Search
  • Follow NativePlanet
Share
» »ಬುಲೆಟ್ ಬಾಬಾ ಮಹಿಮೆಯ ಬಗ್ಗೆ ನಿಮಗೆಷ್ಟು ಗೊತ್ತು?

ಬುಲೆಟ್ ಬಾಬಾ ಮಹಿಮೆಯ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ದೇಶದಲ್ಲಿ ಮೂರು ಕೋಟಿ ದೇವತೆಗಳಿದ್ದಾರೆ. ನಮಗೆ ಕಷ್ಟಗಳು ಬಂದು ಒದಗಿದರೆ ಸಂಕಟದಲ್ಲಿದ್ದಾಗ ವೆಂಕಟ ರಮಣನೆಂಬಂತೆ ದೇವಾಲಯಗಳಿಗೆ ಭೇಟಿ ನೀಡಿ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಸ್ವಚ್ಚವಾದ ಮನಸ್ಸಿನಿಂದ ಕೇಳಿಕೊಳ್ಳುತ್ತೇವೆ. ಈ ದೇವಾಲಯಗಳ

ನಮ್ಮ ದೇಶದಲ್ಲಿ ಮೂರು ಕೋಟಿ ದೇವತೆಗಳಿದ್ದಾರೆ. ನಮಗೆ ಕಷ್ಟಗಳು ಬಂದು ಒದಗಿದರೆ ಸಂಕಟದಲ್ಲಿದ್ದಾಗ ವೆಂಕಟ ರಮಣನೆಂಬಂತೆ ದೇವಾಲಯಗಳಿಗೆ ಭೇಟಿ ನೀಡಿ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಸ್ವಚ್ಚವಾದ ಮನಸ್ಸಿನಿಂದ ಕೇಳಿಕೊಳ್ಳುತ್ತೇವೆ. ಈ ದೇವಾಲಯಗಳ ಬಗ್ಗೆ ಬಿಡಿ. ಸಾಮಾನ್ಯವಾಗಿ ಈಗಿನ ಯುವಕರಿಗೆ ಬುಲೆಟ್ ಗಾಡಿ ಎಂದರೆ ಪಂಚ ಪ್ರಾಣ. ಎದೆ ನಡುಗಿಸುವಂತೆ ಡ್ರೆವಿಂಗ್ ಮಾಡಬೇಕು ಹೆಣ್ಣು ಮಕ್ಕಳ ಗಮನವನ್ನು ಸೆಳೆಯಬೇಕು ಎಂದು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ.

ಬುಲೆಟ್ ಗಾಡಿಯ ಮೇಲೆ ಆಸೆ ಇರುವವರು ಖಂಡಿತವಾಗಿಯೂ ಈ ಲೇಖನವನ್ನು ಓದಲೇಬೇಕು. ಅದೆನೆಂದರೆ ಈ ಮೂರು ಕೋಟಿ ಜನರ ಮಧ್ಯೆ ಇಲ್ಲೋಂದು ಸ್ವಲ್ಪ ವಿಭಿನ್ನವಾದ ಬಾಬಾ ಇದ್ದಾನೆ. ಆ ಬಾಬಾ "ಬುಲೆಟ್ ಬಾಬಾ". ಬುಲೆಟ್ ಗಾಡಿಗೂ ಬಾಬಾ ಇದ್ದಾರೆಯೇ ಎಂದು ಆಶ್ಚರ್ಯಗೊಳ್ಳಬೇಡಿ. ಬುಲೆಟ್ ಗಾಡಿಯೇ ಬಾಬಾ.

ರಾಜಸ್ಥಾನ ದಲ್ಲಿರುವ ಈ ಬುಲೆಟ್ ಬಾಬಾನನ್ನು ಅಲ್ಲಿನ ಸ್ಥಳೀಯ ಜನ ಶ್ರದ್ಧೆ, ಭಕ್ತಿಯಿಂದ ಪೂಜಿಸಿಸುತ್ತಾರೆ. ನಾವು ಇದುವರೆವಿಗೂ ಪ್ರಾಣಿಗಳಿಗೆ, ಮಾನವರಿಗೆ ದೇವರು ಎಂದು ಪೂಜಿಸುವ ಪಾರಿಪಾಠವಿದೆ. ಇಂತಹ ವಿಭಿನ್ನವಾದ ದೇವರಿಗೂ ನಮ್ಮ ಜನರು ಪೂಜಿಸುತ್ತಿರುವುದನ್ನು ಕಾಣಬಹುದಾಗಿದೆ.

ಪ್ರಸ್ತುತ ಲೇಖನದಲ್ಲಿ ಈ ಬುಲೆಟ್ ಬಾಬಾ ಮಹಿಮೆಯ ಬಗ್ಗೆ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಮೂರು ಕೋಟಿ ದೇವರುಗಳಲ್ಲಿ 350 ಸಿಸಿ ರಾಯಲ್ ಎನ್ಫಿಲ್ಡ್ ಬುಲೆಟ್ ದೇವರು ಕೂಡ ಒಬ್ಬ. ಈ ದೇವಾಲಯವು ರಾಜಸ್ಥಾನ ರಾಜ್ಯದ ಚೋಟಿಲಾ ಎಂಬ ಗ್ರಾಮದಲ್ಲಿ ಜೋದಾಪುರ ನಗರಕ್ಕೆ ಸುಮಾರು 50 ಕಿ,ಮೀ ದೂರದಲ್ಲಿ ಈ ದೇವಾಲಯವಿದೆ.

350 ಸಿಸಿ ರಾಯಲ್ ಎನ್ಫಿಲ್ಡ್ ಬುಲೆಟ್

350 ಸಿಸಿ ರಾಯಲ್ ಎನ್ಫಿಲ್ಡ್ ಬುಲೆಟ್

ಈ 350 ಸಿಸಿ ರಾಯಲ್ ಎನ್ಫಿಲ್ಡ್ ಬುಲೆಟ್ ದೇವರು ರಸ್ತೆ ಅಪಘಾತದಿಂದ ಕಾಪಾಡುತ್ತದೆ ಎಂತೆ. ಹಾಗಾಗಿ ಇಲ್ಲಿ ಸ್ಥಳೀಯರು ಈ ಬುಲೆಟ್ ಬಾಬಾನನ್ನು ಭಕ್ತಿಯಿಂದ ಪೂಜಿಸುತ್ತಾರಂತೆ.

ಭಕ್ತರು

ಭಕ್ತರು

ಬೈಕ್ ಸವಾರ ಭಕ್ತರು ಬೈಕ್ ನಡೆಸುವಾಗಲೆಲ್ಲಾ ಯಾವುದೇ ರ್ದುಘಟನೆಯಾಗದಂತೆ ರಕ್ಷಿಸು ಎಂದು ಬುಲೆಟ್ ಬಾಬಾನನ್ನು ಕೇಳಿಕೋಳ್ಳುತ್ತಾರಂತೆ. ಈ ಬಾಬಾಗೆ ಪ್ರಾರ್ಥನೆ ಸಲ್ಲಿಸಿಯೇ ತರುವಾಯ ಡ್ರೈವರ್‍ಗಳು ತಮ್ಮ ಪ್ರಯಾಣವನ್ನು ಆರಂಭಿಸುತ್ತಾರಂತೆ.

ನೈವೇದ್ಯ

ನೈವೇದ್ಯ

ಹಲವಾರು ಪ್ರಾಣವನ್ನು ರಕ್ಷಿಸುವ ಈ ದೇವತಾ ಮೂರ್ತಿಗೆ ಇಲ್ಲಿ ಒಂದು ಬಾಟಲ್ ಲಿಕ್ಕರ್ ಕೂಡ ಈ ದೇವಾಲಯದಲ್ಲಿ ನೈವೇದ್ಯವಾಗಿ ಅರ್ಪಿಸಿರುತ್ತಾರೆ. ಹೀಗೆ ನೈವೇದ್ಯ ಬುಲೆಟ್ ಬಾಬಾಗೆ ಅರ್ಪಿಸಿದರೆ ಗ್ರಾಮಸ್ಥರನ್ನು ಸುರಕ್ಷಿತವಾಗಿ ಕಾಪಾಡುತ್ತದೆ ಎಂದು ಗ್ರಾಮಸ್ಥರು ನಂಬುತ್ತಾರೆ.

ಶಬ್ದ

ಶಬ್ದ

ಈ ದೇವನಿಗೆ ನೈವೇದ್ಯವನ್ನು ಸರ್ಮಪಿಸುವ ಸಮಯದಲ್ಲಿ ವಾಹನಗಾರರು ತಮ್ಮ ವಾಹನದ ಹಾರ್ನ್‍ನನ್ನು ವಿಪರೀತವಾಗಿ ಶಬ್ದ ಮಾಡುತ್ತಾರೆ.

ಅಪಘಾತ

ಅಪಘಾತ

ಇದು ಮೂಢ ನಂಬಿಕೆ ಎಂದು ಕೊಂಡು ಈ ಬಾಬಾ ದೇವಾಲಯದ ಮುಂದೆ ಹಾದು ಹೋದವರಿಗೆ ಹಾಗೂ ಪೂಜೆ ಮಾಡದಯೇ ಹಾದು ಹೋದವರಿಗೆ ಹಲವಾರು ಅಪಘಾತಗಳಾಗಿರುವ ನಿರ್ದಶವಿದೆ.

ಚೋಟಿಲಾ ಗ್ರಾಮ

ಚೋಟಿಲಾ ಗ್ರಾಮ

ಚೋಟಿಲಾ ಗ್ರಾಮದಲ್ಲಿರುವ ಈ ಬೈಕಿಗೆ ಚರಿತ್ರೆ ಇದೆ. ಈ ಬೈಕ್ ಚೆನ್ನಾಗಿ ಬಾಳಿದ ಕುಟುಂಬದ ಓಂ ಸಿಂಗ್ ರಾಥೋರ್‍ಗೆ ಸೇರಿದ್ದ ಬೈಕ್ ಆಗಿದೆ.

ಬೈಕ್

ಬೈಕ್

1988ರಲ್ಲಿ ನಡೆದ ಒಂದು ದುರಂತ ಅಪಘಾತದಲ್ಲಿ ರಾಥೋರ್ ಈ ಬೈಕಿನಿಂದ ಮರಕ್ಕೆ ಡಿಕ್ಕಿ ಹೊಡೆದನು. ನಂತರ ರಾಥೋರ್ ಅಲ್ಲಿಯೇ ಮರಣಿಸಿದನು.

ರಹಸ್ಯ

ರಹಸ್ಯ

ಬೈಕ್ ಮರದ ಹತ್ತಿರ ಬಿದ್ದಿದ್ದನ್ನು ಕಂಡು ಸ್ಥಳೀಯ ಪೋಲಿಸರು ಅದನ್ನು ಪೊಲೀಸ್ ಸ್ಟೇಷನ್ನಿಗೆ ತೆಗೆದುಕೊಂಡು ಬಂದರು. ಈಗಲೇ ರಹಸ್ಯ ಒಂದೊಂದೆ ಪ್ರಾರಂಭವಾಗುತ್ತದೆ.

ಪ್ರತ್ಯಕ್ಷ

ಪ್ರತ್ಯಕ್ಷ

ಪೊಲೀಸ್ ಸ್ಟೇಷನ್‍ಗೆ ತೆಗೆದುಕೊಂಡು ಬಂದಿದ್ದ ಗಾಡಿ ಮಾಯವಾಗಿತ್ತು. ಬದಲಾಗಿ ಆ ಮರದ ಸ್ಥಳದಲ್ಲಿ ಅದೇ ಸ್ಥಿತಿಯಲ್ಲಿ ಪ್ರತ್ಯಕ್ಷವಾಗುತ್ತಿತ್ತು.

ಫುಲ್ ಟ್ಯಾಂಕ್

ಫುಲ್ ಟ್ಯಾಂಕ್

ಪೋಲಿಸ್ ಸ್ಟೇಷನ್ನಿಗೆ ತಂದಾಗ ಫುಲ್ ಟ್ಯಾಂಕ್ ಖಾಲಿ ಮಾಡಿ ಒಂದು ಭದ್ರವಾದ ಚೈನ್ ಹಾಕಿ ಲಾಕ್ ಮಾಡಿದರೂ ಕೂಡ ಅಪಘಾತವಾಗಿದ್ದ ಸ್ಥಳಕ್ಕೆ ಅದೇ ಸ್ಥಿತಿಯಲ್ಲಿ ಕಾಣುತ್ತಿತಂತೆ.

ಮಾರಾಟ ಮಾಡಿದರು

ಮಾರಾಟ ಮಾಡಿದರು

ಇದನ್ನು ಒಂದು ನಿಗೂಢವಾಗಿ ಭಾವಿಸಿದ ಪೊಲೀಸರು ಈ ಬೈಕ್ ಅನ್ನು ಕುಟುಂಬ ಸಭ್ಯರಿಗೆ ಒಪ್ಪಿಸಿದರು. ಆದರೆ ಆ ಕುಟುಂಬದವರು ಗುಜರಾತ್‍ನಲ್ಲಿನ ಒಬ್ಬ ವ್ಯಕ್ತಿಗೆಮಾರಾಟ ಮಾಡಿದರು.

ಅಪಘಾತ ಸ್ಥಳ

ಅಪಘಾತ ಸ್ಥಳ

ಗುಜರಾತ್‍ನ ವ್ಯಕ್ತಿಗೆ ಈ ಬೈಕ್ ಮಾರಿದ್ದರೂ ಕೂಡ ಅದು ಮತ್ತೇ ಅಪಘಾತವಾದ ಸ್ಥಳಕ್ಕೆ ತಲುಪುತ್ತಿತ್ತಂತೆ. ಇಂತಹ ಹಲವಾರು ಮಹಿಮೆಗಳನ್ನು ಈ ಬೈಕು ಮಾಡುತ್ತಿತ್ತು.

 ಗ್ರಾಮಸ್ಥರು

ಗ್ರಾಮಸ್ಥರು

ಹಾಗಾಗಿ ಸ್ಥಳೀಯ ಗ್ರಾಮಸ್ಥರು ಆ ಬೈಕ್ ಅನ್ನು ಒಂದು ನಿರ್ಜನವಾದ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಿ. ಪೂಜೆಗಳನ್ನು ಮಾಡಲು ಮುಂದಾದರು. ಪ್ರತಿ ವರ್ಷ ಇಲ್ಲಿಗೆ ಬರುವ ಭಕ್ತರು ದಿನೇ ದಿನೇ ಅಧಿಕವಾಗುತ್ತಿದ್ದಾರೆ.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಬುಲೆಟ್ ಬಾಬಾ ದೇವಾಲಯಕ್ಕೆ ಸಮೀಪವಾದ ವಿಮಾನ ನಿಲ್ದಾಣವೆಂದರೆ ಜೋಧಾ ಏರ್ಪೋಟ್. ಇಲ್ಲಿಂದ ಬುಲೆಟ್ ಬಾಬಾ ದೇವಾಲಯಕ್ಕೆ ಸುಮಾರು 51 ಕಿ,ಮೀ ದೂರದಲ್ಲಿದೆ.

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ಬುಲೆಟ್ ಬಾಬಾ ದೇವಾಲಯಕ್ಕೆ ಸಮೀಪವಾದ ರೈಲ್ವೆ ನಿಲ್ದಾಣವೆಂದರೆ ಪಾಲಿ ರೈಲ್ವೆ ಸ್ಟೇಷನ್. ಇಲ್ಲಿಂದ ಬಾಬಾ ದೇವಾಲಯಕ್ಕೆ ಸುಮಾರು 20 ಕಿ,ಮೀ ದೂರದಲ್ಲಿದೆತೀ ರೈಲ್ವೆಯು ದೆಹಲಿ, ಆಗ್ರಾ, ಮುಂಬೈ, ಚೆನ್ನೈ, ಪಾಲಿ, ಜೈಪುರ್, ಅಹೆಮದಾಬಾದ್‍ಗಳ ಮಾರ್ಗವಾಗಿ ಚಲಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X