Search
  • Follow NativePlanet
Share
» »ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನ ಲೋಕ್ಟಕ್ ಸರೋವರದ ಬಗೆಗಿನ ಆವಿಷ್ಕಾರ

ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನ ಲೋಕ್ಟಕ್ ಸರೋವರದ ಬಗೆಗಿನ ಆವಿಷ್ಕಾರ

By Manjula Balaraj Tantry

ಮಣಿಪುರವು ಹಿಂದಿನ ಕಾಲದಿಂಲೂ ಪರಿಸರ ಸಂರಕ್ಷಿತವಾಗಿರುವ ರಾಜ್ಯವೆಂದು ಹೇಳಲಾಗುತ್ತದೆ. ಸುಂದರವಾದ ಪರಿಸರವನ್ನು ಸುತ್ತಮುತ್ತಲೂ ಹೊಂದಿದ್ದು ತೇಲಾಡುವ ಸರೋವರವನ್ನು ಒಳಗೊಂಡಿರುವ ಲೊಕ್ಟಾಕ್ ಸರೋವರವು ಜಗತ್ತಿನಾದ್ಯಂತ ಪ್ರಸಿದ್ದಿಯನ್ನು ಪಡೆದಿದೆ.

ಮಣಿಪುರದ ಮೊಯಿರಾಂಗ್ ಜಿಲ್ಲೆಯಲ್ಲಿರುವ ಲೋಕ್ಟಾಕ್ ಸರೋವರವು ಜಗತ್ತಿನಾದ್ಯಂತದ ಪ್ರವಾಸಿಗರನ್ನು ,ವನ್ಯಜೀವಿ ಉತ್ಸಾಹಿಗಳನ್ನು,ಮತ್ತು ಸಂರಕ್ಷಕರನ್ನು ಆಕರ್ಷಿಸುತ್ತದೆ. ಲೋಕ್ಟಾಕ್ ಸರೋವರವು ಜಗತ್ತಿನ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನವಾದ ಕೈಬುಲ್ ಲಾಮ್ಜೋ ರಾಷ್ಟ್ರೀಯ ಉದ್ಯಾನವನವನ್ನು ಹೊಂದಿದೆ ಇದು ಬ್ರೋ ಆಂಟಿಲರ್ಡ್ ಜಿಂಕೆ ಅಥವಾ ಸಾಂಗೈ ಜಿಂಕೆಗಳ ವಾಸಸ್ಥಾನವಾಗಿದೆ. ಇದು ಮಣಿಪುರ ರಾಜ್ಯದ ರಾಜ್ಯ ಪ್ರಾಣಿಯಾಗಿದೆ.

ಇದನ್ನೂ ಓದಿ ಸಾಂಗೈ ಉತ್ಸವ, ಮಣಿಪುರದ ಸಾಂಸ್ಕೃತಿಕ ಉತ್ಸವ

ರಾಷ್ಟ್ರೀಯ ಉದ್ಯಾನವನಗಳ ಜೊತೆಗೆ ಲೋಕ್ಟಾಕ್ ಸರೋವರವು ಏಕೈಕ ತೇಲುವ ಶಾಲೆ ಮತ್ತು ತೇಲುವ ರೆಸಾರ್ಟ್ ಗಳಿಗೆ ನೆಲೆಯಾಗಿದೆ. ಇದು ಸರಕಾರದಿಂದ ನಿರ್ಮಿಸಲಾಗಿದೆ ಆದುದರಿಂದ ಪರಿಸರ ಪ್ರವಾಸೋದ್ಯಮದ ಪ್ರಮುಖ ಅಡಿಪಾಯವನ್ನು ಇಲ್ಲಿ ರಕ್ಷಿಸಲಾಗುತ್ತದೆ.

ಈ ಇಡೀ ಸ್ಥಳವು ಇದರ ಸಂರಕ್ಷಿತವಾದ ಸುಂದರ ಪರಿಸರ ವಿಜ್ನಾನವನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ ಅಲ್ಲದೆ ಇದರ ಶಾಂತಯುತವಾದ ಮತ್ತು ನಯನ ಮನೋಹರ ದೃಶ್ಯಾವಳಿಗಳಿಂದಾಗಿಯೂ ಕೂಡಾ ಹೆಸರುವಾಸಿಯಾಗಿದೆ.

ಲೋಕ್ಟಾಕ ಸರೋವರವನ್ನು ಭೇಟಿ ಕೊಡಲು ಸೂಕ್ತ ಸಮಯ

ಲೋಕ್ಟಾಕ ಸರೋವರವನ್ನು ಭೇಟಿ ಕೊಡಲು ಸೂಕ್ತ ಸಮಯ

PC: Sudiptorana

ಮಣಿಪುರವು ಆಹ್ಲಾದಕರವಾದ ಹವಾಗುಣವನ್ನು ಜೋರಾದ ಮಳೆಯ ಜೊತೆಗೆ ವರ್ಷದಲ್ಲಿ ಅನುಭವಿಸುತ್ತದೆ, ಇಲ್ಲಿ ತಾಪಮಾನವು ವರ್ಷಪೂರ್ತಿ ಹೆಚ್ಚು ಕಡಿಮೆ 20-25 ಡಿಗ್ರಿಗಳವರೆಗೆ ಬದಲಾಗುತ್ತಾ ಇರುತ್ತದೆ. ಆದುದರಿಂದ ಇಲ್ಲಿಗೆ ವರ್ಷದ ಯಾವುದೇ ಸಮಯದಲ್ಲಿಯೂ ಭೇಟಿ ಕೊಡಬಹುದಾಗಿದೆ. ಆದರೂ ಚಳಿಗಾಲದಲ್ಲಿ ಇಲ್ಲಿಯ ಬೆಟ್ಟಗಳಲ್ಲಿ ಹೆಚ್ಚು ಚಳಿ ಇರುವುದರಿಂದ ಭೇಟಿ ಕೊಡುವ ವೇಳೆ ಸೂಕ್ತವಾದ ಬಟ್ಟೆಗಳನ್ನು ಒಯ್ಯಲೇ ಬೇಕಾಗುತ್ತದೆ.

ಲೋಕ್ಟಾಕ್ ಸರೋವರವನ್ನು ತಲುಪುವ ಬಗೆ

ಲೋಕ್ಟಾಕ್ ಸರೋವರವನ್ನು ತಲುಪುವ ಬಗೆ

PC: Rajkumar

ಮಣಿಪುರದ ಮೊಯಿರಾಂಗ್ ನ ಸಮೀಪದಲ್ಲಿರುವ ಲೋಕ್ಟಾಕ್ ಸರೋವರಕ್ಕೆ ಸಾರ್ವಜನಿಕ ಮತ್ತು ಖಾಸಗಿ ಪ್ರಯಾಣ ವ್ಯವಸ್ಥೆಯು ನೇರವಾಗಿ ಈ ತಾಣಕ್ಕೆ ಇರುತ್ತದೆ

ವಾಯು ಮಾರ್ಗ: ಇಂಪಾಲ್ ಇಲ್ಲಿಗೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದೆ ಈ ನಗರವು ಇಲ್ಲಿಯ ರಾಜಧಾನಿಯೂ ಕೂಡ ಆಗಿದೆ ಇಲ್ಲಿಂದ ಲೋಕ್ಟಾಕ್ ಸರೋವರವು 48 ಕಿ.ಮೀ ಅಂತರದಲ್ಲಿದೆ ಮತ್ತು ಇಲ್ಲಿಗೆ ಬರುವ ಸಂದರ್ಶಕರಿಗಾಗಿ ಕ್ಯಾಬ್ ಗಳು ಸಿದ್ದವಾಗಿ ನಿಂತಿರುತ್ತದೆ.

ರೈಲು ಮಾರ್ಗ ಮೂಲಕ: ದಿಮಾಪುರ ಇಲ್ಲಿಗೆ ಹತ್ತಿರವಿರುವ ರೈಲು ನಿಲ್ದಾಣವಾಗಿದ್ದು ಇಂಫಾಲ್ ನಿಂದ 215 ಕಿ.ಮೀ ಅಂತರದಲ್ಲಿದೆ ಧೀಮಾಪುರದಿಂದ ಇಂಫಾಲ್ ಗೆ ಬಸ್ಸುಗಳು ಸಿಗುತ್ತವೆ

ರಸ್ತೆ ಮೂಲಕ : ಮೊಯಿರಾಂಗ್ ರಾ.ಹೆ 53.ರ ಮೂಲಕ ಸಂಪರ್ಕಿಸುತ್ತದೆ. ಸಾರ್ವಜನಿಕ ಬಸ್ಸುಗಳು ಮತ್ತು ಕಾರುಗಳೂ ಕೂಡಾ ಇಂಫಾಲ್ ನಿಂದ ಮೊಯಿರಾನ್ ಗೆ ಸಿಗುತ್ತವೆ.

ಕೈಬುಜಾಲ್ ಲಾಮ್ಜೋ ರಾಷ್ಟ್ರೀಯ ಉದ್ಯಾನವನ

ಕೈಬುಜಾಲ್ ಲಾಮ್ಜೋ ರಾಷ್ಟ್ರೀಯ ಉದ್ಯಾನವನ

PC: Lenin Khangjrakpam

ಲೋಕ್ಟಾಕ್ ಸರೋವರದ ಪ್ರದೇಶವು 980 ಚದರ ಕಿ.ಮೀ ವಿಶಾಲವಾಗಿದ್ದು ವಿವಿಧ ರೀತಿಯ (ಪುಮುಡಿಸ್) ಸಸ್ಯವರ್ಗಗಳು ಇಡೀ ಸರೋವರದ ಸುತ್ತಲೂ ಸುತ್ತುವರೆದಿದೆ ಇಲ್ಲಿಯ ಅತೀ ದೊಡ್ಡ ಪುಮುಡಿಯು 40 ಚದರ ಕಿ.ಮೀ ಗಳಷ್ಟು ಜಾಗಗಳಲ್ಲಿ ಹರಡಿದೆ ಮತ್ತು ಈ ಪುಮುಡಿಯಲ್ಲಿ ಕೈಬುಲ್ ಲಾಮ್ಜೋ ರಾಷ್ಟ್ರೀಯ ಉದ್ಯಾನವನವು ಇದೆ.

ಇದು ಜಗತ್ತಿನ ಏಕೈಕ ತೇಲುವ ಉದ್ಯಾನವನವಾಗಿದೆ. ಇದು ಅಪರೂಪದ ಸಾಂಗೈ ಮತ್ತು ವಲಸೆ ಬಂದಿರುವ ಹಕ್ಕಿಗಳ ನೋಟವು ಮತ್ತು ವನ್ಯಜೀವಿಗಳು ಈ ಇಡೀ ಪ್ರದೇಶಕ್ಕೆ ಒಂದು ಸುಂದರವಾದ ನೋಟವನ್ನು ನೀಡುತ್ತವೆ ಶ್ರೀಮಂತ ಜೀವವೈವಿಧ್ಯ ಮತ್ತು ವೈವಿಧ್ಯಮಯ ಸಸ್ಯಗಳು ಮತ್ತು ಪ್ರಾಣಿಗಳನ್ನು ಹೊಂದಿರುವ ಈ ಸ್ಥಳವು ಹಳೆಯ ಗೊರಿಲ್ಲಾಗಳ ತಳಿಗಳನ್ನು, ಹೂಲಾಕ್ ಗಿಬ್ಬನ್ ಗಳು ಕೂಡಾ ಇಲ್ಲಿ ಕಂಡುಬರುತ್ತವೆ.

ಸೇಂದ್ರಾ ದ್ವೀಪ

ಸೇಂದ್ರಾ ದ್ವೀಪ

PC: Flickr

ಈ ಸುಂದರವಾದ ಮತ್ತು ಸುಸಜ್ಜಿತವಾಗಿ ಸಂರಕ್ಷಿಸಲ್ಪಟ್ಟ ಪರಿಸರದಲ್ಲಿರುವ ದ್ವೀಪವು ಈ ಪೂಮುಡಿಗಳಲ್ಲೊಂದರಲ್ಲಿ ನೆಲೆಯಾಗಿದೆ ಮತ್ತು ಇದು ಪ್ರವಾಸಿಗರಿಗೆ ಲಾಡ್ಜ್ ಗಳಲ್ಲಿ ತಂತಲು ಒಂದು ಅದ್ಭುತವಾದ ತಾಣವಾಗಿದೆ. ಈ ತಾಣವು ಕೆಲವು ಸ್ಥಳೀಯ ಮೀನುಗಳನ್ನು ಹೊಂದಿದೆ ಅಲ್ಲದೆ ಕಾರ್ಪ್ ಮತ್ತು ಹುಲ್ಲಿನ ಕಾರ್ಪ್ ಗಳನ್ನೂ ಹೊಂದಿದೆ. ಈ ಮೀನುಗಳಿಂದ ತಯಾರಾದ ಸ್ವಾದಿಷ್ಟವಾದ ಆಹಾರವು ಸಿದ್ದವಾಗಿ ಇಲ್ಲಿ ದೊರೆಯುತ್ತದೆ. ಈ ಸೆಂದ್ರಾ ದ್ವೀಪದಿಂದ ಸ್ಥಳೀಯ ನಿವಾಸಗಳು ಮತ್ತು ಇಲ್ಲಿಯ ಜನರ ಸಂಸ್ಕೃತಿಯನ್ನೂ ಈ ತೇಲುವ ಸಸ್ಯಗಳ ಸುತ್ತಲೂ ವಾಸಿಸುವ ಜನರ ಪಕ್ಷಿನೋಟವನ್ನು ಇಲ್ಲಿಂದ ಕಾಣಬಹುದಾಗಿದೆ. ಇಲ್ಲಿ ಜಗತ್ತಿನ ಏಕೈಕ ತೇಲುವ ಶಾಲೆಯನ್ನೂ ಕೂಡ ಇಲ್ಲಿ ಕಾಣಬಹುದಾಗಿದೆ.

ಐಎನ್ ಎ ವಸ್ತು ಸಂಗ್ರಹಾಲಯ

ಐಎನ್ ಎ ವಸ್ತು ಸಂಗ್ರಹಾಲಯ

PC: PP Yoonus

ಐ ಎನ್ ಎ ವಸ್ತುಸಂಗ್ರಹಾಲಯವನ್ನು ಐ ಎನ್ ಎ ಯ ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ನಿರ್ಮಿಸಲಾಗಿದೆ ಇದು ಇವರ ಧೈರ್ಯ ಮತ್ತು ಗೌರವ ಮತ್ತು ಮೆಮೊರೆಬಿಲಿಯಾ ಮೂಲಕ ಶೌರ್ಯ ಶೇಯಾಂಕ ಮತ್ತು ಸಮವಸ್ತ್ರಗಳನ್ನು ಪ್ರದರ್ಶಿಸುತ್ತದೆ.

ಇಲ್ಲಿ ಕಂಚಿನಲ್ಲಿ ನಿರ್ಮಿತವಾದ ಸುಭಾಸ್ ಚಂದ್ರಭೋಸರ ಪ್ರತಿಮೆಯನ್ನು ಇದರ ಆವರಣದಲ್ಲಿ ಸ್ಥಾಪಿಸಲಾಗಿದೆ. ಈ ಪುನರ್ ನಿರ್ಮಾಣವಾದ ಯುದ್ದ ಸ್ಮಾರಕದ ಸ್ಥಳದಲ್ಲಿ ಎಪ್ರಿಲ್ 14 1944ರಲ್ಲಿ ಮೂರು ಬಣ್ಣದ ಧ್ವಜವನ್ನು ಹಾರಿಸಲಾಗಿತ್ತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more