
ತಮಿಳುನಾಡು ದೇವಾಲಯಗಳ ನಿಲಯ ಎಂಬ ವಿಷಯ ನಮಗೆಲ್ಲಾ ತಿಳಿದಿರುವುದೇ. ಈ ರಾಜ್ಯದಲ್ಲಿ ಇರುವಷ್ಟು ದೇವಾಲಯಗಳು ನಮಗೆ ಬೇರೆ ಎಲ್ಲೂ ಕೂಡ ಕಾಣಿಸದು ಎಂದರೆ ಅತಿಶಯೋಕ್ತಿಯಲ್ಲ. ಒಂದೊಂದು ದೇವಾಲಯಕ್ಕೆ ಒಂದೊಂದು ಚರಿತ್ರೆ ಇರುತ್ತದೆ. ಅವೆಲ್ಲಾ ಲಿಖಿತ ಪೂರ್ವಕವಾಗಿ ಶಾಸನಗಳ ರೂಪದಲ್ಲಿ ಅಥವಾ ತಾಳೆಪತ್ರ ಗ್ರಂಥಗಳ ರೂಪದಲ್ಲಿರುತ್ತದೆ.
ಈ ದೇವಾಲಯಗಳು ಪುರಾಣ ಕಥನಗಳಿಗೆ ಪ್ರತೀಕ. ಇನ್ನು ಕೆಲವು ದೇವಾಲಯಗಳು ಆ ಕಾಲದಲ್ಲಿ ಆ ಪ್ರದೇಶಗಳನ್ನು ಆಳ್ವಿಕೆ ಮಾಡುತ್ತಿದ್ದ ರಾಜರ ಜೀವನ ವಿಧಾನಗಳನ್ನು ನಮಗೆ ಕಣ್ಣ ಮುಂದೆ ನಿಲ್ಲಿಸುತ್ತದೆ. ಇವು ಚಾರಿತ್ರಿಕ ಸಾಕ್ಷ್ಯಿಗಳು. ಇನ್ನು ಕೆಲವು ದೇವಾಲಯಗಳು ಪುರಾಣ ಪ್ರಾಧನ್ಯತೆಯನ್ನು ಹೊಂದಿರುವುದೇ ಅಲ್ಲದೇ, ಚರಿತ್ರೆಗಳನ್ನು ಕೂಡ ಒಳಗೊಂಡಿರುತ್ತದೆ.
ಅಂಥಹ ದೇವಾಲಯದ ಬಗ್ಗೆ ನಾವು ತಿಳಿದುಕೊಳ್ಳೊಣ. ಹಾಗೆಯೇ ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೇವಾಲಯದ ರಹಸ್ಯವನ್ನು ಲೇಖನದ ಮೂಲಕ ಮಾಹಿತಿ ಪಡೆಯಿರಿ.

1.ಮಧುರೈಗೆ ಸಮೀಪ
PC:YOUTUBE
ಮಧುರೈಗೆ ಭೇಟಿ ನೀಡುವ ಅನೇಕ ಮಂದಿ ಮೀನಾಕ್ಷಿ ದೇವಾಲಯವನ್ನು ಮಾತ್ರ ಸಂದರ್ಶಿಸಿ ಹಿಂದಿರುಗುತ್ತಾರೆ. ಆದರೆ ಕೆಲವು ಮಂದಿ ಮಾತ್ರವೇ ಈ ದೇವಾಲಯಕ್ಕೆ ಸಮೀಪದಲ್ಲಿಯೇ ಪ್ರಕೃತಿಯ ಮಡಿಲಲ್ಲಿರುವ ಅಳಗರ್ ಕೋವಿಲ್‍ಗೆ ತಪ್ಪದೇ ಭೇಟಿ ನೀಡುತ್ತಾರೆ.

2.ಅಲ್ಲಿನ ರಹಸ್ಯ
PC:YOUTUBE
ಈ ದೇವಾಲಯದ ವಿಶಿಷ್ಟತೆಯನ್ನು ವಿಜ್ಞಾನಿಗಳು ಕೂಡ ಬಗೆಹರಿಸಲಾಗದ ರಹಸ್ಯಗಳು ಅಡಗಿವೆ. ಈ ದೇವಾಲಯವು 108 ವೈಷ್ಣವ ದಿವ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಈ ಅಳಗರ್ ದೇವಾಲಯಕ್ಕೆ ಸುಮಾರು 2000 ವರ್ಷಗಳ ಚರಿತ್ರೆ ಇದೆ.

3.ದಟ್ಟವಾದ ಅರಣ್ಯದಲ್ಲಿ
PC:YOUTUBE
ಮಧುರೈಗೆ ಸುಮಾರು 21 ಕಿ.ಮೀ ದೂರದಲ್ಲಿ ದಟ್ಟವಾದ ವೃಕ್ಷಗಳ ಮಧ್ಯೆ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ದೇವಾಲಯವೇ ಈ ಅಳಗರ್ ದೇವಾಲಯ. ಇದರಲ್ಲಿ ಪ್ರಧಾನ ದೈವವನ್ನು ತಿರುಮಾಳ್ ಎಂದು ಕೂಡ ಕರೆಯುತ್ತಾರೆ.

4.ಸುಂದರನಾಗಿದ್ದಾನೆ
PC:YOUTUBE
ಇಲ್ಲಿನ ಸ್ವಾಮಿಯು ಅತ್ಯಂತ ಸುಂದರವಾಗಿರುವ ಕಾರಣ ಅಳಗರ್ ಎಂದು ಕರೆಯುತ್ತಾರೆ. ತಮಿಳು ಭಾಷೆಯಲ್ಲಿ ಅಳಗರ್ ಎಂದರೆ ಸುಂದರವಾದವನು ಎಂಬ ಅರ್ಥ. ಅದ್ದರಿಂದಲೇ ಈ ದೇವಾಲಯಕ್ಕೆ ಅಳಗರ್ ದೇವಾಲಯ ಎಂಬ ಹೆಸರಿನಿಂದ ಕರೆಯುತ್ತಾರೆ.

5.ತಮಿಳು ಸಾಹಿತ್ಯ
PC:YOUTUBE
ತಮಿಳು ಸಾಹಿತ್ಯದಲ್ಲಿ ಈ ದೇವಾಲಯದ ಬಗ್ಗೆ ಪ್ರಸ್ತಾವನೆಗಳಿವೆ. ಇದೊಂದು ಅತ್ಯಂತ ವಿಶೇಷತೆಗಳನ್ನು ಹೊಂದಿರುವ ದೇವಾಲಯ. ಮುಖ್ಯವಾಗಿ ತಮಿಳು ಪ್ರಾಚೀನ ಗ್ರಂಥ ಶಿಲ್ಪದಿಕಾರದಲ್ಲಿ ಈ ದೇವಾಲಯದ ಬಗ್ಗೆ ಹಾಗು ಇಲ್ಲಿನ ದೈವದ ಬಗ್ಗೆ ವರ್ಣಿಸಿದ್ದಾರೆ. ಇಲ್ಲಿರುವ ಪ್ರಕೃತಿ ಸಂಪತ್ತಿನಿಂದಾಗಿ ಈ ದೇವಾಲಯವನ್ನು "ದಕ್ಷಿಣ ತಿರುಪತಿ" ಎಂದು ಕೂಡ ಕರೆಯುತ್ತಾರೆ.

6.ಮೀನಾಕ್ಷಿ ಅಮ್ಮ
PC:YOUTUBE
ಈ ದೇವಾಲಯದಲ್ಲಿನ ಅಳಗರ್ ಮಧುರೈಯಲ್ಲಿನ ಮೀನಾಕ್ಷಿ ದೇವಿಗೆ ಸಹೋದರ ಎಂದು ಭಾವಿಸುತ್ತಾರೆ. ಅದ್ದರಿಂದಲೇ ಮಧುರೈ ಮೀನಾಕ್ಷಿ ಕಲ್ಯಾಣೋತ್ಸವದ ಸಮಯದಲ್ಲಿ ಈ ದೇವಾಲಯದಿಂದ ಉತ್ಸವ ವಿಗ್ರಹ ಅಲ್ಲಿಗೆ ತಪ್ಪದೇ ಹೋಗುತ್ತದೆ. ಆ ಆಚಾರವು ಕೆಲವು ಸಾವಿರ ವರ್ಷಗಳಿಂದಲೂ ಅನುಸರಿಸುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ತಿಳಿಸುತ್ತಾರೆ.

7.ಮನಸ್ಸಿನಲ್ಲಿರುವ ಕೋರಿಕೆಗಳು
PC:YOUTUBE
ಈ ಅಳಗರ್ ಸ್ವಾಮಿಯನ್ನು ದರ್ಶನ ಮಾಡಿದರೆ ಮನಸ್ಸಿನಲ್ಲಿರುವ ಕೋರಿಕೆಗಳು ತಪ್ಪದೇ ಆಗುತ್ತದೆ ಎಂಬುದು ಭಕ್ತರು ವಿಶ್ವಾಸ. ಅದ್ದರಿಂದಲೇ ಮಹಾಭಾರತ ಕಾಲದಲ್ಲಿ ಧರ್ಮರಾಜ, ಅರ್ಜುನ ಜೊತೆಗೆ ಇನ್ನು ಅನೇಕ ಮಂದಿ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬರುತ್ತದೆ. ಇನ್ನು ಭಾರತ ದೇಶವನ್ನು ಮುಖ್ಯವಾಗಿ ದಕ್ಷಿಣಾದಿ ರಾಜ್ಯವನ್ನು ಆಳ್ವಿಕೆ ಮಾಡುತ್ತಿದ್ದ ರಾಜರು ಎಷ್ಟೊ ಮಂದಿ ಈ ದೇವಾಲಯವನ್ನು ಅಭಿವೃದ್ಧಿ ಪಡಿಸಿದ್ದಾರೆ.

8.ರಾಜಕೀಯ ನಾಯಕರು
PC:YOUTUBE
ಮುಖ್ಯವಾಗಿ ಶ್ರೀಕೃಷ್ಣ ದೇವರಾಯರಿಂದ ವಿಶ್ವನಾಥ ನಾಯಕರವರೆವಿಗೂ ಅನೇಕ ಮಂದಿ ಈ ದೇವಾಲಯವನ್ನು ಸಂದರ್ಶಿಸಿದ್ದಾರೆ. ಇನ್ನು ಇಂದಿಗೂ ಅನೇಕ ರಾಜಕೀಯ ನಾಯಕರು ಈ ದೇವಾಲಯವನ್ನು ಸಂದರ್ಶಸಿ ತಮ್ಮ ಕೋರಿಕೆಗಳನ್ನು ತೀರಿಸಿಕೊಂಡಿದ್ದಾರಂತೆ.

9.108 ಅಡಿಯ ಗೋಪುರ
PC:YOUTUBE
ಸುಮಾರು 108 ಅಡಿ ಎತ್ತರದಲ್ಲಿರುವ ದೇವಾಲಯದ ಗೋಪುರವು ಅತ್ಯಂತ ಸುಮದರವಾಗಿದೆ. ಪಾಂಡ್ಯನ್ ಎಂಬ ತಮಿಳುರಾಜನು 13 ನೇ ಶತಮಾನದಲ್ಲಿಯೇ ಲಕ್ಷಾಧಿ ರೂಪಾಯಿಗಳು ಖರ್ಚು ಮಾಡಿ ದೇವಾಲಯವನ್ನು ನಿರ್ಮಾಣ ಮಾಡಿಸಿದರು. ಬಂಗಾರದ ಲೇಪನ ಮಾಡಿಸಿರುವುದರಿಂದ ಸೂರ್ಯಗಳ ಕಿರಣವು ಬಿದ್ದು ಒಂದು ವಿಭಿನ್ನವಾದ ವರ್ಣವನ್ನು ಏರ್ಪಡುತ್ತದೆ.

10.ಭಕ್ತರು
PC:YOUTUBE
ಇದನ್ನು ನೋಡುವುದಕ್ಕೆ ಭಕ್ತರು ಇಷ್ಟಪಡುತ್ತಾರೆ. ಸೂರ್ಯೋದಯ, ಸೂರ್ಯಾಸ್ತ ಸಮಯದಲ್ಲಿ ಈ ಅದ್ಭುತವು ಕಾಣಿಸುತ್ತದೆ. ಅದೇ ವಿಧವಾಗಿ ಅಳಗರ್ ದೇವಾಲಯದಲ್ಲಿನ ಉತ್ಸವ ವಿಗ್ರಹವು ಸ್ವಚ್ಛವಾದ ಬಂಗಾರದಿಂದ ಮಾಡಲಾಗಿದೆ.

11.18 ಮಂದಿ ಕಳ್ಳರು
PC:YOUTUBE
ಈ ವಿಗ್ರಹವನ್ನು ಕಳ್ಳತನ ಮಾಡುವ ಸಲುವಾಗಿ 18 ಕಳ್ಳರು ಒಂದೇ ಬಾರಿ ಈ ದೇವಾಲಯದ ಮೇಲೆ ದಾಳಿ ಮಾಡಿದರು. ಆ ಸಮಯದಲ್ಲಿನ ಪೂಜಾರಿಗಳು ತಮ್ಮ ಪ್ರಾಣವನ್ನು ಪಣವಾಗಿ ಇಟ್ಟು ಈ ವಿಗ್ರಹವನ್ನು ಕಾಪಾಡುತ್ತಾರೆ. ಆ ಸಮಯದಲ್ಲಿ ಇಲ್ಲಿನ ದೈವ ಕರುಪ್ಪುಸ್ವಾಮಿ ಎಂಬ ಕಾವಲುಗಾರನ ರೂಪದಲ್ಲಿ ಕಾಣಿಸಿ ಈ ಕ್ಷೇತ್ರವನ್ನು ಇನ್ನು ಮುಂದೆ ತಾನೇ ರಕ್ಷಿಸುತ್ತೇನೆ ಎಂದು ಮಾತನ್ನು ನೀಡಿದನು ಎಂಬ ಕಥೆ ಇದೆ.

12.ಕರುಪ್ಪುಸ್ವಾಮಿ
PC:YOUTUBE
ಈ ಘಟನೆ ನಡೆದ್ದಾಗಿನಿಂದ ಈ ದೇವಾಲಯದ ಮೇಲೆ ಯಾವುದೇ ರೀತಿಯಲ್ಲಿಯೂ ದಾಳಿ ನಡೆದಿಲ್ಲ. ಈ ಕರುಪ್ಪುಸ್ವಾಮಿಗೆ ಕೂಡ ಪ್ರಧಾನ ದೇವಾಲಯದ ಒಳಗೆ ಒಂದು ಚಿಕ್ಕದಾದ ಉಪ ದೇವಾಲಯವಿದೆ. ಆದರೆ ಈ ಸ್ವಾಮಿ ಉಗ್ರರೂಪವನ್ನು ಕಂಡು ಸಾಧಾರಣ ಪ್ರಜೆಗಳು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.

13.ವರ್ಷಕ್ಕೆ ಒಮ್ಮೆ
PC:YOUTUBE
ಅದ್ದರಿಂದಲೇ ಪ್ರತ್ಯೇಕವಾದ ಪೂಜೆಗಳು ನಿರ್ವಹಿಸಿ ವರ್ಷಕ್ಕೆ ಒಮ್ಮೆ ಮಾತ್ರವೇ ಈ ದೇವಾಲಯದ ದ್ವಾರವನ್ನು ತೆರೆಯುತ್ತಾರೆ. ಆ ಸಮಯದಲ್ಲಿರುವ ಪಶುಪಕ್ಷಿಗಳು, ಕೀಟಗಳ ಜೊತೆಗೆ ಅರಣ್ಯ ಪ್ರದೇಶದಲ್ಲಿ ಇರುವೆಗಳು ಕೂಡ ನಿವಾಸಿಸುವುದಿಲ್ಲ. ಬದಲಾಗಿ ನಿಶ್ಯಬ್ಧವಾದ ವಾತಾವರಣ ಏರ್ಪಟುತ್ತದೆ. ಅಷ್ಟೇ ಅಲ್ಲದೇ, ಅಲ್ಲಿನ ವಾತಾವರಣ ಕೂಡ ಸ್ವಲ್ಪ ಬಿಸಿಯಾಗಿರುತ್ತದೆ.

14.ಕಾರಣ ತಿಳಿಯದು
PC:YOUTUBE
ಇದಕ್ಕೆ ಮುಖ್ಯವಾದ ಕಾರಣಗಳು ಏನು ಎಂದು ಮಾತ್ರ ಇಂದಿಗೂ ವಿಜ್ಞಾನಿಗಳಿಗೂ ಕೂಡ ತಿಳಿದುಕೊಳ್ಳಲಾಗಿಲ್ಲ. ಈ 2 ದೇವಾಲಯದ ಜೊತೆಗೆ ಇಲ್ಲಿರುವ ಸ್ವಾಮಿಯ ಸತಿಮಣಿ ಸುಂದರವಲ್ಲಿ ತಾಯಾರ್ ದೇವಾಲಯ ಕೂಡ ಕಾಣಬಹುದು. ವಿವಾಹವಾಗದೇ ಇರುವವರು ಈ ದೇವಾಲಯಕ್ಕೆ ಸಂದರ್ಶಿಸಿದರೆ ಶೀಘ್ರವೇ ಕಲ್ಯಾಣ ಯೋಗವು ಉಂಟಾಗುತ್ತದೆ ಎಂಬುದು ಭಕ್ತರು ನಂಬುತ್ತಾರೆ.

15.ವಾಮನ ಅವತಾರ
PC:YOUTUBE
ಈ ದೇವಾಲಯದ ಸಮೀಪದಲ್ಲಿ ಗಂಗತ ತೀರ್ಥವಿದೆ. ವಿಷ್ಣುಮೂರ್ತಿ ವಾಮನ ಅವತಾರ ಎತ್ತಿದಾಗ ಬ್ರಹ್ಮದೇವನು ಸ್ವಯಂವಾಗಿ ಸ್ವಾಮಿಗೆ ಪಾದಪೂಜೆ ಮಾಡಿದ್ದಾನೆ ಎಂದು ಪುರಾಣಗಳು ಹೇಳುತ್ತವೆ. ಹಾಗೆ ವಾಮನ ಪಾದವನ್ನು ಸ್ಪರ್ಶಿಸಿದ ಜಲ ಇಲ್ಲಿ ತೀರ್ಥವಾಗಿ ಏರ್ಪಟ್ಟಿದೆ ಎಂದು ಹೇಳುತ್ತಾರೆ. ಈ ತೀರ್ಥದಲ್ಲಿನ ನೀರು ಕುಡಿದರೆ ಸರ್ವ ರೋಗಗಳು ಪರಿಹಾರವಾಗುತ್ತದೆ ಎಂದು ಭಕ್ತರು ನಂಬಲಾಗಿದೆ.