• Follow NativePlanet
Share
» »ವನವಾಸದಲ್ಲಿದ್ದಾಗ ರಾಮನು ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಿದ್ದ ಗೊತ್ತ?

ವನವಾಸದಲ್ಲಿದ್ದಾಗ ರಾಮನು ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಿದ್ದ ಗೊತ್ತ?

Posted By:

ರಾಮಾಯಣ ಹಿಂದೂಗಳಿಗೆ ಪವಿತ್ರವಾದ ಗ್ರಂಥವಾಗಿದೆ. ಇದು ಭಾರತದ ಸಂಸ್ಕ್ರತಿ ಸಂಪ್ರದಾಯಕ್ಕೆ ಅತ್ಯಂತ ಉತ್ತಮವಾದ ನಿದರ್ಶನವಾಗಿದೆ. ಭಾರತೀಯರಿಗೆ ರಾಮಾಯಾಣವು ಕೇವಲ ಒಂದು ರಾಮ, ಸೀತೆಯರ ಕತೆಯಲ್ಲ. ಆದರೆ ಜೀವನದಲ್ಲಿ ನಾವು ಕಲಿಯಬೇಕಾದ ಪಾಠಗಳಿವೆ. ರಾಮ, ಸೀತೆಯರು ಪಟ್ಟ ಕಷ್ಟ, ಸುಖ, ದುಃಖ, ಅಸೂಯೆ, ಸಹೋದರನ ವಾತ್ಸಲ್ಯ ಹೀಗೆ ಜೀವನದ ಎಲ್ಲಾ ಸಂದೇಶಗಳನ್ನು ರಾಮಾಯಣ ಒದಗಿಸುತ್ತದೆ.

ರಾಮನು ತನ್ನ ಪತ್ನಿ ಹಾಗು ಸಹೋದರನಾದ ಲಕ್ಷ್ಮಣನ ಜೊತೆಗೆ 14 ವರ್ಷಗಳ ವನವಾಸದಲ್ಲಿದ್ದಾಗ ಭಾರತದಲ್ಲಿನ ಯಾವ ಸ್ಥಳಗಳಿಗೆ ಭೇಟಿ ನೀಡಿದ್ದ ಎಂಬ ವಿಷಯವನ್ನು ಲೇಖನದ ಮೂಲಕ ತಿಳಿಯೋಣ. ಏಕೆಂದರೆ ರಾಮನು ಭಾರತ ದೇಶದಲ್ಲಿ ಹಲವಾರು ಕಡೆಗಳಲ್ಲಿ ಸಂಚಾರ ಮಾಡಿ, ಪುಣ್ಯಸ್ಥಾನಗಳಾಗಿ ಮಾರ್ಪಾಟಾಗಿದೆ. ಹಾಗಾದರೆ ಆ ಸ್ಥಳಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಪಡೆಯೋಣ.

1.ಅಯೋಧ್ಯೆ

1.ಅಯೋಧ್ಯೆ

PC: MuteX023

ಇದು ರಾಮನು ಹುಟ್ಟಿದ ಸ್ಥಳ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಆಯೋಧ್ಯೆಯನ್ನು ರಾಮ ಜನ್ಮ ಭೂಮಿ ಎಂದೇ ಕರೆಯುತ್ತಾರೆ. ತಂದೆಯ ಮಾತಿಗೆ ಬೆಲೆ ನೀಡಿ ರಾಮನು ಅರಮನೆ ತೊರೆದು ಕಾಡಿಗೆ ತೆರಳುವ ಅನಿವಾರ್ಯತೆ ಉಂಟಾಗಿ ತನ್ನ ಪತ್ನಿಯಾದ ಸೀತೆ ಹಾಗು ಸಹೋದರ ಲಕ್ಷ್ಮಣನ ಜೊತೆ ತನ್ನ ವನವಾಸ ಆರಂಭಿಸುವುದು ಅಯೋಧ್ಯಾ ನಗರದಿಂದಲೇ ಎಂಬುದು ರಾಮನ ಮುಖ್ಯವಾದ ಸಂಗತಿಯೇ ಆಗಿದೆ.

2.ಅಯೋಧ್ಯೆ ಎಲ್ಲಿದೆ ಗೊತ್ತ?

2.ಅಯೋಧ್ಯೆ ಎಲ್ಲಿದೆ ಗೊತ್ತ?

PC: Vishwaroop2006

ಹಿಂದೆ ಸಾಕೇತ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಅಯೋಧ್ಯೆಯನ್ನು ಪ್ರಸ್ತುತ ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಎಂಬ ಜಿಲ್ಲೆಯಲ್ಲಿರುವ ಪಟ್ಟಣದಲ್ಲಿದೆ. ಪುಣ್ಯದಾಯಕ ಸರಯು ನದಿಯು ತಟದಲ್ಲಿ ನೆಲೆಸಿರುವ ಅಯೋಧ್ಯೆಯು ಫೈಜಾಬಾದ್ ನಗರದಿಂದ ಸುಮಾರು 8 ಕಿ.ಮೀ ನಷ್ಟು ದೂರದಲ್ಲಿದೆ.

3.ಸೀತೆಯ ತವರೂರು ಯಾವುದು ಗೊತ್ತ?

3.ಸೀತೆಯ ತವರೂರು ಯಾವುದು ಗೊತ್ತ?

PC: wikimedia

ಸೀತಾ ಮಾತೆಯಾ ತವರೂರು ಜನಕಪುರ. ಇದೇ ಸ್ಥಳದಲ್ಲಿ ರಾಮನು ಸೀತೆಯನ್ನು ವರಿಸಿದ್ದು ಇದೇ ಸ್ಥಳದಲ್ಲಿ. ಇಲ್ಲಿಯೇ ಸೀತೆಯು ಜನಕ ಮಹಾರಾಜನಿಗೆ ಸಿಕ್ಕಿದ್ದು. ವನವಾಸದ ಸಂದರ್ಭದಲ್ಲಿ ರಾಮನು ಈ ಸ್ಥಳಕ್ಕೆ ಭೇಟಿ ನೀಡಿದ್ದನೆಂಬ ನಂಬಿಕೆ ಕೂಡ ಇದೆ.

4.ಸೀತಾಮರಿ

4.ಸೀತಾಮರಿ

PC: Abhishek Dutta

ಈ ಸ್ಥಳವು ಭಾರತದ ಬಿಹಾರ ರಾಜ್ಯದ ಮುಜಫರಪುರ್ ಭಾಗದಲ್ಲಿದ್ದ ಈ ಸ್ಥಳವು ಇಂದು ಸೀತಾಮರಿ ಅಥವಾ ಸೀತಾಮಡಿ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ನೇಪಾಳದ ಕಠ್ಮಂಡುವಿನಿಂದ 123 ಕಿ.ಮೀ ದೂರದ ಧನುಸುವಾ ಜಿಲ್ಲೆಯಲ್ಲಿದೆ. ಭಾರತದ ಗಡಿಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ಆಶ್ಚರ್ಯ ಏನಪ್ಪ ಎಂದರೆ ರಾಮ-ಸೀತೆಯರ ಕಲ್ಯಾಣದ ದಿನದಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

5. ಚಿತ್ರ ಕೂಟ

5. ಚಿತ್ರ ಕೂಟ

PC: wikimedia

ಭರತನು ತನ್ನ ಸಹೋದರನಾದ ರಾಮನ ಭೇಟಿಗೆ ಓಡೋಡುತ್ತ ಬರುವ ಸ್ಥಳವಿದು. ರಾಮ ಹಾಗು ಭರತರ ಭೇಟಿಗೆ ಸಾಕ್ಷಿಯಾಗಿದೆ ಇದೆ ಈ ಚಿತ್ರಕೂಟ. ಪ್ರಯಾಗ್ ನಂತರ ರಾಮನು ಚಿತ್ರಕೂಟಕ್ಕೆ ಆಗಮಿಸುತ್ತಾನೆ. ಈ ಸುದ್ಧಿ ತಿಳಿದ ಭರತನು ಅಲ್ಲಿ ರಾಮನಿಗೆ ಭೇಟಿ ಮಾಡಲು ಬರುತ್ತಾನೆ.

6. ಎಲ್ಲಿದೆ?

6. ಎಲ್ಲಿದೆ?

PC: LRBurdak

ಪ್ರಸ್ತುತ ಚಿತ್ರಕೂಟವು ಮಧ್ಯ ಪ್ರದೇಶ ರಾಜ್ಯದ ಸತ್ನಾ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಮಂದಾಕಿನಿನದಿ ತಟದಲ್ಲಿರುವ ಈ ಪಟ್ಟಣವು ಧಾರ್ಮಿಕ ಹಾಗು ಸಾಂಸ್ಕøತಿ ದೃಷ್ಟಿಯಿಂದ ಸಾಕಷ್ಟು ಮಹತ್ವಗಳಿಸಿದೆ. ರಾಮನವಮಿ ಸಂದರ್ಭದಲ್ಲಿ ಆನೇಕ ಜನರು ಪಾಲ್ಗೊಂಡಿದ್ದರು.

7.ದಂಡಕಾರಣ್ಯ

7.ದಂಡಕಾರಣ್ಯ

ಈ ಸಂದರ್ಭದ ನಡೆದ ನಂತರ ರಾಮನು ಆಗಮಿಸುವ ಸ್ಥಳವೇ ದಂಡಕಾರಣ್ಯ. ಇಲ್ಲಿ ಸಾಕಷ್ಟು ರಾಕ್ಷಸರನ್ನು ರಾಮನು ಸಂಹಾರ ಮಾಡುತ್ತಾನೆ. ರಾವಣನ ಸಹೋದರಿಯಾದ ಶೂರ್ಪನಖ ಈ ಪ್ರದೇಶದಲ್ಲಿಯೇ ಲಕ್ಷ್ಮಣನನ್ನು ಮೋಹಿಸಿ ತನ್ನ ಮೂಗನ್ನು ಕತ್ತರಿದನು ಎಂದೂ ಹೇಳಲಾಗುತ್ತದೆ. ಈ ಸ್ಥಳದಲ್ಲಿ ಶ್ರೀ ರಾಮನು ಸಾಕಷ್ಟು ಸಮಯದವರೆಗೆ ಕಾಲ ಕಳೆದನೆಂಬ ನಂಬಿಕೆಯಾಗಿದೆ.

8.ಪಂಚವಟಿ

8.ಪಂಚವಟಿ

PC: wikimedia

ರಾಮನು ಸುಂದರವಾದ ಗುಡಿಸಲೊಂದನ್ನು ನಿರ್ಮಾಣ ಮಾಡಿ ವಾಸಿಸುತ್ತಿದ್ದರು. ಪ್ರಸ್ತುತ ನಾಸಿಕ್ ಪಟ್ಟಣದ ಕಾಲಾರಾಮ್ ದೇವಾಲಯದ ಸುತ್ತಮುತ್ತಲಿನ ಪ್ರದೇಶವೇ ಹಿಂದೆ ಪಂಚವಟಿಯಾಗಿತ್ತು ಎಂಬ ನಂಬಿಕೆಯಾಗಿದೆ.

9.ರಾಮಕುಂಡ

9.ರಾಮಕುಂಡ

PC: Arian Zwegers

ಇಲ್ಲಿ ರಾಮ, ಲಕ್ಷ್ಮಣ ಹಾಗು ಸೀತೆಯರು ಪ್ರತಿ ದಿನ ಇಲ್ಲಿಯೇ ಸ್ನಾನ ಮಾಡುತ್ತಿದ್ದರು ಎಂದು ನಂಬಲಾಗಿದೆ. ಹೀಗಾಗಿ ನಾಸಿಕ್‍ನಲ್ಲಿರುವ ಈ ಕೊಳಕ್ಕೆ ಸಾಕಷ್ಟು ಮಹತ್ವವಿದ್ದು, ಕುಂಭ ಮೇಳದ ಸಂದರ್ಭದಲ್ಲಿ ಕೋಟೆಗಟ್ಟಲೇ ಭಕ್ತರು ಈ ಸ್ಥಳಕ್ಕೆ ಆಗಮಿಸುತ್ತಾರೆ.

10.ಪರ್ಣಶಾಲೆ

10.ಪರ್ಣಶಾಲೆ

PC: Adityamadhav83

ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯ ದೊಮ್ಮಗುಡ್ಡೆಂ ತಾಲೂಕಿನ ವರ್ಣಶಾಲೆಯಲ್ಲಿ ರಾಮನು ವನವಾಸದ ಸಂದರ್ಭದಲ್ಲಿ ಬಂದು ನೆಲೆಸಿದ್ದನೆಂಬ ಪ್ರತೀತಿ ಇದೆ. ನಂಬಿಕೆಗಳ ಪ್ರಕಾರ, ಶ್ರೀ ರಾಮನು 14 ವರ್ಷಗಳ ಕಾಲ ಇಲ್ಲಿಯೇ ತಂಗಿದ್ದ ಎಂದು ನಂಬಲಾಗಿದೆ.

11.ರಾಧಾ ಗುಡ್ಡ

11.ರಾಧಾ ಗುಡ್ಡ

PC: vimal_kalyan

ಇಲ್ಲಿ ರಾಧಾಗುಡ್ಡ ಎಂಬ ಸ್ಥಳವೊಂದಿದ್ದು ಪ್ರತಿ ದಿನ ಸೀತೆಯು ಅಲ್ಲಿರುವ ಕೊಳದ ನೀರಿನಲ್ಲಿಯೇ ಬಟ್ಟೆಗಳನ್ನು ಶುಚಿಗೊಳಿಸುತ್ತಿದ್ದಳಂತೆ.

12.ರಾವಣ

12.ರಾವಣ

PC: Pranayraj1985

ಇನ್ನೊಂದು ಸ್ವಾರಸ್ಯಕರವಾದ ವಿಷಯವೆನೆಂದರೆ ಈ ಸ್ಥಳದಲ್ಲಿಯೇ ರಾಜನು ರಾವಣನು ಸೀತೆಯನ್ನು ಅಪಹರಿಸಿದ್ದು ಎಂದು ಹೇಳಲಾಗುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ