• Follow NativePlanet
Share
Menu
» »ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

Written By:

ತಮಿಳುನಾಡಿನಲ್ಲಿ ಅನೇಕ ದೇವಾಲಯಗಳಿವೆ. ದೇವಾಲಯಗಳ ತವರೂರು ಎಂದೇ ಕರೆಯುತ್ತಾರೆ. ಅತ್ಯಂತ ಹಳೆಯದಾದ ನಗರವಾದ ಕಾಂಚಿಪುರಂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕಾಂಚಿಪುರಂನಲ್ಲಿ ಅನೇಕ ದೇವಾಲಯಗಳಿರುವುದನ್ನು ಕಾಣಬಹುದು. ಇದು ಒಂದು ಕಾಲದಲ್ಲಿ ಪಲ್ಲವರ ರಾಜಧಾನಿಯಾಗಿತ್ತು. ಈ ಸುಂದರವಾದ ನಗರಕ್ಕೆ ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಸಾವಿರಾರು ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಕಾಚೀಪುರಂ ಅನ್ನು "ಸಾವಿರ ದೇವಾಲಯಗಳ ನಗರ" ಎಂದೇ ಕರೆಯುತ್ತಾರೆ.

ದಕ್ಷಿಣ ಭಾರತದ ಇತಿಹಾಸದಲ್ಲಿ ಸಾಕಷ್ಟು ಪ್ರಸಿದ್ಧವೆನಿಸಿರುವ ಕಾಂಜೀಪುರಂ ಅನ್ನು ಕಾಂಜೀವರಂ ಎಂದು ಕೂಡ ಕರೆಯುತ್ತಾರೆ. ಪ್ರಾಚೀನ ಕಾಲದಿಂದಲೂ ಅನೇಕ ಸಂತರು, ಭಕ್ತರು, ಕಲಾವಿದರು, ರಾಜಕಾರಣಿಗಳು, ಸಂಗೀತಗಾರರು, ಶ್ರವಣರು ಹಾಗು ತಾತ್ತ್ವಿಕ ವಿದ್ಯಾಕೇಂದ್ರದ ಜನ್ಮ ಸ್ಥಳವಾಗಿದೆ. ಶಿವಕಂಚಿಯಲ್ಲಿ ಸುಪ್ರಸಿದ್ಧವಾದ ಕಾಮಾಕ್ಷಿ, ಏಕಾಂಬರೇಶ್ವರ, ಕೈಲಾಸನಾಥ ದೇವಾಲಗಳಿವೆ. ಪ್ರಸ್ತುತ ಲೇಖನದಲ್ಲಿ ಇಲ್ಲಿನ ದೇವಾಲಯದ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಕಾಂಚೀಪುರಂ
ತಮಿಳುನಾಡಿನ ರಾಜಧಾನಿಯಾದ ಚೆನ್ನೈನಿಂದ ಕಾಂಚೀಪುರಂಗೆ ಸುಮಾರು 72 ಕಿ.ಮೀ ದೂರದಲ್ಲಿದೆ. ಸುಲಭವಾಗಿ ಕಾಂಚೀಪುರಂನ ಪ್ರವಾಸಿ ತಾಣಗಳಿಗೆಲ್ಲಾ ತಲುಪಬಹುದಾಗಿದೆ. ಈ ನಗರದಲ್ಲಿ ಒಟ್ಟು 7 ಅದ್ಭುತವಾದ ಹಿಂದೂ ದೇವಾಲಯಗಳಿವೆ. ಈ ನಗರವನ್ನು ಸಾವಿರ ದೇವಾಲಯಗಳ ನಗರ ಎಂದೇ ಅಲ್ಲದೇ ಹಿಂದೂಗಳ ಪವಿತ್ರವಾದ ನಗರ ಎಂದು ಕೂಡ ಕರೆಯುತ್ತಾರೆ.

PC:mckaysavage

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಸ್ವರ್ಗ
ಹಿಂದೂ ಪುರಾಣಗಳ ಪ್ರಕಾರ, ಇಲ್ಲಿನ ಪವಿತ್ರವಾದ ದೇವಾಲಯಗಳಿಗೆ ಭೇಟಿ ನೀಡುವವರು ಮೋಕ್ಷವನ್ನು ಪಡೆಯುತ್ತಾರೆ ಎಂದು ಹೇಳುತ್ತವೆ. ಶಿವ ಮತ್ತು ವಿಷ್ಣುವಿನ ಭಕ್ತರಿಗೆ ಇದೊಂದು ಸ್ವರ್ಗದ ಪ್ರದೇಶವೇ ಆಗಿದೆ. ಕಾಂಚೀಪುರಂನಲ್ಲಿ ಶಿವ ಹಾಗು ಶ್ರೀ ಮಹಾ ವಿಷ್ಣುವಿಗೆ ಸಮರ್ಪಿತವಾದ ಅನೇಕ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ವರದರಾಜ ಪೆರುಮಾಳ್ ದೇವಾಲಯವು ಒಂದು.

PC:Hiroki Ogawa

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಬುದ್ಧ
ತಮಿಳುನಾಡಿನಲ್ಲಿ ವಿವಿಧ ಸ್ಥಳಗಳಲ್ಲಿ ಬೌದ್ಧನ ತಳಿಗಳು ಇವೆಯಾದರೂ ಇಲ್ಲಿ ಮಾತ್ರ ಯಾವುದೇ ಪ್ರತಿಮೆ ಇಲ್ಲ, ಆದರೆ ಏಕಾಂಬರಾನಾಥರ್ ದೇವಾಲಯದ ಗೋಡೆಯ ಮೇಲೆ ಹಾಗು ಸಾಯಿ ದೇವಾಲಯದಲ್ಲಿ ಭಗವಾನ್ ಬುದ್ಧನ ಪ್ರತಿಮೆ ಇದೆ. ಆದರೆ ಈ ದೇವಾಲಯದಲ್ಲಿ ಯಾವುದೇ ವಿಗ್ರಹಗಳಿಲ್ಲ.

PC:UNKNOWN

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಶಿವ ಸ್ಥಾನ
ಈ ದೇವಾಲಯವನ್ನು ಶಿವನಿಗೆ ಸಮರ್ಪಿಸಲಾಗಿದೆ. ಪ್ರತಿವರ್ಷ ಭಗವಾನ್ ಶಿವನನ್ನು ಆಶೀರ್ವಾದಕ್ಕಾಗಿ ಅನೇಕ ಮಂದಿ ಭೇಟಿ ನೀಡುತ್ತಾರೆ. ತಮಿಳುನಾಡಿನ ಭೇಟಿ ನೀಡುವ ಪ್ರವಾಸಿಗರು 25% ರಷ್ಟು ಕಾಂಚೀಪುರಂಗೆ ಭೇಟಿ ನೀಡುತ್ತಿರುತ್ತಾರೆ.

PC:Krishna Chaitanya Chandolu

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಹಳೆಯದಾದುದು
ಇಲ್ಲಿನ ದೇವಾಲಯವು ಸುಮಾರು 1300 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟಿದೆ. ಇದು ಕಾಂಚೀಪುರಂನ ಉತ್ತರ ಭಾಗದಲ್ಲಿದೆ. ಇದು ತಮಿಳುನಾಡಿನ ಅತ್ಯಂತ ಹಳೆಯ ದೇವಾಲಯವಾಗಿದ್ದು ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದೆ.

PC:Amiya418

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಐದು ಅಂಶಗಳು
ಈ ದೇವಾಲಯವು ಪಂಚ ನಗರವಾಗಿದ್ದು ಶಿವನ 5 ಪಂಚಭೂತ ದೇವಾಲಯಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ. ಭೂಮಿ ದೇಹ ಎಂದು ಕರೆಯಲ್ಪಡುತ್ತದೆ. ಈ ದೇವಾಲಯಕ್ಕೆ ಅನೇಕ ರೋಗಗಳಿಂದ ಬಳಲುತ್ತಿರುವವರು ಇಲ್ಲಿನ ಸ್ವಾಮಿಯನ್ನು ಆರಾಧಿಸಿದರೆ ಸ್ವಾಮಿಯು ಪರಿಹಾರ ಮಾಡುತ್ತಾನೆ ಎಂಬುದು ಇವರ ನಂಬಿಕೆಯಾಗಿದೆ.

PC:Ssriram mt

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ದೇವಾಲಯದ ಚಾವಣಿಯು ಸುಮಾರು 59 ಅಡಿ ಎತ್ತರ ಮತ್ತು ಭಾರತದ ಅತಿ ಎತ್ತರದ ಕಟ್ಟಡಗಳಲ್ಲಿ ಒಂದಾಗಿದೆ. ಇದು ಅತ್ಯುತ್ತಮ ಹಾಗು ಅತ್ಯಂತ ಜನಪ್ರಿಯವಾದ ಪ್ರವಾಸಿ ಆಕರ್ಷಣೆಯಾಗಿದೆ.

Ssriram mt

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಶಿವನ ಭಕ್ತರು ಎಂದು ಅರಿತುಕೊಂಡ ಪಾರ್ವತಿ ದೇವಿಯು ಇಲ್ಲಿನ ಹಳೆಯ ಮಾವಿನಮರದಲ್ಲಿ ಪ್ರಾಯಶ್ಚಿತ್ತವನ್ನು ಮಾಡಿಕೊಂಡಳು ಎಂದು ಹೇಳಲಾಗುತ್ತದೆ.

Ssriram mt

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯವನ್ನು ಪಲ್ಲವ ಆಡಳಿತಗಾರರಿಂದ ನಿರ್ಮಾಣ ಮಾಡಲ್ಪಟ್ಟಿತು ಎಂದು ಹೇಳಲಾಗುತ್ತದೆ. ಅತ್ಯುತ್ತಮವಾದ ಕಲೆಗಾರಿಕೆಗೆ ಇದು ಅತ್ಯುತ್ತಮವಾದ ಉದಾಹಣೆಯೇ ಆಗಿದೆ. ಪುನರ್ ಸ್ಥಾಪನೆಯ ಕೆಲಸವನ್ನು ಕಾಂಚೀಪುರಂ ಆಡಳಿತಗಾರರು ಮಾಡಿದರು.

Ssriram mt

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಚೋಳರು ಸಾವಿರ ಅಡಿ ಹಾಗು ನೂರು ಅಡಿ ಹಾಲ್ ಅನ್ನು ನಿರ್ಮಾಣ ಮಾಡಿದ್ದಾರೆ. ಇದು ದೇವಾಲಯದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದೇ ಹೇಳಬಹುದು. ಹಾಗಾಗಿಯೇ ಅನೇಕ ಮಂದಿ ಪ್ರವಾಸಿಗರು ಇಲ್ಲಿನ ಅದ್ಭುತವಾದ ಸೌಂದರ್ಯಕ್ಕೆ ಮಾರು ಹೋಗುದೇ ಇರಲಾರರು.

Ssriram mt

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ಅದ್ಭುತವಾದ ದೇವಾಲಯವನ್ನು ಪಲ್ಲವರ ಕಾಲದಲ್ಲಿ ಪ್ರಸಿದ್ಧಿಯನ್ನು ಪಡೆಯಿತು. ನರಸಿಂಹ 2 ನೇ ಪಲ್ಲವ ನಿರ್ಮಾಣ ಮಾಡಿದ ಕೈಲಾಸನಾಥರ್ ದೇವಾಲಯವನ್ನು ಬಹುಪಾಲು ಜನರು ಅನುಸರಿಸಿದರು ಎಂದು ನಂಬಲಾಗಿದೆ.

Hiroki Ogawa

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಕೆಲವು ಸ್ಥಳ ಪುರಾಣಗಳ ಪ್ರಕಾರ ದೇವಾಲಯವು ಸುಮಾರು 1300 ವರ್ಷಕ್ಕಿಂತ ಹಳೆಯದು ಎಂದು ನಂಬಲಾಗಿದೆ. ಈ ದೇವಾಲಯವು ಚೆನ್ನೈ ನಗರದಿಂದ ಸುಮಾರು 2 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಕಾಂಚೀಪುರಂನಲ್ಲಿರುವ ಏಕಾಂಬರೇಶ್ವರ ದೇವಾಲಯಕ್ಕೆ ಭೇಟಿ ನೀಡಿ. ಈ ದೇವಾಲಯದಲ್ಲಿ ಸ್ವಾಮಿಯನ್ನು ದರ್ಶನ ಮಾಡಿದರೆ ಮೋಕ್ಷ ಖಚಿತ ಎಂದು ನಂಬಲಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ