Search
  • Follow NativePlanet
Share
» »ಪಿಬಿ ರಸ್ತೆಯ ಮೂಲಕ ಬೆಂಗಳೂರಿನಿಂದ ಪುಣೆ

ಪಿಬಿ ರಸ್ತೆಯ ಮೂಲಕ ಬೆಂಗಳೂರಿನಿಂದ ಪುಣೆ

By Vijay

ಕಾರಿನಲ್ಲಿ...ಸರಣಿಯನ್ನು ಮುಂದುವರೆಸುತ್ತ ಇಂದಿನ ಲೇಖನದಲ್ಲಿ ಬೆಂಗಳೂರಿನಿಂದ ಪುಣೆ ನಗರಕ್ಕೆ ಪ್ರಯಾಣ ಬೆಳೆಸೋಣ. ಬೆಂಗಳೂರಿನಂತೆ ಪುಣೆಯು ಕೂಡ ಮಾಹಿತಿ ತಂತ್ರಜ್ಞಾನಕ್ಕೆ ಹೆಸರುಪಡೆದ ಭಾರತದ ಮಹಾನಗರವಾಗಿದೆ. ಮರಾಠಿ ಸಂಸ್ಕೃತಿಯ ಛಾಪು ಹೊಂದಿರುವ ಪುಣೆ ನಗರದಲ್ಲಿ ಹಾಗೂ ಅದರ ಸುತ್ತ ಮುತ್ತ ಸಾಕಷ್ಟು ಪ್ರವಾಸಿ ತಾಣಗಳಿದ್ದು ಸಾಕಷ್ಟು ಜನ ಪ್ರವಾಸಿಗರು ಈ ನಗರಕ್ಕೆ ಭೇಟಿ ನೀಡುತ್ತಾರೆ. ಬೆಂಗಳೂರಿನಿಂದ ಪುಣೆ 800 ಕ್ಕೂ ಅಧಿಕ ಕಿ.ಮೀ ಗಳಷ್ಟು ಅಂತರದಲ್ಲಿ ನೆಲೆಸಿದ್ದರೂ ಸಹ ಸುಸ್ಥಿತಿಯ ಅಗಲವಾದ ರಸ್ತೆಯು ಈ ಪ್ರಯಾಣವನ್ನು ಸುಲಭವಾಗಿಸುತ್ತದೆ.

ಕ್ರಿಸ್ಮಸ್ ಕೊಡುಗೆ : ಪ್ರವಾಸ ಹಾಗೂ ಹೋಟೆಲ್ ಬುಕಿಂಗ್ ಮೇಲೆ 60% ರಷ್ಟು ಕಡಿತ

ಮಹಾರಾಷ್ಟ್ರ ರಾಜ್ಯದ ಮುಂಬೈ ಹೊರತುಪಡಿಸಿ ಪ್ರಮುಖ ನಗರಗಳ ಪೈಕಿ ಮಂಚೂಣಿಯಲ್ಲಿರುವ ಪುಣೆ ನಗರವು ಬೆಂಗಳೂರಿನ ವಾಯವ್ಯ ಭಾಗದಲ್ಲಿ ನೆಲೆಸಿದ್ದು ಸುಮಾರು 840 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರಿನಿಂದ ಪುಣೆಗೆ ತೆರಳಲು ವಿಮಾನ, ರೈಲು ಹಾಗೂ ಬಸ್ಸುಗಳ ಸೇವೆಯು ಸಮರ್ಪಕವಾಗಿ ಲಭ್ಯವಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ಬೆಂಗಳೂರನ್ನು ಪುಣೆಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಒಂದು ರಸ್ತೆ ಮಾರ್ಗವು ಪಿಬಿ ರೋಡ್ ಅಥವಾ ಪುಣಾ-ಬೆಂಗಳೂರು ರಸ್ತೆ ಎಂಬ ಹೆಸರಿನಿಂದಲೆ ಜನಪ್ರೀಯವಾಗಿದೆ.

ವಿಶೇಷ ಲೇಖನ : ಪುಣೆಯ ಸುತ್ತಮುತ್ತಲಿನ ಧಾರ್ಮಿಕ ಆಕರ್ಷಣೆಗಳು

ಇಲ್ಲಿ ಪ್ರಯಾಣ ಮಾರ್ಗದಲ್ಲಿ ಮುಖ್ಯವಾಗಿ ಬರುವ ಸ್ಥಳಗಳು ಹಾಗೂ ಅದರ ಸುತ್ತಮುತ್ತಲಿರುವ ಆಕರ್ಷಣೆಗಳ ಕುರಿತು ತಿಳಿಸಲಾಗಿದೆ. ಅಂದರೆ ಇದೇ ರೀತಿಯಾಗಿ ಪ್ರಯಾಣ ಮಾಡುತ್ತ ಪುಣೆ ತಲುಪಬೇಕೆಂದು ಈ ಲೇಖನದ ಉದ್ದೇಶವಲ್ಲ. ನಿಮಗೆ ಸಮಯಾವಕಾಶವಿದ್ದರೆ ಆಕರ್ಷಣೆಗಳನ್ನು ಸವಿಯುತ್ತ ತಲುಪಬೇಕೆಂದಿದ್ದರೆ, ಆ ನಿಟ್ಟಿನಲ್ಲಿ ಈ ಲೇಖನವು ನಿಮಗೆ ಸಹಾಯಕವಾಗಬಹುದು. ಹಾಗಿಲ್ಲದಿದ್ದರೆ ಈ ಮಾರ್ಗದ ಮೂಲಕ ಸಿಗುವ ಕೇವಲ ಪ್ರಮುಖ ನಗರಗಳು ಯಾವುವು ಎಂಬುದರ ಕುರಿತೂ ತಿಳಿಯಬಹುದು ಹಾಗೂ ಸೊಗಸಾದ ಪ್ರಯಾಣದ ಮೂಲಕ ಪುಣೆ ತಲುಪಬಹುದು.

ಉಪಯುಕ್ತ ಕೊಂಡಿಗಳು : ಹುಬ್ಬಳ್ಳಿ ಹೊಟೇಲ್ಸ್ ಪುಣೆ ಹೋಟೆಲ್ಸ್

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಈ ಲೇಖನದ ಮೂಲಕ ಪುಣಾ-ಬೆಂಗಳೂರು ರಸ್ತೆಯ ಮೂಲಕ ಹಾದು ಹೋಗುವಾಗ ಯಾವೇಲ್ಲ ಸ್ಥಳಗಳಿಗೆ ಭೇಟಿ ನೀಡುತ್ತ ಹಾಗೂ ಅದರ ಸುತ್ತಮುತ್ತಲಿನ ಪ್ರವಾಸಿ ತಾಣಗಳ ನೋಡುತ್ತ ಸಾಗಬಹೌದೆಂಬುದರ ಕುರಿತು ತಿಳಿಯಿರಿ.

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ನೀವು ಬೆಂಗಳೂರಿನ ಯಾವುದೆ ಭಾಗದಿಂದ ಹೊರಟರೂ ಸಹ ಮೊದಲಿಗೆ ತುಮಕೂರಿನೆಡೆ ಹೋಗುವ ರಸ್ತೆ ಹಿಡಿದು ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ತಲುಪಬೇಕು. ಮೊದಲು ನೆಲಮಂಗಲ ಮೂಲಕ ತುಮಕೂರಿನೆಡೆ ಸಾಗುವಾಗ ತುಮಕೂರು ಬಳಿಯಿರುವ ಕ್ಯಾತಸಂದ್ರಕ್ಕೆ ಭೇಟಿ ನೀಡಲು ಮರೆಯದಿರಿ. ಕ್ಯಾತಸಂದ್ರವು ನೆಚ್ಚಿನ ತಿಂಡಿಯಾದ ತಟ್ಟೆ ಇಡ್ಲಿಗಳ ಆವಿಷ್ಕಾರದ ಗ್ರಾಮವಾಗಿದೆ. ಹೌದು ಇಲ್ಲಿಂದಲೆ ಪ್ರವರ್ಧಮಾನಕ್ಕೆ ಬಂದ ತಟ್ಟೆ ಇಡ್ಲಿಯು ಸಾಕಷ್ಟು ಜನಪ್ರೀಯವಾಗಿದೆ. ಸಾಮಾನ್ಯವಾಗಿ ಬೆಂಗಳೂರಿನೆಲ್ಲೆಡೆ ತಟ್ಟೆ ಇಡ್ಲಿಗಳು ಲಭ್ಯವಿದ್ದರೂ ಕ್ಯಾತಸಂದ್ರದ ಇಡ್ಲಿಗಳಿಗೆ ವಿಶೇಷವಾದ ರುಚಿಯೇ ಇದೆ ಎಂದು ಹೇಳಬಹುದು.

ಚಿತ್ರಕೃಪೆ: Girionthenet

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಕ್ಯಾತಸಂದ್ರದ ನಂತರ ಹಿರಿಯೂರಿನೆಡೆ ಸಾಗಬೇಕು. ಏಕೆಂದರೆ ಹಿರಿಯೂರಿನ ಸ್ವಲ್ಪ ದೂರದಲ್ಲೆ ಒಂದು ಪುರಾತನ ಜಲಾಶಯವನ್ನು ನೀವು ಕಾಣಬಹುದು. ಇದನ್ನು ಮಾರಿ ಕಣಿವೆ ಎಂದು ಕರೆಯಲಾಗುತ್ತದೆ. ಮೈಸೂರು ಪ್ರಾಂತರ ಅರಸರಿಂದ ವೇದವತಿ ನದಿಗೆ ನಿರ್ಮಿಸಲ್ಪಟ್ಟ ಈ ಜಲಾಶಯದ ಮೂಲ ಹೆಸರು ವಾಣಿ ವಿಲಾಸ ಸಾಗರ. ಹಿರಿಯೂರಿನಿಂದ ತುಸು ಮುಂದೆ ಬಂದು ಎಡ ತಿರುವು ಪಡೆದು ಟಿ.ಹೆಚ್ ರಸ್ತೆಯ ಮೇಲೆ ಸುಮಾರು 30 ಕಿ.ಮೀ ಪ್ರಯಾಣಿಸಿ ಮಾರಿ ಕಣಿವೆಯನ್ನು ತಲುಪಬಹುದು.

ಚಿತ್ರಕೃಪೆ: Karthik Prabhu

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಮುಂದೆ ಮತ್ತೆ ಪ್ರಯಾಣವನ್ನು ಮುಂದುವರೆಸುತ್ತ ಚಿತ್ರದುರ್ಗದೆಡೆ ಪ್ರಯಾಣಿಸಬೇಕು. ಚಿತ್ರದುರ್ಗವು ಹಿರಿಯೂರಿನಿಂದ ಕೇವಲ 44 ಕಿ.ಮೀ ಗಳಷ್ಟು ದೂರದಲ್ಲಿದೆ. ಒಂದೊಮ್ಮೆ ಚಿತ್ರದುರ್ಗ ಪ್ರವೇಶಿಸಿದರೆ ಅಲ್ಲಿಂದ ನೇರವಾಗಿ ಕೋಟೆಯ ತಾಣಕ್ಕೆ ಧಾವಿಸಬಹುದು. ದುರ್ಗದ ಏಳು ಸುತ್ತಿನ ಈ ಕೋಟೆ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದ್ದು ಹಲವಾರು ರಚನೆಗಳು, ಹೊಂಡಗಳು, ದೇವಾಲಯಗಳನ್ನು ಕಾಣಬಹುದಾಗಿದೆ. ಇಂದು ಕೇಳುತ್ತಿರುವ ಮಳೆ ನೀರಿನ ಕೊಯ್ಲು ಪದ್ಧತಿಯನ್ನು ಅಂದೆ ಕೋಟೆಯ ನೀರ್ಮಾಣದ ಸಮಯದಲ್ಲಿ ಅಳವಡಿಸಲಾಗಿತ್ತು ಎಂದರೆ ತಿಳಿಯಬಹುದು ಅಂದಿನ ಜನರ ಮುಂದಾಲೋಚನೆ ಹಾಗೂ ಜಾಣ್ಮೆಯನ್ನು. ಇಲ್ಲಿ ಸಂತೆ ಹೊಂಡ, ಸಿಹಿನೀರಿನ ಹೊಂಡ, ಗೋಪಾಲ ಸ್ವಾಮಿ ಹೊಂಡ, ತುಪ್ಪದ ಕೊಳ, ಅಕ್ಕ ತಂಗಿ ಹೊಂಡ ಹೀಗೆ ವಿವಿಧ ನೀರಿನ ಸಂಗ್ರಹಣಾ ಕೊಳಗಳನ್ನು ಕಾಣಬಹುದು.

ಚಿತ್ರಕೃಪೆ: ZeHawk

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಚಿತ್ರದುರ್ಗದಲ್ಲಿ ಕೋಟೆಯನ್ನು ಅನ್ವೇಷಿಸಿ ಚಿತ್ರದುರ್ಗವನ್ನು ತೊರೆದ ನಂತರ ನೇರವಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಪ್ರಯಾಣ ಮುಂದುವರೆಸಿ 60 ಕ್ರಮಿಸಿದರೆ ಸಾಕು ಕರ್ನಾಟಕದ ಪ್ರಮುಖ ನಗರಗಳಲ್ಲೊಂದಾದ ದಾವಣಗೆರೆಯು ಬರುತ್ತದೆ. ಚಾಲುಕ್ಯರು ಕುದುರೆ ಸವಾರಿ ಮಾಡುತ್ತ ಈ ಸ್ಥಳದಲ್ಲಿ ದಣಿವಾರಿಸಿಕೊಳ್ಳಲು ನೆಲೆ ನಿಂತು ಕೆರೆಯೊಂದನ್ನು ನಿರ್ಮಿಸಿದರು. ಮುಂದೆ ಇದೆ ಸ್ಥಳವು ದಣಿವಿನ ಕೆರೆ ಎಂತಾಗಿ ಮತ್ತೆ ಕಾಲ ಉರುಳಿದಂತೆ ದಾವಣಗೆರೆ ಎಂಬ ಹೆಸರು ಪಡೆದುಕೊಂಡಿತು ಎಂದು ಹೇಳಲಗುತ್ತದೆ. ಇದರ ಸುತ್ತಮುತ್ತ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ದಾವಣಗೆರೆಯು ಪ್ರಮುಖವಾಗಿ ರುಚಿ ರುಚಿ ಹಾಗೂ ಗರಿಗರಿಯಾದ ಬಾಯಲ್ಲಿ ನೀರೂರಿಸುವ ಬೆಣ್ಣೆ ದೋಸೆಗೆ ಜನಪ್ರೀಯವಾಗಿದೆ.

ಚಿತ್ರಕೃಪೆ: Irrigator

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ದಾವಣಗೆರೆಗೆ ಹತ್ತಿರದಲ್ಲಿರುವ ಶಾಮನೂರು ಎಂಬ ಹಳ್ಳಿಗೆ ಬೇಕಿದ್ದರೆ ಭೇಟಿ ನೀಡಬಹುದು. ಶಾಮನೂರು ಮುಖ್ಯವಾಗಿ ತನ್ನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಖ್ಯಾತಿ ಪಡೆದಿದೆ. ಸುಮಾರು 800 ವರ್ಷಗಳ ಹಿಂದೆ ಶ್ರೀ ವ್ಯಾಸರಾಜ ಸ್ವಾಮಿಗಳಿಂದ ಆಂಜನೇಯನ ಮೂರ್ತಿಯು ಪ್ರತಿಷ್ಠಾಪಿಸಲ್ಪಟ್ಟಿದೆ ಎನ್ನಲಾಗಿದೆ. ಪ್ರತಿ ಶನಿವಾರದಂದು ದೇವಾಲಯವು ಜನರಿಂದ ಕಿಕ್ಕಿರಿದು ತುಂಬಿರುತ್ತದೆ. ಶಾಮನೂರು ದಾವಣಗೆರೆಯಿಂದ 40 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: sunil

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ದಾವಣಗೆರೆಯಿಂದ 40 ಕಿ.ಮೀ ದೂರದಲ್ಲಿರುವ ಸಂತೇಬೆನ್ನೂರು ಎಂಬ ಗ್ರಾಮವೂ ಸಹ ಒಂದು ಪ್ರವಾಸಿ ತಾಣವಾಗಿದೆ. ಈ ಗ್ರಾಮವು ತನ್ನಲ್ಲಿರುವ ಪುಷ್ಕರಣಿ ಅಥವಾ ಹೊಂಡಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Prithvirajsm

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ದಾವಣಗೆರೆಯಿಂದ ಪ್ರಯಾಣ ಮುಂದುವರೆಸುತ್ತ 23 ಕಿ.ಮೀ ಕ್ರಮಿಸಿ ಹರಿಹರವನ್ನು ತಲುಪಿ. ಹರಿಹರವು ಮುಖ್ಯವಾಗಿ ಶಿವ ಹಾಗೂ ವಿಷ್ಣುವಿನ ಅವತಾರ ಹರಿಹರ ದೇವರ ದೇವಸ್ಥಾನದಿಂದಾಗಿ ಹೆಚ್ಚು ಖ್ಯಾತಿ ಪಡೆದಿದೆ.
ಇಲ್ಲಿರುವ ಹರಿಹರೇಶ್ವರ ದೇವಾಲಯವು ಸಾಕಷ್ಟು ಜನರನ್ನು ಸೆಳೆಯುತ್ತದೆ.

ಚಿತ್ರಕೃಪೆ: Dineshkannambadi

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಹರಿಹರದ ಭೇಟಿಯ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಮುಂದುವರೆಸುತ್ತ ಸುಮಾರು 60 ಕಿ.ಮೀ ಕ್ರಮಿಸಿ ಹಾವೇರಿಯನ್ನು ತಲುಪಿ. ಹಾವೇರಿಯೂ ಸಹ ಪುರಾತನ ದೇಗುಲಗಳಿಗಾಗಿ ಹೆಸರುವಾಸಿಯಾಗಿದೆ. ಮೂಲತಃ ಹಾವುಗಳ ಕೇರಿ ಎಂಬ ಪದದಿಂದ ವ್ಯುತ್ಪತ್ತಿಯಾದ ಹಾವೇರಿಯು ಏಲಕ್ಕಿ ಹಾರಗಳಿಗೆ ಕರ್ನಾಟಕದಲ್ಲೆ ಪ್ರಖ್ಯಾತಿ ಪಡೆದಿದೆ. ಹಾವೇರಿಯಲ್ಲಿರುವ ಸಿದ್ಧೇಶ್ವರ ದೇವಾಲಯ.

ಚಿತ್ರಕೃಪೆ: Dineshkannambadi

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಹಾವೇರಿಯಿಂದ ಪ್ರಯಾಣ ಮುಂದುವರೆಸಿ ಸುಮಾರು 76 ಕಿ.ಮೀ ಗಳಷ್ಟು ದೂರವನ್ನು ಕ್ರಮಿಸಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳನ್ನು ತಲುಪಿ. ಮೊದಲಿಗೆ ಹುಬ್ಬಳ್ಳಿಯು ದೊರೆಯುತ್ತದೆ. ಧಾರವಾಡ ಹುಬ್ಬಳ್ಳಿಯಿಂದ ಕೇವಲ 16 ಕಿ.ಮೀ ಗಳಷ್ಟು ದೂರದಲ್ಲಿದೆ. ಹುಬ್ಬಳ್ಳಿಯು ಉತ್ತರ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಅಲ್ಲದೆ ಇಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು.

ಚಿತ್ರಕೃಪೆ: Syedzohaibullah

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲೆ ಬರುವ ಸಿದ್ಧಾರೂಡ ಮಠ. ಇದೊಂದಿ ಜನಪ್ರೀಯ ಮಠವಾಗಿದ್ದು ರಾಜ್ಯದೆಲ್ಲೆಡೆಯಿಂದ ಸಾಕಷ್ಟು ಜನರು ಈ ಮಠಕ್ಕೆ ಬರುತ್ತಾರೆ.

ಚಿತ್ರಕೃಪೆ: Goudar

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಹುಬ್ಬಳ್ಳಿಯ ಉಣಕಲ್ ವೃತ್ತದ ಬಳಿಯಿರುವ ಚಂದ್ರಮೌಳೇಶ್ವರ ಶಿವನ ದೇವಾಲಯವು ಹುಬ್ಬಳ್ಳಿಯ ಪುರಾತನ ಪ್ರವಾಸಿ ಆಕರ್ಷಣೆಯಾಗಿದೆ. 900 ವರ್ಷಗಳ ಇತಿಹಾಸವಿರುವ ಈ ದೇವಾಲಯವು ಬಾದಾಮಿ ಚಾಲುಕ್ಯರ ವಾಸ್ತು ಶಿಲ್ಪಕ್ಕೆ ಉದಾಹರಣೆಯಾಗಿದೆ.

ಚಿತ್ರಕೃಪೆ: Chetuln

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಹುಬ್ಬಳ್ಳಿಯ ಉಣಕಲ್ ಕೆರೆಯು ಒಂದು ಗುರುತರವಾದ ಪಿಕ್ನಿಕ್ ಸ್ಥಳವಾಗಿದೆ. ಸುಂದರವಾದ ಉದ್ಯಾನ ಹೊಂದಿರುವ ಈ ಕೆರೆಯು ಸೂರ್ಯಾಸ್ತದ ಮನೋಹರ ನೋಟಕ್ಕಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Mohd Khaise Ahmed

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ನಂತರ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ಬೈಪಾಸ್ ರಸ್ತೆ ಹಿಡಿದು ಕಿತ್ತೂರಿನೆಡೆ ಸಾಗಬೇಕು. ಹುಬ್ಬಳ್ಳಿಯಿಂದ ಕಿತ್ತೂರು 57 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಕಿತ್ತೂರಿನಲ್ಲಿ ಇಂದಿಗೂ ಪುರಾತನ ಸ್ಮಾರಕಗಳನ್ನು ಕಾಣಬಹುದಾಗಿದೆ. ವೀರ ವನಿತೆ ಚೆನ್ನಮ್ಮ ಆಳಿದ ನಾಡು ಕಿತ್ತೂರು.

ಚಿತ್ರಕೃಪೆ: Kayceevinay

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಕಿತ್ತೂರನ್ನು ತೊರೆದ ನಂತರ ಕೇವಲ 50 ಸಾಗಿದರೆ ಸಾಕು ಬೆಳಗಾವಿಯನ್ನು ತಲುಪಬಹುದು. ಮಲೆನಾಡ ಪರಿಸರ ಹೊಂದಿರುವ ಬೆಳಗಾವಿಯು ಉತ್ತರ ಕರ್ನಾಟಕ ಭಾಗದ ಮಲೆನಾಡು ಎಂದೆ ಪ್ರಸಿದ್ಧ. ಇದು ಈ ಭಾಗದಲ್ಲೆ ಹೆಚ್ಚಿನ ಮಳೆಯನ್ನು ಪಡೆಯುತ್ತದೆ ಹಾಗೂ ಹಸಿರು ಸಂಪತ್ತಿನಿಂದ ಕಂಗೊಳಿಸುತ್ತದೆ. ಬೆಳಗಾವಿಯ ಒಂದು ಜೈನ ಬಸದಿ.

ಚಿತ್ರಕೃಪೆ: N.v.petkar

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

1874 ರಲ್ಲಿ ಸೆರೆ ಹಿಡಿಯಲಾದ ಬೆಳಗಾವಿ ಕೋಟೆಯ ಮುಖ್ಯ ದ್ವಾರ.

ಚಿತ್ರಕೃಪೆ: Burgess, James

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಬೆಳಗಾವಿಯಿಂದ 60 ಕಿ.ಮೀ ದೂರದಲ್ಲಿರುವ ಗೋಕಾಕ್ ಪಟ್ಟಣವು ತನ್ನಲ್ಲಿರುವ ಜಲಪಾತದಿಂದಾಗಿ ಪ್ರಖ್ಯಾತವಾಗಿದೆ. ಈ ಜಲಪಾತವು ಗೋಕಾಕ್ ಜಲಪಾತವೆಂದೆ ಪ್ರಸಿದ್ಧಿ ಪಡೆದಿದೆ. ಬೆಳಗಾವಿಯ ಇತರೆ ಆಕರ್ಷಣೆಗಳು

ಚಿತ್ರಕೃಪೆ: Sandeep Prakash

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಬೆಳಗಾವಿ ತೊರೆದ ನಂತರ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಪ್ರಯಾಣ ಮುಂದುವರೆಸುತ್ತ ಸುಮಾರು 110 ಕಿ.ಮೀ ಗಳಷ್ಟು ಕ್ರಮಿಸಿ ಮಹಾರಾಷ್ಟ್ರದ ಕೊಲ್ಹಾಪುರ ಪಟ್ಟಣಕ್ಕೆ ತಲುಪಬೇಕು. ಕೊಲ್ಹಾಪುರವು ಲಕ್ಷ್ಮಿ ದೇವಿಯ ದೇವಾಲಯಕ್ಕೆ ಪ್ರಖ್ಯಾತವಾಗಿದ್ದು, ಅಷ್ಟ ಶಕ್ತಿ ಪೀಠಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: kolhapurtourism

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಭವಾನಿ ಮಂಟಪ ಕೊಲ್ಲಾಪುರ ನಗರದಲ್ಲಿರುವ, ನೋಡಬಹುದಾದ ಮತ್ತೊಂದು ಪುರಾತನ ಆಕರ್ಷಣೆ. ಈ ಮಂಟಪವು ಶಿವಾಜಿ ಮಹಾರಾಜನಿಂದ ನಿರ್ಮಿಸಲ್ಪಟ್ಟಿದ್ದು ಅವನ ಕುಟುಂಬದವರು ಇಲ್ಲಿ ವಾಸಿಸುತ್ತಿದ್ದರು. ಇಲ್ಲಿ ತುಳಜಾ ಭವಾನಿ ದೇವಿಯ ಮೂರ್ತಿಯನ್ನು ಕಾಣಬಹುದು. ದಂತಕಥೆಯ ಪ್ರಕಾರ, ತುಳಜಾ ಭವಾನಿಯು ಕೊಲ್ಲಾಪುರ ಮಹಾಲಕ್ಷ್ಮಿಯ ಸಹೋದರಿಯಾಗಿದ್ದು ಈ ನಗರದಲ್ಲಿ ಅತಿಥಿಯಾಗಿದ್ದಾಳೆ. ಈ ಮಂಟಪವು ಮಹಾಲಕ್ಷ್ಮಿ ದೇವಸ್ಥಾನದ ಹಿಂಬದಿಯಲ್ಲೆ ನೆಲೆಸಿದೆ.

ಚಿತ್ರಕೃಪೆ: Ankur P

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ನಗರದಲ್ಲಿರುವ ರಂಕಾಲಾ ಚೌಪಾಟಿ ಎಂಬ ಸ್ಥಳವು ಜನರ ನೆಚ್ಚಿನ ವಿರಾಮ ಕೇಂದ್ರವಾಗಿದೆ. ಸ್ವಾಭಾವಿಕವಾಗಿ ರೂಪಗೊಂಡ ದೊಡ್ಡ ಕೆರೆ ಇದಾಗಿದ್ದು ಸುತ್ತಲೂ ಕಟ್ಟೆ ಹಾಗೂ ಉದ್ಯಾನವನ್ನು ನಿರ್ಮಿಸಲಾಗಿದೆ. ವಿಶ್ರಾಂತಿ ಪಡೆಯುತ್ತ ಕೊಂಚ ಸಮಯ ಕಳೆಯಲು ಇದೊಂದು ಆದರ್ಶಮಯ ಸ್ಥಳವಾಗಿದೆ.

ಚಿತ್ರಕೃಪೆ: kolhapurtourism

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಕೊಲ್ಹಾಪುರವನ್ನು ತೊರೆದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಮುಂದುವರೆಸಿ ಸತಾರಾ ಪಟ್ಟಣವನ್ನು ತಲುಪಿ. ಕೊಲ್ಹಾಪುರದಿಂದ ಸತಾರಾವು 126 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಸತಾರಾವು ಪ್ರಾಚೀನ ಶ್ರೀಮಂತ ಪರಂಪರೆಯನ್ನು ತುಂಬಿಕೊಂಡಿರುವ ಅದೃಷ್ಟವಂತ ನಗರ. ಇದು, ಕೋಟೆ ಕೊತ್ತಲಗಳನ್ನು ತೋರಿಸುತ್ತಾ ರಾಜ ಮಹಾರಾಜರ ರೋಚಕ ಕಥೆಗಳನ್ನು ಹೇಳುತ್ತದೆ, ಪ್ರಕೃತಿಯೊಳಗೆ ಕೈಹಿಡಿದು ನಡೆಸುತ್ತದೆ ಅಲ್ಲದೆ ವನ್ಯಜೀವಿ ಅಭಯಾರಣ್ಯಗಳಲ್ಲಿ ಪ್ರತ್ಯಕ್ಷವಾಗಿ - ಪರೋಕ್ಷವಾಗಿ ನಮ್ಮಿಂದಲೆ ಅಳಿವಿನ ಅಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ಭೇಟಿಮಾಡಿಸುತ್ತದೆ. ಸತಾರಾ ಆಕರ್ಷಣೆಗಳು

ಚಿತ್ರಕೃಪೆ: hyper7pro

ಬೆಂಗಳೂರಿನಿಂದ ಪುಣೆವರೆಗೆ:

ಬೆಂಗಳೂರಿನಿಂದ ಪುಣೆವರೆಗೆ:

ಸತಾರಾದಿಂದ ಪ್ರಯಾಣ ಮುಂದುವರೆಸಿ ಕೊನೆಯ ಸ್ಥಳವಾದ ಪುಣೆ ನಗರವನ್ನು ತಲುಪಿ. ಸತಾರಾದಿಂದ ಪುಣೆಯು 110 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: soham_pablo

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+