Search
  • Follow NativePlanet
Share
» »ಗಣರಾಜ್ಯೋತ್ಸವ : ದೆಹಲಿ ರೋಮಾಂಚನ

ಗಣರಾಜ್ಯೋತ್ಸವ : ದೆಹಲಿ ರೋಮಾಂಚನ

By Vijay

ಜನವರಿ 26, ಭಾರತೀಯರಿಗೆ ಎಂದಿಗೂ ಮರೆಯಲಾಗದ ಒಂದು ಅದ್ಭುತ ರಾಷ್ಟ್ರೀಯ ಉತ್ಸವದ ದಿನ. ನಮ್ಮಲ್ಲಿರುವ ಹಲವಾರು ಧರ್ಮಗಳನುಸಾರ ಕಾಲದ ವಿವಿಧ ಸ್ತರಗಳಲ್ಲಿ ಬಗೆಬಗೆಯ ಉತ್ಸವಗಳನ್ನು ಆಚರಿಸುತ್ತೇವೆ. ಇಂತಹ ಉತ್ಸವಗಳು ಕೆಲವು ನಿರ್ದಿಷ್ಟ ಧರ್ಮ ಹಾಗು ಅದರ ಸಮುದಾಯದವರಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಭಾರತೀಯರೆಲ್ಲರೂ ಸೇರಿ, ಜಾತಿ, ಧರ್ಮ, ಪಂಗಡ ಎಂಬ ಅಂಶಗಳಿಂದ ಹೊರಬಂದು ಒಗ್ಗಟ್ಟಾಗಿ, ದೇಶದ ಬಗೆಗಿರುವ ಅನಂತಮಯ ನಿಷ್ಠೆ ಹಾಗು ಪ್ರೀತಿಯನ್ನು ಸಡಗರದಿಂದ ತೋರ್ಪಡಿಸುತ್ತ ಆಚರಿಸುವ ಮೂರು ರಾಷ್ಟ್ರೀಯ ಉತ್ಸವಗಳ ಪೈಕಿ ಗಣರಾಜ್ಯೋತ್ಸವವೂ ಒಂದು.

ಗಣರಾಜ್ಯೋತ್ಸವ ಎಂದರೆ ಮೂಲವಾಗಿ ದೇಶವು ಸಂವಿಧಾನಾತ್ಮಕವಾದುದು, ಪ್ರಜಾತಂತ್ರ ವ್ಯವಸ್ಥೆ ಜಾರಿಗೆ ಬಂದುದಾಗಿದೆ. ಮುಖ್ಯವಾಗಿ ಭಾರತದ ಸಂವಿಧಾನವು ಪರಿಣಾಮಾತ್ಮಕವಾಗಿ ಜಾರಿಗೆ ಬಂದದ್ದು ಜನವರಿ 26, 1950 ರಂದು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, 1930, ಜನವರಿ 26 ರಂದು ಭಾರತವನ್ನು "ಪೂರ್ಣ ಸ್ವರಾಜ್" ಎಂದು ಘೋಷಿಸಿದ್ದರ ಕಾರಣ, ಈ ದಿನಾಂಕವನ್ನೆ ಗಣ್ಯರಾಜ್ಯೋತ್ಸವಕ್ಕಾಗಿ ಆಯ್ಕೆ ಮಾಡಲಾಯಿತು. ದೇಶದ ಎಲ್ಲೆಡೆ ಈ ಉತ್ಸವವನ್ನು ಅತಿ ಸಂಭ್ರಮದಿಂದ ಆಚರಿಸಲಾಗುತ್ತದಾದರೂ ದೆಹಲಿಯಲ್ಲಿ ಕಳೆ ಕಟ್ಟುವ ಈ ಉತ್ಸವ ಕಿರಿಯರಿಂದ ಹಿರಿಯರೆಲ್ಲರೂ ರೋಮಾಂಚನಗೊಂಡು ಹೆಮ್ಮೆಯಿಂದ ಹುಬ್ಬೇರಿಸುವಂತೆ ಮಾಡುತ್ತದೆ.

ಭಾರತವು ಮೊದಲಿನಿಂದಲೂ ಈ ಸಂದರ್ಭದಲ್ಲಿ ಇತರೆ ದೇಶಗಳ ಸರ್ಕಾರದ ಮುಖಸ್ಥರನ್ನು ಗೌರವ ಅತಿಥಿಯನ್ನಾಗಿ ಆಮಂತ್ರಿಸುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದೆ. ದೆಹಲಿಯ ರಾಜ್ಪಥ್ ಮಾರ್ಗವು ಈ ಸಂದರ್ಭದಲ್ಲಿ ಹಲವು ಸಾವಿರದಷ್ಟು ಪ್ರೇಕ್ಷಕರಿಂದ ಕಿಕ್ಕಿರಿದ್ದು ತುಂಬಿರುತ್ತದೆ. ಈ ಉತ್ಸವದ ಮುಖ್ಯ ಆಕರ್ಷಣೆ ಭಾರತೀಯ ಸೈನ್ಯದ ಪಥ ಸಂಚಲನ. ಭೂಸೈನ್ಯ, ವಾಯುಸೈನ್ಯ ಹಾಗು ನೌಕಾ ಸೈನ್ಯಗಳ ಬಲಾ ಬಲ ಪ್ರದರ್ಶನವು ನೆರೆದ ಎಂಥವರಲ್ಲಾದರೂ ಸಂಚಲನ ಮೂಡಿಸದೆ ಇರಲಾರದು. ದೇಶಪ್ರೀತಿಯನ್ನು ಬಡಿದೆಬ್ಬಿಸುವ ಇಂತಹ ಉತ್ಸವದಲ್ಲಿ ಮುಂದೊಮ್ಮೆ ಪಾಲ್ಗೊಳ್ಳಲು ಇಂದೆ ಯೋಜನೆ ಹಾಕಿ.

ಕ್ಷಿಪಣಿ:

ಕ್ಷಿಪಣಿ:

ಭಾರತೀಯ ಸೈನ್ಯದ ಶಕ್ತಿಯನ್ನು ವೃದ್ಧಿಸಿರುವ ಆಧುನಿಕ ಸುಸಜ್ಜಿತ ಕ್ಷಿಪಣಿಗಳು.

ಚಿತ್ರಕೃಪೆ: HaeB

ಸಿಡಿ ಮದ್ದು ಟ್ಯಾಂಕರ್:

ಸಿಡಿ ಮದ್ದು ಟ್ಯಾಂಕರ್:

ಸಮರದಲ್ಲಿ ಎದುರಾಳಿಗಳ ಗುಂಡಿಗೆಯನ್ನು ನಡುಗಿಸುವ ಯುದ್ಧ ಟ್ಯಾಂಕರ್.

ಚಿತ್ರಕೃಪೆ: Chanakyathegreat

ಪಂಜಾಬ್ ರೆಜಿಮೆಂಟ್:

ಪಂಜಾಬ್ ರೆಜಿಮೆಂಟ್:

ಪಥ ಸಂಚಲನದಲ್ಲಿ ನಿರತರಾಗಿರುವ ಭಾರತೀಯ ಸೈನ್ಯದ ಪಂಜಾಬ್ ರೆಜಿಮೆಂಟ್ ಸೈನ್ಯ.

ಚಿತ್ರಕೃಪೆ: Chanakyathegreat

ಭಾರತೀಯ ಸೈನ್ಯ:

ಭಾರತೀಯ ಸೈನ್ಯ:

ಪಥ ಸಂಚಲನದಲ್ಲಿ ತಲ್ಲೀಣರಾಗಿರುವ ಭಾರತೀಯ ಸೈನ್ಯದ ತುಕಡಿ.

ಚಿತ್ರಕೃಪೆ: Robbyrules0510

ಅಗ್ನಿ 5 ಕ್ಷಿಪಣಿ:

ಅಗ್ನಿ 5 ಕ್ಷಿಪಣಿ:

ಭಾರತೀಯ ಶಕ್ತಿಯನ್ನು ಹೆಚ್ಚಿಸಿರುವ ಆಧುನಿಕ ಕ್ಷಿಪಣಿ ಅಗ್ನಿ 5 ರ ನೋಟ.

ಚಿತ್ರಕೃಪೆ: Robbyrules0510

ಯುದ್ಧ ವಿಮಾನ:

ಯುದ್ಧ ವಿಮಾನ:

ಭಾರತೀಯ ವಾಯು ಸೈನ್ಯದ ತೇಜಸ್ ಯುದ್ಧ ವಿಮಾನದ ನೋಟ.

ಚಿತ್ರಕೃಪೆ: KuwarOnline

ಬ್ರಹ್ಮೋಸ್:

ಬ್ರಹ್ಮೋಸ್:

ಎದುರಾಳಿಗಳ ನಿದ್ದೆಗೆಡಿಸಬಲ್ಲ ಬ್ರಹ್ಮೋಸ್ ಕ್ಷಿಪಣಿಗಳ ಉಡಾಯಿಸುವ ಯುದ್ಧ ವಾಹನಗಳು.

ಚಿತ್ರಕೃಪೆ: Chanakyathegreat

ಅರ್ಜುನ್:

ಅರ್ಜುನ್:

ಅರ್ಜುನ್ ಎಂಬ ಹೆಸರಿನ ಆಧುನಿಕ ಸಮರ ಟ್ಯಾಂಕರ್, ಗಣರಾಜ್ಯ್ದಲ್ಲಿ ಪ್ರದರ್ಶನಗೊಂಡ ನೋಟ.

ಚಿತ್ರಕೃಪೆ: Chanakyathegreat

ಪ್ಯಾರಾಚೂಟ್ ರೆಜಿಮೆಂಟ್:

ಪ್ಯಾರಾಚೂಟ್ ರೆಜಿಮೆಂಟ್:

ಭಾರತೀಯ ಸೈನ್ಯದ ಪ್ಯಾರಾಚೂಟ್ ರೆಜಿಮೆಂಟಿನ ಸೈನಿಕರಿಂದ ಅದ್ಭುತ ಪಥಸಂಚಲನ.

ಚಿತ್ರಕೃಪೆ: Chanakyathegreat

ದೆಹಲಿ ಪೊಲೀಸ್:

ದೆಹಲಿ ಪೊಲೀಸ್:

ದೆಹಲಿಯ ಪೊಲೀಸರಿಂದ ಪಥಸಂಚಲನ.

ಚಿತ್ರಕೃಪೆ: Chanakyathegreat

ವಾಯುಸೈನ್ಯ:

ವಾಯುಸೈನ್ಯ:

ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಭಾರತೀಯ ವಾಯು ಸೈನ್ಯದ ಗಂಭೀರ ನಡಿಗೆ.

ಚಿತ್ರಕೃಪೆ: Chanakyathegreat

ಸುಖೋಯ್:

ಸುಖೋಯ್:

ರಷ್ಯಾ ನಿರ್ಮಿತ ಸುಖೋಯ್ 30 ಯುದ್ಧ ವಿಮಾನಗಳ ಅಬ್ಬರದ ಹಾರಾಟ.

ಚಿತ್ರಕೃಪೆ: Chanakyathegreat

ಜಾಗ್ವಾರ್:

ಜಾಗ್ವಾರ್:

ರೋಮಾಂಚನಗೊಳ್ಳುವಂತೆ ಹಾರಾಟ ನಡೆಸುತ್ತಿರುವ ಜಾಗ್ವಾರ್ ಯುದ್ಧ ವಿಮಾನಗಳು.

ಚಿತ್ರಕೃಪೆ: Jeff G

ಅಮೋಘ ಸಾಹಸ:

ಅಮೋಘ ಸಾಹಸ:

ಭಾರತೀಯ ಸೈನ್ಯದ ಡೇರ್ ಡೆವಿಲ್ಸ್ ಖ್ಯಾತಿಯ ಗಡಿ ಭದ್ರತಾ ಸೈನ್ಯದ ಸೈನಿಕರಿಂದ ಬೈಕ್ ಗಳಲ್ಲಿ ಸಾಹಸಮಯ ಸವಾರಿ.

ಚಿತ್ರಕೃಪೆ: Chanakyathegreat

ರೋಮಾಂಚನ:

ರೋಮಾಂಚನ:

ಹುಬ್ಬೇರಿಸುವಂತೆ ಮಾಡುವ ಡೇರ್ ಡೆವಿಲ್ಸ್ ಖ್ಯಾತಿಯ ಗಡಿ ಭದ್ರತಾ ಸೈನ್ಯದ ಸೈನಿಕರಿಂದ ಸಾಹಸಮಯ ಪ್ರದರ್ಶನ.

ಚಿತ್ರಕೃಪೆ: Chanakyathegreat

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X