Search
  • Follow NativePlanet
Share
» »ಕದಲುವ ಶಿವಲಿಂಗ: ದುಗ್‍ದೇಶ್ವರ ನಾಥ ತೀರ್ಥಕ್ಷೇತ್ರದಲ್ಲಿ

ಕದಲುವ ಶಿವಲಿಂಗ: ದುಗ್‍ದೇಶ್ವರ ನಾಥ ತೀರ್ಥಕ್ಷೇತ್ರದಲ್ಲಿ

ಆಶ್ಚರ್ಯಕರವಾದ ಕದಲುವ ಶಿವಲಿಂಗವಿರುವ ಪವಿತ್ರವಾದ ಪುಣ್ಯಕ್ಷೇತ್ರವು ಉತ್ತರ ಪ್ರದೇಶದ ಗಾಜಿಬಾದ್ ನ ಡಿಯೇರಿಯ ಜಿಲ್ಲೆಯ ರುದ್ರಪುರ್ ಎಂಬ ಗ್ರಾಮದಲ್ಲಿದೆ. ಈ ದೇವಾಲಯವನ್ನು ದುಗ್‍ದೇಶ್ವರ ನಾಥ ಎಂದು ಕರೆಯುತ್ತಾರೆ.

ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾ ಶಿವನು ಲಿಂಗ ಸ್ವರೂಪಿ. ದೇಶದ ಮೂಲೆ ಮೂಲೆಗಳಲ್ಲಿ ಹಲವಾರು ಪ್ರಸಿದ್ದವಾದ ಲಿಂಗಗಳನ್ನು ಕಾಣಬಹುದು. ಎಷ್ಟೋ ಸಾವಿರಾರು ವರ್ಷಗಳ ಹಿಂದಿನ ಶಿವ ಲಿಂಗಗಳು ನಮ್ಮ ಭಾರತ ದೇಶದಲ್ಲಿರುವುದು ನಮ್ಮ ಭಾಗ್ಯ. ಹಿಂದೂಗಳು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಆರಾಧಿಸುವ ದೇವತೆಗಳಲ್ಲಿ ಶಿವ ಲಿಂಗ ಪ್ರಮುಖವಾದುದು. ಮಹಾ ಶಿವರಾತ್ರಿಯಂದು ಜಾಗರಣೆ, ಉಪವಾಸ ಎಂದು ಶಿವನ ಸ್ಮರಣೆಯಲ್ಲಿ ತಲ್ಲೀನವಾಗಿರುತ್ತೆವೆ. ಲಿಂಗಗಳನ್ನು ದೇವಾದಿ ದೇವತೆಗಳಿಂದ ಹಿಡಿದು ಸಾಮಾನ್ಯ ಜನತೆಯು ಕೂಡ ಲಿಂಗದ ಪ್ರತಿಷ್ಟಾಪನೆ ಮಾಡಿರುವುದನ್ನು ಕಾಣಬಹುದು. ಅವುಗಳಲ್ಲಿ ಯಮ ಧರ್ಮರಾಜ, ಧರ್ಮರಾಯ, ಚಿತ್ರಗುಪ್ತ ಸ್ಥಾಪಿಸಿದ ಲಿಂಗಗಳನ್ನೂ ಶ್ರೀ ಕಾಳ ಹಸ್ತಿಯಲ್ಲಿ ಹಾಗೂ ಕರ್ನಾಟಕದಲ್ಲಿ ವಿಶೇಷವಾಗಿ ಕೋಟಿ ಲಿಂಗವನ್ನು ಕಾಣಬಹುದು. ಸಾಮಾನ್ಯವಾಗಿ ಲಿಂಗನಿರುವ ಸ್ಥಾನದಲ್ಲಿ ಹಲವಾರು ಅದ್ಭುತಗಳು, ಪವಾಡಗಳನ್ನು ನಾವು ಕೇಳಿರಬಹುದು. ಆ ಅದ್ಭುತಗಳಲ್ಲಿ ಅತ್ಯದ್ಭುತವಾದ ಪವಾಡವೆನೆಂದರೆ ದುಗ್‍ದೇಶ್ವರ ನಾಥ ದೇವಾಲಯ ಇಲ್ಲಿ ಶಿವ ಲಿಂಗವು ಕದಲುತ್ತದೆ. ಪ್ರಸ್ತುತ ಲೇಖನದಲ್ಲಿ ಕದಲುವ ಶಿವಲಿಂಗದ ಬಗ್ಗೆ ತಿಳಿಯಿರಿ ಒಮ್ಮೆ ಉತ್ತರ ಪ್ರದೇಶದಲ್ಲಿರುವ ಈ ದುಗ್‍ದೇಶ್ವರ ನಾಥ ತೀರ್ಥಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಡಿ.

ದೇವಾಲಯದ ವಿವರ

ದೇವಾಲಯದ ವಿವರ

ಆಶ್ಚರ್ಯಕರವಾದ ಕದಲುವ ಶಿವಲಿಂಗವಿರುವ ಪವಿತ್ರವಾದ ಪುಣ್ಯಕ್ಷೇತ್ರವು ಉತ್ತರ ಪ್ರದೇಶದ ಗಾಜಿಬಾದ್ ನ ಡಿಯೇರಿಯ ಜಿಲ್ಲೆಯ ರುದ್ರಪುರ್ ಎಂಬ ಗ್ರಾಮದಲ್ಲಿದೆ. ಈ ದೇವಾಲಯವನ್ನು ದುಗ್‍ದೇಶ್ವರ ನಾಥ ಎಂದು ಕರೆಯುತ್ತಾರೆ.
PC:YOUTUBE

 ಉಪ ಲಿಂಗ

ಉಪ ಲಿಂಗ

ಈ ದುಗ್‍ದೇಶ್ವರ ನಾಥ ಶಿವಲಿಂಗವನ್ನು ಮಧ್ಯೆ ಪ್ರದೇಶದಲ್ಲಿರುವ ಮಹಾ ಕಾಲೇಶ್ವರಂ ಜ್ಯೋತ್ಯಿರ್ ಲಿಂಗಕ್ಕೆ ಉಪ ಲಿಂಗ ಎಂದೇ ಕರೆಯುತ್ತಾರೆ.
PC: YOUTUBE

ನೆಲದ ಮೇಲಿದೆ ಶಿವಲಿಂಗ

ನೆಲದ ಮೇಲಿದೆ ಶಿವಲಿಂಗ

ಸಾಮಾನ್ಯವಾಗಿ ಶಿವ ಲಿಂಗವು ಒಂದಕ್ಕೋಂದು ಸಂಬಂಧವಿರುವಂತೆ ಅಂಟಿಕೊಂಡಿರುತ್ತದೆ. ಆದರೆ ಇಲ್ಲಿನ ಶಿವ ಲಿಂಗವನ್ನು ನೆಲದ ಮೇಲೆ ಸ್ಥಾಪಿಸಲಾಗಿರುವುದು ವಿಶೇಷ.
PC:YOUTUBE

 ಸ್ಥಳೀಯರ ಅಭಿಪ್ರಾಯ

ಸ್ಥಳೀಯರ ಅಭಿಪ್ರಾಯ

ದುಗ್‍ದೇಶ್ವರ ನಾಥ ದೇವಾಲಯದಲ್ಲಿರುವ ಶಿವ ಲಿಂಗವನ್ನು ಸ್ಥಾಪಿಸಲಾಗಿಲ್ಲ ಬದಲಾಗಿ ಈ ಲಿಂಗವು ಸ್ವಯಂ ಭೂ ಲಿಂಗ ಎಂದು ಕರೆಯುತ್ತಾರೆ.
PC:YOUTUBE

ಕದಲುವ ಶಿವಲಿಂಗ

ಕದಲುವ ಶಿವಲಿಂಗ

ದುಗ್‍ದೇಶ್ವರ ನಾಥ ಶಿವಲಿಂಗವನ್ನು ಒಮ್ಮೆ ಕದಲಲು ಪ್ರಾರಂಭವಾದರೆ ಸುಮಾರು 3 ಗಂಟೆಯಿಂದ 24 ಗಂಟೆಯವರೆವಿಗೂ ಕದಲುತ್ತಾ ಇರುತ್ತದೆಯಂತೆ. ಶಿವಲಿಂಗ ಕದಲಿ ನಿಂತರೆ ಮತ್ತೆ ಎಷ್ಟೇ ಪ್ರಯತ್ನ ಮಾಡಿದರು ಕದಲುವುದಿಲ್ಲವಂತೆ.
PC:YOUTUBE

ದುಗ್‍ದೇಶ್ವರ ದೇವಾಲಯ

ದುಗ್‍ದೇಶ್ವರ ದೇವಾಲಯ

ಈ ದೇವಾಲಯವು ಅತ್ಯಂತ ಪ್ರಾಚೀನವಾಗಿದ್ದು, ಸುಮಾರು 5000 ವರ್ಷಗಳ ಹಿಂದಿನ ದೇವಾಲಯ ಎಂದೂ ಇತಿಹಾಸ ತಿಳಿಸುತ್ತದೆ.
PC:YOUTUBE

ಶಿವ ಲಿಂಗದ ವಿಸ್ತೀಣಾ

ಶಿವ ಲಿಂಗದ ವಿಸ್ತೀಣಾ

Yಈ ಶಿವಲಿಂಗವು ಸ್ವಯಂ ಭೂ ಲಿಂಗವಾಗಿದ್ದು, ಭೂಮಿಯ ತಳಭಾಗದಲ್ಲಿ ಎಷ್ಟು ವಿಸ್ತಾರಗೊಂಡಿದೆಯೋ ಇದುವರೆಗೂ ಯಾರಿಗೂ ತಿಳಿದಿಲ್ಲ. ಈ ಶಿವ ಲಿಂಗದ ಆಳವನ್ನು ಪರೀಕ್ಷಿಸಲು ಹೋರಟಾಗ ಶಿವಲಿಂಗವನ್ನು ಎಷ್ಟೇ ಬಗೆದರು ಇನ್ನೂ ಆಳದಲ್ಲಿರುವುದನ್ನು ಕಂಡು ಕೊನೆಗೆ ಲಿಂಗದ ವಿಸ್ತಾರವನ್ನು ಕಂಡುಹಿಡಿಯುವ ಕಾರ್ಯವನ್ನು ಕೈಬಿಟ್ಟರಂತೆ.
PC:YOUTUBE

ಅಭಿಷೇಕ

ಅಭಿಷೇಕ

ಇಲ್ಲಿನ ಶಿವಲಿಂಗಕ್ಕೆ ಅಭೀಷೇಕ ಮಾಡಿದ ಹಾಲು ಅತ್ಯಂತ ಪವಿತ್ರವಾದುದು ಎಂದು ನಂಬಲಾಗಿದೆ. ಈ ಪವಿತ್ರವಾದ ಹಾಲು ಹಲವು ರೋಗಗಳನ್ನು ನಿವಾರಣೆ ಮಾಡುತ್ತದೆ ಹಾಗೂ ಆರ್ಯುವೇಧಕ್ಕೂ ಉತ್ತಮವಾದ ಚಿಕ್ಕಿತ್ಸೆ ನೀಡಲು ಬಳಸುತ್ತಾರೆ.
PC:YOUTUBE

ದೇವಾಲಯದ ಒಳದ್ವಾರ

ದೇವಾಲಯದ ಒಳದ್ವಾರ

ದುಗ್‍ದೇಶ್ವರ ನಾಥನ ದೇವಾಲಯದ ಒಳದ್ವಾರವು ಒಂದೇ ಕಲ್ಲಿನ ಬಂಡೆಯಲ್ಲಿ ನಿರ್ಮಿಸಲಾಗಿದೆ. ಈ ದ್ವಾರದ ಬಳಿ ಗಣೇಶನ ಮೂರ್ತಿಯನ್ನು ಕಾಣಬಹುದಾಗಿದೆ.
PC:YOUTUBE

ಭಕ್ತರು

ಭಕ್ತರು

ಈ ದೇವಾಲಯದ ವಿಸ್ಮಯ ನೋಡುವುದಕ್ಕೆ ಕೇವಲ ಉತ್ತರ ಪ್ರದೇಶದವರೆ ಅಲ್ಲದೇ ದೇಶ, ವಿದೇಶಗಳಿಂದಲೂ ದುಗ್‍ದೇಶ್ವರ ಶಿವಲಿಂಗದ ವಿಸ್ಮಯ ಹಾಗೂ ದರ್ಶನ ಭಾಗ್ಯ ಪಡೆಯಲು ಬರುತ್ತಾರೆ.
PC:YOUTUBE

ನಿರ್ಮಾಣದ ಇತಿಹಾಸ

ನಿರ್ಮಾಣದ ಇತಿಹಾಸ

ಈ ದುಗ್‍ದೇಶ್ವರ ನಾಥ ದೇವಾಲಯವನ್ನು ಛತ್ರಪತಿ ಶಿವಾಜಿ ನಿರ್ಮಿಸಿದ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
PC:YOUTUBE

ದುಗ್‍ದೇಶ್ವರ ನಾಥ ವಿಶ್ವ ವಿದ್ಯಾಲಯ

ದುಗ್‍ದೇಶ್ವರ ನಾಥ ವಿಶ್ವ ವಿದ್ಯಾಲಯ

ದುಗ್‍ದೇಶ್ವರ ನಾಥನ ಸುತ್ತ ಮುತ್ತ ಸುಮಾರು 20 ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಇಲ್ಲಿಗೆ ಹಲವಾರು ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ.
PC:YOUTUBE

ದೇವಾಲಯದ ಒಳಭಾಗದಲ್ಲಿರುವ ಇತರ ಮೂರ್ತಿಗಳು

ದೇವಾಲಯದ ಒಳಭಾಗದಲ್ಲಿರುವ ಇತರ ಮೂರ್ತಿಗಳು

ದುಗ್‍ದೇಶ್ವರ ನಾಥ ದೇವಾಲಯದ ಒಳಭಾಗದಲ್ಲಿ ದುರ್ಗಿ, ಪುರಾತನವಾದ ಬಾವಿ, ಸಂತ ಸಮಾಧಿ, ಮಹಾ ಕಾಳಿ, ಯೋಗ ಶಾಲ ವಿದ್ಯಾಪೀಠವನ್ನು ಕಾಣವಹುದಾಗಿದೆ.
PC:SurajSaini

ಪ್ರವೇಶ ಸಮಯ

ಪ್ರವೇಶ ಸಮಯ

ಈ ದೇವಾಲಯದ ದರ್ಶನ ಸಮಯ ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಭಕ್ತರ ಪ್ರವೇಶಕ್ಕೆ ಅನುಮತಿ ಇದೆ.
PC:YOUTUBE

ವಿಮಾನದ ಮಾರ್ಗದ ಮೂಲಕ

ವಿಮಾನದ ಮಾರ್ಗದ ಮೂಲಕ

ದುಗ್‍ದೇಶ್ವರ ನಾಥ ದೇವಾಲಯವು ಉತ್ತರ ಪ್ರದೇಶದಲ್ಲಿರುವುದರಿಂದ, ಈ ದೇವಾಲಯಕ್ಕೆ ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ಇಂದಿರಾ ಗಾಂಧಿ ಇಂಟರ್ ನ್ಯಾಷನಲ್ ಏರ್‍ಪೋರ್ಟ್. ಇಲ್ಲಿ ದುಗ್‍ದೇಶ್ವರ ನಾಥ ದೇಗುಲಕ್ಕೆ ಕೇವಲ 40 ಕಿ,ಮೀ ದೂರದಲ್ಲಿದೆ.
PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X