Search
  • Follow NativePlanet
Share
» »ಮಳೆಗಾಲದಲ್ಲಿ ಈ ಧಾರ್ಮಿಕ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ, ಇಲ್ಲದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು!

ಮಳೆಗಾಲದಲ್ಲಿ ಈ ಧಾರ್ಮಿಕ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ, ಇಲ್ಲದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು!

ಚಾರ್ ಧಾಮ್ ಯಾತ್ರೆ ಒಂದು ಪವಿತ್ರ ಪ್ರಯಾಣ. ಯಾತ್ರೆಯು ತನ್ನ ನಾಲ್ಕು ಪ್ರಮುಖ ಯಾತ್ರಾ ಸ್ಥಳಗಳಿಂದ ಪ್ರಪಂಚದಾದ್ಯಂತ ಹಿಂದೂಗಳನ್ನು ಆಕರ್ಷಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಜೀವನದ ಕೊನೆಯಲ್ಲಿ ಚಾರ್ ಧಾಮ್‌ಗೆ ಪ್ರಯಾಣಿಸಿದರೆ, ಅಂತಿಮವಾಗಿ ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಚಾರ್ ಧಾಮ್ ಯಾತ್ರೆಯು ಹಿಂದೂಗಳು ಮಾಡಲೇಬೇಕಾದ ತೀರ್ಥಯಾತ್ರೆಯಾಗಿದೆ. ಇದು ನಾಲ್ಕು ಪ್ರಮುಖ ಧಾಮಗಳನ್ನು ಒಳಗೊಂಡಿದೆ. ಅವುಗಳೆಂದರೆ ಬದರಿನಾಥ್ ಧಾಮ, ಕೇದಾರನಾಥ ಧಾಮ, ಗಂಗೋತ್ರಿ ಧಾಮ ಮತ್ತು ಯಮುನೋತ್ರಿ ಧಾಮ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ಧಾಮಗಳಿಗೆ ಭೇಟಿ ನೀಡುತ್ತಾರೆ, ಆದರೆ ಮಳೆಗಾಲದಲ್ಲಿ ಈ ಪ್ರಯಾಣವು ಸವಾಲುಗಳಿಂದ ತುಂಬಿರುತ್ತದೆ. ಹೌದು, ಭಾರೀ ಮಳೆ, ಭೂಕುಸಿತ ಮತ್ತು ಪ್ರವಾಹದಂತಹ ಸಮಸ್ಯೆಗಳು ಯಾತ್ರಿಕರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತವೆ. ಹಾಗಾದರೆ ಬನ್ನಿ ಇಲ್ಲಿಗೆ ಮಳೆಗಾಲದಲ್ಲಿ ಯಾತ್ರೆ ಕೈಗೊಳ್ಳುವುದು ಎಷ್ಟು ಸುರಕ್ಷಿತ ನೋಡೋಣ...

kedarnath

ಕೇದಾರನಾಥ

ಕೇದಾರನಾಥ ಧಾಮವು ಭಾರತದಲ್ಲಿರುವ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇಲ್ಲಿ ಶಿವನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಮಳೆಗಾಲದಲ್ಲಿ ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ಮತ್ತು ಪ್ರವಾಹದ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಈ ಮಾರ್ಗದಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ ಮತ್ತು ಹವಾಮಾನವು ಸ್ಪಷ್ಟವಾಗುವವರೆಗೆ ಕಾಯಿರಿ. ಕೇದಾರನಾಥವು ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ಒಂದು ಪ್ರಮುಖ ಯಾತ್ರಾಸ್ಥಳವಾಗಿದ್ದು, ಶಿವನಿಗೆ ಸಮರ್ಪಿತವಾಗಿದೆ. ಈ ಸ್ಥಳವು ಹಿಂದೂ ಧರ್ಮದಲ್ಲಿ ಬಹಳ ಮಹತ್ವದ್ದಾಗಿದೆ ಮತ್ತು ಚಾರ್ ಧಾಮ್ ಯಾತ್ರೆಯ ಪ್ರಮುಖ ಭಾಗವಾಗಿದೆ. ಕೇದಾರನಾಥ ದೇವಾಲಯವು ಹಿಮಾಲಯದ ಮಡಿಲಲ್ಲಿದೆ ಮತ್ತು ಇಲ್ಲಿಗೆ ತೆರಳುವುದು ಒಂದು ಉತ್ತಮ ಅನುಭವ.

badrinath

ಬದರಿನಾಥ್

ಧಾರ್ಮಿಕ ಗ್ರಂಥಗಳ ಪ್ರಕಾರ, ಬದರಿನಾಥವನ್ನು ವಿಶಾಲಪುರಿ ಎಂದೂ ಕರೆಯುತ್ತಾರೆ. ಬದರಿನಾಥಕ್ಕೆ ಹೋಗುವ ಮಾರ್ಗದಲ್ಲಿಯೂ ಮಳೆಗಾಲದಲ್ಲಿ ಭೂಕುಸಿತ ಮತ್ತು ಪ್ರವಾಹದ ಅಪಾಯ ಹೆಚ್ಚು. ಈ ಮಾರ್ಗದಲ್ಲಿ ಪ್ರಯಾಣಿಸುವಾಗ ವಿಶೇಷ ಕಾಳಜಿ ವಹಿಸಿ ಮತ್ತು ಸರ್ಕಾರದ ಸಲಹೆಯನ್ನು ಅನುಸರಿಸಿ. ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ಬದರಿನಾಥ ಧಾಮವು ಹಿಂದೂ ಧರ್ಮದ ನಾಲ್ಕು ಧಾಮಗಳಲ್ಲಿ ಪ್ರಮುಖ ಯಾತ್ರಾಸ್ಥಳವಾಗಿದೆ. ಈ ಸ್ಥಳವು ವಿಷ್ಣುವಿಗೆ ಸಮರ್ಪಿತವಾಗಿದ್ದು, ಇಲ್ಲಿ ಭಗವಾನ್ ಶ್ರೀ ವಿಷ್ಣು ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದಾನೆ. ಮತ್ತಿದು ಸಮುದ್ರ ಮಟ್ಟದಿಂದ ಸುಮಾರು 3,300 ಮೀಟರ್ ಎತ್ತರದಲ್ಲಿ ಅಲಕನಂದಾ ನದಿಯ ದಡದಲ್ಲಿದೆ. ಬದರಿನಾಥ ಧಾಮಕ್ಕೆ ಪ್ರಯಾಣವು ಆಧ್ಯಾತ್ಮಿಕತೆ, ಸೌಂದರ್ಯ ಮತ್ತು ಪರಿಶುದ್ಧತೆಯ ವಿಶಿಷ್ಟ ಮಿಶ್ರಣವಾಗಿದೆ.

gangothri1

ಗಂಗೋತ್ರಿ

ಗಂಗೋತ್ರಿ ಮಾರ್ಗದಲ್ಲಿಯೂ ಮಳೆ, ಭೂಕುಸಿತದ ಭೀತಿ ಎದುರಾಗುತ್ತದೆ. ಈ ಮಾರ್ಗಗಳಲ್ಲಿ ಪ್ರಯಾಣಿಸುವ ಮೊದಲು, ಹವಾಮಾನದ ಬಗ್ಗೆ ಮಾಹಿತಿ ಪಡೆಯಿರಿ ಮತ್ತು ಸುರಕ್ಷಿತ ಮಾರ್ಗಗಳನ್ನು ಆಯ್ಕೆಮಾಡಿ. ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ಗಂಗೋತ್ರಿ ಧಾಮವು ಗಂಗಾ ನದಿಯ ಮೂಲ ಸ್ಥಳವೆಂದು ಪ್ರಸಿದ್ಧವಾಗಿದೆ. ಈ ಯಾತ್ರಾಸ್ಥಳವು ಚಾರ್ ಧಾಮ್ ಯಾತ್ರೆಯ ಅತ್ಯಗತ್ಯ ಭಾಗವಾಗಿದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಗಂಗೋತ್ರಿಯ ಭೇಟಿಯು ಆಧ್ಯಾತ್ಮಿಕ ಶಾಂತಿ, ಸೌಂದರ್ಯ ಮತ್ತು ಪರಿಶುದ್ಧತೆಯ ಅನುಭವವನ್ನು ನೀಡುತ್ತದೆ. ಇಲ್ಲಿಗೆ ಬರುವ ಭಕ್ತರು ದೇವಪ್ರಯಾಗದಲ್ಲಿ ಗಂಗಾಸ್ನಾನ ಮಾಡಿ ತಮ್ಮ ತಪ್ಪುಗಳಿಗಾಗಿ ಗಂಗಾ ಮಾತೆಯಲ್ಲಿ ಕ್ಷಮೆ ಕೇಳುವ ಮೂಲಕ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಾರೆ. ಗಂಗೋತ್ರಿಯನ್ನು ಗಂಗಾಮಾತೆಯ ಆರಾಧನೆಯ ಸ್ಥಳವೆಂದು ಪರಿಗಣಿಸಲಾಗಿದೆ. ಅಲ್ಲಿ ಗಂಗೆಯ ಪವಿತ್ರ ಜಲಧಾರೆಯನ್ನು ಪೂಜಿಸಲಾಗುತ್ತದೆ. ಗಂಗೋತ್ರಿಯಲ್ಲಿ ಪುರಾತನ ಗಂಗಾ ದೇವಾಲಯವೂ ಇದೆ. ಇದಲ್ಲದೇ ಗಂಗೋತ್ರಿಯ ಸುತ್ತಮುತ್ತ ಇನ್ನೂ ಅನೇಕ ಧಾರ್ಮಿಕ ಸ್ಥಳಗಳಿವೆ.

yamunothri

ಯಮುನೋತ್ರಿ

ಚಾರ್ ಧಾಮ್ ಯಾತ್ರೆಯಲ್ಲಿ ಎರಡನೇ ಪ್ರಮುಖ ಸ್ಥಳವೆಂದರೆ ಯಮುನೋತ್ರಿ. ಯಮುನೋತ್ರಿಯು ಯಮುನಾ ನದಿಯ ಮೂಲವಾಗಿದೆ. ಇದು ಉತ್ತರಕಾಶಿ ಜಿಲ್ಲೆಯ ಗರ್ವಾಲ್ ಹಿಮಾಲಯದಲ್ಲಿ 10,804 ಅಡಿ ಎತ್ತರದಲ್ಲಿದೆ. ಯಮುನೋತ್ರಿಯ ಮಾರ್ಗದಲ್ಲಿಯೂ ಮಳೆ ಮತ್ತು ಭೂಕುಸಿತದ ಅಪಾಯ ಹೆಚ್ಚು. ಈ ಮಾರ್ಗಗಳಲ್ಲಿ ಪ್ರಯಾಣಿಸುವ ಮೊದಲು, ಹವಾಮಾನದ ಬಗ್ಗೆ ಮಾಹಿತಿ ಪಡೆಯಿರಿ ಮತ್ತು ಸುರಕ್ಷಿತ ಮಾರ್ಗಗಳನ್ನು ಆಯ್ಕೆಮಾಡಿ. ಉತ್ತರಾಖಂಡದ ನಾಲ್ಕು ಧಾಮಗಳಲ್ಲಿ ಒಂದಾದ ಈ ಯಾತ್ರಾಸ್ಥಳವು ಕೇವಲ ಧಾರ್ಮಿಕ ಪ್ರಾಮುಖ್ಯತೆಯನ್ನು ಮಾತ್ರ ಹೊಂದಿಲ್ಲ, ಅದರ ಸೌಂದರ್ಯ ಮತ್ತು ಶಾಂತಿಯುತ ಪರಿಸರಕ್ಕೆ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿ ಯಮುನಾ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+