ತಮಿಳುನಾಡಿನಲ್ಲಿ "ದೊಡ್ಡಬೆಟ್ಟ" ಎಂಬ ಹೆಸರಿನ ಸುಂದರ ಶಿಖರವಿರುವುದು ನಿಮಗೆ ತಿಳಿದಿದೆಯೆ? ಹೌದು ಈ ರೀತಿಯ ಹೆಸರಿನ ಒಂದು ಸುಂದರ ಪ್ರೇಕ್ಷಣೀಯ ಸ್ಥಳವು ತಮಿಳುನಾಡಿನ ನೀಲ್ಗಿರಿ ಜಿಲ್ಲೆಯಲ್ಲಿದೆ. ಈ ತಾಣಕ್ಕೆ ದೊಡ್ಡಬೆಟ್ಟ ಎಂಬ ಹೆಸರು ಬಡಗ ಭಾಷೆಯಿಂದ ಬಂದುದಾಗಿದೆ. ಬಡಗ ಭಾಷೆಯು ಹಳಗನ್ನಡದ ಒಂದು ಶಾಖೆಯಾಗಿದ್ದು ಕನ್ನಡ ಭಾಷೆಯೊಂದಿಗೆ ಹೆಚ್ಚಿನ ಸಾಮ್ಯತೆ ಹೊಂದಿದೆ.
ಮೇಕ್ ಮೈ ಟ್ರಿಪ್ ನಿಂದ ಹೋಟೆಲ್ ಬುಕ್ಕಿಂಗ್ ಮೇಲೆ 35% ರಷ್ಟು ರಿಯಾಯಿತಿ
ಅಂತೆಯೆ ನೀಲ್ಗಿರಿಯಲ್ಲಿ ಇಂದಿಗೂ ತಮಿಳು, ತೋಡ ಭಾಷೆಗಳ ಜೊತೆ ಬಡಗ ಭಾಷೆಯು ಪ್ರಚಲಿತದಲ್ಲಿರುವುದನ್ನು ಕಾಣಬಹುದು. ಇನ್ನೂ ಈ ಜಿಲ್ಲೆಯಲ್ಲಿರುವ ದೊಡ್ಡಬೆಟ್ಟವು ಒಂದು ಸುಂದರ ಹಾಗೂ ಮನಮೋಹಕ ಪ್ರವಾಸಿ ಆಕರ್ಷಣೆಯ ಗಿರಿ ಪ್ರದೇಶವಾಗಿದ್ದು ಎಪ್ರಿಲ್ ಹಾಗೂ ಮೇ ತಿಂಗಳ ಸಮಯದಲ್ಲಿ ಪ್ರವಾಸಿಗರು ಸಾಲು ಸಾಲಾಗಿ ಈ ತಾಣಕ್ಕೆ ಭೇಟಿ ನೀಡಲು ಹಾತೊರೆಯುತ್ತಾರೆ.
ವಿಶೇಷ ಲೇಖನ : ಬೊಂಬಾಟ್ ಮೈಮಾಟದ ಊಟಿ ಗಿರಿಧಾಮ
ದೊಡ್ಡಬೆಟ್ಟದ ಮತ್ತೊಂದು ವೈಶಿಷ್ಟ್ಯವೆಂದರೆ ಇದು ಗಿರಿಧಾಮಗಳ ರಾಣಿ ಎಂದೆ ಜನಜನಿತವಾದ ತಮಿಳುನಾಡಿನ ಊಟಿಯಿಂದ ಕೇವಲ 9 ಕಿ.ಮೀ ಗಳಷ್ಟು ದೂರದಲ್ಲಿರುವುದು. ಊಟಿ - ಕೋತಗಿರಿ ರಸ್ತೆಯ ಮೇಲೆ ನೆಲೆಸಿರುವ ಈ ಬೆಟ್ಟ ಪ್ರದೇಶಕ್ಕೆ ತಲುಪಲು ಸಾಕಷ್ಟು ಬಾಡಿಗೆ ವಾಹನಗಳು, ಬಸ್ಸುಗಳು ಊಟಿಯಿಂದ ದೊರೆಯುತ್ತವೆ. ದೊಡ್ಡಬೆಟ್ಟದ ಟ್ರೆಕ್ಕಿಂಗ್ ಕೂಡ ಅಮೋಘ ಅನುಭವ ನೀಡುವ ಚಟುವಟಿಕೆಯಾಗಿದೆ.

ದೊಡ್ಡಬೆಟ್ಟ:
ದೊಡ್ಡಬೆಟ್ಟವು ಒಂದು ಸುಂದರ ಬೆಟ್ಟ ಪ್ರದೇಶವಾಗಿದ್ದು ಇದರ ತುದಿಯವರೆಗೂ ತಲುಪಲು ರಸ್ತೆ ಮಾರ್ಗವಿದೆ. ಇಲ್ಲಿಂದ ನೋಡಿದಾಗ ನೀಲ್ಗಿರಿಯ ಸುಂದರ ನೀಳ ನೋಟವನ್ನು ಯಥವತ್ತಾಗಿ ಆಸ್ವಾದಿಸಬಹುದು.
ಚಿತ್ರಕೃಪೆ: Ananth BS

ದೊಡ್ಡಬೆಟ್ಟ:
ದಕ್ಷಿಣ ಭಾರತದಲ್ಲಿ ಆನಮುಡಿ ಬೆಟ್ಟದ ನಂತರ ಅತಿ ಎತ್ತರವಾದ ಬೆಟ್ಟ ಪ್ರದೇಶ ಇದಾಗಿದ್ದು, ಆಸಕ್ತಿಕರ ವಿಷಯವೆಂದರೆ ಇದರ ತುದಿಯಿಂದ ಮೈಸೂರು ಬಳಿಯ ಚಾಮುಂಡಿ ಬೆಟ್ಟದ ನೋಟವನ್ನು ದೂರದಿಂದ ಕಾಣಬಹುದಾಗಿದೆ.
ಚಿತ್ರಕೃಪೆ: Pratheept2000

ದೊಡ್ಡಬೆಟ್ಟ:
ದೊಡ್ಡಬೆಟ್ಟವು ಒಟ್ಟಾರೆಯಾಗಿ ಹೆಕುಬ, ಕಟ್ಟದಾದು ಹಾಗೂ ಕುಲ್ಕುಡಿ ಎಂಬ ಮೂರು ಶಿಖರ ಶೃಂಗಗಳಿಂದ ಆವೃತವಾಗಿದೆ. ಇದರ ಕೆಳಭಾಗದ ಸುತ್ತಲು ದಟ್ಟವಾದ ಗಿಡ ಮರಗಳಿಂದ ಕೂಡಿದ ಕಾಡುಗಳಿದ್ದು, ಪ್ರಕೃತಿಯ ಸಹಜ ಸೌಂದರ್ಯವು ಇಲ್ಲಿ ಮೈದುಂಬಿಕಂಡಂತಿದೆ.
ಚಿತ್ರಕೃಪೆ: Pradeep Kumbhashi

ದೊಡ್ಡಬೆಟ್ಟ:
ಶೋಲಾ ಹುಲ್ಲುಗಾವಲು ಬೆಟ್ಟದ ಮೇಲ್ಮೈಗಳನ್ನು ಆವರಿಸಿದ್ದು ಕಾಡುಗಳಲ್ಲಿ ಹೆಚ್ಚಾಗಿ ರೋಡೋಡೆಂಡ್ರಾನ್ ಮರಗಳಿರುವುದನ್ನು ಗಮನಿಸಬಹುದು.
ಚಿತ್ರಕೃಪೆ: Girish Gopi

ದೊಡ್ಡಬೆಟ್ಟ:
ಇನ್ನೂ ಬೆಟ್ಟದ ತುದಿಗಳಲ್ಲಿ ನಾನಾ ವಿಧದ ಸಸ್ಯ, ಹೂಬಳ್ಳಿಗಳು ಆವರಿಸಿದ್ದು ಒಟ್ಟಾರೆಯಾಗಿ ಪ್ರದೇಶಕ್ಕೆ ಹೆಚ್ಚಿನ ಮೆರುಗನ್ನು ತಂದು ಕೊಡುತ್ತದೆ. ಈ ಸುಂದರ ಹೂಬಳ್ಳಿಗಳನ್ನು ನೋಡುವುದೆ ಒಂದು ಸಂತಸದ ಅನುಭವವಾಗಿ ಪರಿಣಮಿಸಿದರೆ ಅತಿಶಯೋಕ್ತಿಯೇನಲ್ಲ.
ಚಿತ್ರಕೃಪೆ: Swaminathan

ದೊಡ್ಡಬೆಟ್ಟ:
ಯಾವುದೇ ಶಿಖರದ ಕೊನೆಯ ತುದಿಗೆ ತಲುಪಿದಾಗ ಕಂಡು ಬರುವ ನೋಟ ವರ್ಣಿಸಲಸಾಧ್ಯ. ಅದನ್ನು ಅನುಭವಿಸಿಯೇ ತೀರಬೇಕು. ಅದರಂತೆ ದೊಡ್ಡಬೆಟ್ಟದ ಮೇಲಿನಿಂದಲೂ ಸಹ ಕಂಡುಬರುವ ವಿಹಂಗಮ ನೋಟವು ಪದಗಳಲ್ಲಿ ವರ್ಣಿಸಲಸಾಧ್ಯ.
ಚಿತ್ರಕೃಪೆ: Edukeralam

ದೊಡ್ಡಬೆಟ್ಟ:
ಇದರ ಅನುಭವವನ್ನು ಮತ್ತಷ್ಟು ವೃದ್ಧಿಸಲು ಇಲ್ಲಿ ಪ್ರವಾಸಿ ಇಲಾಖೆಯಿಂದ ಎರಡು ದೂರದರ್ಶಕಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರು ಇದರ ಮೂಲಕ ನೋಡುತ್ತ ಸುತ್ತಮುತ್ತಲಿನ ಪ್ರಕೃತಿಯ ಸಹಜ ಸೌಂದರ್ಯವನ್ನು ಬಲು ವಿಸ್ತಾರವಾಗಿ ಆನಂದಿಸಬಹುದು.
ಚಿತ್ರಕೃಪೆ: David Brossard

ದೊಡ್ಡಬೆಟ್ಟ:
ಜೂನ್ 18, 1983 ರಲ್ಲಿ ತಮಿಳುನಾಡು ಪ್ರವಾಸೋದ್ಯಮ ಇಲಾಖೆಯಿಂದ ಈ ದೂರದರ್ಶಕಗಳನ್ನು ಅಳವಡಿಸಲಾಗಿದ್ದು ಉತ್ತಮವಾದ ಸಮಯದಲ್ಲಿ 3500 ರಿಂದ 4000 ದಷ್ಟು ಪ್ರವಾಸಿಗರು ಹಾಗೂ ಇತರೆ ಸಮಯದಲ್ಲಿ 700 ರಿಂದ 1000 ಸಂಖ್ಯೆಯಷ್ಟು ಪ್ರವಾಸಿಗರು ಒಂದು ದಿನದಲ್ಲಿ ಇವುಗಳನ್ನು ವೀಕ್ಷಿಸುತ್ತಾರೆ.
ಚಿತ್ರಕೃಪೆ: Navaneeth Krishnan S

ದೊಡ್ಡಬೆಟ್ಟ:
ಈ ಬೆಟ್ಟವು ಊಟಿಯಿಂದ 9 ಕಿ.ಮೀ ದೂರದಲ್ಲಿದ್ದು, 8650 ಅಡಿಯಷ್ಟು ಎತ್ತರವಾಗಿದೆ. ಈ ದೊಡ್ಡ ಬೆಟ್ಟದ ವೈಶಿಷ್ಟ್ಯ ಅಡಗಿರುವುದು ಅದರ ಶೃಂಗದಲ್ಲಿ ಏಕೆಂದರೆ ಇದರ ಶೃಂಗ ಚಪ್ಪಟೆಯಾಗಿದೆ.
ಚಿತ್ರಕೃಪೆ: Edukeralam

ದೊಡ್ಡಬೆಟ್ಟ:
ಈ ಬೆಟ್ಟವು ಊಟಿಯ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಏಪ್ರಿಲ್ ನಿಂದ ಮೇವರೆಗಿನ ಪ್ರವಾಸಿ ಋತುವಿನಲ್ಲಿ ಪ್ರತಿದಿನ 3500 ಪ್ರವಾಸಿಗರು ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ.
ಚಿತ್ರಕೃಪೆ: Navaneeth Krishnan S

ದೊಡ್ಡಬೆಟ್ಟ:
ಊಟಿಯಿಂದ ದೊಡ್ಡಬೆಟ್ಟಕ್ಕೆ ಚಾರಣ ಮಾಡುವಾಗ ಕಂಡುಬರುವ ಬೆಟ್ಟ ಶ್ರೇಣಿಗಳ ವಿಹಂಗಮ ನೋಟ.
ಚಿತ್ರಕೃಪೆ: Keshav Mukund Kandhadai

ದೊಡ್ಡಬೆಟ್ಟ:
ದೊಡ್ಡಬೆಟ್ಟವು ಕೇವಲ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳ ವಿಹಂಗಮ ನೋಟ, ಹೂಬಳ್ಳಿಗಳು, ತಾಜಾ ಪರಿಸರಕ್ಕೆ ಮಾತ್ರವೆ ಹೆಸರುವಾಸಿಯಾಗಿರದೆ ತನ್ನಲ್ಲಿ ಕಂಡುಬರುವ ಸುಂದರ ಬಣ್ಣ ಬಣ್ಣದ ಪಕ್ಷಿಗಳಿಗೂ ಸಹ ಹೆಸರುವಾಸಿಯಾಗಿದೆ.
ಚಿತ್ರಕೃಪೆ: David Brossard

ದೊಡ್ಡಬೆಟ್ಟ:
ಪಕ್ಷಿ ವೀಕ್ಷಣೆಯೂ ಸಹ ಇಲ್ಲಿನ ಪ್ರಮುಖ ಚಟುವಟಿಕೆ, ನಿಸರ್ಗಪ್ರಿಯ ಪ್ರವಾಸಿಗರಿಗೆ ಪಕ್ಷಿಗಳು ಚಿಲಿಪಿಲಿ ಗುಟ್ಟುತ್ತ ಸ್ವಚ್ಛಂದವಾಗಿ ಹಾರಾಡುವುದನ್ನು ನೋಡಲು ಬಯಸುತ್ತಾರೆ. ನೀಲ್ಗಿರಿ ಲಾಫಿಂಗ್ ಥ್ರಶ್ ಎಂಬ ಪುಟ್ಟ್ಟ ಹಕ್ಕಿ.
ಚಿತ್ರಕೃಪೆ: shrikant rao

ದೊಡ್ಡಬೆಟ್ಟ:
ಕೆಂಪು ಬಣ್ಣದ ಬುಲ್ ಬುಲ್ ಪಕ್ಷಿ.
ಚಿತ್ರಕೃಪೆ: David Brossard


Click it and Unblock the Notifications


















