Search
  • Follow NativePlanet
Share
» »ಕರ್ನಾಟಕದಲ್ಲಿಯ ಅಗ್ರಮಾನ್ಯ ವನ್ಯಜೀವಿ ಧಾಮಗಳು

ಕರ್ನಾಟಕದಲ್ಲಿಯ ಅಗ್ರಮಾನ್ಯ ವನ್ಯಜೀವಿ ಧಾಮಗಳು

ಒಂದು ಪ್ರದೇಶದಲ್ಲಿ ಅಳಿವಂಚಿನಲ್ಲಿರುವ ಪ್ರಾಣಿಗಳು ಕಂಡುಬರುವ ಪ್ರದೇಶಗಳನ್ನು ವನ್ಯಜೀವಿ ಅರಣ್ಯ ಪ್ರದೇಶಗಳಾಗಿ ಸಂರಕ್ಷಿಸಲ್ಪಡುತ್ತವೆ. ನೀವು ಭೇಟಿ ನೀಡಲೇಬೇಕಾದ ಕರ್ನಾಟಕದ ಕೆಲವು ಪ್ರಮುಖ ವನ್ಯಜೀವಿ ಅಭಯಾರಣ್ಯಗಳು ಇಲ್ಲಿವೆ.

ಈ ವನ್ಯಜೀವಿ ಧಾಮಗಳನ್ನು ಪ್ರವಾಸೋದ್ಯಮಕ್ಕಾಗಿ ಅನುಮತಿಸಲಾಗಿದೆ. ಕೆಲವು ಸ್ಥಳಗಳಲ್ಲಿ ಅರಣ್ಯ ಇಲಾಖೆಯು ಸಫಾರಿಗಳನ್ನು ಆಯೋಜಿಸುತ್ತವೆ. ಮತ್ತು ಖಾಸಗಿ ಸಂಘಟಕರು ಸಹ ವನ್ಯಜೀವಿ ಪ್ರವಾಸಕ್ಕೆ ವ್ಯವಸ್ಥೆ ಮಾಡುತ್ತಾರೆ.

ಕರ್ನಾಟಕದ ಈ ವನ್ಯಜೀವಿ ಅಭಯಾರಣ್ಯಗಳು ಅಳಿವಂಚಿನಲ್ಲಿರುವ ಅನೇಕ ಪ್ರಬೇದದ ಪ್ರಾಣಿಗಳನ್ನು ಹೊಂದಿದ್ದು ಇವುಗಳು ಪ್ರವಾಸೋದ್ಯಮದ ಒಂದು ಪ್ರಮುಖ ಭಾಗವಾಗಿದೆ.

ಈ ಸ್ಥಳಗಳ ಒಂದು ಪ್ರವಾಸವನ್ನು ಮಾಡಿ

ದಾಂಡೇಲಿ ವನ್ಯಜೀವಿ ಅಭಯಾರಣ್

ದಾಂಡೇಲಿ ವನ್ಯಜೀವಿ ಅಭಯಾರಣ್

ಅತ್ತ್ಯುತ್ತಮ ಸಮಯ : ಮಾರ್ಚ್ - ಅಕ್ಟೋಬರ್

ದಾಂಡೇಲಿ ವನ್ಯಜೀವಿ ಅಭಯಾರಣ್ಯದಲ್ಲಿ ನೀವು ಹಚ್ಚ ಹಸಿರನ್ನು ಮಾತ್ರವಲ್ಲದೆ ಅದರ ಪ್ರಾಣಿಗಳನ್ನೂ ಸಹ ಆನಂದಿಸುವಿರಿ. ಇದು ಪಕ್ಷಿ ಪ್ರಿಯರಿಗೆ ಸ್ವರ್ಗವಾಗಿದೆ ಮತ್ತು ಅಂಶಿ ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶದ ಒಂದು ಭಾಗವಾಗಿದೆ. ಅಭಯಾರಣ್ಯವು ಗ್ರೇಟ್ ಹಾರ್ನ್ ಬಿಲ್ ಮತ್ತು ಮಲಬಾರ್ ಪೈಡ್ ಹಾರ್ನ್ ಬಿಲ್ ಎಂದು ಹೆಸರುವಾಸಿಯಾಗಿದೆ. ಅತ್ಯಂತ ಆಸಕ್ತಿದಾಯಕ ಭಾಗವೆಂದರೆ ಆಗಾಗ್ಗೆ ಭೇಟಿ ನೀಡುವ ಕಪ್ಪು ಪ್ಯಾಂಥರ್‌ಗಳು! ಕಪ್ಪು ಪ್ಯಾಂಥರ್‌ಗಳು ಹೆಚ್ಚಾಗಿ ಕಂಡುಬರುವ ಭಾರತದ ಏಕೈಕ ಹುಲಿ ಸಂರಕ್ಷಿತ ಪ್ರದೇಶ ಇದಾಗಿದೆ.

ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್

ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್

ಇಲ್ಲಿಗೆ ಭೇಟಿ ಕೊಡಲು ಉತ್ತಮ ಸಮಯ : ಡಿಸೆಂಬರ್ - ಜನವರಿ

ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯವು ಕೊಡಗಿನ ಬ್ರಹ್ಮಗಿರಿ ಶ್ರೇಣಿಯಿಂದಾಗಿ ಬಂದಿದೆ. ಈ ಅರಣ್ಯಪ್ರದೇಶವು ವಿವಿಧ ಬಗೆಯ ಮರಗಳಿಂದ ಕೂಡಿದ ಅರಣ್ಯಗಳನ್ನು ಹೊಂದಿದ್ದು, ಅವುಗಳಲ್ಲಿ ನಿತ್ಯ ಹರಿದ್ವರ್ಣ ಕಾಡುಗಳು, ಅರೆ ನಿತ್ಯಹರಿದ್ವರ್ಣ ಕಾಡು, ಹುಲ್ಲುಗಾವಲು ಭೂಮಿಗಳು, ಶೋಲಾ ಅರಣ್ಯಪ್ರದೇಶಗಳು ಮತ್ತು ಬಿದಿರಿನ ಪೊದೆಗಳು, ಇತ್ಯಾದಿಗಳನ್ನು ಹೊಂದಿದೆ. ಇದು ಸಾಮಾನ್ಯವಾಗಿ ಕಂಡುಬರುವ ಲಾಂಗೂರ್, ಚಿರತೆ ಬೆಕ್ಕು, ಗೈಂಟ್ ಫ್ಲೈಯಿಂಗ್ ಅಳಿಲು, ಪಚ್ಚೆ ಪಾರಿವಾಳ ಮುಂತಾದ ಅನೇಕ ಪ್ರಾಣಿಗಳಿಗೆ ನೆಲೆಯಾಗಿದೆ.

ಸೋಮೇಶ್ವರ ವನ್ಯಜೀವಿ ಅಭಯಾರಣ್ಯ

ಸೋಮೇಶ್ವರ ವನ್ಯಜೀವಿ ಅಭಯಾರಣ್ಯ

ಭೇಟಿ ಕೊಡಲು ಉತ್ತಮ ಸಮಯ : ನವೆಂಬರ್ ನಿಂದ - ಎಪ್ರಿಲ್ ವರೆಗೆ

ಸೋಮೇಶ್ವರ ವನ್ಯಜೀವಿ ಅಭಯಾರಣ್ಯವು ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಗಡಿಯಲ್ಲಿ ನೆಲೆಸಿದೆ. ಇದು ಆಗುಂಬೆಗೆ ಹತ್ತಿರವಿದ್ದು, ಈ ಪ್ರದೇಶವು ಉತ್ತಮ ರೀತಿಯಲ್ಲಿ ಮಳೆಯನ್ನು ಪಡೆಯುತ್ತದೆ. ಈ ಮೀಸಲು ಪ್ರದೇಶವು ಉಷ್ಣವಲಯದ ಆರ್ದ್ರ ನಿತ್ಯಹರಿದ್ವರ್ಣ ಅರಣ್ಯ ಸಸ್ಯವರ್ಗವನ್ನು ಹೊಂದಿದೆ. ಕಾಡಿನಲ್ಲಿ ಹುಲಿಗಳು, ಕಾಡಿನ ಬೆಕ್ಕುಗಳು, ಭಾರತದ ಮುಳ್ಳುಹಂದಿಗಳು, ಮಚ್ಚೆಯುಳ್ಳ ಪ್ರಿಯ, ಇತ್ಯಾದಿಗಳಿಗೆ ನೆಲೆಯಾಗಿದೆ.

ಭದ್ರಾ ವನ್ಯಜೀವಿ ಅಭಯಾರಣ್ಯ

ಭದ್ರಾ ವನ್ಯಜೀವಿ ಅಭಯಾರಣ್ಯ

ಭೇಟಿ ಕೊಡಲು ಉತ್ತಮ ಸಮಯ - ಅಕ್ಟೋಬರ ನಿಂದ - ಫೆಬ್ರವರಿ

ಭದ್ರಾ ವನ್ಯ ಜೀವಿ ಅಭಯಾರಣ್ಯವು ಮುಳ್ಳಯ್ಯನಗಿರಿ, ಹೆಬ್ಬೆಗಿರಿ, ಬಾಬಾಬುಡಾನ್ ಗಿರಿ, ಮತ್ತು ಗಂಗೆಗಿರಿಯಂತಹ ಪರ್ವತ ಶ್ರೇಣಿಗಳಿಂದ ಸುತ್ತುವರಿಯಲ್ಪಟ್ಟಿದೆ. ಈ ಅಭಯಾರಣ್ಯವು ಚಿಕ್ಕಮಗಳೂರಿನಲ್ಲಿ ಹಲವಾರು ವನ್ಯಜೀವಿಗಳೊಂದಿಗೆ ಜೈವಿಕ ವೈವಿಧ್ಯತೆಯ ಹಾಟ್‌ಸ್ಪಾಟ್ ಎನಿಸಿದೆ. ಹಲವಾರು ವಿಧದ ಹೂವುಗಳು ಮತ್ತು ಸಸ್ಯಗಳಿಂದಾಗಿ ಈ ಪ್ರದೇಶವು ಕರ್ನಾಟಕದ ಅತ್ಯಂತ ಉತ್ತಮವಾದ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದೆನ್ನುವ ಖ್ಯಾತಿಗೆ ಒಳಪಟ್ಟಿದೆ

ದರೋಜಿ ಸ್ಲಾತ್ ಕರಡಿ (ಜೇನು ತುಪ್ಪ ತಿನ್ನುವ ಕಪ್ಪು ಕರಡಿ) ಅಭಯಾರಣ್ಯ

ದರೋಜಿ ಸ್ಲಾತ್ ಕರಡಿ (ಜೇನು ತುಪ್ಪ ತಿನ್ನುವ ಕಪ್ಪು ಕರಡಿ) ಅಭಯಾರಣ್ಯ

ಉತ್ತಮ ಸಮಯ: ಆಗಸ್ಟ್ - ಏಪ್ರಿಲ್

ದರೋಜಿ ಕಪ್ಪು ಕರಡಿಗಳ ಅಭಯಾರಣ್ಯವು ಪ್ರಮುಖವಾಗಿ ಈ ಕರಡಿಗಳನ್ನು ಸಂರಕ್ಷಿಸುವುದಕ್ಕಾಗಿಯೇ ರಚಿಸಲಾಗಿದೆ. ಇದು ಬಳ್ಳಾರಿ ಜಿಲ್ಲೆಯಲ್ಲಿದೆ. ದರೋಜಿ ಕಪ್ಪು ಕರಡಿ ಅಭಯಾರಣ್ಯವು ಹಂಪಿಯಿಂದ ಸುಮಾರು 65 ಕಿಮೀ ದೂರದಲ್ಲಿದೆ. ಕಪ್ಪು ಕರಡಿಗಳ ಹೊರತಾಗಿ (ಬೆಟ್ಟಗಳ ಗುಹೆಗಳಲ್ಲಿ ಉಳಿಯುವ) ಇನ್ನೂ ಅನೇಕ ಪ್ರಾಣಿಗಳಿವೆ. ಒಣ ಡೆಸಿಶಿಯಸ್ ಮತ್ತು ದಕ್ಷಿಣ ಮುಳ್ಳಿನ ಕಾಡುಗಳು ಈ ಪ್ರದೇಶದ ಪ್ರಮುಖ ಸಸ್ಯವರ್ಗಗಳಾಗಿವೆ.

ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ

ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ

ಉತ್ತಮ ಸಮಯ: ನವೆಂಬರ್ ತಿಂಗಳಿನಿಂದ - ಮೇ ವರೆಗೆ

ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯವು ಶಿವಮೊಗ್ಗದ ಜೋಗ ಜಲಪಾತದ ಸಮೀಪದಲ್ಲಿದೆ. ಪ್ರಸಿದ್ಧ ಲಿಂಗನಮಕ್ಕಿ ಜಲಾಶಯವೂ ಈ ಅಭಯಾರಣ್ಯದ ಭಾಗವಾಗಿದೆ. ಇಲ್ಲಿ ನೀವು ನಿತ್ಯಹರಿದ್ವರ್ಣ ಕಾಡುಗಳು ಮತ್ತು ತೇವಾಂಶವುಳ್ಳ ಎಲೆಯುದುರುವ ಕಾಡುಗಳನ್ನು ಇಲ್ಲಿ ಕಾಣಬಹುದು. ವಿವಿಧ ಪ್ರಾಣಿಗಳ ಜೊತೆಗೆ, ಅಭಯಾರಣ್ಯವು ಸರೀಸೃಪಗಳಿಗೆ ಹೆಸರುವಾಸಿಯಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+