» »ಚೀನಾಕೆ ಸೆಡ್ಡು ಹೊಡೆಯುವ ಸಿಕ್ಕಿಂ ಗಮ್ಮತ್ತು!

ಚೀನಾಕೆ ಸೆಡ್ಡು ಹೊಡೆಯುವ ಸಿಕ್ಕಿಂ ಗಮ್ಮತ್ತು!

Written By:

ಇದು ಚೀನಾ ದೇಶದ ಗಡಿಗೆ ಬಲು ಹತ್ತಿರದಲ್ಲೆ ಸ್ಥಿತವಿರುವ ಈಶಾನ್ಯ ಭಾರತದ ಅದ್ಭುತ ರಾಜ್ಯವಾಗಿದೆ. ಇಲ್ಲಿನ ಸೃಷ್ಟಿ ಸೌಂದರ್ಯಕ್ಕೆ ಮಾರು ಹೋಗದವರು ಯಾರೂ ಇಲ್ಲ. ದೇಶದ ವಿವಿಧ ಜನನಿಬಿಡ ರಾಜ್ಯಗಳಂತೆ ಇಲ್ಲಿ ಕರ್ಕಶಗಳಾಗಲಿ, ರಭಸದ ಜೀವನವಾಗಲಿ ಅಥವಾ ಕಾಂಕ್ರೀಟ್ ಕಾಡುಗಳಾಗಲಿ ಇಲ್ಲ.

ಬದಲಾಗಿ ಸುಶ್ರಾವ್ಯವಾದ ವಾತಾವರಣ, ಕಲ್ಮಶರಹಿತ ಮತ್ತು ಹಿತಕರವಾದ ಪರಿಸರ ಹಾಗೂ ಅಪಾರವಾದ ಸೃಷ್ಟಿ ಸೌಂದರ್ಯ ನೋಡುಗರನ್ನು ಮೂಕವಿಸ್ಮಿತರನ್ನಾಗುವಂತೆ ಮಾಡುತ್ತದೆ. ಸಾಮಾನ್ಯವಾಗಿ ದಕ್ಷಿಣದವರು ಉತ್ತರದ ಸ್ಥಳಗಳಿಗೆ ಭೇಟಿ ನೀಡುವುದು ಕಮ್ಮಿ. ಅದರಲ್ಲೂ ಈಶಾನ್ಯ ಭಾರತಕ್ಕೆ ಭೇಟಿ ನೀಡುಗರ ಸಂಖ್ಯೆ ಇನ್ನೂ ಕಮ್ಮಿ.

ಹೇಗಿದೆ ಮೇಘಾಲಯ? ನೀವೆ ಒಮ್ಮೆ ನೋಡಿ!

ಇದಕ್ಕೆ ಮುಖ್ಯ ಕಾರಣ ದೂರ ಹಾಗೂ ಸಂಚಾರ ಸೌಲಭ್ಯಗಳ ಕ್ಲಿಷ್ಟ ಪರಿಸ್ಥಿತಿ ಇರುವುದೆ ಆಗಿದೆ. ಆದರೆ, ಎಲ್ಲರು ತಿಳಿದಿರುವ ಹಾಗೆ ಇಂತಹ ಸ್ಥಳಗಳಿಗೆ ತೆರಳಲು ಅಷ್ಟೊಂದು ಕಷ್ಟ ಪಡಬೇಕಾಗಿಲ್ಲ ಬದಲು ಸಾಕಷ್ಟು ಆಯ್ಕೆಗಳು ದೊರೆಯುತ್ತವೆ. ಆದರೆ ಪ್ರವಾಸ ಮಾಡುವ ನಮ್ಮ ಜೀವನದಲ್ಲೊಮ್ಮೆಯಾದರೂ ಸುಂದರ ಭಾರತದ ಭವ್ಯ ಪರಿಸರವನ್ನು ಆಸ್ವಾದಿಸುವ ಮನಸಿದ್ದರೆ ಸಾಕು. ಮುಂದೆ ಎಲ್ಲವೂ ಸರಳ.

ಈ ಲೇಖನದಲ್ಲಿ ಸಿಕ್ಕಿಂ ರಾಜ್ಯದ ವೈಭವ ಸಾರುವ ಹಲವಾರು ಚಿತ್ರಗಳನ್ನು ವಿವರಿಸಲಾಗಿದೆ. ಈ ಚಿತ್ರಗಳನ್ನು ನೋಡಿದಾಗ ಮನಸ್ಸಿಗೆ ಒಮ್ಮೆಯಾದರೂ ಇಂತಹ ಒಂದು ಸ್ಥಳಕ್ಕೆ ಭೇಟಿ ನೀಡಬೇಕೆಂದೆನಿಸದೆ ಇರಲು ಸಾಧ್ಯವೆ ಇಲ್ಲ. ನಿಮಗೆ ಅವಕಾಶ ದೊರೆತರೆ ಈ ಪುಟ್ಟ ರಾಜ್ಯಕ್ಕೆ ಒಂದು ಸುಂದರ ಭೇಟಿ ನೀಡಿ, ಅದಕ್ಕೂ ಮೊದಲು ಈ ರಾಜ್ಯದ ಸರಳ ಸುಂದರತೆಯನ್ನು ಈ ಲೇಖನದಲ್ಲಿರುವ ಚಿತ್ರಗಳ ಮೂಲಕ ಪ್ರವಾಸ ಮಾಡುತ್ತ ನೋಡಿ ಆನಂದಿಸಿ. ಚಳಿಗಾಲ ಈ ರಾಜ್ಯಕ್ಕೆ ಭೇಟಿ ನೀಡಲು ಸುಂದರ ಸಮಯವಾಗಿದೆ.

ಸಿಕ್ಕಿಂ ರಾಜ್ಯ

ಸಿಕ್ಕಿಂ ರಾಜ್ಯ

ನೇಪಾಳ, ಭೂತಾನ್ ಹಾಗೂ ಚೀನಾ ದೇಶಗಳಿಂದ ಸುತ್ತುವರೆದಿರುವ ಸಿಕಿಂ ಈಶಾನ್ಯ ಭಾರತದ ಒಂದು ಸುಂದರ ಪುಟ್ಟ ರಾಜ್ಯವಾಗಿದೆ. ಇದು ತನ್ನದೆ ಆದ ವಿಶಿಷ್ಟ ಸಂಸ್ಕೃತಿ-ಸಂಪ್ರದಾಯಗಳನ್ನು ಹೊಂದಿರುವ ಆಕರ್ಷಕ ರಾಜ್ಯವಾಗಿದೆ.

ಚಿತ್ರಕೃಪೆ: Amritendu Mallick

ಸೃಷ್ಟಿ ಸೌಂದರ್ಯ

ಸೃಷ್ಟಿ ಸೌಂದರ್ಯ

ಹೆಚ್ಚಿನ ಸಂಖ್ಯೆಯಲ್ಲಿ ಬುಡಕಟ್ಟು ಜನಾಂಗದವರನ್ನೆ ಹೊಂದಿರುವ ಈ ರಾಜ್ಯವು ಮಾನವನ ಆಧುನಿಕತೆಯ ದಾಹದಿಂದ ಹೆಚ್ಚಿನ ಮಟ್ಟಿಗೆ ಮುಕ್ತವಾಗಿದ್ದು ಪ್ರಕೃತಿ ಮಾತೆಯು ಇಲ್ಲಿ ಆನಂದದಿಂದ ನೆಲೆಸಿರುವುದನ್ನು ಕಾಣಬಹುದಾಗಿದೆ. ಸಿಕ್ಕಿಂನ ಕಾಡು ಪ್ರದೇಶಗಳು.

ಚಿತ್ರಕೃಪೆ: Pradeep Kumbhashi

ಸು ಹಿಮ್

ಸು ಹಿಮ್

ಪ್ರಚಂಡ ಹಿಮಾಲಯ ಪರ್ವತ ಶ್ರೇಣಿಗಳ ಅತ್ಯದ್ಭುತ ಹಾಗೂ ವಿಹಂಗಮ ನೋಟಗಳನ್ನು, ಮನಸ್ಸು ಉಲ್ಲಾಸಿತಗೊಳ್ಳುವಂತಹ ಪ್ರಾಕೃತಿಕ ಸೊಬಗನ್ನು ಹೊಂದಿರುವ ಸಿಕ್ಕಿಂ ರಾಜ್ಯಕ್ಕೆ ಹೆಸರು "ಸು ಹಿಮ್" ಎಂಬ ಎರಡು ಪದಗಳಿಂದ ವ್ಯುತ್ಪತ್ತಿಯಾಗಿದೆ. ಇದರ ಅರ್ಥ "ಸುಂದರ ಮನೆ" ಎಂದಾಗುತ್ತದೆ. ಹಿಮಾಲಯ ಪರ್ವತದ ಹಿನ್ನೆಲೆಯಲಿ ಚಂದಿರ ಕಾಣುವ ಬಗೆ!

ಚಿತ್ರಕೃಪೆ: Tapas Biswas

ಗ್ಯಾಂಗ್ಟಕ್

ಗ್ಯಾಂಗ್ಟಕ್

ಗ್ಯಾಂಗ್ಟಕ್ ಸಿಕ್ಕಿಂ ರಾಜ್ಯದ ರಾಜಧಾನಿ ನಗರವಾಗಿದ್ದು ಸಿಕ್ಕಿಂ ಅನ್ನು ನೋಡ ಬಯಸುವವರು ಮೊದಲಿಗೆ ಗ್ಯಾಂಗ್ಟಕ್ ನಗರಕ್ಕೆ ಭೇಟಿ ನೀಡಿಯೆ ಪ್ರವಾಸ ಕೈಗೊಳ್ಳಬೇಕು. ಇಲ್ಲಿ ರೈಲು ಹಾಗೂ ವಿಮಾನ ಸಂಚಾರಗಳು ಪರಿಣಾಮಕಾರಿಯಾಗಿಲ್ಲ. ಆದ್ದರಿಂದ ಸಿಕ್ಕಿಂ ರಾಜ್ಯ ಭಾರತದ ಉಳಿದ ನಗರಗಳೊಂದಿಗೆ ಗ್ಯಾಂಗ್ಟಕ್ ಮೂಲಕವೆ ಸಂಪರ್ಕ ಹೊಂದಿದೆ. ಜುಲುಕ್ ಪ್ರದೇಶದ ಒಂದು ಚಿಕ್ಕ ಹಳ್ಳಿ.

ಚಿತ್ರಕೃಪೆ: SOUMEN MANDAL

ಹೇಗೆ ತಲುಪಬಹುದು

ಹೇಗೆ ತಲುಪಬಹುದು

ಇನ್ನೂ ಗ್ಯಾಂಗ್ಟಕ್ ಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಯಿಂದ 115 ಕಿ.ಮೀ ಗಳಷ್ಟು ದೂರವಿದ್ದು ಸಿಲಿಗುರಿಯಿಂದ ಗ್ಯಾಂಗ್ಟಕ್ ಗೆ ಬಸ್ಸುಗಳು, ಬಾಡಿಗೆ ಕಾರುಗಳು ದೊರೆಯುತ್ತವೆ. ಸಿಲಿಗುರಿಯನ್ನು ಕೊಲ್ಕತ್ತಾದಿಂದ ಸುಲಭವಾಗಿ ತಲುಪಬಹುದಾಗಿದೆ. ಹಿಮಗಟ್ಟಿದ ಗುರುದೊಂಗ್ಮಾರ್ ಕೆರೆ.

ಚಿತ್ರಕೃಪೆ: Winks and Smiles Photography

ನೋಡಬಹುದಾದ

ನೋಡಬಹುದಾದ

ಸಿಕ್ಕಿಂ ರಾಜ್ಯದಲ್ಲಿ ನೋಡಬಹುದಾದ ಕೆಲವು ಪ್ರವಾಸಿ ಆಕರ್ಷಣೆಯ ಪಟ್ಟಣಗಳೆಂದರೆ ಗ್ಯಾಂಗ್ಟಕ್, ಜೊಂಗು, ಗೇಯ್ಜಿಂಗ್, ಮಂಗನ್, ನಾಮ್ಚಿ, ಪೆಲ್ಲಿಂಗ್, ರಾವಂಗ್ಲಾ ಹಾಗೂ ಯುಕ್ಸೋಮ್. ಗ್ಯಾಂಗ್ಟಕ್ ನಗರದಲ್ಲಿರುವ ಹಲವಾರು ಪ್ರವಾಸಿ ಸಂಸ್ಥೆಗಳಿಂದ ಪ್ರವಾಸಿ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಅದರ ಮೂಲಕ ಸಿಕ್ಕಿಂ ರಾಜ್ಯದ ವೈಭವ, ಪ್ರಾಕೃತಿಕ ಸಂಪತ್ತು ಹಾಗೂ ಸಂಸ್ಕೃತಿಯನ್ನು ಬಲು ಹತ್ತಿರದಿಂದ ಕಾಣಬಹುದು. ಗ್ಯಾಂಗ್ಟಕ್ ನಗರ.

ಚಿತ್ರಕೃಪೆ: Amit Mitra

ಮನಮೋಹಕ

ಮನಮೋಹಕ

ಉತ್ತರ ಸಿಕ್ಕಿಂ ರಾಜ್ಯದಲ್ಲಿ ಅದ್ಭುತವಾಗಿ ಹರಿಯುವ ಲಾಚುಂಗ್ ನದಿ.

ಚಿತ್ರಕೃಪೆ: MitaliBaruah

ವಾರ್ಸೆ

ವಾರ್ಸೆ

ಪಶ್ಚಿಮ ಸಿಕ್ಕಿಂ ರಾಜ್ಯದಲ್ಲಿರುವ ಬಾರ್ಸೆ/ವಾರ್ಸೆ ಕಾಡು ಪ್ರದೇಶ. ಅದ್ಭುತವಾದ ಅರಣ್ಯ ಸಂಪತ್ತಿನಿಂದ ಇದು ಕಂಗೊಳಿಸುತ್ತದೆ.

ಚಿತ್ರಕೃಪೆ: Spattadar

ಬಾರ್ಸೆ

ಬಾರ್ಸೆ

ಬಾರ್ಸೆಯ ರೋಡೋಡೆಂಡ್ರಾನ್ ಕಾಡುಗಳು. ಇಲ್ಲಿ ಸುತ್ತಾಡುವುದೆಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ...

ಚಿತ್ರಕೃಪೆ: Spattadar

ಪ್ರವಾಸಿ ಆಕರ್ಷಣೆ

ಪ್ರವಾಸಿ ಆಕರ್ಷಣೆ

ಸಿಕ್ಕಿಂನಲ್ಲಿರುವ ಅದ್ಭುತವಾದ ಯುಮ್ಥಾಂಗ್ ಕಣಿವೆ. ಗ್ಯಂಗ್ಟಕ್ ನಿಂದ ಒಂದೆ ದಿನದಲ್ಲಿ ಇದನ್ನು ನೋಡಿಕೊಂಡು ಬರಬಹುದು.

ಚಿತ್ರಕೃಪೆ: Pradeep Kumbhashi

ಪೆಲ್ಲಿಂಗ್

ಪೆಲ್ಲಿಂಗ್

ಸಿಕ್ಕಿಂನ ಪೆಲ್ಲಿಂಗ್ ಪಟ್ಟಣದ ಬಳಿಯಿರುವ ಖೆಚೆಯೋಪಲ್ರಿ ಸರೋವರ.

ಚಿತ್ರಕೃಪೆ: Yoghya

ಸಮಿತಿ

ಸಮಿತಿ

ಗೊಚೆಲಾ ಟ್ರೆಕ್ ಮಾರ್ಗದಲ್ಲಿ ಕಂಡುಬರುವ ಸಮಿತಿ ಎಂಬ ಶುದ್ಧ ನೀರಿನ ಕೆರೆ. ಸ್ಥಳೀಯರು ಇದನ್ನು ಒಂದು ಪವಿತ್ರ ಕೊಳ ಎನ್ನುತ್ತಾರೆ ಹಾಗೂ ಇದು ಇನ್ನೊಂದು ಪವಿತ್ರ ನದಿ ಎನ್ನಲಾಗುವ ಪ್ರೆಕ್ ನ ಮೂಲವಾಗಿದೆ.

ಚಿತ್ರಕೃಪೆ: Yoghya

ಜುಲುಕ್

ಜುಲುಕ್

ಬೆಟ್ಟ ಪರ್ವತಗಳ ಕಣಿವೆ ರಾಜ್ಯ ಅದರಲ್ಲಿರುವ ಸುರುಳಿ ರಸ್ತೆಗಳು. ಇದು ಸಿಕ್ಕಿಂ ವಿಶೇಷ. ಸಿಕ್ಕಿಂನ ಜುಲುಕ್ ಎಂಬಲ್ಲಿ ಈ ಪ್ರಸಿದ್ಧ ಐತಿಹಾಸಿಕ ಮಾರ್ಗವಿದೆ.

ಚಿತ್ರಕೃಪೆ: Surajit Roy

ಕಂಚನಜುಂಗಾ

ಕಂಚನಜುಂಗಾ

ಸಿಕ್ಕಿಂನ ಗೊಚೇಲಾದಿಂದ ಕಂಡುಬರುವ ಕಂಚನಜುಂಗಾದ ಅದ್ಭುತ ನೋಟ.

ಚಿತ್ರಕೃಪೆ: Yoghya

ಸೊಮೊ ಕೆರೆ

ಸೊಮೊ ಕೆರೆ

ನಾಥುಲಾ ಪಾಸ್ ಟ್ರೆಕ್ ಮಾಡುವಾಗ ಮಾರ್ಗ ಮಧ್ಯದಲ್ಲಿ ದೊರೆಯುವ ಸೊಮೊ ಕೆರೆ.

ಚಿತ್ರಕೃಪೆ: Robin S Kishore

ಕಾಡುಗಳು

ಕಾಡುಗಳು

ಸಿಕ್ಕಿಂನ ದಟ್ಟ ಹಸಿರಿನ ಕಾಡುಗಳು.

ಚಿತ್ರಕೃಪೆ: Pradeep Kumbhashi

ವಿಶೇಷ ಸ್ಥಳ

ವಿಶೇಷ ಸ್ಥಳ

ಸಿಕ್ಕಿಂನ ಅದ್ಭುತ ಜೀರೊ ಪಾಯಿಂಟ್ (ಶೂನ್ಯ ತಾಣ). ಅಂದರೆ ಇಲ್ಲಿಂದ ರಸ್ತೆಯು ಕೊನೆಗೊಳ್ಳುತ್ತದೆ. ಬೆರಳಣಿಕೆಯಷ್ಟು ಜನವಾಸವಿರುವ ಕೊನೆಯ ತಾಣ.

ಚಿತ್ರಕೃಪೆ: Abir1907

ಬನ್ ಝಾಕ್ರಿ

ಬನ್ ಝಾಕ್ರಿ

ಸಿಕ್ಕಿಂನ ಗ್ಯಾಂಗ್ಟಾಕ್ ನಲ್ಲಿರುವ ಬನ್ ಝಾಕ್ರಿ ಜಲಪಾತ. ನಗರದ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ.

ಚಿತ್ರಕೃಪೆ: Amitra Kar

ಕ್ರೋವ್ಸ್

ಕ್ರೋವ್ಸ್

ಉತ್ತರ ಸಿಕ್ಕಿಂನಲ್ಲಿರುವ ಕ್ರೋವ್ಸ್ ಕೆರೆ.

ಚಿತ್ರಕೃಪೆ: Carsten.nebel

ಗಣೇಶ ಟೋಕ್

ಗಣೇಶ ಟೋಕ್

ಗ್ಯಾಂಗ್ಟಕ್ ಬಳಿಯ ಗಣೇಶ ಟೋಕ್ ನಿಂದ ಗ್ಯಾಂಗ್ಟಕ್ ನಗರ ಕಂಡುಬರುವ ರೀತಿ.

ಚಿತ್ರಕೃಪೆ: Kailas98

ತೀಸ್ತಾ

ತೀಸ್ತಾ

ಗ್ಯಾಂಗ್ಟಕ್ ನ ಜೀವ ನದಿ ಎಂದೆ ಹೇಳಲಾಗುವ ತೀಸ್ತಾ ನದಿಯ ಒಂದು ಚಿತ್ರ.

ಚಿತ್ರಕೃಪೆ: PP Yoonus

ಚಿಕ್ಕ ಸೌಧ!

ಚಿಕ್ಕ ಸೌಧ!

ಸಿಕ್ಕಿಂ ವಿಧಾನ ಸಭೆಯ ಕಟ್ಟಡ. ಗ್ಯಾಂಗ್ಟಕ್ ನಗರದಲ್ಲಿದೆ. ಇಲ್ಲಿ ಇಬ್ಬನಿ ಬಲು ಸಾಮಾನ್ಯ. ಹೀಗಾಗಿ ಪ್ರಕೃತಿಯು ಸುಂದರವಾಗಿ ಕಂಗೊಳಿಸುತ್ತದೆ.

ಚಿತ್ರಕೃಪೆ: Kalyan

ಕೇಬಲ್ ಕಾರ್

ಕೇಬಲ್ ಕಾರ್

ಗ್ಯಾಂಗ್ಟಕ್ ಮೂಲತಃ ಹಲವು ಏರು ಪೇರಿನ ಭೂಮಟ್ಟ ಪ್ರದೇಶಗಳಿಂದ ಕೂಡಿದ ನಗರವಾಗಿದೆ. ಕೆಲವು ಕೆಳ ಸ್ತರದಲ್ಲಿದ್ದರೆ ಕೆಲವು ಪ್ರದೇಶಗಳು ಎತ್ತರದಲ್ಲಿ ಸ್ಥಿತವಿದೆ. ಹೀಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಲು ಕೇಬಲ್ ಕಾರು ಬಳಸುವುದು ಇಲ್ಲಿ ಸಾಮಾನ್ಯ.

ಚಿತ್ರಕೃಪೆ: kalyan3

ಬೌದ್ಧ ಭಿಕ್ಷುಗಳು

ಬೌದ್ಧ ಭಿಕ್ಷುಗಳು

ಸಿಕ್ಕಿಂನಲ್ಲಿರುವ ಪ್ರಸಿದ್ಧ ರುಮ್ಟೆಕ್ ಬೌದ್ಧ ಮಠ. ಇಲ್ಲಿ ಹೆಚ್ಚಾಗಿ ಬೌದ್ಧರನ್ನು, ವಿಶೇಷವಾಗಿ ಟಿಬೆಟ್ ಮೂಲದವರನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Sourav Das

Please Wait while comments are loading...