Search
  • Follow NativePlanet
Share
» »ಅನಿಷ್ಟವಾದ ಪದ್ಧತಿ ಸ್ತನ ತೆರಿಗೆ ಯಾವ ರಾಜ್ಯದಲ್ಲಿ ಚಾಲನೆಯಲ್ಲಿತ್ತು ಗೊತ್ತ?

ಅನಿಷ್ಟವಾದ ಪದ್ಧತಿ ಸ್ತನ ತೆರಿಗೆ ಯಾವ ರಾಜ್ಯದಲ್ಲಿ ಚಾಲನೆಯಲ್ಲಿತ್ತು ಗೊತ್ತ?

ಮೇಲ್ ಜಾತಿಯವರು ಕೆಳಜಾತಿಯವರ ಮೇಲೆ ಹಲವಾರು ಹಿಂಸೆಗಳನ್ನು ನೀಡಿ ಪೈಶಾಚಿಕತೆ ಮೆರೆದರು.ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಾಗದೇ ಇರಲು ಹಲವಾರು ತೆರಿಗೆಗಳನ್ನು ವಿಧಿಸಿದರು. ಅಂತಹ ಅನಾಗರೀಕವಾದ ತೆರಿಗೆಗಳಲ್ಲಿ ಸ್ತನ ತೆರಿಗೆ ಕೂಡ ಒ

ಈ ಭೂಮಿಯಲ್ಲಿ ಮನುಷ್ಯ ಹುಟ್ಟಿನಿಂದ ಮೇಲು-ಕೀಳು ಎಂಬ ಅನಿಷ್ಟವಾದ ಪದ್ಧತಿಗಳನ್ನು ಜಾರಿಗೆ ತಂದರು. ಉನ್ನತ ಜಾತಿಯವರು ಕೆಳ ಜಾತಿಯವರ ಮೇಲೆ ಅಧಿಪತ್ಯ ಸಾಧಿಸಲು ಎಷ್ಟೋ ಪ್ರಯತ್ನವನ್ನು ಮಾಡಿದ್ದಾರೆ. ಮೇಲ್ ಜಾತಿಯವರು ಕೆಳಜಾತಿಯವರ ಮೇಲೆ ಹಲವಾರು ಹಿಂಸೆಗಳನ್ನು ನೀಡಿ ಪೈಶಾಚಿಕತೆ ಮೆರೆದರು.

ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಾಗದೇ ಇರಲು ಹಲವಾರು ತೆರಿಗೆಗಳನ್ನು ವಿಧಿಸಿದರು. ಅಂತಹ ಅನಾಗರೀಕವಾದ ತೆರಿಗೆಗಳಲ್ಲಿ ಸ್ತನ ತೆರಿಗೆ ಕೂಡ ಒಂದು. ಈ ತೆರಿಗೆಯು ಅತ್ಯಂತ ಹೀನವಾದ ಹಾಗೂ ಅಮಾನುಷವಾದ ಪದ್ಧತಿ ಇದಾಗಿತ್ತು. ಈ ಅನಿಷ್ಟವಾದ ಪದ್ದತಿಯು ಪೂರ್ವ ಕೇರಳದ ತ್ರಾವೆಲ್ ಪೂರ್ವ್ ಸಂಸ್ಥಾನ ಈ ಪದ್ಧತಿಯನ್ನು ಜಾರಿಗೆ ತಂದಿತ್ತು ಎನ್ನಲಾಗಿದೆ.

ಪ್ರಸ್ತುತ ಲೇಖನದಲ್ಲಿ ಕೇರಳದ ಈ ಅಮಾನುಷ ಪದ್ಧತಿಯ ಬಗ್ಗೆ ತಿಳಿಯೋಣ.

ತ್ರಾವೆಲ್ ಪೂರ್ವ್ ಸಂಸ್ಥಾನ

ತ್ರಾವೆಲ್ ಪೂರ್ವ್ ಸಂಸ್ಥಾನ

ಕೇರಳದ ಈ ತ್ರಾವೆಲ್ ಪೂರ್ವ್ ಸಂಸ್ಥಾನವು ಕೆಳ ಜಾತಿಯವರ ಮೇಲೆ ಸ್ತನ ತೆರಿಗೆಯನ್ನು ಗಂಡಸರು ಹಾಗೂ ಹೆಂಗಸರ ಮೇಲು ವಿಧಿಸಿದ್ದರು.


PC:YOUTUBE

ಸ್ತನ ತೆರಿಗೆ ಎಂದರೆ ಎನು?

ಸ್ತನ ತೆರಿಗೆ ಎಂದರೆ ಎನು?

ಈ ಸ್ತನ ತೆರಿಗೆ ಎಂದರೆ ಕೆಳ ಜಾತಿಯವರು ಎದೆಯ ಮೇಲೆ ಯಾವುದೇ ರೀತಿ ಉಡುಪುಗಳಿಂದ ಮುಚ್ಚಿಕೊಳ್ಳದೇ ಬಹಿರಂಗ ಪ್ರದೇಶಗಳಲ್ಲಿ ಓಡಾಡುವುದಾಗಿದೆ. ಹಾಗೊಮ್ಮೆ ಸ್ತನವನ್ನು ಬಟ್ಟೆಯಿಂದ ಮುಚ್ಚಿಕೊಂಡರೆ ಅಂತಹವರ ಮೇಲೆ ಅಮಾನುಷವಾಗಿ ವರ್ತಿಸಲಾಗುತ್ತಿತ್ತು.


PC:YOUTUBE

ತೆರಿಗೆ ವಿಧಿಸುವುದು

ತೆರಿಗೆ ವಿಧಿಸುವುದು

ಸ್ತನ ತೆರಿಗೆ ಎಂದರೆ ಮಹಿಳೆಯರ ಸ್ತನಗಳ ಗಾತ್ರದ ಪ್ರಕಾರ ಈ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಇದು ಸ್ರೀ ಜಾತಿಗೆ ಅವಮಾನ ತರುವಂತಹ ಪದ್ದತಿಯೇ ಆಗಿತ್ತು.


PC:YOUTUBE

ಬಹಿರಂಗ ಪ್ರದೇಶ

ಬಹಿರಂಗ ಪ್ರದೇಶ

ಕೆಳ ಜಾತಿಯವರ ಮಹಿಳೆಯರೇ ಆಗಲಿ ಪುರಷರೇ ಆಗಲಿ ಎದೆಯ ಭಾಗದ ಮೇಲೆ ಉಡುಪನ್ನು ಧರಿಸದೇ ಬಹಿರಂಗ ಪ್ರದೇಶದಲ್ಲಿ ಓಡಾಡಬೇಕಾಗಿತ್ತು. ಇದಕ್ಕೆ ನಿರಾಕರಿಸಿದರೆ ಕಠಿಣವಾದ ದಂಡವನ್ನು ತೆರಬೇಕಾಗಿತ್ತು.

PC:YOUTUBE

ಮುಳಕರಂ

ಮುಳಕರಂ

ಕೆಳ ಜಾತಿಯವರ ಮೇಲೆ ವಿಧಿಸುತ್ತಿದ್ದ ಈ ತೆರಿಗೆಯನ್ನು ಕೇರಳದಲ್ಲಿ ಮುಳಕರಂ ಎಂದು ಕರೆಯುತ್ತಿದ್ದರು.

PC:YOUTUBE

ಅತ್ಯಾಚಾರ

ಅತ್ಯಾಚಾರ

ತೆರಿಗೆ ವಸುಲಿ ಮಾಡುವ ನೆಪದಲ್ಲಿ ಅಧಿಕಾರಗಳೇ ಕೆಳ ಜಾತಿಯ ಮಹಿಳೆಯ ಮೇಲೆ ಅತ್ಯಾಚಾರ ಮಾಡುತ್ತಿದ್ದರು. ಇದರಿಂದ ಆ ಮಹಿಳೆಯರ ಮಾನವನ್ನು ಅಧಿಕಾರಿಗಳೇ ನಾಶಪಡಿಸುತ್ತಿದ್ದರಂತೆ.


PC:YOUTUBE

ಮೇಲ್ ಜಾತಿ

ಮೇಲ್ ಜಾತಿ

ಮೇಲ್ ಜಾತಿಯವರು ಮಾಡುತ್ತಿರುವ ಈ ಅನಾಚಾರ ಪದ್ಧತಿಯ ಮೇಲೆ ಕೋಪವಿದ್ದರು ಕೊಡ, ಅವರ ಧನ ಹಾಗೂ ಅಧಿಕಾರದ ಬಲದ ಮುಂದೆ ತಲೆಬಾಗಲೇ ಬೇಕಾಗಿತ್ತು. ಅದೆಷ್ಟೂ ಮಹಿಳೆಯರು ಮೌನವಾಗಿ ರೋದಿಸುತ್ತಿದ್ದರಂತೆ.

PC:YOUTUBE

ಪಾಲಿಸದಿದ್ದರೆ

ಪಾಲಿಸದಿದ್ದರೆ

ಈ ನಿಯಮವನ್ನು ಪಾಲಿಸದಿದ್ದರೆ ಹಲವಾರು ರೀತಿಗಳಲ್ಲಿ ಹಿಂಸಿಸಿ ಕೊಲ್ಲುತ್ತಿದ್ದರಂತೆ. ಹೀಗಾಗಿ ಎಷ್ಟೇ ನೀಚವಾದ ಪದ್ಧತಿಯಾದರೂ ಅನುಸರಿಸದೇ ಗತ್ಯಂತರವಿರಲಿಲ್ಲ.


PC:YOUTUBE

ನಂಗೇಲಿ

ನಂಗೇಲಿ

ತ್ರಾವೆಲ್ ಪೂರ್ವ್ ಸಂಸ್ಥಾನಕ್ಕೆ ಸಂಬಂಧಿಸಿದ ಚತ್ತಲ ಎಂಬ ಗ್ರಾಮದಲ್ಲಿ ಈಕೆ ಕೆಳಜಾತಿಯ ಮಹಿಳೆಯಾಗಿದ್ದಳು. ನಂಗೇಲಿಯು ಈ ಹೀನ ಪದ್ಧತಿಯನ್ನು ಬಹಿಷ್ಕರಿಸುತ್ತಿದ್ದು ಒಬ್ಬ ಹೋರಾಟಗಾರ್ತಿಯಾಗಿದ್ದಳು.

PC:YOUTUBE

ಪ್ರಶ್ನೇ

ಪ್ರಶ್ನೇ

ನಂಗೇಲಿ ಸಂಪೂರ್ಣವಾಗಿ ಈ ಸ್ತನ ಪದ್ಧತಿಯ ವಿರುದ್ಧವಾಗಿದ್ದಳು. ಮೇಲ್‍ಜಾತಿಯ ಮಹಿಳೆಯರಂತೆ ನಾವು ಮಹಿಳೆಯರಲ್ಲವೇ ಆದರೆ ನಮಗೆಕೇ ಇಂದಹ ಅಮಾನುಷ ಶಿಕ್ಷೆ ಎಂದು ಪ್ರಶ್ನಿಸಿದ ಮೊದಲ ಮಹಿಳೆಯಾಗಿದ್ದಳು. ಇದಕ್ಕೆ ನಂಗೇಲಿಯ ಪತಿಯು ಕೈಜೋಡಿಸಿದನು.

PC:YOUTUBE

ಬಹಿರಂಗ

ಬಹಿರಂಗ

ನಂಗೇಲಿ ಬಹಿರಂಗ ಪ್ರದೇಶಗಳಲ್ಲೂ ತನ್ನ ಸ್ತನವನ್ನು ಉಡುಪುಗಳಿಂದ ಮುಚ್ಚಿಕೊಂಡು ಓಡಾಡುವುದು ಹಾಗೂ ಇನ್ನಿತರ ಕೆಳಜಾತಿಯರ ಮಹಿಳೆಯರಿಗೂ ಉಡುಪು ಧರಿಸುವಂತೆ ಬಹಿರಂಗ ಪ್ರದೇಶಕ್ಕೆ ಬರಲು ಪ್ರೋತ್ಸಾಹಿಸುವುದು ಮಾಡುತ್ತಿದ್ದಳು.

PC:YOUTUBE

ಸಂಸ್ಥಾನ

ಸಂಸ್ಥಾನ

ನಂಗೇಲಿ ಈ ವರ್ತನೆಯಿಂದ ಕೋಪಗೊಂಡ ಸಂಸ್ಥಾನವು ನಂಗೇಲಿಯನ್ನು ಹಾಗೂ ಅವಳ ಸಂಗಡಿಗರನ್ನು ಬಂಧಿಸಿ ತರುವಂತೆ ಅಜ್ಞೆ ಮಾಡಲಾಯಿತು. ಹಾಗೇಯೆ ಸಂಸ್ಥಾನದ ಒಂದು ಕೋಣೆಯಲ್ಲಿ ನಂಗೇಲಿ, ಅವಳ ಪತಿ ಹಾಗೂ ಕೆಲವು ದಲಿತ ಪ್ರಜೆಗಳನ್ನು ಬಂಧಿಸಿದ್ದರು.

PC:YOUTUBE

ಸ್ತನವನ್ನು ಕತ್ತರಿಸಿ ಕೊಟ್ಟ ನಂಗೇಲಿ

ಸ್ತನವನ್ನು ಕತ್ತರಿಸಿ ಕೊಟ್ಟ ನಂಗೇಲಿ

ನಂಗೇಲಿಯು ತನ್ನ ಸ್ತನಗಳನ್ನು ಕತ್ತರಿಸಿ "ಈ ಮಾಂಸದ ಮುದ್ಧೆಯ ಮೇಲೆಯೇ ಅಲ್ಲವೇ ನಿಮಗೆ ಚಿಂತೆ ತೆಗೆದುಕೊಳ್ಳಿ" ಎಂದು ಅಧಿಕಾರಿಗಳ ಮುಖಕ್ಕೆ ಎಸೆದಳಂತೆ. ಇದನ್ನು ಕಂಡ ಅಧಿಕಾರಿಗಳು ಭಯದಿಂದ ಅಲ್ಲಿಂದ ಓಡಿಹೋದರು.

PC:YOUTUBE

ಕೊನೆ ಉಸಿರೆಳೆದ ನಂಗೇಲಿ

ಕೊನೆ ಉಸಿರೆಳೆದ ನಂಗೇಲಿ

ಸ್ತನಗಳನ್ನು ಕತ್ತರಿಸಿದ ನಂಗೇಲಿ ರಕ್ತದ ಮಡುವಿನಲ್ಲಿ ಬಿದ್ದು ನರಳಿ ತನ್ನ ಪ್ರಾಣವನ್ನು ಹೋರಾಟಗಾರ್ತಿಯಾಗಿ ಕೊನೆ ಉಸಿರೆಳೆದಳು.

PC:YOUTUBE

ನಂಗೇಲಿಯ ಪತಿ

ನಂಗೇಲಿಯ ಪತಿ

ತನ್ನ ಪತ್ನಿ ನಂಗೇಲಿ ನರಳಿ ಕೊನೆ ಉಸಿರೆಳೆದ ದೃಶ್ಯವನ್ನು ಕಂಡ ಪತಿಯು ಪತ್ನಿಯ ಚಿತೆಗೆ ಹಾರಿ ಪ್ರಾಣವನ್ನು ಅರ್ಪಿಸಿದನಂತೆ. ಈ ಉರಿಯುತ್ತಿರುವ ಜ್ವಾಲೆಯು ಪ್ರತಿ ಕೆಳ ಜಾತಿವರ ಹೃದಯದಲ್ಲಿ ಈ ಅನಿಷ್ಟ ಪದ್ಧತಿಯನ್ನು ನಾಶ ಪಡಿಸಲು ಮುಂದಾದರು. ಕೊನೆಗೆ ಎಲ್ಲಾ ದಲಿತ ಪ್ರಜೆಗಳು ಒಂದಾಗಿ ಈ ಸ್ತನ ತೆರಿಗೆಯನ್ನು ರದ್ದು ಮಾಡಿದರು.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X