» »ಈ ದೇವಾಲಯದ ದೇವತೆ ನಿಮ್ಮ ಪ್ರೆಶ್ನೆಗಳಿಗೆ ಉತ್ತರ ನೀಡುತ್ತಾಳೆ

ಈ ದೇವಾಲಯದ ದೇವತೆ ನಿಮ್ಮ ಪ್ರೆಶ್ನೆಗಳಿಗೆ ಉತ್ತರ ನೀಡುತ್ತಾಳೆ

Written By:

ದೇವರು ಎಂಬ ಶಕ್ತಿ ಭೂಮಿ ಮೇಲೆ ಇದೆಯೇ ಇಲ್ಲವೇ ಎಂಬುದು ಅವರವರ ನಂಬಿಕೆಗೆ ಬಿಟ್ಟಿದ್ದು. ಆದರೆ ಸಾಮಾನ್ಯವಾಗಿ ಮನುಷ್ಯರಿಗೆ ಕಷ್ಟ ಒದಗಿದರೆ ದೇವರ ಮೊರೆ ಹೋಗುವುದುಂಟು. ಆ ದೈವದಿಂದ ಹಲವಾರು ಸಮಸ್ಯೆಗಳಿಂದ ಪರಿಹಾರಕ್ಕಾಗಿ ಪ್ರತಿಯೊಬ್ಬ ಭಕ್ತರು ಹಾತೊರೆಯುತ್ತಾರೆ.

ಆದರೆ ನಾನು ಹೇಳಲು ಹೊರಟಿರುವ ದೈವವು ನಿಮ್ಮ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಾಳೆ. ಇದೇನಪ್ಪ ದೇವರು ಉತ್ತರ ನೀಡುವುದಾ ಎಂದು ಉದ್ಗಾರ ತೆಗೆಯುತ್ತಿದ್ದಿರಾ? ಇದು ನಿಜ. ಕರ್ನಾಟಕ ರಾಜ್ಯದಲ್ಲಿನ ತಿಪಟೂರಿನಲ್ಲಿ ನೆಲೆಸಿರುವ ಮಹಿಮಾನ್ವಿತ ಪರಾಶಕ್ತಿಯೆಂದರೆ ಅದು ದಸರಿಘಟ್ಟದ ಚೌಡೇಶ್ವರಿ ದೇವಿ. ಆಶ್ಚರ್ಯವೆನೆಂದರೆ ಈ ದೇವಿಯು ಭಕ್ತರ ಹಲವು ಪ್ರೆಶ್ನೆಗಳಿಗೆ ಉತ್ತರವನ್ನು ನೀಡುವ ಪರಾಶಕ್ತಿ.


ಪ್ರಸ್ತುತ ಲೇಖನದಲ್ಲಿ ನಿಮ್ಮ ಪ್ರೆಶ್ನೆಗೆ ಉತ್ತರ ನೀಡುವ ದೇವಿಯ ದೇವಾಲಯದ ಬಗ್ಗೆ ತಿಳಿಯೋಣ.

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ದಸರಿಘಟ್ಟ ಚೌಡೇಶ್ವರಿ ದೇವಿಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತಿಪಟೂರಿನ ದಸರಿಘಟ್ಟದಲ್ಲಿ ನೆಲೆಸಿದ್ದಾಳೆ. ಬೆಂಗಳೂರಿನಿಂದ ತುಮಕೂರಿಗೆ ಸುಮಾರು 72 ಕಿ,ಮೀ ದೂರ ಹಾಗೂ ತುಮಕೂರಿನಿಂದ ತಿಪಟೂರಿಗೆ 74 ಕಿ,ಮೀ ದೂರದಲ್ಲಿ ದಸರಿಘಟ್ಟವಿದೆ. ಇಲ್ಲಿ ನೊಂದವರಿಗೆ ಪರಿಹಾರ ನೀಡುವ ಪ್ರಖ್ಯಾತ ದೇವತೆ ಚೌಡೇಶ್ವರಿಯ ದೇವಾಲಯವಿದೆ.


PC:wikipedia

ಪ್ರಖ್ಯಾತತೆ

ಪ್ರಖ್ಯಾತತೆ

ಮಹಿಮಾನ್ವಿತ ಚೌಡೇಶ್ವರಿಯ ದೇವಾಲಯವು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದು, ಕೇವಲ ಕರ್ನಾಟಕದಿಂದಲೇ ಅಲ್ಲದೇ ದೇಶ ವಿದೇಶಗಳಿಂದಲೂ ಸಹ ಭಕ್ತರು ಈ ದೇವಿಯ ದರ್ಶನ ಹಾಗೂ ತಮ್ಮ ಸಮಸ್ಯೆಗಳಿಗೆ ಉತ್ತರ ಪಡೆಯಲು ಬರುತ್ತಾರೆ.


PC:wikipedia

ಚೌಡೇಶ್ವರಿ ದೇವಿ

ಚೌಡೇಶ್ವರಿ ದೇವಿ

ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲು ಪ್ರತ್ಯೇಕವಾದ ಟಿಕೆಟ್ ತೆಗೆದುಕೊಂಡು ದೇವಾಲಯದ ಪ್ರಾಂಗಣದಲ್ಲಿ ಕೂಳಿತುಕೊಳ್ಳುತ್ತಾರೆ. ಚೌಡೇಶ್ವರಿ ದೇವಿಯ ಪಂಚ ಲೋಹ ವಿಗ್ರಹವನ್ನು ಅಕ್ಕಿ ಹಿಟ್ಟಿನ ಮೇಲೆ ಇಡುತ್ತಾರೆ. ದೇವಿಯ ವಿಗ್ರಹದ ಮೇಲೆ ಒಂದು ಕಳಶವನ್ನು ಇಡುತ್ತಾರೆ.


PC:wikipedia

ತಾಯಿಯ ಉತ್ತರ

ತಾಯಿಯ ಉತ್ತರ

ಹೀಗೆ ಪೂಜಾರಿಗಳು ಸಿದ್ಧತೆ ಮಾಡಿ ಕಳಶವನ್ನು ತಿರುಗಿಸುತ್ತಿರುತ್ತಾರೆ. ಆಗ ಅಕ್ಷರ ರೂಪದಲ್ಲಿ ಬಂದ ಉತ್ತರವನ್ನು ಪೂಜಾರಿಗಳು ತಿಳಿಸುತ್ತಾರೆ ಹೀಗೆ ಸಾವಿರಾರು ಮಂದಿ ಭಕ್ತರು ಉತ್ತರವನ್ನು ಕಂಡುಕೊಂಡಿದ್ದಾರೆ. ಅವರಿಗೆ ಸರಿಯಾದ ಉತ್ತರ ಕೂಡ ದೊರೆತ್ತಿದೆಯಂತೆ. ಈ ತಾಯಿ ನುಡಿಯುವ ಭವಿಷ್ಯ ಎಂದಿಗೂ ಸುಳ್ಳಾಗದು ಎಂಬುದು ಅವರ ನಂಬಿಕೆಯಾಗಿದೆ.

PC:wikipedia

ನರೇಂದ್ರ ಮೋದಿ

ನರೇಂದ್ರ ಮೋದಿ

ನರೇಂದ್ರ ಮೋದಿ ಪ್ರಸ್ತುತ ಪ್ರಧಾನ ಮಂತ್ರಿ ಕೆಲವು ವರ್ಷಗಳ ಹಿಂದೆ ಬಿ,ಜೆ,ಪಿಯ ಕೆಲವು ರಾಜಕಾರಣೀಗಳು ಈ ದೇವಾಲಯಕ್ಕೆ ಬಂದು ಪ್ರೆಶ್ನೆಗಳನ್ನು ಕೇಳಿದಾಗ ಅದಕ್ಕೆ ಸರಿಯಾದ ಉತ್ತರವನ್ನು ನೀಡಿದ್ದಳಂತೆ. ಅಂದರೆ ಮುಂದಿನ ಪ್ರಧಾನಿ ನರೇಂದ್ರ ಮೋದಿ ಎಂದು. ಇದು ಕೆಲವರಿಗೆ ಅನುಮಾನವಾದರೂ ಸಹ ಇದು ನಿಜವಾದ ಘಟನೆಯಾಗಿದೆ.


PC:Global Panorama

ಯಾವುದೇ ಭಾಷೆ

ಯಾವುದೇ ಭಾಷೆ

ಬಂದ ಭಕ್ತರು ತಮ್ಮ ಪ್ರೆಶ್ನೆಯನ್ನು ಕನ್ನಡ, ಇಂಗ್ಲಿಷ್, ಹಿಂದಿ, ಕೊಂಕಣಿ, ತೆಲುಗು ಭಾಷೆಯಲ್ಲಿ ಕೇಳಿದರೂ ಸಹ ಚೌಡೇಶ್ವರಿ ತಾಯಿಯು ಕನ್ನಡದಲ್ಲಿಯೇ ಉತ್ತರ ನೀಡುತ್ತಾಳೆ.


PC:wikipedia

ದೇವಿಯ ಇತಿಹಾಸ

ದೇವಿಯ ಇತಿಹಾಸ

ನೂರಾರು ವರ್ಷಗಳ ಹಿಂದೆ ಕರ್ನಾಟಕದ ರಾಯಚೂರು ಜಿಲ್ಲೆಯ ಬಳಿ ತುಂಗಾ ನದಿ ತೀರದಲ್ಲಿ ನಂದವರ ಎಂಬ ಸಾಮ್ರಾಜ್ಯವಿತ್ತು. ಈ ಪ್ರದೇಶವನ್ನು ಆಳುತ್ತಿದ್ದ ಅರಸನು ಶಕ್ತಿ ದೇವತೆಗಳ ಆರಾಧಿಸುತ್ತಿದ್ದ.


PC:wikipedia

ಅರಸ

ಅರಸ

ಅರಸನು ಶಕ್ತಿ ದೇವತೆಗಳನ್ನು ಆರಾಧಿಸುತ್ತಿದ್ದರಿಂದ ಆನೇಕ ಮಂತ್ರ ವಿದ್ಯೆಗಳಲ್ಲೂ ಪರಿಣಿತಿ ಪಡೆದಿದ್ದ. ತನ್ನ ಅಪೂರ್ವವಾದ ಶಕ್ತಿಯಿಂದಾಗಿ ಪ್ರತಿ ನಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು ದೂರದ ಕಾಶಿಯಲ್ಲಿ ಗಂಗೆ ಸ್ನಾನ ಮಾಡಿ ಸಾಯಾಂಕಾಲದ ಸಮಯದಲ್ಲಿ ಮತ್ತೆ ತನ್ನ ಸಾಮ್ರಾಜ್ಯಕ್ಕೆ ಹಿಂತಿರುಗುತ್ತಿದ್ದನಂತೆ.


PC:wikipedia

ಮಹಾ ರಾಣಿ

ಮಹಾ ರಾಣಿ

ಪ್ರತಿನಿತ್ಯ ರಾಜನು ಕಾಣಿಸದಿರುವುದನ್ನು ಕಂಡ ರಾಣಿಯು ಒಮ್ಮೆ ರಾಜನಲ್ಲಿ ಈ ಕುರಿತು ಪ್ರೆಶ್ನಿಸಿದಳು. ಆಗ ಮನಸ್ಸಿಲ್ಲದ ಮನಸ್ಸಿನಿಂದ ರಾಣಿಯು ಒತ್ತಯ ಮಾಡಿದ್ದರಿಂದ ರಾಣಿಗೆ ತನ್ನ ದಿನನಿತ್ಯದ ಕಾರ್ಯಗಳೆಲ್ಲವು ಹೇಳಬೇಕಾಯಿತು.

PC:wikipedia

ಬಯಕೆ

ಬಯಕೆ

ವಿಷಯವನ್ನು ಅರಿತ ರಾಣಿಯು ತನ್ನ ಪತಿಯ ಒಂದೇ ದಿನದಲ್ಲಿ ಕಾಶಿಯಾತ್ರೆಯ ಭಾಗ್ಯವನ್ನು ಪಡೆಯುವ ಬಗೆಯನ್ನು ಕಣ್ಣಾರೆ ಕಾಣಬೇಕು ಎಂದು ರಾಜನಿಗೆ ಬೇಡಿಕೊಂಡಳು.


PC:wikipedia

ಕಾಶಿಯಾತ್ರೆ

ಕಾಶಿಯಾತ್ರೆ

ರಾಣಿಯ ಬೇಡಿಕೆಯನ್ನು ಒಪ್ಪಿದ ರಾಜ ಸರಿ ಎಂದು ಮರುದಿನ ಆಕೆಯನ್ನು ಕರೆದೊಯ್ದನು. ಹೀಗೆ ಇಬ್ಬರು ಕಾಶಿಯಾತ್ರೆಯಲ್ಲಿರುವಾಗ ರಾಣಿಯು ಮಾಸಿಕ ಋತುಚಕ್ರಕ್ಕೆ ಸಿಲುಕಿಕೊಂಡಳು.

PC:wikipedia

ಮಾಸಿಕ ಋತುಚಕ್ರ

ಮಾಸಿಕ ಋತುಚಕ್ರ

ರಾಣಿಯ ಮಾಸಿಕ ಋತುಚಕ್ರದಿಂದ ರಾಜನ ಮಂತ್ರವಿದ್ಯೆಯ ಶಕ್ತಿಯು ಕುಂದಿ ಹೋಯಿತು. ತನ್ನ ಮಂತ್ರ ಶಕ್ತಿಯನ್ನು ಕಳೆದುಕೊಂಡು ಎಂದಿನಂತೆ ತನ್ನ ಸಾಮ್ರಾಜ್ಯಕ್ಕೆ ಹಿಂದಿರುಗನಾದನು ಹಾಗಾಗಿ ಚಿಂತೆಗಿಡಾದನು.


PC:wikipedia

ಬ್ರಾಹ್ಮಣರು

ಬ್ರಾಹ್ಮಣರು

ಗಂಗೆಯ ದಡದಲ್ಲಿ ಅಲೆಯುತ್ತಿರುವಾಗ ಬ್ರಾಹ್ಮಣರು ಚಂಡಿಯಾಗವನ್ನು ಮಾಡುತ್ತಿರುವುದನ್ನು ರಾಜನು ಕಂಡನು. ಅವರ ಹತ್ತಿರ ಹೋಗಿ ತನ್ನ ಸಮಸ್ಯೆಯ ಬಗ್ಗೆ ತಿಳಿಸಿದನು. ಬ್ರಾಹ್ಮಣರು ಸಂಪಾದಿಸಿದ್ದ ಪುಣ್ಯವನ್ನು ಕೆಲ ಭಾಗವನ್ನು ಉಪಯೋಗಿಸಿ ರಾಣಿಯನ್ನು ಪವಿತ್ರಳನ್ನಾಗಿಸಿದರು. ಹಾಗೇಯೆ ಒಂದು ಅಪೇಕ್ಷೆಯನ್ನು ರಾಜನ ಮುಂದೆ ಇಟ್ಟರು.

PC:wikipedia

ನಿಂದಿಸಿದನು

ನಿಂದಿಸಿದನು

ಆಗ ರಾಜನು ಜಹಾಗೀರುಗಳನ್ನು ದಾನವಾಗಿ ನೀಡುತ್ತೆನೆ ಎಂದು ಮಾತು ಕೊಟ್ಟು ಹೊರಟನು ಇನ್ನು ಎಂದಿಗೂ ತನ್ನ ಮಂತ್ರವನ್ನು ಪರೀಕ್ಷೀಸಲಿಲ್ಲ. ಒಮ್ಮೆ ಕ್ಷಾಮ ಎದುರಾಯಿತು. ಆ ಸಮಯದಲ್ಲಿ ಬ್ರಾಹ್ಮಣರು ತಮ್ಮ ದಾನವನ್ನು ಕೇಳಿದನು. ಸಂಪೂರ್ಣವಾಗಿ ಮರೆತಿತ್ತ ರಾಜ ದಾನವನ್ನು ನೀಡದೇ ನಿಂದಿಸಿದನು.


PC:wikipedia

 ಚೌಡೇಶ್ವರಿ ದೇವಿ

ಚೌಡೇಶ್ವರಿ ದೇವಿ

ಬ್ರಾಹ್ಮಣರ ಗುಂಪು ರಾಜನು ಮಾತು ಕೊಟ್ಟಿದ್ದಕ್ಕೆ ಆ ಚೌಡೇಶ್ವರಿ ದೇವಿಯೆ ಸಾಕ್ಷಿ ಎಂದು ಆ ತಾಯಿಯನ್ನು ನಂದವರಕ್ಕೆ ಬರಲು ಪ್ರಾರ್ಥಿಸಿದರು. ಅಲ್ಲಿಗೆ ಬಂದ ತಾಯಿಯನ್ನು ಕಂಡು ರಾಜನು ತನ್ನ ತಪ್ಪುಗಳು ಅರಿವಾಗಿ ಕ್ಷಮೆಯಾಚಿಸಿದನು. ಅಂದಿನಿಂದ ಈ ತಾಯಿಯು ಇಲ್ಲಿಯೇ ನೆಲೆನಿಂತಿದ್ದಾಳೆ ಎಂದು ಪುರಾಣಗಳು ತಿಳಿಸುತ್ತದೆ.


PC:wikipedia

Please Wait while comments are loading...