» »ಮಾ ಕಟಕ್ ಚಂಡಿ-ಒಡಿಸ್ಸಾ

ಮಾ ಕಟಕ್ ಚಂಡಿ-ಒಡಿಸ್ಸಾ

Written By: Sowmyabhai

ಕಟಕ್ ಒರಿಸ್ಸ ರಾಜ್ಯದ ಒಂದು ನಗರವಾಗಿದೆ. ಈ ನಗರದಲ್ಲಿ ಲಾಲ್ ಭಾಗ್ ಅರಮನೆ, ಜಾಮೀ ಮಸೀದಿ, ಕದಾಂ ರಸೂಲ್ ಸ್ಮಾರಕಗಳಿವೆ. ಇವುಗಳೇ ಅಲ್ಲದೇ 18 ನೇ ಶತಮಾನದಲ್ಲಿ ನಿರ್ಮಿತವಾದ ಅಮರೇಶ್ವರ ದೇವಾಲಯ, ಜೈನ ದೇವಾಲಯಗಳು, ಬ್ಯಾಪಿಸ್ಟ್ ಚರ್ಚ್, ಕ್ಯಾಥೊಲಿಕ್ ಚರ್ಚ್‍ಗಳಿವೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದ ಪುಣ್ಯ ಸ್ಥಳವೆಂದರೆ ಅದು ಕಟಕ್ ಚಂಡಿ ದೇವಾಲಯ. ಪ್ರಸುತ್ತ ಲೇಖನದಲ್ಲಿ ದುರ್ಗಿ ಸ್ವರೂಪಿ ಚಂಡಿಯ ಬಗ್ಗೆ ತಿಳಿಯೋಣ.

ಮಾ ಕಟಕ್ ಚಂಡಿ

                                                PC:Sankarrukku

ಕಟಕ್ ಜನತೆ ಚಂಡಿತಾಯಿಯು ಅದಿ ದೇವತೆಯಾಗಿದ್ದಾಳೆ. ಈ ದೇವಾಲಯವು ಮಾಹಾನದಿಯ ಬಳಿ ಇದೆ. ಚಂಡಿ ತಾಯಿಯನ್ನು ಅತ್ಯಂತ ಸಡಗರದಿಂದ ವಿಜೃಂಭಣೆಯಿಂದ ದುರ್ಗ ಪೂಜ ಹಾಗೂ ಕಾಳಿ ಪೂಜಗಳಲ್ಲಿ ಆರಾಧಿಸಲಾಗುತ್ತದೆ. ವಿಶೇಷವಾಗಿ ದುರ್ಗಪೂಜೆಯನ್ನು ವಿಜಯ ದಶಮಿಯ ಅಶ್ವಿನಿ ಕೃಷ್ಣ ಅಷ್ಠಮಿಯಿಂದ ಅಶ್ವಿನಿ ಶುಕ್ಲ ನವಮಿಯವರೆಗೂ ಸತತ 16 ದಿನಗಳ ಚಂಡಿಗೆ ಪೂಜೆಗಳು ನಡೆಯುತ್ತದೆ. ಈ ತಾಯಿಯನ್ನು "ಮಾ ಕಟಕ್ ಚಂಡಿ" ಎಂದೇ ಸ್ಥಳಿಯರು ಕರೆಯುತ್ತಾರೆ.

ಮಾ ಕಟಕ್ ಚಂಡಿ

                                                    PC:Sidsahu

ಚಂಡಿಯು ತನ್ನ ಭಯಂಕರ ಸ್ವರೂಪವಾದ 4 ಕೈಗಳನ್ನು ಹೊಂದಿದ್ದು ಪಾಶ, ಅಂಕುಶ, ಅಭಯ, ವರದವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ಕಟಕ್‍ನ ಜನತೆಯು ಪಾರಾಶಕ್ತಿ ಸ್ವರೂಪಿಯಾದ ಚಂಡಿಯು ಸಾಕ್ಷತ್ ಆಗಿ ಈ ದೇವಾಲಯದಲ್ಲಿ ನೆಲೆಸಿದ್ದಾಳೆ ಎಂದು ನಂಬಿದ್ದಾರೆ. ಈ ತಾಯಿ ಬಂದ ಭಕ್ತರ ಕಷ್ಟ, ಕಾರ್ಪಣ್ಯಗಳನ್ನು ಬಗೆ ಹರಿಸುತ್ತಿದ್ದಾಳೆ.

ಮಾ ಕಟಕ್ ಚಂಡಿ

                                               PC:JDP90 (Joydeep) -

ಇತಿಹಾಸ
ಈ ಕಟಕ್‍ನಲ್ಲಿ ಲಕ್ಷ್ಮಣ ಪಾಂಡ ಎಂಬುವವ ಚಂಡಿಯನ್ನು ಅತ್ಯಂತ ನಿಷ್ಠೆ, ಭಕ್ತಿ, ಶ್ರಧ್ದೆಯಿಂದ ಪೂಜಿಸುತ್ತಿದ್ದನು. ಕಾಲಕಳೆದಂತೆ ಅವನಿಗೆ 4 ಹೆಣ್ಣು ಮಕ್ಕಳಾದವು. ಅವರ ಹೆಸರು ಚಂಪ, ತುಳಸಿ, ಮಾಲಿ ಮತ್ತು ಮಾಲತಿಯಾಗಿತ್ತು. ಲಕ್ಷ್ಮಣನಿಗೆ ಈ 4 ಮಕ್ಕಳು ದೇವಿ ಪೂಜೆಗೆ ಸಹಾಯ ಮಾಡಿಕೊಡುತ್ತಿದ್ದರು. ತನಗೆ ಪುತ್ರ ಸಂತಾನ ಬೇಕು ಎಂದು ಚಂಡಿ ತಾಯಿಗೆ ಬೇಡಿಕೊಂಡ. ತಾಯಿಯ  ಕೃಪಾಕಟಾಕ್ಷದಿಂದ ಕೆಲವು ವರ್ಷಗಳ ಬಳಿಕ ಗಂಡು ಮಗು ಜನನವಾಯಿತು. ಆ ಗಂಡು ಮಗುವಿಗೆ ಶ್ರೀ ದಯಾನಿಧಿ ಪಾಂಡ ಎಂದು ಹೆಸರಿಟ್ಟನು. ದಯಾನಿದಿಯು ಚಂಡಿಯನ್ನು ತನ್ನ ಆರಾಧ್ಯ ದೈವವಾಗಿ ಪಾರ್ಥಿಸಿದನು. ತದನಂತರ ದಯಾನಿಧಿಗೂ 6 ಪುತ್ರ ಸಂತಾನವಾಯಿತು ಹೀಗೆ ಈ ತಾಯಿಯ ಮಹಿಮೆ ಬೆಳೆಯಿತು.

ಮಾ ಕಟಕ್ ಚಂಡಿ

                                           PC:Joydeep

ಪೂಜಾ ಸಮಯ
ಚಂಡಿ ತಾಯಿಗೆ ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ ದರ್ಶನ ಭಾಗ್ಯವನ್ನು ಪಡೆಯಬಹುದಾಗಿದೆ. ಈ ತಾಯಿಗೆ ದುರ್ಗ ಪೂಜೆ ಹಾಗೂ ವಿಜಯ ದಶಮಿಯಂದ ವಿಜೃಂಭಣೆಯಿಂದ ಪೂಜೆಗಳು ನೆರವೆರುತ್ತಾವೆ.

Please Wait while comments are loading...