Search
  • Follow NativePlanet
Share
» »ಸತಿಯ ಮೊಣಕೈ ಬಿದ್ದ ಈ ಜಾಗದಲ್ಲಿ ಕಾಲಸರ್ಪ ದೋಷವೂ ನಿವಾರಣೆಯಾಗುತ್ತಂತೆ!

ಸತಿಯ ಮೊಣಕೈ ಬಿದ್ದ ಈ ಜಾಗದಲ್ಲಿ ಕಾಲಸರ್ಪ ದೋಷವೂ ನಿವಾರಣೆಯಾಗುತ್ತಂತೆ!

ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಅನೇಕ ದೊಡ್ಡ ದೊಡ್ಡ ಮಂದಿರಗಳಿವೆ. ಆದರೆ ಸಾಮ್ರಾಟ ವಿಕ್ರಮಾದಿತ್ಯನ ಕುಲದೇವಿಯಾಗಿರುವ ಕಾರಣ ಹರಿಸಿದ್ಧಿ ಮಂದಿರವು ಬಹಳ ಮಹತ್ವಪೂರ್ಣವಾಗಿದೆ. ಸ್ಕಂದಪುರಾಣದಲ್ಲೂ ಈ ಪ್ರಾಚೀನ ಮಂದಿರದ ವರ್ಣನೆ ಮಾಡಲಾಗಿದೆ. ಈ ಮಂದಿರವು ದೇವಿ ಸತಿಯ 51 ಶಕ್ತಿಪೀಠಗಳಲ್ಲಿ 13ನೇ ಶಕ್ತಿಪೀಠ ಎನ್ನಲಾಗಿದೆ. ಇದನ್ನು ಸಿದ್ಧಪೀಠ ಎನ್ನುತ್ತಾರೆ.

ಸತಿಯ ಮೊಣಕೈ ಬಿದ್ದ ಜಾಗ

ಸತಿಯ ಮೊಣಕೈ ಬಿದ್ದ ಜಾಗ

PC: Bernard Gagnon

ದಕ್ಷ ಯಜ್ಞದ ಸಂದರ್ಭ ಶಿವನನ್ನು ಆಮಂತ್ರಿಸದಕ್ಕೆ ಸತಿ ಅಗ್ನಿಗಾಹುತಿಯಾದಾಗ ಶಿವನು ಸತಿಯ ಶವವವನ್ನು ಹೊತ್ತು ಇಡೀ ಬ್ರಹ್ಮಾಂಡ ತಿರುಗಾಡುತ್ತಾನೆ. ಇದನ್ನು ಕಂಡ ವಿಷ್ಣುವು ತನ್ನ ಚಕ್ರದಿಂದ ಸತಿಯ ದೇಹವನ್ನು ತುಂಡರಿಸುತ್ತಾನೆ. ಆವಾಗ ಒಂದೊಂದು ದೇಹದ ಭಾಗವು ಒಂದೊಂದು ಸ್ಥಳದಲ್ಲಿ ಬಿದ್ದಿರುತ್ತದೆ. ಹಾಗೆಯೇ ಸತಿಯ ಮೊಣಕೈ ಹರಿಸಿದ್ಧಿ ಮಂದಿರದ ಜಾಗದಲ್ಲಿ ಬಿದ್ದಿದೆ ಎನ್ನಲಾಗುತ್ತದೆ. ಆದರಿಂದ ಇದನ್ನು ಸಿದ್ಧಪೀಠ ಎನ್ನುತ್ತಾರೆ.

ಹನ್ನೊಂದು ಬಾರಿ ತಲೆ ಕಡಿದ ವಿಕ್ರಮಾದಿತ್ಯ

ಹನ್ನೊಂದು ಬಾರಿ ತಲೆ ಕಡಿದ ವಿಕ್ರಮಾದಿತ್ಯ

PC: Bernard Gagnon

ಇಲ್ಲಿ ರಾಜ ವಿಕ್ರಮಾದಿತ್ಯನು ತಪಸ್ಸುಮಾಡಿ ಹನ್ನೊಂದು ಬಾರಿ ತನ್ನ ತಲೆಯನ್ನು ಕಡಿದು ದೇವಿಗೆ ಅರ್ಪಿಸಿದ್ದನಂತೆ. ಪ್ರತಿಬಾರಿ ತಲೆಕಡಿದಾಗ ತಲೆ ಮತ್ತೆ ಜೋಡುತ್ತಿತ್ತಂತೆ. ಹರಿಸಿದ್ಧಿ ದೇವಿಯನ್ನು ವಿಕ್ರಮಾದಿತ್ಯನು ಗುಜರಾತ್‌ನಿಂದ ತಂದಿದ್ದರಂತೆ. ಹಾಗಾಗಿ ಮಾತೆ ಹರಿಸಿದ್ದಿಯು ಬೆಳಗ್ಗೆ ಗುಜರಾತ್‌ನ ಹರ್‌ಸದ್‌ನಲ್ಲಿರುವ ಹರಿಸಿದ್ಧಿ ಮಂದಿರಕ್ಕೆ ಹೋಗುತ್ತಾಳೆ. ಸಂಜೆ ಆಗುತ್ತಿದ್ದಂತೆ ವಿಶ್ರಾಂತಿಗಾಗಿ ಉಜ್ಜೈನಿಗೆ ಬರುತ್ತಾಳೆ. ಹಾಗಾಗಿ ಉಜ್ಜೈನಿಯಲ್ಲಿ ಸಂಜೆಯ ಆರತಿ ಬಹಳ ಪ್ರಾಮುಖ್ಯವಾಗಿದೆ.

ಸಿದ್ಧಿ ಪ್ರಾಪ್ತಿಯಾಗುತ್ತದೆ

ಸಿದ್ಧಿ ಪ್ರಾಪ್ತಿಯಾಗುತ್ತದೆ

PC: Bernard Gagnon

ಹರಿಸಿದ್ಧಿಯ ಆರಾಧನೆಯಿಂದ ಎಲ್ಲಾ ಪ್ರಕಾರದ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ. ಹಾಗಾಗಿ ಇಲ್ಲಿ ನವರಾತ್ರಿ ದಿನ ತಂತ್ರ ಸಾಧನೆ ಮಾಡಲು ಬರುತ್ತಾರೆ. ಮಂದಿರದ ಮುಖ್ಯದ್ವಾರದ ಎರಡೂ ಬದಿಯಲ್ಲೂ ಬೈರವಿ ಮೂರ್ತಿಯನ್ನು ಕಾಣಬಹುದು. ಗರ್ಭ ಗ್ರಹದಲ್ಲಿ ಮೂರು ಮೂರ್ತಿಗಳಿವೆ. ಎಲ್ಲಕ್ಕಿಂತಲೂ ಮೇಲೆ ಅನ್ನಪೂರ್ಣ, ಮಧ್ಯದಲ್ಲಿ ಹರಿಸಿದ್ಧಿ, ಕೆಳಗೆ ಕಲ್ಕಾ ವಿರಾಜಮಾನರಾಗಿದ್ದರೆ.

ಮರಾಠಿ ಶಾಸನಗಳು

ಮರಾಠಿ ಶಾಸನಗಳು

PC: Bernard Gagnon

ಈ ಮಂದಿರದ ಪುನಃನಿರ್ಮಾಣವನ್ನು ಮರಾಠರ ಆಳ್ವಿಕೆ ಕಾಳದಲ್ಲಿ ನಡೆಸಲಾಗಿತ್ತು. ಹಾಗಾಗಿ ಈ ಮಂದಿರದಲ್ಲಿ ಮರಾಠಿ ಕಲೆಯ ಶಾಸನಗಳನ್ನು, ದೀಪಗಳಿಂದ ಅಲಂಕರಿಸಲ್ಪಟ್ಟಿರುವ ಎರಡು ಕಂಬಗಳನ್ನು ಕಾಣಬಹುದು .

ಕಾಲಸರ್ಪ ದೋಷದಿಂದ ಮುಕ್ತಿ

ಕಾಲಸರ್ಪ ದೋಷದಿಂದ ಮುಕ್ತಿ

PC: Bernard Gagnon

ಹರಿಸಿದ್ಧಿ ದೇವಸ್ಥಾನದ ಗರ್ಭಗುಡಿಯ ಮುಂದೆ 'ಶ್ರೀ ಯಂತ್ರ' ಇದೆ. ಇದು ದೈವಿಕ ಶ್ರೀ ಯಂತ್ರ ಎಂದು ಕರೆಯಲಾಗುತ್ತಿದ್ದು ಇದರ ದರ್ಶನದಿಂದ ಒಳ್ಳೆಯ ಗುಣ ಪಡೆಯಬಹುದು ಎಂದು ಹೇಳಲಾಗುತ್ತದೆ. ದೇವಸ್ಥಾನದ ಪವಿತ್ರ ಆವರಣದಲ್ಲಿ ಶಿವನ ದೇವಸ್ಥಾನವೂ ಇದೆ. ಕಾರ್ಕೋಟೇಶ್ವರ ಮಹಾದೇವ ಎನ್ನಲಾಗುತ್ತದೆ. ಇಲ್ಲಿಗೆ ಬಂದು ಪ್ರಾರ್ಥಿಸಿದರೆ ಕಾಲಸರ್ಪ ದೋಷದಿಂದ ಮುಕ್ತಿ ಸಿಗುತ್ತದೆ ಎನ್ನುವುದು ಜನರ ನಂಬಿಕೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Bernard Gagnon

ದೇಶದ ಯಾವುದೇ ಮೂಲೆಯಿಂದ ವಿಮಾನದ ಮೂಲಕ ಇಂಧೋರದ ಅಥವಾ ಬೋಪಾಲ್‌ ತಲುಪಬೇಕು. ರೈಲು ಅಥವಾ ಬಸ್‌ ಮುಖಾಂತರ ಬರುವುದಾದರೆ ಉಜ್ಜೈನಿಗೆ ಬರಬೇಕು. ಇಲ್ಲಿ ಉಳಿಯಲು ಮಂದಿರದ ಸುತ್ತಮುತ್ತಲು ಅನೇಕ ಧರ್ಮಶಾಲೆಗಳಿವೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+