Search
  • Follow NativePlanet
Share
» »ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ...

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ...

ನಮ್ಮ ಆಥುನಿಕ ಯುಗದಲ್ಲಿಯೂ ದೇವರುಗಳೆಂದರೆ ಭಕ್ತಿ, ಶ್ರದ್ಧೆಯಿಂದ ಆರಾಧಿಸುತ್ತಾರೆ. ಮೂರು ಕೋಟಿ ದೇವರುಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಪೂಜೆಸುತ್ತಾರೆ. ಯಾವುದೇ ಪ್ರಾಣಿ-ಪಕ್ಷಿ ಎಂಬ ಭೇದ-ಭಾವವಿಲ್ಲದೇ ಪೂಜೆಯನ್ನು ಮಾಡುವ ಶುದ್ಧವಾದ ಹೃದಯಿಗಳು ನಮ್ಮ ಭಾರತೀಯರು. ಆಶ್ಚರ್ಯ ಏನಪ್ಪ ಎಂದರೆ ನಮ್ಮ ಭಾರತ ದೇಶದಲ್ಲಿ ದೇವ ಮಾನವ ಎಂಬ ಕೆಲವು ವಿಚಿತ್ರವಾದ ದೇವತೆಗಳು ಹುಟ್ಟಿರುವುದು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ.

ನಮ್ಮ ಕರ್ನಾಟಕದಲ್ಲಿ ಮತ್ತೊಂದು ವಿಚಿತ್ರವಾದ ದೇವಾಲಯವು ಕೂಡ ಇದೆ. ಅದೆನೆಂದರೆ ಅಣ್ಣ-ತಂಗಿಯರ ಹುತ್ತ. ಅಂದರೆ ಸತ್ತವರು ದೇವತೆಗಳಾಗಿ ಒಂದು ಸ್ಥಳದಲ್ಲಿ ನೆಲೆಸಿದ್ದಾರೆ. ಈ ವಿಚಿತ್ರವನ್ನು ಕಾಣಲು ಅನೇಕ ಮಂದಿ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ಹಾಗಾದರೆ ಬನ್ನಿ ಲೇಖನದ ಮೂಲಕ ಸತ್ತವರು ದೇವತೆಗಳಾಗಿ ಹೇಗೆ ಬಂದರು? ಅದಕ್ಕೆ ಕಾರಣವೇನು? ಮಹತ್ವವೇನು? ಎಂಬುದರ ಕುರಿತು ಸವಿವರವಾಗಿ ತಿಳಿಯೋಣ.

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಮನೆಯ ಯಜಮಾನರಿಬ್ಬರು ಮರಣ ಹೊಂದಿದ 1 ವರ್ಷ ಸರಿಯಾಗಿ ತನ್ನ ಮನೆಯಲ್ಲಿಯೇ ಅಣ್ಣ ತಂಗಿ ಇಬ್ಬರು ದೇವರುಗಳಾಗಿ ಗೋಡೆಯ ಮೇಲೆ ನೆಲೆಸಿದ್ದಾರೆ. ಮನೆಯನ್ನು ಹಾಗು ಭಕ್ತರನ್ನು ಕಾಯುತ್ತಾ ಇದ್ದಾರೆ. ಇದೊಂದು ಆಶ್ಚರ್ಯ ಎನ್ನುವುದಾದರೂ ಭಕ್ತರು ಮಾತ್ರ ಭಯ, ಭಕ್ತಿಯಿಂದ ಪೂಜೆಯನ್ನು ಮಾಡುತ್ತಾ ಇದ್ದಾರೆ.

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಈ ವಿಚಿತ್ರವಾದ ದೇವಾಲಯವಿರುವುದು ಚಿತ್ರದುರ್ಗ ಜಿಲ್ಲೆಯ ಹೊಸ ದುರ್ಗ ತಾಲೂಕಿನ ಬಿಳಿ ಚಿತ್ತಯ್ಯ ಗ್ರಾಮದಲ್ಲಿ. ಇದು ಪ್ರಸ್ತುತ ಭಕ್ತರ ಸಮೂಹವೇ ಇಲ್ಲಿ ಬಂದು ನೆಲೆಸಿದೆ. ಇಲ್ಲಿ ಗ್ರಾಮದ ಲಕ್ಷ್ಮಣನಾದ ಹಿರಿಯರಾದ ಬಿಳಿ ಚಿತ್ತಯ್ಯ ಮತ್ತು ಆತನ ತಂಗಿ ಕರಿಯಮ್ಮ ಇವರಿಬ್ಬರು ಕಳೆದ 2 ವರ್ಷಗಳ ಹಿಂದೆ ಮೃತರಾಗಿದ್ದರು.

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಈ ಅಣ್ಣ-ತಂಗಿ ಮೃತರಾಗಿ 1 ವರ್ಷಕ್ಕೆ ಸರಿಯಾಗಿ, ಮನೆಯ ಗೋಡೆಯ ಹಿಂದೆ ಹಾಗು ಮುಂದೆ ಬಿಳಿ ಚಿತ್ತಯ್ಯ ಜುಂಜಪ್ಪನಾಗಿ, ಕರಿಯಮ್ಮ ಕೋಡಿ ಕರಿಯಮ್ಮಳಾಗಿ ನೆಲೆಸಿದ್ದಾರೆ. ಅಂದರೆ ದೇವರಾಗಿ ಒಂದು ಮನೆಯಲ್ಲಿ ನೆಲೆಸಿದ್ದಾರೆ. ಹುತ್ತದ ಮಣ್ಣು ಮನೆಯಲ್ಲಿ ಮೂರ್ತಿಗಳ ಆಕಾರದಲ್ಲಿ ಬೆಳೆಯುತ್ತಿದ್ದಾಗ ಅದನ್ನು ನೋಡಿದ ಮನೆಯವರು ಭಯದಿಂದ ಕಿತ್ತು ಹಾಕುತ್ತಿದ್ದರು.

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಹೀಗೆ ಭಯಗೊಂಡ ಮನೆಯವರು ಆ ಮೂರ್ತಿಗಳನ್ನು ಸೀಮೆ ಎಣ್ಣೆ ಹಾಕಿ ಕೂಡ ಸುಟ್ಟು ಹಾಕಿದ್ದಾರೆ. ಆದರೂ ಕೂಡ ಆ ಮೂರ್ತಿಗಳು ಬೆಳೆಯುವುದು ಮಾತ್ರ ನಿಲ್ಲಲಿಲ್ಲ. ಬಂದು ನೋಡಿದವರೆಲ್ಲಾ ಇದು ದೇವರು ಇದನ್ನು ನಾಶ ಮಾಡಬೇಡಿ ಎಂದು ಹೇಳಿ ಹೋಗುತ್ತಿದ್ದರು.

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಒಂದು ದಿನ ಕರಿಯಮ್ಮ ಮತ್ತು ಬಿಳಿ ಚಿತ್ತಯ್ಯ ಕನಸ್ಸಿನಲ್ಲಿ ಬಂದು ಯಜಮಾನರಾದ ನಾವು ದೇವರಾಗಿ ಬಂದಿದ್ದೇವೆ ಎಂದು ಹಾಗೆಯೇ ನಮ್ಮನ್ನು ಬೆಳೆಯಲು ಬಿಡಿ ನಿಮಗೆ ಒಳ್ಳೆಯದು ಮಾಡುತ್ತಿವೆ ಎಂದು ಹೇಳಿದರಂತೆ. ಒಂದು ವೇಳೆ ನಮ್ಮನ್ನು ಬೆಳೆಯಲು ಬಿಡದೇ ಹೋದರೆ ನಾವು ನಿಮ್ಮ ತಲೆಯನ್ನು ತೆಗೆಯುತ್ತೇವೆ ಎಂದು ಹೇಳಿದರಂತೆ.

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಮನೆಯವರು ಇದಕ್ಕೆ ಹೆದರಿ, ಪವಿತ್ರವಾದ ಪುಣ್ಯಕ್ಷೇತ್ರಗಳಿಗೆ ಹೋಗಿ ಅಲ್ಲಿಂದ ತೀರ್ಥವನ್ನು ತೆಗೆದುಕೊಂಡು ಬಂದು ಪೂಜೆಯನ್ನು ಮಾಡಿ ಆ ಮೂರ್ತಿಗಳನ್ನು ಬೆಳೆಯಲು ಬಿಟ್ಟರಂತೆ. ಆಶ್ಚರ್ಯ ಏನಪ್ಪ ಎಂದರೆ ಇಬ್ಬರು ಕೂಡ ಒಂದೇ ಗೋಡೆಯ ಹಿಂದೆ-ಮುಂದೆ ನೆಲೆಸಿರುವುದು. ಅಂದಿನಿಂದ ಇಂದಿನವರೆವಿಗೂ ಭಕ್ತರು ಭೇಟಿ ನೀಡುತ್ತಿದ್ದಾರೆ.

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಮೊದಲು ಹುತ್ತದ ಮಣ್ಣಿನ ಹಾಗೆ ಮೂಡಿತ್ತು. ಆದರೆ ಇದು ದಿನಕಳೆದಂತೆ ಕಲ್ಲಿನ ರೀತಿ ಮಾರ್ಪಾಟಾಗಿದೆ. ಮೂರ್ತಿಗೆ ಕೈ-ಕಾಲುಗಳು ಇದ್ದು, ಮನುಷ್ಯನಂತೆಯೇ ಇದೆ. ಇಂಥಹ ದೇವರಿಗೆ ಮನೆಯವರು ಭಕ್ತರು ಸೇರಿ ಮೂರ್ತಿಗೆ ಬೇಕಾದ ಅಭರಣವನ್ನು ತಂದುಕೊಟ್ಟಿದ್ದಾರೆ.

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ವಾರದ ದಿನಗಳಲ್ಲಿ ಮತ್ತು ಪ್ರತಿ ಶುಕ್ರವಾರ ಮೂರ್ತಿಗಳಿಗೆ ಪೂಜೆಗಳನ್ನು ಮಾಡುತ್ತಾರೆ. ಮನೆಯ ಯಜಮಾನರೇ ದೇವರಾಗಿ ನೆಲೆಸಿರುವುದು ವಿಚಿತ್ರವಾದರೂ ಸತ್ಯವಾಗಿದೆ. ಇದನ್ನು ಅಣ್ಣಾ-ತಂಗಿ ಹುತ್ತ ಎಂದು ಕರೆಯುತ್ತಾರೆ. ಈ ಗ್ರಾಮದ ಅನೇಕ ಜನರು ತಮ್ಮ ಕಷ್ಟಗಳನ್ನು ಹಾಗು ಬೇಡಿಕೆಗಳನ್ನು ಬೇಡಲು ಬರುತ್ತಾರೆ.

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ನಿಮಗಿದು ಗೊತ್ತ? ಈ ದೇವರಿಗೆ ಕಷ್ಟ ಎಂದು ಬರುವ ಭಕ್ತರಿಗೆ ಪರಿಹಾರ ಒದಗಿಸಿ ಒಳ್ಳೆಯದು ಮಾಡಿದ್ದಾರೆ ಎಂದು ಹಾಗು ಬಯಕೆಗಳೆಲ್ಲಾ ಈಡೇರುತ್ತವೆ ಎಂದು ಹೇಳಲಾಗುತ್ತಿದೆ. ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿರುವ ಈ ದೇವರಿಗೆ ಗಂಟೆ, ಜಾಗಟೆ, ಕಳಶ ಮತ್ತು ಬೆತ್ತವನ್ನು ಕೂಡ ಕಾಣಿಕೆಯಾಗಿ ನೀಡಿದ್ದಾರೆ.

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಇನ್ನು ಪ್ರತಿ ಮಂಗಳವಾರ ಹಾಗು ಶುಕ್ರವಾರ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ವಾರದ ದಿನಗಳಲ್ಲಿಯೂ ಕೂಡ ದೂರದಿಂದ ಬಂದ ಭಕ್ತರಿಗಾಗಿ ಪೂಜೆಗಳನ್ನು ಮಾಡಲಾಗುತ್ತದೆ. ಅನೇಕ ಭಕ್ತರ ಪ್ರಕಾರ ನಮಗೆ ಈ ದೇವರುಗಳು ಒಳ್ಳೆಯದನ್ನು ಮಾಡಿದ್ದಾರೆ ಎಂದೇ ಹೇಳುತ್ತಾರೆ.

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ಆಶ್ಚರ್ಯ: ಸತ್ತವರು ದೇವರಾಗಿ ನೆಲೆಸಿದ್ದಾರೆ ಈ ಸ್ಥಳದಲ್ಲಿ..

ದೇವರಾಗಿ ಬಂದಿರುವ ಹಿರಿಯರಿಗೆ ತಮ್ಮ ಮನೆಯನ್ನೇ ಬಿಟ್ಟು ಕೊಟ್ಟಿದ್ದಾರೆ. ಇಷ್ಟಕ್ಕೆ ಇವರಿಗೆ ಇರಲು ಮನೆ ಇಲ್ಲದಂತಾಗಿದೆ. ದೇವರುಗಳು ಇರುವ ಸ್ಥಾನದಲ್ಲಿ ಶುದ್ಧಿಯಿಂದ ಹಾಗು ಕಟ್ಟುಪಾಡಿನಿಂದ ಇರಬೇಕು ಎಂಬ ಕಾರಣಕ್ಕೆ ಮನೆಯನ್ನು ಖಾಲಿ ಮಾಡುವ ಇವರು ಗುಡಿಸಲಿನಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಭಯ, ಭಕ್ತಿಯಿಂದ ದೇವರುಗಳ ದರ್ಶನಕ್ಕೆ ಇಲ್ಲಿಗೆ ಭಕ್ತರು ಇಲ್ಲಿಗೆ ಬಂದು ತಮ್ಮ ಕಷ್ಟ-ಸುಖಗಳನ್ನು ಬಗೆ ಹರಿಸಿಕೊಳ್ಳುತ್ತಾರೆ.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more