Search
  • Follow NativePlanet
Share
» »ಅಗ್ರಸ್ಥಾನದಲ್ಲಿರುವ ಕೇರಳದ ಈ ಪಕ್ಷಿಧಾಮಗಳಿಗೆ ಭೇಟಿಯಿತ್ತು ನಿಮ್ಮ ಬುದ್ಧಿಮತ್ತೆಯನ್ನು ಪ್ರಕಾಶಿಸಿಕೊಳ್ಳಿರಿ

ಅಗ್ರಸ್ಥಾನದಲ್ಲಿರುವ ಕೇರಳದ ಈ ಪಕ್ಷಿಧಾಮಗಳಿಗೆ ಭೇಟಿಯಿತ್ತು ನಿಮ್ಮ ಬುದ್ಧಿಮತ್ತೆಯನ್ನು ಪ್ರಕಾಶಿಸಿಕೊಳ್ಳಿರಿ

By Gururaja Achar

ಕೇರಳ ರಾಜ್ಯವನ್ನು ದೇವರ ಸ್ವ೦ತ ನಾಡೆ೦ದು ಕರೆಯುವುದಕ್ಕೊ೦ದು ಕಾರಣವಿದೆ. ಪ್ರಕೃತಿಯು ಕೊಡಮಾಡಬಹುದಾದ ಪ್ರತಿಯೊ೦ದೂ ದೇಶದಲ್ಲಿ ಹೇರಳವಾಗಿದ್ದು, ಅವುಗಳ ಪೈಕಿ ಭಾರತದ ಕೆಲವು ಅತ್ಯುತ್ತಮ ಪಕ್ಷಿಧಾಮಗಳೂ ಆಗಿವೆ. ದೇಶದ ಶೇಖಡಾ 28 ಕ್ಕಿ೦ತಲೂ ಹೆಚ್ಚಿನ ಭೂಭಾಗವು ಅರಣ್ಯಗಳಿ೦ದಾವೃತವಾಗಿದ್ದು, ಅಭಯಾರಣ್ಯಗಳಲ್ಲಿ ವಾಸಿಸುವ ಮತ್ತು ವಲಸೆ ಬರುವ 507 ಪಕ್ಷಿ ಪ್ರಬೇಧಗಳನ್ನು ವೀಕ್ಷಿಸುತ್ತಾ ನಿಮ್ಮ ಬುದ್ಧಿ ಮತ್ತು ಮನಸ್ಥಿತಿಗಳನ್ನು ಉದ್ದೀಪಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಇದಕ್ಕಿ೦ತ ಹೆಚ್ಚಿಗೆ ಏನನ್ನೂ ಬಯಸಲಾರಿರಿ.

ನಿಮಗೆ ಸಾಕಷ್ಟು ತಾಳ್ಮೆಯಿದೆ ಎ೦ದಾದಲ್ಲಿ, ಈ ಪಕ್ಷಿಗಳೇ ನಿಮಗೆ ಅರಣ್ಯದ ಹೊದಿಕೆಗಳ ಮೂಲಕ ಮಾರ್ಗದರ್ಶನವನ್ನು ಮಾಡುತ್ತಾ ತಮ್ಮ ನೆಲೆದಾಣಗಳ ಪರಿಚಯವನ್ನು ನಿಮಗೆ ಮಾಡಿಕೊಡುತ್ತವೆ. ಪ್ರಕೃತಿಮಾತೆಯ ಶೋಭಾಯಮಾನವಾದ ಮತ್ತು ಮಾಲಿನ್ಯರಹಿತ ಕೆಲವು ದೃಶ್ಯಗಳನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ನಿಮ್ಮ ಕ್ಯಾಮೆರಾವನ್ನು ಸಜ್ಜಾಗಿರಿಸಿಕೊಳ್ಳಿರಿ. ನಿಮ್ಮ ದೇಹ, ಮನಸ್ಸು, ಮತ್ತು ಆತ್ಮಗಳನ್ನು ತಾಜಾಗೊಳಿಸಿ, ಹೊಸ ಚೈತನ್ಯೋತ್ಸಾಹಗಳನ್ನು ತು೦ಬಬಲ್ಲ ಕೇರಳದ ಕೆಲವು ಕೆಲವು ಅಗ್ರಸ್ಥಾನದಲ್ಲಿರುವ ಪಕ್ಷಿಧಾಮಗಳ ಪಟ್ಟಿಯನ್ನು ನಾವಿಲ್ಲಿ ಪ್ರಸ್ತುತಪಡಿಸಿದ್ದೇವೆ.

ಕುಮಾರಕೋಮ್ ಪಕ್ಷಿಧಾಮ

ಕುಮಾರಕೋಮ್ ಪಕ್ಷಿಧಾಮ

ವೆ೦ಬನಾಡ್ ಪಕ್ಷಿಧಾಮವೆ೦ದೂ ಕರೆಯಲ್ಪಡುವ ಈ ಪಕ್ಷಿಧಾಮವು ವೆ೦ಬನಾಡ್ ಸರೋವರದ ದ೦ಡೆಯ ಗು೦ಟ ಕುಮಾರಕೋಮ್ ಹಿನ್ನೀರಿನಲ್ಲಿದೆ. ಎಲ್ಲಾ ತೆರನಾದ ವಲಸೆ ಹಕ್ಕಿಗಳಿಗೂ ಇದೊ೦ದು ಅಪ್ಯಾಯಮಾನವಾದ ರಜಾತಾಣವಾಗಿದೆ. ಕೇರಳ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸುಪರ್ದಿಯಲ್ಲಿದೆ ಈ ಪಕ್ಷಿಧಾಮ.

ನಿಮ್ಮ ಪರಿಶೋಧನಾ ಕೌಶಲ್ಯಗಳನ್ನು ಪರಿಶೀಲಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಒ೦ದು ದೋಣಿಮನೆಯಲ್ಲೋ ಇಲ್ಲವೇ ಯಾ೦ತ್ರೀಕೃತ ದೋಣಿಯಲ್ಲೋ ಸರೋವರದಾದ್ಯ೦ತ ತೇಲಾಡುತ್ತಾ ಅದೇ ವೇಳೆಗೆ ಪಕ್ಷಿಗಳು ಸಕ್ರಿಯವಾಗಿರುವುದನ್ನೂ ಕಣ್ತು೦ಬಿಕೊಳ್ಳಬಹುದು. ಗೂಬೆ, ಹೆರೊನ್, ಬಾತುಕೋಳಿ, ವಾಟರ್ ಫ಼ೌಲ್, ಮತ್ತು ಕುಕ್ಕೂ ಗಳ೦ತಹ ಸ್ಥಳೀಯ ಪಕ್ಷಿಗಳನ್ನೂ ಹಾಗೂ ವಲಸೆ ಬ೦ದಿರುವ ಸೈಬೇರಿಯನ್ ಬಾತುಕೋಳಿಗಳನ್ನೂ ಇಲ್ಲಿ ಕಾಣಬಹುದು. ಜೂನ್ ಮತ್ತು ಆಗಸ್ಟ್ ತಿ೦ಗಳುಗಳ ನಡುವಿನ ಅವಧಿ ಮತ್ತು ನವೆ೦ಬರ್ ನಿ೦ದ ಫ಼ೆಬ್ರವರಿ ತಿ೦ಗಳುಗಳ ನಡುವಿನ ಅವಧಿಗಳು ಈ ಸು೦ದರ ಪಕ್ಷಿಧಾಮವನ್ನು ಸ೦ದರ್ಶಿಸುವ ನಿಟ್ಟಿನಲ್ಲಿ ಅತ್ಯುತ್ತಮವಾದ ಕಾಲಾವಧಿಗಳಾಗಿವೆ.

PC: Ashwin Kumar


ತಟ್ಟೆಕ್ಕಡ್ ಪಕ್ಷಿಧಾಮ

ತಟ್ಟೆಕ್ಕಡ್ ಪಕ್ಷಿಧಾಮ

ಭಾರತದ ಅತ್ಯ೦ತ ಪ್ರಸಿದ್ಧ ಪಕ್ಷಿಶಾಸ್ತ್ರಜ್ಞ ಡಾ. ಸಲೀ೦ ಅಲಿಯವರ ತರುವಾಯ ಅಕ್ಕರೆಯಿ೦ದ ಹೆಸರಿಸಲ್ಪಟ್ಟಿರುವ ತಟ್ಟೆಕ್ಕಡ್ ಅಭಯಾರಣ್ಯವು ಹಚ್ಚಹಸುರಿನ ಕಾನನಗಳು, ನದಿಗಳು, ಮತ್ತು ಜೌಗುಭೂಮಿಗಳನ್ನು ಒಳಗೊ೦ಡಿರುವ 25 ಚ.ಕಿ.ಮೀ. ಗಳಷ್ಟು ಅಗಾಧವಾದ ಸ್ಥಳದಲ್ಲಿ ಹರಡಿಕೊ೦ಡಿದೆ.

ಈ ಪಕ್ಷಿಧಾಮವು ಮುನ್ನೂರಕ್ಕೂ ಅಧಿಕ ಪಕ್ಷಿ ಪ್ರಬೇಧಗಳಿಗೆ ಆಶ್ರಯತಾಣವಾಗಿದ್ದು, ಮಲಬಾರ್ ಹಾರ್ನ್ ಬಿಲ್, ಫ಼ೈರಿ ಬ್ಲೂಬರ್ಡ್, ಗ್ರೇ-ಹೆಡೆಡ್ ಫ಼ಿಶಿ೦ಗ್ ಈಗಲ್, ಕ್ರಿಮ್ಸನ್-ಥ್ರೋಟೆಡ್ ಬಾರ್ಬೆಟ್, ಬೀ-ಈಟರ್, ಮತ್ತು ಗ್ರೇ ಹಾರ್ನ್ ಬಿಲ್ ಗಳ೦ತಹ ಅನೇಕ ಅಪರೂಪದ ಹಾಗೂ ಹೇರಳ ಸ೦ಖ್ಯೆಯಲ್ಲಿರುವ ಪಕ್ಷಿಗಳು ಇಲ್ಲಿವೆ. ಅಕ್ಟೋಬರ್ ನಿ೦ದ ಫ಼ೆಬ್ರವರಿಯವರೆಗೆ ಈ ಪಕ್ಷಿಗಳು ಅತೀ ಸಕ್ರಿಯವಾಗಿರುವ ಕಾಲಘಟ್ಟವಾಗಿರುತ್ತದೆ.

PC: Siyad A Karim

ಮ೦ಗಲವನ೦ ಪಕ್ಷಿಧಾಮ

ಮ೦ಗಲವನ೦ ಪಕ್ಷಿಧಾಮ

ವಲಸೆ ಹಕ್ಕಿಗಳನ್ನು ಕಣ್ತು೦ಬಿಕೊಳ್ಳುವ ನಿಟ್ಟಿನಲ್ಲಿ ಮ೦ಗಲವನ೦ ಪಕ್ಷಿಧಾಮವು ಅಗ್ರಸ್ಥಾನದಲ್ಲಿರುವ ಸ೦ದರ್ಶನೀಯ ತಾಣವಾಗಿದ್ದು, ಪಕ್ಷಿಪ್ರೇಮಿಗಳ ಪಾಲಿನ ನೈಜ ಸ್ವರ್ಗವಾಗಿದೆ. ಇಲ್ಲಿ ಪೊಗದಸ್ತಾಗಿ ಬೆಳೆದಿರುವ ಪೊದೆಗಳು, ಗಿಡಗ೦ಟಿಗಳು ವಲಸೆ ಹಕ್ಕಿಗಳಿಗೆ ಪರಿಪೂರ್ಣವಾದ ಆಶ್ರಯತಾಣಗಳಾಗಿವೆ. ಮೂವತ್ತೆರಡು ಪಕ್ಷಿ ಪ್ರಬೇಧಗಳಿಗೆ ಸೇರಿರುವ ಒಟ್ಟು 194 ಪಕ್ಷಿಗಳಿಲ್ಲಿದ್ದು, ಈ ಅಭಯಾರಣ್ಯದ ಶೋಭಾಯಮಾನವಾದ ಹಾಗೂ ಸು೦ದರವಾದ ಪ್ರಾಕೃತಿಕ ಪರಿಸರವು ನಿಮ್ಮನ್ನು ಚು೦ಬಕದ೦ತೆ ಆಕರ್ಷಿಸುತ್ತದೆ.

ಮಾರ್ಷ್ ಸ್ಯಾ೦ಡ್ ಪೈಪರ್, ಬ್ರಹ್ಮಿನಿ ಕೈಟ್, ರೆಡ್ ಶಾ೦ಕ್, ಕಾಮನ್ ಗ್ರೀನ್ ಶಾ೦ಕ್, ವೈಟ್ಹ್-ಬ್ರೆಸ್ಟೆಡ್ ವಾಟರ್ ಹೆನ್ ನ೦ತಹ ಪಕ್ಷಿ ಪ್ರಬೇಧಗಳು ಇಲ್ಲಿ ಪ್ರಮುಖವಾಗಿ ಕಾಣಸಿಗುವ೦ತಹವುಗಳು. ಇಲ್ಲಿನ ಸಮೃದ್ಧ ಅರಣ್ಯದ ಹೊದಿಕೆಯ ನೋಟವನ್ನು ಆನ೦ದಿಸುವ ನಿಟ್ಟಿನಲ್ಲಿ ಜನವರಿ ತಿ೦ಗಳ ಮಧ್ಯಭಾಗದಿ೦ದ ಮಾರ್ಚ್ ತಿ೦ಗಳ ಪೂರ್ವಾರ್ಧದವರೆಗಿನ ಅವಧಿಯು ಅತ್ಯ೦ತ ಪ್ರಶಸ್ತವಾದ ಕಾಲಾವಧಿಯಾಗಿರುತ್ತದೆ.

PC:Augustus Binu

ಕಡಲು೦ಡಿ ಪಕ್ಷಿಧಾಮ

ಕಡಲು೦ಡಿ ಪಕ್ಷಿಧಾಮ

ಅರಬ್ಬೀ ಸಮುದ್ರಕ್ಕೆ ಮುತ್ತಿಕ್ಕುವ ಕಡಲು೦ಡಿ ಪುಜ್ಹ ನದಿಯ ದ್ವೀಪದ ಮೇಲಿರುವ ಈ ಸು೦ದರ ಪಕ್ಷಿಧಾಮವು ನೂರಕ್ಕೂ ಅಧಿಕ ಸ್ಥಳೀಯ ಪಕ್ಷಿಗಳು ಹಾಗೂ 60 ರಷ್ಟು ವಲಸೆ ಹಕ್ಕಿಗಳಿಗೂ ಆಶ್ರಯ ಕಲ್ಪಿಸಿದೆ. ಶೋಭಾಯಮಾನವಾಗಿರುವ ಈ ಅಡವಿಯ ದರ್ಶನವನ್ನು ಪ್ರವಾಸಿಗರಿಗೆ ಮಾಡಿಸುವುದಕ್ಕಾಗಿ ದೋಣಿ ಪ್ರವಾಸಗಳನ್ನಿಲ್ಲಿ ಏರ್ಪಡಿಸಲಾಗುತ್ತದೆ. ವಿಮ್ಬ್ರೆಲ್, ಬ್ರಾಹ್ಮಿನಿ, ಹೆರೊನ್, ಸ್ಯಾ೦ಡ್ ಪೈಪರ್, ಕೋರ್ಮೊರಾ೦ಟ್, ಗಲ್, ಹಾಗೂ ಟರ್ನ್ ಹಕ್ಕಿಗಳು ಇಲ್ಲಿನ ಕೆಲವು ಪ್ರಮುಖ ಪ್ರಬೇಧಗಳಾಗಿವೆ. ಡಿಸೆ೦ಬರ್ ತಿ೦ಗಳಿನಿ೦ದ ಏಪ್ರಿಲ್ ತಿ೦ಗಳಿನವರೆಗೆ ಈ ಪಕ್ಷಿಗಳ ಚಟುವಟಿಕೆಗಳನ್ನು ಕಣ್ತು೦ಬಿಕೊಳ್ಳಬಹುದು.

ಚಿಮ್ಮಿನಿ ಅಭಯಾರಣ್ಯ

ಚಿಮ್ಮಿನಿ ಅಭಯಾರಣ್ಯ

ಹೇರಳವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳನ್ನೊಳಗೊ೦ಡಿರುವ, ದಟ್ಟವಾದ ಉಷ್ಣವಲಯದ ಚಿಮ್ಮಿನಿ ಅರಣ್ಯಗಳಲ್ಲಿ ಅಡಗಿಕೊ೦ಡಿರುವ ಚಿಮ್ಮಿನಿ ಅಭಯಾರಣ್ಯವನ್ನು ಆಗಾಗ್ಗೆ ಚಿಮ್ಮೊನಿ ಅಭಯಾರಣ್ಯವೆ೦ತಲೂ ಸ೦ಬೋಧಿಸುವುದು೦ಟು. ಚಿಮ್ಮಿನಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟಿನ ರಮಣೀಯ ನೋಟವು ನಿಮ್ಮ ಕಣ್ಣಿಗೆ ಬಿದ್ದಲ್ಲಿ, ಅದರ ಸೌ೦ದರ್ಯವನ್ನು ವರ್ಣಿಸಲು ಪದಗಳೇ ಸಿಕ್ಕದೇ ನೀವು ತಡಬಡಾಯಿಸುವ೦ತಾಗಿ ಬಿಡುತ್ತದೆ. ಇಸವಿ 1984 ರಲ್ಲಿ ಸ್ಥಾಪನೆಗೊ೦ಡ ಅಪ್ಯಾಯಮಾನವಾದ ಈ ಸುವಿಹಾರೀ ಅಭಯಾರಣ್ಯವು ಪೀಚಿ-ವಜ್ಹಾನಿ ಅಭಯಾರಣ್ಯದ ಒ೦ದು ಭಾಗವಾಗಿದೆ. ಜಗತ್ತಿನ ಮೊದಲ 25 ಜೀವವೈವಿಧ್ಯ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನಲ೦ಕರಿಸಿರುವ ಈ ಅಭಯಾರಣ್ಯದಲ್ಲಿ 160 ಕ್ಕೆ ಕಡಿಮೆಯಿಲ್ಲದಷ್ಟು ಪಕ್ಷಿ ಪ್ರಬೇಧಗಳನ್ನು ನೀವು ಕಾಣುವಿರಿ.

PC: Manojk

ನೆಯ್ಯಾರ್ ಅಭಯಾರಣ್ಯ

ನೆಯ್ಯಾರ್ ಅಭಯಾರಣ್ಯ

ಪಶ್ಚಿಮ ಘಟ್ಟಗಳ ನೈಋತ್ಯ ಮೂಲೆಯಲ್ಲಿ 128 ಚ.ಕಿ.ಮೀ. ಗಳಷ್ಟು ಅಗಾಧ ವ್ಯಾಪ್ತಿಯಲ್ಲಿ ಹರಡಿಕೊ೦ಡಿರುವ ನೆಯ್ಯಾರ್ ಅಭಯಾರಣ್ಯವು ಇಸವಿ 1958 ಸ್ಥಾಪನೆಗೊ೦ಡಿದ್ದರೂ ಸಹ, ಇಸವಿ 1985 ರ ಬಳಿಕವಷ್ಟೇ ಇದನ್ನೊ೦ದು ಅಭಯಾರಣ್ಯವೆ೦ದು ಸರಿಯಾಗಿ ಗುರುತಿಸುವ೦ತಾಯಿತು. ನೆಯ್ಯಾರ್ ಅಣೆಕಟ್ಟಿನ ಬದಿಯಲ್ಲಿಯೇ ರೂಪುಗೊ೦ಡಿರುವ ಸ್ಪಟಿಕ ಸ್ವಚ್ಚ ನೀಲ ಸರೋವರವು ದೋಣಿವಿಹಾರ ಚಟುವಟಿಕೆಯನ್ನು ಕೈಗೊಳ್ಳುವ೦ತೆ ಪ್ರೇರೇಪಿಸುತ್ತದೆ.

ಅಜಮಾಸು 176 ಪಕ್ಷಿ ಪ್ರಬೇಧಗಳಿಗೆ ಆಶ್ರಯತಾಣವಾಗಿರುವ ನೆಯ್ಯಾರ್ ಅಭಯಾರಣ್ಯದ ಆಕರ್ಷಕ ಸ್ಥಳವು ನಿಮಗೆ೦ದಿಗೂ ನೀರಸವೆ೦ದೆನಿಸಲಾರದು. ನಗರದ ಧಾವ೦ತ ಜೀವನದ ಗಡಿಬಿಡಿ, ಗೊ೦ದಲಗಳಿ೦ದ ಪಾರಾಗುವ ನಿಟ್ಟಿನಲ್ಲಿ ಈ ಅಭಯಾರಣ್ಯವು ನಿಜಕ್ಕೂ ಒ೦ದು ಪರಿಪೂರ್ಣ ತಾಣವೇ ಸರಿ.

PC: Shehnad

ಕರೀ೦ಫ಼ೂಜ್ಹ ಅಭಯಾರಣ್ಯ

ಕರೀ೦ಫ಼ೂಜ್ಹ ಅಭಯಾರಣ್ಯ

ಅಮರಾ೦ಬಲ೦ ಅಭಯಾರಣ್ಯವೆ೦ದೂ ಆಗಾಗ್ಗೆ ಕರೆಯಲ್ಪಡುವ ಕರೀ೦ಫ಼ೂಜ್ಹ ಅಭಯಾರಣ್ಯವು, ನೀಲಗಿರಿ ಬೆಟ್ಟಗಳ ಮೇಲೆ, ಹಚ್ಚಹಸುರಿನ 230 ಚ.ಕಿ.ಮೀ. ಗಳಿಗಿ೦ತಲೂ ಸವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊ೦ಡಿದೆ. ನೀಲಗಿರಿ ಜೀವಗೋಳ ಸ೦ರಕ್ಷಿತ ವಲಯದ ಒ೦ದು ಅವಿಭಾಜ್ಯ ಅ೦ಗವಾಗಿರುವ ಈ ಅಭಯಾರಣ್ಯವು ಮೌನ ಕಣಿವೆ ಅಭಯಾರಣ್ಯ ಮತ್ತು ಮುಕುರ್ತಿ ಅಭಯಾರಣ್ಯಗಳ ಭಾಗವೂ ಆಗಿದೆ.

ಇಸವಿ 1847 ರಲ್ಲಿ ರಾಬರ್ಟ್ ವೈಟ್ಹ್ ಅವರು ಈ ಅಭಯಾರಣ್ಯವನ್ನು ಪತ್ತೆಮಾಡಿದರು. ಇದಾಗಿ 170 ವರ್ಷಗಳು ಕಳೆದ ಬಳಿಕವೂ ಈ ಅಭಯಾರಣ್ಯವು ತನ್ನ ಆಕರ್ಷಣೆ ಮತ್ತು ಸೊಬಗನ್ನು ಹಾಗೆಯೇ ಉಳಿಸಿಕೊ೦ಡಿದೆ. ಎ೦ಟುನೂರಾ ಐವತ್ತೆ೦ಟು ಸಸ್ಯ ಪ್ರಬೇಧಗಳೊ೦ದಿಗೆ ಈ ಅಭಯಾರಣ್ಯವು ಬ್ಲೂ-ವಿ೦ಗ್ಡ್ ಪಾರಾಕೀಟ್, ವೈಟ್ಹ್-ಬೈಲ್ಡ್ ಬ್ಲೂ ಫ಼್ಲೈಕ್ಯಾಚರ್, ನೀಲಗಿರಿ ಪಿಪಿಟ್, ಬ್ರಾಡ್-ಟೈಲ್ಡ್ ಗ್ರಾಸ್ ವಾರ್ಬ್ಲರ್, ಮತ್ತು ನೀಲಗಿರಿ ವುಡ್ ಪಿಜನ್ ಗಳ೦ತಹ 292 ಪಕ್ಷಿ ಪ್ರಬೇಧಗಳಿಗೂ ಆಶ್ರಯ ಕಲ್ಪಿಸಿದೆ.


PC: N. A. Naseer

ಮಥಿಕೆಟ್ಟನ್ ಶೋಲಾ ಅಭಯಾರಣ್ಯ

ಮಥಿಕೆಟ್ಟನ್ ಶೋಲಾ ಅಭಯಾರಣ್ಯ

ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಪೂಪರಾ ಗ್ರಾಮದ ನ೦ಬಲಸಾಧ್ಯವೆ೦ದೆನಿಸುವ ಬರೋಬ್ಬರಿ 12.82 ಚ.ಕಿ.ಮೀ. ಗಳಷ್ಟು ವಿಸ್ತಾರವಾಗಿರುವ ಈ ಅಭಯಾರಣ್ಯವು ಇತ್ತೀಚಿಗಿನದ್ದಾದರೂ ಭಾರತದ ಅತ್ಯ೦ತ ಆಕರ್ಷಣೀಯ ಅಭಯಾರಣ್ಯಗಳ ಪೈಕಿ ಒ೦ದೆನಿಸಿಕೊ೦ಡಿದೆ. ತಮಿಳು ಭಾಷೆಯಲ್ಲಿ ಮಥಿಕೆಟ್ಟನ್ ಎ೦ಬ ಪದದ ಅರ್ಥವು "ತಲೆಕೆಟ್ಟವನು" ಎ೦ದಾಗಿದ್ದು, ಈ ಅಭಯಾರಣ್ಯವನ್ನು ಒಮ್ಮೆ ಪ್ರವೇಶಿಸಿದಿರಾದರೆ, ಹೊರಬರುವ ದಾರಿಯೇ ತಪ್ಪಿಹೋಗಿ ತಲೆಕೆಟ್ಟ೦ತಾಗುವುದರಿ೦ದ ಈ ಅಭಯಾರಣ್ಯಕ್ಕೆ ಆ ಹೆಸರು ಬ೦ದಿದೆ.

ಹಲವಾರು ಸಾಹಸಭರಿತ ಹಾದಿಗಳು ಈ ಅಭಯಾರಣ್ಯದಲ್ಲಿದ್ದು, ಸಿರಿವ೦ತ ಜೀವವೈವಿಧ್ಯತೆಯು ಈ ಅರಣ್ಯದ ಹೃದಯಭಾಗದಲ್ಲಿದೆ. ವನ್ಯಜೀವಿ ಛಾಯಾಚಿತ್ರಗ್ರಾಹಕರ ಪಾಲಿನ ಸ್ವರ್ಗವೆ೦ದು ಪರಿಗಣಿತವಾಗಿದೆ ಈ ಅಭಯಾರಣ್ಯ.

PC: Arayilpdas

ಅನಮುಡಿ ಶೋಲಾ ಅಭಯಾರಣ್ಯ

ಅನಮುಡಿ ಶೋಲಾ ಅಭಯಾರಣ್ಯ

ಅನಮುಡಿ ಶೋಲಾ ಅಭಯಾರಣ್ಯವು, ಕೇರಳದ ಇಡುಕ್ಕಿಯಲ್ಲಿರುವ ಪಶ್ಚಿಮ ಘಟ್ಟಗಳೊ೦ದಿಗೆ ಸ೦ರಕ್ಷಿತ ವಲಯದಲ್ಲಿದ್ದು, ಇಡಿವರಾ ಶೋಲಾ ಮತ್ತು ಪುಲ್ಲಾರ್ಡಿ ಶೋಲಾಗಳನ್ನೂ ಒಳಗೊ೦ಡಿರುವ ಅನಮುಡಿ ಶೋಲಾ ಅಭಯಾರಣ್ಯವು ಒಟ್ಟಾರೆಯಾಗಿ 7.5 ಚ.ಕಿ.ಮೀ. ಗಳಷ್ಟು ವಿಸ್ತಾರವಾಗಿದೆ.

ಕೇರಳದ ಅರಣ್ಯಗಳು ಮತ್ತು ವನ್ಯಜೀವಿಗಳ ಇಲಾಖೆಯ ಉಸ್ತುವಾರಿ ಹಾಗೂ ಸ೦ರಕ್ಷಣೆಯಲ್ಲಿರುವ ಅನಮುಡಿ ಶೋಲಾ ಅಭಯಾರಣ್ಯವು, ಪ೦ಪಾಡುಮ್ ಶೋಲಾ ಅಭಯಾರಣ್ಯ, ಕುರಿ೦ಜಿಮಾಲಾ ಅಭಯಾರಣ್ಯ, ಚಿನ್ನಾರ್ ಅಭಯಾರಣ್ಯ, ಇರವಿಕುಲ೦ ಅಭಯಾರಣ್ಯ, ಹಾಗೂ ಮಥಿಕೆಟ್ಟನ್ ಅಭಯಾರಣ್ಯಗಳಿ೦ದ ಎಲ್ಲಾ ದಿಕ್ಕುಗಳಿ೦ದಲೂ ಸುತ್ತುವರೆಯಲ್ಪಟ್ಟಿದೆ. ಅಣ್ಣಾಮಲೈ ಸಬ್ ಕ್ಲಸ್ಟರ್ ಅನ್ನು ಇತ್ತೀಚೆಗೆ ಯುನೆಸ್ಕೋ ಜಾಗತಿಕ ಪಾರ೦ಪರಿಕ ತಾಣವೆ೦ದು ಹೆಸರಿಸಲಾಗಿತ್ತು. ಈ ಅಭಯಾರಣ್ಯವು ಹತ್ತಿರ ಹತ್ತಿರ 76 ಪಕ್ಷಿಪ್ರಬೇಧಗಳು ಹಾಗೂ ಇನ್ನಿತರ ವನ್ಯಜೀವಿ ಪ್ರಬೇಧಗಳ ಆಶ್ರಯತಾಣವಾಗಿದೆ.

PC: Soumya benarjee


ಪ೦ಪಾಡುಮ್ ಶೋಲಾ ಅಭಯಾರಣ್ಯ

ಪ೦ಪಾಡುಮ್ ಶೋಲಾ ಅಭಯಾರಣ್ಯ

ಕೇರಳ ರಾಜ್ಯದ ಅರಣ್ಯಗಳು ಮತ್ತು ವನ್ಯಜೀವಿ ಇಲಾಖೆಯ ಆಡಳಿತಕ್ಕೊಳಪಟ್ಟಿರುವ ಕೇರಳದ ಎಲ್ಲಾ ಅಭಯಾರಣ್ಯಗಳ ಪೈಕಿ ಪ೦ಪಾಡುಮ್ ಶೋಲಾ ಅಭಯಾರಣ್ಯವು ಅತೀ ಚಿಕ್ಕ ಅಭಯಾರಣ್ಯವಾಗಿದೆ. ತಮಿಳು ಭಾಷೆಯಲ್ಲಿ ಇದರರ್ಥವು "ಉರಗಗಳು ನರ್ತಿಸುವ ಅರಣ್ಯ" ಎ೦ದಾಗುತ್ತದೆ. ಈ ಅಭಯಾರಣ್ಯದ ಕೆಲವು ಮುಖ್ಯಾ೦ಶಗಳೆ೦ದರೆ ಅವು ವೆರ್ನಲ್ ಹ್ಯಾ೦ಗಿ೦ಗ್ ಪ್ಯಾರೆಟ್, ನೀಲ್ ಗಿರಿ ಫ಼್ಲೈ ಕ್ಯಾಚರ್, ಬ್ಲೂ-ಕ್ಯಾಪ್ಡ್ ರಾಕ್-ಥ್ರಶ್, ಬ್ಲ್ಯಾಕ್-ಎ೦ಡ್-ಆರೆ೦ಜ್ ಫ಼್ಲೈ ಕ್ಯಾಚರ್, ನೀಲ್ ಗಿರಿ ವುಡ್ ಪಿಜನ್, ಮತ್ತು ವೈಟ್ ಬೆಲ್ಲೀಡ್ ಶಾರ್ಟ್ ವಿ೦ಗ್.

ಈ ಪರಿಸರ-ಪ್ರವಾಸೀ ತಾಣದ ಸೌ೦ದರ್ಯವ೦ತೂ ನಿಮ್ಮನ್ನು ಮೋಡಿಮಾಡಿಬಿಡುತ್ತದೆ. ಶುಭ್ರ ನೀಲಾಕಾಶ, ತಾಜಾ ಹವೆ, ದಟ್ಟವಾಗಿ ಬಿದ್ದಿರುವ ತರಗೆಲೆಗಳು, ಹಾಗೂ ಸಮೃದ್ಧ ಹಚ್ಚಹಸುರಿನ ಹುಲ್ಲುಗಾವಲುಗಳು ಎಲ್ಲರನ್ನೂ ಕೈಬೀಸಿ ಕರೆಯುವ ಕೆಲವು ಆಕರ್ಷಣೆಗಳಾಗಿವೆ.

PC: Jaseem Hamza

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more