Search
  • Follow NativePlanet
Share
» »ದೆಹಲಿಯಲ್ಲಿ ಸೈಕ್ಲಿಂಗ್ ಮಾಡಬಹುದಾದ ತಾಣಗಳಿವು

ದೆಹಲಿಯಲ್ಲಿ ಸೈಕ್ಲಿಂಗ್ ಮಾಡಬಹುದಾದ ತಾಣಗಳಿವು

By Manjula Balaraj Tantry

ದೆಹಲಿಯಲ್ಲಿ ಸೈಕ್ಲಿಂಗ್ ಪರಿಸರ ವ್ಯವಸ್ಥೆಯು ಬಹಳ ಉತ್ತಮವಾಗಿದೆ ಮತ್ತು ಮನರಂಜನೆ, ವೃತ್ತಿಪರ ಸೈಕ್ಲಿಂಗ್ ಅನ್ನು ತೆಗೆದುಕೊಂಡ ಜನರ ಸಂಖ್ಯೆಯು ಕಳೆದ ಕೆಲವು ವರ್ಷಗಳಿಂದ ಅಗಾಧವಾಗಿ ಹೆಚ್ಚಾಗಿದೆ. ಆದುದರಿಂದ ಇಂಡಿಯಾ ಗೇಟ್, ರಾಷ್ಟ್ರಪತಿ ಭವನ ಮತ್ತು ರಾಜ್ ಪಥ್ ಕಡೆಗೆ, ಮತ್ತು ನೀವು ಅವರ ಮತ್ತು ಸೈಕ್ಲಿಸ್ಟ್ ಗಳನ್ನು ತಮ್ಮ ವರ್ಣರಂಜಿತ ವೇಷಭೂಷಣದಲ್ಲಿ ಇಲ್ಲಿ ನೋಡಬಹುದು ಅಲ್ಲದೆ , ತಮ್ಮ ಉನ್ನತ ಯಂತ್ರಗಳ ಮೂಲಕ ಸವಾರಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಜಗತ್ತಿನ ಸುತ್ತಲಿರುವ ಇನ್ನಿತರ ನಗರಗಳಂತೆ ದೆಹಲಿಯಲ್ಲಿರುವ ಸೈಕ್ಲಿಂಗ್ ಸಮುದಾಯವು ಹೊಸ ಸೈಕಲ್ ಸವಾರರಿಗೆ ಹತ್ತಿರವಾಗಿದೆ ಮತ್ತು ಹೊಸಬರನ್ನು ಸ್ವಾಗತಿಸುತ್ತದೆ. ನೀವು ಸವಾರಿ ಮಾಡಲು ಹೊಸಬರಾಗಿದ್ದಲ್ಲಿ, ನೀವು ಇಲ್ಲಿ ಅತ್ಯಂತ ದೊಡ್ಡ ಸೈಕಲ್ ಸವಾರರ ಗುಂಪನ್ನು ಕಾಣುವಿರಿ.

1.ದೌಲಾ ಕುವಾನ್ ನಿಂದ ಸರ್ದಾರ್ ಪಟೇಲ್ ಮಾರ್ಗದಲ್ಲಿ 11 ಮೂರ್ತಿ

1.ದೌಲಾ ಕುವಾನ್ ನಿಂದ ಸರ್ದಾರ್ ಪಟೇಲ್ ಮಾರ್ಗದಲ್ಲಿ 11 ಮೂರ್ತಿ

Janendra

ದೌಲಾ ಕುವಾನ್ ನಿಂದ ಸರ್ದಾರ್ ಪಟೇಲ್ ಮಾರ್ಗದಲ್ಲಿ 11 ಮೂರ್ತಿ ಗೆ ಸವಾರಿ ಮಾಡುವಾಗ ನೀವು ಕೆಲವು ಸೌಮ್ಯವಾದ ಇಳಿಜಾರು ಬೆಟ್ಟಗಳ ಮೂಲಕ ಪ್ರಯಾಣಿಸಬೇಕಾಗುವುದು ಇದು ನಿಮ್ಮನ್ನು ಸೈಕಲ್ ತುಳಿಯಲು ಸುಲಭಗೊಳಿಸುತ್ತದೆ.

ಈ ಜಾಗದಲ್ಲಿ ಚಲಿಸುವ ವೇಗವನ್ನು ನೀವು ಇಷ್ಟ ಪಡುವಿರಿ ಮುಂಜಾನೆಯ ಸಮಯದಲ್ಲಿ ನೀವು ವೇಗದ ಮತ್ತು ತಂಗಾಳಿಯುತ ಸೈಕ್ಲಿಂಗ್ ಗೆ ಪೂರಕವಾಗಿ ಬೆಟ್ಟ ಕಾಡುಗಳಿಂದ ಬರುವ ತಂಪಾದ ಗಾಳಿಯನ್ನೂ ನಿಮ್ಮ ಸೈಕ್ಲಿಂಗ್ ಸವಾರಿಯೊಂದಿಗೆ ಸೇರಿಸಿಕೊಳ್ಳಿ. ಇದು ನೀವು ನಿಮ್ಮ ದಿನದ ಒತ್ತಡ ಭರಿತ ಜೀವನಕ್ಕೆ ಹೋಗುವ ಮೊದಲು ಮಾಡಬಹುದಾದ ಸೂಕ್ತವಾದ ಒಂದು ಚಟುವಟಿಕೆಯಾಗಿದೆ.

2. ರಾಷ್ಟ್ರಪತಿ ಭವನದಿಂದ ಇಂಡಿಯ ಗೇಟ್ ಗೆ

2. ರಾಷ್ಟ್ರಪತಿ ಭವನದಿಂದ ಇಂಡಿಯ ಗೇಟ್ ಗೆ

Atamari

ಇದೊಂದು ಭವ್ಯವಾದ ದಾರಿಯಾಗಿದೆ. ರೈಸಿನಾ ಬೆಟ್ಟದ ಮೇಲೆ ನಿಂತಿದೆ ಈಗ ನಿಮಗೆ ಗೊತ್ತಾಗಿರಬಹುದು ನಾನು ಯಾವುದರ ಬಗ್ಗೆ ಮಾತಾಡುತ್ತಿರುವುದೆಂದು ಗೊತ್ತಾಗಿರಬಹುದು! ಒಂದು ಕಡೆಯಲ್ಲಿ ರಾಷ್ಟ್ರಪತಿ ಭವನ ಹಾಗೂ ಇನ್ನೊಂದು ಕಡೆಯಲ್ಲಿ ಇಂಡಿಯಾ ಗೇಟ್ ಮತ್ತು ರಾಜ್ ಪಥ ಎಲ್ಲಾ ಕಡೆಯಲ್ಲಿಯೂ ಹರಡಿದೆ.

ಇವೆಲ್ಲವೂ ಒಂದು ಹೆಮ್ಮೆಯನ್ನು ನೀಡುವಂತಹ ದೃಶ್ಯವಾಗಿದೆ. ಬೆಳಿಗ್ಗಿನ ಸಮಯದಲ್ಲಿ ರಾಜ್ ಪಥವು ಸೈಕಲ್ ಸವಾರರು, ಓಟ ಮಾಡುವವರು, ಸ್ಕೇಟಿಂಗ್ ಮಾಡುವ ಮಕ್ಕಳು ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವ ಜನರು ಮುಂತಾದವರನ್ನು ಇಲ್ಲಿ ಕಾಣಬಹುದು ಇಲ್ಲಿ ಅದಕ್ಕಿಂತ ಹೆಚ್ಚಾಗಿ ನೀವು ನೋಡಬಹುದಾದ ವಿಷಯವೇನಂದರೆ ಅನೇಕ ನಗುಮುಖಗಳು ಮತ್ತು ಧನಾತ್ಮಕ ಶಕ್ತಿಯನ್ನು ಪ್ರತೀ ಬೆಳಗ್ಗೆ ಪಡೆಯಬಹುದಾಗಿದೆ.

3. ನಜಫ್ಗಡ್ ವೆಟ್ ಲ್ಯಾಂಡ್ಸ್

3. ನಜಫ್ಗಡ್ ವೆಟ್ ಲ್ಯಾಂಡ್ಸ್

ArmouredCyborg

ಈ ರಸ್ತೆಯು ದೆಹಲಿಯ ಹೊರವಲಯದಲ್ಲಿದೆ ಮತ್ತು ಈ ರಸ್ತೆಯು ದ್ವಾರಕ ಮತ್ತು ಹರ್ಯಾಣವನ್ನು ಸಂಪರ್ಕಿಸುತ್ತದೆ. ಈ ರಸ್ತೆಯು ನಜಫ್ಗಡ್ ಮೂಲಕ ಹಾದು ಹೋಗುತ್ತದೆ. ಈ ಸ್ಥಳಕ್ಕೆ ಒಂದು ಧನ್ಯವಾದ ಹೇಳೋಣ, ಈ ಜಾಗದಲ್ಲಿ ವಾಹನ ಸಂಚಾರವು ವಿರಳವಾಗಿರುತ್ತದೆ ಮತ್ತು ಈ ಸ್ಥಳವು ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದೆ.

ಸುಂದರವಾದ ಸೂರ್ಯೋದಯ ಮತ್ತು ಸಾವಿರಾರು ಹಕ್ಕಿಗಳು ಇವೆಲ್ಲ ಸೇರಿ ಈ ಸೈಕ್ಲಿಂಗ್ ತಾಣವನ್ನು ನಗರದ ಅಚ್ಚುಮೆಚ್ಚಿನ ಸ್ಥಳವನ್ನಾಗಿಸುತ್ತದೆ. ಚಳಿಗಾಲದಲ್ಲಿ ಈ ಸ್ಥಳದಲ್ಲಿ ಸಾವಿರಾರು ಪಕ್ಷಿಗಳು ಸೈಬೀರಿಯಾದಿಂದ ವಲಸೆ ಬರುತ್ತವೆ. ಇಂತಹವುಗಳಲ್ಲಿ ಉತ್ತರದ ಪಿನ್ಟೈಲ್ಸ್ ಗಳು, ಬಾರ್ ಹೆಬ್ಬಾತುಗಳು, ಇತ್ಯಾದಿಗಳು ಕಾಣ ಸಿಗುತ್ತವೆ.

ಗುರೆಗಾವ್ - ಫರೀದಾಬಾದ್ ರಸ್ತೆ

ಗುರೆಗಾವ್ - ಫರೀದಾಬಾದ್ ರಸ್ತೆ

Rameshng

ದೆಹಲಿಯ ಎನ್ ಸಿ ಆರ್ ನಲ್ಲಿ ನಿಮ್ಮ ಸೈಕಲಿನ ಚಕ್ರಗಳಿಗೆ ತರಬೇತಿ ನೀಡಲು ಒಂದು ಉತ್ತಮವಾದ ಸ್ಥಳವಾಗಿದೆ. ಈ ರಸ್ತೆಯು ಅನೇಕ ಏರು ಮತ್ತು ತಗ್ಗು ವಲಯಗಳನ್ನು ಹೊಂದಿದ್ದು ನಿಮಗೆ ಸ್ವತ: ಸೈಕ್ಲಿಂಗ್ ಮಾಡಲು ಸವಾಲುದಾಯಕವಾಗಿದೆ.

ಇಲ್ಲಿ ಅತ್ಯುತ್ತಮ ಸಮಯವನ್ನು ಕಳೆಯಬಹುದಾಗಿದೆ. ಈ ರಸ್ತೆಯ ಉದ್ದಕ್ಕೂ ಕಾಡುಗಳನ್ನು ಬದಿಯಲ್ಲಿ ಹೊಂದಿದೆ ಆದುದರಿಂದ ಇಲ್ಲಿ ಸೈಕಲ್ ಸವಾರಿ ಮಾಡುವುದು ಒಂದು ಉತ್ತೇಜನಕಾರಿಯಾದುದಾಗಿದೆ. ನೀವು ಅನೇಕ ಸೈಕಲ್ ಸವಾರರು ಓಡುವವರು ಮುಂತಾದವರನ್ನು ಈ ಜನಪ್ರಿಯ ತಾಣದಲ್ಲಿ ಕಾಣಬಹುದಾಗಿದೆ.

ಕುತುಬ್ ಸಾಂಸ್ಥಿಕ ಪ್ರದೇಶದಲ್ಲಿರುವ ಸಂಜಯ್ ವನ್

ಕುತುಬ್ ಸಾಂಸ್ಥಿಕ ಪ್ರದೇಶದಲ್ಲಿರುವ ಸಂಜಯ್ ವನ್

Unknown

ದೆಹಲಿಯ ಹೃದಯ ಭಾಗದಲ್ಲಿರುವ ಈ ಪ್ರದೇಶವು ಫಿಟ್ನೆಸ್ ಉತ್ಸಾಹಿಗಳ ಕನಸು ನನಸು ಮಾಡುವಂತಹ ಸ್ಥಳವಾಗಿದೆ. ಇಲ್ಲಿಯ ಕಾಡಿನ ಒಳಗಡೆ ಜೆಲ್ಲಿಯ ಟ್ರಾಕ್ ಇದ್ದು ಸೈಕ್ಲಿಂಗ್ ಮಾಡುವವರಿಗೆ ಉತ್ತಮ ಅವಕಾಶವನ್ನು ಒದಗಿಸಿಕೊಡುತ್ತದೆ.

ಕಾಡಿನಲ್ಲಿ ಕೆಲವು ಯಂತ್ರಗಳು ಇವೆ. (ಗಡಿಯಾರ ಗೋಪುರಗಳು) ಇವು ನಿಮಗೆ ಸುತ್ತ ಮುತ್ತಲಿನ ಪ್ರದೇಶದ ಒಂದು ಸುಂದರ ನೋಟವನ್ನು ನೀಡುತ್ತವೆ. ಈ ಸ್ಥಳಕ್ಕೆ ಭೇಟಿ ಕೊಡಿ ಮತ್ತು ನೀವು ಇಲ್ಲಿಯ ಸೌಂದರ್ಯತೆಗೆ ಆಶ್ಚರ್ಯಚಕಿತರಾಗುವಿರಿ.

ಅಸೋಲಾ ಭಾರದ್ವಾಜ್ ಸರೋವರ

ಅಸೋಲಾ ಭಾರದ್ವಾಜ್ ಸರೋವರ

ಇದು ಸ್ವತ: ಒಂದು ಅಚ್ಚುಮೆಚ್ಚಿನ ತಾಣವಾಗಿದೆ. ಇಲ್ಲಿ ಏಳು ಸರೋವರಗಳು ಇದರ ಸುತ್ತ ಮುತ್ತಲಿವೆ ಮತ್ತು ನಂಬಿ ಒಂದಕ್ಕಿಂತ ಒಂದು ಉತ್ತಮವಾದುದಾಗಿದೆ! ರಸ್ತೆಯ ಆಚೆ ಅಥವಾ ಏಕ ಪಥದ ಮೇಲೆ ಸೈಕ್ಲಿಂಗ್ ಆನಂದಿಸುವ ಸೈಕ್ಲಿಸ್ಟ್ ಗಳಿಗೆ ರಾಕಿ ಆಫ್ ರೋಡ್ ಜಲ್ಲಿ ಟ್ರ್ಯಾಕ್ ಪರಿಪೂರ್ಣವಾಗಿದೆ. ಇಲ್ಲಿಯ ಏರು ಮತ್ತು ತಗ್ಗು ಪ್ರದೇಶಗಳು ಅದೂ ಕಲ್ಲುಗಳನ್ನು ಹೊಂದಿರುವುದು ಪರ್ವತದಲ್ಲಿ ಬೈಕ್ ಸವಾರಿ ಮಾಡುವವರಿಗೆ ಸೂಕ್ತವಾದುದಾಗಿದೆ.

ಆರಂಭಿಕರಿಗೆ ಈ ರಸ್ತೆಯು ಸ್ವಲ್ಪ ಸವಾಲೆನಿಸಬಹುದು ಮತ್ತು ಕೆಲವು ಸ್ಥಳಗಳಲ್ಲಿ ನಡೆಯಬೇಕಾಗುವುದು. ಈ ಪ್ರದೇಶದಲ್ಲಿ ಹಕ್ಕಿಗಳು ಮತ್ತು ಪ್ರಾಣಿಗಳು ನೆಲೆಸಿದ್ದು, ನೀವು ಅದೃಷ್ಟವಂತರಾಗಿದ್ದಲ್ಲಿ, ನೀವು ನೀಲ್ಗೈ ಅಥವ ಏಷ್ಯಾದ ಹುಲ್ಲೆ ಮುಳ್ಳು ಹಂದಿಗಳು, ಮೊಲಗಳು, ಮತ್ತು ನರಿಗಳನ್ನೂ ಕೂಡಾ ಇಲ್ಲಿ ಕಾಣಬಹುದಾಗಿದೆ. ಈ ಪ್ರದೇಶವು ಕಾಡಿನದ್ದಾದುದರಿಂದ ವಾಹನಗಳ ಸದ್ದು ಗದ್ದಲಿನಿಂದ ಮುಕ್ತವಾಗಿದೆ ಮತ್ತು ಈ ದಾರಿಯು ಮಾಲಿನ್ಯರಹಿತವಾಗಿದೆ.

ಅರಾವಳಿ ಹಾದಿಗಳು

ಅರಾವಳಿ ಹಾದಿಗಳು

Vijay Dhasmana

ಈ ದಾರಿಯು ಅನೇಕ ಏರು ತಗ್ಗುಗಳು ಮತ್ತು ಕಲ್ಲುಗಳಿಂದ ಸುತ್ತುವರಿದ ಪ್ರದೇಶಗಳನ್ನು ಒಳಗೊಂಡಿದ್ದಾಗಿದೆ. ಈ ಪ್ರದೇಶವು ಮದ್ಯಂತರ ಪರ್ವತ ಬೈಕ್ ಸವಾರರಿಗೆ ಒಂದು ಸೂಕ್ತವಾದ ಸ್ಥಳವಾಗಿದೆ. ಇಲ್ಲಿಯ ಸವಾರಿ ಆರಂಭಿಕರಿಗೆ ಸ್ವಲ್ಪ ಕಷ್ಟಕರವೆನಿಸಬಹುದು. ಆದರೆ ಈ ಸುಂದರವಾದ ಅರಣ್ಯ ಪ್ರದೇಶವು ಸೈಕಲ್ ಸವಾರಿ ಮಾಡಲು ಸೂಕ್ತವಾದುದಾಗಿದೆ. ಈ ಅರಣ್ಯವು ಅಸೋಲಾ ಅರಣ್ಯದಂತೆ, ಅನೇಕ ಪಕ್ಷಿಗಳು ಮತ್ತು ಸಣ್ಣ ಪ್ರಾಣಿಗಳನ್ನು ಹೊಂದಿದೆ.

ರಾ.ಹೆ8 - ದೇಶೀಯ ಟರ್ಮಿನಲ್ನಿಂದ ಮನೇಸರ್ಗೆ ತಿರುಗಿ

ರಾ.ಹೆ8 - ದೇಶೀಯ ಟರ್ಮಿನಲ್ನಿಂದ ಮನೇಸರ್ಗೆ ತಿರುಗಿ

Sachin Rao

ಈ ರಸ್ತೆಯು ವೇಗವಾಗಿ ಹೋಗಬಯಸುವ ಉತ್ಸಾಹೀ ಬೈಕ್ ಸವಾರರಿಗಾಗಿ ಆದುದಾಗಿದೆ. ಈ ರಸ್ತೆಯು ಒಂದು ಉದ್ದನೆಯ ನೇರ ಮಾರ್ಗವನ್ನು ಹೊಂದಿದ್ದು ಅದರ ಜೊತೆಗೆ ಕೆಲವು ಸಣ್ಣ ಸಣ್ಣ ಗಣನೆಗೆ ತೆಗೆದುಕೊಳ್ಳದೇ ಇರುವ ಗೊಂದಲ ಮತ್ತು ತಿರುವುಗಳನ್ನು ಹೊಂದಿದೆ. ಬೆಳಗ್ಗಿನ ಸಮಯದಲ್ಲಿ ಈ ರಸ್ತೆಗಳಲ್ಲಿ ನಿಮ್ಮ ವಾಹನವನ್ನು ವೇಗವಾಗಿ ಚಲಾಯಿಸಬಹುದು ಮತ್ತು ವೇಗದ ಮಜಾ ಪಡೆಯಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X