• Follow NativePlanet
Share
» »3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

Written By:

ಕೇರಳ ರಾಜ್ಯದ ಪ್ರವಾಸ ಜೀವನದಲ್ಲಿ ಎಂದು ಮರೆಯಲಾಗದಂಹುದು. ಹಚ್ಚ ಹಸಿರಿನ ಪ್ರದೇಶಗಳು, ಕೊಬ್ಬರಿ ತೋಟಗಳು, ಸುಂದರವಾದ ಬೀಚ್‍ಗಳು, ಆಹ್ಲಾದಕರವಾದ ವಾಟರ್ ಗೇಮ್ಸ್, ಅನೇಕ ದೇವಾಲಯಗಳು, ಆರ್ಯವೇದ ವೈದ್ಯ, ನಿರ್ಮಲವಾದ ನದಿಗಳು, ಸಮುದ್ರದ ಪ್ರಶಾಂತತೆ ಮೊದಲಾದ ಪ್ರಮುಖ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು. ಯಾವೊಂದು ಆಕರ್ಷಣೆ ನೋಡದಿದ್ದರೂ ಕೇರಳದ ಪ್ರವಾಸ ಪೂರ್ತಿಯಾಗುವುದಿಲ್ಲ.

ಕೇರಳ ರಾಜ್ಯಕ್ಕೆ ತನ್ನದೇ ಆದ ಸಂಸ್ಕøತಿ, ಭಾಷೆಯನ್ನು ಹೊಂದಿದೆ. ಕೇರಳದಲ್ಲಿ ಮುಖ್ಯವಾಗಿ ಕಾಸರ್ ಗೋಡ್, ಕನ್ನೂರ್, ವಯನಾಡ್, ಕೋಜಿಕೋಡ್, ಮಲಪ್ಪುರಂ, ಪಲಕ್ಕಾಡ್, ತ್ರಿಸ್ಸೂರ್, ಎರ್ನಾಕುಳಂ, ಇಡುಕ್ಕಿ, ಕೊಟ್ಟಾಯಂ, ಅಲೆಪ್ಪಿ, ಪಾತನಂತಿಟ್ಟ, ಕೊಲ್ಲಂ, ತಿರುವನಂತಪುರ ಎಂಬ 14 ಜಿಲ್ಲೆಗಳಿವೆ. ಇಲ್ಲಿ ಅನೇಕ ಪ್ರವಾಸಿ ತಾಣಗಳು ಇವೆ. ಈ ಸ್ಥಳದಲ್ಲಿ ಒಂದು ಮಹಿಮಾನ್ವಿತವಾದ ದೇವಾಲಯವಿದೆ. ಆ ದೇವಾಲಯದ ಬಗ್ಗೆ ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದಲ್ಲಿ, ಅತ್ಯಂತ ದಟ್ಟವಾದ ಅರಣ್ಯ ಪ್ರದೇಶದಲ್ಲಿ ತಿರುನೆಲ್ಲಿ ಶ್ರೀ ಮಹಾವಿಷ್ಣುವಿನ ದೇವಾಲಯವಿದೆ. ಇದು ಕೇರಳದ ಬ್ರಹ್ಮಗಿರಿ ಪರ್ವತದಲ್ಲಿ ಎಷ್ಟೊ ಅದ್ಭುತವಾದ ಪ್ರಕೃತಿ ಒಡಿಲಿನಲ್ಲಿ ಸ್ವಾಮಿಯು ನೆಲೆಸಿದ್ದಾನೆ. ಸುತ್ತಲೂ ಬೆಟ್ಟಗಳು, ದಟ್ಟವಾದ ಅರಣ್ಯ ಪ್ರದೇಶದಲ್ಲಿ ವಯಾನಂದ್ ಕಣಿವೆಯಲ್ಲಿ ಈ ಮಹಾವಿಷ್ಣುವಿನ ಅತಿ ಪುರಾತನವಾದ ದೇವಾಲಯವಿದೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಹಾಗೆಯೇ ಪ್ರಪಂಚದಲ್ಲಿ ಹುಟ್ಟಿದಾಗಿನಿಂದ ಮರಣ ಹೊಂದುವವರೆಗೂ, ಮರಣಿಸಿದ ನಂತರವು ಕೂಡ ಅನೇಕ ಕಾರ್ಯಕ್ರಮಗಳು ಮಾಡುವ ಏಕೈಕ ದೇವಾಲಯವಾಗಿ ಈ ವಿಷ್ಣು ದೇವಾಲಯವು ಪ್ರಸಿದ್ಧಿಯನ್ನು ಪಡೆದಿದೆ. ಏಕೆಂದರೆ ಇಲ್ಲಿ ಮರಣಿಸಿದ ನಂತರ ಅವರ ಆತ್ಮಶಾಂತಿಗಾಗಿ ಅಥವಾ ಪಿತೃದೇವತೆಗಳನ್ನು ಸಂತೋಷವನ್ನಾಗಿಸಲು ನಾರಾಯಣ ಬಲಿ ಎಂಬ ಪೂಜೆಯನ್ನು ಇಲ್ಲಿ ವಿಶೇಷವಾಗಿ ಮಾಡಲಾಗುತ್ತದೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಸುತ್ತಲೂ ಬೆಟ್ಟಗಳು, ದಟ್ಟವಾದ ಅರಣ್ಯ ಪ್ರದೇಶ, ಎಲ್ಲಿ ನೋಡಿದರು ಹಚ್ಚ ಹಸಿರಿನಿಂದ ಕೂಡಿದ ವಾತಾವರಣ ಎಷ್ಟೊ ಆನಂದವನ್ನು ಉಂಟು ಮಾಡುತ್ತದೆ. ಈ ದೇವಾಲಯವು ಅತ್ಯಂತ ಪುರಾತನವಾದುದು. ಹಾಗೆಯೇ ಈ ದೇವಾಲಯದ ನಿರ್ಮಾಣದ ಬಗ್ಗೆ ಖಚಿತವಾದ ವಿವರಗಳು ಯಾವುದೂ ಇಲ್ಲ. ಎಷ್ಟೋ ಸಾವಿರ ವರ್ಷಗಳಿಂದಲೂ ಈ ದೇವಾಲಯವಿದೆ ಎಂದು ಚರಿತ್ರೆಕಾರರು ಭಾವಿಸುತ್ತಾರೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಇನ್ನು ಕೆಲವು ತಮಿಳು ಚರಿತ್ರೆಕಾರರ ಅಭಿಪ್ರಾಯದ ಪ್ರಕಾರ ತಮಿಳುರಾಜನಾದ ಭಾಸ್ಕರ ರವಿವರ್ಮನು 962 ರಿಂದ 963 ರ ಮಧ್ಯದಲ್ಲಿ ಇದನ್ನು ಪಟ್ಟಣವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಎಂದು ಚಾರಿತ್ರೆಕಾರರು ಆಧಾರದ ಮೂಲಕ ವಾದಿಸುತ್ತಾರೆ. ಆದರೆ ಇದು ಒಂದು ಕಾಲದಲ್ಲಿ ಒಂದು ನಗರವಾಗಿ, ಪುಣ್ಯಕ್ಷೇತ್ರವಾಗಿ ಇರುತ್ತಿತ್ತು ಎಂದು ಗುರುತಿಸಲಾಗಿದೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಈ ದಟ್ಟವಾದ ಅರಣ್ಯ ಪ್ರದೇಶದಲ್ಲಿ 2 ಪುರಾತನವಾದ ಚಿಕ್ಕ ಗ್ರಾಮಗಳನ್ನು ಕೂಡ ಆರ್ಕಿಯಾಲಜಿಕಲ್ ಅವರು ಕಂಡುಹಿಡಿದಿದ್ದಾರೆ. ಇನ್ನು ವೇದ ವ್ಯಾಸನು ತಾನು ಬರೆದ 18 ಪುರಾಣಗಳಲ್ಲಿ ಮತ್ಸ್ಯಪುರಾಣ, ಕೂರ್ಮಪುರಾಣ, ಸ್ಕಂದ ಪುರಾಣ, ನರಸಿಂಹ ಪುರಾಣ, ಪದ್ಮಪುರಾಣಗಳಲ್ಲಿ ಹಾಗು ಆತನು ಬರೆದ ಅನೇಕ ಪುರಾಣಗಳಲ್ಲಿಯೂ ಕೂಡ ಇಲ್ಲಿನ ಶ್ರೀ ಮಹಾವಿಷ್ಣುವಿನ ದೇವಾಲಯದ ಬಗ್ಗೆ ಉಲ್ಲೇಖಿಸಿದ್ದಾರೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಈ ದೇವಾಲಯವನ್ನು ಆ ಬ್ರಹ್ಮ ನಿರ್ಮಾಣ ಮಾಡಿದನು ಎಂದು ಪುರಾಣ ಇತಿಹಾಸಗಳ ಪ್ರಕಾರ ತಿಳಿಯುತ್ತದೆ. ಅತ್ಯಂತ ದಟ್ಟವಾದ ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡಿದ ಈ ದೇವಾಲಯವು ಅತ್ಯಂತ ಪುರಾತನ ಹಾಗು ಮಹಿಮಾನ್ವಿತವಾದುದು. ಈ ದೇವಾಲಯವನ್ನು "ಸಹ್ಯಮಾಲಕ ಕ್ಷೇತ್ರ" ಎಂದು ಕೂಡ ಕರೆಯುತ್ತಾರೆ. ಪುರಾಣ ಇತಿಹಾಸದ ಪ್ರಕಾರ ಬ್ರಹ್ಮ ತನ್ನ ಹಂಸವಾಹನದ ಮೇಲೆ ಭೂಲೋಕದಲ್ಲಿ ತಿರುಗುತ್ತಾ ಇರುವ ಸಮಯದಲ್ಲಿ ಈ ಬ್ರಹ್ಮಗಿರಿ ಪರ್ವತಯ ಪ್ರಾಕೃತಿಕ ಸೌಂದರ್ಯಕ್ಕೆ ಮಂತ್ರಮುಗ್ಧನಾಗಿ ಬ್ರಹ್ಮ ಈ ಪ್ರದೇಶಕ್ಕೆ ಭೇಟಿ ನೀಡುತ್ತಾನೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಅಲ್ಲಿನ ಒಂದು ವೃಕ್ಷದ ಬಳಿ ಇರುವ ವಿಷ್ಣುಮೂರ್ತಿಯ ವಿಗ್ರಹವನ್ನು ಕಂಡು ಪ್ರಾರ್ಥನೆ ಮಾಡಿದನು. ಹಾಗೆಯೇ ಆ ಪ್ರದೇಶವನ್ನು ವೈಕುಂಟ ಎಂದು, ವಿಷ್ಣು ಲೋಕ ಎಂದು ಪುರಾಣಗಳು ಹೇಳುತ್ತವೆ. ಇನ್ನು ಆ ಪ್ರದೇಶದಲ್ಲಿ ಬ್ರಹ್ಮ ವಿಷ್ಣುಮೂರ್ತಿ ವಿಗ್ರಹವನ್ನು ಪ್ರತಿಷ್ಟಾಪಿಸಿ ಪ್ರಾರ್ಥಿಸುತ್ತಾನೆ. ಬ್ರಹ್ಮನ ಕೋರಿಕೆಯ ಮೇರೆಗೆ ಶ್ರೀ ಮಹಾವಿಷ್ಣುವು ಆ ಪ್ರದೇಶದಲ್ಲಿ ಪಾಪನಾಶದಲ್ಲಿ ಯಾರಾದರೂ ಸ್ನಾನ ಮಾಡಿದರೆ ಅವರ ಸರ್ವಪಾಪಗಳು ನಾಶವಾಗುತ್ತದೆ ಎಂದು ವರವನ್ನು ನೀಡುತ್ತಾನೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಇನ್ನು ಇಂದಿಗೂ ಇಲ್ಲಿ ಪೂಜಾರಿಗಳು ಬ್ರಹ್ಮ ಮುಹೂರ್ತದಲ್ಲಿ ಆ ಬ್ರಹ್ಮ ದೇವನು ಇಲ್ಲಿಗೆ ಬಂದು ಸ್ವಾಮಿಯನ್ನು ಪೂಜಿಸುತ್ತಾನೆ ಎಂದು ಹೇಳುತ್ತಾರೆ. ಪುರಾಣಗಳ ಪ್ರಕಾರ ಜಮದಗ್ನಿಯು ತನ್ನ ತಂದೆಯ ಕ್ರಿಯೆಗಳನ್ನು ಇಲ್ಲಿಯೇ ನಿರ್ವಹಿಸಿ ಪಾಪವಿನಾಶದಲ್ಲಿ ಸ್ನಾನ ಮಾಡಿದನಂತೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ತಾನು ಕ್ಷತ್ರೀಯರನ್ನು ಕೊಂದ ಪಾಪವನ್ನು ಇದರಲ್ಲಿ ಸ್ನಾನವನ್ನು ಮಾಡಿಕೊಂಡ ತೊಲಗಿಸಿಕೊಳ್ಳಬೇಕು ಎಂದು ಅಂದುಕೊಳ್ಳುತ್ತಾನೆ. ಇನ್ನು ಈ ದೇವಾಲಯಕ್ಕೆ ಪೂರ್ವ ಕಾಲದಲ್ಲಿ ಮಹಾದೇವನ ದೇವಾಲಯಕ್ಕೂ ಮಾರ್ಗವಿತ್ತಂತೆ. ಆ ಮಾರ್ಗ ಅತ್ಯಂತ ಅಪಾಯಕರವಾದುದು. ಬೆಟ್ಟಗಳು, ಜಲಪಾತಗಳು, ದಟ್ಟವಾದ ಅರಣ್ಯ ಪ್ರದೇಶಗಳು, ಕ್ರೂರ ಮೃಗಗಳು ಹೀಗೆ ಎಷ್ಟೊ ಅಪಾಯಕರವಾದ ಪ್ರಯಾಣ ಇದಾಗಿರುತ್ತದೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಪಾಪನಾಶಿನಿ, ಬ್ರಹ್ಮಗಿರಿಯ ಸಮೀಪದಲ್ಲಿ ಅನೇಕ ವಿಧವಾದ ಎಷ್ಟೊ ಸಾವಿರ ವರ್ಷಗಳ ವೃಕ್ಷಗಳು, ಅನೇಕ ವಿಧದ ಆರ್ಯುವೇದ ಮೂಲಿಕೆಗಳು ಇಲ್ಲಿವೆ. ಪಾಪನಾಶಿನಿಯಲ್ಲಿ ಸಾಧಾರಣವಾಗಿ ಅನೇಕ ಮಂದಿ ನಾರಾಯಣ ಬಲಿ ನಿರ್ವಹಿಸುತ್ತಿರುತ್ತಾರೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಪಿತೃದೇವತೆಗಳ ಶಾಂತಿಗಾಗಿ ಇಲ್ಲಿ ಕಾರ್ಯವನ್ನು ನಿರ್ವಹಿಸುತ್ತಾರೆ. ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡಿ ಸ್ವಾಮಿಯನ್ನು ದರ್ಶನ ಮಾಡುತ್ತಿರುತ್ತಾರೆ. ಪ್ರಕೃತಿ ಪ್ರೇಮಿಗಳಿಗೆಯೇ ಅಲ್ಲದೇ ಆಧ್ಯಾತ್ಮಿಕತೆಯನ್ನು ಹೊಂದಿದವರಿಗೂ ಈ ಪ್ರದೇಶವು ಅತ್ಯಂತ ಅದ್ಭುತ ಕ್ಷೇತ್ರ ಎಂದೇ ಹೇಳಬಹುದು.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಕೇರಳ ಪ್ರವಾಸ ಎಷ್ಟೋ ಆನಂದದಾಯಕವಾದ ಅಂಶಗಳನ್ನು ಹೊಂದಿದೆ. ಬೀಚ್‍ಗಳು, ಬ್ಯಾಕ್ ವಾಟರ್ಸ್, ಪರ್ವತ ಪ್ರದೇಶಗಳು, ವಿಶ್ರಾಂತಿ ತಾಣಗಳು, ಸಾಹಸ ಕ್ರೀಡೆಗಳು ಇನ್ನು ಹಲವಾರು ಆಕರ್ಷಣೆಗಳು ಇಲ್ಲಿವೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಕೇರಳದಲ್ಲಿನ ನೀರಿನ ಮಾರ್ಗಗಳು, ಬೆಕಾಲ್, ಕೋವಲಂ, ಮಿನಕುನ್ನ ಬೀಚ್, ಪಯ್ಯಂಬಾಲಂ ಬೀಚ್, ಶಂಗುಮುಖಂ ಇನ್ನು ಅನೇಕ ಬೀಚ್‍ಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ಕೇರಳದಲ್ಲಿನ ಅದ್ಭುತವಾದ ಬ್ಯಾಕ್ ವಾಟರ್ಸ್ ಅಲೆಪ್ಪಿ, ಕುಮರಕೊಂ, ತಿರುವಲ್ಲಂ, ಕೊಲ್ಲಂ, ಕಾಸರ್ ಗೋಡ್, ಮೊದಲಾದ ಪ್ರದೇಶಗಳಿವೆ. ಈ ಪ್ರದೇಶಗಳೆಲ್ಲವೂ ಬ್ಯಾಕ್ ವಾಟರ್ ಅನುಭವವನ್ನು ಇಷ್ಟ ಪಡುವವರಿಗೆ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ದಕ್ಷಿಣ ಭಾರತದಲ್ಲಿ ಇತರ ಹಿಲ್ ಸ್ಟೇಷನ್‍ಗಳನ್ನು ಹೋಲಿಸಿದರೆ ಈ ಪ್ರದೇಶದಲ್ಲಿ ವಾಣಿಜ್ಯ ಕಾರ್ಯಕಲಾಪಗಳು ಕಡಿಮೆ. ಹನಿಮೂನ್ ಜೋಡಿಗಳಿಗೆ ಶೃಂಗಾರಕ್ಕೆ ಅತ್ಯುತ್ತಮವಾದ ಪ್ರದೇಶ ಇದಾಗಿದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ತನ್ನ ಅದ್ಭುತವಾದ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!

ಇಲ್ಲಿನ ಸಾಹಸ ಕ್ರೀಡೆಗಳು, ಸಂಸ್ಕøತಿ, ಆಹಾರಗಳು, ವೇಷ-ಭೂಷಣಗಳು ಕೇಳದ ಸಂಸ್ಕøತಿಯು ಅತ್ಯಂತ ಭಿನ್ನವಾಗಿರುತ್ತದೆ. ಕೇರಳ ರಾಜ್ಯಕ್ಕೆ ಪ್ರವಾಸ ಮಾಡಲು ಅನೇಕ ಸರ್ಕಾರಿ ಅಥವಾ ಖಾಸಗಿ ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. ಇಲ್ಲಿ ರೈಲ್ವೆ ನಿಲ್ದಾಣಗಳು ಹಾಗು ವಿಮಾನ ಮಾರ್ಗಗಳು ಕೂಡ ಇವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ