Search
  • Follow NativePlanet
Share
» » ಈ ಆಶ್ರಮದೊಳಗೆ ಇರುವವರಿಗೆ ಯಾರಿಗೂ ಸಾವಿಲ್ಲವಂತೆ!

ಈ ಆಶ್ರಮದೊಳಗೆ ಇರುವವರಿಗೆ ಯಾರಿಗೂ ಸಾವಿಲ್ಲವಂತೆ!

ಹಿಮಾಲಯದಲ್ಲಿ ಸಾಧು ಸಂತರು ತಪಸ್ಸು ಮಾಡಿ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ ಎನ್ನುವುದನ್ನು ನೀವು ಕೇಳಿರುವಿರಿ. ಆದರೆ ಹಿಮಾಲಯದಲ್ಲಿ ಅಮರರಾಗುವಂತಹ ವರದಾನವೂ ಇದೆ ಎನ್ನುವುದು ನಿಮಗೆ ಗೊತ್ತಾ? ಇದು ಎಲ್ಲರಿಗೂ ಸಿಗೋದಿಲ್ಲ. ಆ ವರವನ್ನು ಪಡೆಯಬೇಕಾದರೆ ನೀವು ಆ ವಿಶೇಷ ಸ್ಥಳಕ್ಕೆ ಹೋಗಬೇಕು. ಅಲ್ಲಿಗೆ ಹೋಗುವುದು ಅಷ್ಟೊಂದು ಸುಲಭವೇನಲ್ಲ.

ರಹಸ್ಯಗಳಡಗಿರುವ ಹಿಮಾಲಯ

ರಹಸ್ಯಗಳಡಗಿರುವ ಹಿಮಾಲಯ

ವಿಶ್ವದ ರಹಸ್ಯಮಯ ಸ್ಥಳಗಳಲ್ಲಿ ಹಿಮಾಲಯವೂ ಒಂದಾಗಿದೆ. ಹಿಮಾಲಯದ ಬೆಟ್ಟಗಳಲ್ಲಿ ಸಾಕಷ್ಟು ರಹಸ್ಯಗಳು ಅಡಗಿವೆ. ಅಡಗಿರುವಂತಹ ರಹಸ್ಯವನ್ನು ಯಾರೂ ಬಗೆಹರಿಸಲು ಸಾಧ್ಯವಾಗಿಲ್ಲ. ಗ್ಯಾನ್‌ಗಂಜ್‌ ಮಠ ಹಿಮಾಲಯದ ಒಂದು ಸಣ್ಣ ಸ್ಥಳವಾಗಿದೆ. ಇಲ್ಲಿ ಜನರು ಅಮರರಾಗಿರುತ್ತಾರೆ ಎನ್ನುತ್ತಾರೆ. ಯಾಕೆಂದರೆ ಇದರೊಳಗಿರುವವರು ಯಾರಿಗೂ ಸಾವಿಲ್ಲ. ಎಲ್ಲರೂ ಅಮರರಾಗಿರುತ್ತಾರೆ.

ತುಳಸಿ ಘಾಟ್‌ನಲ್ಲಿ ಅದೃಷ್ಟವಂತರ ಬೇಡಿಕೆ ಈಡೇರುತ್ತಂತೆ !

ಸಮಯವನ್ನು ನಿಲ್ಲಿಸುವ ಮಹಾತ್ಮರಿದ್ದಾರೆ

ಸಮಯವನ್ನು ನಿಲ್ಲಿಸುವ ಮಹಾತ್ಮರಿದ್ದಾರೆ

ಸಿದ್ಧಪುರುಷರಿಗಷ್ಟೇ ಈ ಸ್ಥಳ ಸಿಗುತ್ತದೆ. ಸಾಧಾರಣ ಮನುಷ್ಯರು ತಲುಪಲು ಸಾಧ್ಯವಾಗೋದಿಲ್ಲ. ಈ ಮಠದಲ್ಲಿ ಸಮಯವನ್ನು ನಿಲ್ಲಿಸುವ ಮಹಾತ್ಮ ತಪಸ್ಸಿನಲ್ಲಿ ಲೀನರಾಗಿರುತ್ತಾರೆ. ಇಲ್ಲಿನ ಸನ್ಯಾಸಿಗಳ ಆಯಸ್ಸು ನಿಂತುಹೋಗುತ್ತದೆ. ಯಾರಿಗೂ ಸಾವಿಲ್ಲ. ಈ ಸ್ಥಳವು ಸೆಟ್‌ಲೈಟ್‌ನಲ್ಲೂ ಕಾಣುವುದಿಲ್ಲ.

ಸಿದ್ಧಾಶ್ರಮ ಆಶ್ರಮ

ಸಿದ್ಧಾಶ್ರಮ ಆಶ್ರಮ

ಹಿಮಾಲಯದ ಮೇಲಿರುವ ಈ ಅದೃಶ್ಯ ಆಶ್ರಮವನ್ನು ಸಿದ್ಧಾಶ್ರಮ ಎನ್ನಲಾಗುತ್ತದೆ. ವಾಲ್ಮೀಖಿ ರಾಮಯಣ, ಮಹಾಭಾರತದಲ್ಲೂ ಗ್ಯಾನ್‌ಗಂಜ್‌ನ್ನು ಉಲ್ಲೇಖಿಸಲಾಗಿದೆ. ಯಾರು ಇದಕ್ಕೆ ಅರ್ಹರಾಗಿದ್ದಾರೋ ಅವರು ಈ ಸ್ಥಳವನ್ನು ಕಂಡುಹಿಡಿಯುತ್ತಾರೆ. ಅನರ್ಹರಿಗೆ ಈ ಸ್ಥಳ ಕಾಣಿಸೋದಿಲ್ಲ.

ಗುಪ್ತ ಸ್ಥಳ

ಗುಪ್ತ ಸ್ಥಳ

ಪ್ರಾಚೀನ ಕಾಲದ ಋಷಿ ಮುನಿಗಳಿಂದ ಹಿಡಿದು ಆಧುನಿಕ ಕಾಲದವರಿಗೂ ಗ್ಯಾನ್‌ಗಂಜ್ ಒಂದು ವಿಶೇಷ ಗುಪ್ತ ಸ್ಥಳವಾಗಿದೆ. ಇದು ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗಿದೆ. ಮಾರ್ಡನ್ ಟೆಕ್‌ನಾಲಜಿಯಿಂದಲೂ ಇದನ್ನು ಕಂಡು ಹಿಡಿಯಲು ಸಾಧ್ಯವಿಲ್ಲ.

ಸಿದ್ಧಯೋಗಿಗಳು ಮಾತ್ರ ಈ ಸ್ಥಳದೊಳಗೆ ಪ್ರವೇಶಿಸುತ್ತಾರೆ. ಸಿದ್ಧಾಶ್ರಮವು ನಮ್ಮ ಜಗತ್ತಿಗಿಂತ ಭಿನ್ನವಾಗಿದೆ. ಅಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ಇವೆ ಎನ್ನಲಾಗುತ್ತದೆ.

ರಾಣಿ ಪದ್ಮಿಣಿ ಆತ್ಮ ಇಂದಿಗೂ ಜೋಹರ್ ಕುಂಡದಲ್ಲಿದೆಯಂತೆ !

ಎಲ್ಲಿದೆ ಈ ಆಶ್ರಮ

ಎಲ್ಲಿದೆ ಈ ಆಶ್ರಮ

ಟಿಬೇಟ್‌ನ ವೆಸ್ಟ್‌ನ್ ರಿಜನಲ್‌ನಿಂದ 16 ಕಿ. ದೂರ ಗ್ಯಾನ್‌ ಆನಂದ್ ಪರಮಹಂಸ 1225 ಇಸವಿಯಲ್ಲಿ ಪುನನವೀಕರಿಸಿದ್ದರು ಎನ್ನಲಾಗುತ್ತದೆ. ಈ ಸ್ಥಳವನ್ನು ಶಾಂಘ್ರೀ ಲಾ ಶಂಬಾಲಾ, ಸಿದ್ದಾಶ್ರಮ ಎಂದು ಕರೆಯಲಾಗುತ್ತದೆ. ಈ ಸ್ಥಳವು ಕೇವಲ ಭಾರತಲ್ಲಿ ಮಾತ್ರವಲ್ಲ ಟಿಬೇಟ್‌ನಲ್ಲೂ ಪ್ರಸಿದ್ಧಿ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X