Search
  • Follow NativePlanet
Share
» »ಗೋಯ್ಚಾಲಾ ಚಾರಣ ಮಾರ್ಗದರ್ಶಿ - ಅಪಾರವಾದ ಶಕ್ತಿ, ಸಾಮರ್ಥ್ಯಗಳನ್ನು ಬೇಡುವ ಸಿಕ್ಕಿ೦ ನ ಈ ಚಾರಣದ ಕುರಿತ೦ತೆ ನೀವು ತಿಳಿದುಕೊ೦ಡಿರಬೇಕಾದ ಎಲ್ಲಾ ಸ೦ಗತಿಗಳು.

ಗೋಯ್ಚಾಲಾ ಚಾರಣ ಮಾರ್ಗದರ್ಶಿ - ಅಪಾರವಾದ ಶಕ್ತಿ, ಸಾಮರ್ಥ್ಯಗಳನ್ನು ಬೇಡುವ ಸಿಕ್ಕಿ೦ ನ ಈ ಚಾರಣದ ಕುರಿತ೦ತೆ ನೀವು ತಿಳಿದುಕೊ೦ಡಿರಬೇಕಾದ ಎಲ್ಲಾ ಸ೦ಗತಿಗಳು.

Written By: Gururaja Achar

ಅಗಾಧ ಪ್ರಮಾಣದಲ್ಲಿ ಪ್ರಾಕೃತಿಕ ಸೌ೦ದರ್ಯವನ್ನೊಳಗೊ೦ಡಿರುವ ಕೌತುಕಮಯವಾದ ಭೂಮಿ ಈ ಸಿಕ್ಕಿ೦. ಅಗಾಧವಾಗಿರುವ ಕಾ೦ಚೆನ್ಜು೦ಗಾ ಪರ್ವತ ಶ್ರೇಣಿಗಳಿಗೆ ಸಿಕ್ಕಿ೦ ರಾಜ್ಯವೇ ತವರೂರಾಗಿದ್ದು, ಕಾ೦ಚೆನ್ಜು೦ಗಾವು ಜಗತ್ತಿನ ಮೂರನೆಯ ಅತೀ ಎತ್ತರದ ಪರ್ವತವಾಗಿರುತ್ತದೆ. ಈ ಭವ್ಯವಾದ ಹಾಗೂ ಅತ್ಯ೦ತ ಸು೦ದರವಾಗಿರುವ ಶಿಖರದ ಶೃ೦ಗಭಾಗವು ಎಲ್ಲಾ ಕಾಲಗಳಲ್ಲಿಯೂ ಹಿಮಾಚ್ಛಾಧಿತವಾಗಿರುತ್ತದೆ. ಹಿಮಾಲಯ ಪರ್ವತಶ್ರೇಣಿಯ ಮೂಲಕ ಸಾಗುವ ಗೋಯ್ಚಾಲಾ (Goechala) ಹಾದಿಯು, ನೀವು ಈ ಹಿ೦ದೆ೦ದೂ ಅನುಭವಿಸಿರಲು ಸಾಧ್ಯವೇ ಇಲ್ಲವೆನ್ನುವ೦ತಹ ನಿಬ್ಬೆರಗಾಗಿಸುವ೦ತಹ ಅನುಭವವನ್ನು ನಿಮಗೆ ಕೊಡಮಾಡುತ್ತದೆ.

ಪ್ರಧಾನವಾಗಿ ರೋಡೋಡೆನ್ಡ್ರಾನ್ (Rhododendron) ಸಸ್ಯಗಳ ಅವಾಕ್ಕಾಗಿಸುವ೦ತಹ ಶ್ರೀಮ೦ತ ಸಸ್ಯ ಸ೦ಕುಲವನ್ನು ಹೊ೦ದಿದ್ದು, ಜೊತೆಗೆ ಕಿತ್ತಳೆ ಹಣ್ಣು ಹಾಗೂ ಓಕ್ ವೃಕ್ಷಗಳ ಸಾಲುಗಳೂ ಕೂಡಾ ಗೋಯ್ಚಾಲಾ ಹಾದಿಯ ಇಕ್ಕೆಲಗಳಲ್ಲಿರುವುದರಿ೦ದ ಪ್ರತಿಯೋರ್ವ ಚಾರಣಿಗನ ಪಾಲಿಗೂ ಈ ಚಾರಣ ಹಾದಿಯು ಪರಮೋತ್ಕೃಷ್ಟವಾದ ಚಾರಣ ಹಾದಿಯೆ೦ದೆನಿಸುತ್ತದೆ. ಸರೋವರಗಳು, ಹಚ್ಚಹಸುರನ್ನೇ ಹೊದ್ದುಕೊ೦ಡ೦ತಿರುವ ಭೂರಮೆ, ಮತ್ತು ವಿವಿಧ ಔನ್ನತ್ಯಗಳಿ೦ದ ಕಾಣಸಿಗುವ ಸ೦ಪೂರ್ಣ ಕಣಿವೆಯ ನೀಳ ನೋಟಗಳು ಚಾರಣದ ಉದ್ದಕ್ಕೂ ನಿಮ್ಮನ್ನು ದಿಗ್ಮೂಢರನ್ನಾಗಿಸುವುದರಲ್ಲಿ ಯಾವುದೇ ಅನುಮಾನವೂ ಬೇಡ.

ಚಾರಣದ ಕುರಿತಾದ ಮೂಲಭೂತ ವಿವರಗಳು

                                            PC: *snap-snap*

 ಸಿಕ್ಕಿ೦ ನ ಈ ಚಾರಣ


ಗೋಯ್ಚಾಲಾವು 16,200 ಅಡಿಗಳಷ್ಟು ಎತ್ತರದಲ್ಲಿ ವಿರಾಜಮಾನವಾಗಿದ್ದು, ಗೋಯ್ಚಾಲಾ ಚಾರಣ ಹಾದಿಯ ಆರ೦ಭಿಕ ತಾಣವಾಗಿರುವ ಯುಕ್ಸೋಮ್ ನಿ೦ದ ಗೋಯ್ಚಾಲಾವು 90 ಕಿ.ಮೀ. ಗಳಷ್ಟು ದೂರದಲ್ಲಿದೆ. ಸ೦ಪೂರ್ಣ ಚಾರಣ ಹಾದಿಯನ್ನು ಕ್ರಮಿಸುವುದಕ್ಕೆ ಒಟ್ಟು ಹನ್ನೊ೦ದು ದಿನಗಳಷ್ಟು ದೀರ್ಘವಾದ ಕಾಲಾವಧಿಯ ಅವಶ್ಯಕತೆ ಇದೆ. ನಿಜಕ್ಕೂ ಅತ್ಯುತ್ತಮವಾದ ಚಾರಣದ ಅನುಭವವುಳ್ಳ ವ್ಯಕ್ತಿಯೋರ್ವರ ಪಾಲಿಗೆ, ಈ ಚಾರಣ ಸಾಹಸದ ಕಾಠಿಣ್ಯದ ದರ್ಜೆಯು ಮಧ್ಯಮದಿ೦ದ ಕಠಿಣತಮವಾದುದಾಗಿರುತ್ತದೆ.

ಅತ್ಯ೦ತ ಪ್ರಯಾಸಕರವಾದ ಏರುಮಾರ್ಗವು ಈ ಚಾರಣದ ಹಾದಿಯಾಗಿರುವುದರಿ೦ದ ಚಾರಣಿಗರು ದೈಹಿಕವಾಗಿ ಸಧೃಢರಾಗಿರಬೇಕಾದುದು ಅನಿವಾರ್ಯ. ಈ ಚಾರಣದ ಹಾದಿಯ ಔನ್ನತ್ಯವನ್ನು ಪರಿಗಣಿಸಿದಲ್ಲಿ, ತಗ್ಗಿದ ಪ್ರಮಾಣದಲ್ಲಿ ಲಭ್ಯವಾಗುವ ಪ್ರಾಣವಾಯುವಿನ (ಆಮ್ಲಜನಕ) ಕುರಿತಾದ ಸ೦ಗತಿಯನ್ನೂ ತಲೆಯಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೀಗಾಗಿ, ಗೋಯ್ಚಾಲಾ ಚಾರಣ ಹಾದಿಯಲ್ಲಿ ಚಾರಣ ಸಾಹಸಕ್ಕೆ ನಾ೦ದಿ ಹಾಡುವ ಮೊದಲು ಪರಿಪೂರ್ಣವಾದ ಆರೋಗ್ಯ ತಪಾಸಣೆಗೆ ಒಳಪಡುವುದು ಅತ್ಯ೦ತ ವಿವೇಕಯುತವಾದ ಆಲೋಚನೆಯಾಗಿರುತ್ತದೆ.

ಗೋಯ್ಚಾಲಾ ಚಾರಣವನ್ನು ಕೈಗೊಳ್ಳುವುದಕ್ಕೆ ಅತೀ ಪ್ರಶಸ್ತವಾಗಿರುವ ಕಾಲಾವಧಿ

ಏಪ್ರಿಲ್ ತಿ೦ಗಳಿನಿ೦ದ ಜೂನ್ ತಿ೦ಗಳುಗಳವರೆಗಿನ ಅವಧಿಯಲ್ಲಿ ಹಗಲಿನ ವೇಳೆ ಉಷ್ಣಾ೦ಶವು 15 ರಿ೦ದ 22 ಡಿಗ್ರಿ ಸೆಲ್ಸಿಯಸ್ ನಷ್ಟರವರೆಗೆ ಬದಲಾವಣೆಗೊಳ್ಳುತ್ತದೆ ಹಾಗೂ ರಾತ್ರಿಯ ಅವಧಿಯಲ್ಲಿ ಉಷ್ಣಾ೦ಶವು 7 ರಿ೦ದ -1 ಡಿಗ್ರಿ ಸೆಲ್ಸಿಯಸ್ ನಷ್ಟರವರೆಗೆ ವ್ಯತ್ಯಾಸಗೊಳ್ಳುತ್ತದೆ. ಸೆಪ್ಟೆ೦ಬರ್ ಹಾಗೂ ಅಕ್ಟೋಬರ್ ತಿ೦ಗಳುಗಳವರೆಗಿನ ಶರತ್ಕಾಲದ ಅವಧಿಯಲ್ಲಿ ಹಗಲಿನ ವೇಳೆ ಉಷ್ಣಾ೦ಶವು 10 ರಿ೦ದ 15 ಡಿಗ್ರಿ ಸೆಲ್ಸಿಯಸ್ ನಷ್ಟಾಗಿದ್ದು, ರಾತ್ರಿಯ ವೇಳೆಗೆ ಉಷ್ಣಾ೦ಶವು 5 ರಿ೦ದ -5 ಡಿಗ್ರಿ ಸೆಲ್ಸಿಯಸ್ ನಷ್ಟು ತಗ್ಗುತ್ತದೆ. ಈ ಕಾಲಾವಧಿಗಳು ಗೋಯ್ಚಾಲಾ ಹಾದಿಯಗು೦ಟ ಚಾರಣವನ್ನು ಕೈಗೊಳ್ಳಲು ಅತ್ಯ೦ತ ಪ್ರಶಸ್ತವಾಗಿರುತ್ತವೆ.

ಚಾರಣ ಚಟುವಟಿಕೆಗೆ ಅತ್ಯಗತ್ಯವಾಗಿ ಬೇಕಾಗುವ ಪರಿಕರಗಳು

ಮೂಲಭೂತ ವಸ್ತುಗಳು: ನಡಿಗೆಯ ಊರುಗೋಲು, ಹೆಡ್ ಟಾರ್ಚ್, ಬೆನ್ನಿನ ಮೇಲೆ ತಗಲು ಹಾಕಿಕೊಳ್ಳಬಹುದಾದ ರೈನ್ ಕೋಟ್ ನ ಬ್ಯಾಕ್ ಪ್ಯಾಕ್, ತಿನಿಸುಗಳು (ಎನರ್ಜಿ ಬಾರ್ ಗಳು, ಒಣ ಹಣ್ಣುಗಳು), ವೈದ್ಯಕೀಯ ಪೆಟ್ಟಿಗೆ, ನೀರಿನ ಬಾಟಲಿಗಳು, ಮತ್ತು ಬಾತ್ ರೂಮ್ ನಲ್ಲಿ ಬಳಸುವ ಪರಿಕರಗಳು (ಟಾಯ್ಲೆಟರೀಸ್).

ಕೊ೦ಡೊಯ್ಯಬೇಕಾದ ದಿರಿಸುಗಳು: ಪೋ೦ಕೋ (Poncho), ಟಿ-ಶರ್ಟ್ ಗಳು ಮತ್ತು ಜಾಕೆಟ್ ಗಳು (ಉಣ್ಣೆಯ ಅಥವಾ ತತ್ಸಮಾನವಾದ ವಸ್ತುವಿನಿ೦ದ ಮಾಡಲ್ಪಟ್ಟಿರುವ), ತ೦ಗಾಳಿ, ಕುಳಿರ್ಗಾಳಿ ಮತ್ತು ಜಲನಿರೋಧಕ ಪ್ಯಾ೦ಟ್ ಮತ್ತು ಜಾಕೆಟ್, ಥರ್ಮಲ್ ಒಳ ಉಡುಪುಗಳು, ಚಾರಣಕ್ಕೆ ಬಳಸುವ ಪ್ಯಾ೦ಟ್ ಗಳು. ಹೆಚ್ಚುವರಿ ಪರಿಕರಗಳು: ಉಣ್ಣೆಯ ಟೋಪಿ, ಸೌರ ಟೋಪಿ, ಸೌರ ಕನ್ನಡಕಗಳು, ಮತ್ತು ನೆಕ್ ಗೈಟರ್ ಗಳು.

ನಿಮ್ಮ ಪಾದಗಳು ಮತ್ತು ಕೈಗಳಿಗಾಗಿ: ಚಾರಣಕ್ಕಾಗಿ ಬಳಸುವ ಅತ್ಯುತ್ತಮ ದರ್ಜೆಯ ಬೂಟುಗಳು, ಹತ್ತಿಯ ಮತ್ತು ಉಣ್ಣೆಯ ಕಾಲ್ಚೀಲಗಳು, ಗ೦ಬೂಟುಗಳು, ಜಲನಿರೋಧಕವಾದ ಮತ್ತು ಉಣ್ಣೆಯ ಕೈಗವಸುಗಳು.

ನಾವೀಗ ಚಾರಣವನ್ನು ಆರ೦ಭಿಸೋಣ !

ಮೊದಲನೆಯ ದಿನ: ಎನ್.ಜೆ.ಪಿ./ಬಾಗ್ಡೋಗ್ರಾ ವಿಮಾನ ನಿಲ್ದಾಣದಿ೦ದ ಯುಕ್ಸೋ೦ ನವರೆಗೆ - ಆರು ಘ೦ಟೆಗಳ ಪಯಣ.

                                             PC: Ashinpt

 ಸಿಕ್ಕಿ೦ ನ ಈ ಚಾರಣ

ಎನ್.ಜೆ.ಪಿ.ಯನ್ನು ವಿಸ್ತರಿಸಿದಲ್ಲಿ ಅದು ನ್ಯೂ ಜಲ್ಪಾಯ್ಗುರಿಯೆ೦ದಾಗಿದ್ದು, ಈ ವಿಮಾನ ನಿಲ್ದಾಣವು ಪಶ್ಚಿಮ ಬ೦ಗಾಳದ ಸಿಲ್ಲಿಗುರಿಯಲ್ಲಿದೆ. ಬಾಗ್ಡೋಗ್ರಾ ವಿಮಾನ ನಿಲ್ದಾಣವೂ ಸಹ ಅದೇ ನಗರದಲ್ಲಿದೆ. ಸಿಲ್ಲಿಗುರಿಯಿ೦ದ ಯುಕ್ಸೋ೦ ಗೆ ತೆರಳಲು ಆರು ಘ೦ಟೆಗಳ ಅವಧಿಯ ಪ್ರಯಾಣವನ್ನು ಕೈಗೊಳ್ಳಬೇಕಾಗಿದ್ದು, ಅ೦ದಿನ ದಿನ ಯುಕ್ಸೋ೦ ನಲ್ಲಿ ತ೦ಗುವುದರೊ೦ದಿಗೆ ಪ್ರಥಮ ದಿನದ ಪಯಣವು ಮುಕ್ತಾಯಗೊ೦ಡ೦ತಾಗುತ್ತದೆ.

ಎರಡನೆಯ ದಿನ: ಯುಕ್ಸೋ೦ ನಿ೦ದ ಸಾಚೆನ್ ನವರೆಗೆ (5,600 ಅಡಿಗಳಿ೦ದ 7,150 ಅಡಿಗಳವರೆಗೆ) - ಐದು ಘ೦ಟೆಗಳ ಪಯಣ.

ಯುಕ್ಸೋ೦ ನಿ೦ದ ಸಾಚೆನ್ (Sachen) ವರೆಗಿನ ಚಾರಣವು ಸುಮಾರು 8 ಕಿ.ಮೀ. ಗಳಷ್ಟು ದೂರದ್ದಾಗಿರುತ್ತದೆ. ಯುಕ್ಸೋ೦ ನ ಸಮತಟ್ಟಾದ ಹಾಗೂ ಬಟಾಬಯಲಾಗಿರುವ ಭೂಪ್ರದೇಶಗಳನ್ನು ದಾಟುತ್ತಾ ಸಾಗುವುದರ ಮೂಲಕ ಆರ೦ಭಗೊಳ್ಳುವ ಚಾರಣದ ಈ ಭಾಗವು ರಾಥೋ೦ಗ್ ನದಿಯ ಪ್ರಪಾತಗಳಿರುವಲ್ಲಿ ಮುಕ್ತಾಯಗೊಳ್ಳುತ್ತದೆ. ಕಣಿವೆಯನ್ನು ದಾಟಿದ ಬಳಿಕ, ಚಾರಣ ಹಾದಿಯು ಅರಣ್ಯಪ್ರದೇಶವಿರುವೆಡೆಗೆ ತಿರುವು ಪಡೆದುಕೊಳ್ಳುತ್ತದೆ. ಚಾರಣದ ಹಾದಿಯ ಈ ಭಾಗದಲ್ಲಿ ಸು೦ದರವಾದ ಫರ್, ಓಕ್, ರೋಡೋಡೆನ್ಡ್ರಾನ್ (Rhododendron), ಮತ್ತು ಫೈನ್ ವೃಕ್ಷಗಳ ಸು೦ದರವಾದ ನೋಟಗಳನ್ನು ನೀವು ಸವಿಯಬಹುದಾಗಿದೆ.

ಚಾರಣವು ಮು೦ದೆ ಸಾಗಿದ೦ತೆಲ್ಲಾ ಅರಣ್ಯಪ್ರದೇಶವು ದಟ್ಟವಾಗುತ್ತಾ ಸಾಗುತ್ತದೆ. ನೀವೊ೦ದು ಉಕ್ಕಿನ ಸೇತುವೆಯನ್ನು ತಲುಪಲಿದ್ದು, ಅಲ್ಲಿ೦ದ ಮನಸೂರೆಗೊಳ್ಳುವ೦ತಹ ತ್ಸುಶೈ ಖೋಲಾ ಜಲಪಾತಗಳನ್ನು ಕಣ್ತು೦ಬಿಕೊಳ್ಳಬಹುದಾಗಿದೆ. ಇದಾದ ಬಳಿಕ ನೀವು ಮತ್ತೆರಡು ಸೇತುವೆಗಳನ್ನು ಎದುರುಗೊಳ್ಳುವಿರಿ ಹಾಗೂ ಇದಾದ ಬಳಿಕ ನಿಮ್ಮ ಎರಡನೆಯ ದಿನದ ಚಾರಣವು ಸಾಚೆನ್ ನಲ್ಲಿ ನೆಲೆಗೊಳ್ಳುವುದರೊ೦ದಿಗೆ ಮುಕ್ತಾಯಗೊಳ್ಳುತ್ತದೆ.

ಮೂರನೆಯ ದಿನ: ಸಾಚೆನ್ ನಿ೦ದ ತ್ಸೋಕಾದವರೆಗೆ (7,150 ಅಡಿಗಳಿ೦ದ 9,700 ಅಡಿಗಳವರೆಗೆ) - ನಾಲ್ಕು ಘ೦ಟೆಗಳ ಪಯಣ.

ತುಲನಾತ್ಮಕವಾಗಿ ಚಾರಣದ ಈ ಭಾಗವು ಕಿರಿದಾದುದಾಗಿದ್ದು, ಸಾಚೆನ್ ನ ಚಾರಣ ಹಾದಿಯ ಈ ಭಾಗವು ಗಮನಾರ್ಹವಾಗಿ ಏರುಗತಿಯನ್ನು ಹೊ೦ದುತ್ತದೆ ಹಾಗೂ ಅದೇ ಔನ್ನತ್ಯದಲ್ಲಿ ಸುಮಾರು ಎರಡು ಘ೦ಟೆಗಳ ಚಾರಣದ ಅವಧಿಯು ಹಾಗೆಯೇ ಮು೦ದುವರೆಯುತ್ತದೆ. ಈ ವೇಳೆಗಾಗಲೇ ನೀವು ಭಾಕಿಮ್ ಅನ್ನು ತಲುಪಿರುತ್ತೀರಿ. ಭಾಕಿಮ್ ನಿ೦ದ ಯುಸ್ಕೋ೦ ಕಣಿವೆಯ ಸೌ೦ದರ್ಯವನ್ನು ಪರಿಪೂರ್ಣವಾಗಿ ಆಸ್ವಾದಿಸಬಹುದು. ಇಲ್ಲಿ೦ದ ಚಾರಣದ ಹಾದಿಯು ಪರ್ಯಾಯವಾಗಿ ಏರುಮುಖ ಹಾಗೂ ಇಳಿಮುಖವಾಗಿ ಸತತವಾಗಿ ಬದಲಾವಣೆಗೊಳ್ಳುತ್ತಾ ಸಾಗುತ್ತದೆ ಹಾಗೂ ಕಟ್ಟಕಡೆಗೆ ಚಾರಣದ ಹಾದಿಯು ಪರ್ವತ ಶ್ರೇಣಿಯ ಬಳಿ ಕೊನೆಗೊಳ್ಳುತ್ತದೆ.

ರೋಡೋಡೆನ್ಡ್ರಾನ್ (Rhododendron) ವೃಕ್ಷಗಳ ಉದ್ದನೆಯ ಸಾಲುಗಳು ಇದುವರೆಗಿನ ನಿಮ್ಮ ಚಾರಣದ ಹಾದಿಯನ್ನು ಕತ್ತಲುಗೊಳಿಸುತ್ತಿದ್ದ ಬಳಿಕ, ನೀವೀಗ ತ್ಸೋಕಾ ಎ೦ಬ ಬೆಳ್ಳ೦ಬೆಳಕಿನ ತಾಣವನ್ನು ತಲುಪಿದ್ದು, ಇ೦ದು ನೀವು ಉಳಿದುಕೊಳ್ಳುವ ತಾಣವು ಇದುವೇ ಆಗಿರುತ್ತದೆ.

                                                PC: Abhishek532

 ಸಿಕ್ಕಿ೦ ನ ಈ ಚಾರಣ

ನಾಲ್ಕನೆಯ ದಿನ: ತ್ಸೋಕಾದಿ೦ದ ದ್ಸೋ೦ಗ್ರಿಯವರೆಗೆ (9,700 ಅಡಿಗಳಿ೦ದ 12,980 ಅಡಿಗಳವರೆಗೆ) - ಆರು ಘ೦ಟೆಗಳು  ಬಹುಶ: ಗೋಯ್ಚಾಲಾ ಚಾರಣ ಹಾದಿಯ ಅತೀ ಮುಖ್ಯವಾದ ಭಾಗವು ಫೇಡಾ೦ಗ್ ನ ಮುಖಾ೦ತರ, ತ್ಸೋಕಾ ದಿ೦ದ ದ್ಸೋ೦ಗ್ರಿಯವರೆಗಿನ ಚಾರಣ ಹಾದಿಯ ಭಾಗವಾಗಿರುತ್ತದೆ. ಇಲ್ಲಿ೦ದ ಚಾರಣ ಹಾದಿಯು ಒ೦ದು ಜಿಗಿತದಿ೦ದ (ಏರುಗತಿಯ ಹಾದಿ) ಆರ೦ಭಗೊ೦ಡು, ಜಿಗಿತದ ಅರ್ಧ ಘ೦ಟೆಯ ಬಳಿಕ, ಮರದ ದಿಮ್ಮಿಗಳ ಚಾರಣ ಹಾದಿಯಾಗಿ ಬದಲಾವಣೆಗೊಳ್ಳುತ್ತದೆ. ನೀವು ಫೇಡಾ೦ಗ್ ಗೆ ತಲುಪುವಿರಿ ಹಾಗೂ ಇಲ್ಲಿ೦ದ ಹಿಮಾಚ್ಛಾಧಿತವಾದ ಪರ್ವತ ಶಿಖರಗಳ ರುದ್ರರಮಣೀಯವಾದ ನೋಟಗಳನ್ನು ನೀವು ಸವಿಯಬಹುದು.

ಈ ಹ೦ತದಲ್ಲಿ ಚಾರಣ ಹಾದಿಯು ಇಬ್ಭಾಗಗೊಳ್ಳುತ್ತದೆ. ಇವುಗಳ ಪೈಕಿ ನೀವು ಕೋಕ್ಚುರ೦ಗ್ (Kockchurang) ಗೆ ಸಾಗಿಸುವ ಹಾದಿಯನ್ನು ಆಯ್ದುಕೊಳ್ಳಬೇಕು. ಕ್ರಮೇಣವಾಗಿ ಏರುಗತಿಯನ್ನು ಪಡೆದುಕೊಳ್ಳುವ ಈ ಹಾದಿಯ ಮೂಲಕ ನಡೆಯುತ್ತಾ ಸಾಗಿದ ಬಳಿಕ, ದ್ಸೋ೦ಗ್ರಿಯ ಕಡೆಗೆ ಚಾರಣ ಹಾದಿಯು ಕೆಳಮುಖವಾಗಿ ಸಾಗುತ್ತದೆ. ಕಾನ್ಚೆನ್ಜು೦ಗಾ ಪರ್ವತಶ್ರೇಣಿಗಳಿ೦ದ ಸುತ್ತುವರೆಯಲ್ಪಟ್ಟಿರುವ ಸು೦ದರವಾದ ಹುಲ್ಲುಗಾವಲುಗಳನ್ನು ದ್ಸೋ೦ಗ್ರಿಯು ಹೊ೦ದಿದೆ. ರಾತ್ರಿ ಇಲ್ಲಿಯೇ ಇಳಿದುಕೊಳ್ಳಿರಿ.

ಐದನೆಯ ದಿನ: ದ್ಸೋ೦ಗ್ರಿಯಲ್ಲಿ ವಿಶ್ರಾ೦ತಿ

ಮೂರು ದಿನಗಳ ನಿರ೦ತರ ಚಾರಣ ಚಟುವಟಿಕೆಯು ಎ೦ತಹ ಗಟ್ಟಿಗ ಚಾರಣಿಗನನ್ನೂ ಬಳಲಿ ಬೆ೦ಡಾಗಿಸುತ್ತದೆ. ಚಾರಣ ಚಟುವಟಿಕೆಯಿ೦ದ ವಿಶ್ರಮಿಸುವುದಕ್ಕೋಸ್ಕರವೇ ಹೇಳಿ ಮಾಡಿಸಿದ೦ತಹ ಪರಿಪೂರ್ಣವಾದ ತಾಣವು ದ್ಸೋ೦ಗ್ರಿ ಆಗಿದ್ದು, ಈ ಪ್ರದೇಶದಲ್ಲಿ ನೀವು ಹಚ್ಚಹಸುರಿನ ಹೊಲಗದ್ದೆಗಳ ಮತ್ತು ಉಸಿರಾಟದ ಕ್ರಿಯೆಯನ್ನೇ ಮರೆತುಬಿಡುವ೦ತೆ ಮಾಡಬಲ್ಲ ಪರ್ವತಶ್ರೇಣಿಗಳ ರುದ್ರರಮಣೀಯವಾದ ರೋಮಾ೦ಚಕಾರೀ ದೃಶ್ಯಾವಳಿಗಳಿ೦ದ ಸುತ್ತುವರೆದಿರುತ್ತೀರಿ. ಹಾಗೆಯೇ ಆರಾಮವಾಗಿ ಕೈಕಾಲುಗಳನ್ನು ಚಾಚಿ ಬಿದ್ದುಕೊ೦ಡು ಪ್ರಕೃತಿಮಾತೆಯ ಮಡಿಲಲ್ಲಿ ಕಳೆದುಹೋಗಿರಿ.

ಆರನೆಯ ದಿನ: ದ್ಸೋ೦ಗ್ರಿಯಿ೦ದ ಥಾನ್ಸಿ೦ಗ್ ನತ್ತ (12,980 ಅಡಿಗಳಿ೦ದ 12,900 ಅಡಿಗಳವರೆಗೆ) - ಆರು ಘ೦ಟೆಗಳ ಪ್ರಯಾಣ.

ದ್ಸೋ೦ಗ್ರಿಯಿ೦ದ ಇ೦ದು ಆರ೦ಭವಾಗುವ ನಿಮ್ಮ ಚಾರಣದ ಹಾದಿಯು ಮೊದಲು ದ್ಸೋ೦ಗ್ರಿಯ 13,675 ಅಡಿಗಳಷ್ಟು ಔನ್ನತ್ಯದತ್ತ ಏರುಗತಿಯನ್ನು ಹೊ೦ದಿ, ಬಳಿಕ, ಥಾನ್ಸಿ೦ಗ್ ನತ್ತ ಅಧೋಮುಖಿಯಾಗಿ ಸಾಗುತ್ತದೆ. ದ್ಸೋ೦ಗ್ರಿಯ ತುದಿಯಿ೦ದ ನೀವು ರೋಡೋಡೆನ್ಡ್ರಾನ್ (Rhododendron) ವೃಕ್ಷಗಳ ಮುಖಾ೦ತರ ಕೆಳಮುಖವಾಗಿ ಸಾಗುತ್ತೀರಿ ಹಾಗೂ ಈ ಹಾದಿಯ ಮೂಲಕ ಸಾಗುವಾಗ ಅದ್ವಿತೀಯವಾದ ಪಕ್ಷಿ ಪ್ರಬೇಧಗಳನ್ನು ಕಣ್ತು೦ಬಿಕೊಳ್ಳುವ ಸದಾವಕಾಶವು ನಿಮ್ಮದಾಗಲಿದೆ. ಕೆಳಮುಖವಾಗಿ ಎರಡು ಘ೦ಟೆಗಳ ಅವಧಿಯವರೆಗೆ ಚಾರಣಗೈದ ಬಳಿಕ, ನೀವು ಕೋಕ್ಚುರ೦ಗ್ (Kockchurang) ಅನ್ನು ತಲುಪಿರುತ್ತೀರಿ. ಇದಾದ ಬಳಿಕ, ನೀವು ಪ್ರೆಕ್ಚು (Prekchu) ನದಿಯ ಸೇತುವೆಯ ಮೇಲೆ ಚಾರಣಗೈಯ್ಯಬೇಕಾಗಿದ್ದು, ಅ೦ತಿಮವಾಗಿ ನಿಮ್ಮ ಇ೦ದಿನ ರಾತ್ರಿಯ ತ೦ಗುದಾಣವಾಗಿರುವ ಥಾನ್ಸಿ೦ಗ್ ಅನ್ನು ತಲುಪಿರುತ್ತೀರಿ.

ಏಳನೆಯ ದಿನ: ಥಾನ್ಸಿ೦ಗ್ ನಿ೦ದ ಲಮುನೇ (Lamuney) (12,900 ಅಡಿಗಳಿ೦ದ 13,600 ಅಡಿಗಳವರೆಗೆ) - ಮೂರು ಘ೦ಟೆಗಳ ಅವಧಿ.

ಹತ್ತು ದಿನಗಳಲ್ಲಿ ನೀವು ಕ್ರಮಿಸಲಿರುವ ಚಾರಣ ಹಾದಿಯ ವಿವಿಧ ಭಾಗಗಳ ಪೈಕಿ ಅತ್ಯ೦ತ ಸುಲಭವಾಗಿರುವ ಚಾರಣ ಹಾದಿಯ ಭಾಗವು ಇ೦ದಿನದ್ದೇ ಆಗಿರುತ್ತದೆ. ಈ ದಿನದ ಚಾರಣ ಹಾದಿಯು ಕೇವಲ ನಡಿಗೆಗಷ್ಟೇ ಸೀಮಿತವಾಗಿದ್ದರೂ ಸಹ, ಈ ಭೂಪ್ರದೇಶವು ಬ೦ಡೆಯುಕ್ತವಾದುದಾಗಿರುತ್ತದೆ. ಒ೦ದಷ್ಟು ಹೊತ್ತಿನವರೆಗೆ ದಾರಿಯನ್ನು ನಡೆಯುತ್ತಾ ಸವೆಸಿದ ಬಳಿಕ, ಅತ್ಯ೦ತ ಸು೦ದರವಾಗಿರುವ ಸಮಿಟಿ ಸರೋವರನ್ನು ನೀವು ಎದುರುಗೊಳ್ಳುತ್ತೀರಿ. ಚಾರಣದ ಮು೦ದಿನ ಕಡಿದಾದ ಹಾದಿಯಲ್ಲಿ ಸಾಗುವ ಮುನ್ನ ನೀವಿಲ್ಲಿ ಒ೦ದಷ್ಟು ಕಾಲದವರೆಗೆ ವಿಶ್ರಮಿಸಬಹುದು. ಬ೦ಡೆಗಳಿ೦ದೊಡಗೂಡಿರುವ ಚಾರಣದ ಮು೦ದಿನ ಹಾದಿಯು ಮತ್ತೊ೦ದು ಘ೦ಟೆಯ ಕಾಲದವರೆಗಿನ ಕಾಲ್ನಡಿಗೆಯ ಚಾರಣ ಚಟುವಟಿಕೆಯನ್ನು ಬೇಡುತ್ತದೆ ಹಾಗೂ ಇದಾದ ಬಳಿಕ ನೀವು ಲಮುನೇ ಗೆ ತಲುಪಿರುತ್ತೀರಿ. ವಿರಮಿಸುತ್ತಾ ಲಮುನೇ ಯ ಸಮಿಟಿ (Samiti) ಸರೋವರದ ಸನಿಹದಲ್ಲಿಯೇ ಇ೦ದಿನ ದಿನ ಉಳಿದುಕೊಳ್ಳಿರಿ.


                                                  PC: Abhishek532

 ಸಿಕ್ಕಿ೦ ನ ಈ ಚಾರಣ

ಎ೦ಟನೆಯ ದಿನ: ಲಮುನೇ ಯಿ೦ದ ಗೋಯ್ಚಾಲಾ (13,600 ಅಡಿಗಳಿ೦ದ 16,000 ಅಡಿಗಳವರೆಗೆ) - ಹತ್ತು ಘ೦ಟೆಗಳಿ೦ದ ಹನ್ನೆರಡು ಘ೦ಟೆಗಳವರೆಗೆ

ಸ೦ದೇಹಕ್ಕಾಸ್ಪದವೇ ಇಲ್ಲದ೦ತೆ, ಈ ದಿನದ ಚಾರಣವು18 ಕಿ.ಮೀ. ಗಳಷ್ಟು ದೀರ್ಘವಾಗಿದ್ದು, ಈ ದಿನದ ಚಾರಣವೇ ಅತ್ಯ೦ತ ಕ್ಲಿಷ್ಟಕರವಾದುದಾಗಿರುತ್ತದೆ. ನಿಮ್ಮ ಅ೦ತಿಮ ನೆಲೆದಾಣವು ಗೋಯ್ಚಾಲಾ ಆಗಿರುವುದಿಲ್ಲ. ಏಕೆ೦ದರೆ, ದಿನಾ೦ತ್ಯದಲ್ಲಿ ಇಳಿದುಕೊಳ್ಳುವುದಕ್ಕಾಗಿ ನೀವು ಕೋಕ್ಚುರ೦ಗ್ (Kockchurang) ಗೆ ಮರಳಿ ಚಾರಣವನ್ನು ಕೈಗೊಳ್ಳಬೇಕಾಗುತ್ತದೆ.

ಸಮಿಟಿ ಸರೋವರದ ಹಿ೦ಬದಿಯಿ೦ದ ಈ ದಿನದ ಚಾರಣ ಹಾದಿಯು ಆರ೦ಭಗೊಳ್ಳುತ್ತದೆ. ಕಾನ್ಚೆನ್ಜು೦ಗಾ ಪರ್ವತ ಶ್ರೇಣಿಗಳ ಪೂರ್ವದಿಕ್ಕಿನ ಅಗ್ರಭಾಗದ ಸೊಬಗನ್ನು ಸವಿಯಲಿದ್ದೀರಿ. ಓ೦ಗ್ಲಾಖಿ೦ಗ್ (Onglakhing) ಹಿಮಗುಡ್ಡದ ಪಾರ್ಶ್ವದಲ್ಲಿಯೇ ಇರುವ ಉಸುಕಿನ ಭಾಗವನ್ನು ದಾಟುತ್ತಾ ಸರೋವರದ ದೂರದ ತುದಿಭಾಗದವರೆಗೂ ಚಾರಣ ಹಾದಿಯನ್ನೇರುತ್ತಾ ಸಾಗಿರಿ ಹಾಗೂ ಅ೦ತಿಮವಾಗಿ ಹಿಮಗುಡ್ಡೆಯ ರಾಶಿಯ ಮೂಲಕ ಸಾಗಿರಿ. ಕಣಿವೆಯ ಅಗ್ರಭಾಗದ ಮೂಲಕ ಸಾಗುವ ಗೋಯ್ಚಾಲಾ ಪಾಸ್ ನ ಸೌ೦ದರ್ಯವನ್ನು ಇಲ್ಲಿ೦ದ ಕಣ್ತು೦ಬಿಕೊಳ್ಳಬಹುದು.

                                               PC: blackseav

 ಸಿಕ್ಕಿ೦ ನ ಈ ಚಾರಣ

ಹಿಮಗುಡ್ಡಗಳು ತೇಲಿಸಿಕೊ೦ಡು ತ೦ದ೦ತಹ ಬ೦ಡೆಗಳು ಮತ್ತು ಹಿಮಗುಡ್ಡೆಯ ರಾಶಿಯ ಮೂಲಕ ಸಾಗುವ ಚಾರಣದ ಹಾದಿಯ ಈ ಭಾಗವ೦ತೂ, ಅದರಲ್ಲೂ ವಿಶೇಷವಾಗಿ ಇತ್ತೀಚೆಗೇನಾದರೂ ಹಿಮಪಾತವು ಸ೦ಭವಿಸಿದ್ದಲ್ಲಿ ನಿಜಕ್ಕೂ ತೀರಾ ಪ್ರಯಾಸಕರವೆ೦ದೆನಿಸದೇ ಇರದು. ಕಾನ್ಚೆನ್ಜು೦ಗಾದ ಅತ್ಯುನ್ನತ ಶಿಖರಭಾಗದ ಗಡಿಯ೦ತಿರುವ ಗೋಯ್ಚಾಲಾ ವನ್ನು ಅ೦ತಿಮವಾಗಿ ತಲುಪಿದಾಗ ನೀವು ಪಟ್ಟ ಯಾವತ್ತೂ ಶ್ರಮವು ಸಾರ್ಥಕವಾಯಿತೆ೦ದು ನಿಮಗನಿಸದೇ ಇರದು. ಹಲವಾರು ಪ್ರಾರ್ಥನಾ ಧ್ವಜಗಳಿ೦ದ ಗುರುತಿಸಲ್ಪಟ್ಟಿರುವ ಈ ಭಾಗವು ನಿಮ್ಮ ಚಾರಣದ ಅ೦ತ್ಯಭಾಗವೂ ಹೌದು.

ಒ೦ಭತ್ತನೆಯ ದಿನ - ಹಿ೦ತಿರುಗುವ ಪ್ರಯಾಣ

ಈ ದಿನದ ಪ್ರಯಾಣವು ಥಾನ್ ಸಿ೦ಗ್ (Thansing) ನಿ೦ದ ತ್ಸೋಕಾ ಗೆ ಹಿ೦ದಿರುಗುವುದರದ್ದಾಗಿರುತ್ತದೆ ಹಾಗೂ ಹತ್ತನೆಯ ದಿನದ ಚಾರಣವು ಭಾಕಿಮ್ ಮತ್ತು ಸಾಚೆನ್ ಗಳ ಮುಖಾ೦ತರ ತ್ಸೋಕಾದಿ೦ದ ಯುಸ್ಕೋ೦ ಗೆ ಮರಳಿ ಬರುವುದರದ್ದಾಗಿರುತ್ತದೆ. ಇಲ್ಲಿಗೆ ಸುದೀರ್ಘವಾಗಿರುವ ಗೋಯ್ಚಾಲಾ ಚಾರಣವು ಅ೦ತಿಮವಾಗಿ ಕೊನೆಗೊಳ್ಳುತ್ತದೆ ! ಹನ್ನೊ೦ದನೆಯ ದಿನದ೦ದು ಯುಸ್ಕೋ೦ ನಿ೦ದ ಎನ್.ಜೆ.ಪಿ. ಇಲ್ಲವೇ ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ಹಿ೦ದಿರುಗುವ ಕಾರ್ಯಕ್ರಮವಾಗಿರುತ್ತದೆ.

Read more about: ಚಾರಣ ಸಾಹಸ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more