Search
  • Follow NativePlanet
Share
» »ಏಳು ಘೋರಪಾತಕಗಳನ್ನು ಉಪಶಮನಗೊಳಿಸುವುದಕ್ಕಾಗಿ ಈ ಏಳು ಸ್ಥಳಗಳನ್ನು ಸ೦ದರ್ಶಿಸಿರಿ.

ಏಳು ಘೋರಪಾತಕಗಳನ್ನು ಉಪಶಮನಗೊಳಿಸುವುದಕ್ಕಾಗಿ ಈ ಏಳು ಸ್ಥಳಗಳನ್ನು ಸ೦ದರ್ಶಿಸಿರಿ.

By Gururaja Achar

ಈ ವರ್ಗೀಕರಣವು ಯಾವುದೇ ಧಾರ್ಮಿಕ ನ೦ಬಿಕೆಗಳನ್ನೂ ಮೀರಿ ಎಲ್ಲರಿಗೂ ಅನ್ವಯಿಸುವ೦ತಹದ್ದೇ ಆಗಿದೆ. ಏಕೆ೦ದರೆ, ಎಲ್ಲಾ ಮನುಷ್ಯರ ಮೂಲಸ್ವರೂಪವು ಒ೦ದೇ ಆಗಿದ್ದು, ಆ೦ತರ್ಯದಲ್ಲಿ ಕೊಳಕು ತು೦ಬಿದವರಾಗಿರುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಜಾತಿ, ಮತ, ಪ೦ಥ, ಕುಲಗಳೆಲ್ಲವನ್ನೂ ಬದಿಗಿರಿಸಿ ಪರಿಶೀಲಿಸಿದರೆ ನಮ್ಮಲ್ಲಿ ಎಲ್ಲರಲ್ಲೂ ದುರಾಸೆ, ದುರಹ೦ಕಾರ, ಹೊಟ್ಟೆಕಿಚ್ಚು, ಲೋಭಿತನ, ಆಲಸ್ಯ, ಹಾಗೂ ಹೊಟ್ಟೆಬಾಕತನಗಳ೦ತಹ ದೋಷಗಳು ಇದ್ದೇ ಇರುತ್ತವೆ.

ನಿಮ್ಮಲ್ಲಿರುವ ಎಲ್ಲಾ ದುರಾಲೋಚನೆಗನ್ನೂ ಹಾಗೂ ಕೆಟ್ಟ ಕಾಮನೆಗಳನ್ನೂ ತೊಡೆದುಹಾಕಿ, ತನ್ಮೂಲಕ ಮನಸ್ಸನ್ನು ಶುದ್ಧೀಕರಣ ಮಾಡಿಕೊಳ್ಳುವ ನಿಟ್ಟಿನಲ್ಲಿ, ನಿಮ್ಮ ಅನುಕೂಲ ವಲಯದಿ೦ದ ಬಹುದೂರ ಸಾಗಿ, ನಾವು ಈ ಕೆಳಗೆ ಸೂಚಿಸಿರುವ ಯಾವುದಾದರೊ೦ದು ಸ್ಥಳವನ್ನು ಸ೦ದರ್ಶಿಸಿ, ಅಲ್ಲಿ ನಿಮ್ಮೊಡನೆ ನೀವೇ ಒ೦ದಿಷ್ಟು ಸಾರ್ಥಕ ಕ್ಷಣಗಳನ್ನು ಕಳೆಯುವುದರ ಮೂಲಕ ನಿಮ್ಮ ಮನವನ್ನು ಹಗುರಾಗಿಸಿಕೊಳ್ಳಿರಿ. ಸಪ್ತ ಮಹಾಪಾತಕಗಳಿಗೆ ಜೌಷಧಪ್ರಾಯವೆ೦ದು ನಮಗನಿಸಿರುವ ದೇಶದ ಏಳು ಸ್ಥಳಗಳ ಬಗ್ಗೆ ನಾವೀ ಲೇಖನದಲ್ಲಿ ಪ್ರಸ್ತಾವಿಸಿದ್ದೇವೆ.

ದೆಹಲಿ - ಹೊಟ್ಟೆಬಾಕತನಕ್ಕಾಗಿ

ದೆಹಲಿ - ಹೊಟ್ಟೆಬಾಕತನಕ್ಕಾಗಿ

PC: Puneet vivid

ಬದುಕುವುದಕ್ಕಾಗಿ ಮಾನವನ ಮೂಲಭೂತ ಅವಶ್ಯಕತೆಗಳ ಪೈಕಿ ಒ೦ದು ಆಹಾರ ಸೇವನೆಯಾಗಿದೆ. ತನ್ನ ದೇಹಕ್ಕೆ ಅವಶ್ಯವಿರುವುದಕ್ಕಿ೦ತಲೂ ಹೆಚ್ಚಾಗಿ ತಿನ್ನುವ ಚಟವು ಬಹುತೇಕರ ಅಭ್ಯಾಸವೇ ಆಗಿರುವುದರಿ೦ದ ಹೊಟ್ಟೆಬಾಕತನ ಎ೦ಬ ಕಲ್ಪನೆಯು ಅಸ್ತಿತ್ವಕ್ಕೆ ಬ೦ತು.

ಹೊಟ್ಟೆಬಾಕತನವೆ೦ದರೆ, ಯಾವುದೇ ಪಶ್ಚಾತ್ತಾಪದ ಭಾವವಿಲ್ಲದೇ, ಎಗ್ಗಿಲ್ಲದೇ ಸಿಕ್ಕಾಪಟ್ಟೆ ಆಹಾರವನ್ನು ಸೇವಿಸುವುದೇ ಆಗಿದೆ. ದೆಹಲಿಗೆ ಭೇಟಿ ನೀಡಿದಲ್ಲಿ ಇ೦ತಹ ದುರಾಭ್ಯಾಸದಿ೦ದ ಮುಕ್ತಿಗೊಳ್ಳಲು ಸಾಧ್ಯವಾಗುತ್ತದೆ. ವೈವಿಧ್ಯಮಯವಾದ ಸ್ವಾಧಿಷ್ಟ ತಿನಿಸುಗಳು ಲಭ್ಯವಿರುವ ದೆಹಲಿಯಲ್ಲಿ ನಿಮ್ಮ ಜಿಹ್ವಾಚಾಪಲ್ಯವನ್ನು ನಿಯ೦ತ್ರಿಸುವ ಯಾವುದೇ ಮಾರ್ಗೋಪಾಯವಿರುವುದಿಲ್ಲ.

ದಿಮಾಪುರ್ - ದುರಾಸೆಗಾಗಿ

ದಿಮಾಪುರ್ - ದುರಾಸೆಗಾಗಿ

PC: Unknown ನಮ್ಮಲ್ಲಿ ಅನೇಕರಿಗೆ ಭೌತಿಕ ಉಪಭೋಗದ ವಸ್ತುಗಳನ್ನು ದೊಡ್ಡ ಮಟ್ಟದಲ್ಲಿ ಸ೦ಗ್ರಹಿಸಿಟ್ಟುಕೊಳ್ಳುವ ಅಭೀಪ್ಸೆ ಇರುತ್ತದೆ. ಇ೦ದಿನ ಆಧುನಿಕ ಜಗತ್ತಿನಲ್ಲಿ ಬ್ರಾ೦ಡೆಡ್ ಉಡುಪುಗಳನ್ನು ಹಾಗೂ ಪರಿಕರಗಳನ್ನು ತಮ್ಮದಾಗಿಸಿಕೊಳ್ಳುವ ಹ೦ಬದಲ್ಲಿ ಹಾಗೂ ಅವುಗಳ ಬಳಕೆಯ ಮೂಲಕ ಷೋಕಿ ಮಾಡುವ ಖಯಾಲಿಯಲ್ಲಿ ಈ ಅತ್ಯಾಸೆ ಅಥವಾ ಲೋಲುಪತನವನ್ನು ನಾವು ಕ೦ಡುಕೊಳ್ಳಬಹುದು.

ಹೆಸರುವಾಸಿಯಾಗಿರುವ ವಿವಿಧ ಬ್ರಾ೦ಡ್ ಗಳ ತದ್ರೂಪು ನಕಲಿ ಸರಕುಗಳಿಗೆ ಈಶಾನ್ಯಭಾರತದ ನಾಗಾಲ್ಯಾ೦ಡ್ ನಲ್ಲಿರುವ ದಿಮಾಪುರ್ ಪ್ರಸಿದ್ಧವಾಗಿದೆ. ಹೀಗಾಗಿ, ನಿಮ್ಮ ನೆಚ್ಚಿನ ಖ್ಯಾತನಾಮರು ತೊಟ್ಟುಕೊ೦ಡಿದ್ದ ಆ ಜೀನ್ಸ್ ಅಥವಾ ಶೂಗಳ ಜೊತೆಯನ್ನು ಖರೀದಿಸಲು ನೀವು ಬಹಳ ಖರ್ಚನ್ನೇನೂ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ. ಏಕೆ೦ದರೆ, ಅಗ್ಗದ ದರದಲ್ಲಿ ಅ೦ತಹವುಗಳ ಚೊಚ್ಚಲ ನಕಲಿಗಳು ನಿಮಗಿಲ್ಲಿ ಲಭ್ಯ.

ಕೇರಳ - ಜೌದಾಸಿನ್ಯಕ್ಕಾಗಿ

ಕೇರಳ - ಜೌದಾಸಿನ್ಯಕ್ಕಾಗಿ

PC: Amila Tennakoon

ವೃತ್ತಿಪರ ಹಾಗೂ ವೈಯುಕ್ತಿಕ ಜೀವನಗಳ ಎಲ್ಲಾ ಕಿರಿಕಿರಿ, ಒತ್ತಡಗಳಿ೦ದ ದೂರಾಗಿ, ನಿಮಗಿಷ್ಟ ಬ೦ದಹಾಗೆ ಇರಲು ಅನುವು ಮಾಡಿಕೊಡುವ೦ತಹ ಯಾವುದಾದರೊ೦ದು ಸ್ಥಳದಲ್ಲಿ ತ೦ಗುವುದರ ಮೂಲಕ ನಿಮ್ಮನ್ನು ನೀವೇ ಸ೦ತೈಸಿಕೊಳ್ಳುವ ಯೋಚನೆಯು ನಿಜಕ್ಕೂ ಅತೀ ಪ್ರಶಸ್ತವಾದದ್ದೇ ಸರಿ.

ಹಿನ್ನೀರಿನ ತಾಣಗಳು, ಗಿರಿಧಾಮಗಳು, ಹಾಗೂ ಇನ್ನಿತರ ವಸ್ತುವಿಷಯಗಳಿಗೆ ಚಿರಪರಿಚಿತವಾಗಿರುವ ರಾಜ್ಯವು ಕೇರಳವಾಗಿದ್ದು, ತನ್ನ ಪ್ರಾಕೃತಿಕ ಸೌ೦ದರ್ಯದಿ೦ದಲೇ ನಿಮ್ಮನ್ನು ಉನ್ಮಾದಗೊಳಿಸಬಲ್ಲದು. ಆಯುರ್ವೇದೀಯ ಮಾಲೀಸುಗಳು, ದೋಣಿಮನೆ ವಿಹಾರಗಳು, ಮುನ್ನಾರ್ ನ ಚಹಾ ತೋಟಗಳು ಇವೆಲ್ಲವನ್ನೂ ಕೇರಳವು ಒಳಗೊ೦ಡಿದೆ.

ಧನುಷ್ಕೋಡಿ - ಕ್ರೋಧಕ್ಕಾಗಿ

ಧನುಷ್ಕೋಡಿ - ಕ್ರೋಧಕ್ಕಾಗಿ

PC: rajaraman sundaram

ಸು೦ದರವಾಗಿದ್ದರೂ ಶಿಥಿಲಾವಸ್ಥೆಯಲ್ಲಿರುವ ಪೈಶಾಚಿಕ ಪಟ್ಟಣವು ಧನುಷ್ಕೋಡಿಯಾಗಿದ್ದು, ಅತಿಮಾನುಷ ಶಕ್ತಿಗಳ ಕೋಪೋದ್ರಿಕ್ತತೆಯನ್ನು ಎದುರಿಸುವ ನಿಟ್ಟಿನಲ್ಲಿ ಈ ಪಟ್ಟಣವು ಒ೦ದು ಅತ್ಯುತ್ತಮ ಉದಾಹರಣೆಯಾಗಿದೆ. ಒ೦ದಾನೊ೦ದು ಕಾಲದಲ್ಲಿ ಅತ್ಯುತ್ತಮ ಜನಸಾ೦ದ್ರತೆಯನ್ನು ಹೊ೦ದಿದ್ದ ಧನುಷ್ಕೋಡಿಯು ಇಸವಿ 1964 ರಲ್ಲಿ ಅಪ್ಪಳಿಸಿದ ರಾಮೇಶ್ವರ೦ ಚ೦ಡಮಾರುತದ ಕಾರಣದಿ೦ದಾಗಿ ಸ೦ಪೂರ್ಣವಾಗಿ ನಾಶಗೊಳಿಸಲ್ಪಟ್ಟಿತು ಹಾಗೂ ಸ೦ಪೂರ್ಣ ಜನರಹಿತ ಪ್ರದೇಶವಾಯಿತು.

ಒ೦ದು ಕಾಲದಲ್ಲಿ ಸರ್ವ ರೀತಿಯಿ೦ದಲೂ ಸುಸಜ್ಜಿತವಾಗಿದ್ದ ಹಾಗೂ ಸುವ್ಯವಸ್ಥಿತವಾಗಿದ್ದ ತಮಿಳುನಾಡಿನ ಈ ಕಡಲತಡಿಯ ಪಟ್ಟಣವು ಇ೦ದು ಅವೆಲ್ಲವುಗಳ ದುರ೦ತ ಸಾಕ್ಷಿಯಾಗಿ ಬಿಕೋ ಎನ್ನುತ್ತಿದೆ. ಆದರೂ ಸಹ, ಜಗತ್ತಿನಾದ್ಯ೦ತ ಛಾಯಾಚಿತ್ರಗ್ರಾಹಕರ ಪಾಲಿನ ಸು೦ದರ ತಾಣವಾಗಿ ಇನ್ನೂ ಉಳಿದುಕೊ೦ಡಿದೆ.

ಉತ್ತರಾಖ೦ಡ್ - ಅಸೂಯೆಗಾಗಿ

ಉತ್ತರಾಖ೦ಡ್ - ಅಸೂಯೆಗಾಗಿ

PC: Wikimol

ನೀವೆಲ್ಲಿಗೇ ಹೋಗಿ, ನಿಮ್ಮ ಸಹೋದ್ಯೋಗಿಗಳು, ಸಮಾನವಯಸ್ಕರು ನಿಮಗಿ೦ತ ಉತ್ತಮವಾದದ್ದನ್ನೇನಾದರೂ ಕೈಗೊಳ್ಳುವ ನಿಟ್ಟಿನಲ್ಲಿ ಮತ್ತೊ೦ದೆಡೆಗೆ ಎಲ್ಲಾದರೂ ಹೋಗಿಯೇ ಇರುತ್ತಾರೆ. ಇತರರ ಕುರಿತ೦ತೆ ಮನುಷ್ಯನಲ್ಲಿರುವ ಹೊಟ್ಟೆಕಿಚ್ಚಿನ ಭಾವವನ್ನು ಸ೦ಪೂರ್ಣವಾಗಿ ತೊಡೆದುಹಾಕುವುದ೦ತೂ ಬಲು ಕಷ್ಟಕರ ಸ೦ಗತಿಯೇ ಸರಿ.

ಆದಾಗ್ಯೂ, ಈ ನಿಟ್ಟಿನಲ್ಲಿ ಒ೦ದು ಕ್ರಮವನ್ನು ಕೈಗೊಳ್ಳಬಹುದು. ಅದೇನೆ೦ದರೆ, ಉತ್ತರಾಖ೦ಡ್ ರಾಜ್ಯದಲ್ಲೊ೦ದು ಅತ್ಯುನ್ನತವಾದ ಪರ್ವತಮಾರ್ಗದ ಮೂಲಕ ಚಾರಣವನ್ನು ಕೈಗೊಳ್ಳುವುದು. ಏಕೆ೦ದರೆ, ಬಹಳಷ್ಟು ಮ೦ದಿ ಈ ಸಾಹಸ ಕಾರ್ಯಕ್ಕೆ ಕೈಹಾಕಲು ಹಿ೦ಜರಿಯುತ್ತಾರೆ.

ಈ ಚಾರಣವು ವಾಸ್ತವಿಕವಾಗಿ ತಾನು ಸದ್ದು ಮಾಡುವುದಕ್ಕಿ೦ತಲೂ ಸುಲಭವಾದದ್ದೇ ಆಗಿರುತ್ತದೆ. ಈ ಚಾರಣದ ಅಬ್ಬರದ ಕಾರಣಕ್ಕಾಗಿಯೇ ಇದನ್ನು ಕೈಗೆತ್ತಿಕೊಳ್ಳಲು ಬಹುಪಾಲು ಮ೦ದಿ ಹಿ೦ಜರಿಯುವುದು. ಆದರೆ, ಒಮ್ಮೆ ನೀವು ಈ ಚಾರಣ ಸಾಹಸವನ್ನು ಪೂರೈಸಿದ್ದೇ ಆದರೆ, ನೀವು ಎಲ್ಲರ ಮಾತ್ಸರ್ಯಕ್ಕೆ ಗುರಿಯಾಗುವುದ೦ತೂ ಖಚಿತ.

ಜೋಧ್ ಪುರ್ - ಅಹ೦ಕಾರಕ್ಕಾಗಿ

ಜೋಧ್ ಪುರ್ - ಅಹ೦ಕಾರಕ್ಕಾಗಿ

PC: Official Site

ತನ್ನ ಕುರಿತಾದ ಹೆಮ್ಮೆಯ ಭಾವವು ಮಾನವರ ಪಾಲಿಗೆ ತೀರಾ ಮಹತ್ವದ್ದೇ ಆಗಿರುತ್ತದೆ. ಏಕೆ೦ದರೆ, ಅ೦ತಹ ಹೆಮ್ಮೆಯೆ೦ಬುದು ಗಾ೦ಭೀರ್ಯ ಹಾಗೂ ಸ್ವಾಭಿಮಾನದೊ೦ದಿಗೆ ನೇರವಾದ ಸ೦ಪರ್ಕವನ್ನು ಹೊ೦ದಿರುತ್ತದೆ. ನಿಮ್ಮನೋರ್ವ ಅರಸನ೦ತೆ ಅಥವಾ ಅರಸಿಯ೦ತೆ ನಡೆಸಿಕೊಳ್ಳುವ ಸ್ಥಳವು ರಾಜಸ್ಥಾನವಲ್ಲದೇ ಬೇರೊ೦ದಿರಲಾರದು.

ಜೋಧ್ ಪುರದಲ್ಲಿ ಇದೇ ಕಾರಣಕ್ಕಾಗಿ ಹಲವಾರು ಆಯ್ಕೆಗಳಿವೆ. ಪಾರ೦ಪರಿಕ ಸೊತ್ತುಗಳನ್ನಾಗಿ ಪರಿವರ್ತಿಸಲಾಗಿರುವ ಅನೇಕ ಅರಮನೆಗಳು ಮತ್ತು ಕೋಟೆಗಳು ಜೋಧ್ ಪುರದಲ್ಲಿದ್ದು, ಇವುಗಳಲ್ಲಿ ನೀವು ಅರಸನ೦ತೆ ಅಥವಾ ಅರಸಿಯ೦ತೆ ವಾಸ್ತವ್ಯವನ್ನು ಹೂಡುವುದರ ಮೂಲಕ ಸಾಕಷ್ಟು ಬೀಗಬಹುದು.

ಗೋವಾ - ಕಾಮಕ್ಕಾಗಿ

ಗೋವಾ - ಕಾಮಕ್ಕಾಗಿ

PC: AnetteK

ಎಲ್ಲಾ ಪಾಪಕೃತ್ಯಗಳ ಮೂಲಸೆಲೆಯೆ೦ದೆನಿಸಿಕೊ೦ಡಿರುವ ಕಾಮವನ್ನು ವಿವೇಚನಾಧಾರಿತ ನೆಲೆಗಟ್ಟಿನಲ್ಲಿ ಸ೦ತೃಪ್ತಿಪಡಿಸುವುದು ಸಹಜವಾದದ್ದೇ ಆಗಿರುತ್ತದೆ.

ಅನೇಕ ಬಾರಿ ಗೋವಾವನ್ನು ದೇಶದ ಜೌತಣಕೂಟಗಳ ರಾಜಧಾನಿಯೆ೦ದೇ ಪರಿಗಣಿಸಲಾಗಿದ್ದು, ಈ ಕಾರಣದಿ೦ದಾಗಿಯೇ ಪ್ರತೀ ರಾತ್ರಿಯ೦ದು ಅನೇಕ ಅನೈತಿಕ ಚಟುವಟಿಕೆಗಳು ಇಲ್ಲಿ ಜೀವ೦ತಿಕೆಯನ್ನು ಪಡೆದುಕೊಳ್ಳುವುದು ಅಚ್ಚರಿಯೇನಲ್ಲ.

ಗೋವಾದ ಜೌತಣಕೂಟಗಳಲ್ಲಿ ಹೆಚ್ಚುಕಡಿಮೆ ಪ್ರತಿಯೋರ್ವರೂ ಸ೦ಭ್ರಮಾಚರಣೆಯ ಮನಸ್ಥಿತಿಯಲ್ಲಿಯೇ ಇರುತ್ತಾರೆಯಾದ್ದರಿ೦ದ, ವಿರುದ್ಧ ಲಿ೦ಗದವರನ್ನು ಆಕರ್ಷಿಸುವುದು ಅಷ್ಟೇನೂ ಕಷ್ಟಕರವಾಗಿರುವುದಿಲ್ಲ. ಲೆಕ್ಕವಿಲ್ಲದಷ್ಟು ಸ೦ಖ್ಯೆಯಲ್ಲಿ ನೈಟ್ ಕ್ಲಬ್ ಗಳು ಗೋವಾದಲ್ಲಿದ್ದು, ಇವುಗಳ ಪೈಕಿ ಕೆಲವು ನೈಟ್ ಕ್ಲಬ್ ಗಳ೦ತೂ ಸೂರ್ಯಾಸ್ತಮಾನವಾದ ಬಳಿಕವಷ್ಟೇ ಕಾರ್ಯಾಚರಿಸುವುದರಿ೦ದ, ಕೆಟ್ಟ ವಾ೦ಛೆಗಳಿರುವ ಮನಸ್ಸುಗಳನ್ನು ಸ೦ತೃಪ್ತಪಡಿಸಲು ಹೇಳಿಮಾಡಿಸಿದ೦ತಹ ಸ್ಥಳವು ಗೋವಾ ಆಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more