ದಕ್ಷಿಣ ಭಾರತವು ಎಂದಿನಿಂದಲೂ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಸಂಪತ್ತಿನಿಂದ ಕೂಡಿದ ಭೂಮಿಯಾಗಿದೆ. ಇದರ ನಾಗರೀಕತೆಯು ಅಸಾಧಾರಣ ದೇವಾಲಯಗಳು, ಅದ್ಬುತ ವಾಸ್ತುಶಿಲ್ಪಕ್ಕೆ ಹೆಸರಾದ ದೇವಾಲಯಗಳು ಮತ್ತು ಸೊಗಸಾದ ಮತ್ತು ವಿಶಿಷ್ಟವಾದ ಸ್ಮಾರಕಗಳಿಂದ ಆಶೀರ್ವದಿಸಲ್ಪಟ್ಟಿದೆ. ಇದಲ್ಲದೆ ಹಲವಾರು ಕೋಟೆಗಳನ್ನೂ ದಕ್ಷಿಣ ಭಾರತದಲ್ಲಿ ಕಾಣಬಹುದಾಗಿದೆ. ಹಿಂದಿನ ಯುಗದ ಅದ್ಬುತ ದಿನಗಳನ್ನು ನೋಡಲು ಇಷ್ಟಪಡುವ ಪ್ರವಾಸಿಗರಿಂದ ಇಲ್ಲಿಯ ಸ್ಥಳಗಳು ಭೇಟಿಕೊಡಲ್ಪಡುತ್ತದೆ. ದಕ್ಷಿಣ ಭಾರತಕ್ಕೆ ಭೇಟಿಯು ನಿಮ್ಮ ಸಮಯ ಮತ್ತು ಶಕ್ತಿಯನ್ನು ಹಾಳು ಮಾಡುವುದು ಎಂದು ವಿಷಾದವಾಗುವುದಕ್ಕೆ ಸಾಧ್ಯವೇ ಇಲ್ಲ.
ಹಾಗಿದ್ದಲ್ಲಿ ತಡವೇಕೆ? ದಕ್ಷಿಣ ಭಾರತದಲ್ಲಿಯ 15 ಕೋಟೆಗಳು ಮತ್ತು ಅವುಗಳ ಒಂದು ನೋಟವನ್ನು ನೋಡೋಣ.

1) ಅಂಜೆಂಗೋ ಫೋರ್ಟ್ ಮತ್ತು ಲೈಟ್‌ಹೌಸ್, ವರ್ಕಲಾ, ಕೇರಳ
ಇದು ಅಂಚುತೆಂಗು ಕೋಟೆ ಎಂಬ ಹೆಸರಿನಿಂದಲೂ ಕರೆಯಲಾಗುವ ಈ ಕೋಟೆ ಮತ್ತು ಲೈಟ್ ಹೌಸ್ (ದೀಪಸ್ತಂಭ) ಎರಡೂ ಸಹ ಭೇಟಿಕೊಡಲು ಯೋಗ್ಯವಾಗಿದೆ. 'ಅಂಚುತೆಂಗು' ಎಂಬ ಹೆಸರಿನ ಅರ್ಥವೇನೆಂದು ಊಹಿಸಬಲ್ಲಿರಾ? ಇದು ಐದು ತೆಂಗಿನಕಾಯಿಗಳನ್ನು ಸೂಚಿಸುತ್ತದೆ. ಅಟ್ಟಿಂಗಲ್ ರಾಣಿ ಅನುಮತಿ ನೀಡಿದ ನಂತರ ಇದನ್ನು 1695 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿತು.ನೀವು ಆಂಗ್ಲೋ-ಮೈಸೂರು ಯುದ್ಧದ ಬಗ್ಗೆ ಮಾತನಾಡುವುದಾದರೆ, ಈ ಕೋಟೆಯು ಒಂದು ಪ್ರಮುಖ ಕಾರಣವಾಗಿತ್ತು. ಈ ಕೋಟೆಯು ಸುಮಾರು 130 ಅಡಿ ಎತ್ತರವಾಗಿದ್ದು, ಸುಂದರವಾದ ನೋಟವನ್ನು ಹೊಂದಿದೆ. ನೀವು ಕೇರಳದ ವರ್ಕಲಾಗೆ ಭೇಟಿ ನೀಡಿದಾಗಲೆಲ್ಲಾ ಇಲ್ಲಿಗೆ ಭೇಟಿಕೊಡುವುದನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಉತ್ತಮ ಹವಾಮಾನವಿರುವಾಗ ವರ್ಕಲಾಗೆ ಭೇಟಿ ನೀಡಲು ಉತ್ತಮ ಸಮಯ.

2) ಬಾದಾಮಿ ಪೋರ್ಟ್ (ಕೋಟೆ,)- ಬಾದಾಮಿ - ಕರ್ನಾಟಕ
ಬೆಟ್ಟದ ಮೇಲೆ ನೆಲೆಸಿರುವ ಬಾದಾಮಿ ಕೋಟೆಯ ಸೌಂದರ್ಯತೆ ಮತ್ತು ನಯನಮನೋಹರ ದೃಶ್ಯಗಳನ್ನು ಇಲ್ಲಿಗೆ ಭೇಟಿ ನೀಡುವಾಗ ಕಾಣಬಹುದಾಗಿದೆ. ಈ ಕಟ್ಟಡದ ನಿರ್ಮಾಣದ ಶ್ರೇಯಸ್ಸು 5 ನೇ ಶತಮಾನದ ಕಾಲದ ಎರಡನೇ ಪುಲಕೇಶಿಗೆ ಹೋಗುತ್ತದೆ. 16 ನೇ ಶತಮಾನದಷ್ಟು ಹಿಂದಿನ ಈ ಕೋಟೆಯನ್ನು ನೋಡಲು ನಿಮ್ಮ ಕಣ್ಣುಗಳನ್ನು ವಿಶಾಲವಾಗಿ ತೆರೆಯಿರಿ. ಈ ಕೋಟೆಯನ್ನು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಕಾಣಬಹುದಾಗಿದ್ದು ಇದು ಅದರ ರೋಮಾಂಚಕ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಈ ಕೋಟೆಯ ಪ್ರವೇಶದ್ವಾರವು ಶಿವನ ವಾಹನವಾದ ನಂದಿಯಿಂದ ಕಾಯಲ್ಪಟ್ಟಿದ್ದು ರಕ್ಷಿಸುವಂತೆ ಕಾಣುತ್ತದೆ, ಇದು ಪುರಾತತ್ತ್ವ ಶಾಸ್ತ್ರದ ಚಾಕಚಕ್ಯತೆಯಿಂದ ಮತ್ತಷ್ಟು ಹೊಳಪಿನಿಂದ ಹೊಂದಿದ್ದು, ಇವುಗಳು ನಿಮ್ಮನ್ನು ಇತಿಹಾಸಪೂರ್ವದ ಕಾಲಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ. ಜನವರಿ, ಫೆಬ್ರವರಿ ಮತ್ತು ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗಿನ ತಿಂಗಳುಗಳುಗಳು ಬಾದಾಮಿ ಕೋಟೆಗೆ ಭೇಟಿ ನೀಡಲು ಅತ್ಯಂತ ಅನುಕೂಲಕರ ಸಮಯವಾಗಿದೆ.

3) ಗೋಲ್ಕಂಡ ಕೋಟೆ, ಹೈದರಾಬಾದ್-ತೆಲಂಗಾಣ
800 ವರ್ಷಗಳ ನಂತರವೂ ಭದ್ರವಾಗಿ ನಿಂತಿರುವ ಆಕರ್ಷಕವಾದ ಕೋಟೆಯ ಬಗ್ಗೆ ಹೇಳುವಾಗ ಹೈದರಾಬಾದ್‌ನ ಗೋಲ್ಕೊಂಡ ಕೋಟೆಯನ್ನು ಮರೆಯಲು ಸಾಧ್ಯವೆ? ಈ ಕೋಟೆಯ ಒಂದು ನಿರ್ದಿಷ್ಟ ಹಂತದಲ್ಲಿ ತಟ್ಟುವ ಚಪ್ಪಾಳೆಯ ಶಬ್ದವು 1 ಕಿಮೀ ದೂರದಲ್ಲಿರುವ ಪೆವಿಲಿಯನ್ ಶಿಖರದಲ್ಲಿ ಕೇಳಿಸುತ್ತದೆ. ಇದು ದಾಳಿಯ ಸಂದರ್ಭದಲ್ಲಿ ಸೈನಿಕರಿಗೆ ಪರಿಪೂರ್ಣ ಎಚ್ಚರಿಕೆ ನೀಡುವ ಬಿಂದುವಾಗಿತ್ತು ಎನ್ನಲಾಗುತ್ತದೆ. ಗೊಲ್ಲಕೊಡ ಎಂಬ ಪದದಿಂದ ಈ ಕೋಟೆಯ ಹೆಸರು ಹುಟ್ಟಿಕೊಂಡಿದ್ದು,ಇದು ಮೂಲತಃ ತೆಲುಗಿನಲ್ಲಿ ಕುರುಬರ ಬೆಟ್ಟ ಎಂದು ಅರ್ಥೈಸುತ್ತದೆ ಇದಕ್ಕೆ ಸಂಬಂಧಿಸಿದ ದಂತಕಥೆಯ ಪ್ರಕಾರ, ಕುರುಬನ ಮಗನಿಗೆ ಒಂದು ಪವಿತ್ರ ವಿಗ್ರಹವು ದೊರಕಿತು ಎನ್ನಲಾಗುತ್ತದೆ ಇದಕ್ಕಾಗಿ ಕಟಕಿಯನ್ ರಾಜನು ಅದರ ಸುತ್ತಲೂ ಮಣ್ಣಿನ ಕೋಟೆಯನ್ನು ನಿರ್ಮಿಸಲು ಆದೇಶಿಸಿದನು ಎಂದು ನಂಬಲಾಗುತ್ತದೆ.

4) ಜಿಂಗೀ ಕೋಟೆ, ವಿಲುಪ್ಪುರಂ, ತಮಿಳುನಾಡು
ಬಿಟೀಷರು ಯಾರನ್ನು ಪೂರ್ವದ ಟ್ರಾಯ್ ಎಂದು ಪರಿಗಣಿಸುತ್ತಾರೆ ಎಂದು ಊಹಿಸಬಲ್ಲಿರಾ? ಅದು ಖಂಡಿತವಾಗಿಯೂ ಜಿಂಗೀ ಕೋಟೆಯಾಗಿದೆ. ಈ ಕೋಟೆಯು ಜನರಿಗೆ ಅಷ್ಟೊಂದಾಗಿ ಅಚ್ಚುಮೆಚ್ಚಿನದಲ್ಲ ಏಕೆಂದರೆ ಈ ಕೋಟೆಯನ್ನು ಪ್ರವೇಶಿಸಲು ಅಥವಾ ತಲುಪಲು ಅಷ್ಟು ಸುಲಭವಲ್ಲವಾದ ಕಾರಣದಿಂದಾಗಿ. ತಮಿಳುನಾಡಿನಲ್ಲಿ ಹಿಂದಿನಕಾಲದಿಂದಲೂ ಉಳಿದುಕೊಂಡಿರುವ ಕೋಟೆಗಳಲ್ಲಿ ಇದೂ ಒಂದಾಗಿದೆ. ಈ ಕೋಟೆಯು ಏನೆಲ್ಲಾ ಒಳಗೊಂಡಿದೆ ಎನ್ನುವ ಕುತೂಹಲ ನಿಮಗಿದ್ದಲ್ಲಿ, ಇಲ್ಲಿಯ ಎಂಟು ಮಹಲಿನ ಕಲ್ಯಾಣ ಮಹಲ್(ಮದುವೆಯ ಮಂಟಪ), ಧಾನ್ಯಗಳನ್ನು ಸಂಗ್ರಹಿಸುವ ಕಣಜ, ಸೇನೆಯ ಕಸರತ್ತು ನಡೆಸುವ ಸ್ಥಳಗಳು, ಜೈಲು ಕೋಣೆಗಳು ಮತ್ತು ಚೆಂಜಿಯಮ್ಮನ್ ಎಂಬ ಹಿಂದು ದೇವತೆಗೆ ಮೀಸಲಾದ ದೇವಾಲಯವನ್ನು ಇಲ್ಲಿ ಕಾಣಬಹುದಾಗಿದೆ.

5) ವಾರಂಗಲ್ ಕೋಟೆ, -ವಾರಂಗಲ್- ತೆಲಂಗಾಣ
ಈಗ ವಾರಂಗಲ್ ಕೋಟೆಯ ಮಧ್ಯಭಾಗವು ಪುರಾತತ್ವ ಶಾಸ್ತ್ರದ ಇಲಾಖೆಯಾಗಿದ್ದು, ಶಿವ ದೇವಾಲಯದ ಅವಶೇಷವನ್ನು ಇಲ್ಲಿಗೆ ಭೇಟಿ ಕೊಡುವವರು ಕಾಣಬಹುದಾಗಿದೆ. ಇದು ಆಕ್ರಮಣಕಾರಿ ಸೈನ್ಯದ ದಾಳಿಯಿಂದಾಗಿ ನಾಶವಾಗಿ ನಂತರ ಉತ್ಖನನ ಮಾಡಲ್ಪಟ್ಟಿದೆ. ಇದರ ಪ್ರವೇಶ ಸ್ಥಳವು ಅಷ್ಟೊಂದಾಗಿ ಇಷ್ಟವಾಗದೆ ಇರಬಹುದು ಆದರೆ ಇದರ ಪ್ರವೇಶದ ಸ್ಥಳದ ನಿರ್ಮಾಣವು ಅತ್ಯಂತ ಬಾಳಿಕೆ ಬರುವ ಹಾಗೂ ಉತ್ತಮವಾದ ವಿನ್ಯಾಸದ ಕಾರಣದಿಂದಾಗಿ ಅನೇಕ ದಾಳಿಗಳ ನಂತರವೂ ಬಲವಾಗಿ ಉಳಿದಿದೆ. ದಕ್ಷಿಣ ಭಾರತದ ಬಹುತೇಕ ಐತಿಹಾಸಿಕ ಸ್ಮಾರಕಗಳಂತೆ ಇಲ್ಲಿರುವ ವಿನ್ಯಾಸದ ಮಾದರಿಗಳು ಸಂಪೂರ್ಣವಾಗಿ ಒಂದು ಧರ್ಮಕ್ಕೆ ಸೇರಿದ ಹಾಗೆ ಇಲ್ಲವಾದ ಕಾರಣದಿಂದಾಗಿ ಧಾರ್ಮಿಕವಲ್ಲದ ಕಾರಣ ಇಲ್ಲಿ ಧರ್ಮದ ಸುಳಿವು ಸಿಗುವುದಿಲ್ಲ.
6) ಬೆಳಗಾಂ ಕೋಟೆ, - ಬೆಳಗಾಂ - ಕರ್ನಾಟಕ
ಕರ್ನಾಟಕದ ಬೆಳಗಾಂ ಅಥವಾ ಇಂದಿನ ಬೆಳಗಾವಿ ಕೋಟೆಯು ರತ್ತಾ ರಾಜವಂಶಕ್ಕೆ ಸೇರಿದ್ದು ಇದರ ಅಪರೂಪದ ಇತಿಹಾಸವು ನಿಮಗೆ ರೋಮಾಂಚನವನ್ನು ನೀಡುವುದು .ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಕೋಟೆಯಲ್ಲಿ ಬ್ರಿಟಿಷರಿಂದ ಸೆರೆಹಿಡಿಯಲ್ಪಟ್ಟರು ಎಂಬ ವಿಷಯವು ಇಲ್ಲಿ ನಿಮ್ಮ ಆಸಕ್ತಿಯನ್ನು ಇಮ್ಮಡಿಗೊಳಿಸುತ್ತದೆ.
7) ಚಿತ್ರದುರ್ಗಾ ಕೋಟೆ, ಚಿತ್ರದುರ್ಗ- ಕರ್ನಾಟಕ
ಸುಂದರವಾದ ಚಿತ್ರದುರ್ಗ ಕೋಟೆಯು ಕರ್ನಾಟಕ ರಾಜ್ಯದ ಹೆಮ್ಮೆಯಾಗಿದೆ. ಈ ಕೋಟೆಯ ಮೇಲ್ಪಾಗದಲ್ಲಿ 18 ಅದ್ಬುತವಾದ ದೇವಾಲಯಗಳಿದ್ದು, ಕೆಳಭಾಗದಲ್ಲಿ ಒಂದು ದೊಡ್ಡ ದೇವಾಲಯವಿದೆ.. ಇವುಗಳಲ್ಲಿ ಅತ್ಯಂತ ಹಳೆಯದಾದ ಮತ್ತು ಆಸಕ್ತಿದಾಯಕ ದೇವಾಲಯವೆಂದರೆ ಅದು ಹಿಡಿಂಬೇಶ್ವರ ದೇವಾಲಯವಾಗಿದೆ. ಹೈದರಾಲಿಯ ಆಳ್ವಿಕೆಯ ಕಾಲದಲ್ಲಿ ಈ ಕೋಟೆಯೊಳಗೆ ಮಸೀದಿಯನ್ನು ಸೇರಿಸುವ ಇಚ್ಚೆಯನ್ನು ಹೊಂದಿದರು. ಮಳೆನೀರು ಕೊಯ್ಲು ಉದ್ದೇಶಗಳಿಗಾಗಿ ಬಹಳಷ್ಟು ಟ್ಯಾಂಕ್‌ಗಳನ್ನು ಪರಸ್ಪರ ಜೋಡಿಸಲಾಗಿದೆ ಮತ್ತು ಯಾವುದೇ ರೀತಿಯ ನೀರಿನ ಕೊರತೆಯನ್ನು ಎಂದಿಗೂ ಅನುಭವಿಸದ ದಕ್ಷಿಣ ಭಾರತದ ಕೋಟೆಗಳಲ್ಲಿ ಇದೂ ಒಂದು ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ.
8) ವೆಲ್ಲೂರ್ ಕೋಟೆ- ವೆಲ್ಲೂರ್ -ತಮಿಳುನಾಡು
ವೆಲ್ಲೂರು ಕೋಟೆಯು ತಮಿಳುನಾಡಿನ ವೈಭವೋಪೇತ ಕೋಟೆಯಾಗಿದೆ. ಈ ಕೋಟೆಯ ಸಮೀಪದಲ್ಲಿ ಚರ್ಚ್, ಮಸೀದಿ ಮತ್ತು ದೇವಸ್ಥಾನಗಳನ್ನು ಕಾಣಬಹುದಾಗಿದೆ. ಈ ಕೋಟೆಯು ಮೂರು ಕಾರಣಗಳಿಂದಾಗಿ ಗಮನವನ್ನು ಸೆಳೆಯುತ್ತದೆ ಅವು ಯಾವುವೆಂದರೆ, ಮೊದಲನೆಯದಾಗಿ ಶ್ರೀಲಂಕಾದ ಕೊನೆಯ ರಾಜ, ಹಾಗೆಯೇ ಟಿಪ್ಪು ಸುಲ್ತಾನನ ಕುಟುಂಬ: ಇಬ್ಬರೂ ಬ್ರಿಟಿಷರ ಆಳ್ವಿಕೆಯಲ್ಲಿ ಇಲ್ಲಿ ಬಂಧಿತರಾಗಿದ್ದರು. ಎರಡನೆಯದಾಗಿ 1806ರಲ್ಲಿ ಇಂಗ್ಲೀಷರ ವಿರುದ್ದ ಆಕ್ರಮಣಕಾರಿ ಬಂಡಾಯವು ಇಲ್ಲಿಂದಲೇ ಪ್ರಾರಂಭವಾಯಿತು. ಕೊನೆಯದಾಗಿ ವಿಜಯನಗರ ಸಂಸ್ಥಾನದ ಚಕ್ರವರ್ತಿ ಶ್ರೀರಂಗರಾಯರ ದುರಂತವು ಗಮನಾರ್ಹವಾಗಿ ಇಲ್ಲಿಯೇ ಸಂಭವಿಸಿತು.
9) ಬೇಕಲ್ ಕೋಟೆ -ಬೇಕಲ್ - ಕೇರಳ
ವಾಸ್ತುಶಿಲ್ಪದಲ್ಲಿ ವಿಭಿನ್ನವಾದ ಅಭಿವೃದ್ದಿ ಹೊಂದಿದ ಹಾಗೂ ರಕ್ಷಣಾ ತಂತ್ರಗಳಿಗಾಗಿ ಬಳಸಲಾದ ಕೋಟೆಗಳಲ್ಲಿ ಬೇಕಲ್ ಕೋಟೆಯು ಒಂದಾಗಿದೆ. ಇದು ಕೋಟೆಯ ರಕ್ಷಣೆಗಾಗಿ ಹೊರಗಿನ ಗೋಡೆಯ ಮೇಲೆ ರಂಧ್ರಗಳು ಕೇರಳದ ಧನಾತ್ಮಕ ಸೆಳೆತವನ್ನು ಹೊರಸೂಸುತ್ತದೆ. ಕೋಟೆಯ ಮೇಲ್ಬಾಗವು ಶತ್ರುಗಳನ್ನು ದೂರದಿಂದ ಗುರಿಯಿಟ್ಟು ಹೊಡೆಯುವ ಬಿಂದುವನ್ನು ಹೊಂದಿದ್ದರೆ, ಕೆಳಭಾಗದಲ್ಲಿಯ ರಂಧ್ರಗಳು ಶತ್ರುಗಳು ಸಮೀಪದಲ್ಲಿರುವಾಗ ದಾಳಿ ನಡೆಸಲು ಅನುಕೂಲವಾಗುವಂತೆಯೂ, ಜೊತೆಗೆ ತಳಭಾಗದಲ್ಲಿಯೂ ರಂಧ್ರಗಳಿದ್ದು, ಇವುಗಳು ಶತ್ರುಗಳು ಅತ್ಯಂತ ಹತ್ತಿರದಲ್ಲಿದ್ದಾಗ ಅವರ ಮೇಲೆ ದಾಳಿ ನಡೆಸುವ ಉದ್ದೇಶದಿಂದ ನಿರ್ಮಿಸಲಾಗಿದೆ.
10) ಬೀದರ್ ಕೋಟೆ- ಬೀದರ್- ಕರ್ನಾಟಕ
ಬಹಮನಿ ಸುಲ್ತಾನರ ಕಾಲಕ್ಕೆ ಸಂಬಂಧಿಸಿದ ಪ್ರಮುಖ ಅವಶೇಷಗಳಲ್ಲಿ ಬೀದರ್ ಕೋಟೆಯು ಒಂದಾಗಿದೆ. ಕರ್ನಾಟಕದ ಐತಿಹಾಸಿಕ ನಗರವಾದ ಬೀದರ್ ನಲ್ಲಿರುವ ಈ ಕೋಟೆಯು ಕನಿಷ್ಟ ಐದು ದರ್ವಾಜಾಗಳು ಅಥವಾ ಪ್ರವೇಶದ್ವಾರಗಳನ್ನು ಒಳಗೊಂಡಿದೆ. 1724ರ ಆರಂಭದಲ್ಲಿ ಬೀದರ್ ನಿಜಾಮರ ಸಾಮ್ರಾಜ್ಯದ ಭಾಗವಾಯಿತು. ಆದರೆ ಮೂರನೇ ಮೀರ್ ನಿಜಾಮ್ ಅಲಿ ಖಾನ್ ಅಸಫ್ ಜಾ ತನ್ನ ಸಹೋದರನನ್ನು ಇದೇ ಕೋಟೆಯಲ್ಲಿ ಜೈಲಿಗೆ ಹಾಕಿದನು. ಇದು ಈ ಕೋಟೆಗಳಿಗೂ ಬಂಧಿತರಿಗೂ ಇರುವ ಸಂಬಂಧವೇನೆಂದು ದೃಡವಾಗಿ ಮತ್ತು ಸ್ಪಷ್ಟವಾಗಿ ಯೋಚಿಸುವಂತೆ ಮಾಡುತ್ತದೆ!
11) ಕೊಂಡಪಲ್ಲಿ ಕಿಲಾ, ಕೊಂಡಪಲ್ಲಿ- ಆಂಧ್ರಪ್ರದೇಶ
ವಿಜಯವಾಡದ ಸಮೀಪದಲ್ಲಿರುವ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿರುವ ಕೊಂಡಪಲ್ಲಿಯಲ್ಲಿ, ಕೊಂಡಪಲ್ಲಿ ಕೋಟೆಯ ಒಂದು ಸುಂದರ ನೋಟವನ್ನು ಸೆರೆಹಿಡಿಯಬಹುದಾಗಿದೆ. 14ನೇ ಶತಮಾನದ ಈ ಕೋಟೆಯನ್ನು ಯಾರು ನಿರ್ಮಿಸಿದರು ಎಂದು ಊಹಿಸಬಲ್ಲಿರಾ? ಈ ಕೋಟೆಯನ್ನು ಕೊಂಡವೀಡಿನ ಪ್ರೊಲಾಯ ವೇಮ ರೆಡ್ಡಿಯಿಂದ ನಿರ್ಮಿಸಲ್ಪಟ್ಟಿತು. ಈ ಕೋಟೆಯು ಎರಡು ಅದ್ಭುತವಾದ ಉದ್ದೇಶಗಳನ್ನು ಪೂರೈಸಿ ನಿಮಗೆ ಸಂತೋಷವನ್ನು ನೀಡುತ್ತದೆ. ಅಲ್ಲದೆ ನೀವು ಇಲ್ಲಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಅಲ್ಲದೆ ಅದೇ ಸಮಯದಲ್ಲಿ ನಿಮ್ಮನ್ನು ಸ್ವಾಗತಿಸುವ ಗುಂಟೂರು ಜಿಲ್ಲೆಯ ವ್ಯಾಪಾರ ಕೇಂದ್ರಗಳಿಗೂ ಭೇಟಿ ನೀಡಬಹುದಾಗಿದೆ. ಈ ಕೋಟೆಯು ನಂತರದ ದಿನಗಳಲ್ಲಿ ಮಿಲಿಟರಿ ಕೋಟೆಯಾಗಿ ಮಾರ್ಪಟ್ಟಿತು. ಆದರೆ ಬ್ರಿಟೀಷರು ಬಲವಾದ ಗ್ಯಾರಿಸನ್(ಮಿಲಿಟರಿ ಪಡೆಯ ಕೇಂದ್ರ) ಅನ್ನು ಸ್ಥಾಪಿಸಲು ನೆರವಾಗಲಿಲ್ಲ.
12) ಕೊಂಡವೀಡು ಫ಼ೋರ್ಟ್, -ಗುಂಟೂರು - ಆಂಧ್ರಪ್ರದೇಶ
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಚಿಲಕಲೂರಿಪೇಟೆಯಲ್ಲಿರುವ ಕೊಂಡವೀಡು ಗ್ರಾಮಕ್ಕೆ ಭೇಟಿ ನೀಡಿರುವಿರಾ? ಇದು ಅತ್ಯಂತ ಪ್ರಭಾವಶಾಲಿಯಾದ ಕೊಂಡವೀಡು ಕೋಟೆಯ ನೆಲೆಯಾಗಿದೆ. ಈ ಕೋಟೇಯು ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿದ್ದು ಸುಂದರವಾದ ಬೆಟ್ಟದ ಮೇಲಿರುವ ಕೋಟೆಯಾಗಿದ್ದು, ಇದನ್ನು ಪ್ರೊಲಾಯ ವೇಮ ರೆಡ್ಡಿಯಿಂದ ನಿರ್ಮಿಸಲ್ಪಟ್ಟಿತು. ನಂತರ ಇದನ್ನು 1328 ಮತ್ತು 1428 ರ ನಡುವೆ ರೆಡ್ಡಿ ರಾಜವಂಶದ ನಿಯಂತ್ರಣದಲ್ಲಿ ಇರಿಸಲಾಯಿತು. ನಂತರ ಇದನ್ನು ಗಜಪತಿಗಳು ಹಾಗೂ 1516 ರಲ್ಲಿ ವಿಜಯನಗರ ಚಕ್ರವರ್ತಿ ಕೃಷ್ಣದೇವರಾಯ ಇದನ್ನು ವಶಪಡಿಸಿಕೊಂಡರು.
13)ವಿಜಿಯನಗರಂ ಕೋಟೆ, ವಿಜಿನಗರಂ, ಆಂಧ್ರ ಪ್ರದೇಶ
ಸುಂದರವಾದ ವಿಜಿಯನಗರಂ ಕೋಟೆಯು 15 ನೇ ಶತಮಾನಕ್ಕೆ ಸೇರಿದ್ದು, ಗಜಪತಿ ರಾಜರಿಂದ ಸುಂದರವಾದ ಕೋಟೆಯಾಗಿ ರೂಪಾಂತರಗೊಂಡಿತು. ಗಜಪತಿ ರಾಜವಂಶದ ಪ್ರಮುಖ ರಾಜರಲ್ಲಿ ಒಬ್ಬರಾದ ಪುಸಪತಿ ಪೇದಾ ವಿಜಯ ರಾಮ ಗಜಪತಿ ರಾಜು ಅವರ ಹೆಸರನ್ನು ಈ ಕೋಟೆಗೆ ಇಡಲಾಯಿತು ಮತ್ತು ನಂತರದ ದಿನಗಳಲ್ಲಿ ಆಂಧ್ರ ಪ್ರದೇಶದ ದೇವರಾಯರ ನಿಯಂತ್ರಣಕ್ಕೆ ಬಂದಿತು.
14) ಚಂದ್ರಗಿರಿ ಕೋಟೆ,- ಚಂದ್ರಗಿರಿ- ಆಂಧ್ರಪ್ರದೇಶ
ತಿರುಪತಿಯ ಚಂದ್ರಗಿರಿ ಎಂಬ ಸ್ಥಳಕ್ಕೆ ಹೋಗಿ ಆಂಧ್ರಪ್ರದೇಶದ ಚಂದ್ರಗಿರಿ ಕೋಟೆಯಲ್ಲಿ ನಿಮ್ಮ ಅನುಭವವನ್ನು ಕಲ್ಪಿಸಿಕೊಳ್ಳಿ ಈ ಕೋಟೆಯು 11 ನೇ ಶತಮಾನದಲ್ಲಿ ಯಾದವ ನಾಯ್ಡುಗಳಿಂದ ಮತ್ತೆ ನಿರ್ಮಿಸಲ್ಪಟ್ಟಿತು. ನಂತರ 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಹಿಡಿತಕ್ಕೆ ಒಳಪಟ್ಟಿತು. ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಜನಪ್ರಿಯ ವಿಜಯನಗರ ಚಕ್ರವರ್ತಿ ಶ್ರೀ ಕೃಷ್ಣದೇವರಾಯರು ತಮ್ಮ ಬಾಲ್ಯವನ್ನು ಸಂಪೂರ್ಣ ವಾಗಿ ಈ ಕೋಟೆಯಲ್ಲಿಯೇ ರಾಜಕುಮಾರನಂತೆ ಕಳೆದರು. ಈ ಕೋಟೆಯಲ್ಲಿಯೇ ಚಿನ್ನದೇವಿ ಎಂಬ ಹುಡುಗಿಯನ್ನು ಪ್ರೀತಿಸಿದನು ಎಂದು ದಂತಕಥೆ ಹೇಳುತ್ತದೆ, ವಿಜಯನಗರ ಸಾಮ್ರಾಜ್ಯದ ಬಗ್ಗೆ ಮಾತಾಡುತ್ತಾ ಚಂದ್ರಗಿರಿಯು 4 ನೇ ರಾಜಧಾನಿಯಾಗಿ ಹೊರಹೊಮ್ಮುವುದನ್ನು ನೋಡಬಹುದಾಗಿದೆ. ರಾಯರುಗಳ ಬಗ್ಗೆ ಕೇಳಿದ್ದೀರಾ? ಗೋಲ್ಕೊಂಡ ಸುಲ್ತಾನರು ಪೆನುಕೊಂಡದ ಮೇಲೆ ಯುದ್ಧದ ಕೂಗು ಹಾಕಿದಾಗ ಅವರು ತಮ್ಮ ರಾಜಧಾನಿಯನ್ನು ಇಲ್ಲಿಗೆ ಬದಲಾಯಿಸಿದರು.
15) ಮಿರ್ಜಾನ್ ಫೋರ್ಟ್, ಮಿರ್ಜಾನ್, ಕರ್ನಾಟಕ
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿಯಲ್ಲಿರುವ ಈ ಕೋಟೆಯನ್ನು ನೀವು ಭೇಟಿ ನೀಡಬಹುದಾಗಿದೆ. ಈ ಸೊಗಸಾದ ಸ್ಥಳಕ್ಕೆ ಅನೇಕ ಯುದ್ಧಗಳು ನಡೆದ ಕ್ರೂರ ಹಿನ್ನೆಲೆಯಿದೆ. ಸುಂದರವಾದ ವಾಸ್ತುಶಿಲ್ಪವು ಪ್ರಶಂಸನೀಯವಾಗಿದೆ ಮತ್ತು ಇದು ರಾ.ಹೆ17 ನಿಂದ ಕೇವಲ 0.5 ಕಿಮೀ ದೂರದಲ್ಲಿದೆ. ಈಗ, ಈ ಭವ್ಯ ಕೋಟೆಯ ಬಗ್ಗೆ ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ, ಇದನ್ನು 16 ನೇ ಶತಮಾನದಲ್ಲಿ ರಾಣಿಯೊಬ್ಬರಿಂದ ನಿರ್ಮಿಸಲ್ಪಟ್ಟಿದ್ದು, ಗೇರ್ಸೊಪ್ಪದ ರಾಣಿ ಚೆನ್ನಭೈರಾ ದೇವಿಯು ಸುಮಾರು 54 ವರ್ಷಗಳ ಕಾಲ ಆಳ್ವಿಕೆ ನಡೆಸಿದಳು ಮತ್ತು ಈ ಕೋಟೆಯಲ್ಲಿ ಜೀವನ ನಡೆಸುತ್ತಿದ್ದಳು. ಇವೆಲ್ಲಾ ಈ ಕೋಟೆಯ ಜನಪದ ಹಿನ್ನೆಲೆಯಾಗಿದೆ.


Click it and Unblock the Notifications



















