Search
  • Follow NativePlanet
Share
» »ದೀಪಾವಳಿ 2022 : ಕರ್ನಾಟಕದಲ್ಲಿ ದೀಪಾವಳಿಯನ್ನು ಆಚರಿಸುವಂತ ಅತ್ಯುತ್ತಮ ಸ್ಥಳಗಳು

ದೀಪಾವಳಿ 2022 : ಕರ್ನಾಟಕದಲ್ಲಿ ದೀಪಾವಳಿಯನ್ನು ಆಚರಿಸುವಂತ ಅತ್ಯುತ್ತಮ ಸ್ಥಳಗಳು

ಸುಖ ಸಮೃದ್ದಿ ಹಾಗೂ ಐಕ್ಯತೆಯ ಸಂಕೇತವಾದ ದೀಪಾವಳಿಯನ್ನು ಅತ್ಯಂತ ಸಡಗರದಿಂದ ಆಚರಿಸುವ ಕರ್ನಾಟಕದ ಸ್ಥಳಗಳು

ದೀಪಾವಳಿ ಭಾರತದಲ್ಲಿ ಆಚರಿಸುವಂತಹ ಒಂದು ಅತ್ಯಂತ ದೊಡ್ಡ ಹಬ್ಬವಾಗಿದೆ. ಇದನ್ನು "ದೀಪಗಳ ಹಬ್ಬ" ಎಂದೂ ಕರೆಯಲಾಗುತ್ತದೆ. ದೀಪಾವಳಿಯು ಐದು ದಿನಗಳ ಕಾಲ ಆಚರಿಸುವಂತಹ ಒಂದು ಹಬ್ಬವಾಗಿದ್ದು ದುಷ್ಟ ಶಕ್ತಿಯ ಮೇಲೆ ವಿಜಯದ ಸಂಕೇತವಾಗಿಯೂ ಇದನ್ನು ಆಚರಿಸಲಾಗುತ್ತದೆ. ಈ ಹಬ್ಬವು ಸಮೃದ್ದಿ ಮತ್ತು ಕುಟುಂಬಗಳನ್ನು ಒಂದುಗೂಡಿಸುವಂತಹ ಹಬ್ಬವಾಗಿದೆ. ದೀಪಾವಳಿಯು ಸಂತೋಷವನ್ನು ಸ್ನೇಹಿತರು ಮತ್ತು ಕುಟುಂಬದವರೊಡನೆ ಹಂಚುವ ಹಬ್ಬವಾಗಿದ್ದು, ಇದರಲ್ಲಿ ಮನೆಯಲ್ಲಿ ಪೂಜೆಗಳನ್ನು ನಡೆಸಲಾಗುತ್ತದೆ. ಸ್ಮರಣಿಕೆಗಳು ಮತ್ತು ಸಿಹಿತಿಂಡಿಗಳನ್ನು ವಿತರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದು ಇತ್ಯಾದಿಗಳನ್ನು ದೀಪಾವಳಿ ಆಚರಣೆಯ ಸಮಯದಲ್ಲಿ ಸಂಭ್ರಮಿಸಲಾಗುತ್ತದೆ. ಈ ವರ್ಷ ದೀಪಾವಳಿಯನ್ನು ಎಲ್ಲಿ ಆಚರಿಸಬೇಕು ಎಂದು ನೀವು ಯೋಚಿಸುತ್ತಿದ್ದರೆ, ಚಿಂತಿಸಬೇಡಿ!

ದೇಶದ ಬೇರೆ ಯಾವ ನಗರಗಳಲ್ಲಿಯೂ ಆಚರಿಸದಂತಹ ದೀಪಾವಳಿಯನ್ನು ಕರ್ನಾಟಕದ ಈ ಸ್ಥಳಗಳಲ್ಲಿ ಸಡಗರದಿಂದ ಆಚರಿಸಲಾಗುತ್ತದೆ

ಮಂಗಳೂರು

ಮಂಗಳೂರು

ಮಂಗಳೂರು ದೀಪಾವಳಿಯನ್ನು ಅತ್ಯಂತ ಸಡಗರದಿಂದ ಆಚರಿಸುವ ಕರ್ನಾಟಕದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಮಂಗಳೂರು ತನ್ನ ವಿಶಿಷ್ಟ ಸೆಳೆತವನ್ನು ಸೃಷ್ಟಿಸುತ್ತಾ ತನ್ನ ಕರಾವಳಿಯ ಸೊಬಗನ್ನು ಕಾಪಾಡಿಕೊಂಡಿದೆ. ಶಾಂತಯುತವಾದ ಮತ್ತು ಆಹ್ಲಾದಕರವಾದ ಹವಾಮಾನದ ಮಧ್ಯೆಯಲ್ಲಿ ಇಡೀ ಪಟ್ಟಣವು ದೀಪಗಳಿಂದ ಕಂಗೊಳಿಸುತ್ತದೆ. ಹಲವಾರು ಕಾರ್ಯಕ್ರಮಗಳ ಜೊತೆಗೆ ಇಲ್ಲಿ ಪ್ರತಿಯೊಬ್ಬ ಪ್ರವಾಸಿಗನೂ ಮಂಗಳೂರಿನ ಕಡಲತೀರಗಳಲ್ಲಿ ವಿಶ್ರಾಂತಿ ಪಡೆಯಬಹುದಾಗಿದೆ. ಈ ಸಮೃದ್ದಿ ಮತ್ತು ಐಕ್ಯತೆಯ ಸಂಕೇತವಾದ ದೀಪಾವಳಿಯನ್ನು ಎಲ್ಲಾ ವಯೋಮಾನದವರೂ ಆಚರಿಸುತ್ತಾರೆ. ಮಂಗಳೂರಿನಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆಕೊಡಲಾಗುತ್ತದೆ.

ಬಳ್ಳಾರಿ

ಬಳ್ಳಾರಿ

ಬಳ್ಳಾರಿ ಎಂದರೆ ಸಾಕು ವಿಜಯನಗರದ ನೆನಪಾಗುತ್ತದೆ. ಕರ್ನಾಟಕದ ಗಣಿಗಾರಿಕೆಯ ರಾಜಧಾನಿ ಎನಿಸಿರುವ ಬಳ್ಳಾರಿಯು ತನ್ನಲ್ಲಿರುವ ಅತ್ಯದ್ಬುತವಾದ ಕೋಟೆಗಳು ಮತ್ತು ಅವಶೇಷಗಳಿಂದಾಗಿ ಕರ್ನಾಟಕದ ಪ್ರಸಿದ್ದ ಪ್ರವಾಸಿ ತಾಣವೆನಿಸಿದೆ ಆದುದರಿಂದ ಇದು ಇತಿಹಾಸ ಪ್ರಿಯರು ಮತ್ತು ಪ್ರಕೃತಿ ಪ್ರೇಮಿಗಳಿಗೆ ಅಚ್ಚುಮೆಚ್ಚಿನ ಸ್ಥಳವೆನಿಸಿದೆ. ಅಸ್ಪೃಶ್ಯವಾದ ಹಸಿರುಮಯ ಪರಿಸರ ಮತ್ತು ಅವಶೇಷಗಳಿಂದ ಆವೃತವಾಗಿರುವ ದೀಪಗಳಿಂದ ಬೆಳಗುವ ದೇವಾಲಯಗಳು ದೀಪಾವಳಿಯ ಸಮಯದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರಿಗೆ ದೃಶ್ಯದೌತಣವನ್ನು ನೀಡುತ್ತವೆ.

ಮಂಡ್ಯ

ಮಂಡ್ಯ

ಮಂಡ್ಯದಲ್ಲಿ ದೀಪಾವಳಿಯನ್ನು ಹೆಚ್ಚು ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದೀಪಾವಳಿ ರಜಾ ಸಮಯದಲ್ಲಿ ಮಂಡ್ಯವು ಒಂದು ಹಬ್ಬದ ಭೂಮಿಯಾಗಿ ಪರಿವರ್ತನೆಯಗುತ್ತದೆ. ನಗರದಲ್ಲಿ ವಿವಿಧ ವಿಷಯಗಳನ್ನೊಳಗೊಂಡ ಪೆಂಡಾಲ್ ಗಳನ್ನು ಹಾಕಲಾಗುತ್ತದೆ. ಈ ಸಮಯದಲ್ಲಿ ಡೈವ್ ಮಾಡುತ್ತಾ ಮಂಡ್ಯ ನಗರದ ಸುತ್ತ ಸುತ್ತಾಡಿ ಮತ್ತು ಇಲ್ಲಿಯ ವಿಭಿನ್ನ ಮತ್ತು ಆಧುನಿಕ ರೀತಿಯ ಅಲಂಕಾರಗಳನ್ನು ಗಮನಿಸಿ. ದೀಪಾವಳಿ ಸಮಯದಲ್ಲಿ ವಾರಾಂತ್ಯದ ರಜೆಯನ್ನು ಮಂಡ್ಯಾದಲ್ಲಿ ಕಳೆದರೆ ನಿಮಗೆ ಪರಿಪೂರ್ಣ ಸಂತೋಷದ ಅನುಭವ ಸಿಗುವುದು. ಕರ್ನಾಟಕಕ್ಕೆ ದೀಪಾವಳಿ ಸಮಯದಲ್ಲಿ ಭೇಟಿಯು ಒಂದು ತಪ್ಪಿಸಿಕೊಳ್ಳಲೇಬಾರದೆನ್ನುವಂತಹ ವಿಷಯವಾಗಿದೆ.

ಮೈಸೂರು

ಮೈಸೂರು

ಮೈಸೂರು 1956 ರವರೆಗೆ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿ ಸೇವೆ ಸಲ್ಲಿಸಿದ ಪ್ರಾಚೀನ ನಗರವಾಗಿದೆ. ಇಲ್ಲಿ ವಿಭಿನ್ನ ಶೈಲಿಯಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಸೂರ್ಯಾಸ್ತವಾಗುತ್ತಿದ್ದಂತೆ ವರ್ಣರಂಜಿತ ದೀಪಗಳನ್ನು ಸ್ವಲ್ಪ ಅಥವಾ ನೂರಾರು ದೀಪಗಳನ್ನು ಪ್ರತೀ ಮನೆಯ ಸುತ್ತಲೂ ಹಚ್ಚಲಾಗುತ್ತದೆ. ಹಾಗೂ ಈ ದೀಪಗಳು ರಾತ್ರಿಪೂರ್ತಿ ಬೆಳಗುತ್ತಾ ನಿಜವಾದ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ಇಡೀ ನಗರವು ದೀಪಾವಳಿ ಸಮಯದಲ್ಲಿ ದೀಪಗಳಿಂದ ಬೆಳಗುತ್ತದೆ. ಇದರ ದೃಶ್ಯವಂತೂ ನಯನಮನೋಹರವಾದದ್ದು. ಅಷ್ಟೇ ಅಲ್ಲದೆ ಸಂಜೆ ಸಮಯದಲ್ಲಿ ಪಟಾಕಿಗಳನ್ನು ಸಿಡಿಸಿ ಈ ಹಬ್ಬವನ್ನು ಇನ್ನಷ್ಟು ಸಡಗರದಿಂದ ಆಚರಿಸುತ್ತಾರೆ.

ಬೆಂಗಳೂರು

ಬೆಂಗಳೂರು

ಕರ್ನಾಟಕದ ಹೆಚ್ಚಿನ ನಗರಗಳು ಅದರ ದೀಪಾವಳಿ ಪಾರ್ಟಿಯನ್ನು ನಡೆಸುತ್ತದೆ ಆದರೂ ಕೂಡಾ ಬೆಂಗಳೂರು ವಾಸ್ತವವಾಗಿ ದೀಪಾವಳಿಯನ್ನು ಎಲ್ಲರಿಗಿಂತ ಸಡಗರದಿಂದ ಆಚರಿಸುತ್ತದೆ. ಇದು ಕರ್ನಾಟಕದ ಅತ್ಯಂತ ಜನನಿಬಿಡ ಮತ್ತು ಅತ್ಯಂತ ಸಮೃದ್ಧ ನಗರ ಎನಿಸಿರುವ ಬೆಂಗಳೂರು ಎಲ್ಲಾ ಜನಾಂಗದ ಜನರೊಂದಿಗೆ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರದರ್ಶಿಸುತ್ತಾ ಬೆಳಕಿನ ಹಬ್ಬವನ್ನು ಆಚರಿಸುತ್ತದೆ. ಕೆಲವೊಮ್ಮೆ ನಗರವು ಪಟಾಕಿಗಳು ಮತ್ತು ವಿಷಯಾಧಾರಿತ ಪೆಂಡಾಲ್ ಗಳೊಂದಿಗೆ ತುಂಬಾ ಜೋರಾಗಿ ಮತ್ತುಸಂಭ್ರಮದ ಆಚರಣೆಯನ್ನು ನಡೆಸುತ್ತದೆ. ಬಹುಶಃ ಇದು ದೀಪಾವಳಿಯನ್ನು ಆಚರಿಸುವ ಅಸಾಮಾನ್ಯ ಸ್ಥಳವಾಗಿದೆ ಎನ್ನಬಹುದು. ಶ್ರೀಮಂತ ಮತ್ತು ಅತ್ಯುತ್ತಮ ಹಿನ್ನೆಲೆಯೊಂದಿಗೆ, ಬೆಂಗಳೂರು ಭಾರತದ ಬೇರೆ ನಗರಗಳಿಗಿಂತ ಹೆಚ್ಚು ಸುಂದರವಾಗಿ ದೀಪಾವಳಿಯನ್ನು ಪ್ರತಿನಿಧಿಸುತ್ತದೆ.

ಕೊಡಗು

ಕೊಡಗು

ಕೂರ್ಗ್ ಉತ್ತಮ ಹಿನ್ನೆಲೆಯನ್ನು ಹೊಂದಿರುವ ಆಹ್ಲಾದಕರ ನಗರವಾಗಿದ್ದು, ಮಾಲಿನ್ಯ ಅಥವಾ ಅನೇಕ ಪಟಾಕಿಗಳಿಲ್ಲದೆ ಶಾಂತ ದೀಪಾವಳಿಯನ್ನು ಆಚರಿಸುತ್ತದೆ. ದೀಪಾವಳಿಯನ್ನು ಪರ್ವತ ನಗರಗಳಲ್ಲಿ ಕಡಿಮೆ ವೈಭವದಿಂದ ಆಚರಿಸಲಾಗುತ್ತದೆ, ಏಕೆಂದರೆ ಇದು ಕರ್ನಾಟಕದ ಕಡಿಮೆ ಜನಸಂಖ್ಯೆಯ ಸ್ಥಳಗಳಲ್ಲಿ ಒಂದಾಗಿದೆ. ಹಸಿರು ಹೊದಿಕೆಯ ವಿಹಂಗಮ ನೋಟ, ಮೋಡವನ್ನು ಸ್ಪರ್ಶಿಸುವ ಬೆಟ್ಟಗಳು, ಅಧಿಕೃತ ಸ್ಥಳೀಯ ಆಹಾರ ಮತ್ತು ಸಾಂಪ್ರದಾಯಿಕ ಕೂರ್ಗಿ ನೃತ್ಯ ಇತ್ಯಾದಿಗಳು ದೀಪಾವಳಿಯನ್ನು ಕೂರ್ಗ್‌ನಲ್ಲಿ ವಿನೋದ ಮತ್ತು ಒಗ್ಗಟ್ಟಿನ ಹಬ್ಬವನ್ನಾಗಿ ಮಾಡುತ್ತದೆ. ಶಾಂತಿಯುತ ದೀಪಾವಳಿಯನ್ನು ಆಚರಿಸಲು ಕೂರ್ಗ್‌ಗೆ ಪ್ರವಾಸ ಮಾಡಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+