Search
  • Follow NativePlanet
Share
» »ಈ ಸ್ಥಳಗಳಲ್ಲಿ ಟ್ರೆಕ್ಕಿಂಗ್‌ಗೆ ಮಳೆಗಾಲದಲ್ಲಿ ಪ್ಲಾನ್‌ ಮಾಡಿ…ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತೆ

ಈ ಸ್ಥಳಗಳಲ್ಲಿ ಟ್ರೆಕ್ಕಿಂಗ್‌ಗೆ ಮಳೆಗಾಲದಲ್ಲಿ ಪ್ಲಾನ್‌ ಮಾಡಿ…ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತೆ

ಮಳೆಗಾಲದಲ್ಲಿ ಪ್ರವಾಸ ಅತ್ಯಂತ ಅಪಾಯಕಾರಿ ಎಂದು ಹೇಳುತ್ತಾರೆ. ಈ ಋತುವಿನಲ್ಲಿ ಗಿರಿಧಾಮಗಳಿಗೆ ಹೋಗಲು ಪ್ಲಾನ್‌ ಮಾಡುವುದು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು. ಏಕೆಂದರೆ ನಿರಂತರ ಮಳೆಯಿಂದಾಗಿ ರಸ್ತೆಗಳು ಹಾಳಾಗುತ್ತವೆ, ಪರ್ವತಗಳು ಬಿರುಕು ಬಿಡುವ ಸಾಧ್ಯತೆಯಿದೆ ಮತ್ತು ಹಲವೆಡೆ ಪ್ರವಾಹದಂತಹ ಪರಿಸ್ಥಿತಿ ಇದೆ, ಆದರೆ ಮತ್ತೊಂದೆಡೆ, ಭಾರತದಲ್ಲಿ ಈ ಸಮಯದಲ್ಲಿ ಪ್ರವಾಸಕ್ಕೆ ತೆರಳಲು ಯೋಗ್ಯವಾದ ಸ್ಥಳಗಳಿವೆ. ನಿಜ ಹೇಳಬೇಕೆಂದರೆ ಇವೆಲ್ಲ ಟ್ರೆಕ್ಕಿಂಗ್ ಸ್ಥಳಗಳು. ನೀವಿಲ್ಲಿ ಟ್ರೆಕ್ಕಿಂಗ್ ಅಥವಾ ಚಾರಣ ಮಾಡುವಾಗ, ನಿಮ್ಮ ಪ್ರವಾಸವನ್ನು ಅದ್ಭುತ ಮತ್ತು ಸ್ಮರಣೀಯವಾಗಿಸುವಂತಹ ದೃಶ್ಯಗಳನ್ನು ಸಹ ನೋಡಬಹುದು. ಬನ್ನಿ ಹಾಗಾದರೆ ಆ ಪ್ರವಾಸಿ ತಾಣಗಳು ಯಾವುವು ಎಂದು ನೋಡೋಣ...

mullayanagiri peak

ಮುಳ್ಳಯ್ಯನಗಿರಿ, ಕರ್ನಾಟಕ

ಕರ್ನಾಟಕದ ಮುಳ್ಳಯ್ಯನಗಿರಿ ಚಾರಣ ಪ್ರಿಯರಿಗೆ ಉತ್ತಮ ಸ್ಥಳವಾಗಿದೆ. ಮಳೆಗಾಲದಲ್ಲೂ ಇದು ಸುರಕ್ಷಿತವಾಗಿರುತ್ತದೆ. ಮುಳ್ಳಯ್ಯನಗಿರಿ ಕರ್ನಾಟಕದ ಅತಿ ಎತ್ತರದ ಶಿಖರ. ಮಳೆಗಾಲದಲ್ಲಿ ಇಲ್ಲಿ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಸುಮಾರು 10 ಕಿ.ಮೀ. ಟ್ರೆಕ್ಕಿಂಗ್ ಮಾಡುವಾಗ, ನೀವು ಕ್ಯಾಂಪಿಂಗ್ ಮತ್ತು ರಾಕ್ ಕ್ಲೈಂಬಿಂಗ್ ಅನ್ನು ಸಹ ಆನಂದಿಸಬಹುದು.

ಆದರೆ ಇಲ್ಲಿಗೆ ಭೇಟಿ ಕೊಡುವಾಗ ಹವಾಮಾನಕ್ಕೆ ಸೂಕ್ತವಾದ ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ. ನೀವು ಚಾರಣ ಮಾಡಲು ನಿರ್ಧರಿಸಿದಲ್ಲಿ ನಿಮ್ಮೊಂದಿಗೆ ಆರಾಮದಾಯಕವಾದ ಶೂಗಳನ್ನು ಧರಿಸಿ. ಹಾಗೆಯೇ, ಟ್ರೆಕ್ಕಿಂಗ್ ಮಾಡುವಾಗ ಹಗುರವಾದ ಸ್ವೆಟರ್ ಮತ್ತು ರೈನ್ ಕೋಟ್ ಅನ್ನು ಒಯ್ಯಿರಿ. ಚಾರಣ ಮಾಡುವಾಗ ಬಹಳ ಜಾಗರೂಕರಾಗಿರಿ. ನೀವೇ ನೀರು ಮತ್ತು ತಿಂಡಿಗಳನ್ನು ಒಯ್ಯುವುದು ಒಳಿತು.

ಸಿಂಹಘಡ ಕೋಟೆ, ಪುಣೆ

ಪುಣೆ ಮತ್ತು ಮುಂಬೈಗೆ ಭೇಟಿ ನೀಡಲು ಮಾನ್ಸೂನ್ ಅತ್ಯುತ್ತಮ ಸಮಯ. ಈ ಸ್ಥಳಗಳ ಹವಾಮಾನವು ವರ್ಷದ ಹೆಚ್ಚಿನ ತಿಂಗಳುಗಳಲ್ಲಿ ಆಹ್ಲಾದಕರವಾಗಿರುತ್ತದೆ. ಆದರೆ ಮಳೆಗಾಲದ ಸಮಯದಲ್ಲಿ ಇನ್ನು ಹೆಚ್ಚು ರೋಮ್ಯಾಂಟಿಕ್ ಆಗುತ್ತದೆ. ನೀವು ಟ್ರೆಕ್ಕಿಂಗ್ ಅನ್ನು ಇಷ್ಟಪಡುವವರಾಗಿದ್ದರೆ, ಪುಣೆಯ ಸಿಂಹಘಡ ಕೋಟೆಯ ಚಾರಣವನ್ನು ನೀವು ತಪ್ಪಿಸಿಕೊಳ್ಳಬಾರದು. ಕೋಟೆಯನ್ನು ತಲುಪುವ ಮಾರ್ಗವು ತುಂಬಾ ಮನೋಹರವಾಗಿದ್ದು, ನೀವು ಅದರಲ್ಲಿ ಕಳೆದುಹೋದಂತೆ ಭಾಸವಾಗುತ್ತದೆ.

ಟ್ರೆಕ್ಕಿಂಗ್ ಸಿಂಹಗಢ ಕೋಟೆಯಲ್ಲಿ ಜನಪ್ರಿಯ ಚಟುವಟಿಕೆಯಾಗಿದ್ದು, ಸುಮಾರು 3 ಕಿ.ಮೀ. ಇದೆ. ಟ್ರೆಕ್ಕಿಂಗ್ ಪೂರ್ಣಗೊಳ್ಳಲು ಸುಮಾರು 1 ಗಂಟೆ ತೆಗೆದುಕೊಳ್ಳುತ್ತದೆ. ಸಿಂಹಘಡ ಕೋಟೆಯು ಮಹಾರಾಷ್ಟ್ರದ ಆಹಾರಕ್ಕೂ ಹೆಸರುವಾಸಿಯಾಗಿದೆ. ಸಮೀಪದಲ್ಲಿ ವಾಸಿಸುವ ಸ್ಥಳೀಯರು ಪ್ರತಿದಿನ ಬೆಳಿಗ್ಗೆ ತಮ್ಮ ಅಂಗಡಿಗಳನ್ನು ತೆರೆಯುತ್ತಾರೆ ಮತ್ತು ಪ್ರತಿ ವಾರಾಂತ್ಯದಲ್ಲಿ ಪ್ರವಾಸಿಗರಿಗೆ ರುಚಿಕರವಾದ ಭಕ್ಷ್ಯಗಳನ್ನು ನೀಡುತ್ತಾರೆ.

hamtpastrek himachal

ಹಂಪ್ಟ ಪಾಸ್, ಹಿಮಾಚಲ ಪ್ರದೇಶ

ಟ್ರೆಕ್ಕಿಂಗ್ ಪ್ರಿಯರು ಒಮ್ಮೆ ಹಂಪ್ಟ ಪಾಸ್ ಗೆ ಭೇಟಿ ನೀಡಿ. ಈ ಸ್ಥಳವು ವಿಶ್ವದ ಅತ್ಯುತ್ತಮ ಟ್ರೆಕ್‌ಗಳಲ್ಲಿ ಒಂದಾಗಿದೆ ಮತ್ತು ಇಲ್ಲಿಗೆ ಚಾರಣಿಗರು ದೇಶದಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಬರುತ್ತಾರೆ. ಸಮುದ್ರ ಮಟ್ಟದಿಂದ 14,100 ಅಡಿ ಎತ್ತರದಲ್ಲಿರುವ ಈ ಸ್ಥಳವು ಮಳೆಗಾಲದಲ್ಲಿ ಸಂಪೂರ್ಣವಾಗಿ ಹಸಿರಾಗಿ ಕಾಣುತ್ತದೆ .

ಇಲ್ಲಿ ಟ್ರೆಕ್ಕಿಂಗ್ ಮಾಡುವಾಗ ನೀವು ಪರ್ವತಗಳು, ನದಿಗಳು ಮತ್ತು ಜಲಪಾತಗಳನ್ನು ನೋಡಬಹುದು. ಆದರೆ, ಇಲ್ಲಿ ಟ್ರೆಕ್ಕಿಂಗ್ ಸುಲಭವಲ್ಲ. ಕುಲುವಿನಿಂದ ಪ್ರಾರಂಭವಾಗುವ ಈ ಚಾರಣವು ಪೂರ್ಣಗೊಳ್ಳಲು 5 ರಿಂದ 6 ದಿನಗಳನ್ನು ತೆಗೆದುಕೊಳ್ಳಬಹುದು. ಟ್ರೆಕ್ಕಿಂಗ್‌ಗೆ ಈ ಸ್ಥಳವನ್ನು ಆರಿಸಿಕೊಂಡರೆ ನಿಮ್ಮ ಸಾಹಸಕ್ಕೆ ಯಾವುದೇ ಮಿತಿ ಇರುವುದಿಲ್ಲ. ಚಾರಣದ ವೇಳೆ ನೀವು ಸುಂದರವಾದ ಚಂದ್ರತಾಲ್ ಸರೋವರವನ್ನು ಸಹ ನೋಡಬಹುದು.

valleyofflowers Uttarakhand

ಫ್ಲವರ್‌ ವ್ಯಾಲಿ, ಉತ್ತರಾಖಂಡ

ಹಿಮಾಲಯದಲ್ಲಿ ಭಾರತದ ಅತ್ಯಂತ ಜನಪ್ರಿಯ ಚಾರಣಗಳಲ್ಲಿ ವ್ಯಾಲಿ ಆಫ್ ಫ್ಲವರ್ಸ್ ಅಥವಾ ಫ್ಲವರ್‌ ವ್ಯಾಲಿ ಕೂಡ ಒಂದಾಗಿದೆ. ಹಿಮಾಲಯಕ್ಕೆ ಹೋಗದವರೂ ಈ ಚಾರಣದ ಹೆಸರನ್ನು ಕೇಳಿರಬೇಕು. ಇಲ್ಲಿನ ಹೂವುಗಳು ಭೂಮಿಯ ಮೇಲೆ ಸ್ವರ್ಗವಿದೇನೋ ಎಂಬಂತಹ ಅನುಭವವನ್ನು ನೀಡುತ್ತವೆ. ಫ್ಲವರ್‌ ವ್ಯಾಲಿಯನ್ನು ಅನ್ವೇಷಿಸಲು ಜುಲೈನಿಂದ ಸೆಪ್ಟೆಂಬರ್ ವರೆಗಿನ ತಿಂಗಳುಗಳು ಅತ್ಯುತ್ತಮವೆಂದು ಪರಿಗಣಿಸಲಾಗಿದೆ .

ಈ ಸಮಯದಲ್ಲಿ ಇಲ್ಲಿಗೆ ಬರುವ ಮೂಲಕ, ನೀವು ಏಕಕಾಲದಲ್ಲಿ ಹಲವಾರು ಬಗೆಯ ಹೂವುಗಳನ್ನು ನೋಡಬಹುದು. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಫ್ಲವರ್‌ ವ್ಯಾಲಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿದೆ. ಇಲ್ಲಿ 500 ಕ್ಕೂ ಹೆಚ್ಚು ಜಾತಿಯ ಹೂವುಗಳು ಅರಳುತ್ತವೆ. ಈ ವರ್ಷದ ಜೂನ್ 1 ರಿಂದ ಪ್ರವಾಸಿಗರಿಗೆ ವ್ಯಾಲಿ ಆಫ್ ಫ್ಲವರ್ಸ್ ತೆರೆಯಲಾಗಿದೆ, ಇದು ಅಕ್ಟೋಬರ್ 30 ರವರೆಗೆ ತೆರೆದಿರುತ್ತದೆ. ತಡಮಾಡದೆ ಯೋಜನೆ ರೂಪಿಸಿ. ನೆನಪಿಡಿ ಇಲ್ಲಿ ಯಾರಿಗೂ ರಾತ್ರಿ ತಂಗಲು ಅವಕಾಶವಿಲ್ಲ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+