Search
  • Follow NativePlanet
Share
» »ಕಾರಣಿ ಮಾತ ದೇವಾಲಯದಲ್ಲಿ ರಾತ್ರಿ ನಡೆಯುವ ರಹಸ್ಯವೇನು ಗೊತ್ತ?

ಕಾರಣಿ ಮಾತ ದೇವಾಲಯದಲ್ಲಿ ರಾತ್ರಿ ನಡೆಯುವ ರಹಸ್ಯವೇನು ಗೊತ್ತ?

ನಮ್ಮ ದೇಶದಲ್ಲಿ ಕಣ್ಣಾರೆ ಕಂಡು ನಂಬುವವರು ಇದ್ದಾರೆ ಹಾಗೆಯೇ ಮೂಢ ನಂಬಿಕೆಯನ್ನು ನಂಬುವವರು ಇದ್ದಾರೆ.ಯಾವುದಾದರೂ ವಿಭಿನ್ನವಾದುದು ಅಥವಾ ವಿಶೇಷವಾದುದು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅಂತಹ ಆಸಕ್ತಿಕರವಾದ ದೇವಾಲಯದ ಬಗ್ಗೆ ನಾವು ತಿಳಿಯೋಣ

By Sowmyabhai

ನಮ್ಮ ದೇಶದಲ್ಲಿ ಕಣ್ಣಾರೆ ಕಂಡು ನಂಬುವವರು ಇದ್ದಾರೆ ಹಾಗೆಯೇ ಮೂಢ ನಂಬಿಕೆಯನ್ನು ನಂಬುವವರು ಇದ್ದಾರೆ.

ಯಾವುದಾದರೂ ವಿಭಿನ್ನವಾದುದು ಅಥವಾ ವಿಶೇಷವಾದುದು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅಂತಹ ಆಸಕ್ತಿಕರವಾದ ದೇವಾಲಯದ ಬಗ್ಗೆ ನಾವು ತಿಳಿಯೋಣ.

ಆಸ್ತಿಕಿಕರವಾದ ಆ ದೇವಾಲಯವೇ ಕಾರಣಿ ಮಾತಾ ದೇವಾಲಯ.

ಇಂದಿನವರೆವಿಗೂ ನಮ್ಮ ದೇವರುಗಳು, ದೇವತೆಗಳ ಬಗ್ಗೆ ಕೇಳೆ ಇರುತ್ತೇವೆ. ಆದರೆ ಈ ದೇವಾಲಯದಲ್ಲಿ ಮೂಶಿಕಗಳನ್ನು ಕಾಳಿ ಮಾತೆಯಾಗಿ ಆರಾಧನೆ ಮಾಡುತ್ತಾರೆ.

ಅಸಲಿಗೆ ಈ ದೇವಾಲಯದಲ್ಲಿ ಇಲಿಗಳನ್ನು ಏಕೆ ಪೂಜಿಸಲಾಗುತ್ತಿದೆ?ಆಶ್ಚರ್ಯ ಏನಪ್ಪ ಎಂದರೆ ಇಲ್ಲಿ ಮರಣ ಹೊಂದಿದ ಮೂಶಿಕಗಳು ಮತ್ತೆ ಮಾನವರಾಗಿ ಜನ್ಮತಾಳುತ್ತಾರಂತೆ.

ಮಾನವರಾಗಿ ಜನ್ಮಿಸುತ್ತಿರುವ ಮೂಶಿಕಗಳ ಅಸಲಿ ಕಾರಣ ನಿಮಗೆ ಗೊತ್ತಾದರೆ ಷಾಕ್ ಆಗುವದಂತು ಖಂಡಿತ.

ಎಲ್ಲಿದೆ?

ಎಲ್ಲಿದೆ?

ಈ ಕಾರಣಿ ಮಾತಾ ದೇವಾಲಯವು ರಾಜಸ್ಥಾನದಲ್ಲಿನ ಬಿಕನೆರ್‍ನಿಂದ ಸುಮಾರು 30 ಕಿ.ಮೀ ದೂರದಲ್ಲಿ ದೇಶ್ನೂಕ್ ಎಂಬ ಪ್ರದೇಶದಲ್ಲಿ ಈ ದೇವಾಲಯವಿದೆ.

ಈ ದೇವಾಲಯದ ವಿಶೇಷ

ಈ ದೇವಾಲಯದ ವಿಶೇಷ

ಈ ದೇವಾಲಯದಲ್ಲಿ ಸುಮಾರು 20,000ಕ್ಕಿಂತ ಹೆಚ್ಚಾಗಿ ಮೂಶಿಕ(ಇಲಿ)ಗಳನ್ನು ಕಾಣಬಹುದಾಗಿದೆ. ಇಲಿಗಳು ದೇವಾಲಯದ ಪ್ರಾಂಗಣದಲ್ಲಿ ತಿರುಗುತ್ತಾ ಇರುತ್ತವೆ. ಹಾಗೆಯೇ ಇಲ್ಲಿ 4 ಬಿಳಿ ಇಲಿಗಳು ಕೂಡ ಇವೆ.

ಅದ್ಭುತವಾದ ಶಕ್ತಿಗಳು

ಅದ್ಭುತವಾದ ಶಕ್ತಿಗಳು

ಈ ದೇವಾಲಯದ ಚರಿತ್ರೆ ವಿಷಯಕ್ಕೆ ಬಂದರೆ ಚಿಕ್ಕ ವಯಸ್ಸಿನಲ್ಲಿಯೇ ಅಧ್ಬುತ ಶಕ್ತಿಗಳನ್ನು ಪಡೆದುಕೊಂಡು ಬಂದ ಕಾರಣಿ ಮಾತ ಬಡವರಿಗೆ ಹಾಗು ನಿರಾಶ್ರಿತರಿಗೆ ಬೆಂಬಲವಾಗಿ ನಿಂತಳು.

PC:Reeturajesh

ಅದ್ಭುತವಾದ ಶಕ್ತಿಗಳು

ಅದ್ಭುತವಾದ ಶಕ್ತಿಗಳು

ಕಾರಣಿ ಮಾತಾಳಿಗೆ ಮೂರು ಜನ ಪುತ್ರರು ಆದರೆ ಅವರು ಆಕಾಲ ಮೃತ್ಯುವಿನಿಂದ ಮರಣ ಹೊಂದಿದಾಗ, ತನ್ನ ಗಂಡನಿಗೆ ತನ್ನ ತಂಗಿಯ ಜೊತೆ ವಿವಾಹ ಮಾಡಿದಳಂತೆ.


PC::Dilkashd

ಕಪಿಲ್ ಯಾರು?

ಕಪಿಲ್ ಯಾರು?

ಅವರ ಕುಮಾರನಾದ ಕಪಿಲ್ ನೀರನ್ನು ಕುಡಿಯಬೇಕು ಎಂದು ಸರಸ್ಸು ಸರೋವರದ ಸಮೀಪದಲ್ಲಿ ತೆರಳುವ ಪ್ರಯತ್ನ ಮಾಡಿದಾಗ ಸರೋವರದಲ್ಲಿ ಬಿದ್ದು ಪ್ರಾಣವನ್ನು ಬಿಟ್ಟನಂತೆ.

PC:Jean-Pierre Dalbéra

ಪುನರ್ ಜನ್ಮ

ಪುನರ್ ಜನ್ಮ

ತನ್ನ ಮಗನನ್ನು ಉಳಿಸು ಎಂದು ಎಷ್ಟು ಕೋರಿಕೊಂಡರೂ ಕೂಡ ತಿರಸ್ಕರಿಸಿದ ತಾಯಿ ನಂತರ ಇದಕ್ಕೆ ಅಂಗೀಕಾರ ಮಾಡಿ ದುರ್ಗಾ ದೇವಿ ಅನುಗ್ರಹದಿಂದ ಆ ಮಗುವೇ ಅಲ್ಲದೇ ಮರಣ ಹೊಂದಿದ್ದ ಮೂರು ಮಕ್ಕಳನ್ನು ಕೂಡ ಇಲಿಗಳಾಗಿ ಪುನರ್ ಜನ್ಮ ನೀಡಿದಳಂತೆ.

PC:Avinashmaurya

ಗಂಗಾಸಿಂಗ್ ಯಾರು?

ಗಂಗಾಸಿಂಗ್ ಯಾರು?

ಬಿಳಿ ಇಲಿಗಳೇ ಆ ನಾಲ್ಕು ಮಕ್ಕಳು. ಆದರೆ ಕೆಲವು ವರ್ಷಗಳ ನಂತರ ಕಾರಣಿ ಮಾತಾ ಕಾಣಿಸದೇ ಅದೃಶ್ಯವಾದಳು. ನಂತರ ಆಕೆ ಇರುವ ನಿವಾಸದಲ್ಲಿ 15 ನೇ ಶತಮಾನದಲ್ಲಿ ಗಂಗಾಸಿಂಗ್ ಎಂಬ ರಾಜನು ಕಾರಣಿ ಮಾತಾಳಿಗೆ ದೇವಾಲಯವನ್ನು ನಿರ್ಮಿಸಿದ ಎಂಬುದು ಅಲ್ಲಿನ ಸ್ಥಳ ಪುರಾಣವಾಗಿದೆ.

PC:Fulvio Spada

ಅನ್ನ, ಪ್ರಸಾದ

ಅನ್ನ, ಪ್ರಸಾದ

ಆದರೆ ಒಂದು ಕಾಲದಲ್ಲಿ ಕಾರಣಿ ಮಾತಾಳು ತನ್ನ ಭಕ್ತರು ಹಾಗು ಕುಟುಂಬಿಕರು ಮರಣ ಹೊಂದುತ್ತಾರೆ ಎಂದು, ಮತ್ತೇ ಅವರು ಇಲಿಗಳಾಗಿ ಇಲ್ಲಿ ಜನನ ಹೊಂದುತ್ತಾರೆ ಎಂದು ಹೇಳಿದಳು. ಹಾಗೆಯೇ ಆ ಇಲಿಗಳಿಗೆ ಅನ್ನ, ಪ್ರಸಾದಗಳನ್ನು ನೀಡಬೇಕು ಎಂದು ತಿಳಿಸಿದಳು.


PC:Schwiki

600 ಕುಟುಂಬಗಳು

600 ಕುಟುಂಬಗಳು

ಒಟ್ಟು 600 ಕುಟುಂಬಗಳಿಗಿಂತ ಹೆಚ್ಚಾಗಿ ಆಕೆಯ ಕುಟುಂಬಿಕರು ಇರುತ್ತಿದ್ದರಂತೆ. ಅವರು ಮರಣ ಹೊಂದಿದ ನಂತರ ಈಗ ಕಾರಣಿ ಮಾತ ದೇವಾಲಯದಲ್ಲಿ ಇಲಿಗಳ ರೂಪದಲ್ಲಿ ನೆಲೆಸಿದ್ದಾರೆ ಎಂಬುದು ಭಕ್ತರ ನಂಬಿಕೆಯಾಗಿದೆ.


PC:Shakti

ಲಡ್ಡು, ಇತರ ಆಹಾರಗಳು

ಲಡ್ಡು, ಇತರ ಆಹಾರಗಳು

ಕಾರಣಿ ಮಾತಾ ದೇವಿಗೆ ಸಮಾನವಾಗಿ ಇಲ್ಲಿನ ಮೂಶಿಕಗಳಿಗೂ ಕೂಡ ಪೂಜೆಗಳು ನಡೆಯುತ್ತವೆ. ಇವುಗಳಿಗೆ ಆಹಾರವಾಗಿ ಲಡ್ಡು ಹಾಗು ಇತರ ವಸ್ತುಗಳನ್ನು ನೀಡುತ್ತಾರೆ.


PC::Schwiki

ಆಶ್ಚರ್ಯ

ಆಶ್ಚರ್ಯ

ಆಶ್ಚರ್ಯ ಏನಪ್ಪ ಎಂದರೆ ಇಲ್ಲಿ ಪ್ರಸಾದವನ್ನು ಇಲಿಗಳೊಂದಿಗೆ ಭಕ್ತರಿಗೆ ನೀಡುತ್ತಾರೆ.

ಆರ್ಶಿವಾದ

ಆರ್ಶಿವಾದ

ಈ ದೇವಾಲಯದಲ್ಲಿ ಕಾಣುವ 4 ಬಿಳಿ ಇಲಿಗಳು ಕಾರಣಿ ಮಾತಾಳ ಮಕ್ಕಳು ಎಂದು ಭಾವಿಸಲಾಗಿದೆ. ಆ ಬಿಳಿ ಇಲಿಗಳನ್ನು ದರ್ಶನ ಮಾಡಿದರೆ ಕಾರಣಿ ಮಾತಾ ಆರ್ಶಿವಾದ ದೊರೆತ ಹಾಗೆಯೇ. ಆ 4 ಬಿಳಿ ಇಲಿಯನ್ನು ದರ್ಶನ ಮಾಡುವವರೆಗೆ ಭಕ್ತರು ಅಲ್ಲಿಯೇ ಕುಳಿತಿರುತ್ತಾರಂತೆ.

ಭಕ್ತರು

ಭಕ್ತರು

ಈ ದೇವಾಲಯವನ್ನು ದರ್ಶಿಸಲು ಕೇವಲ ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಭಕ್ತರು ಭೇಟಿ ನೀಡುತ್ತಾರೆ.

PC:Reeturajesh

ರಾತ್ರಿಯ ಸಮಯದಲ್ಲಿ

ರಾತ್ರಿಯ ಸಮಯದಲ್ಲಿ

ಬೆಳಗ್ಗೆಯ ಸಮಯದಲ್ಲಿ ದೇವಾಲಯವೆಲ್ಲಾ ತಿರುಗಾಡುವ ಇಲಿಗಳು ರಾತ್ರಿಯಾಗುತ್ತಿದ್ದಂತೆ ಗರ್ಭಗುಡಿಗೆ ತೆರಳುತ್ತವೆ.

PC:Dilkashd

ವಿಮಾನ ಪ್ರಯಾಣ

ವಿಮಾನ ಪ್ರಯಾಣ

ಕಾರಣಿ ಮಾತ ದೇವಾಲಯಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಜೋಧ ಪೂರ್ ವಿಮಾನ ನಿಲ್ದಾಣ. ಇಲ್ಲಿಂದ ಟ್ಯಾಕ್ಸಿಯ ಮೂಲಕ ದೇವಾಲಯಕ್ಕೆ ತೆರಳಬಹುದಾಗಿದೆ.

ರೈಲು ಪ್ರಯಾಣ

ರೈಲು ಪ್ರಯಾಣ

ಕಾರಣಿ ಮಾತಾ ದೇವಾಲಯಕ್ಕೆ ಸಮೀಪದ ರೈಲು ನಿಲ್ದಾಣವೆಂದರೆ ಅದು ದೇಶ್ನೂಕ್ ರೈಲ್ವೆ ನಿಲ್ದಾಣ. ಇಲ್ಲಿಂದ ಸುಲಭವಾಗಿ ಕಾರಣಿ ಮಾತ ದೇವಾಲಯಕ್ಕೆ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X