Search
  • Follow NativePlanet
Share
» »ಉದಯದ ಸಮಯದಲ್ಲಿ ಬಾಲಿಕೆಯಾಗಿ, ಸಂಜೆ ವೃದ್ಧೆ ರೂಪದಲ್ಲಿ ದರ್ಶನ ನೀಡುವ ದೇವಿ ವಿಗ್ರಹ

ಉದಯದ ಸಮಯದಲ್ಲಿ ಬಾಲಿಕೆಯಾಗಿ, ಸಂಜೆ ವೃದ್ಧೆ ರೂಪದಲ್ಲಿ ದರ್ಶನ ನೀಡುವ ದೇವಿ ವಿಗ್ರಹ

ಉತ್ತರ ಖಂಡ ರಾಜ್ಯದ ಹಿಮಾಚಲ ಪರ್ವತದ ಮಧ್ಯೆಯ ಅಲಕನಂದಾ ನದಿ ತೀರದಲ್ಲಿರುವ ಧಾರಿ ದೇವಿ ಅತ್ಯಂತ ಶಕ್ತಿಯುತವಾದವಳು ಎಂದು ಖ್ಯಾತಿ ಪಡೆದಿದ್ದಾಳೆ. ಧಾರಿ ದೇವಿಗೆ ಧಾರ ಮಾತಾ ಎಂದು ಸಹ ಕರೆಯುತ್ತಾರೆ. ಈ ಮಹಿಮೆಯುಳ್ಳ ದೇವತೆ ಧಾರಿ ನೆಲೆಸಿರುವ ದೇವಾಲಯದಲ್ಲಿ ಮೇಲ್ಛಾವಣಿ ಇಲ್ಲ. ಹೀಗೆ ಮೇಲ್ಛಾವಣಿಯಿಲ್ಲದ ದೇವಾಲಯವೇ ಈ ತಾಯಿಗೆ ಪ್ರೀಯ ಎಂಬುದು ಸ್ಥಳೀಯ ಭಕ್ತರ ನಂಬಿಕೆಯಾಗಿದೆ. ಈ ದೇವಾಲಯದ ಇನ್ನೊಂದು ಪಕ್ಕ ಪ್ರದೇಶದಲ್ಲಿ ಒಂದು ಗ್ರಾಮವಿದೆ. ಈ ಗ್ರಾಮ ಹಾಗೂ ದೇವಾಲಯಕ್ಕೆ ಸುಲಭವಾಗಿ ತಲುಪಲು ಒಂದು ಬ್ರಿಡ್ಜ್ ನಿರ್ಮಿಸಲಾಗಿದೆ.

ಮುಖ್ಯ ನಗರಗಳಾದ ಶ್ರೀನಗರ, ಬದರಿನಾಥ್‍ಗೆ ತಲುಪಲು ಇರುವ ರಹದಾರಿಯ ಮಾರ್ಗದಲ್ಲಿ ಕಲ್ಯಾಸರ್ ಎಂಬ ಪ್ರಾಂತ್ಯವಿದೆ. ಈ ಪ್ರಾಂತ್ಯದಲ್ಲಿ ಈ ಧಾರಿ ದೇವಿ ದೇವಾಲಯವಿದೆ. ಧಾರಿ ದೇವಿಯ ದರ್ಶನವನ್ನು ಪಡೆಯಲು ನವದೆಹಲಿಯಿಂದ ಸುಮಾರು 360 ಕಿ,ಮೀ ದೂರ ಹಾಗೂ ರುದ್ರಪ್ರಯೋಗನಿಂದ ಸುಮಾರು 20 ಕಿ,ಮೀ ಅಂತರದಲ್ಲಿದೆ. ಈ ದೇವಿಯನ್ನು ಪೂಜಿಸಿದವರಿಗೆ ಎಷ್ಟು ಒಳ್ಳೆಯ ಭಾಗ್ಯವನ್ನು ಕರುಣೀಸುತ್ತಾಳೂ, ಧಿಕ್ಕರಿಸಿದರೆ ಅಷ್ಟೇ ಶಿಕ್ಷೀಸುತ್ತಾಳೆ. ಈ ಧಾರಿ ದೇವಿಯ ಅದ್ಭುತ ಶಕ್ತಿಯನ್ನು ಸೂಚಿಸುವ ಒಂದು ಆಶ್ಚರ್ಯಕರವಾದ ಸಂಘಟನೆ 2013, ಜೂನ್ 16 ನೇ ದಿನಾಂಕದಲ್ಲಿ ನಡೆಯಿತು.

1.ಧಾರಿ ದೇವಿ ದೇವಾಲಯ

1.ಧಾರಿ ದೇವಿ ದೇವಾಲಯ

ಉತ್ತರಖಂಡ ರಾಜ್ಯದ ಶೀನಗರ ಪ್ರದೇಶದಲ್ಲಿ ಪ್ರವಹಿಸುತ್ತಿರುವ ಅಲಕನಂದಾ ನದಿಯ ಸಮೀಪದಲ್ಲಿ ಅತ್ಯಂತ ಪ್ರಾಚೀನವಾದ ಧಾರಿದೇವಿಯ ದೇವಾಲಯವಿದೆ. ಈ ತಾಯಿಯು ಅಲಕನಂದಾ ನದಿಯನ್ನು ನಿಯಂತ್ರಿಸುತ್ತಿರುತ್ತಾಳೆ ಎಂದು ಸ್ಥಳೀಯರು ತಿಳಿಸುತ್ತಿರುತ್ತಾರೆ.

2.ಅಲಕಾನಂದ ನದಿ

2.ಅಲಕಾನಂದ ನದಿ

ಈ ದೇವಿಯ ಪ್ರಭಾವದ ಕಾರಣದಿಂದ ಅಲಕನಂದಾ ನದಿ ಅತ್ಯಂತ ಶಾಂತಿಯುತವಾಗಿ ಪ್ರವಹಿಸುತ್ತಿದ್ದು ಭಕ್ತರಿಗೆ ಆನಂದವನ್ನು ಉಂಟುಮಾಡುತ್ತಾ ಇರುತ್ತದೆ. ಈ ದೇವಿಯ ದೇವಾಲಯವು ಸುಮಾರು 8 ನೇ ಶತಮಾನದಿಂದಲೂ ಇದೆ ಎಂದು ಹಲವಾರು ಜನರು ಭಾವಿಸುತ್ತಾರೆ.
PC:YOUTUBE

3.ಸಿದ್ಧ ಪೀಠ

3.ಸಿದ್ಧ ಪೀಠ

ವಿಶಿಷ್ಟವೆನೆಂದರೆ ಧಾರಿ ದೇವಿಯ ದೇವಾಲಯವು ಎಷ್ಟೋ ಸಾವಿರ ವರ್ಷಗಳ ಹಳೆಯದು ಎಂದು ಮಹಾಭಾರತದ ಸಮಯದ ವರ್ಷದಿಂದ ತಿಳಿಯುತ್ತದೆ. ಈ ದೇವಾಲಯವಿರುವ ಪ್ರದೇಶವನ್ನು ಸಿದ್ದಪೀಠ ಎಂದು ಕರೆಯುತ್ತಿದ್ದರು ಎಂದು ಭಾಗವತದಲ್ಲಿ ರಚಿಸಲಾಗಿದೆ.
PC:YOUTUBE

4.108 ಶಕ್ತಿ ಪೀಠ

4.108 ಶಕ್ತಿ ಪೀಠ

ಈ ಪ್ರದೇಶದಲ್ಲಿ ಮಹಾಕಾಳಿಯ ಅವತಾರದಲ್ಲಿ ನೆಲೆಸಿರುವ ಧಾರಿದೇವಿ ನೆಲೆಸಿರುವ ಕಾರಣ ಈ ಪ್ರದೇಶವನ್ನು ಅಮೋಘ ಮಹತ್ವವಿರುವ ತಾಣ ಎಂದು ಮಹಾಭಾಗವತದಲ್ಲಿ ರಚಿಸಲಾಗಿದೆ. 108 ಶಕ್ತಿ ಪೀಠಗಳಲ್ಲಿ ಈ ಧಾರಿ ದೇವಿಯ ದೇವಾಲಯವು ಒಂದು ಎಂದು ಶ್ರೀ ಮತಾ ದೇವಿ ಭಾಗವತದಲ್ಲಿ ರಚಿಸಲಾಗಿದೆ.
PC:YOUTUBE

5.ಉಗ್ರ ಸ್ವರೂಪಿ

5.ಉಗ್ರ ಸ್ವರೂಪಿ

ಈ ಧಾರಿ ದೇವಿಯನ್ನು ಉಗ್ರ ಸ್ವರೂಪಿ ಎಂದು ಹೇಳುತ್ತಾರೆ. ಈ ದೇವಿಯನ್ನು ಪೂಜಿಸಿದವರಿಗೆ ಎಷ್ಟು ಒಳ್ಳೆಯ ಭಾಗ್ಯವನ್ನು ಕರುಣೀಸುತ್ತಾಳೂ, ಧಿಕ್ಕರಿಸಿದರೆ ಅಷ್ಟೇ ಶಿಕ್ಷೀಸುತ್ತಾಳೆ ಎಂದು ಭಕ್ತರ ನಂಬಿಕೆಯಾಗಿದೆ.

6.ಕೇದಾರನಾಥ ಪ್ರದೇಶ

6.ಕೇದಾರನಾಥ ಪ್ರದೇಶ

ಕ್ರಿ,ಶ 1882ರಲ್ಲಿ ಇಸ್ಲಾಂ ದೊರೆ ಈ ಪ್ರಾಂತ್ಯವನ್ನು ನಾಶಮಾಡಿ ಒಂದು ಮಸೀದಿಯನ್ನು ನಿರ್ಮಾಣ ಮಾಡುವ ಪ್ರಯತ್ನ ಮಾಡಿದನು. ಇಸ್ಲಾಂ ದೊರೆ ಮಾಡಿದ ಈ ಅಪಚಾರದ ಕಾರಣದಿಂದ ಆ ಸಮಯದಲ್ಲಿ ಬೆಟ್ಟ ಗುಡ್ಡಗಳು ಒಡೆದು ಪ್ರಕೃತಿ ಉಗ್ರ ಸ್ವರೂಪ ಪಡೆದು ಕೇದಾರನಾಥದಲ್ಲಿ ದ್ವಂಸ ಮಾಡಿದವು. ಈ ಭಯಂಕರವಾದ ವಿಪತ್ತಿನಿಂದ ನೂರಾರು ಮಂದಿಯನ್ನು ಪ್ರಕೃತಿ ವಿಕೋಪ ಬಲಿ ತೆಗೆದುಕೊಂಡಿತು.
PC:YOUTUBE

7.ವಿಶ್ವಾಸ

7.ವಿಶ್ವಾಸ

ಈ ದೇವಿಯ ಒಂದು ಮಹಾತ್ಮೆಯನ್ನು ಪ್ರತ್ಯಕ್ಷವಾಗಿ ನೋಡಿದ ಆ ಇಸ್ಲಾಂ ದೊರೆ ಭಯದಿಂದ ಸುಮ್ಮನಾದನು. ಅಂದಿನಿಂದ ಈ ದೇವಾಲಯದ ಬಗ್ಗೆ ಯಾರೂ ಉಸಿರು ಎತ್ತವುದಿಲ್ಲ ಎಂದು ಸ್ಥಳೀಯ ಭಕ್ತರು ತಿಳಿಸುತ್ತಾರೆ.
PC:YOUTUBE

8.ಗರ್ಭಗುಡಿ

8.ಗರ್ಭಗುಡಿ

ಉತ್ತರ ಖಂಡದಲ್ಲಿರುವ ಗರ್ವಾಲ್ ಪ್ರದೇಶದಲ್ಲಿ ಪ್ರವಹಿಸುತ್ತಿರುವ ಅಲಕನಂದಾ ನದಿಯ ತೀರದಲ್ಲಿ ಈ ಧಾರಿ ದೇವಿಯ ದೇವಾಲಯವಿದೆ. ಈ ದೇವಿಗೆ ಯಾವುದೇ ರೀತಿ ಮೇಲ್ಛಾವಣಿಯಿಲ್ಲದ ಗರ್ಭಗುಡಿಯಂತೆ ಇದೆ.
PC:YOUTUBE

9ವಿಶಿಷ್ಟತೆ

9ವಿಶಿಷ್ಟತೆ

ಈ ಕ್ಷೇತ್ರದ ಒಂದು ವಿಶಿಷ್ಟತೆ ಎಂದರೆ ಧಾರಿ ದೇವಿ ಉದಯದ ಸಮಯದಲ್ಲಿ ಬಾಲಿಕೆಯಾಗಿ, ಸಂಜೆ ವೃದ್ಧೆ ರೂಪದಲ್ಲಿ ದರ್ಶನ ನೀಡುತ್ತಾಳೆ. ಹೀಗೆ ಈ ತಾಯಿಯು ಸಮಯಕ್ಕೆ ಸರಿಯಾಗಿ ಬದಲಾವಣೆಗೊಳ್ಳುತ್ತಿರುತ್ತಾಳೆ.
PC:YOUTUBE

10.ಶ್ರೀನಗರ

10.ಶ್ರೀನಗರ

ಈ ಮಠದಲ್ಲಿ ಕಾಳಿಮಾತಾ ಎಂಬ ದೇವತೆ ಇದ್ದಾಳೆ. ಶ್ರೀ ನಗರದ ಏಲೆಕ್ಟ್ರೀಕ್ ಪ್ರಾಜೆಕ್ಟ್ ನಿರ್ಮಾಣಕ್ಕಾಗಿ ಧಾರಿ ದೇವಿ ವಿಗ್ರಹವನ್ನು ತೆಗೆದು ಅಲ್ಲಿಂದ ಸ್ವಲ್ಪ ಎತ್ತರ ಸ್ಥಳದಲ್ಲಿ ಇಡುವ ಪ್ರಯತ್ನ ನಡೆಯಿತು.
PC:YOUTUBE

11.ಧಾರಿ ದೇವಿ

11.ಧಾರಿ ದೇವಿ

ವಿದ್ಯುತ್ ತಯಾರಿಕೆ ಮಾಡುವ ಸಲುವಾಗಿ ಈ ಡ್ಯಾಂ ನಿರ್ಮಾಣ ಮಾಡಲು ಸಿದ್ದವಾಯಿತು. 330 ಎಮ್,ಡ ವಿದ್ಯುತ್ ಉತ್ಪತ್ತಿ ಮಾಡಲು ಉತ್ತರ ಖಂಡ ಸರ್ಕಾರವು ಧಾರಿ ದೇವಿಯ ದೇವಾಲಯವನ್ನು ನಾಶಪಡಿಸಲು ಮುಂದಾಗಲು ಹಿಂದೆ ಮುಂದೆ ಯೋಚಿಸಲಿಲ್ಲ.
PC:YOUTUBE

12.ಭಕ್ತರ ವಿಶ್ವಾಸ

12.ಭಕ್ತರ ವಿಶ್ವಾಸ

ಅಲಕನಂದ ನದಿ ಮೇಲೆ ಡ್ಯಾಂ ನಿರ್ಮಾಣ ಮಾಡುವುದಕ್ಕೊಸ್ಕರ ಧಾರಿ ದೇವಿ ದೇವಾಲಯವನ್ನು ನಾಶ ಮಾಡಿದರು. ಸರ್ಕಾರ ಮಾಡಿದ ಈ ಅನಾಹುತದಿಂದಾಗಿ ಹಲವಾರು ಮಂದಿ ಭಕ್ತರು ಪರಿಹಾರ ನೀಡಬೇಕಾಯಿತು. ಅದು ಹೇಗೆ ಎಂದರೆ ಚಾರ್ ಧಾಂ ಎಂಬ ಯಾತ್ರೆಗೆ ಹೋಗುವ ಭಕ್ತರಿಗೆ ಧಾರಿ ದೇವಿ ರಕ್ಷಣೆ ಮಾಡುತ್ತಾ ಇರುತ್ತಾಳೆ ಎಂದು ಭಕ್ತರು ವಿಶ್ವಾಸ ಹೊಂದಿದ್ದಾರೆ.
PC:YOUTUBE

13.ಉತ್ತರ ಖಂಡ ಸರ್ಕಾರ

13.ಉತ್ತರ ಖಂಡ ಸರ್ಕಾರ

ಇಂತಹ ಶಕ್ತಿ ದೇವತೆ ದೇವಾಲಯವನ್ನು ಉತ್ತರ ಖಂಡ ಸರ್ಕಾರ ನಾಶ ಮಾಡಿತು. ವಿದ್ಯುತ್ ಉತ್ಪತ್ತಿ ಮಾಡುವ ಸಲುವಾಗಿ ಉತ್ತರ ಖಂಡ ಸರ್ಕಾರ 2013 ರ ಜೂನ್ 16 ಸಂಜೆ 6 ಗಂಟೆಗೆ ಈ ದೇವಾಲಯವನ್ನು ಕೆಲವು ಕೂಲಿ ಕಾರ್ಮಿಕರಿಂದ ದೇವಾಲಯವನ್ನು ನಾಶ ಮಾಡಿದರು.
PC:YOUTUBE

14. ಮಹಾ ಮಳೆ

14. ಮಹಾ ಮಳೆ

ನಂತರ ಧಾರಿ ದೇವಿಯನ್ನು ಅಲ್ಲಿಂದ ತೆಗೆಯಲಾಯಿತು. ಈ ಘಟನೆ ನಡೆದು ಸ್ವಲ್ಪ ಸಮಯದಲ್ಲಿಯೇ ಕೇದರನಾಥ್ ಪ್ರದೇಶದಲ್ಲಿ ಮಳೆಯು ಧಾರಕಾರವಾಗಿ ಸುರಿಯ ತೊಡಗಿತು. ಸತತ 2 ಗಂಟೆಗಳ ಕಾಲ ಭಯಂಕರವಾದ ಮಳೆಯು ಸುರಿಯಿತು.
PC:YOUTUBE

15.ಭಯಕಂರ ರೂಪ

15.ಭಯಕಂರ ರೂಪ

ಈ ತಾಯಿಯ ಭಯಂಕರ ರೂಪದಿಂದಾಗಿ ಹಲವಾರು ಮಂದಿಗೆ ಕೆಲವು ತೊಂದರೆಗೊಳಗಾದರೂ ,ಅದೆಷ್ಟೊ ಮಂದಿ ಭಕ್ತರು ಅಲ್ಲಿಯೇ ಉಳಿದುಕೊಂಡರು. ಹಲವಾರು ಬೆಟ್ಟಗಳು ನೋಡುತ್ತಿದ್ದಂತೆ ಉರುಳಿ ಬಿದ್ದವು.
PC:YOUTUBE

16.ಭಕ್ತರು

16.ಭಕ್ತರು

ಈ ಅನಾಹುತ ನಡೆದ ನಂತರ ಹಲವಾರು ಭಕ್ತರನ್ನು ಈಚೆ ತೆಗೆಯುವುದು ಅಸಾಧ್ಯವಾಯಿತು. ಹೀಗೆ ಇದ್ದಕ್ಕಿದ್ದ ಹಾಗೆ ಇಂತಹ ಭಾರಿ ಮಳೆ ಯ ಜಲಪ್ರಳಯವಾಗಲು ಕಾರಣ ತಿಳಿಯಬೇಕು ಎಂದು ಅನ್ವೇಷಣೆಯನ್ನು ಮಾಡಲು ಪ್ರಾರಂಭ ಮಾಡಿದರು.
PC:YOUTUBE

17.ಜ್ಯೋತಿಷ್ಯ ಶಾಸ್ತ್ರ

17.ಜ್ಯೋತಿಷ್ಯ ಶಾಸ್ತ್ರ

ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಧಾರಿ ದೇವಿಯ ದೇವಾಲಯವನ್ನು ನಾಶ ಮಾಡಿದ್ದರಿಂದಲೇ ಪ್ರಳಯ ರೀತಿಯ ಧಾರಕಾರ ಮಳೆಯಾಗಿದೆ ಎಂದು ತಿಳಿಸಿದರು.
PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X