Search
  • Follow NativePlanet
Share
» »ಆಂಜನೇಯ ಸ್ವಾಮಿಯನ್ನು ದ್ವೇಷಿಸುವ ಗ್ರಾಮವಿದು....!

ಆಂಜನೇಯ ಸ್ವಾಮಿಯನ್ನು ದ್ವೇಷಿಸುವ ಗ್ರಾಮವಿದು....!

ಭಾರತ ದೇಶದಲ್ಲಿ ಎಲ್ಲಿ ನೋಡಿದರು ಆಂಜನೇಯ ಸ್ವಾಮಿಯ ದೇವಾಲಯಗಳು ದರ್ಶನವಾಗುತ್ತದೆ. ಸಾಧಾರಣವಾಗಿ ದುಷ್ಟಶಕ್ತಿಗಳ ಬಾಧೆಯಿಂದ ಕಾಪಾಡಿಕೊಳ್ಳಲು ಆಂಜನೇಯ ಸ್ವಾಮಿಯನ್ನು ಆರಾಧಿಸುತ್ತೇವೆ. ಆದರೆ ಇಲ್ಲೊಂದು ಗ್ರಾಮವಿದೆ. ಆ ಗ್ರಾಮದಲ್ಲಿ ಹನುಮಂತನನ್ನು

ಆ ಗ್ರಾಮದಲ್ಲಿ ಯಾರಿಗೂ ಆಂಜನೇಯ, ಹನುಮಂತ, ಮಾರುತಿ ಎಂಬ ಹೆಸರು ಕೂಡ ಈಡುವುದಿಲ್ಲ. ಒಂದು ವೇಳೆ ತಿಳಿಯದೇ ಕರೆದರೆ ಅಷ್ಟೇ....
ಭಾರತ ದೇಶದಲ್ಲಿ ಎಲ್ಲಿ ನೋಡಿದರು ಆಂಜನೇಯ ಸ್ವಾಮಿಯ ದೇವಾಲಯಗಳು ದರ್ಶನವಾಗುತ್ತದೆ. ಸಾಧಾರಣವಾಗಿ ದುಷ್ಟಶಕ್ತಿಗಳ ಬಾಧೆಯಿಂದ ಕಾಪಾಡಿಕೊಳ್ಳಲು ಆಂಜನೇಯ ಸ್ವಾಮಿಯನ್ನು ಆರಾಧಿಸುತ್ತೇವೆ. ಆದರೆ ಇಲ್ಲೊಂದು ಗ್ರಾಮವಿದೆ. ಆ ಗ್ರಾಮದಲ್ಲಿ ಹನುಮಂತನನ್ನು ಪೂಜಿಸುವುದಿರಲಿ, ಹೆಸರನ್ನು ಕೂಡ ನೆನೆಸಿಕೊಳ್ಳುವುದಿಲ್ಲ. ಆದರೆ ಈ ಗ್ರಾಮದಲ್ಲಿ ಹನುಮಂತನನ್ನು ಪೂಜಿಸುವುದಿಲ್ಲ ಹಾಗೆಯೇ ಆತನ ನಾಮವನ್ನು ಉಚ್ಛಾರ ಮಾಡಲು ಕೂಡ ಇಷ್ಟ ಪಡುವುದಿಲ್ಲ ಎಂದರೆ ನಂಬುತ್ತೀರಾ?

ಹಾಗಾದರೆ ಆ ಸ್ವಾಮಿಯ ಬಗ್ಗೆ ಇವರಿಗೆ ಇರುವ ದ್ವೇಷವಾದರೂ ಏನು? ಯಾಕೆ ಆತನನ್ನು ಪೂಜಿಸುವುದಿಲ್ಲ? ಎಂಬ ಹಲವಾರು ಪ್ರಶ್ನೆಗೆ ಉತ್ತರ ಲೇಖನದ ಮೂಲಕ ತಿಳಿದುಕೊಳ್ಳೋಣ.

ಎಲ್ಲಿದೆ?

ಎಲ್ಲಿದೆ?

ಆ ಗ್ರಾಮದ ಹೆಸರು ದ್ರೋಣಗಿರಿ. ಉತ್ತರಾಖಂಢ ರಾಜ್ಯದಲ್ಲಿನ ಅಲ್ಮೋರಾ ಜಿಲ್ಲೆಯಲ್ಲಿದೆ. ದೇಶದ ರಾಜಧಾನಿಯಾದ ದೆಹಲಿಯಿಂದ ಸುಮಾರು 400 ಕಿ.ಮೀ ದೂರದಲ್ಲಿದೆ. 6 ಗ್ರಾಮಗಳ ಸಮೂಹದಿಂದ ಏರ್ಪಟ್ಟ ಊರೇ ದ್ರೋಣಗಿರಿ.

PC:Gautam Dhar


ದುನಗಿರಿ ದೇವಿ

ದುನಗಿರಿ ದೇವಿ

ಇದಕ್ಕೆ ಇರುವ ಇನ್ನು ಹಲವಾರು ಹೆಸರುಗಳೆಂದರೆ ದುನಗಿರಿ, ದ್ರೋಣಗಿರಿ. ಈ ಗ್ರಾಮವು ಸಮುದ್ರ ಮಟ್ಟದಿಂದ ಸುಮಾರು 8000 ಅಡಿ ಎತ್ತರದಲ್ಲಿದೆ. ಇದು ಕುಮವಾನ್ ಪರ್ವತ ಶ್ರೇಣಿಯಲ್ಲಿದೆ. ದ್ರೋಣಗಿರಿಯಲ್ಲಿ ಪ್ರಸಿದ್ಧ ಪಡೆದ ಶಕ್ತಿ ಪೀಠವಿದೆ. ದೇವಾಲಯದಲ್ಲಿ ನೆಲೆಸಿರುವ ದೇವತೆಗಳನ್ನು "ದುನಗಿರಿ ದೇವಿ" ಯಾಗಿ ಕರೆಯುತ್ತಾರೆ.


PC:Manfred Sommer

ದ್ರೋಣಗಿರಿ

ದ್ರೋಣಗಿರಿ

ದ್ರೋಣಗಿರಿಯಲ್ಲಿ ಆಂಜನೇಯ ಸ್ವಾಮಿಯನ್ನು ಪೂಜೆ ಮಾಡುವುದಿಲ್ಲ... ಬದಲಾಗಿ ದ್ವೇಷಿಸುತ್ತಾರೆ ಏಕೆ? ಅಷ್ಟು ಪಾಪ ಈ ಗ್ರಾಮಕ್ಕೆ ಆಂಜನೇಯಸ್ವಾಮಿ ಏನು ಮಾಡಿದ್ದಾನೆ? ಇದಕ್ಕೆ ಕಾರಣವಾದರೂ ಏನು?..ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ...


PC:Jay Tandale


ಪುರಾಣದಲ್ಲಿ ದ್ರೋಣಗಿರಿ

ಪುರಾಣದಲ್ಲಿ ದ್ರೋಣಗಿರಿ

ಪಾಂಡವರ ಗುರುವಾದ ದ್ರೋಣಾಚಾರ್ಯರು ಈ ಪ್ರದೇಶದ ಒಂದು ಬೆಟ್ಟದ ಮೇಲೆ ತಪಸ್ಸು ಮಾಡಿದರಿಂದಲೇ ಆ ಬೆಟ್ಟಕ್ಕೆ ದ್ರೋಣಗಿರಿ ಎಂಬ ಹೆಸರು ಬಂದಿತು ಎಂದು ಸ್ಥಳೀಯರು ಹೇಳುತ್ತಾರೆ. ಪಾಂಡವರು ವನವಾಸ ಮಾಡುವ ಸಮಯದಲ್ಲಿ ಕೆಲವು ದಿನಗಳು ಇಲ್ಲಿ ಕಾಲ ಕಳೆದ ಹಾಗೆ ಮಹಾಭಾರತದಲ್ಲಿ ಹೇಳಲಾಗಿದೆ. ದುನಗಿರಿ ದೇವಿಯನ್ನು ಮಹಾಮಾಯೆ ಹರಿಪ್ರಿಯೆ ಎಂದು ಕೂಡ ಬಣ್ಣಿಸುತ್ತಾರೆ. ಇದೊಂದು ಶಕ್ತಿ ಪೀಠವಾಗಿದ್ದು, ಇದನ್ನು "ಉಗ್ರ ಪೀಠ" ಎಂದು ಕೂಡ ಕರೆಯುತ್ತಾರೆ.


PC:Gautam

ರಾಮಾಯಣ ಕಾಲ

ರಾಮಾಯಣ ಕಾಲ

ರಾಮಾಯಣ ಕಾಲ ಎಂದರೆ ತ್ರೇತಾಯುಗವೇ ಆಗಿದೆ. ರಾಮ ಹಾಗು ರಾವಣರ ಮಧ್ಯೆ ಯುದ್ಧ ನಡೆದ ಸಮಯದಲ್ಲಿ ಲಕ್ಷ್ಮಣನು ತಲೆ ತಿರುಗಿ ಬಿದ್ದು ಹೋಗುತ್ತಾನೆ ಎಂಬ ವಿಷಯ ನಿಮಗೆ ಗೊತ್ತೇ ಇದೆ ಅಲ್ಲವೇ? ಆಗ ಆಂಜನೇಯ ಸ್ವಾಮಿಯು ಎಲ್ಲಿಯೋ ಹಿಮಾಲಯ ಪರ್ವತದಲ್ಲಿರುವ ಸಂಜೀವಿನಿ ಪರ್ವತವನ್ನು ತೆಗೆದುಕೊಂಡು ಬಂದು ಲಕ್ಷ್ಮಣನನ್ನು ರಕ್ಷಿಸುತ್ತಾನೆ. ಈ ವಿಷಯದ ಬಗ್ಗೆ ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ.

PC:Gautam Dhar

ಸಂಜೀವಿನಿ ಪರ್ವತ

ಸಂಜೀವಿನಿ ಪರ್ವತ

ಆ ಸಂಜೀವಿನಿ ಪರ್ವತವು ಈ ದ್ರೋಣಗಿರಿ ಪ್ರದೇಶದಲ್ಲಿಯೇ ಇದ್ದಿದ್ದು, ತಾವು ಎಷ್ಟೊ ಪವಿತ್ರವಾಗಿ ಪೂಜೆಯನ್ನು ಮಾಡುತ್ತಿದ್ದ ಪರ್ವತವನ್ನು ಆಂಜನೇಯಸ್ವಾಮಿ ತೆಗೆದುಕೊಂಡು ಹೋದನು ಎಂದು ಇಲ್ಲಿನ ಸ್ಥಳೀಯರು ಒಂದು ದಂತಕಥೆಯನ್ನು ಹೇಳುತ್ತಾರೆ. ಹೀಗಾಗಿಯೇ ಆಂಜನೇಯ ಸ್ವಾಮಿಯ ಮೇಲೆ ಆ ಗ್ರಾಮದವರಿಗೆ ಕೋಪ. ಅಂದಿನಿಂದ ಇಂದಿನವರೆಗೆ ಆಂಜನೇಯ ಸ್ವಾಮಿಯನ್ನು ಪೂಜೆ ಮಾಡುವುದನ್ನು ನಿಲ್ಲಿಸಿ ಬಿಟ್ಟರಂತೆ. ಹಾಗಾದರೆ ಒಮ್ಮೆ ನೀವು ಕೂಡ ಈ ಗ್ರಾಮಕ್ಕೆ ತೆರಳಿ ಅನುಮಾನವನ್ನು ಪರಿಹಾರ ಮಾಡಿಕೊಳ್ಳಿ.


PC:Manfred Sommer

ರಸ್ತೆ ಮಾರ್ಗವಾಗಿ

ರಸ್ತೆ ಮಾರ್ಗವಾಗಿ

ಡೆಹ್ರಾಡೂನ್‍ನಿಂದ (412 ಕಿ.ಮೀ), ನೈನಿತಾಲ್‍ನಿಂದ (71 ಕಿ.ಮೀ), ಅಲ್ಮೋರ್‍ನಿಂದ (100 ಕಿ.ಮೀ), ರಾಣಿಖೇಟ್‍ನಿಂದ (50 ಕಿ.ಮೀ), ದ್ವಾರಾಹಾತ್‍ನಿಂದ (14 ಕಿ.ಮೀ), ದೆಹಲಿಯಿಂದ (400 ಕಿ.ಮೀ) ತದನಂತರದ ಪ್ರದೇಶದಿಂದ ದುನಗಿರಿ ಗ್ರಾಮಕ್ಕೆ ಸರ್ಕಾರಿ ಅಥವಾ ಖಾಸಗಿ ವಾಹನಗಳು ಕೂಡ ವ್ಯವಸ್ಥೆಯಲ್ಲಿವೆ.

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ಕಥೋಡ್ಗಂ ರೈಲ್ವೆ ನಿಲ್ದಾಣ, ಅಲ್ಮೋರಾಕ್ಕೆ 90 ಕಿ.ಮೀ ದೂರದಲ್ಲಿದೆ. ಜಮ್ಮು, ಶ್ರೀನಗರ, ದೆಹಲಿ ಮತ್ತೀತರ ಪ್ರದೇಶದಿಂದ ಅನೇಕ ರೈಲುಗಳು ಬರುತ್ತಿರುತ್ತವೆ. ರೈಲ್ವೆ ನಿಲ್ದಾಣದ ಹೊರಗೆ ಕ್ಯಾಬ್ ಅಥವಾ ಟ್ಯಾಕ್ಸಿಯ ಮೂಲಕ ತೆರಳಬಹುದು.

ವಿಮಾನ ನಿಲ್ದಾಣ ಮಾರ್ಗವಾಗಿ

ವಿಮಾನ ನಿಲ್ದಾಣ ಮಾರ್ಗವಾಗಿ

ಉಧಂ ಸಿಂಗ್ ನಗರದಲ್ಲಿನ ಪಂಟನಗರ ವಿಮಾನ ನಿಲ್ದಾಣ ದುನಗಿರಿಗೆ ಸಮೀಪದಲ್ಲಿ, ಅಲ್ಮೋರಾಕ್ಕೆ 127 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೆಹಲಿಯಿಂದ ನೇರವಾಗಿ ಸಂಪರ್ಕ ಹೊಂದಿದೆ. ನವದೆಹಲಿಯಿಂದ ಕೇವಲ 1 ಗಂಟೆಯ ಪ್ರಯಾಣದಲ್ಲಿ ಪಂಟನಗರ ವಿಮಾನ ನಿಲ್ದಾಣಕ್ಕೆ ಸೇರಿಕೊಳ್ಳಬಹುದು. ಅಲ್ಲಿಂದ ಕ್ಯಾಬ್ ಅಥವಾ ಟ್ಯಾಕ್ಸಿಯ ಮೂಲಕ ಸುಲಭವಾಗಿ ದುನಗಿರಿಗೆ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X