Search
  • Follow NativePlanet
Share
» »ಸದಾ ನೆನಪಿನಲ್ಲುಳಿಯುವ ಆಂಧ್ರ ಕರಾವಳಿ

ಸದಾ ನೆನಪಿನಲ್ಲುಳಿಯುವ ಆಂಧ್ರ ಕರಾವಳಿ

By Vijay

ಇತ್ತೀಚಿಗಷ್ಟ ವಿಭಜನೆಗೊಂಡಿರುವ ಪ್ರಸ್ತುತ ಆಂಧ್ರ ಪ್ರದೇಶದ ಕರಾವಳಿ ಪ್ರದೇಶವು ರಾಜ್ಯದ ಆರ್ಥಿಕ ಪ್ರಗತಿಯ ಒಂದು ಪ್ರಮುಖ ಭಾಗವಾಗಿದೆ. ಭತ್ತದಿಂದ ಹಿಡಿದು ಮೀನುಗಾರಿಕೆಯವರೆಗೂ ಇಲ್ಲಿ ವಾಣಿಜ್ಯ ವ್ಯಾಪಾರಗಳ ವಹಿವಟ್ಟು ಇರುವುದನ್ನು ಕಾಣಬಹುದು.

ಆಂಧ್ರದ ಕರಾವಳಿ ಪ್ರದೇಶವು ಕೇವಲ ವಾಣಿಜ್ಯ ವ್ಯಾಪಾರಗಳಿಂದಲ್ಲದೆ ತನ್ನ ಹೊಸತನ ತೋರುವ ಸುಂದರ ಕಡಲ ತಡಿಗಳು, ಪ್ರಮುಖ ಪವಿತ್ರ ಕ್ಷೇತ್ರಗಳು, ದೇವಾಲಯಗಳು, ಐತಿಹಾಸಿಕ ಸ್ಥಳಗಳಿಂದ ಕೂಡಿದ ಮನೋಹರವಾದ ಪ್ರವಾಸಿ ಆಕರ್ಷಣೆಗಳಿಗೂ ಹೆಸರುವಾಸಿಯಾಗಿದೆ.

ವಿಶೇಷ ಲೇಖನ : ಪ್ರಸ್ತುತ ಆಂಧ್ರದ ಪ್ರಮುಖ ಧಾರ್ಮಿಕ ಸ್ಥಳಗಳು

ಹೊಸತನ, ತಾಜಾತನ, ಅನ್ವೇಷಣೆ ಬಯಸುವ ಪ್ರವಾಸಿಗನಿಗೆ ಆಂಧ್ರ ಕರಾವಳಿಯು ಎಂದಿಗೂ ನಿರಾಸೆ ಮಾಡಲಾರದು. ಏಕೆಂದರೆ ಆಂಧ್ರ ಕರಾವಳಿಯು ತನ್ನದೆ ಆದ ಆಹಾರ ಖಾದ್ಯ, ಜೀವನ ಶೈಲಿಯಿಂದ ಸಂಪದ್ಭರಿತವಾಗಿದ್ದು ಇಲ್ಲಿನ ಪ್ರವಾಸ ಮನದಾಳದಲ್ಲಿ ಅಚ್ಚಳಿಯದೆ ನೆನಪುಳಿಯುತ್ತದೆ.

ಪ್ರಸ್ತುತ ಲೇಖನದ ಮೂಲಕ ಆಂಧ್ರ ಕರಾವಳಿಯ ಒಂದು ಸುತ್ತು ಹಾಕಿ ಆ ಪ್ರದೇಶದ ಕೆಲವು ಗುರುತರವಾದ ಪ್ರವಾಸಿ ಆಕರ್ಷಣೆಗಳು ಯಾವುವು ಎಂಬುದರ ಕುರಿತು ತಿಳಿಯಿರಿ.

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಆಂಧ್ರ ಕರಾವಳಿ ಪ್ರದೇಶವು ಕೃಷ್ಣ ಹಾಗೂ ಗೋದಾವರಿ ನದಿಗಳು ಹರಿದಿರುವ ಪ್ರದೇಶವಾಗಿದ್ದು ಇಲ್ಲಿನ ಬಹು ಭಾಗದಲ್ಲಿ ಕೃಷಿಯು ಅತ್ಯಂತ ಪ್ರಮುಖ ಚಟುವಟಿಕೆಯಾಗಿದೆ. ಈ ಕರಾವಳಿ ಪ್ರದೇಶದಲ್ಲಿ ಭೇಟಿ ನೀಡಬಹುದಾದ ಪ್ರಮುಖ ಸ್ಥಳಗಳೆಂದರೆ ರಾಜಮಂಡ್ರಿ, ವೈಜಾಗ್, ವಿಜಯವಾಡಾ, ಗುಂಟೂರು, ಕಾಕಿನಾಡ, ನೆಲ್ಲೂರು, ವಿಜಿನಗರಂ, ಎಲೂರು ಹಾಗೂ ಒಂಗೊಲೆ.

ಚಿತ್ರಕೃಪೆ: Kotikalapudi S V D Prasad

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಆಂಧ್ರ ಕರಾವಳಿಯ ಉತ್ತರದ ತುತ್ತುದಿಗೆ ನೆಲೆಸಿರುವ ತಾಣವೆ ಶ್ರೀಕಾಕುಲಂ. ಬೌದ್ಧ ಧರ್ಮದ ಅಳಿದುಳಿದ ಸಾಕಷ್ಟು ಗುರುತುಗಳಿಗೆ ಪ್ರಸಿದ್ಧವಾಗಿರುವ ಶ್ರೀಕಾಕುಲಂ ಕಡಲ ತೀರಗಳು, ದೇಗುಲಗಳಿಗೂ ಸಹ ಪ್ರಖ್ಯಾತಿಗಳಿಸಿದೆ. ಶ್ರೀಕಾಕುಲಂನಲ್ಲಿರುವ ಅಸರವಲ್ಲಿಯು ಸೂರ್ಯನಿಗೆ ಮುಡಿಪಾದ ದೇವಸ್ಥಾನಕ್ಕಾಗಿ ಹೆಸರುವಾಸಿಯಾಗಿದೆ. ಮೂಲತಃ ಹರ್ಷವಲ್ಲಿ ಎಂದು ಕರೆಯಲ್ಪಡುತ್ತಿದ್ದ ಈ ತಾಣವು ಕ್ರಮೇಣ ಅರಸವಲ್ಲಿ ಎಂದು ಕರೆಯಲ್ಪಟ್ಟಿತು ಹಾಗೂ ಇಲ್ಲಿರುವ ಸೂರ್ಯನಾರಾಯಣ ಸ್ವಾಮಿಯ ದೇಗುಲವು 7 ನೆಯ ಶತಮಾನದ ಸಂದರ್ಭದಲ್ಲಿ ಕಳಿಂಗ ದೊರೆಯಾಗಿದ್ದ ದೇವೆಂದ್ರ ವರ್ಮನಿಂದ ನಿರ್ಮಿಸಲ್ಪಟ್ಟಿದೆ. ಐದು ಅಡಿ ಎತ್ತರದ ಕಪ್ಪು ಗ್ರಾನೈಟ್ ಕಲ್ಲಿನ ಪದ್ಮ, ಉಷಾ ಮತ್ತು ಛಾಯಾ ಪತ್ನಿಯರ ಸಮೇತನಾದ ಸೂರ್ಯ ವಿಗ್ರಹ ಹಾಗೂ ಏಳು ಕುದುರೆಗಳ ರಥ ಇಲ್ಲಿನ ಮುಖ್ಯ ಆಕರ್ಷಣೆ.

ಚಿತ್ರಕೃಪೆ: Adityamadhav83

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಶ್ರೀ ಕುರ್ಮಮ್ ದೇವಸ್ಥಾನ : ಆಂಧ್ರಪ್ರದೇಶದ ಶ್ರೀಕಾಕುಲಂ ಬಳಿಯಿರುವ ಕುರ್ಮಮ್ ಎಂಬ ಹಳ್ಳಿಯ ಶ್ರೀ ಕುರ್ಮಮ್ ದೇವಸ್ಥಾನವು ಭಗವಾನ್ ವಿಷ್ಣುವಿನ ಕುರ್ಮಾವತಾರಕ್ಕೆ ಮುಡಿಪಾದ ವಿಶಿಷ್ಟ ದೇವಾಲಯವಾಗಿದೆ. ಈ ದೇವಸ್ಥಾನದಲ್ಲಿ ಕುರ್ಮಾವತಾರದ ಸಂಕೇತವಾಗಿ ಯಾವುದೆ ಮಾನವ ನಿರ್ಮಿತ ವಿಗ್ರಹಗಳಿರದೆ ಬದಲಾಗಿ ನಿಜವಾದ ಆಮೆಯ ಪಳೆಯುಳಿಕೆಯಿರುವುದು ವಿಶೇಷ. ಅಲ್ಲದೆ ಕುರ್ಮ ರೂಪದ ಏಕೈಕ ದೇವಾಲಯ ಇದಾಗಿದ್ದು ದೇಗುಲದ ಮುಂದೆ ಹಿಂದೆ ಎರಡು ದಿಕ್ಕುಗಳಲ್ಲಿ ಧ್ವಜಸ್ಥಂಬಗಳಿರುವ ಕೆಲವೆ ಕೆಲವು ದೇವಾಲಯಗಳ ಪೈಕಿ ಇದು ಒಂದಾಗಿದೆ. ನಂಬಿಕೆಯೆಂತೆ ಇಲ್ಲಿನ ಪ್ರದಕ್ಷಿಣೆ ಸ್ಥಳದಲ್ಲಿ ಪ್ರದಕ್ಷಿಣೆ ಹಾಕುವಾಗ ಒಂದು ಧನಾತ್ಮಕ ಆಯಾಸ್ಕಾಂತೀಯ ಶಕ್ತಿಯು ಪಾದಗಳ ಮೂಲಕ ದೇಹದಲ್ಲಿ ಹರಿಯುತ್ತದೆನ್ನಲಾಗಿದೆ.

ಚಿತ್ರಕೃಪೆ: Seshagirirao

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಶ್ರೀಕಾಕುಲಂ ಪಟ್ಟಣದ ಜಲಮುರು ಗ್ರಾಮದಲ್ಲಿರುವ ಶ್ರೀಮುಖಲಿಂಗೇಶ್ವರ ದೇವಾಲಯವು ಆಂಧ್ರದ ಪ್ರಖ್ಯಾತ ಶಿವ ದೇವಾಲಯಗಳ ಪೈಕಿ ಒಂದಾಗಿದೆ. ವಂಶಧಾರಾ ನದಿ ತಟದಲ್ಲಿ ನೆಲೆಸಿರುವ ಈ ದೇವಾಲಯವು ಪ್ರತಿ ವರ್ಷ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Kishore.bannu

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಶ್ರೀಕಾಕುಲಂನ ಗರ ಎಂಬ ತಾಲೂಕಿನಲ್ಲಿರುವ ಸಾಲಿಹುಂಡಂ ಎಂಬ ಗ್ರಾಮವು ಐತಿಹಾಸಿಕ ಪ್ರವಾಸಿ ಆಕರ್ಷಣೆಯುಳ್ಳ ಬೌದ್ಧ ಧರ್ಮದ ಗುರುತಿರುವ ತಾಣ. ಇಂದಿಗೂ ಈ ಗ್ರಾಮದಲ್ಲಿ ಬೌದ್ಧ ಧರ್ಮ ಈ ಪ್ರದೇಶದಲ್ಲಿ ಅಸ್ತಿತ್ವವಿದ್ದ ಸಂದರ್ಭದಲ್ಲಿ ನಿರ್ಮಾಣಗೊಂಡ ಅನೇಕೆ ರಚನೆಗಳು ಹಾಗೂ ಬೌದ್ಧ ಸ್ತೂಪಗಳನ್ನು ಇಂದು ಅಳಿದುಳಿದ ಅವಶೇಶಗಳ ರೂಪದಲ್ಲಿ ನೋಡಬಹುದು.

ಚಿತ್ರಕೃಪೆ: George Puvvada

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ವೈಜಾಗ್ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ವಿಶಾಖಾಪಟ್ಟಣಂ ಆಂಧ್ರಪ್ರದೇಶ ರಾಜ್ಯದ ಅತಿ ದೊಡ್ಡ ಪಟ್ಟಣವಾಗಿದ್ದು, ಆಂಧ್ರ ಕರಾವಳಿ ಪ್ರದೇಶದ ಪ್ರಮುಖ ಬಂದರು ಹಾಗೂ ಪ್ರವಾಸಿ ವಿಶೇಷತೆಯ ಪಟ್ಟಣವಾಗಿದೆ. ಪೂರ್ವ ಕರಾವಳಿ ತೀರದಗುಂಟ ನೆಲೆಸಿರುವ ಚೆನ್ನೈ ಹಾಗೂ ಕೊಲ್ಕತ್ತಾ ನಗರಗಳ ನಂತರದ ಅತಿ ದೊಡ್ಡ ಪಟ್ಟಣವೂ ಸಹ ಇದಾಗಿದ್ದು, ವೈಶಾಕ ದೇವತೆಯ ಗೌರವಾರ್ಥಕವಾಗಿ ಈ ಪಟ್ಟಣಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Sankara Subramanian

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಮೂಲತಃ ವೈಜಾಗ್ ಒಂದು ಸುಂದರಮಯ ಕಡಲ ತೀರಗಳುಳ್ಳ ಬಂದರು ಪಟ್ಟಣವಾಗಿದೆ. ಅಲ್ಲದೆ ಭಾರತ ಸೇನೆಯ ಒಂದು ಭಾಗವಾದ ನೌಕಾದಳದ ಪೂರ್ವ ನೌಕಾದಳ ವಿಭಾಗಕ್ಕೆ ಕೇಂದ್ರವಾಗಿದೆ. ಪ್ರಸ್ತುತ ವೈಜಾಗ್ ಒಂದು ರಭಸವಾಗಿ ಬೆಳೆಯುತ್ತಿರುವ ಕೈಗಾರಿಕಾ ನಗರ ಎಂಬ ಹಿರಿಮೆ ಹೊಂದಿದ್ದರೂ ಸಹ ಇಲ್ಲಿ ಶ್ರೀಮಂತಮಯ ಸಂಸ್ಕೃತಿ, ಸಂಪ್ರದಾಯಗಳು ತಳುಕು ಹಾಕಿಕೊಂಡಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Sankara Subramanian

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ವೈಜಾಗ್ ನಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದ, ಚುಂಬಕದಂತೆ ಸೆಳೆಯುವ ಪ್ರವಾಸಿ ಆಕರ್ಷಣೆಗಳನ್ನು ನೋಡಬಹುದಾಗಿದೆ. ವೈಜಾಗ್ ಈಸ್ಟ್ ಕೋಸ್ಟ್ ರಾಷ್ಟ್ರೀಯ ಹೆದ್ದಾರಿ ಐದರ ಮೇಲೆ ಸ್ಥಿತವಿದ್ದು ಚೆನ್ನೈ ಹಾಗೂ ಕೊಲ್ಕತ್ತಾದೊಂದಿಗೆ ಉತ್ತಮ ರೈಲು ಹಾಗೂ ಬಸ್ಸು ಸಂಪರ್ಕ ಹೊಂದಿದೆ. ಬೆಂಗಳೂರಿನಿಂದ 1000 ಕಿ.ಮೀ ಗಳಷ್ಟು ದೂರವಿರುವ ವೈಜಾಗ್ ಪಟ್ಟಣಕ್ಕೆ ತೆರಳಲು ಬೆಂಗಳೂರಿನಿಂದ ನೇರವಾದ ರೈಲುಗಳು ಹಾಗೂ ಕೆಲ ಖಾಸಗಿ ಬಸ್ಸುಗಳೂ ಸಹ ದೊರೆಯುತ್ತವೆ. ರೈಲಿನಲ್ಲಿ ವೈಜಾಗ್ ಬೆಂಗಳೂರಿನಿಂದ ಸುಮಾರು 23 ರಿಂದ 24 ಘಂಟೆಗಳಷ್ಟು ಪ್ರಯಾಣಾವಧಿಯ ದೂರದಲ್ಲಿದೆ.

ಚಿತ್ರಕೃಪೆ: Pulkit Sinha

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ವೈಜಾಗ್ ಮೂಲವಾಗಿ ಶ್ರೀ ವೆಂಕಟೇಶ್ವರ ಕೊಂಡ, ರಾಸ್ ಬೆಟ್ಟ ಹಾಗೂ ದರ್ಗಾ ಕೊಂಡ ಎಂಬ ಮೂರು ಬೆಟ್ಟಗಳಿಂದ ಸುತ್ತುವರೆದಿದ್ದು ಪ್ರತಿ ಬೆಟ್ಟಗಳ ಮೇಲೆ ಆಯಾ ಧರ್ಮದ ಪವಿತ್ರ ಸನ್ನಿಧಿಗಳಿರುವುದನ್ನು ಗಮನಿಸಬಹುದಾಗಿದೆ.

ಚಿತ್ರಕೃಪೆ: Sankara Subramanian

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಕೈಲಾಸಗಿರಿ ಬೆಟ್ಟ : ನಗರದಿಂದ 26 ಕಿ.ಮೀ ಗಳಷ್ಟು ದೂರದಲ್ಲಿರುವ ಕೈಲಾಸಗಿರಿ ಪರ್ವತ ಪ್ರದೇಶವು ಒಂದು ಸುಂದರ ಹಾಗೂ ಆಕರ್ಷಕ ಪ್ರವಾಸಿ ತಾಣವಾಗಿದೆ. ಇಲ್ಲಿ ರಾಮಕೃಷ್ಣ ಹಾಗೂ ರಿಷಿಕೊಂಡ ಎಂಬ ಸುಂದರ ಕಡಲ ತೀರಗಳನ್ನು ನೋಡಬಹುದಾಗಿದ್ದು ಭೇಟಿ ನೀಡಲು ಪ್ರವಾಸಿಗರ ಮನ ಹವಣಿಸುವಂತೆ ಮಾಡುತ್ತವೆ. ಕೈಲಾಸಗಿರಿಯಲ್ಲಿರುವ ಶಿವಪಾರ್ವತಿಯರ ಪ್ರತಿಮೆಗಳು.

ಚಿತ್ರಕೃಪೆ: Sankara Subramanian

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ರಾಮಕೃಷ್ಣ ಕಡಲ ತೀರ : ಪರಿಶುದ್ಧ ನೀರು ಹಾಗೂ ಸಮ್ಮೋಹಿತಗೊಳಿಸುವ ಸುಂದರ ಸೂರ್ಯೋದಯ ಹಾಗೂ ಸೂರ್ಯಾಸ್ತಗಳ ನೋಟಗಳಿಗೆ ಹೆಸರುವಾಸಿಯಾಗಿದೆ. ವೈಜಾಗ್ ನಲ್ಲಿರುವ ರಾಮಕೃಷ್ಣ ಕಡಲ ತೀರ.

ಚಿತ್ರಕೃಪೆ: Srichakra Pranav

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ವೈಜಾಗ್ ಪಟ್ಟಣದಲ್ಲಿರುವ ಮತ್ತೊಂದು ಅಮೋಘ್ ಕಡಲ ತೀರವಾದ ರಿಷಿಕೊಂಡ ಕಡಲ ತೀರದ ಅದ್ಭುತ ನೋಟ.

ಚಿತ್ರಕೃಪೆ: Sarath Kuchi

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಜಲಾಂತರ್ಗಾಮಿ ಸಂಗ್ರಹಾಲಯ : ವೈಜಾಗ್ ನಲ್ಲಿರುವ ಈ ಜಲಾಂತರ್ಗಾಮಿ ಸಂಗ್ರಹಾಲಯವು ದೇಶದಲ್ಲಿ ತನ್ನದೆ ಆದ ಒಂದು ವಿಶಿಷ್ಟ ರೀತಿಯ ಸಂಗ್ರಹಾಲಯವಾಗಿದೆ. ಐ ಎನ್ ಎಸ್ ಕುರುಸುರಾ ಎಂಬ ನಿಜವಾದ ಜಲಾಂತರ್ಗಾಮಿಯಲ್ಲಿ ಈ ಸಂಗ್ರಹಾಲಯವಿರುವುದು ವಿಶೇಷ. ಸತತ 21 ವರ್ಷಗಳ ಕಾಲ ಭಾರತೀಯ ನೌಕಾದಳದಲ್ಲಿ ತನ್ನ ಅವಿಸ್ಮರಣೀಯ ಸೇವೆ ಸಲ್ಲಿಸಿದ ಬಳಿಕ ಈ ಜಲಾಂತರ್ಗಾಮಿಯನ್ನು ರಾಮಕೃಷ್ಣ ಕಡಲ ತೀರದ ಬಳಿ ಕಾಂಕ್ರೀಟ್ ಕಟ್ಟೆಯೊಂದರ ಮೇಲೆ ಆಧಾರವಾಗಿರಿಸಲಾಗಿದೆ.

ಚಿತ್ರಕೃಪೆ: aptdc.gov.in

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಡಾಲ್ಫಿನ್ ನೋಸ್ : ಡಾಲ್ಫಿನ್ (ದೊಡ್ಡ ಗಾತ್ರದ ಮೀನಿನಂತಿರುವ ಸಮುದ್ರ ಸಸ್ತನಿ) ಮೂಗನ್ನು ಹೋಲುವ ತಾಣವೊಂದು ವಿಶಾಖಾಪಟ್ಟಣಂದಲ್ಲಿದ್ದು ಡಾಲ್ಫಿನ್ ನೋಸ್ ಎಂದು ಇದು ಹೆಸರುವಾಸಿಯಾಗಿದೆ. ಇದೊಂದು ಬೃಹದಾಕಾರದ ಬಂಡೆಯಾಗಿದ್ದು 174 ಮೀ ಗಳಷ್ಟು ಎತ್ತರವಿದೆ.

ಚಿತ್ರಕೃಪೆ: aptdc.gov.in

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಟೈಡಾ : ಆಂಧ್ರಪ್ರದೇಶ ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಗಳ ಜಂಟಿ ಸಹಯೋಗದಲ್ಲಿ ರೂಪಗೊಂಡ ಸುಂದರ, ಕಣ್ಮನ ಸೆಳೆವ ಕಾಡುಗಳ ದಟ್ಟ ಹಸಿರಿನಲ್ಲಿ ರೂಪಗೊಂಡ ವಿಶೇಷ ಪ್ರದೇಶವೆ ಟೈಡಾ. ಇದು ಪ್ರಖ್ಯಾತವಾದ ಜಂಗಲ್ ಬೆಲ್ಸ್ ರಿಸಾರ್ಟಿಗೆ ಹೆಸರುವಾಸಿಯಾಗಿದೆ. ಈ ರಿಸಾರ್ಟಿಗೆ ತಲುಪಲು ಪ್ರವಾಸಿಗರು ರೈಲು ಪ್ರಯಾಣವನ್ನೂ ಸಹ ಮಾಡಬಹುದಾಗಿದೆ. ದಟ್ಟ ಹಸಿರಿನ ಕಾಡುಗಳ ಮಧ್ಯದಲ್ಲಿ ಸುರಂಗಗಳನ್ನು ಹಿಂದಿಕ್ಕುತ್ತಾ ಓಡುವ ರೈಲು ಅವಿಸ್ಮರಣೀಯವಾದ ಅನುಭವವನ್ನು ಕರುಣಿಸುತ್ತದೆ.

ಚಿತ್ರಕೃಪೆ: aptdc.gov.in

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಋಷಿಕೊಂಡ : ಪೂರ್ವ ಕರಾವಳಿಯ ರತ್ನ ಎಂಬ ನಾಮದಿಂದ ಭೂಷಿತವಾಗಿರುವ ಋಷಿಕೊಂಡ ಬೆಟ್ಟವು ನಗರದಿಂದ ಎಂಟು ಕಿ.ಮೀ ದೂರದಲ್ಲಿ ಸ್ಥಿತವಿರುವ ಸುಂದರ ಪ್ರವಾಸಿ ತಾಣವಾಗಿದೆ. ಸುವರ್ಣ ಬಣ್ಣದ ಮರಳಿನ ಹಾಸಿಗೆಯ ಮೇಲೆ ಸಮುದ್ರದಲೆಗಳ ಝೆಂಕಾರ ಕೇಳುತ್ತ ನಿರರ್ಗಳವಾಗಿ ವಿಶ್ರಾಂತಿ ಪಡೆಯ ಬಯಸುವ ಮನಗಳಿಗೆ ಯೋಗ್ಯವಾದ ಸ್ಥಳವಾಗಿದೆ ಇದು.

ಚಿತ್ರಕೃಪೆ: aptdc.gov.in

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಲಾವ್ಸನ್ಸ್ ಬೇ : ರಾಮಕೃಷ್ಣ ಕಡಲ ತೀರದ ಬಳಿ ಕೈಲಾಸಗಿರಿ ಬೆಟ್ಟಕ್ಕೆ ಹೋಗುವ ರಸ್ತೆಯೆಡೆ ಈ ಸುಂದರ ಚಿತ್ರಸದೃಶವಾದ ಕಡಲ ತೀರವಿದೆ. ಈ ಒಂದು ಕಡಲ ತೀರದ ಕಾಲೋನಿಗಳಿಂದ ಸಾಮಾನ್ಯವಾಗಿ ಮೀನುಗಾರರು ದಿನಗಳಗಟ್ಟಲೆ ಸಮುದ್ರದಲ್ಲಿ ತೆರಳಿ ಪ್ರತಿಷ್ಠಿತ ಟುನಾ ಹಾಗೂ ಸ್ವೋರ್ಡ್ ಮೀನುಗಳನ್ನು ಹಿಡಿದು ತರುತ್ತಾರೆ.

ಚಿತ್ರಕೃಪೆ: aptdc.gov.in

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ವುಡಾ ಉದ್ಯಾನ : 55 ಎಕರೆಅಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಈ ಉದ್ಯಾನ ಆಕರ್ಷಕ ಸಸ್ಯಗಳು ಹಾಗೂ ಹೂವುಗಳಿಂದ ಅಲಂಕೃತಗೊಂಡ ಸುಂದರ ಭೂದೃಶ್ಯಾವಳಿಗಳ ಉದ್ಯಾನವಾಗಿದೆ. 2500 ಕ್ಕೂ ಹೆಚ್ಚಿನ ಗಿಡ ಮರಗಳನ್ನು ಇಲ್ಲಿ ಕಾಣಬಹುದಾಗಿದೆ. ಕುಟುಂಬ ಸಮೇತ ಪಿಕ್ನಿಕ್ ತಾಣಕ್ಕೆ ಯೋಗ್ಯವಾದ ಸ್ಥಳವಾಗಿದೆ ಈ ಉದ್ಯಾನ. ವೈಜಾಗ್ ನಲ್ಲಿರುವ ಈ ಉದ್ಯಾನ ಬೆಳಿಗ್ಗೆ ಒಂಬತ್ತು ಘಂಟೆಯಿಂದ ರಾತ್ರಿಯ ಎಂಟು ಘಂಟೆಯವರೆಗೂ ತೆರೆದಿದ್ದು ಮನರಂಜನಾ ಕ್ರೀಡೆಗಳನ್ನೂ ಸಹ ಇಲ್ಲಿ ಆಸ್ವಾದಿಸಬಹುದಾಗಿದೆ.

ಚಿತ್ರಕೃಪೆ: aptdc.gov.in

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಇಂದಿರಾಗಾಂಧಿ ಪ್ರಾಣಿ ಉದ್ಯಾನ : ವಿಶಾಖಾಪಟ್ಟಣಂನ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸ್ಥಿತವಿರುವ ಈ ಪ್ರಾಣಿ ಉದ್ಯಾನವು ವಾರಾಂತ್ಯದ ರಜೆಗೆ ಭೇಟಿ ನೀಡಲು ಪ್ರಶಸ್ತ ಸ್ಥಳವಾಗಿದ್ದು, 255 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಭವ್ಯವಾಗಿ ಹರಡಿದೆ. ಇಲ್ಲಿ ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ನೋಡಬಹುದಾಗಿದೆ. ಅಷ್ಟೆ ಅಲ್ಲ, ಆಸ್ಟ್ರೇಲಿಯಾ ಖಂಡದಿಂದಲೂ ಇಲ್ಲಿ ಕೆಲ ಪ್ರಾಣಿಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಚಿತ್ರಕೃಪೆ: Pulkit Sinha

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಸಿಂಹಾಚಲಂ : ವೈಜಾಗ್ ನಿಂದ 16 ಕಿ.ಮೀ ಗಳಷ್ಟು ದೂರವಿರುವ ಸಿಂಹಾಚಲಂ ಅಥವಾ ಸಿಂಹಾದ್ರಿಯು ಒಂದು ಉಪನಗರ ಪ್ರದೇಶವಾಗಿದೆ. ವಿಷ್ಣುವಿನ ಪುನರಾವತಾರವಾದ ಒಂದು ದೈವಕ್ಕೆ ಮುಡಿಪಾದ ಪ್ರಸಿದ್ಧ ದೇಗುಲಕ್ಕೆ ಇದು ಹೆಸರುವಾಸಿಯಾಗಿದೆ. ವಿಶೇಷವೆಂದರೆ ಈ ದೇವಸ್ಥಾನದ ಮುಖ್ಯ ದೇವರು ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ 12 ಘಂಟೆಗಳಷ್ಟು ಕಾಲ ಮಾತ್ರವೆ ದರುಶನ ಕೊಡುತ್ತಾನೆ ಮಿಕ್ಕ ಸಮಯವೆಲ್ಲ ಸಂಪೂರ್ಣವಾಗಿ ಚಂದನದಿಂದ ಅಲಂಕರಿಸಲ್ಪಟ್ಟಿರುತ್ತಾನೆ.

ಚಿತ್ರಕೃಪೆ: Sureshiras

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ವಿಜಯವಾಡಾ : ಆಂಧ್ರದ ಕೃಷ್ಣಾ ಜಿಲ್ಲೆಯಲ್ಲಿರುವ ವಿಜಯವಾಡಾ ವೈಜಾಗ್ ನಂತರದ ಆಂಧ್ರದ ಎರಡನೆಯ ದೊಡ್ಡ ನಗರ ಪ್ರದೇಶವಾಗಿದೆ. ಈ ಸ್ಥಳದ ಹೆಸರು ಕುರಿತು ಅನೇಕ ಕಥೆಗಳಿವೆ. ಒಂದರ ಪ್ರಕಾರ, ಹಿಂದೆ ದುರ್ಗಾ ದೇವಿಯು ರಕ್ಕಸನನ್ನು ಸಂಹರಿಸಿ ಈ ಸ್ಥಳದಲ್ಲಿ ವಿಶ್ರಮಿಸಿದ್ದರ ಗುರುತಾಗಿ ವಿಜಯ ಅಂದರೆ ಜಯಶೀಲೆಯಾದ ದೇವಿ, ವಾಡಾ ಅಂದರೆ ವಿರಮಿಸಿದ ಸ್ಥಳವಾಗಿ ವಿಜಯವಾಡಾ ಎಂಅ ಹೆಸರು ಬಂದಿತೆನ್ನಲಾಗಿದೆ.

ಚಿತ್ರಕೃಪೆ: vijay chennupati

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಇನ್ನೊಂದು ಕಥೆಯ ಪ್ರಕಾರ, ಕೃಷಣವೇಣಿ ದೇವಿಯು (ಕೃಷ್ಣಾ ನದಿ) ತಾನು ಬಂಗಾಳ ಕೊಲ್ಲಿಗೆ ಸೇರಲು ಅನುವು ಮಾಡಿಕೊಡುವಂತೆ ಅರ್ಜುನನಿಗೆ ವಿನಂತಿಸಿದಾಗ, ಅರ್ಜುನನು ಬೆಟ್ಟಗುಡ್ಡಗಳ ಪ್ರದೇಶವನ್ನು ತನ್ನ ಬಾಣದಿಂದ ಕೊರೆದು ರಂಧ್ರ ಮಾಡಿದ. ತೆಲುಗಿನಲ್ಲಿ ಬೆಜ್ಜಂ ಎಂದರೆ ತೆಗ್ಗು, ದೊಡ್ಡ ರಂಧ್ರ ಅರ್ಥ ಬರುವುದರಿಂದ ಇದಕ್ಕೆ ಬೆಜ್ಜಂವಾಡಾ ಎಂಬ ಹೆಸರು ಬಂದು ಕ್ರಮೇಣವಾಗಿ ಅದು ಬೇಜವಾಡಾ ಆಗಿ ಕೊನೆಯದಾಗಿ ವಿಜಯವಾಡಾ ಎಂಬ ರೂಪ ಪಡೆಯಿತೆನ್ನಲಾಗಿದೆ.

ಚಿತ್ರಕೃಪೆ: Ashwin Kumar

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ವಿಜಯವಾಡಾ ನಗರವು ಪೂರ್ವ ಹಾಗೂ ಪಶ್ಚಿಮಗಳಲ್ಲಿ ಕೃಷ್ಣಾ ನದಿಯಿಂದಲೂ ಉತ್ತರದಲ್ಲಿ ಬುಡಮೇರು ನದಿಯಿಂದಲೂ ಸುತ್ತುವರೆದಿದ್ದು ತನ್ನಲ್ಲಿ ಹಾಗೂ ಸುತ್ತಮುತ್ತಲು ಸಾಕಷ್ಟು ಪ್ರವಾಸಿ ಆಕರ್ಷಣೆಯ ತಾಣಗಳಿಂದ ಕೂಡಿದೆ.

ಚಿತ್ರಕೃಪೆ: vijay chennupati

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಪ್ರಕಾಶಂ ಬ್ಯಾರೇಜ್ : ಗುಂಟೂರು ಹಾಗೂ ವಿಜಯವಾಡಾಗಳನ್ನು ಬೆಸೆಯುವ ಪ್ರಕಾಶಂ ಆಣೆಕಟ್ಟಿನಂತಹ ರಚನೆಯು ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಅದ್ಭುತ ರಚನೆಯು ಮನೋಹರವಾದ ನೋಟವನ್ನು ಕರುಣಿಸುತ್ತದೆ.

ಚಿತ್ರಕೃಪೆ: solarisgirl

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಮೂಲತಃ ಈ ಆಣೆಕಟ್ಟೆಯನ್ನು ನೂರು ವರ್ಷಕ್ಕಿಂತಲೂ ಮುಂಚೆ ನಿರ್ಮಾಣ ಮಾಡಲಾಗಿದ್ದರೂ ಪ್ರಸ್ತುತ ರಚನೆಯು 1950 ರ ಸಂದರ್ಭದಲ್ಲಿನವೀಕರಿಸಿ ನಿರ್ಮಾಣ ಮಾಡಲಾಗಿದೆ. ಮೊದಲಿನ ಅವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯ ಮಂತ್ರಿಯಾಗಿದ್ದ ಶ್ರೀ ತಂಗುತುರಿ ಪ್ರಕಾಶಂ ಅವರ ಸ್ಮರಣಾರ್ಥವಾಗಿ ಇದಕ್ಕೆ ಪ್ರಕಾಶಂ ಬ್ಯಾರೇಜ್ ಎಂಬ ಹೆಸರನ್ನಿಡಲಾಗಿದೆ.

ಚಿತ್ರಕೃಪೆ: Balajirakonda

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಕೃಷ್ಣವೇಣಿ ಮಂಡಪಂ : ಪ್ರಕಾಶಂ ಬ್ಯಾರೇಜ್ ಪಕ್ಕದಲ್ಲಿರುವ ಈ ತಾಣವನ್ನು ಸ್ಥಳೀಯವಾಗಿ ನದಿ ಬದಿಯ ವಸ್ತು ಸಂಗ್ರಹಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಪ್ರತಿ 12 ವರ್ಷಕ್ಕೊಮ್ಮೆ ಆಚರಿಸಲಾಗುವ ಕೃಷ್ಣ ಪುಷ್ಕರುಲು (ಕೃಷ್ಣಾ ಉತ್ಸವ) ಸಂದರ್ಭದಲ್ಲಿ ಇದಕ್ಕೆ ಬಹು ಜನರು ಭೇಟಿ ನೀಡುತ್ತಾರೆ. ಕೃಷ್ಣಾ ನದಿಯ ಇತಿಹಾಸದ ಕುರಿತು ಹಲವು ಕೌತುಕಮಯ ವಸ್ತು ವಿಷಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇದರ ಆವರಣದಲ್ಲಿ ಕ್ರೂಷ್ಣವೇಣಿಯ ವಿಗ್ರಹವನ್ನೂ ಸಹ ಕಾಣಬಹುದು.

ಚಿತ್ರಕೃಪೆ: Bhaskaranaidu

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಭವಾನಿ ನಡುಗಡ್ಡೆ ಹಾಗೂ ಕನಕಾ ದುರ್ಗಾ ದೇವಸ್ಥಾನ : ಭವಾನಿ ದ್ವೀಪವು ಕೃಷ್ಣ ನದಿಯಲ್ಲಿರುವ ಅತಿ ದೊಡ್ಡ ನಡುಗಡ್ಡೆಯಾಗಿದೆ. ಆಂಧ್ರ ಸರ್ಕಾರವು ಈ ತಾಣವನ್ನು ಒಂದು ಅದ್ಭುತ ಪ್ರವಾಸಿ ಆಕರ್ಷಣೆಯನ್ನಾಗಿ ಪ್ರಸಿದ್ಧ ಪಡಿಸುವುದರಲ್ಲಿ ಯೋಜನೆ ಹಾಕಿ ಕೊಂಡಿದೆ. ಈ ನಡುಗಡ್ಡೆಗೆ ಬಹು ಹತ್ತಿರದಲ್ಲಿ ಕನಕ ದುರ್ಗಾ ದೇವಿಯ ದೇವಸ್ಥಾನವಿದ್ದು ವಿಜಯವಾಡಾದ ಪ್ರಸಿದ್ಧ ಆಕರ್ಷಣೆಯಾಗಿ ಜನರನ್ನು ಸೆಳೆಯುತ್ತದೆ. ಈ ದುರ್ಗಾ ದೇವಿಯನ್ನು ಭವಾನಿ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ ಹಾಗೂ ಆಕಾರಣವಾಗಿ ನಡುಗಡ್ಡೆ ಭವಾನಿ ನಡುಗಡ್ಡೆ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Srikar Kashyap

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಇಲ್ಲಿನ ಇಂದ್ರಕೀಲ ಎಂಬ ಬೆಟ್ಟದಲ್ಲಿ ಶಕ್ತಿ ಮಾತೆಯ ಈ ದೇವಾಲಯವಿರುವುದನ್ನು ನೋಡಬಹುದು.

ಚಿತ್ರಕೃಪೆ: Adityamadhav83

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಉಂಡವಲ್ಲಿ ಗುಹೆಗಳು : ಗುಂಟೂರು ಜಿಲ್ಲೆಯಲ್ಲಿದೆಯಾದರೂ ವಿಜಯವಾಡಾ ನಗರದಿಂದ ಕೇವಲ ಐದು ಕಿ.ಮೀ ಗಳಷ್ಟು ದೂರದಲ್ಲಿವೆ ಈ ಆಕರ್ಷಕ ಐತಿಹಾಸಿಕ ಗುಹೆಗಳು. ಏಳನೇಯ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ಗುಹೆಗಳಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ರಚನೆಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Kamal Venkit

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಇತಿಹಾಸ ತಜ್ಞರ ಪ್ರಕಾರ ಹಿಂದೆ ಇಲ್ಲಿ ಬೌದ್ಧ ಧರ್ಮವು ವ್ಯಾಪಕವಾಗಿ ಹರಡಿತ್ತು ಹಾಗೂ ಒಂದು, ಎರಡು ಅಂತಸ್ತುಗಳುಳ್ಳ, ಶಿಲೆಗಳನ್ನು ಕೆತ್ತಿ ನಿರ್ಮಿಸಲಾದ ಈ ಗುಹೆಗಳಲ್ಲಿ ಬೌದ್ಧ ಭಿಕ್ಷುಗಳು ಮಳೆಗಾಲದ ಸಂದರ್ಭದಲ್ಲಿ ವಿಶ್ರಾಂತಿ ಪಡೆಯುವ ಸ್ಥಳವನ್ನಾಗಿ ಬಳಸುತ್ತಿದ್ದರಂತೆ. ಇಂದು ಈ ರಚನೆಗಳು ಪ್ರವಾಸಿ ಆಕರ್ಷಣೆಗಳಾಗಿವೆ.

ಚಿತ್ರಕೃಪೆ: Kalyan Kanuri

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಕನಕ ದುರ್ಗಾ ದೇವಿ ದೇವಸ್ಥಾನಕ್ಕೆ ಹತ್ತಿರದಲ್ಲೆ ಮತ್ತೊಂದು ಐತಿಹಾಸಿಕ ಗುಹಾಂತರ ದೇವಾಲಯಕ್ಕೆ ಭೇಟಿ ನೀಡಬಹುದು. ಆ ದೇವಾಲಯವೆ ಅಕ್ಕಣ್ಣ ಮತ್ತು ಮಾದಣ್ಣ ಗುಹಾ ದೇವಾಲಯ. ಇವರಿಬ್ಬರು ಹಿಂದೂ ಧರ್ಮಕ್ಕೆ ಸೇರಿದ ಸಹೋದರರಾಗಿದ್ದು ಗೋಲ್ಕೊಂಡಾದ ಅತಿ ಹೆಚ್ಚು ಮುಸ್ಲಿಮರಿದ್ದ ಪ್ರದೇಶವನ್ನು ಸಮರ್ಥವಾಗಿ ಆಳಿದ್ದರು.

ಚಿತ್ರಕೃಪೆ: Adityamadhav83

ಅದ್ಭುತ ಆಂಧ್ರ ಕರಾವಳಿ:

ಅದ್ಭುತ ಆಂಧ್ರ ಕರಾವಳಿ:

ಪರಿಟಾಲ ಆಂಜನೇಯ ಸ್ವಾಮಿ ದೇವಾಲಯ : ವಿಜಯವಾಡಾದಿಂದ ಕೇವಲ 30 ಕಿ.ಮೀ ದೂರದಲ್ಲಿದೆ ಪರಿಟಾಲ ಎಂಬ ಗ್ರಾಮವಿದ್ದು ಆ ಗ್ರಾಮವು ತನ್ನಲ್ಲಿರುವ ಅತಿ ಎತ್ತರದ ಆಂಜನೇಯ ಸ್ವಾಮಿಯ ಮೂರ್ತಿಗೆ ಹೆಸರುವಾಸಿಯಾಗಿದೆ. ಈ ಆಂಜನೇಯನನ್ನು ವೀರ ಅಭಯ ಆಂಜನೇಯ ಸ್ವಾಮಿ ಎಂದು ಕರೆಯುತ್ತಾರೆ. ಈ ಮೂರ್ತಿಯ ಎತ್ತರ 135 ಅಡಿಗಳು.

ಚಿತ್ರಕೃಪೆ: MaddogMike

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X