Search
  • Follow NativePlanet
Share
» »ದೆಹಲಿಯ ಆದ್ಯ ಕಾತ್ಯಾಯನಿ ಶಕ್ತಿಪೀಠ!

ದೆಹಲಿಯ ಆದ್ಯ ಕಾತ್ಯಾಯನಿ ಶಕ್ತಿಪೀಠ!

By Vijay

ಭಾರತದ ರಾಜಧಾನಿ ನಗರವಾಗಿರುವ ದೆಹಲಿಯು ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ಎಲ್ಲ ರೀತಿಯ, ವಿಶಿಷ್ಟ ಸಂಸ್ಕೃತಿಯ, ಐತಿಹಾಸಿಕತೆಯ, ಕಲಾತ್ಮಕತೆಯ, ಆಧುನಿಕತೆಯ ಪ್ರಭಾವವಿರುವ ಸಾಕಷ್ಟು ಆಕರ್ಷಣೆಗಳನ್ನು ಇಲ್ಲಿ ನೋಡಬಹುದಾಗಿದೆ.

ಜೊತೆಗೆ, ಧಾರ್ಮಿಕ ಪ್ರಭುತ್ವವನ್ನು ಬೀರುವ ಅನೇಕ ಗುಡಿ-ಗುಂಡಾರಗಳು, ಮಸೀದಿಗಳು ಹಗೂ ಚರ್ಚುಗಳು ದೆಹಲಿಯ ಮೂಲೆ ಮೂಲೆಗಳಲ್ಲಿ ಕಂಡುಬರುತ್ತವೆ. ಪ್ರಸ್ತುತ ಲೇಖನದಲ್ಲಿ ಆಧುನಿಕತೆಯ ಛಾಪಿನೊಳಗೆ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡೆ ಸಾಮ್ಪ್ರದಾಯಿಕವಾದ ರೀತಿಯಲ್ಲಿ ನಿರ್ಮಾಣಗೊಂಡ ಆಕರ್ಷಕ ವಿನ್ಯಾಸದ ದೇವಾಲಯವೊಂದರ ಕುರಿತು ತಿಳಿಸಲಾಗಿದೆ.

ದೆಹಲಿಯ ಮೂಲೆ ಮೂಲೆಗಳೂ ವಿಶಿಷ್ಟ ವಿಭಿನ್ನ

ಇದನ್ನು ಆದ್ಯ ಕಾತ್ಯಾಯನಿ ಶಕ್ತಿಪೀಠ ಎಂಬ ಹೆಸರಿನಿಂದಲೆ ಕರೆಯಲಾಗುತ್ತದೆ. ಜಗನ್ಮಾತೆಗೆ ಮುಡಿಪಾದ ಈ ಸುಂದರ ದೇವಾಲಯದಲ್ಲಿ ಇತರೆ ಹಲವಾರು ದೇವತೆಗಳ ಅದ್ಭುತ ಸನ್ನಿಧಿಗಳೂ ಸಹ ಉಪಸ್ಥಿತವಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತದೆ.

ಕರ್ನಾಟಕ!

ಕರ್ನಾಟಕ!

ಸಂತ ಶ್ರೀ ನಾಗಪಾಲ ಬಾಬಾ ಎಂಬುವವರಿಂದ 1917 ರಲ್ಲಿ ನಿರ್ಮಾಣಗೊಂಡ ಅದ್ಭುತ ದೇವಾಲಯ ಸಂಕೀರ್ಣ ಇದಾಗಿದೆ. ವಿಶೇಷ ಎಂದರೆ ಈ ಬಾಬಾ ಮೂಲತಃ ಹುಟ್ಟಿದ್ದು ದಕ್ಷಿಣದ ಕರ್ನಾಟಕ ರಾಜ್ಯದಲ್ಲಿ.

ಚಿತ್ರಕೃಪೆ: Sujit kumar

ಸಮರ್ಪಿಸಿಕೊಂಡರು

ಸಮರ್ಪಿಸಿಕೊಂಡರು

ನಂತರ ಇವರು ತಮ್ಮ ಕಿರು ವಯಸ್ಸಿನಲ್ಲೆ ಪೋಷಕರನ್ನು ಕಳೆದುಕೊಂಡು ದುಖಿತರಾಗಿದ್ದಾಗ, ಅವರ ಪೂರ್ವ ಜನ್ಮದ ಪುಣ್ಯದಿಂದಲೋ ಏನೊ ದೇವಿಯ ಸಾಕ್ಷಾತ್ಕಾರವಾಗಿ ಅವಳ ಒಡಲಿನಲ್ಲಿಯೆ ತಮ್ಮನ್ನು ತಾವು ಸಮರ್ಪಿಸಿಕೊಂಡು ಬಿಟ್ಟರು. ನಂತರು ಅವರು ಮಾಡಿದ ಎಲ್ಲ ಸಮಾಜಮುಖಿ ಕೆಲಸಗಳು ದೇವಿಯ ಆಶಿರ್ವಾದದಿಂದಲೆ.

ಚಿತ್ರಕೃಪೆ: Alicia Nijdam

ನಿರ್ವಹಿಸಲ್ಪಡುತ್ತದೆ

ನಿರ್ವಹಿಸಲ್ಪಡುತ್ತದೆ

ಇಂದು ಈ ದೇವಾಲಯವು ಅದರದ್ದೆ ಆದ ಮಂಡಳಿ ಅಥವಾ ಟ್ರಸ್ಟ್ ನಿಂದ ಸುಸೂತ್ರವಾಗಿ ನಿರ್ವಹಿಸಲ್ಪಡುತ್ತಿದೆ. ಇದರ ಹೆಗ್ಗಳಿಕೆ ಎಂದರೆ ದೇಶದಲ್ಲೆ ಈ ದೇವಾಲಯ ಸಂಕೀರ್ಣ ಎರಡನೇಯ ಅತಿ ದೊಡ್ಡ ಅಥವಾ ವಿಶಾಲವಾದ ಸಂಕೀರ್ಣವಾಗಿದೆ ಎಂಬುದು.

ಚಿತ್ರಕೃಪೆ: Akshatha Inamdar

ಸೆಳೆಯುತ್ತದೆ

ಸೆಳೆಯುತ್ತದೆ

ಈ ವಿಶಾಲವಾದ ದೇವಾಲಯದಾವರಣದಲ್ಲಿ ಹಲವಾರು ಇತರೆ ದೇವತೆಗಳ ಸನ್ನಿಧಿಗಳು ಇದ್ದು ಪ್ರತಿಯೊಬ್ಬ ಭಕ್ತನನ್ನು ಅಪಾರವಾಗಿ ಸೆಳೆಯುತ್ತದೆ.

ಚಿತ್ರಕೃಪೆ: Akshatha Inamdar

ಆಕರ್ಷಕ

ಆಕರ್ಷಕ

ಮಹಿಷಾಸುರ ಮರ್ದಿನಿ, ಕೃಷ್ಣ ದೇವಾಲಯ, ರಾಮನ ದೇವಾಲಯ, ಲಕ್ಷ್ಮಣನ ದೇವಾಲಯ, ಆಂಜನೇಯನ ದೇವಾಲಯ, ಗಣೇಶನ ದೇವಾಲಯ, ಶಿವನ ದೇವಾಲಯ, ದುರ್ಗೆಯ ದೇವಾಲಯ ಹೀಗೆ ಅನೇಕ ದೇವಾಲಯಗಳು ಇಲ್ಲಿದ್ದು ಭಕ್ತರು ಮೂಕವಿಸ್ಮಿತರಾಗುವಂತೆ ಮಾಡುತ್ತವೆ.

ಚಿತ್ರಕೃಪೆ: ShashankSharma2511

60 ಎಕರೆಗಳಷ್ಟು!

60 ಎಕರೆಗಳಷ್ಟು!

ದೇವಾಲಯ ಸಮ್ಕೀರ್ಣವು 60 ಎಕರೆಗಳಷ್ಟು ವಿಶಾಲವಾದ ವ್ಯಾಪ್ತಿಯಲ್ಲಿ ಹರಡಿದ್ದು ನಯನ ಮನೋಹರವಾದ ರಚನೆಗಳಿಂದ, ಸ್ವಚ್ಛತೆಯಿಂದ ಕೂಡಿದೆ.

ಚಿತ್ರಕೃಪೆ: Akshatha Inamdar

ನೂರಾರು ಸಂಖ್ಯೆಯಲ್ಲಿ

ನೂರಾರು ಸಂಖ್ಯೆಯಲ್ಲಿ

ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇನ್ನೂ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಈ ದೇವಾಲಯಕ್ಕೆ ಜನಸಾಗರವೆ ಹರಿದು ಬರುತ್ತದೆ.

ಚಿತ್ರಕೃಪೆ: Akshatha Inamdar

ಲಕ್ಷಾಂತರ

ಲಕ್ಷಾಂತರ

ನವರಾತ್ರಿ, ಮಹಾಶಿವರಾತ್ರಿ, ಕಾರ್ತಿಕ ಮಾಸ ಮುಂತಾದ ಹಬ್ಬಗಳನ್ನು ಇಲ್ಲಿ ಬಲು ಸಡಗರ ಹಾಗೂ ಹುಮ್ಮಸ್ಸಿನಿಂದ ಆಚರಿಸಲಾಗುತ್ತದೆ. ಏನಿಲ್ಲವೆಂದರೂ ಮಹಾಪ್ರಸಾದವನ್ನು ಲಕ್ಷಾಂತರ ಸಂಖ್ಯಯಲ್ಲಿ ಬರುವ ಭಕ್ತಾದಿಗಳಿಗೆ ನಿರ್ವಿಘ್ನವಾಗಿ ಒದಗಿಸಲಾಗುತ್ತದೆ.

ಚಿತ್ರಕೃಪೆ: Manjeet Bawa

ತಲುಪುವ ಬಗೆ

ತಲುಪುವ ಬಗೆ

ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ ಸ್ಥಿತವಿರುವ ಈ ದೇವಾಲಯಕ್ಕೆ ತೆರಳುವುದು ಸುಲಭವಾಗಿದೆ. ರೈಲು, ಬಸ್ಸು ಹಾಗೂ ವಿಮಾನ ನಿಲ್ದಾಣಗಳಿಂದ ಇಲ್ಲಿಗೆ ತೆರಳಲು ಟ್ಯಾಕ್ಸಿಗಳು ದೊರೆಯುತ್ತವೆ.

ಚಿತ್ರಕೃಪೆ: Shilendra

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more