Search
  • Follow NativePlanet
Share
» »ಫ್ಯಾಮಿಲಿ ಜೊತೆ ಗೋವಾಗೆ ಹೋಗ್ತಿದ್ದೀರಾ, ಹಾಗಾದ್ರೆ ಈ ಬೀಚ್ ಗಳಿಂದ ದೂರವಿದ್ರೆ ಒಳಿತು!

ಫ್ಯಾಮಿಲಿ ಜೊತೆ ಗೋವಾಗೆ ಹೋಗ್ತಿದ್ದೀರಾ, ಹಾಗಾದ್ರೆ ಈ ಬೀಚ್ ಗಳಿಂದ ದೂರವಿದ್ರೆ ಒಳಿತು!

ಗೋವಾ ಒಂದು ಚಿಕ್ಕ ರಾಜ್ಯ. ಅದ್ಭುತವಾದ, ಸುಂದರವಾದ ಕಡಲತೀರಗಳಿಂದಾಗಿ ವಿಶ್ವದಲ್ಲೇ ವಿಭಿನ್ನ ಗುರುತನ್ನು ಪಡೆದಿದೆ ಗೋವಾ. ಸರಿಸುಮಾರು 40 ದೊಡ್ಡ ಮತ್ತು ಚಿಕ್ಕ ಕಡಲತೀರಗಳನ್ನು ಹೊಂದಿರುವ ಈ ಸ್ಥಳವು ಪ್ರಶಾಂತ ವಾತವರಣ ಬಯಸುವವರಿಗೆ ಮತ್ತು ಪ್ರಕೃತಿ ಪ್ರಿಯರನ್ನು ತುಂಬಾ ಆಕರ್ಷಿಸುತ್ತದೆ. ಇಲ್ಲಿಗೆ ಬಂದರೆ ತೆಂಗಿನ ಮರಗಳು, ಸಮುದ್ರದ ನೀರಿನ ಮೇಲೆ ಬೀಳುವ ಸೂರ್ಯನ ಕಿರಣಗಳ ರುದ್ರರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಇಂತಹ ಅನೇಕ ಸಂಗತಿಗಳು ಗೋವಾದ ಸೌಂದರ್ಯವನ್ನು ಹೆಚ್ಚಿಸಿವೆ. ಸ್ಥಳೀಯರು ಮಾತ್ರವಲ್ಲದೆ, ವಿದೇಶಿಯರೂ ಸಹ ಈ ರಾಜ್ಯದ ಸೌಂದರ್ಯ ಆನಂದಿಸಲು ಬರುತ್ತಾರೆ.

ಗೋವಾ ವಿದೇಶಿಯರ ನೆಚ್ಚಿನ ಸ್ಥಳವೆಂದರೆ ತಪ್ಪಾಗಲಾರದು. ಹೌದು, ಇಲ್ಲಿಯ ಕೆಲವು ಬೀಚ್‌ಗಳನ್ನು ಅವರು ಬಹಳ ಇಷ್ಟಪಡುತ್ತಾರೆ. ಆದ್ದರಿಂದ ಅವುಗಳನ್ನು ಫಾರಿನರ್ ಬೀಚ್ ಎಂದೂ ಕರೆಯಲಾಗುತ್ತದೆ. ಆದರೆ ಗೋವಾದ ಕೆಲವು ಕಡಲತೀರಗಳಲ್ಲಿ ವಿದೇಶಿಯರ ಸಂಖ್ಯೆ ಕಡಿಮೆ. ಅಂದಹಾಗೆ ನೀವು ಕುಟುಂಬ ಸದಸ್ಯರೊಂದಿಗೆ ಗೋವಾದ ಬೀಚ್‌ಗಳನ್ನು ನೋಡಲು ಯೋಜಿಸುತ್ತಿದ್ದರೆ, ಸಾಧ್ಯವಾದಷ್ಟು ನೀವು ನಿಮ್ಮ ಕುಟುಂಬವನ್ನು ಈ ಕೆಳಕಂಡ ಬೀಚ್‌ಗಳಿಗೆ ಕರೆದುಕೊಂಡು ಹೋಗದಿದ್ದರೆ ಒಳಿತು. ಯಾಕೆ ಅಂತ ಮುಂದೆ ಕೊಡಲಾಗಿದೆ ಓದಿ...

ಪಲೋಲೆಂ ಬೀಚ್

ಪಲೋಲೆಂ ಬೀಚ್

ಪಲೋಲೆಂ ಬೀಚ್ ಗೋವಾದ ಕ್ಯಾನಕೋನಾದಲ್ಲಿದೆ. ಈ ಕಡಲತೀರದಲ್ಲಿ ಸಣ್ಣ ಗುಡಿಸಲುಗಳು ಸಹ ಕಂಡುಬರುತ್ತವೆ. ಇಲ್ಲಿ ಪ್ರವಾಸಿಗರು ಕುರ್ಚಿಗಳ ಮೇಲೆ ಕುಳಿತು ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ಸುಂದರವಾದ ಸೂರ್ಯಾಸ್ತದ ನೋಟ ಮತ್ತು ಸಮುದ್ರ ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸದೆ ಇರಲಾರದು. ಆದರೆ ಈ ಬೀಚ್ ಗೆ ಪ್ರವಾಸ ತೆರಳುವಾಗ ಇನ್ನೊಂದು ವಿಷಯವನ್ನು ನೀವು ನೆನಪಿನಲ್ಲಿಡಬೇಕು. ಅದೇನೆಂದರೆ ಇಲ್ಲಿ ಕಾಣುವ ವಿದೇಶಿಗರು.

ಗೋವಾದ ಈ ಕಡಲತೀರವು ಥೇಟ್ ವಿದೇಶಿ ಬೀಚ್‌ನಂತೆ ಕಂಡುಬರುತ್ತದೆ. ಇಲ್ಲಿ ಹೊರಗಿನಿಂದ ಬರುವ ವಿದೇಶಿಯರು ಸೂರ್ಯ ಸ್ನಾನವನ್ನು ಆನಂದಿಸುತ್ತಿರುತ್ತಾರೆ. ಅವರ ಈ ಅವತಾರವನ್ನು ನೋಡಿ ಮುನಿಸಿಕೊಳ್ಳುವ ಬದಲು ನಿಮ್ಮ ಕುಟುಂಬವನ್ನು ಈ ಬೀಚ್ ನಿಂದ ದೂರವಿಡುವುದು ಒಳ್ಳೆಯದು. ಪಲೋಲೆಂ ಬೀಚ್ ಪ್ರಮುಖ ಆಕರ್ಷಣೆಯೆಂದರೆ ನೆಪ್ಚೂನ್ ಪಾಯಿಂಟ್‌ನಲ್ಲಿರುವ ಸೈಲೆಂಟ್ ನಾಯ್ಸ್ ಪಾರ್ಟಿಯಾಗಿದೆ.

ಹೋಗುವುದು ಹೇಗೆ: ಪಲೋಲೆಂ ಬೀಚ್ ದಾಬೊಲಿಂ ವಿಮಾನ ನಿಲ್ದಾಣದಿಂದ ಸುಮಾರು 67 ಕಿಮೀ ದೂರದಲ್ಲಿದೆ. ಹಾಗೆಯೇ ಗೋವಾದ ಮಾರ್ಗೋದಿಂದ 30 ನಿಮಿಷಗಳ ಕಾಲ ಪ್ರಯಾಣ ಮಾಡಿದರೆ ಸಾಕು.

ಅಶ್ವೆಮ್ ಬೀಚ್

ಅಶ್ವೆಮ್ ಬೀಚ್

ಅಶ್ವೆಮ್ ಬೀಚ್ ತನ್ನ ನೈಸರ್ಗಿಕ ಸೌಂದರ್ಯದಿಂದ ಎಲ್ಲರ ಗಮನಸೆಳೆಯುತ್ತದೆ. ಗೋವಾಕ್ಕೆ ಭೇಟಿ ನೀಡುವ ವಿದೇಶಿಯರಿಗೆ ಇದು ಅತ್ಯುತ್ತಮವಾದ ಬೀಚ್‌ಗಳಲ್ಲಿ ಒಂದಾಗಿದೆ. ಉತ್ತರ ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರು ಖಂಡಿತವಾಗಿಯೂ ಈ ಬೀಚ್‌ಗೆ ಮೋಜು ಮಾಡಲು ಬರುತ್ತಾರೆ. ಕಡಲತೀರದ ಉದ್ದಕ್ಕೂ ನೀವು ಅನೇಕ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳನ್ನು ನೋಡಬಹುದು. ಅಷ್ಟೇ ಅಲ್ಲ, ತೆಂಗಿನ ಮರಗಳು, ಬಿದಿರಿನ ಮರಗಳ ಸೌಂದರ್ಯವು ಜನರಿಗೆ ಬೇರೆಯದೆ ಲೋಕಕ್ಕೆ ಕೊಂಡೊಯ್ಯುತ್ತವೆ.

ಹನಿಮೂನ್‌ಗೆ ಬರುವ ಜನರು ಈ ಸ್ಥಳವನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ನಿಮ್ಮ ಕುಟುಂಬದೊಂದಿಗೆ ಈ ಸ್ಥಳಕ್ಕೆ ಭೇಟಿ ನೀಡುವಾಗ ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಈ ಕಡಲತೀರದಲ್ಲಿ ಕೆಲವು ರೆಸ್ಟೋರೆಂಟ್ ಗಳು ಮತ್ತು ಬಾರ್ಡೋ, ಬ್ಲೂ ಸನ್‌ಸೆಟ್ ಬೀಚ್ ಪಾರ್ಟಿಗಳು ಜನಪ್ರಿಯವಾಗಿವೆ. ನೈಟ್ ಲೈಫ್ ಎಂಜಾಯ್ ಮಾಡುವವರಿಗೆ ಸೂಕ್ತವಾದ ತಾಣವಾಗಿದೆ.

ಹೋಗುವುದು ಹೇಗೆ: ಮೋರ್ಜಿಮ್ ಗೋವಾದಲ್ಲಿ ಜನಪ್ರಿಯ ಸ್ಥಳವಾಗಿದೆ. ಇಲ್ಲಿಂದ ಕ್ಯಾಬ್, ಬೈಕ್ ಅಥವಾ ಕಾರನ್ನು ಬಾಡಿಗೆಗೆ ತೆಗೆದುಕೊಳ್ಳುವ ಮೂಲಕ ಅಶ್ವೆಮ್ ಬೀಚ್ ಅನ್ನು ತಲುಪಬಹುದು.

ಕ್ಯಾಂಡೊಲಿಂ ಬೀಚ್

ಕ್ಯಾಂಡೊಲಿಂ ಬೀಚ್

ಇದು ಬಹಳ ಹಳೆಯ ಬೀಚ್ ಆಗಿದೆ. ಅನೇಕ ಐಷಾರಾಮಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ನಾವಿಲ್ಲಿ ಕಾಣಬಹುದು. ಗೋವಾದ ಮಾರುಕಟ್ಟೆಗೆ ಭೇಟಿ ನೀಡಲು ಇದು ಉತ್ತಮ ಸ್ಥಳವಾಗಿದೆ. ಚಾಪೆಲ್ ಸೇಂಟ್ ಲಾರೆನ್ಸ್, ಅಗುಡಾ ಫೋರ್ಟ್ ಮತ್ತು ಕ್ಯಾಂಡೋಲಿಮ್ ಚರ್ಚ್ ಈ ಪ್ರದೇಶದ ಕೆಲವು ಜನಪ್ರಿಯ ಪ್ರವಾಸಿ ಸ್ಥಳಗಳಾಗಿವೆ.

ನೀವೇನಾದರೂ ಹೊಸತನ್ನು ಪ್ರಯತ್ನಿಸಲು ಬಯಸಿದರೆ, ಈ ಬೀಚ್ ನಿಮಗೆ ಪರ್ ಫೆಕ್ಟ್. ಆದರೆ ಕುಟುಂಬದೊಟ್ಟಿಗೆ ಈ ಬೀಚ್‌ಗೆ ಬರಲು ಕಂಫರ್ಟಬಲ್ ಅನಿಸುವುದಿಲ್ಲ. ಏಕೆಂದರೆ ಅನೇಕ ವಿದೇಶಿಯರು ಶರ್ಟ್ ಲೆಸ್ ಅಥವಾ ಬಿಕಿನಿಯನ್ನು ಧರಿಸಿ ಸೂರ್ಯ ಸ್ನಾನ ಆನಂದಿಸುತ್ತಿರುತ್ತಾರೆ. ಇಲ್ಲಿ ಕೆಲವು ರೆಸ್ಟೋರೆಂಟ್ & ಬಾರ್ ಗಳಿದ್ದು ನೈಟ್ ಲೈಫ್ ಆನಂದಿಬೇಕು ಎನ್ನುವವರಿಗೆ ಸೂಕ್ತ ತಾಣವಾಗಿವೆ.

ಮೊರ್ಜಿಮ್ ಬೀಚ್

ಮೊರ್ಜಿಮ್ ಬೀಚ್

ಈ ಸ್ಥಳದಲ್ಲಿಯೂ ವಿದೇಶಿಯರ ಸಂಖ್ಯೆ ಹೆಚ್ಚು. ಸಾಕಷ್ಟು ಪ್ರಶಾಂತವಾಗಿರುವ ಮೊರ್ಜಿಮ್ ಬೀಚ್ ಆಹ್ಲಾದಕರ ಅನುಭವವನ್ನು ನೀಡುತ್ತದೆ. ವಿಶೇಷವಾಗಿ ರಷ್ಯಾದ ಪ್ರವಾಸಿಗರು ಈ ಬೀಚ್ ಅನ್ನು ತುಂಬಾ ಇಷ್ಟಪಡುತ್ತಾರೆ. ವಿದೇಶಿಯರ ಈ ನೆಚ್ಚಿನ ಸ್ಥಳಕ್ಕೆ ನೀವು ನಿಮ್ಮ ಸ್ನೇಹಿತರೊಂದಿಗೆ ಹೋಗಬಹುದು, ಆದರೆ ಕುಟುಂಬದೊಂದಿಗೆ ಈ ಸ್ಥಳಗಳಿಗೆ ಹೋಗುವುದು ಬೇಡ. ಏಕೆಂದರೆ ಈ ಸ್ಥಳಗಳಲ್ಲಿ ವಿದೇಶಿಯರನ್ನು ವಿಚಿತ್ರ ಬಟ್ಟೆಯಲ್ಲಿ ನೋಡಬೇಕಾಗುತ್ತದೆ. ನಾಚಿಕೆಯೂ ಆಗುತ್ತದೆ. ಕಡಲತೀರದಲ್ಲಿ ವಿಶ್ರಾಂತಿ ಪಡೆಯುವುದರ ಹೊರತಾಗಿ, ಇಲ್ಲಿ ಅನೇಕ ರೆಸ್ಟೋರೆಂಟ್‌ಗಳು, ಸ್ಪೋರ್ಟ್ಸ್ ಬಾರ್‌ಗಳು ಮತ್ತು ಅತ್ಯುತ್ತಮ ಸೌಲಭ್ಯಗಳು ಲಭ್ಯವಿದೆ.

ಹೋಗುವುದು ಹೇಗೆ: ಈ ಬೀಚ್ ಉತ್ತರ ಗೋವಾದಲ್ಲಿದೆ. ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಗೋವಾದಲ್ಲಿ ಕಾರುಗಳು ಅಥವಾ ಬೈಕ್‌ಗಳು ಜನಪ್ರಿಯವಾಗಿವೆ.

ಅರಂಬೋಲ್ ಬೀಚ್

ಅರಂಬೋಲ್ ಬೀಚ್

ಗೋವಾದ ಪ್ರಮುಖ ಬೀಚ್‌ಗಳಲ್ಲಿ ಒಂದಾಗಿದೆ. ಇಲ್ಲಿ ಅಂತರಾಷ್ಟ್ರೀಯ ಪ್ರವಾಸಿಗರು ನೆರೆದಿರುತ್ತಾರೆ. ಉತ್ತರ ಗೋವಾದಲ್ಲಿರುವ ಈ ಬೀಚ್ ಮರಳಿನ ಕಡಲತೀರಗಳು, ತೆಂಗಿನ ತೋಟಗಳು ಮತ್ತು ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಇಂತಹ ನಿಶ್ಯಬ್ದ ಸ್ಥಳಗಳಲ್ಲಿ ಸ್ವಲ್ಪ ಸಮಯ ಕಳೆಯಲು ವಿದೇಶಿಗರೂ ಮುಂದೆ ಇರುತ್ತಾರೆ. ಈಗ ಇಲ್ಲಿಗೆ ಒಬ್ಬರೇ ಹೋಗಬೇಕೋ ಅಥವಾ ಕುಟುಂಬ ಸದಸ್ಯರೊಂದಿಗೆ ಹೋಗಬೇಕೋ ಎಂಬುದನ್ನು ನೀವೇ ನಿರ್ಧರಿಸಬೇಕು.

ಹೋಗುವುದು ಹೇಗೆ: ಈ ಬೀಚ್ ಪಣಜಿಯಿಂದ ಸುಮಾರು 35 ಕಿಮೀ ದೂರದಲ್ಲಿದೆ. ರಸ್ತೆಯ ಮೂಲಕ ಆರಾಮಾಗಿ ತಲುಪಬಹುದು. ಇದು ಉತ್ತಮ ರೈಲ್ವೆ ವ್ಯವಸ್ಥೆ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X