Search
  • Follow NativePlanet
Share
» »ಚಂದ್ರತಾಲ್: ಹುಣ್ಣಿಮೆ ಬೆಳಕಿನಲ್ಲಿ ಚಾರಣಕ್ಕೆ ಹೋಗಿದ್ದೀರಾ?

ಚಂದ್ರತಾಲ್: ಹುಣ್ಣಿಮೆ ಬೆಳಕಿನಲ್ಲಿ ಚಾರಣಕ್ಕೆ ಹೋಗಿದ್ದೀರಾ?

ಹಿಮಾಚಲ ಪ್ರದೇಶದಲ್ಲಿರುವ ಚಂದ್ರತಾಲದ ಬಗ್ಗೆ ಕೇಳಿದ್ದೀರಾ? ಹಿಮಾಚಲ ಪ್ರದೇಶದ ಸ್ಪಿತಿಯಲ್ಲಿರುವ ಚಂದ್ರತಾಲವು ಹಿಮಾವೃತ ಶಿಖರಗಳು ಮತ್ತು ಸುತ್ತಲಿನ ಹಸಿರುಮನೆಗಳ ನಡುವೆ ಕಂಡು ಬರುತ್ತದೆ. ಒಂದು ವೇಳೆ ನೀವು ಹಿಮಾಚಲ ಪ್ರದೇಶದಲ್ಲಿ ಯಾವುದಾದರೂ ಸಾಹಸಮಯ ತಾಣಗಳಿಗೆ ಹೋಗಬೇಕೆಂದಿದ್ದರೆ ಚಂದ್ರತಾಲಕ್ಕೆ ಹೋಗೋದನ್ನು ಮರೆಯಬೇಡಿ.

ಸಮುದ್ರಮಟ್ಟದಿಂದ ಎತ್ತರದಲ್ಲಿದೆ

ಸಮುದ್ರಮಟ್ಟದಿಂದ ಎತ್ತರದಲ್ಲಿದೆ

PC: Christopher L Walker

ಚಂದ್ರತಾಲಕ್ಕೆ ಹೋಗುತ್ತೀದ್ದೀರಿ ಎನ್ನುವ ಖುಷಿಯೇ ಆ ಸ್ಥಳವನ್ನು ಇನ್ನಷ್ಟು ಸುಂದರವನ್ನಾಗಿಸುತ್ತದೆ. ಸಮುದ್ರಮಟ್ಟದಿಂದ ಸುಮಾರು 4,300ಮೀ.ಎತ್ತರದಲ್ಲಿದೆ. ಇಲ್ಲಿಗೆ ತಲುಪಲು ಕುಂಜುಮ್‌ನಿಂದ ಡ್ರೈವ್ ಮಾಡಬೇಕು. ಇಲ್ಲಿನ ಕಠಿಣ ರಸ್ತೆಯಲ್ಲಿ ಡ್ರೈವ್ ಮಾಡಬೇಕಾದರೆ ಎಕ್ಸ್‌ಪರ್ಟ್ ಡ್ರೈವರ್‌ನಿಂದ ಮಾತ್ರ ಸಾಧ್ಯ. ಇಲ್ಲವಾದರೆ ನೀವು ಒಂದು ಕಿ.ಮೀ ಚಾರಣದ ಮೂಲಕ ಚಂದ್ರತಾಲವನ್ನು ತಲುಪಬಹುದು.

 ಟೆಂಟ್‌ನಲ್ಲಿ ಮಲಗುವುದು ಕಷ್ಟ

ಟೆಂಟ್‌ನಲ್ಲಿ ಮಲಗುವುದು ಕಷ್ಟ

ಬೆಳಂಬೆಳಗ್ಗೆ ಇಲ್ಲಿನ ದೃಶ್ಯ ಬಹಳ ಸುಂದರವಾಗಿರುತ್ತದೆ. ಹಿಮಾಲಯದ ಪರ್ವತಗಳ ನೆರಳು ನಿಮ್ಮ ಮೇಲೆ ಬೀಳುತ್ತದೆ. ಇನ್ನು ಇಲ್ಲಿ ರಾತ್ರಿ ಟೆಂಟ್‌ನಲ್ಲಿ ತಂಗುವುದು ಬಹಳ ಕಠಿಣಕರ. ಟೆಂಟ್‌ನಲ್ಲಿ ಮಲಗುವುದು ನೀವು ಹಿಮಾಲಯದ ಮಡಿಲಲ್ಲಿ ಮಲಗಿದಂತೆ ಭಾಸವಾಗುತ್ತದೆ.

ಇನ್ನುಮುಂದೆ ನಂದಿಹಿಲ್ಸ್‌ಗೆ ಒಂಟಿಯಾಗಿ ಹೋದ್ರೆ ಎಂಟ್ರಿ ಇಲ್ಲಇನ್ನುಮುಂದೆ ನಂದಿಹಿಲ್ಸ್‌ಗೆ ಒಂಟಿಯಾಗಿ ಹೋದ್ರೆ ಎಂಟ್ರಿ ಇಲ್ಲ

ಹುಣ್ಣಿಮೆಗೆ ಹೋಗುವುದು ಸೂಕ್ತ

ಹುಣ್ಣಿಮೆಗೆ ಹೋಗುವುದು ಸೂಕ್ತ

PC: Akshaymishra

ಚಂದ್ರತಾಲವು ಹೆಚ್ಚಾಗಿ ಫೋಟೋ ತೆಗೆಯಲು ಒಂದು ಉತ್ತಮ ತಾಣವಾಗಿದೆ. ಇಲ್ಲಿ ನೀವು ಒಮ್ಮೆ ಹೋದರೆ ಅಲ್ಲಿನ ಅನುಭವವನ್ನು ಜೀವನ ಪರ್ಯಂತ ಮರೆಯಲು ಸಾಧ್ಯವಾಗೋದಿಲ್ಲ. ನೀವು ಇಲ್ಲಿಗೆ ಭೇಟಿ ನೀಡುವುದಾದರೆ ಹುಣ್ಣಿಮೆಗೆ ಹೋಗುವುದು ಸೂಕ್ತ. ಆಗ ಅಲ್ಲಿ ಬೆಳದಿಂಗಳಲ್ಲಿ ಸ್ನಾನ ಮಾಡುವಂತೆ ಕಾಣುವ ಚಂದ್ರತಾಲದ ಸೌಂದರ್ಯ ನಿಮ್ಮನ್ನು ರೋಮಾಂಚನಗೊಳಿಸುತ್ತದೆ.

ಚಾರಣಿಗರಿಗೆ ಉತ್ತಮ ತಾಣ

ಚಾರಣಿಗರಿಗೆ ಉತ್ತಮ ತಾಣ

PC:Anaesthetist

ಚಾಂದ್ರ ತಾಲ್ ಚಾರಣಿಗರು ಮತ್ತು ಕ್ಯಾಂಪರ್‌ಗಳಿಗೆ ಉತ್ತಮ ಪ್ರವಾಸಿ ತಾಣವಾಗಿದೆ. ಈ ಸರೋವರವನ್ನು ಮೇ ಕೊನೆಯಿಂದ ಅಕ್ಟೋಬರ್ ಪ್ರಾರಂಭದಲ್ಲಿ ಬಟಾಲ್‌ನಿಂದ ಮತ್ತು ಕುನ್ಜುಮ್‌ನಿಂದ ಕಾಲ್ನಡಿಗೆಯಲ್ಲಿ ಪ್ರವೇಶಿಸಬಹುದು.

ಧೋನಿಯ ಹುಟ್ಟೂರು ರಾಂಚಿಯಲ್ಲಿ ಏನೆಲ್ಲಾ ವಿಶೇಷತೆ ಇದೆ ನೋಡಿದ್ದೀರಾ?ಧೋನಿಯ ಹುಟ್ಟೂರು ರಾಂಚಿಯಲ್ಲಿ ಏನೆಲ್ಲಾ ವಿಶೇಷತೆ ಇದೆ ನೋಡಿದ್ದೀರಾ?

ದಡದಲ್ಲಿ ಹುಲ್ಲುಗಾವಲುಗಳು

ದಡದಲ್ಲಿ ಹುಲ್ಲುಗಾವಲುಗಳು

ಸರೋವರದ ದಡದಲ್ಲಿರುವ ವಿಶಾಲ ಹುಲ್ಲುಗಾವಲುಗಳನ್ನು ಕ್ಯಾಂಪಿಂಗ್ ತಾಣಗಳಾಗಿ ಬಳಸಲಾಗುತ್ತದೆ. ವಸಂತ ಋತುವಿನಲ್ಲಿ, ಈ ಹುಲ್ಲುಗಾವಲುಗಳು ವನ್ಯಜೀವಿಗಳ ನೂರಾರು ಪ್ರಭೇದಗಳೊಂದಿಗೆ ನೆಲಹಾಸನ್ನು ಹೊಂದಿವೆ.

ಸೂರಜ್ ತಾಲ್‌

ಸೂರಜ್ ತಾಲ್‌

PC: Wiki-rjt

ಕುನ್ಜುಮ್ ಪಾಸ್ನಿಂದ ಚಂದ್ರ ತಾಲ್‌ ತಲುಪಲು ಸುಮಾರು 2 ಗಂಟೆಗಳು ತೆಗೆದುಕೊಳ್ಳುತ್ತದೆ. ಚಂದ್ರ ತಾಲ್ ಕೂಡ ಸೂರಜ್ ತಾಲ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿದೆ.

ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?

ತಲುಪುವುದು ಹೇಗೆ?

ತಲುಪುವುದು ಹೇಗೆ?

ನೀವು ದೆಹಲಿಯಿಂದ ಕುಲ್ಲು, ಮನಾಲಿ, ರೋಹ್ತಂಗ್ ಮೂಲಕ ಚಂದ್ರತಾಲವನ್ನು ತಲುಪಬಹುದಾಗಿದೆ. ಅಥವಾ ದೆಹಲಿಯಿಂದ ಶಿಮ್ಲಾ, ಕಾಜಾ, ಕುಂಜುಮ್ ಮೂಲಕ ಚಂದ್ರತಾಲವನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X