Search
  • Follow NativePlanet
Share
» »ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ

ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ

ದುದ್ದೆಡ ಸ್ವಯಂಭೂ ದೇವಾಲಯವನ್ನು ಶಂಭು ದೇವಾಲಯ ಅಥವಾ ಶಿವ ದೇವಾಲಯ ಎಂದೂ ಕರೆಯುತ್ತಾರೆ. ಕಾಕತೀಯರಿಂದ ಈ ದೇವಾಲಯದ ಪುನಃ ನಿರ್ಮಾಣ ನಡೆದಿದೆ ಎನ್ನಲಾಗುತ್ತದೆ. ಇಲ್ಲಿನ ಶಿವಲಿಂಗವೂ ಪುರಾಣ ಕಾಲಕ್ಕೂ ಮೊದಲೇ ಇದೆ ಎನ್ನಲಾಗುತ್ತದೆ.

 ಶಿವಲಿಂಗ

ಶಿವಲಿಂಗ

Pc: youtube

ಅನಾದಿಕಾಲದಿಂದಲೂ ಇಲ್ಲಿ ಶಿವಲಿಂಗವಿದೆ. ಆದರೆ ದೇವಾಲಯವನ್ನು 9ರಿಂದ 12ನೇ ಶತಮಾನದ ಮಧ್ಯದಲ್ಲಿ ನಿರ್ಮಿಸಿದ್ದು ಎನ್ನುತ್ತದೆ ಇಲ್ಲಿನ ಕ್ಷೇತ್ರ ಪುರಾಣ. ಆ ಕಾಲದಲ್ಲಿ ದುದ್ದಡ ಗ್ರಾಮವು ಸಂಪದ್ಭರಿತವಾಗಿತ್ತು ಎಂದು ನಂಬುತ್ತಾರೆ.

30 ಅಡಿ ಎತ್ತರದ ಕಬ್ಬಿನ ಗಣೇಶನ ಜೊತೆ 4ಸಾವಿರ ಕೆ.ಜಿಯ ಲಡ್ಡು ನೋಡೋ ಭಾಗ್ಯ ನಿಮಗೆ

ಸಪ್ತಮಾತೃಕೆಯರು

ಸಪ್ತಮಾತೃಕೆಯರು

PC: youtube

ಆ ಕಾಲದಲ್ಲಿನ ಸಪ್ತಮಾತೃಕೆಯರ ವಿಗ್ರಹವನ್ನು ಇಂದಿಗೂ ನಾವು ಇಲ್ಲಿನ ದೇವಾಲಯದಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಅಲ್ಲಿ ದೊರೆತಿರುವ ಶಾಸನಗಳಲ್ಲೂ ಈ ವಿಷಯಗಳಿವೆ.

ಕಾಕತೀಯ ವಾಸ್ತು ಶೈಲಿ

ಕಾಕತೀಯ ವಾಸ್ತು ಶೈಲಿ

PC: youtube

ಕಾಕತೀಯರ ಕಾಲದಲ್ಲಿ ಇದರ ಪುನನಿರ್ಮಾಣ ನಡೆದಿದೆ ಎನ್ನಲಾಗುತ್ತದೆ. . ಹಾಗಾಗಿ ಇಲ್ಲಿನ ದೇವಾಲಯದಲ್ಲಿ ಕಾಕತೀಯ ವಾಸ್ತು ಶೈಲಿಯನ್ನು ಕಾಣಬಹುದು. ಇಲ್ಲಿನ ಶಿಲ್ಪಕಲಾಕೃತಿಯಗಳು ಸುಂದರವಾಗಿದೆ.

ಓಂ ನಮಃ ಶಿವಾಯ್ ಹೇಳಿದ್ರೆ ಇಲ್ಲಿ ಏನೆಲ್ಲಾ ಚಮತ್ಕಾರ ನಡೆಯುತ್ತೆ ಗೊತ್ತಾ?

ಕಷ್ಟಗಳೆಲ್ಲಾ ಪರಿಹಾರ

ಕಷ್ಟಗಳೆಲ್ಲಾ ಪರಿಹಾರ

PC: youtube

ಆಗಮ ಶಾಸ್ತ್ರದ ಪ್ರಕಾರ ನಿರ್ಮಿಸಲಾಗಿರುವ ಈ ದೇವಾಲಯದ ದೇವತೆಯರ ದರ್ಶನ ಪಡೆದ್ರೆ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಇಲ್ಲಿ ಅಧಿಕ ಸಂಖ್ಯೆಯಲ್ಲ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ..

 16 ಏಕ ಶಿಲಾ ಸ್ತಂಭ

16 ಏಕ ಶಿಲಾ ಸ್ತಂಭ

PC: youtube

ಇಲ್ಲಿ ಗರ್ಭಗುಡಿಯ ಮುಂದೆ 16 ಏಕ ಶಿಲಾ ಸ್ತಂಭಗಳಿಂದ ನಿರ್ಮಿಸಲಾಗಿರುವ ಕಲ್ಯಾಣ ಮಂಟಪವಿದೆ. ಈ ಗರ್ಭಗುಡಿಯ ಕಲ್ಯಾಣ ಮಂಟಪದ ಮಧ್ಯೆ ಸುಂದರವಾದ ನಂದಿಯ ವಿಗ್ರವನ್ನು ಪ್ರತಿಷ್ಠಾಪಿಸಲಾಗಿದೆ. ನಮ್ಮ ದೇಶದಲ್ಲಿರುವ ಕೆಲವೇ ಕೆಲವು ದಕ್ಷಿಣಾಭಿಮುಖವಾಗಿರುವ ದೇವಿಯ ದೇವಸ್ಥಾನಗಳಲ್ಲಿ ದುದ್ದಡ ಸ್ವಯಂ ಭೂ ಲಿಂಗೇಶ್ವರಾಲಯ ಕೂಡಾ ಒಂದು.

ಇಲ್ಲಿ ಮದುವೆಯಾದವರು ಕೆಲವೇ ಗಂಟೆಯಲ್ಲಿ ವಿಧವೆಯರಾಗ್ತಾರೆ !

ಭವಾನಿ ಎಂದು ಕರೆಯಲಾಗುತ್ತದೆ

ಭವಾನಿ ಎಂದು ಕರೆಯಲಾಗುತ್ತದೆ

PC: youtube

ಇಲ್ಲಿ ದೇವಿಯನ್ನು ಭವಾನಿ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಚತುರ್ಭುಜವನ್ನು ಹೊಂದಿದ್ದು. ಏಕ ಶಿಲೆಯಲ್ಲಿ ನಿರ್ಮಿಸಲಾಗಿರುವ ಈ ಮೂರ್ತಿಯೂ ಸ್ವಲ್ಪ ಭಯಾನಕವಾಗಿದೆ. . ಇಲ್ಲಿ ದೇವಿಯನ್ನು ಪೂಜಿಸಿದವರು ಅದ್ಭುತ ಶಕ್ತಿಯನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಇಲ್ಲಿ ಕ್ಷುದ್ರಪೂಜೆಯನ್ನು ಮಾಡಲು ದೂರದೂರದ ಊರಿಗಳಿಂದ ನಾಗಸಾಧುಗಳು ಇಲ್ಲಿಗೆ ಆಗಮಿಸುತ್ತಾರೆ.

 ವೀರಭದ್ರಸ್ವಾಮಿ

ವೀರಭದ್ರಸ್ವಾಮಿ

PC: youtube

ಇಲ್ಲಿ ಭದ್ರಕಾಳಿ ಜೊತೆ ವೀರಭದ್ರಸ್ವಾಮಿ ಕೂಡಾ ಇದ್ದಾರೆ. ಪ್ರತಿದಿನ ಮುಂಜಾನೆ 3 ಗಂಟೆಯಿಂದ 4 ಗಂಟೆಯೊಳಗೆ ಓರ್ವ ಯೋಗಿ ವೀರಭದ್ರಸ್ವಾಮಿ ದೇವಾಲಯದಿಂದ ಸರ್ಪ ರೂಪದಲ್ಲಿ ಬಂದು ಲಿಂಗರೂಪದಲ್ಲಿರುವ ಸ್ವಾಮಿಯನ್ನು ಪೂಜಿಸಿ ಹೋಗುತ್ತಾರೆ .

ಎಡಕಲ್ಲು ಗುಡ್ಡ ಸಿನಿಮಾದ ಶೂಟಿಂಗ್ ನಡೆದ ಎಡಕಲ್ಲು ಗುಹೆಗೆ ಹೋಗಿದ್ದೀರಾ?

ರಾತ್ರಿ ವೇಳೆ ಪೂಜೆ

ರಾತ್ರಿ ವೇಳೆ ಪೂಜೆ

PC: youtube

ರಾತ್ರಿ ಸಮಯದಲ್ಲಿ ಇಲ್ಲಿ ಯಾಗ, ಪೂಜೆಗಳು ನಡೆಯುತ್ತದೆ ಎನ್ನುವುದಕ್ಕೆ ರಾತ್ರಿ ಹೊತ್ತಿನಲ್ಲಿ ಓಂಕಾರಾನಾದಗಳು ಕೇಳಿಸುತ್ತವೆ ಎಂದು ಅಲ್ಲಿನ ಭಕ್ತರೂ ಹೇಳುತ್ತಾರೆ. ಈ ದೇವಾಲಯದ ಆವರಣದಲ್ಲಿರುವ ಸಂತಾನ ನಾಗೇಂದ್ರನನ್ನು ಪ್ರಾರ್ಥಿಸಿದರೆ ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X