಸ್ಯೆಗಳು ದೂರವಾಗುತ್ತದೆ.


Click it and Unblock the Notifications
















