» »ವರ್ಷಕ್ಕೆ ಒಮ್ಮೆ ತೆರೆಯುವ ಮಾಹಿಮಾನ್ವಿತ ದೇವಾಲಯ :ಹಾಸನಾಂಭ

ವರ್ಷಕ್ಕೆ ಒಮ್ಮೆ ತೆರೆಯುವ ಮಾಹಿಮಾನ್ವಿತ ದೇವಾಲಯ :ಹಾಸನಾಂಭ

Written By:

ದೇವಾಲಯಗಳಿಗೆ ನಾವು ಆಗಾಗ ತೆರಳುತ್ತಿರುತ್ತೇವೆ. ಏಕೆಂದರೆ ಇದರಿಂದ ನಮಗೆ ಶಾಂತಿ, ನೆಮ್ಮದಿಯನ್ನು ಆ ದೈವವು ನೀಡುತ್ತದೆ ಎಂದು. ದೇವಾಲಯಕ್ಕೆ ಹೋದವರಿಗೆ ದೈವ ಪ್ರಸಾದ ಎಂದು ರುಚಿಯಾದ ಆಹಾರವನ್ನು ನೀಡುವುದು ಸಾಮಾನ್ಯ. ಮುಖ್ಯವಾಗಿ ವೈಷ್ಣವ ದೇವಾಲಯದಲ್ಲಿ. ಪ್ರಸಾದದಲ್ಲಿ ಭಗವಂತನ ಕೃಪೆ ಅಡಗಿರುತ್ತದೆ ಎಂದು ಹಿಂದೂ ಭಕ್ತರು ಬಲವಾಗಿ ನಂಬುತ್ತಾರೆ.

ಈ ವಿಷಯವನ್ನು ಧೃಡವಾಗಿ ನಿರೂಪಿಸುವ ಅದ್ಭುತವಾದ ದೇವಾಲಯವು ನಮ್ಮ ಕರ್ನಾಟಕದ ಹಾಸನ ಜಿಲ್ಲೆಯಲ್ಲಿದೆ. ಆ ಮಹಿಮಾನ್ವಿತವಾದ ದೇವಾಲಯವೇ ಹಾಸನಾಂಭ ದೇವಾಲಯವಾಗಿದೆ. ಬೆಂಗಳೂರಿನಿಂದ ಈ ದೇವಾಲಯಕ್ಕೆ ಸುಮಾರು 185 ಕಿ.ಮೀ ದೂರವಿದೆ. ಸುಮಾರು 3 ಗಂಟೆಗಳ ಕಾಲ ಪ್ರಯಾಣ ಮಾಡುಬೇಕಾಗುತ್ತದೆ.

ಈ ಹಾಸನಾಂಭ ದೇವಾಲಯವನ್ನು ಕ್ರಿ.ಶ 12 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು. ಅತ್ಯಂತ ಪ್ರಾಚೀನವಾದುದು ಎಂದು ಹೇಳಬಹುದಾಗಿದೆ. ಇಲ್ಲಿನ ಗರ್ಭಗುಡಿಯಲ್ಲಿ ಹಾಸನಾಂಭ ಎಂಬ ದೇವತೆಯನ್ನು ಭಕ್ತಿ, ಶ್ರದ್ಧೆಯಿಂದ ಆರಾಧಿಸುತ್ತಾರೆ. ಈ ದೇವಾಲಯವನ್ನು 1 ವರ್ಷಕ್ಕೆ ಮಾತ್ರ ತೆರೆಯುತ್ತಾರೆ.

ಈ ದೇವಾಲಯದ ಮಹಿಮೆ ಅಪಾರವಾಗಿದೆ. ಕರ್ನಾಟಕದಲ್ಲಿನ ಪ್ರತಿಯೊಬ್ಬರು ಈ ತಾಯಿಯ ಮಹಿಮೆಯ ಬಗ್ಗೆ ತಿಳಿಯಲೇಬೇಕು. ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ. ಪ್ರಸ್ತುತ ಲೇಖನದ ಮೂಲಕ ಈ ತಾಯಿಯ ಮಹಿಮೆಯ ಬಗ್ಗೆ ತಿಳಿಯೋಣ.

ವರ್ಷಕೊಮ್ಮೆ

ವರ್ಷಕೊಮ್ಮೆ

ಈ ಹಾಸನಾಂಭ ದೇವಾಲಯವನ್ನು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುತ್ತಾರೆ. ಆ ವಿಶೇಷವಾದ ದಿನ ಯಾವುದು ಎಂದರೇ ದೀಪಾವಳಿ ಹಬ್ಬದಂದು. ದೀಪಾವಳಿ ಹಬ್ಬದ ಸಮಯದಲ್ಲಿ ಒಂದು ದಿನದ ಮಟ್ಟಿಗೆ ಮಾತ್ರ ದೇವಾಲಯವನ್ನು ತೆರೆಯುತ್ತಾರೆ.

ಮುಚ್ಚಿರುತ್ತದೆ

ಮುಚ್ಚಿರುತ್ತದೆ

ದೀಪಾವಳಿ ಹಬ್ಬದಂದು ಮಾತ್ರ ತೆರೆದಿರುವ ಈ ದೇವಾಲಯವು ವರ್ಷವೆಲ್ಲಾ ಮುಚ್ಚಿರುತ್ತದೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯದಲ್ಲಿ ದೀಪ ಬೆಳಗುವುದು. ಇದರಲ್ಲಿ ಏನು ವಿಷೇಶ ಎಂದು ಅಂದುಕೊಳ್ಳುತ್ತಿದ್ದೀರಾ? ಹಾಗಾದರೆ ಓದಿ....

ದೀಪಗಳು

ದೀಪಗಳು

ಇಲ್ಲಿನ ಆಶ್ಚರ್ಯಕರವಾದ ಸಂಗತಿ ಏನೆಂದರೆ ಹಾಸನಂಭ ದೇವಾಲಯ ಗರ್ಭಗುಡಿಯಲ್ಲಿ ದೀಪಾವಳಿ ಹಬ್ಬದ ರಾತ್ರಿಯಂದು ದೀಪಗಳನ್ನು ಬೆಳಗಿ ಅಲ್ಲಿಂದ ಪೂಜಾರಿಗಳು ಹೊರಡುತ್ತಾರೆ.

ಬೆಳಗುವುದು

ಬೆಳಗುವುದು

ದೀಪವನ್ನು ಬೆಳಗಿ ಒಂದು ವರ್ಷಕ್ಕೆ ಸರಿಯಾಗಿ ಅಂದರೆ ಮತ್ತೊಂದು ದೀಪಾವಳಿಯ ದಿನದಂದು ದೇವಾಲಯದ ಗರ್ಭ ಗುಡಿಯ ಬಾಗಿಲನ್ನು ತೆರೆದರೆ ಕಳೆದ ವರ್ಷ ಬೆಳಗಿದ ದೀಪವು ಇನ್ನೂ ಹಾಗೆಯೇ ಬೆಳಗುತ್ತಾ ಇರುತ್ತದೆ.

ಶಕ್ತಿ

ಶಕ್ತಿ

ಎಣ್ಣೆಯಿಂದ ಬೆಳಗಿದ ದೀಪವು ತಾಯಿಯ ಗರ್ಭಗುಡಿಯಲ್ಲಿ ಒಂದು ವರ್ಷಗಳ ಕಾಲ ಬೆಳಗುತ್ತಾ ಇರಲು ಯಾವ ಶಕ್ತಿ ಸಹಾಯ ಮಾಡುತ್ತಿರುವುದು ಎಂಬುದು ಆ ಹಾಸನಾಂಭ ದೇವಿಯೊಬ್ಬಳಿಗೆ ಮಾತ್ರ ಗೊತ್ತ.

ಹಾಸ

ಹಾಸ

ಹಾಸ ಎಂದರೆ ದಕ್ಷಿಣ ಭಾರತದ ಭಾಷೆಯಲ್ಲಿ ಸಾಮಾನ್ಯವಾಗಿ ನಗು ಎಂಬುದೇ ಆಗಿದೆ. ಹಾಗಾಗಿಯೇ ಹಾಸನದಲ್ಲಿ ಹಾಸನಾಂಭ ದೇವಿಯು ಎಂದಿಗೂ ತನ್ನ ನಗುವಿನಿಂದಲೇ ಭಕ್ತರನ್ನು ಆಕರ್ಷಿಸುವ ಪರಾಶಕ್ತಿ ಸ್ವರೂಪಿಣಿಯಾಗಿದ್ದಾಳೆ.

ಭಕ್ತರು

ಭಕ್ತರು

ಈ ಹಾಸನಾಂಭ ತಾಯಿಯನ್ನು ಪೂಜಿಸಿದವರಿಗೆ ಆ ತಾಯಿಯು ಒಳ್ಳೆಯದನ್ನು ಮಾಡಿದರೆ. ನಂಬದವರನ್ನು ಅಷ್ಟೇ ಕ್ರೌರ್ಯವಾಗಿ ಉಗ್ರ ರೂಪ ತಾಳುತ್ತಾಳೆ ಎಂಬುದು ಅಲ್ಲಿನ ಭಕ್ತರ ನಂಬಿಕೆಯಾಗಿದೆ.

ಸ್ಥಳ ಪುರಾಣಗಳ ಪ್ರಕಾರ

ಸ್ಥಳ ಪುರಾಣಗಳ ಪ್ರಕಾರ

ಹಾಸನಾಂಭಳ ಭಕ್ತೆಯನ್ನು ಸದಾ ಅಕೆಯ ಅತ್ತೆಯು ಪೀಡಿಸುತ್ತಿದ್ದಳು. ಅತ್ತೆಯನ್ನು ಈ ತಾಯಿಯು ದೇವಾಲಯದಲ್ಲಿಯೇ ಶಿಲೆಯಾಗಿ ಹೋಗು ಎಂದು ಶಾಪ ನೀಡಿದ್ದಾಳೆ ಎಂಬ ಸ್ಥಳ ಪುರಾಣವಿದೆ.

ಶಿಲೆ

ಶಿಲೆ

ಆಶ್ಚರ್ಯ ಏನಪ್ಪ ಎಂದರೆ ಆ ಶಿಲೆಯು ಸ್ವಲ್ಪ ಸ್ವಲ್ಪವೇ ಸ್ಥಳ ಬದಲಾವಣೆಗೊಳ್ಳುತ್ತಾ ಹಾಸನಾಂಭ ತಾಯಿಯ ಕಡೆ ಹೋಗುತ್ತಿದೆ ಎಂತೆ.

ಕಲಿಯುಗ ಸಮಯದಲ್ಲಿ

ಕಲಿಯುಗ ಸಮಯದಲ್ಲಿ

ಹಾಸನಾಂಬೆಯ ಭಕ್ತೆಗೆ ಹಿಂಸೆಯನ್ನು ನೀಡುತ್ತಿದ್ದ ಅತ್ತೆಯ ಶಿಲೆಗೆ ಮುಕ್ತಿ ಕಲಿಯುಗದ ಅಂತ್ಯದಲ್ಲಿ ಅಂತೆ. ಕಲಿಯುಗ ಅಂತ್ಯದ ಸಮಯದಲ್ಲಿ ಹಾಸನಾಂಭ ತಾಯಿಯ ಸನ್ನಿಧಿಯಲ್ಲಿ ಆಕೆಗೆ ಮುಕ್ತಿ ಲಭಿಸುತ್ತದೆ ಎಂಬುದನ್ನು ಈ ಕ್ಷೇತ್ರದ ಮಾಹಿಮಾನ್ವಿತವಾದ ವೃದ್ಧನ ಮಾತಾಗಿದೆ.

ಕಳ್ಳರು

ಕಳ್ಳರು

ಒಮ್ಮೆ ಹಾಸನಂಭ ದೇವಾಲಯಕ್ಕೆ 4 ಕಳ್ಳರು ಒಳ ಪ್ರವೇಶ ಮಾಡಿದರಂತೆ. ಹಾಸನಂಭ ಧರಿಸಿರುವ ಒಡವೆಗಳನ್ನು ಕದಿಯುವ ಸಲುವಾಗಿ ಪ್ರಯತ್ನಿಸಿದರಂತೆ.

ಕಲ್ಲು

ಕಲ್ಲು

ಇದರಿಂದ ಕೋಪಗೊಂಡ ತಾಯಿಯು ಆ 4 ಕಳ್ಳರನ್ನು ಕಲ್ಲುಗಳಾಗಿ ಹೋಗಿ ಎಂದು ಶಾಪವನ್ನು ನೀಡಿದಳಂತೆ. ಹೀಗಾಗಿ ದೇವಾಲಯದ ಸ್ವಲ್ಪ ದೂರದಲ್ಲಿನ ಕಲ್ಲಪ್ಪ ಎಂಬ ಗುಡಿಯಲ್ಲಿ ಆ ನಾಲ್ಕು ಕಲ್ಲುಗಳು ಕಾಣಿಸುವುದು ವಿಶೇಷವಾಗಿದೆ.

ರೈಲ್ವೆ ನಿಲ್ದಾಣ

ರೈಲ್ವೆ ನಿಲ್ದಾಣ


ಹಾಸನಾಂಭ ದೇವಾಲಯಕ್ಕೆ ಸಮೀಪವಾದ ರೈಲ್ವೆ ನಿಲ್ದಾಣವೆಂದರೆ ಹರಸಿಕೆರೆ ರೈಲ್ವೆ ಸ್ಟೇಷನ್. ಇಲ್ಲಿಂದ 38 ಕಿ.ಮೀ ದೂರದಲ್ಲಿದೆ.

ರಸ್ತೆ ಮಾರ್ಗವಾಗಿ

ರಸ್ತೆ ಮಾರ್ಗವಾಗಿ

ಬೆಂಗಳೂರಿನಿಂದ ಹಾಸನಕ್ಕೆ ನೇರವಾದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಸೌಕರ್ಯವಿದೆ. ಮೈಸೂರಿನಿಂದ 115 ಕಿ.ಮೀ ದೂರ, ಬೆಂಗಳೂರಿನಿಂದ 186 ಕಿ.ಮೀ ದೂರ, ಮಂಗಳೂರಿನಿಂದ 172 ಕಿ.ಮೀ ದೂರದಲ್ಲಿದೆ.

ವಿಮಾನ ನಿಲ್ದಾಣ

ವಿಮಾನ ನಿಲ್ದಾಣ

ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮೈಸೂರು ವಿಮಾನ ನಿಲ್ದಾಣ. ಇಲ್ಲಿಂದ ಹಾಸನಕ್ಕೆ ಸುಮಾರು 136 ಕಿ.ಮೀ ದೂರದಲ್ಲಿದೆ.

Please Wait while comments are loading...