ಹಿಂದೂ ಧರ್ಮದಲ್ಲಿ ಅನೇಕ ಹಬ್ಬಗಳನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಆದರೆ ಆ ಪ್ರತಿ ಹಬ್ಬಕ್ಕೂ ಕೆಲವು ಅರ್ಥವಿದೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ಈ ಹಬ್ಬಗಳಲ್ಲಿ ದೀಪಾವಳಿ ಹಬ್ಬವೂ ಒಂದು. ದೀಪಾವಳಿ ಸಮೀಪಿಸುತ್ತಿದ್ದಂತೆ ಜನರು ಒಂದು ತಿಂಗಳು ಮುಂಚಿತವಾಗಿಯೇ ತಯಾರಿ ಮಾಡಿಕೊಳ್ಳುತ್ತಾರೆ. ಸ್ವಚ್ಛತೆಯಿಂದ ಸಿಹಿ ತಿನಿಸು ಮಾಡುವವರೆಗೆ. ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿ ಮತ್ತು ಸಂತೋಷ ಮತ್ತು ಸಮೃದ್ಧಿಯ ದೇವರು ಗಣೇಶನನ್ನು ವಿಶೇಷವಾಗಿ ದೀಪಾವಳಿ ಹಬ್ಬದಂದು ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಈ ಹಬ್ಬವನ್ನು ಎರಡು ಅಥವಾ ಮೂರು ದಿನಗಳವರೆಗೆ ಆಚರಿಸಲಾಗುತ್ತದೆ ಅಲ್ಲವೇ, ಆದರೆ ಮಧ್ಯಪ್ರದೇಶದ 62 ಗ್ರಾಮಗಳಲ್ಲಿ ಸುಮಾರು ಎರಡು ತಿಂಗಳ ಕಾಲ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇಷ್ಟು ಕೇಳಿದ ಮೇಲೆ ಆ ಹಬ್ಬವನ್ನು ಅವರು ಹೇಗೆ ಆಚರಿಸುತ್ತಾರೆ ಎಂಬ ಕುತೂಹಲವಿದ್ದರೆ ಇಲ್ಲಿದೆ ನೋಡಿ ಮಾಹಿತಿ....
ಗ್ರಾಮದ ಮುಖ್ಯಸ್ಥರ ನಿರ್ಧಾರವೇ ಅಂತಿಮ
ಶ್ರೀರಾಮನು ರಾವಣನನ್ನು ಕೊಂದು 14 ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಹಿಂದಿರುಗಿದಾಗ, ಅಯೋಧ್ಯೆಯ ಜನರು ಸಂಭ್ರಮಾಚರಣೆ ಸಮಯದಲ್ಲಿ ದೀಪಗಳ ಬೆಳಕಿನಿಂದ ನಗರವನ್ನು ಅಲಂಕರಿಸಿದರು. ಅಂದಿನಿಂದ, ದೀಪಾವಳಿ ಹಬ್ಬವನ್ನು ದೇಶಾದ್ಯಂತ 5 ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಮಧ್ಯಪ್ರದೇಶದ ದಹಿ ಪ್ರದೇಶದ ಬುಡಕಟ್ಟು ಸಮಾಜದಲ್ಲಿ ದೀಪಾವಳಿಯನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಸಂಪ್ರದಾಯವು ಇನ್ನೂ ಮುಂದುವರೆದಿದೆ.
ದೀಪಾವಳಿ ಸಂದರ್ಭದಲ್ಲಿ ದೇಶದಾದ್ಯಂತ ಕ್ಯಾಲೆಂಡರ್ ಅನುಸಾರ ನಿಗದಿತ ಸಮಯದಲ್ಲಿ ದೀಪಾವಳಿ ಆಚರಿಸುತ್ತಾರೆ. ಆದರೆ ಈ ಭಾಗದ 62 ಬುಡಕಟ್ಟು ಪ್ರಾಬಲ್ಯವಿರುವ ಗ್ರಾಮಗಳ ಜನರು ಅನಾದಿ ಕಾಲದ ಸಂಪ್ರದಾಯದ ಪ್ರಕಾರ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಅಷ್ಟೇ ಅಲ್ಲ, ಈ ಹಬ್ಬವನ್ನು ಕೇವಲ 5 ದಿನಗಳು ಮಾತ್ರವಲ್ಲದೆ ಇಡೀ ಎರಡು ತಿಂಗಳ ಕಾಲ ಆಚರಿಸುತ್ತಾರೆ. ಕೃಷಿ ಕೆಲಸ ಮುಗಿದ ನಂತರ ದೀಪಾವಳಿ ಹಬ್ಬವನ್ನು ಇಲ್ಲಿ ಆಚರಿಸಲಾಗುತ್ತದೆ. ಇಲ್ಲಿ ದೀಪಾವಳಿಯನ್ನು ಆಚರಿಸಲು, ದೀಪಾವಳಿ ಹಬ್ಬವನ್ನು ಯಾವಾಗ ಆಚರಿಸಬೇಕೆಂದು ಗ್ರಾಮದ ಮುಖ್ಯಸ್ಥರು ನಿರ್ಧರಿಸುತ್ತಾರೆ.

ಜಾನುವಾರು ಪೂಜೆ
ಇಲ್ಲಿ ದೀಪಗಳನ್ನು ಹಚ್ಚಿ ರಂಗೋಲಿ ಹಾಕುವ ಸಂಪ್ರದಾಯದ ಹೊರತಾಗಿ ದೀಪಾವಳಿಯಂದು ಜಾನುವಾರು ಪೂಜೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಗ್ರಾಮದ ಬುಡಕಟ್ಟು ಸಮುದಾಯದ ಜನರು ದೀಪಾವಳಿ ಹಬ್ಬದಂದು ಜಾನುವಾರುಗಳ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇದರಲ್ಲಿ ಬುಡಕಟ್ಟು ಜನರು ಕುಂಬಾರರಿಂದ ಮಣ್ಣಿನಿಂದ ತಯಾರಿಸಿದ ಕುದುರೆ, ಧವಸ ಇತ್ಯಾದಿಗಳನ್ನು ಖರೀದಿಸಿ ಪ್ರಾಣಿಗಳನ್ನು ಕಟ್ಟುವ ಸ್ಥಳದಲ್ಲಿ ಹಸು, ಎತ್ತು, ಎಮ್ಮೆಗಳ ಮುಂದೆ ಇಟ್ಟು ಪೂಜಿಸುತ್ತಾರೆ. ಈ ಸಮಯದಲ್ಲಿ ಪ್ರಾಣಿಗಳನ್ನು ಸಾಕಷ್ಟು ಅಲಂಕರಿಸಲಾಗುತ್ತದೆ. ಪ್ರತಿ ಮನೆಯಲ್ಲೂ ಖಾದ್ಯಗಳನ್ನು ತಯಾರಿಸಿ ಇಷ್ಟ ದೇವತೆಗಳಿಗೆ ನೈವೇದ್ಯ ಮಾಡುತ್ತಾರೆ. ಕುಟುಂಬದ ಸದಸ್ಯರು ಮತ್ತು ಸಂಬಂಧಿಕರೆಲ್ಲರೂ ಒಟ್ಟಿಗೆ ಕುಳಿತು ಭಕ್ಷ್ಯಗಳನ್ನು ತಿನ್ನುತ್ತಾರೆ ಮತ್ತು ಸ್ಥಳೀಯ ನೃತ್ಯ ಮಾಡುವುದರ ಜೊತೆಗೆ ಹಾಡುಗಳನ್ನು ಹಾಡುವ ಮೂಲಕ ದೀಪಾವಳಿಯನ್ನು ಆನಂದಿಸುತ್ತಾರೆ.

ಬೇರೆ ಬೇರೆ ದಿನಗಳಲ್ಲಿ ದೀಪಾವಳಿ
ಪಟೇಲ್ ನಿರ್ಧರಿಸಿದ ದಿನಾಂಕದಂದು ತಮ್ಮ ಗ್ರಾಮದಲ್ಲಿ ದೀಪಾವಳಿ ಆಚರಿಸಲಾಗುವುದು ಎಂದು ಸ್ಥಳೀಯರು ಹೇಳುತ್ತಾರೆ. ದೀಪಾವಳಿಯನ್ನು ಯಾವ ಗ್ರಾಮದಲ್ಲಿ ಯಾವಾಗ ಆಚರಿಸಬೇಕು ಎಂಬುದನ್ನು ಗ್ರಾಮದ ಪಟೇಲರು ಮಾತ್ರ ನಿರ್ಧರಿಸುತ್ತಾರೆ. ಇಲ್ಲಿನ ಹಳ್ಳಿಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ದೀಪಾವಳಿಯನ್ನು ಆಚರಿಸುವುದರಿಂದ ಒಂದು ಹಳ್ಳಿಯ ಜನರು ಇನ್ನೊಂದು ಹಳ್ಳಿಗೆ ಹೋಗಿ ಅಲ್ಲಿ ದೀಪಾವಳಿಯನ್ನು ಆನಂದಿಸಬಹುದು. ಪ್ರಸ್ತುತ ಈ ಪ್ರದೇಶದ ಅನೇಕ ಬುಡಕಟ್ಟು ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ಪ್ರಸ್ತುತ ಇಲ್ಲಿ ವಾಸಿಸುವ ರೈತರು ಅಥವಾ ಕಾರ್ಮಿಕರು ಖಾರಿಫ್ ಬೆಳೆ ಕೊಯ್ಲು ಮತ್ತು ರಬಿ ಬೆಳೆಗೆ ತಯಾರಿ ನಡೆಸುತ್ತಿರುತ್ತಾರೆ. ಈ ಕಾರಣದಿಂದಾಗಿ, ಈ ಜನರು ಇದೀಗ ಫ್ರೀ ಇರುವುದಿಲ್ಲ. ಆದ್ದರಿಂದ ಜನರು ವಲಸೆಯಿಂದ ಹಿಂದಿರುಗಿ ಕೃಷಿ ಕೆಲಸ ಮುಗಿಸಿದ ನಂತರವೇ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.


Click it and Unblock the Notifications

















