Search
  • Follow NativePlanet
Share
» »ಹನಿಮೂನ್‌ಗೆ ಬೆಸ್ಟ್ ಗೋವಾದ ಈ ಬೀಚ್

ಹನಿಮೂನ್‌ಗೆ ಬೆಸ್ಟ್ ಗೋವಾದ ಈ ಬೀಚ್

ಸಮುದ್ರ ತೀರ, ಬೀಚ್‌ ಎಂದಾದಾಗ ಮೊದಲು ನೆನಪಿಗೆ ಬರುವುದೇ ಗೋವಾ. ಗೋವಾ ಎಷ್ಟು ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಎಂದರೆ ಪ್ರತಿಯೊಂದು ಕಾಲದಲ್ಲೂ ಇಲ್ಲಿ ಪ್ರವಾಸಿಗರು ತುಂಬಿರುತ್ತಾರೆ. ಕೆಲವು ವರ್ಷಗಳ ಹಿಂದೆ ಗೋವಾ ಕೇವಲ ಒಂದು ಹಳ್ಳಿಯಾಗಿತ್ತು. ಆದರೆ ಈಗ ಇದೊಂದು ಬೀಚ್ ಡೆಸ್ಟಿನೇಶನ್ ಆಗಿದೆ. ಗೋವಾದ ರಾಜಧಾನಿ ಪಣಜಿಯಿಂದ ಕೇವಲ 7ಕಿ.ಮೀ ದೂರದಲ್ಲಿರುವ ಡೋನಾ ಪೌಲಾ ಗೋವಾದಲ್ಲಿನ ಸುಂದರವಾದ ಸಮುದ್ರ ತೀರವಾಗಿದೆ.

ಡೋನಾ ಪೌಲಾ

ಡೋನಾ ಪೌಲಾ

PC: Sunandlopes

ಡೋನಾ ಪೌಲಾ ಹೆಡ್‌ಲ್ಯಾಂಡ್‌ನ ದಕ್ಷಿಣ ಭಾಗದಿಂದ ಹರಿಯುತ್ತದೆ. ಇದು ಮಾಂಡವಿ ಹಾಗೂ ಜುವಾರಿ ನದಿಗಳು ಅರಬಿ ಸಾಗರಕ್ಕೆ ಸೇರುತ್ತದೆ. ಈ ಸ್ಥಳವು ಪ್ರವಾಸಿಗಳಲ್ಲಿ ಲವರ್ಸ್ ಪ್ಯಾರಡೈಸ್ ಎನ್ನುವ ಹೆಸರಿನಿಂದ ಪ್ರಸಿದ್ಧಿ ಹೊಂದಿದೆ. ಇದರ ಹಿಂದೆ ಒಂದು ಕಥೆ ಇದೆ. ಪೋರ್ಚುಗೀಸ್ ಶಾಸನ ಕಾಲದಲ್ಲಿ ಗೋವಾದ ವೈಸರಾಯಿಯ ಮಗಳು ಡೋನಾ ಪೌಲಾ ಡಿ ಮೆನೇಜಸ್ ಹೆಸರನ್ನು ಡೋನಾ ಪೌಲಾ ಬೀಚ್‌ಗೆ ಇಡಲಾಗಿದೆ. ಬೆಸ್ತನ ಜೊತೆ ಮದುವೆ ಅನುಮತಿ ಸಿಗದ ಕಾರಣ ಆಕೆ ಒಂದು ಬಂಡೆಕಲ್ಲಿನ ಮೇಲಿನಿಂದ ಹಾರಿ ಪ್ರಾಣಬಿಡುತ್ತಾಳೆ. ಹಾಗಾಗಿ ಇದನ್ನು ಲವರ್ಸ್ ಪ್ಯಾರಡೈಸ್ ಎನ್ನುತ್ತಾರೆ.

ಪ್ರಕೃತಿ ಸೌಂದರ್ಯದ ಮಜಾ ಪಡೆಯಿರಿ

ಪ್ರಕೃತಿ ಸೌಂದರ್ಯದ ಮಜಾ ಪಡೆಯಿರಿ

PC: Pradnya SugarDimples

ನೀವು ಪ್ರಕೃತಿ ಸೌಂದರ್ಯದ ಮಜಾ ಪಡೆಯಬೇಕೆಂದಿದ್ದರೆ ಈ ಬೀಚ್ ನಿಮಗೆ ಹೇಳಿ ಮಾಡಿಸಿದ ತಾಣವಾಗಿದೆ. ಪ್ರವಾಸಿಗರು ಈ ಸ್ಥಳಕ್ಕೆ ಸಂಬಂಧಿಸಿದ ಕಥೆಯನ್ನು ತಿಳಿಯಲು ಇಲ್ಲಿಗೆ ಬರುತ್ತಾರೆ. ಮೈಲುಗಟ್ಟಲೆ ಪಸರಿಸಿರುವ ಈ ಬೀಚ್‌ನಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ನೋಡುವ ಮಜಾನೇ ಬೇರೆ. ಇದನ್ನು ಹೊರತುಪಡಿಸಿ ಉತ್ತರ ಗೋವಾ ಹಾಗೂ ದಕ್ಷಿಣ ಗೋವಾದ ಬೀಚ್‌ನ ಸೌಂದರ್ಯವನ್ನು ಕಣ್ತುಂಬಿಕೊಳ್ಳ ಬಹುದು.

ವಾಟರ್ ಸ್ಫೋರ್ಟ್ ಮಜಾ ಪಡೆಯಬಹುದು

ವಾಟರ್ ಸ್ಫೋರ್ಟ್ ಮಜಾ ಪಡೆಯಬಹುದು

PC: Kishisykes

ಡೋನಾಪೌಲಾ ಬೀಚ್‌ನಲ್ಲಿ ನೀವು ಜಲಕ್ರೀಡೆಯ ಆನಂದವನ್ನು ಪಡೆಯಬಹುದು. ಸನ್‌ ಬಾತೀಂಗ್, ಪೇರಾ ಸೇಲಿಂಗ್ ಹಾಗೂ ಇನ್ನಿತರ ಜಲಕ್ರೀಡೆಯ ಆನಂದ ಪಡೆಯಬಹುದು. ಬೀಚ್ ಸುತ್ತಾಡುತ್ತಾ ಶಾಪಿಂಗ್‌ನ ಆನಂದವನ್ನೂ ಪಡೆಯಬಹುದು.

ಮಾಂಡ್ರೆಮ್ ಬೀಚ್

ಮಾಂಡ್ರೆಮ್ ಬೀಚ್

PC: Brocken Inaglory

ಡೋನಾಪೌಲಾ ಬೀಚ್‌ನ ಸುಮಾರು 34 ಕಿ.ಮೀ ದೂರದಲ್ಲಿ ಮಾಂಡ್ರೋಮ್ ಬೀಚ್ ಪ್ರೇಮಿಗಳಿಗೆ ಹಾಗೂ ಹನಿಮೂನ್ ಮಾಡಲು ಬಂದ ದಂಪತಿಗಳಿಗೆ ಉತ್ತಮವಾಗಿದೆ. ಈ ಬೀಚ್‌ನಲ್ಲಿ ಅಷ್ಟೊಂದು ಜನಜಂಗುಳಿ ಇಲ್ಲದೆ ಇರುವುದರಿಂದ ನೀವು ಪುಸ್ತಕ ಹಿಡಿದುಕೊಂಡು ಏಕಾಂದಲ್ಲಿ ಓದಬಹುದು. ಅಥವಾ ನಿಮ್ಮ ಸಂಗಾತಿಯೊಂದಿಗೆ ಏಕಾಂತದಲ್ಲಿ ಕಾಲ ವ್ಯಯಿಸಬಹುದು..

ಮಪುಸಾ

ಮಪುಸಾ

PC:Fredericknoronha

ಡೋನಾ ಪೌಲಾ ಬೀಚ್‌ನ ಸುಮಾರು 43ಕಿ.ಮೀ ದೂರದಲ್ಲಿ ಹಾಗೂ ಪಣಜಿಯಿಂದ ಸುಮಾರು 13ಕಿ.ಮೀ ದೂರದಲ್ಲಿ ಮಪೂಸ ಇದೆ. ಈ ಸ್ಥಳವು ಶುಕ್ರವಾರ ಸಂತೆಗೆ ಫೇಮಸ್ ಆಗಿದೆ. ಇಲ್ಲಿ ಪಕ್ಕದ ಊರಿನವರು ತಾವು ಬೆಳೆದಂತಹ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲು ಇರುತ್ತಾರೆ. ಇದು ಸೀ ಫುಡ್‌ಗೂ ಫೇಮಸ್‌ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X